ಗುರುಕುಲ ಪದ್ಧತಿಯ ಸಾಮರ್ಥ್ಯ !

ಮಾನವನು ಶಿಕ್ಷಣ ಪಡೆದು ಅಸಮರ್ಥನಾಗುವುದಾದರೆ, ಅದರ ಉಪಯೋಗವೇನು ? ಗುರುಕುಲ ಪದ್ಧತಿಯಲ್ಲಿ ಸಾಮರ್ಥ್ಯವಿತ್ತು! ದೇವವ್ರತ (ಭೀಷ್ಮ) ಶಿಕ್ಷಣ ಪಡೆದುಹೊರಗೆ ಬಂದಾಗ, ಒಬ್ಬ ಶತ್ರು ರಾಜ್ಯದ ಮೇಲೆ ದಂಡೆತ್ತಿ ಬರುತ್ತಿರುವುದು ಗೊತ್ತಾದ ತಕ್ಷಣ ಅವನು ಒಬ್ಬಂಟಿಯಾಗಿ ಪ್ರತಿಕಾರ ಮಾಡಿ ಶತ್ರುವನ್ನು ಸೋಲಿಸಿದನು.
– (ಪರಾತ್ಪರ ಗುರು) ಪರಶರಾಮ ಪಾಂಡೆ, ಸನಾತನ ಆಶ್ರಮ, ದೇವದ, ಪನವೇಲ.

ಗುರು ಶಿಷ್ಯ ಪರಂಪರೆ

ಭಾರತದ ಮಹಾನ್ ವಿಶ್ವವಿದ್ಯಾಲಯಗಳ ಇಂದಿನ ಸ್ಥಿತಿ

ಮಧ್ಯಪ್ರದೇಶದ ಧಾರದಲ್ಲಿನ ಭೋಜಶಾಲೆ !

ಧಾರ(ಮಧ್ಯಪ್ರದೇಶ)ದಲ್ಲಿನ ಇಸವಿ ೧೦೧೦ ರಿಂದ ೧೦೬೫ ಈ ಕಾಲದಲ್ಲಿ ಪರಮಾರ ವಂಶದ ರಾಜ ಭೋಜನಿಗೆ ಶ್ರೀ ಸರಸ್ವತಿ ದೇವಿಯು ದರ್ಶನ ನೀಡಿದಳು ಮತ್ತು ಅವನು ಅ ಜಾಗದಲ್ಲಿ ಭೋಜಶಾಲೆಯನ್ನುನಿರ್ಮಿಸಿದನು. ಪ್ರಾಚೀನ ಕಾಲದಲ್ಲಿ ಇಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲಾಗುತ್ತಿತ್ತು. ಸದ್ಯ ಈ ಜಾಗವನ್ನು ಮತಾಂಧರು ವಶಪಡಿಸಿಕೊಂಡಿದ್ದಾರೆ. ಈ ಜಾಗದಲ್ಲಿ ಈಗ ನಮಾಜು ಪಠಣ ಮಾಡಲಾಗುತ್ತಿದೆ. ಹಿಂದೂಗಳ ಈ ವಾಸ್ತು ಪುನಃ ಸಿಗಲಿಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಕಾನೂನುಮಾರ್ಗದಿಂದ ಭೋಜಶಾಲೆ ಮುಕ್ತಿ ಸಂಗ್ರಾಮ ಎಂಬ ದೊಡ್ಡ ಹೋರಾಟ ಮಾಡುತ್ತಿವೆ.

ಜಗದ್ವಿಖ್ಯಾತ ವಿಕ್ರಮಶಿಲೆ ವಿಶ್ವವಿದ್ಯಾಲಯ !

೮ ನೇ ಶತಮಾನದ ಕೊನೆಗೆ ಅಥವಾ ೯ ನೇ ಶತಮಾನದ ಆರಂಭದಲ್ಲಿ ಪಾಲ ನರೇಶ ಧರ್ಮಪಾಲ ಇವರು ವಿಕ್ರಮ ಶಿಲೆ ಈ ಜಗದ್ವಿಖ್ಯಾತ ವಿಶ್ವವಿದ್ಯಾಲಯದ ಸ್ಥಾಪನೆ ಮಾಡಿದರು. ಭಾರತದಲ್ಲಿ ತಕ್ಷಶಿಲೆ, ನಾಲಂದಾ, ವಿಕ್ರಮಶಿಲೆ ಮತ್ತು ಉದ್ದಂಡ ಪುರಿಶಿಲೆ ಇದು ಎಲ್ಲಕ್ಕಿಂತ ದೊಡ್ಡ ವಿಶ್ವವಿದ್ಯಾಲಯಗಳಾಗಿದ್ದವು. ವಿಕ್ರಮಶಿಲೆ ವಿಶ್ವವಿದ್ಯಾಲಯ ೧೦೦ ಎಕರೆ ಭೂಮಿಯಲ್ಲಿತ್ತು. ಇಸವಿ ೧೯೬೦ ರಿಂದ ೧೯೭೨ ಈ ಕಾಲಾವಧಿಯಲ್ಲಿ ಇಲ್ಲಿ ಉತ್ಖನನ ಮಾಡಿದರು. ಇಲ್ಲಿ ಒಟ್ಟು ೨೦೮ ವಿಹಾರಗಳಿದ್ದವು. ಇಲ್ಲಿನ ಗೌತಮ ಬುದ್ಧನ ಸ್ತೂಪ ೯ ಮಹಡಿಯದ್ದಾಗಿತ್ತು. ೧೩ ನೇ ಶತಮಾನದಲ್ಲಿ ಮೊಘಲ ಆಕ್ರಮಣಕಾರರು ಈ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಿದರು.