ನಾಗರಪಂಚಮಿ – Nagpanchami 2023

ನಾಗರಪಂಚಮಿಪ್ರಾಣಿಮಾತ್ರರಲ್ಲಿ ಈಶ್ವರನನ್ನು ನೋಡಲು ಕಲಿಸುವ ಹಬ್ಬ

ನಾಗರಪಂಚಮಿ ಹಬ್ಬಗಳ ತಿಂಗಳಾಗಿರುವ ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ. ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು (2023 ರಲ್ಲಿ ಆಗಸ್ಟ್ 21, ಸೋಮವಾರ) ಆಚರಿಸಲಾಗುತ್ತದೆ. ಈ ದಿನದಂದು ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ, ಹೊಸ ಬಟ್ಟೆ-ಅಲಂಕಾರವನ್ನು ಧರಿಸಿ, ನಾಗ ದೇವರನ್ನು ಪೂಜಿಸಿ, ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸುತ್ತಾರೆ. ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯಾಗುವ ಸಂಕಟ ತಪ್ಪುತ್ತದೆ ಎಂದು ಭಕ್ತರ ಬಲವಾದ ನಂಬಿಕೆಯಿದೆ. ನಾಗರಪಂಚಮಿಯ ಇತಿಹಾಸ, ಅಂದು ಏನು ಮಾಡಬೇಕು, ಏನು ಮಾಡಬಾರದು, ಇವೆಲ್ಲವುಗಳ ಹಿಂದಿರುವ ಶಾಸ್ತ್ರ ಇಲ್ಲಿ ನೀಡುತ್ತಿದ್ದೇವೆ.

ನಾಗರಪಂಚಮಿ – ಇವನ್ನು ಮಾಡಿ

 • ಉಪವಾಸ ಮಾಡಿ
  ಉಪವಾಸದಿಂದ ಶಕ್ತಿ ಹೆಚ್ಚಾಗಿ ಅದರ ಫಲವೂ ಲಭಿಸುತ್ತದೆ. – ಶ್ರೀಕೃಷ್ಣ (ಕು. ಮೇಘಾ ನಕಾತೆ ಇವರ ಮಾಧ್ಯಮದಿಂದ), 2.8.2005, ಮಧ್ಯಾಹ್ನ 4.05
 • ನಾಗ ದೇವರಿಗೆ ಪೂಜೆ ಸಲ್ಲಿಸಿ
  ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ ರೂಪದಲ್ಲಿರುವ ಶಿವನ ಪೂಜೆಯೇ. ಆದುದರಿಂದ ಆ ದಿನ ವಾತಾವರಣದಲ್ಲಿರುವ ಶಿವ-ಲಹರಿಗಳು ಆಕರ್ಶಿತಗೊಂಡು ಆ ಜೀವಕ್ಕೆ ಇತರ 364 ದಿನಗಳ ಕಾಲ ಉಪಯುಕ್ತವಾಗುತ್ತವೆ.
  ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರಿಗೆ ಶಕ್ತಿ ತತ್ತ್ವ ಪ್ರಾಪ್ತವಾಗುತ್ತದೆ.
 • ಸ್ತ್ರೀಯರು ನಾಗ ಪ್ರತಿಮೆಯನ್ನು ಸಹೋದರನೆಂದು ಪೂಜಿಸಿ
  ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರ ಸಹೋದರನ ಆಯುಷ್ಯ ವೃದ್ಧಿಯಾಗುತ್ತದೆ.
 • ಹೊಸ ಬಟ್ಟೆ ಮತ್ತು ಅಲಂಕಾರ ಧರಿಸಿ
  ಇದರಿಂದ ಆನಂದ ಮತ್ತು ಚೈತನ್ಯದ ಲಹರಿಗಳು ಆಕರ್ಷಿಸಲ್ಪಡುತ್ತವೆ.
 • ಸ್ತ್ರೀಯರು ಉಯ್ಯಾಲೆಯಲ್ಲಿ ಆಡಬೇಕು
  ಇದರಿಂದ ಕ್ಷಾತ್ರಭಾವ ಮತ್ತು ಭಕ್ತಿಭಾವ ಹೆಚ್ಚಾಗಿ ಅದರಿಂದ ಸಾತ್ತ್ವಿಕತೆಯ ಲಹರಿಗಳು ಲಭಿಸುತ್ತವೆ.
 • ಪ್ರಾರ್ಥನೆ ಮಾಡಿ
  ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು – ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಿಸುವಂತಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣಗಳ ಶುದ್ಧಿಯಾಗಲಿ.’
  ನಾಗರ ಪಂಚಮಿಯಂದು ಸಹೋದರಿಯ ಮೊರೆಯು ಈಶ್ವರನು ಆಲಿಸುತ್ತಾನೆ. ಆದುದರಿಂದ ಸಹೋದರಿಯು ತನ್ನ ಸಹೋದರನ ಉನ್ನತಿಗಾಗಿ ದೇವರಲ್ಲಿ ಕಳಕಳಿಯಿಂದ ಮುಂದಿನಂತೆ ಪ್ರಾರ್ಥಿಸಬೇಕು – ‘ದೇವರೇ, ನನ್ನ ಸಹೋದರನಿಗೆ ಸದ್ಬುದ್ಧಿ, ಶಕ್ತಿ ಮತ್ತು ಸಾಮರ್ಥ್ಯವನ್ನು ದಯಪಾಲಿಸಿ’.

ನಾಗರಪಂಚಮಿ : ಇತಿಹಾಸ

नागपंचमी - महत्व

1. ಸರ್ಪಯಜ್ಞದ ಸಮಾಪ್ತಿಯ ದಿನ : ಸರ್ಪಯಜ್ಞ ಮಾಡುತ್ತಿದ್ದ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿದ ಆಸ್ತಿಕ ಋಷಿಗಳು ಬೇಡಿದ ವರಕ್ಕನುಸಾರ ಜನಮೇಜಯ ರಾಜನು ಯಜ್ಞ ನಿಲ್ಲಿಸಿದನು, ಮತ್ತು ಆಸ್ತಿಕ ಋಷಿಗಳು ವಿಶ್ವದಲ್ಲಿನ ಎಲ್ಲ ನಾಗಗಳಿಗೆ ಅಭಯವನ್ನು ನೀಡಿದರು

2. ಕಾಲಿಯಾಮರ್ದನದ ತಿಥಿ : ಭಗವಾನ ಶ್ರೀಕೃಷ್ಣನು ಗೋಕುಲದಲ್ಲಿರುವಾಗ ಶ್ರಾವಣ ಶುಕ್ಲ ಪಕ್ಷ ಪಂಚಮಿಯ ದಿನದಂದು ಯಮುನಾ ನದಿಯಲ್ಲಿದ್ದ ಕಾಲಿಯಾ ಎಂಬ ನಾಗನ ಮರ್ದನವನ್ನು ಮಾಡಿದನು.

3. 5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ಮಾತು ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

4. ನಾಗಗಳು ಪರಮೇಶ್ವರನ ಅವತಾರಗಳೊಂದಿಗೆ, ಅಂದರೆ ಸಗುಣ ರೂಪದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರಕ್ಕೆ ವಾಸುಕೀ ಎಂಬ ನಾಗವು ಸಹಾಯವನ್ನು ಮಾಡಿತ್ತು. ಶ್ರೀವಿಷ್ಣು ಶೇಷನಾಗನ ಶಯ್ಯೆಯ ಮೇಲೆ ಮಲಗಿರುತ್ತಾನೆ. ಶ್ರೀವಿಷ್ಣು ರಾಮನಾಗಿ ಅವತರಿಸಿದಾಗ ಅದೇ ಶೇಷನಾಗನು ಲಕ್ಷ್ಮಣನ ಅವತಾರವನ್ನು ತಾಳಿದ್ದನು. ಭಗವಾನ ಶಿವನು ಮೈಮೇಲೆ ಒಂಬತ್ತು ನಾಗಗಳನ್ನು ಧರಿಸಿದ್ದಾನೆ.

5. ಶಿವನು ಹಾಲಾಹಲ ವಿಷ ಸೇವಿಸಿದಾಗ ಅವನಿಗೆ ಸಹಾಯ ಮಾಡಲು ಒಂಬತ್ತು ನಾಗಗಳು ಬಂದವು ಮತ್ತು ಅವುಗಳು ಸಹ ಹಾಲಾಹಲದ ಅಂಶವನ್ನು ಸೇವಿಸಿದವು. ಇದರಿಂದ ನಾಗಗಳ ಮೇಲೆ ಪ್ರಸನ್ನನಾದ ಶಿವನು ನಾಗಗಳು ಸಮಸ್ತ ಸೃಷ್ಟಿಯ ರಕ್ಷಣೆಯನ್ನು ಮಾಡಲು ನೀಡಿದ ಯೋಗದಾನಕ್ಕಾಗಿ ‘ಮನುಷ್ಯನು ಯಾವಾಗಲೂ ನಾಗಗಳ ಬಗ್ಗೆ ಕೃತಜ್ಞನಾಗಿದ್ದು ಅವನು ನಾಗಗಳ ಪೂಜೆಯನ್ನು ಮಾಡುತ್ತಾನೆ’, ಎಂಬ ಆಶೀರ್ವಾದವನ್ನು ನೀಡಿದನು. ಅಂದಿನಿಂದ ಒಂಬತ್ತು ನಾಗಗಳು ಮನುಷ್ಯನಿಗೆ ಪೂಜನೀಯವಾದವು. ಒಂಬತ್ತು ನಾಗಗಳು ಒಂಬತ್ತು ವಿಧದ ಪವಿತ್ರಕಗಳನ್ನು (ಚೈತನ್ಯಲಹರಿಗಳು) ಗ್ರಹಣ ಮಾಡುವ ಘಟಕಗಳಾಗಿವೆ. ಅವುಗಳ ಪೂಜೆಯಿಂದ ಚೈತನ್ಯ ಲಹರಿಗಳನ್ನು ಧಾರಣೆ ಮಾಡುವ ಸಮೂಹದ್ದೇ ಪೂಜೆಯಾಗುತ್ತದೆ.

ನಾಗರಪಂಚಮಿ – ಪೂಜೆಯ ವಿಧಿ

ಮನೆಯಲ್ಲಿ ಸ್ವಚ್ಛವಾದ ಮರದ ಮಣೆಯ ಮೇಲೆ ಗಂಧ, ಅರಿಶಿಣ ಮತ್ತು ಕುಂಕುಮ ಇವುಗಳ ಮಿಶ್ರಣದಿಂದ ಐದು ಹೆಡೆಗಳ ನಾಗನನ್ನು ಬಿಡಿಸಬೇಕು ಅಥವಾ ರಕ್ತಚಂದನದಿಂದ ಒಂಬತ್ತು ನಾಗಗಳ ಆಕೃತಿಯನ್ನು ಬಿಡಿಸಬೇಕು. ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗವನ್ನು ಸಹ ತಯಾರಿಸಿ ಅದರ ಪೂಜೆಯನ್ನು ಮಾಡುತ್ತಾರೆ. ಕರಾವಳಿ ಭಾಗದಲ್ಲಿ ನಾಗದೇವರ ಕಲ್ಲಿನ ವಿಗ್ರಹಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ನಾಗನ ಪೂಜೆಯನ್ನು ಮಾಡುವಾಗ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಈ ಒಂಭತ್ತು ನಾಗಗಳ ಹೆಸರುಗಳನ್ನು ಉಚ್ಚರಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು. ಮನೆಯ ಸದಸ್ಯರು ಹೂವು, ಗರಿಕೆ, ಅರಳು, ಕಡಲೆಕಾಳು ಮುಂತಾದ ಪದಾರ್ಥಗಳನ್ನು ಅರ್ಪಿಸಬೇಕು.

ಮಂತ್ರಗಳ ಅರ್ಥಸಹಿತ

ನಾಗ ಪೂಜೆ

ಪೂಜೆ ಸಲ್ಲಿಸುವಾಗ ಅದು ಭಾವಪೂರ್ಣವಾಗಬೇಕು ಮತ್ತು ನಾಗ ದೇವರ ಕೃಪೆಯಾಗಬೇಕೆಂದು ನಾಗರಪಂಚಮಿಯಂದು ಮಾಡಬೇಕಾದ ಸಂಪೂರ್ಣ ಪೂಜಾವಿಧಿಯನ್ನು ನೀಡುತ್ತಿದ್ದೇವೆ.

ನಾಗ ಪೂಜೆ

ಪೂಜೆ ಸಲ್ಲಿಸುವಾಗ ಅದು ಭಾವಪೂರ್ಣವಾಗಬೇಕು ಮತ್ತು ನಾಗ ದೇವರ ಕೃಪೆಯಾಗಬೇಕೆಂದು ನಾಗರಪಂಚಮಿಯಂದು ಮಾಡಬೇಕಾದ ಸಂಪೂರ್ಣ ಪೂಜಾವಿಧಿಯನ್ನು ನೀಡುತ್ತಿದ್ದೇವೆ.

ಹಿಂದೂ ಧರ್ಮವು ನಿರ್ಜೀವ ವಸ್ತುಗಳಿಂದ ಹಿಡಿದು ಪ್ರಾಣಿಪ್ರಪಂಚ ಇವೆಲ್ಲವುಗಳೂ ಪೂಜನೀಯವಾಗಿವೆ ಎಂದು ಕಲಿಸುತ್ತದೆ. ಪ್ರತಿಯೊಂದರಲ್ಲಿರುವ ದೇವತ್ವವನ್ನು ಗುರುತಿಸಿ ಅದನ್ನು ವಂದಿಸಲು ಕಲಿಸುತ್ತದೆ. ಇದರಿಂದ ನಮಗೆ ದೇವರ ಅಸ್ತಿತ್ವದ ಅರಿವು ಸತತವಾಗಿ ಆಗುತ್ತಿರುತ್ತದೆ. ಈ ಅರಿವೇ ದೇವರ ಅನುಸಂಧನ. ಸತತವಾಗಿ ದೇವರ ಕೃಪೆ ಅನುಭವಿಸಲು, ದೇವರ ಅನುಸಂಧಾನದಲ್ಲಿರಲು ಏನು ಮಾಡಬೇಕು ಎಂದು ತಿಳಿದುಕೊಳ್ಳಿ…

ಸನಾತನ ಸಂಸ್ಥೆಯ ಆನ್‌ಲೈನ್ ಸತ್ಸಂಗದಲ್ಲಿ ಭಾಗವಹಿಸಿ

ನಾಗರಪಂಚಮಿಯಂದು ಇವನ್ನು ಮಾಡದಿರಿ

ನಾಗರಪಂಚಮಿಯಂದು ಏನು ಮಾಡಬಾರದು

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ. ಆದರೆ ವರ್ಷವಿಡೀ ಈ ಕೃತಿಗಳನ್ನು ಮಾಡುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗಾದರೆ ನಾಗರಪಂಚಮಿಯಂದು ಈ ಕೃತಿಗಳನ್ನು ನಿಷೇಧಿಸಿರುವ ಕಾರಣ ಮತ್ತು ಅವುಗಳನ್ನು ಮಾಡುವುದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳೋಣ.

ಅ. ನಾಗದೇವತೆಯು ಇಚ್ಛೆಯ ಪ್ರತೀಕ. ಇಚ್ಛೆಯ ಪ್ರವರ್ತಕ (ಅಂದರೆ ಇಚ್ಛೆಗೆ ವೇಗ ನೀಡುವ) ಮತ್ತು ಸಕಾಮ ಇಚ್ಛೆಯನ್ನು ಪೂರ್ಣಗೊಳಿಸುವ ದೇವತೆಯೂ ಹೌದು. ನಾಗದೇವರು ಇಚ್ಛೆಗೆ ಸಂಬಂಧಿಸಿದ ಕನಿಷ್ಠ ದೇವತೆಯಾಗಿದ್ದಾರೆ. ನಾಗರಪಂಚಮಿಯಂದು ಸಂಬಂಧಸಿದ ತತ್ತ್ವದ ದೇವತೆಗಳಿಂದ ನಿರ್ಮಾಣವಾಗುವ ಇಚ್ಛಾ ಲಹರಿಗಳು ಭೂಮಿಯ ಮೇಲೆ ಅವತರಿಸುವುದರಿಂದ ವಾಯುಮಂಡಲದಲ್ಲಿ ನಾಗದೇವತೆಯ ತತ್ತ್ವದ ಪ್ರಮಾಣವು ಹೆಚ್ಚಿರುತ್ತದೆ. ಈ ದಿನದಂದು ಭೂಮಿಯಲ್ಲಿರುವ ಇಚ್ಛಾಜನ್ಯ ದೇವತಾಸ್ವರೂಪ ಲಹರಿಗಳು ಘನವಾಗುವ ಪ್ರಮಾಣವೂ ಹೆಚ್ಚಿರುತ್ತದೆ. ಹೆಚ್ಚುವುದು, ಕೊಯ್ಯುವುದು, ಭೂಮಿ ಉಳುವುದು ಮುಂತಾದ ಕೃತಿಗಳಿಂದ ರಜ-ತಮಕ್ಕೆ ಸಂಬಂಧಿಸಿದ ಇಚ್ಛಾಲಹರಿಗಳು (ಅಂದರೆ ದೇವತಾಜನ್ಯ ಇಚ್ಛಾಲಹರಿಗಳ ಕಾರ್ಯವನ್ನು ವಿರೋಧಿಸುವ ಲಹರಿಗಳು) ವಾಯುಮಂಡಲದಲ್ಲಿ ಹೊರಸೂಸುವ ಪ್ರಮಾಣವು ಹೆಚ್ಚಾಗುವುದರಿಂದ ಈ ದಿನದಂದು ನಾಗದೇವತೆಯ ಲಹರಿಗಳಿಗೆ ತಮ್ಮ ಕಾರ್ಯ ಮಾಡುವಲ್ಲಿ ಅಡಚಣೆಗಳು ಬರಬಹುದು. ಈ ಕಾರಣದಿಂದ ನಾಗರಪಂಚಮಿಯಂದು ಹೆಚ್ಚುವುದು, ಕರಿಯುವುದು, ಉಳುಮೆ, ಹೊಲಿಗೆ ಮುಂತಾದ ಕೃತಿಗಳನ್ನು ಮಾಡುವುದರಿಂದ ಪಾಪ ತಗಲಬಹುದು.

ನಾಗರಪಂಚಮಿಯ ತುಲನೆಯಲ್ಲಿ ಇತರ ದಿನಗಳಂದು ಇಂತಹ ದೇವತಾಜನ್ಯ ಇಚ್ಛಾಲಹರಿಗಳು ಭೂಮಿಯತ್ತ ಬಾರದಿರುವುದರಿಂದ ಇಂತಹ ಕೃತಿಗಳನ್ನು ಮಾಡುವುದರಿಂದ ಸಮಷ್ಟಿ ಪಾಪ ತಗಲುವ ಪ್ರಮಾಣವೂ ಕಡಿಮೆಯಿರುತ್ತದೆ. ಈ ಕಾರಣದಿಂದಲೇ ಆಯಾ ದಿನದಂದು ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಕ್ಕನುಗುಣವಾಗಿ ಆಯಾ ದಿನದಂದು ಆ ದೇವತೆಯ ಉತ್ಸವ ಅಥವಾ ಹಬ್ಬವನ್ನು ಆಚರಿಸಲು ಹಿಂದೂ ಧರ್ಮವು ಕಲಿಸುತ್ತದೆ.

