ಇಂದಿನ ಶಿಕ್ಷಣಕ್ಷೇತ್ರದ ಭೀಕರ ಸ್ಥಿತಿಯಿಂದ ಯುವಪೀಳಿಗೆಯ ಉದ್ಧಾರವಾಗಲು ಗುರುದೇವ ಡಾ. ಕಾಟೇಸ್ವಾಮೀಜಿಯವರ ವಿಚಾರ !

ಶಿಕ್ಷಣ ಪದ್ಧತಿಯು ಆಂಗ್ಲ ಮಾನಸಿಕತೆಯನ್ನು ನಾಶಗೊಳಿಸುವ ಮತ್ತು ಯುವಪೀಳಿಗೆಯನ್ನು ತೇಜಸ್ವಿಗೊಳಿಸುವಂತಿರಬೇಕು, ಶಿಕ್ಷಣದ ಉದ್ದೇಶ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಜ್ವಲಂತ ವ್ಯಕ್ತಿಗಳನ್ನು ನಿರ್ಮಿಸುವುದಾಗಿರಬೇಕು !
– ಗುರುದೇವ ಡಾ. ಕಾಟೇಸ್ವಾಮೀಜಿ

೧. ಇಂದಿನ ಶಿಕ್ಷಣ ಪದ್ಧತಿಯು ಆಂಗ್ಲ ಮಾನಸಿಕತೆಯನ್ನು ನಾಶಗೊಳಿಸುವ ಮತ್ತು ಯುವಪೀಳಿಗೆಯನ್ನು ತೇಜಸ್ವಿಗೊಳಿಸುವಂತಿರಬೇಕು

ಸ್ವಾತಂತ್ರ್ಯ ದೊರಕಿ ೬೦ ವರ್ಷಗಳಾದವು; ಆದರೆ ಇಂದಿಗೂ ಶಿಕ್ಷಣಕ್ಕೆ ಈ ಭಾರತದ ಮಣ್ಣಿನ ಗಂಧಗಾಳಿ ಇಲ್ಲ, ವೈದಿಕ ಧರ್ಮ-ಸಂಸ್ಕೃತಿಯ ಸ್ಪರ್ಶವಿಲ್ಲ. ವಾಸ್ತವದಲ್ಲಿ ವೈದಿಕ ವಿಚಾರಗಳ ಮೇಲಾಧಾರಿಸಿದ ಶ್ರೇಷ್ಠ ಪ್ರಖರಶಿಕ್ಷಣ ವ್ಯವಸ್ಥೆ ಬೇಕು; ಆದರೆ ಅದನ್ನು ಪೂರ್ಣ ದುರ್ಲಕ್ಷಿಸಲಾಗಿದೆ, ಅದು ಸಂಸ್ಕಾರ ರಹಿತ ಮತ್ತು ಆಚಾರ ರಹಿತವಾಗಿದೆ. ಸದ್ಯದ ಪಠ್ಯಕ್ರಮ ಪಾಶ್ಚಾತ್ಯ ವಿಚಾರಸರಣಿಯದ್ದಾಗಿದ್ದು, ಅದು ವೈದಿಕ ಸಂಸ್ಕೃತಿಯನ್ನು ನಾಶಮಾಡುವುದಾಗಿದೆ ! ನಮ್ಮ ಭಾರತ ರಾಷ್ಟ್ರದ ರಚನೆಯನ್ನು ಮಾಡುವ ಯಾವ ಯುವಶಕ್ತಿ ಇದೆಯೋ, ಅದುವೇ ಇಂದು ವಿಧ್ವಂಸಕವಾಗಿದೆ. ಈಗ ನಮ್ಮ ಯುವ ಪೀಳಿಗೆ ಕೆಟ್ಟ ಆಚಾರ ವಿಚಾರಗಳದ್ದಾಗಿದೆ.

೨. ಶಿಕ್ಷಣದಲ್ಲಿ ಹಿಂದುತ್ವಕ್ಕೆ ಗೌರವದ ಸ್ಥಾನವಿರುವುದು ಆವಶ್ಯಕ !

ಸಂಶೋಧಕರು, ವಿಜ್ಞಾನಿಗಳು, ಇತಿಹಾಸತಜ್ಞರು, ನಿಸ್ವಾರ್ಥ ಸಮಾಜಸೇವಕರು, ಧ್ಯೇಯನಿಷ್ಠ ವ್ಯಕ್ತಿಗಳು, ಸನಾತನ ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಂತಹ ಜ್ವಲಂತ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದು ಮುಂತಾದ ಉದ್ದೇಶಗಳಿಗೆ ಮತ್ತು ಈ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಸಂಬಂಧವಿಲ್ಲ; ಇಂದಿನ ಶಿಕ್ಷಣದ ಸ್ಥಿತಿ ಇಷ್ಟೊಂದು ಭೀಕರವಾಗಿದೆ. ನಮ್ಮ ಶಿಕ್ಷಣದಲ್ಲಿ ಹಿಂದುತ್ವದ ಅಸ್ಮಿತೆಗೆ ಸ್ಥಾನ ಎಲ್ಲಿದೆ ? ಸರ್ವಧರ್ಮ ಸಮಭಾವ (ಜಾತ್ಯತೀತತೆ) ಇದು ಎಂತಹ ತಮಾಷೆಯಾಗಿದೆ, ಇದನ್ನು ನಮ್ಮ ಹಿಂದೂ ಜನರಲ್ಲಿ ಬಿಂಬಿಸಬೇಕು.’

