ಗುರುಗಳನ್ನು ಬುದ್ಧಿಯಿಂದ ಅರಿತುಕೊಳ್ಳುವುದು ಅಸಾಧ್ಯವಾಗಿರುವುದರ ಕಾರಣಗಳು

ಸದ್ಗುರು (ಸೌ.) ಅಂಜಲಿ ಗಾಡಗೀಳ

ಅ. ಗುರುಗಳು ಸ್ವತಃ ಷಡ್ರಿಪುಗಳ ಆಚೆಗೆ ಹೋಗಿರುವುದರಿಂದ ಜಡಬುದ್ಧಿಯಿಂದ ಅವರನ್ನು ಅರಿತುಕೊಳ್ಳುವುದು ಅಸಾಧ್ಯವಾಗಿದೆ : ತತ್ತ್ವದಿಂದ ಗುರುಗಳನ್ನು ಅರಿಯುವುದು ಕೇವಲ ದೇವರ ಕೃಪೆಯಿಂದಲೇ ಸಾಧ್ಯವಾಗಬಲ್ಲದು. ಗುರುಗಳು ಷಡ್ರಿಪುಗಳ ಆಚೆಗೆ ಹೋಗಿರುವುದರಿಂದ ಅವರನ್ನು ಜಡ ಬುದ್ಧಿಯಿಂದ ಅರಿತುಕೊಳ್ಳುವುದು ಅಸಾಧ್ಯವೇ ಆಗಿರುತ್ತದೆ. ಜಡಬುದ್ಧಿಗೆ ವಿಚಾರಗಳ ಮಿತಿಯಿರುತ್ತದೆ.

ಆ. ಗುರುಗಳನ್ನು ಪರೀಕ್ಷಿಸಲು ಆ ವ್ಯಕ್ತಿಯೂ ಅಷ್ಟೇ ಸಾಮರ್ಥ್ಯವನ್ನು ಹೊಂದಿರಬೇಕು ! : ಗುರುಗಳನ್ನು ಪರೀಕ್ಷಿಸಬಾರದು; ಏಕೆಂದರೆ ಅವರು ಸ್ವತಃ ವಿಕಾರ – ವಿಕಲ್ಪ, ಭಾವ-ಭಾವನೆ ಮತ್ತು ಷಡ್ರಿಪುಗಳ ಆಚೆಗೆ ಹೋಗಿರುತ್ತಾರೆ; ಆದುದರಿಂದ ಅವರನ್ನು ಪರೀಕ್ಷಿಸುವ ವ್ಯಕ್ತಿಯೂ ಅಷ್ಟೇ ಸಾಮರ್ಥ್ಯವನ್ನು ಹೊಂದಿರಬೇಕು ಮತ್ತು ಅಧ್ಯಾತ್ಮದ ಅಧಿಕಾರಿಯೂ ಆಗಿರಬೇಕಾಗುತ್ತದೆ.

ಇ. ಭಾವದಿಂದ ಗುರುಗಳ ಅಂತರಂಗವನ್ನು ಗುರುತಿಸಬಹುದು; ಆದರೆ ಬುದ್ಧಿ ಪ್ರಾಮಾಣ್ಯವಾದಿಗಳಲ್ಲಿ ಭಾವವಿರುವುದಿಲ್ಲ : ಇತ್ತೀಚೆಗೆ ಕಲಿಯುಗದಲ್ಲಿ ಯಾರು ಬೇಕಾದರು ಸಾಧು-ಸಂತರನ್ನು ಮತ್ತು ಸಜ್ಜನರನ್ನು ಟೀಕಿಸುತ್ತಾರೆ. ಅದು ಬುದ್ಧಿಪ್ರಾಮಾಣ್ಯವಾದಿಗಳ ಒಂದು ಹವ್ಯಾಸವೇ ಆಗಿದೆ. ಭಾವದಿಂದಲೇ ಗುರುಗಳ ಅಂತರಂಗವನ್ನು ಗುರುತಿಸುವುದು ಸಾಧ್ಯವಿದೆ, ಆದರೆ ಇಂತಹ ಭಾವ ಬುದ್ಧಿಪ್ರಾಮಾಣ್ಯವಾದಿಗಳಲ್ಲಿ ಇರುವುದಿಲ್ಲ.

ಈ. ಶ್ರದ್ಧೆಯ ಮನಸ್ಸಿನಿಂದಲೇ ಗುರುಗಳ ಮಹತ್ವವು ತಿಳಿಯಬಲ್ಲದು : ಶ್ರದ್ಧೆಯ ಮನಸ್ಸಿನಿಂದಲೇ (ಶ್ರದ್ಧೆಯಿಂದಲೇ) ಗುರುಗಳ ಮಹತ್ವ ತಿಳಿಯಬಲ್ಲದು, ಇಲ್ಲದಿದ್ದರೆ ಅವರು ಜನಸಾಮಾನ್ಯರಿಗೆ ಇತರರಂತೆಯೇ ಸಾಮಾನ್ಯರೆನಿಸುತ್ತಾರೆ.

ಉ. ಗುರುಗಳ ಚರಿತ್ರೆಯನ್ನು ಎಂದಿಗೂ ಬುದ್ಧಿಯಿಂದ ಅಧ್ಯಯನ ಮಾಡಬಾರದು ಅದರಲ್ಲಿನ ತತ್ತ್ವವನ್ನು ಭಾವಪೂರ್ಣ ರೂಪದಲ್ಲಿ ಅಂತರಂಗದಲ್ಲಿ ಸೇರಿಸಿ ಕೊಳ್ಳಬೇಕು ! : ಗುರುಗಳ ಕಾರ್ಯ ಮತ್ತು ಅವರ ದೃಷ್ಟಾಂತವನ್ನು ತತ್ತ್ವಶಃ ಅಧ್ಯಯನ ಮಾಡಿದರೆ ಅದರಲ್ಲಿನ ಈಶ್ವರತ್ವವು ಚಿರಂತನ ಮತ್ತು ಶಾಶ್ವತದ ಆನಂದವನ್ನು ಕೊಡುತ್ತದೆ. ಆದುದರಿಂದ ‘ಗುರುಗಳ ಚರಿತ್ರೆಯನ್ನು ಯಾವತ್ತೂ ಬುದ್ಧಿಯಿಂದ ಅಧ್ಯಯನ ಮಾಡಬಾರದು; ಅದರಲ್ಲಿರುವ ತತ್ತ್ವವನ್ನು ಭಾವ ಪೂರ್ಣವಾಗಿ ಆಂತರ್ಯದಲ್ಲಿ ಸೇರಿಸಿಕೊಳ್ಳಬೇಕು’.

ಊ. ‘ಗುರುಗಳ ಪ್ರಕೃತಿಯನ್ನು ನೋಡಬೇಡಿರಿ, ಅವರ ತತ್ತ್ವಸದೃಶ ಬೋಧನೆಯನ್ನು ನೋಡಿರಿ’ ಎಂಬ ವಚನವಿದೆ ಮತ್ತು ಭಾವಪೂರ್ಣವಾಗಿ ಗುರುಚರಿತ್ರೆಯಲ್ಲಿನ ದೇವರನ್ನು ನೋಡಿದರೆ ಅದರಿಂದ ಕಲ್ಯಾಣವೇ ಆಗುತ್ತದೆ : ಬುದ್ಧಿಯಿಂದ ಅಧ್ಯಯನ ಮಾಡಿದರೆ ಅದರಲ್ಲಿನ ಗುರುಗಳ ಪ್ರಕೃತಿಯು ನಿಮ್ಮನ್ನು ಮೋಸಗೊಳಿಸುತ್ತದೆ ಮತ್ತು ನಿಮ್ಮ ಮನಸ್ಸಿನಲ್ಲಿ ವಿಕಲ್ಪಗಳನ್ನು ಹಾಕುತ್ತದೆ. ತದ್ವಿರುದ್ಧವಾಗಿ ಭಾವಪೂರ್ಣವಾಗಿ ಗುರುಚರಿತ್ರೆಯಲ್ಲಿನ ದೇವರನ್ನು ಗಮನಕೊಟ್ಟು ನೋಡಿದರೆ ಅದರಿಂದ ನಿಮ್ಮ ಕಲ್ಯಾಣವೇ ಆಗುತ್ತದೆ; ಆದುದರಿಂದ ‘ಗುರುಗಳ ಪ್ರಕೃತಿಯ ಕಡೆಗೆ ನೋಡಬೇಡಿ, ಅವರ ತತ್ತ್ವಸದೃಶ ಬೋಧನೆಯನ್ನು ನೋಡಿರಿ !’, ಎಂಬ ವಚನವಿದೆ. ಇದನ್ನು ಅಕ್ಷರಶಃ ಪಾಲಿಸಿದರೆ ಭಾವಾವಸ್ಥೆಯಿಂದ ಆತ್ಮಜ್ಞಾನದವರೆಗೆ ಹೋಗುವಾಗ ಆ ತತ್ತ್ವವು ಅಂತರ್ಯದಲ್ಲಿ ನಿಧಾನವಾಗಿ ರೇಷ್ಮೆಯ ದಾರಂತೆ ಬಿಚ್ಚುತ್ತಾ ಹೋಗಿ ಜೀವವನ್ನು ಮುಕ್ತಿಯ ದ್ವಾರದವರೆಗೆ ಒಯ್ಯುತ್ತದೆ. ಮುಂದಿನ ನಿರ್ಗುಣ ಪ್ರಯಾಣದ ಜವಾಬ್ದಾರಿಯನ್ನು ವಹಿಸುವವರೂ ಗುರುಗಳೇ ಆಗಿರುತ್ತಾರೆ.’ – ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ) ೮.೪.೨೦೧೨, ಬೆಳಗ್ಗೆ ೮.೫೭

Leave a Comment