ಹಿಂದಿನ ಕಾಲದಲ್ಲಿ ಗೆಡ್ಡೆ-ಗೆಣಸು ಹುರಿದು, ಅಥವಾ ಬೇಯಿಸಿ ತಿನ್ನುವ ರೂಢಿಯಿತ್ತು. ಇದರಲ್ಲಿ ಹೆಚ್ಚುವ, ಕೊಯ್ಯುವ ಮತ್ತು ಕರಿಯುವ ಕೃತಿಗಳು ಇರುತ್ತಿರಲಿಲ್ಲ. ಆದುದರಿಂದ ಪಾಪ ತಗಲುವ ಪ್ರಮಾಣವೂ ಕಡಿಮೆಯಿತ್ತು.ಕಲಿಯುಗದಲ್ಲಿ ಹಿಂದಿನ ಕಾಲದ ಪರಂಪರೆಗಳನ್ನು ಪಾಲಿಸುವುದು ಕಠಿಣವಾಗಿರುವುದರಿಂದ ಪ್ರತಿಯೊಂದು ಕೃತಿಯಿಂದ ನಿರ್ಮಾಣವಾಗುವ ಪಾಪವು ನಷ್ಟ ಮಾಡಲು ಆ ಕೃತಿಯನ್ನು ಸಾಧನೆಯ ರೂಪದಲ್ಲಿ ಅಂದರೆ ನಾಮಜಪದೊಂದಿಗೆ ಮಾಡುವುದು ಆವಶ್ಯಕವಾಗಿದೆ.
– ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳ ಇವರು ‘ಓರ್ವ ವಿದ್ವಾಂಸ’ ಎಂಬ ಅಂಕಿತನಾಮದಿಂದ ಬರೆಯುತ್ತಾರೆ), ಆಷಾಢ ಕೃಷ್ಣ 3, ಕಲಿಯುಗ ವರ್ಷ 5111 (10.7.2009)

ನಾಗರಪಂಚಮಿಯಂದು ಉಪವಾಸ ಮಾಡುವ ಮಹತ್ವ

ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ತ್ಯಜಿಸಿದಳು. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ.

ನಾಗರಪಂಚಮಿಯಂದು ಸ್ತ್ರೀಯರು ಹೊಸ ಬಟ್ಟೆ ತೊಟ್ಟು, ಅಲಂಕಾರ ಧರಿಸಿ, ಮದರಂಗಿ ಏಕೆ ಹಚ್ಚಿಕೊಳ್ಳುತ್ತಾರೆ?

ಸಹೋದರ ಮೃತನಾದಾಗ ಸತ್ಯೇಶ್ವರಿಗಾದ ಶೋಕವನ್ನು ನೋಡಿ ನಾಗ ದೇವರು ಪ್ರಸನ್ನರಾದರು. ಸತ್ಯೇಶ್ವರಿಯು ನಾಗ ದೇವರನ್ನು ತನ್ನ ಸಹೋದರನೆಂದು ಭಾವಿಸಿ ಪೂಜಿಸಿದಳು. ನಾಗ ದೇವರು ಸತ್ಯೇಶ್ವರಿಗೆ ಹೊಸ ಬಟ್ಟೆಗಳನ್ನು ಹಾಗೂ ಅಲಂಕಾರಗಳನ್ನು ತಂದು ನೀಡಿದರು. ಆದುದರಿಂದ ನಾಗರ ಪಂಚಮಿಯಂದು ಸ್ತ್ರೀಯರು ಹೊಸ ಬಟ್ಟೆಗಳನ್ನು ತೊಟ್ಟು, ಅಲಂಕಾರ ಧರಿಸುತ್ತಾರೆ.

ನಾಗರಪಂಚಮಿಯಂದು ಉಯ್ಯಾಲೆ ಆಡುವುದರ ಮಹತ್ವ

ನಾಗರಪಂಚಮಿಯಂದು ನಾಗ ದೇವರ ಶಾಸ್ತ್ರೋಕ್ತ ಪೂಜೆ ಆದ ನಂತರ ಆನಂದದ ಪ್ರತೀಕವೆಂದು ಸ್ತ್ರೀಯರು ಉಯ್ಯಾಲೆ ಆಡುವ ಪರಂಪರೆಯಿದೆ.

ನಾಗ ದೇವರು ಸತ್ಯೇಶ್ವರಿಯ ಮುಂದೆ ಅವಳ ಮೃತ ಸಹೋದರನಾದ ಸತ್ಯೇಶ್ವರನ ರೂಪದಲ್ಲಿ ಪ್ರಕಟವಾದರು. ಆಗ ಅವಳು ಮರಗಳ ಕೊಂಬೆಗಳಿಂದ ಜೋತಾಡಿ ಆನಂದವನ್ನು ವ್ಯಕ್ತಪಡಿಸಿದಳು.

ಉಯ್ಯಾಲೆ ಆಡುವುದರ ಹಿಂದಿರುವ ಉದ್ದೇಶ – ಉಯ್ಯಾಲೆ ಮೇಲೆ ಹೋದಂತೆ ಸಹೋದರನೂ ಪ್ರಗತಿಯ ಶಿಖರವನ್ನು ತಲುಪಲಿ, ಮತ್ತು ಉಯ್ಯಾಲೆ ಕೆಳಗೆ ಬಂದಂತೆ ಸಹೋದರನ ಜೀವನದಲ್ಲಿ ಬರುವ ಎಲ್ಲ ಅಡಚಣೆಗಳು ದುಃಖಗಳು ಹೋಗಲಿ. ಈ ರೀತಿ ಭಾವವನ್ನು ಇಟ್ಟುಕೊಂಡು ಸಹೋದರಿಯು ಪ್ರತಿಯೊಂದು ಕೃತಿಯನ್ನು ಮಾಡಿದರೆ, ಸಹೋದರನ 5% ಆಧ್ಯಾತ್ಮಿಕ ಪ್ರಗತಿ ಮತ್ತು 30% ವ್ಯಾವಹಾರಿಕ ಉನ್ನತಿಯಾಗುತ್ತದೆ.

ನಾಗರಪಂಚಮಿಯಂದು ಮಾಡುವ ಕೆಲವು ಕೃತಿಗಳ ಮಹತ್ವ

ನಾಗ ಪೂಜೆಯ ಮಹತ್ವ

1. ನಾಗಗಳಲ್ಲಿನ ಶ್ರೇಷ್ಠನಾದ ‘ಅನಂತ’ನೇ ನಾನು, ಎಂದು ಗೀತೆಯಲ್ಲಿ (10.29) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.

2. ಅನನ್ತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಮ್ಬಲಮ್ ।
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ ।।

ಅರ್ಥ: ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಬತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.

3. ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ‘ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಕೋನವನ್ನಿಡಲು ಎಂಬುದೇ ಕಲಿಕೆಯಿರುತ್ತದೆ. – ಪರಾತ್ಪರ ಗುರು ಪರಶರಾಮ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ

4. ನಾಗರಪಂಚಮಿಯ ದಿನವನ್ನು ಬಿಟ್ಟು ಇತರ ದಿನಗಳಲ್ಲಿ ನಾಗಗಳಲ್ಲಿ ತತ್ತ್ವಗಳು ಅಪ್ರಕಟವಾಗಿರುತ್ತವೆ. ನಾಗರಪಂಚಮಿಯಂದು ತತ್ತ್ವಗಳು ಪ್ರಕಟ ರೂಪದಲ್ಲಿ ಕಾರ್ಯನಿರತವಾಗುವುದರಿಂದ ಪೂಜಕನಿಗೆ ಲಾಭವಾಗುತ್ತದೆ.

