ಡಾಂಭಿಕ ಅಥವಾ ಅಧಿಕಾರವಿಲ್ಲದ ಗುರುಗಳು

ಲಕ್ಷಣಗಳು

ಸಮಾಜದಲ್ಲಿನ ಶೇ. ೯೮ ರಷ್ಟು ಗುರುಗಳು ನಿಜವಾದ ಗುರುಗಳಾಗಿರದೇ ಡಾಂಭಿಕ ಅಥವಾ ಅಧಿಕಾರವಿಲ್ಲದ ಗುರುಗಳಾಗಿರುತ್ತಾರೆ. ಅವರ ಕೆಲವು ಲಕ್ಷಣಗಳು ಮುಂದಿನಂತಿವೆ.

ಅ. ಇತರರಲ್ಲಿ ಕೀಳು ಭಾವನೆಯನ್ನು ನಿರ್ಮಾಣ ಮಾಡಿ ತಮ್ಮ ದೊಡ್ಡಸ್ತಿಕೆಯನ್ನು ತೋರಿಸುವ ಗುರುಗಳು

ಓರ್ವ ಸಂತರು, ಅವರೆಡೆಗೆ ದರ್ಶನಕ್ಕೆಂದು ಬರುವ ಪ್ರತಿಯೊಬ್ಬರಿಗೂ ಅವರ ಹೆಸರು ಮತ್ತು ವಯಸ್ಸನ್ನು ಕೇಳುತ್ತಾರೆ. ಅವರು ಅವುಗಳನ್ನು ಹೇಳಿದಾಗ, ‘ಎರಡೂ ಉತ್ತರಗಳು ತಪ್ಪಾಗಿವೆ. ಹೆಸರು ಮತ್ತು ವಯಸ್ಸು ಶರೀರಕ್ಕೆ ಇರುತ್ತದೆ; ನೀನು ಆತ್ಮನಾಗಿರುವಿ. ಅದಕ್ಕೆ ಹೆಸರು ಮತ್ತು ವಯಸ್ಸು ಎರಡೂ ಇರುವುದಿಲ್ಲ’ ಎಂದು ಹೇಳುತ್ತಾರೆ. ನಂತರ ಅಧ್ಯಾತ್ಮವನ್ನು ಕುರಿತು ಮಾತನಾಡುತ್ತಾರೆ ಮತ್ತು ‘ಸಾಧನೆ ಮಾಡುತ್ತಿದ್ದೀರೇನು ?’ ಎಂದು ಕೇಳುತ್ತಾರೆ. ‘ಹೌದು’ ಎಂದು ಯಾರಾದರು ಹೇಳಿದರೆ, ‘ಯಾವುದು ?’ ಎಂದು ಕೇಳುತ್ತಾರೆ. ಆ ವ್ಯಕ್ತಿಯು ‘ಗುರುಗಳು ಹೇಳಿದ ಸಾಧನೆ’ ಎಂದು ಉತ್ತರಿಸಿದರೆ ಅವರು ಅವನಿಗೆ, ‘ನಿಮಗೆ ಹೆಸರು ಮತ್ತು ವಯಸ್ಸಿನಂತಹ ಸರಳ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗಲಿಲ್ಲ; ಹಾಗಾದರೆ, ನಿಮ್ಮ ಗುರುಗಳು ನಿಮಗೆ ಏನು ಕಲಿಸಿದ್ದಾರೆ ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಿಜವಾದ ಗುರುಗಳು ಮಾತ್ರ ಹೇಳಬಹುದು. ನೀವು ನನ್ನ ಬಳಿ ಬನ್ನಿ. ನಾನು ಹೇಳುತ್ತೇನೆ’ ಎಂದು ಹೇಳುತ್ತಾರೆ. ಇಂತಹ ನಕಲಿ ಗುರುಗಳಿಗೆ, ‘ನಿಜ ಹೇಳಬೇಕೆಂದರೆ ನಿಮ್ಮ ಪ್ರಶ್ನೆಗಳಿಗೆ ಅರ್ಥವೇ ಇರಲಿಲ್ಲ ! ನೀವು ದೇಹಬುದ್ಧಿಯಿಂದಾಗಿ ಹೆಸರು ಮತ್ತು ವಯಸ್ಸು ಕೇಳಿದಿರಿ, ಆದುದರಿಂದ ನಾನೂ ದೇಹಬುದ್ಧಿಯಿಂದಲೇ ಉತ್ತರಗಳನ್ನು ಕೊಟ್ಟೆ’ ಎಂದು ಹೇಳಬೇಕು. ಯಾರಿಗಾದರೂ ಗುರುಗಳು ಇದ್ದಾರೆಯೋ ಅಥವಾ ಇಲ್ಲವೋ, ಅವನ ಸಾಧನೆಯು ಯೋಗ್ಯ ರೀತಿಯಲ್ಲಿ ನಡೆಯುತ್ತಿದೆಯೋ ಅಥವಾ ಇಲ್ಲವೋ ಎಂಬುದು ಆ ವ್ಯಕ್ತಿಯನ್ನು ನೋಡಿದ ಕೂಡಲೇ ಯಾರಿಗೆ ತಿಳಿಯುವುದಿಲ್ಲವೋ ಅವರೆಂತಹ ಗುರುಗಳು ?

ಆ. ಕನಕಕಾಂತೆಗಳಿಗೆ ಅಧೀನರಾಗಿರುವವರು

ಯಾರಾದರೊಬ್ಬ ಮನುಷ್ಯನು ಅದ್ವೈತವೇದಾಂತಗಳ ಬಗ್ಗೆ ಆಶ್ಚರ್ಯವೆನಿಸುವಂತೆ ಭಾಷಣ ಬಿಗಿಯುತ್ತಾನೆ; ಆದರೆ ಅವನ ಮನಸ್ಸು (ಚಿನ್ನ, ಸ್ತ್ರೀಯರಂತಹ) ಇಂದ್ರಿಯ ಸುಖಗಳಿಗೆ ಆಸೆಪಡುತ್ತಿರುತ್ತದೆ. ಇಂತಹ ಮನುಷ್ಯನನ್ನು ಗುರು ಮಾಡಿಕೊಳ್ಳುವುದರಿಂದ ನಮ್ಮ ಜೀವನ ಸಾರ್ಥಕವಾಗಲಾರದು. – ಶ್ರೀ ದಾಸಬೋಧ, ದಶಕ ೫, ಸಮಾಸ ೨, ದ್ವಿಪದಿ ೩೧

ಇ. ಡಂಭಾಚಾರಿ ಗುರುಗಳು

ಓರ್ವ ಗುರುಗಳು ಸ್ವತಃ ಗಡಿಯಾರವನ್ನು ಉಪಯೋಗಿಸುವುದಿಲ್ಲ, ಕಾರಣವೇನೆಂದು ಕೇಳಿದರೆ, ‘ಕಾಲದ, ಗಡಿಯಾರದ ಪಟ್ಟಿಯ ಬಂಧನ ಬೇಡ’ ