ಪರಾತ್ಪರ ಗುರು ಡಾ. ಆಠವಲೆಯವರ ಸಂಶೋಧನಾತ್ಮಕ ವೃತ್ತಿ

ಅಖಿಲ ಮನುಕುಲಕ್ಕೆ ಆನಂದಪ್ರಾಪ್ತಿ ಎಂಬ ಮೂಲಭೂತ ಧ್ಯೇಯವನ್ನು ಸಾಧಿಸಲು ಆಗಬೇಕೆಂದು ಅಧ್ಯಾತ್ಮ ಮತ್ತು ಹಿಂದೂ ಧರ್ಮ ಇವುಗಳ ಮಹಾನತೆಯನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ತಿಳಿಸಲು ಪರಾತ್ಪರ ಗುರು ಡಾ. ಆಠವಲೆಯವರು ಆಧ್ಯಾತ್ಮಿಕ ಸಂಶೋಧನಾ ಕಾರ್ಯವನ್ನು ಆರಂಭಿಸಿದರು. ಅಧ್ಯಾತ್ಮವು ಅನುಭೂತಿಯ ಶಾಸ್ತ್ರವಾಗಿದ್ದರೂ ಆಧುನಿಕ ವೈಜ್ಞಾನಿಕ ಉಪಕರಣಗಳು ಮತ್ತು ಸೂಕ್ಷ್ಮ ಪರೀಕ್ಷಣೆಯಿಂದ ಅಧ್ಯಾತ್ಮದಲ್ಲಿನ ‘ಏಕೆ’ ಮತ್ತು ‘ಹೇಗೆ’ ಎಂಬುದರ ಶಾಸ್ತ್ರಶುದ್ಧ ಕಾರಣವನ್ನು ತಿಳಿಸುವ ಪರಾತ್ಪರ ಗುರು ಡಾ. ಆಠವಲೆಯವರು ಏಕಮೇವಾದ್ವಿತೀಯ ಸಂತರಾಗಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರಿಗೆ ಸೂಕ್ಷ್ಮದಿಂದ ಸಿಗುತ್ತಿರುವ ಉತ್ತರಗಳ ಮಾಧ್ಯಮದಿಂದ ಅವರ ಸಂಶೋಧನಕಾರ್ಯ ಆರಂಭವಾಯಿತು. ಈಗ ವಿವಿಧ ವೈಜ್ಞಾನಿಕ ಉಪಕರಣಗಳ ಸಹಾಯದಿಂದಲೂ ಸಂಶೋಧನೆ ನಡೆಯುತ್ತಿದೆ. ಈ ಪರಿಪೂರ್ಣ ಆಧ್ಯಾತ್ಮಿಕ ಸಂಶೋಧನೆಯ ನಿಷ್ಕರ್ಷವನ್ನು ವಿವಿಧ ಮಾಧ್ಯಮಗಳಿಂದ ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಎಲ್ಲರಿಗೆ ನೀಡುತ್ತಿರುವುದರಿಂದಾಗಿ ಇಂದು ಜಗತ್ತಿನಾದ್ಯಂತ ಸಾವಿರಾರು ವ್ಯಕ್ತಿಗಳು ಸಾಧನೆಯನ್ನು ಅಂಗೀಕರಿಸಿ ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂತಹ ಪರಾತ್ಪರ ಗುರು ಡಾ. ಆಠವಲೆಯವರ ಈ ಅದ್ಭುತ ಕಾರ್ಯದ ಸಂಕ್ಷಿಪ್ತ ವರದಿಯನ್ನು ನೀಡುತ್ತಿದ್ದೇವೆ…

no posts found no posts found
no posts found

ವಿಜ್ಞಾನಿಗಳಿಗೆ ಕರೆ

ತಜ್ಞ, ಅಧ್ಯಯನಕಾರರು ಮತ್ತು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ, ಅದೇ ರೀತಿ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆಯನ್ನು ಮಾಡುವವರಲ್ಲಿ ವಿನಂತಿ !

ಪರಾತ್ಪರ ಗುರು ಡಾ. ಆಠವಲೆ ಇವರ ವಾಸಸ್ಥಳವಿರುವ ಅಂದರೆ ರಾಮನಾಥಿ, ಗೋವಾದ ಸನಾತನ ಸಂಸ್ಥೆಯ ಆಶ್ರಮದಲ್ಲಿ ಆಗುವಂತಹ ದೈವೀ ಬದಲಾವಣೆಗಳು (ಉದಾ. ನೆಲದ ಮೇಲೆ ಓಂ ಮೂಡುವುದು), ಅದೇರೀತಿ ಕೆಟ್ಟ ಶಕ್ತಿಗಳ ಮುಖಗಳು ಮೂಡುವುದು ಇದರ ವೈಜ್ಞಾನಿಕ ಪದ್ದತಿಯಿಂದ ಸಂಶೋಧನೆಯನ್ನು ಮಾಡಲಾಗುತ್ತಿದೆ. ಸಂತರ ವಾಸ್ತುವಿನಲ್ಲಿ ಆಗುವ ಬದಲಾವಣೆಯ ಹಿಂದೆ ಯಾವ ವೈಜ್ಞಾನಿಕ ಪ್ರಕ್ರಿಯೆ ಆಗುತ್ತದೆ ? ಇದರ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯ ಲಭಿಸಿದರೆ ಕೃತಜ್ಞರಾಗುತ್ತೇವೆ. – ವ್ಯವಸ್ಥಾಪಕರು, ಸನಾತನ ಸಂಸ್ಥೆ, ರಾಮನಾಥಿ, ಗೋವಾ. (ಸಂಪರ್ಕ : ಶ್ರೀ. ರೂಪೇಶ ರೇಡಕರ, ವಿ-ಅಂಚೆ : [email protected])