5. ಗಣಪತಿಯ ಹೊಟ್ಟೆಯನ್ನು ಸುತ್ತುವರಿದಿರುವ ಹಳದಿ ನಾಗ ಎಂದರೆ ಜಾಗೃತ ವಿಶ್ವಕುಂಡಲಿನಿಯ ಪ್ರತೀಕ. ಮನುಷ್ಯರಲ್ಲಿಯೂ ಕುಂಡಲಿನಿಯನ್ನು ನಾಗರೂಪವೆಂದು ಪರಿಗಣಿಸಲಾಗಿದೆ.

ಕುಂಡಲಿನಿ ಜಾಗೃತಿಯ ಬಗ್ಗೆ ಅನೇಕರಿಗೆ ಕುತೂಹಲವಿರುತ್ತದೆ. ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸನಾತನದ ಸತ್ಸಂಗಕ್ಕೆ ಬನ್ನಿ. ಲಿಂಕ್ ಮೇಲೆ ನೀಡಲಾಗಿದೆ…

ನಾಗರಪಂಚಮಿಯಂದು ಹುತ್ತದ ಪೂಜೆಯ ಮಹತ್ವ

ನಾಗರಪಂಚಮಿಯಂದು ನಾಗಗಳಿರುವ ಹುತ್ತಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಹುತ್ತದಲ್ಲಿ ನಾಗನ ವಾಸವಿರುವುದರಿಂದ ಅಲ್ಲಿಯ ವಾತಾವರಣದಲ್ಲಿಯೂ ಅದರ ಸೂಕ್ಷ್ಮ ಪರಿಣಾಮವಾಗುತ್ತದೆ.

ನಾಗಗಳ ಆಧ್ಯಾತ್ಮಿಕ ಮಹತ್ವ

ಕಶ್ಯಪ ಋಷಿ ಮತ್ತು ಕದ್ರೂ ಇವರಿಂದ ಎಲ್ಲ ನಾಗಗಳ ನಿರ್ಮಿತಿಯಾಯಿತು. ಶಿವನು ಎಲ್ಲ ನಾಗಗಳ ಅಧಿಪತಿಯಾಗಿದ್ದಾನೆ. ಹೆಚ್ಚಿನ ನಾಗಗಳು ಶಿವನ ಉಪಾಸನೆಯನ್ನೇ ಮಾಡುತ್ತವೆ. ಕೆಲವು ನಾಗಗಳು ವಿಷ್ಣುವಿನ, ಕೆಲವು ನಾಗಗಳು ಶ್ರೀಗಣೇಶನ ಉಪಾಸನೆಯನ್ನು ಮಾಡುತ್ತವೆ.

ತ್ರಿಗುಣಗಳಂತೆ ನಾಗಗಳಲ್ಲಿ ಮೂರು ವಿಧಗಳಿವೆ

ತಾಮಸಿಕ ನಾಗ : ಈ ನಾಗಗಳು ಮುಖ್ಯವಾಗಿ ಕಪ್ಪು ಬಣ್ಣದ್ದಾಗಿದ್ದು ಅವು ಪಾತಾಳದ ನಾಗಲೋಕದಲ್ಲಿ ವಾಸಿಸುತ್ತವೆ. ದೊಡ್ಡ ಅನಿಷ್ಟ ಶಕ್ತಿಗಳು ಈ ನಾಗಗಳನ್ನು ಸೂಕ್ಷ್ಮ ಯುದ್ಧದಲ್ಲಿ ಶತ್ರುಗಳ ಮೇಲೆ ವಿಷಪ್ರಯೋಗ ಮಾಡಲು ಶಸ್ತ್ರಗಳಂತೆ ಉಪಯೋಗಿಸುತ್ತವೆ. ಪಾತಾಳದ ನಾಗಗಳು ಪೃಥ್ವಿಯ ಮೇಲಿನ ನಾಗಗಳಿಗಿಂತ ಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯಶಾಲಿ ಮತ್ತು ಸಾವಿರ ಪಟ್ಟು ವಿಷಕಾರಿಯಾಗಿರುತ್ತವೆ.

ರಾಜಸಿಕ ನಾಗ : ಈ ನಾಗಗಳು ಪೃಥ್ವಿಯ ಮೇಲೆ ವಾಸಿಸುತ್ತದೆ. ನಾಗಯೋನಿಯಲ್ಲಿ ಜನಿಸಿದ್ದರಿಂದ ಈ ನಾಗಗಳ ಆಚರಣೆಯು ಸಾಮಾನ್ಯ ನಾಗಗಳಂತೆ ಇರುತ್ತದೆ. ಅವು ಕಪ್ಪು, ನೀಲಿ, ಕಂದು, ಚಾಕಲೇಟ ಮುಂತಾದ ಬಣ್ಣದ್ದಾಗಿರುತ್ತವೆ.

ಸಾತ್ತ್ವಿಕ ನಾಗ : ಈ ನಾಗಗಳು ದೈವೀಯಾಗಿರುವುದರಿಂದ ಅವು ಶಿವಲೋಕದ ಸಮೀಪದಲ್ಲಿರುವ ದೈವೀ ನಾಗಲೋಕದಲ್ಲಿ ವಾಸಮಾಡುತ್ತವೆ. ಅವುಗಳ ಬಣ್ಣ ಹಳದಿಯಿರುತ್ತದೆ ಮತ್ತು ತಲೆಯ ಮೇಲೆ ಕೆಂಪು ಅಥವಾ ನೀಲಿ ಬಣ್ಣದ ನಾಗಮಣಿಯಿರುತ್ತದೆ. ಸಾತ್ತ್ವಿಕ ನಾಗವು ಪಾತಾಳದ ನಾಗಗಳ ತುಲನೆಯಲ್ಲಿ ಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯವುಳ್ಳದ್ದಾಗಿರುತ್ತದೆ. ಸಾತ್ತ್ವಿಕ ನಾಗಗಳನ್ನು ವಿವಿಧ ದೇವತೆಗಳು ಧರಿಸಿದ್ದಾರೆ. ಶಿವನ ಕೊರಳಲ್ಲಿ ವಾಸುಕಿ ಎಂಬ ನಾಗವಿದೆ. ಗಣಪತಿಯ ಹೊಟ್ಟೆಗೆ ಸುತ್ತು ಹಾಕಿದ ಜಾಗೃತ ವಿಶ್ವಕುಂಡಲಿನಿಯ ಪ್ರತೀಕವಾಗಿರುವ ಹಳದಿ ನಾಗ ಎಂದರೆ ಪದ್ಮನಾಭ. ಶ್ರೀವಿಷ್ಣು ಶೇಷನಾಗನ ‘ಶಯ್ಯೆ’ಯ ಮೇಲೆ ಮಲಗಿರುತ್ತಾನೆ. ಸಾತ್ತ್ವಿಕ ನಾಗಗಳು ಸಿದ್ಧ ಮತ್ತು ಋಷಿಮುನಿಗಳ ಆಧೀನದಲ್ಲಿರುತ್ತವೆ. ಅವು ಅವರ ಆಜ್ಞೆಯ ಪಾಲನೆಯನ್ನು ಮಾಡುತ್ತವೆ. ಹಳದಿ ನಾಗಗಳು ಉಚ್ಚ ದೇವತೆಗಳ ಉಪಾಸಕರಾಗಿರುವುದರಿಂದ ಅವುಗಳಲ್ಲಿ ದೈವಿ ಬಲವಿರುತ್ತದೆ. ಆದುದರಿಂದ ಅವರಿಗೆ ಆಶೀರ್ವಾದ ನೀಡುವ, ಅಂದರೆ ಸಂಕಲ್ಪಕ್ಕನುಸಾರ ಕಾರ್ಯವನ್ನು ಮಾಡುವ ಸಾಮರ್ಥ್ಯ ಪ್ರಾಪ್ತವಾಗಿದೆ.