೩. ಶಿಕ್ಷಣದ ಉದ್ದೇಶ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಜ್ವಲಂತ ವ್ಯಕ್ತಿಗಳನ್ನು ನಿರ್ಮಿಸುವುದಾಗಿರಬೇಕು !

ಮುಸಲ್ಮಾನ ಮತ್ತು ಕ್ರೈಸ್ತರಿಗಾಗಿ ಪ್ರತ್ಯೇಕ ಶಾಲೆಗಳಿವೆ. ಅವರ ಶಿಕ್ಷಣ ಸಂಸ್ಥೆಗಳು, ಅವರ ಆಸ್ತಿಪಾಸ್ತಿ, ಅವರ ಪ್ರಾರ್ಥನಾ ಗೃಹಗಳು, ಪ್ರಾರ್ಥನಾ ಗೃಹಗಳ ಸಂಪತ್ತುಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಕೈ ಹಚ್ಚಲು ಅಧಿಕಾರವಿಲ್ಲ. ಹಿಂದೂಗಳ ಶಿಕ್ಷಣ ಸಂಸ್ಥೆಗಳನ್ನು, ಮಂದಿರಗಳನ್ನು, ಅವರ ಸಂಪತ್ತನ್ನು ಸರಕಾರವು ಯಾವಾಗ ಬೇಕಾದರೂ ಯಾವುದೇ ಕಾರಣವನ್ನು ನೀಡದೇ ವಶಕ್ಕೆ ಪಡೆಯಬಹುದು ! ಇದು ಏನು ಹೇಳುತ್ತದೆ ? ಶಿಕ್ಷಣ ವ್ಯವಸ್ಥೆಯ ಸಮಾನ ಹಂಚುವಿಕೆ, ಸಾಮುದಾಯಿಕ ವಿದ್ಯಾಲಯಗಳು (ಕಮ್ಯುನಿಟಿ ಸ್ಕೂಲ) ಈ ಸಂಕಲ್ಪನೆ ಅಪೇಕ್ಷಿತವಾಗಿತ್ತು, ಎಲ್ಲಿ ಹೋಯಿತು ಈ ಸಂಕಲ್ಪನೆ ? ಕಾರಣವಿಲ್ಲದೇ ಅನೇಕ ಅಡಚಣೆಗಳನ್ನು ನಿರ್ಮಾಣ ಮಾಡುವ ಧರ್ಮಾಂಧ, ದ್ವೇಷಾಂಧ ರಾಷ್ಟ್ರವನ್ನು (ಪಾಕಿಸ್ತಾನವನ್ನು) ನಮಗೆ ಎದುರಿಸಬೇಕಾಗಿದೆ, ಈ ಪ್ರಖರ ಅರಿವನ್ನು ನಮ್ಮ ಯುವ ಪೀಳಿಗೆಯ ಮನಸ್ಸಿನ ಮೇಲೆ ಇಂದಿನ ವಿದ್ಯಾಲಯಗಳು, ಮಹಾವಿದ್ಯಾಲಯಗಳು, ವಿದ್ಯಾಪೀಠಗಳು ಬಿಂಬಿಸಬಹುದೇನು ?

ಇಂದಿನ ಹಿಂದುಸ್ಥಾನದ ಶಿಕ್ಷಣವು ಆಧುನಿಕ ವೈದ್ಯರನ್ನು (ಡಾಕ್ಟರರನ್ನು) ಮತ್ತು ಅಭಿಯಂತರನ್ನು (ಇಂಜಿನೀಯರ) ನಿರ್ಮಾಣ ಮಾಡುವುದು, ಚುನಾವಣೆಯಲ್ಲಿ ಹೋರಾಡುವ ಶೂರರನ್ನು ದೇಶಕ್ಕೆ ಸತತವಾಗಿ ಪೂರೈಸುವುದು, ಇಷ್ಟೇ ಕಾರ್ಯವನ್ನು ಮಾಡುತ್ತಿದೆ. ಈ ಶಿಕ್ಷಣ ಸಂಸ್ಥೆಗಳಿಗೆ ಸಂಶೋಧಕರು, ವಿಜ್ಞಾನಿಗಳು, ಇತಿಹಾಸಜ್ಞರು, ನಿಸ್ವಾರ್ಥಿ ಸಮಾಜ ಸೇವಕರು, ಧ್ಯೇಯನಿಷ್ಠ ವ್ಯಕ್ತಿ, ಸನಾತನ ಧರ್ಮ ಮತ್ತು ಸಂಸ್ಕೃತಿ ರಕ್ಷಕರಂತಹ ಜ್ವಲಂತ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದರ ಬಗ್ಗೆ ವಿಚಾರಗಳೇ ಬರುವುದಿಲ್ಲ; ಹೀಗೆ ಶಿಕ್ಷಣದ ಭಯಾನಕ ಸ್ಥಿತಿಯಿದೆ.
– ಗುರುದೇವ ಡಾ. ಕಾಟೇಸ್ವಾಮೀಜಿ (‘ಘನಗರ್ಜಿತ’, ಆಗಸ್ಟ್ ೨೦೧೧)

Leave a Comment