ಬುದ್ಧಿಗೆ ನಿಲುಕದ ಘಟನೆಗಳ ಬಗ್ಗೆ ವೈಜ್ಞಾನಿಕ ದೃಷ್ಟಿಕೋನದಿಂದ ಅಭ್ಯಾಸವನ್ನು ಮಾಡಲು ಸನಾತನ ಆಶ್ರಮಕ್ಕೆ ಭೇಟಿ ನೀಡಿ !

ಹೆಚ್ಚು ಕಡಿಮೆ ಎಲ್ಲ ವಿಷಯಗಳ ಅಂತಿಮ ಸತ್ಯವನ್ನು ನಮ್ಮ ಋಷಿಮುನಿಗಳು ಬರೆದಿಟ್ಟಿದ್ದಾರೆ. ಹೀಗಿರುವಾಗಲೂ ವಿಶ್ವದ ರಹಸ್ಯವನ್ನು ಬಹಿರಂಗ ಪಡಿಸಿದ ವಿಜ್ಞಾನಿಗಳಲ್ಲಿ ಗೆಲಿಲಿಯೋ, ನ್ಯೂಟನ್ ಹೀಗೆ ಅನೇಕ ಪಾಶ್ಚಾತ್ಯ ವಿಜ್ಞಾನಿಗಳ ಹೆಸರು ಇರುತ್ತದೆ; ಆದರೆ ಭಾರತದ ಹೆಸರು ಕೆಲವೊಮ್ಮೆ ಕಂಡುಬರುತ್ತದೆ. ಈ ಚಿತ್ರಣವನ್ನು ನಾವು ಬದಲಾಯಿಸಬೇಕಿದೆ. ಮನುಕುಲದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಈ ರೀತಿಯ ಅದ್ವಿತೀಯ ಬುದ್ಧಿಗೆ ನಿಲುಕದ ಘಟನೆ ಗೋವಾದ ಸನಾತನ ಆಶ್ರಮದಲ್ಲಿ ಘಟಿಸುತ್ತಿದೆ. ‘ಈ ಅದ್ವಿತೀಯ ಘಟನೆಯು ಅಂದರೆ ವಿಶ್ವದ ರಹಸ್ಯವನ್ನು ವೈಜ್ಞಾನಿಕ ದೃಷ್ಟಿಯಿಂದ ಬಹಿರಂಗ ಪಡಿಸಿದ ಶ್ರೇಯಸ್ಸು ಭಾರತೀಯ ಸಂಶೋಧಕರಿಗೇ ಸಿಗಬೇಕು, ಹೀಗೆ ನಮಗೆ ಮನಸ್ಸಿನಿಂದ ಅನಿಸುತ್ತದೆ, ಅದಕ್ಕಾಗಿ ಎಲ್ಲ ವಿಜ್ಞಾನಿಗಳಿಗೆ ಹಾಗೂ ಅಧ್ಯಯನ ಮಾಡುವವರಲ್ಲಿ ನಮ್ಮ ವಿನಂತಿ ಏನೆಂದರೆ, ಸನಾತನ ಆಶ್ರಮಕ್ಕೆ ಅವಶ್ಯವಾಗಿ ಭೇಟಿ ನೀಡಿ.

ಇಲ್ಲಿಯ ಬುದ್ಧಿಗೆ ನಿಲುಕದ ಘಟನೆಗಳ ಅಧ್ಯಯನ ಮಾಡಿ. ತಮ್ಮ ಜ್ಞಾನ ಮತ್ತು ಕೌಶಲ್ಯದ ಉಪಯೋಗವನ್ನು ಮಾಡಿ ಅಖಿಲ ಮನುಕುಲಕ್ಕೆ ಉಪಯೋಗವಾಗುವಂತಹ ಅವಕಾಶದ ಖಂಡಿತ ಲಾಭ ಮಾಡಿಕೊಳ್ಳಿ.

ಸಂಶೋಧನೆಗೆ ಉಪಯೋಗಿಸಲಾಗುವ ವೈಜ್ಞಾನಿಕ ಉಪಕರಣಗಳು