ಅ. ನಾಗದೇವತೆಯನ್ನು ಕನಿಷ್ಠ ದೇವತೆಯೆಂದು ಪರಿಗಣಿಸಲಾಗುತ್ತದೆ.

ಆ. ಕೆಲವು ಸ್ಥಳಗಳಲ್ಲಿ ಸ್ಥಾನದೇವತೆಯೆಂದೂ ಅವು ಕಾರ್ಯ ಮಾಡುತ್ತಿರುತ್ತವೆ.

ಇ. ನಾಗದೇವತೆಗಳ ಸ್ಥಾನವು ಅರಳಿಮರ ಅಥವಾ ಆಲದ ಮರದ ಕೆಳಗೆ ಅಥವಾ ದೊಡ್ಡ ಹುತ್ತದಲ್ಲಿರುತ್ತದೆ.

ಈ. ಸಾತೆರಿ ದೇವಿಯು ಹುತ್ತದಲ್ಲಿ ವಾಸಿಸುತ್ತಾಳೆ. ದೇವಿಯ ಸೇವೆಯನ್ನು ಮಾಡಲು ಮತ್ತು ಅವಳ ಗಣವೆಂದು ಕಾರ್ಯ ಮಾಡುವುದಕ್ಕಾಗಿ ಸಾತ್ತ್ವಿಕ ನಾಗಗಳು ಹುತ್ತದಲ್ಲಿ ವಾಸಿಸುತ್ತವೆ.

ಭುವರ್ಲೋಕ ಮತ್ತು ಪಿತೃಲೋಕದಲ್ಲಿ ಸಿಲುಕಿರುವ ಪೂರ್ವಜರು ಹೆಚ್ಚಾಗಿ ಕಪ್ಪು ನಾಗಗಳ ರೂಪದಲ್ಲಿ ವಂಶಜರಿಗೆ ದರ್ಶನವನ್ನು ನೀಡುತ್ತಾರೆ. ಸಾತ್ತ್ವಿಕ ಪೂರ್ವಜರು ಹಳದಿ ನಾಗಗಳ ರೂಪದಲ್ಲಿ ದರ್ಶನ ಮತ್ತು ಆಶೀರ್ವಾದ ನೀಡುತ್ತಾರೆ.
ಮನೆ, ಸಂಪತ್ತು ಮತ್ತು ಕುಟುಂಬದವರ ವಿಷಯದಲ್ಲಿ ಬಹಳ ಆಸಕ್ತಿ ಇರುವ ಪೂರ್ವಜರಿಗೆ ಪೃಥ್ವಿಯ ಮೇಲೆ ನಾಗಗಳ ಯೋನಿಯಲ್ಲಿ ಜನ್ಮ ಸಿಗುತ್ತದೆ. ದೇವಕಾರ್ಯದಲ್ಲಿ ಸಹಭಾಗಿಯಾಗಿರುವ ಮತ್ತು ಸಜ್ಜನ ಪ್ರವೃತ್ತಿಯ ಪೂರ್ವಜರು ಪಿತೃಲೋಕದಲ್ಲಿ ವಾಸ ಮಾಡಿದ ನಂತರ ಕೆಲವು ಸಮಯ ಶಿವಲೋಕದ ಸಮೀಪದಲ್ಲಿರುವ ದೈವಿ ನಾಗಲೋಕದಲ್ಲಿ ಹಳದಿ ನಾಗಗಳ ರೂಪದಲ್ಲಿ ವಾಸ ಮಾಡುತ್ತವೆ.

ಕಲಿಯುಗದ ಆರಂಭದವರೆಗೆ ವಿವಿಧ ಸ್ಥಳಗಳ ದೇವತೆಗಳಿಗೆ ಅವರದ್ದೇ ಆದ ಸ್ವತಂತ್ರ ಸ್ಥಾನವನ್ನು ನೀಡಲಾಗುತ್ತಿತ್ತು, ಉದಾ. ಸ್ಥಾನದೇವತೆ, ಗ್ರಾಮದೇವತೆ, ಕ್ಷೇತ್ರಪಾಲ ದೇವತೆ ಇತ್ಯಾದಿ. ಅದೇ ರೀತಿಯಲ್ಲಿ ಭಾರತದಲ್ಲಿ ಪ್ರತಿಯೊಂದು ಊರಿನಲ್ಲಿ ನಾಗಗಳಿಗೆ ವಾಸಿಸಲು ನಾಗಬನಗಳಿದ್ದವು. ಈ ಸ್ಥಳಗಳಲ್ಲಿ ದೊಡ್ಡ ದೊಡ್ಡ ಮರಗಳ ದಟ್ಟಣೆ ಇದ್ದು ಅವುಗಳ ಬುಡದಲ್ಲಿ ಹುತ್ತಗಳಿರುತ್ತಿದ್ದವು. ಪ್ರತಿಯೊಂದು ಊರಿನ ನಾಗಗಳು ಅಲ್ಲಿ ಇರುತ್ತಿದ್ದವು. ನಾಗಗಳಿಗೆ ಸ್ವತಂತ್ರ ಸ್ಥಾನ ಇದ್ದುದರಿಂದ ಅವು ಮನುಷ್ಯನಿಗೆ ತೊಂದರೆಯನ್ನು ನೀಡುತ್ತಿರಲಿಲ್ಲ ಮತ್ತು ಮನುಷ್ಯನ ಮತ್ತು ಅವನ ಸಂಪತ್ತಿನ ರಕ್ಷಣೆಯನ್ನು ಮಾಡುತ್ತಿದ್ದವು. ಆದರೆ ವಿಜ್ಞಾನಯುಗದಲ್ಲಿ ಮಾನವನು ಭೌತಿಕ ಪ್ರಗತಿ ಮಾಡಿಕೊಳ್ಳಲು ಊರೂರಿನ ನಾಗಬನಗಳನ್ನು ನಾಶ ಮಾಡಿ ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದನು. ಆದುದರಿಂದ ಮನುಷ್ಯನಿಗೆ ನಾಗಗಳ ಉಪಟಳವನ್ನು ಸಹಿಸ ಬೇಕಾಗಿ ಬಂದಿದೆ. – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ)

ನಾಗಗಳ ವಿಧಗಳು

ದೇವತೆಗಳ ಶ್ರೇಣಿಯಲ್ಲಿ ನಾಗಗಳ ಸ್ಥಾನ

ಅ. ನಾಗದೇವತೆಯನ್ನು ಕನಿಷ್ಠ ದೇವತೆಯೆಂದು ಪರಿಗಣಿಸಲಾಗುತ್ತದೆ.

ಆ. ಕೆಲವು ಸ್ಥಳಗಳಲ್ಲಿ ಸ್ಥಾನದೇವತೆಯೆಂದೂ ಅವು ಕಾರ್ಯ ಮಾಡುತ್ತಿರುತ್ತವೆ.

ಇ. ನಾಗದೇವತೆಗಳ ಸ್ಥಾನವು ಅರಳಿಮರ ಅಥವಾ ಆಲದ ಮರದ ಕೆಳಗೆ ಅಥವಾ ದೊಡ್ಡ ಹುತ್ತದಲ್ಲಿರುತ್ತದೆ.

ಈ. ಸಾತೆರಿ ದೇವಿಯು ಹುತ್ತದಲ್ಲಿ ವಾಸಿಸುತ್ತಾಳೆ. ದೇವಿಯ ಸೇವೆಯನ್ನು ಮಾಡಲು ಮತ್ತು ಅವಳ ಗಣವೆಂದು ಕಾರ್ಯ ಮಾಡುವುದಕ್ಕಾಗಿ ಸಾತ್ತ್ವಿಕ ನಾಗಗಳು ಹುತ್ತದಲ್ಲಿ ವಾಸಿಸುತ್ತವೆ.

ಪೂರ್ವಜರ ಮತ್ತು ನಾಗಗಳ ಪರಸ್ಪರ ಸಂಬಂಧ

ಭುವರ್ಲೋಕ ಮತ್ತು ಪಿತೃಲೋಕದಲ್ಲಿ ಸಿಲುಕಿರುವ ಪೂರ್ವಜರು ಹೆಚ್ಚಾಗಿ ಕಪ್ಪು ನಾಗಗಳ ರೂಪದಲ್ಲಿ ವಂಶಜರಿಗೆ ದರ್ಶನವನ್ನು ನೀಡುತ್ತಾರೆ. ಸಾತ್ತ್ವಿಕ ಪೂರ್ವಜರು ಹಳದಿ ನಾಗಗಳ ರೂಪದಲ್ಲಿ ದರ್ಶನ ಮತ್ತು ಆಶೀರ್ವಾದ ನೀಡುತ್ತಾರೆ.
ಮನೆ, ಸಂಪತ್ತು ಮತ್ತು ಕುಟುಂಬದವರ ವಿಷಯದಲ್ಲಿ ಬಹಳ ಆಸಕ್ತಿ ಇರುವ ಪೂರ್ವಜರಿಗೆ ಪೃಥ್ವಿಯ ಮೇಲೆ ನಾಗಗಳ ಯೋನಿಯಲ್ಲಿ ಜನ್ಮ ಸಿಗುತ್ತದೆ. ದೇವಕಾರ್ಯದಲ್ಲಿ ಸಹಭಾಗಿಯಾಗಿರುವ ಮತ್ತು ಸಜ್ಜನ ಪ್ರವೃತ್ತಿಯ ಪೂರ್ವಜರು ಪಿತೃಲೋಕದಲ್ಲಿ ವಾಸ ಮಾಡಿದ ನಂತರ ಕೆಲವು ಸಮಯ ಶಿವಲೋಕದ ಸಮೀಪದಲ್ಲಿರುವ ದೈವಿ ನಾಗಲೋಕದಲ್ಲಿ ಹಳದಿ ನಾಗಗಳ ರೂಪದಲ್ಲಿ ವಾಸ ಮಾಡುತ್ತವೆ.

ಕಲಿಯುಗದಲ್ಲಿ ಮನುಷ್ಯನಿಗೆ ನಾಗಬಾಧೆ ಏಕೆ ಆಗುತ್ತದೆ

ಕಲಿಯುಗದ ಆರಂಭದವರೆಗೆ ವಿವಿಧ ಸ್ಥಳಗಳ ದೇವತೆಗಳಿಗೆ ಅವರದ್ದೇ ಆದ ಸ್ವತಂತ್ರ ಸ್ಥಾನವನ್ನು ನೀಡಲಾಗುತ್ತಿತ್ತು, ಉದಾ. ಸ್ಥಾನದೇವತೆ, ಗ್ರಾಮದೇವತೆ, ಕ್ಷೇತ್ರಪಾಲ ದೇವತೆ ಇತ್ಯಾದಿ. ಅದೇ ರೀತಿಯಲ್ಲಿ ಭಾರತದಲ್ಲಿ ಪ್ರತಿಯೊಂದು ಊರಿನಲ್ಲಿ ನಾಗಗಳಿಗೆ ವಾಸಿಸಲು ನಾಗಬನಗಳಿದ್ದವು. ಈ ಸ್ಥಳಗಳಲ್ಲಿ ದೊಡ್ಡ ದೊಡ್ಡ ಮರಗಳ ದಟ್ಟಣೆ ಇದ್ದು ಅವುಗಳ ಬುಡದಲ್ಲಿ ಹುತ್ತಗಳಿರುತ್ತಿದ್ದವು. ಪ್ರತಿಯೊಂದು ಊರಿನ ನಾಗಗಳು ಅಲ್ಲಿ ಇರುತ್ತಿದ್ದವು. ನಾಗಗಳಿಗೆ ಸ್ವತಂತ್ರ ಸ್ಥಾನ ಇದ್ದುದರಿಂದ ಅವು ಮನುಷ್ಯನಿಗೆ ತೊಂದರೆಯನ್ನು ನೀಡುತ್ತಿರಲಿಲ್ಲ ಮತ್ತು ಮನುಷ್ಯನ ಮತ್ತು ಅವನ ಸಂಪತ್ತಿನ ರಕ್ಷಣೆಯನ್ನು ಮಾಡುತ್ತಿದ್ದವು. ಆದರೆ ವಿಜ್ಞಾನಯುಗದಲ್ಲಿ ಮಾನವನು ಭೌತಿಕ ಪ್ರಗತಿ ಮಾಡಿಕೊಳ್ಳಲು ಊರೂರಿನ ನಾಗಬನಗಳನ್ನು ನಾಶ ಮಾಡಿ ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದನು. ಆದುದರಿಂದ ಮನುಷ್ಯನಿಗೆ ನಾಗಗಳ ಉಪಟಳವನ್ನು ಸಹಿಸ ಬೇಕಾಗಿ ಬಂದಿದೆ. – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ)

ಆಧಾರ ಗ್ರಂಥ

ಈ ಮಾಹಿತಿಯನ್ನು ಸನಾತನದ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’ ಗ್ರಂಥದಿಂದ ಆರಿಸಲಾಗಿದೆ. ಇದೇ ರೀತಿ ಇತರ ಹಬ್ಬಗಳ ಮಾಹಿತಿಗಾಗಿ ಇಂದೇ ಖರೀದಿಸಿ ಓದಿ…

ನಾಗರಪಂಚಮಿಯ ವಿಶೇಷ ವೀಡಿಯೋ

‘ನಮ್ಮ ಕುಟುಂಬವು ಸದಾಸರ್ವಕಾಲ ನಾಗಭಯದಿಂದ ಮುಕ್ತವಾಗಬೇಕು, ಹಾಗೆಯೇ ನಾಗದೇವತೆಯ ಕೃಪಾಶೀರ್ವಾದವು ಪ್ರಾಪ್ತವಾಗಬೇಕು’, ಎಂದು ಪ್ರತಿವರ್ಷ ಶ್ರಾವಣ ಶುಕ್ಲ ಪಕ್ಷ ಪಂಚಮಿ ಅಂದರೆ ನಾಗರಪಂಚಮಿಯಂದು ನಾಗಪೂಜೆಯನ್ನು ಮಾಡಲಾಗುತ್ತದೆ. ಈ ದಿನದಂದು ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗನನ್ನು ತಂದು ಅದರ ಪೂಜೆಯನ್ನು ಮಾಡುತ್ತಿದ್ದರೆ, ಕೆಲವು ಸ್ಥಳದಲ್ಲಿ ಹುತ್ತದ ಪೂಜೆಯನ್ನು, ನಾಗದೇವತೆಯ ಕಲ್ಲಿನ ಪ್ರತಿಮೆಯ ಪೂಜೆಯನ್ನೂ ಮಾಡಲಾಗುತ್ತದೆ. ಆಪತ್ಕಾಲದ ಸ್ಥಿತಿಯಲ್ಲಿ (ಮಹಾಮಾರಿ, ನೆರೆ ಇತ್ಯಾದಿ) ನಾಗಪಂಚಮಿ ಪೂಜೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?

1. ನಾಗದೇವತೆಯ ಪೂಜೆ

1 ಅ. ನಾಗದೇವತೆಯ ಚಿತ್ರವನ್ನು ಬಿಡಿಸುವುದು : ಅರಿಶಿಣಮಿಶ್ರಿತ ಚಂದನದಿಂದ ಗೋಡೆಯ ಮೇಲೆ ಅಥವಾ ಮಣೆಯ ಮೇಲೆ ನಾಗನ ಚಿತ್ರವನ್ನು ಬಿಡಿಸಬೇಕು (ಅಥವಾ ಒಂಬತ್ತು ನಾಗಗಳ ಚಿತ್ರಗಳನ್ನು ಬಿಡಿಸಬೇಕು.) ಮತ್ತು ಆ ಸ್ಥಳದಲ್ಲಿ ನಾಗದೇವತೆಯ ಪೂಜೆಯನ್ನು ಮಾಡಬೇಕು. ‘ಸಪತ್ನೀಕನಾಗದೇವತಾಭ್ಯೋ ನಮಃ |’ ಈ ನಾಮಮಂತ್ರವನ್ನು ಹೇಳುತ್ತ ಪೂಜೆಯನ್ನು ಮಾಡಬೇಕು.

1 ಆ. ಷೋಡಶೋಪಚಾರ ಪೂಜೆ : ಯಾರಿಗೆ ನಾಗದೇವತೆಯ ‘ಷೋಡಶೋಪಚಾರ ಪೂಜೆ‘ಯನ್ನು ಮಾಡಲು ಸಾಧ್ಯವಿದೆಯೋ, ಅವರು ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

1 ಇ. ಪಂಚೋಪಚಾರ ಪೂಜೆ : ಯಾರಿಗೆ ನಾಗದೇವತೆಯ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು ‘ಪಂಚೋಪಚಾರ ಪೂಜೆ‘ಯನ್ನು ಮಾಡಬೇಕು ಮತ್ತು ಹಾಲು, ಸಕ್ಕರೆ, ಅರಳು ಇವುಗಳ, ಹಾಗೆಯೇ ಕುಲದ ಪರಂಪರೆಗನುಸಾರ ಪಾಯಸ ಇತ್ಯಾದಿ ಪದಾರ್ಥಗಳ ನೈವೇದ್ಯವನ್ನು ತೋರಿಸಬೇಕು. (ಪಂಚೋಪಚಾರ ಪೂಜೆ : ಗಂಧ, ಅರಿಶಿಣ-ಕುಂಕುಮ, ಪುಷ್ಪ, ಧೂಪ, ದೀಪ ಮತ್ತು ನೈವೆದ್ಯ ಈ ಕ್ರಮದಿಂದ ಪೂಜೆಯನ್ನು ಮಾಡಬೇಕು.)

2. ಪೂಜೆಯ ನಂತರ ನಾಗದೇವತೆಗೆ ಮಾಡುವ ಪ್ರಾರ್ಥನೆ !

‘ಹೇ ನಾಗದೇವತೆ, ಶ್ರಾವಣ ಶುಕ್ಲ ಪಕ್ಷ ಪಂಚಮಿಯಂದು ನಾನು ಮಾಡಿದ ಈ ನಾಗಪೂಜೆಯಿಂದ ನೀವು ಪ್ರಸನ್ನರಾಗಿ ನನಗೆ ಸದಾಕಾಲ ಸುಖವನ್ನು ಕರುಣಿಸಿ. ಹೇ ನಾಗದೇವತೆ, ನಾನು ಮಾಡಿದ ಪೂಜೆಯಲ್ಲಿ ಅಜ್ಞಾನದಿಂದ ಮತ್ತು ತಿಳಿಯದೇ ಏನಾದರೂ ಹೆಚ್ಚು-ಕಡಿಮೆಯಾಗಿದ್ದರೆ ನನ್ನನ್ನು ಕ್ಷಮಿಸಿ. ನಿಮ್ಮ ಕೃಪೆಯಿಂದಾಗಿ ನನ್ನ ಎಲ್ಲ ಮನೋಕಾಮನೆಗಳು ಪೂರ್ತಿಯಾಗಲಿ. ನನ್ನ ಕುಲದಲ್ಲಿ ನಾಗವಿಷದ ಭಯ ಎಂದಿಗೂ ಉತ್ಪನ್ನವಾಗದಿರಲಿ’, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ.’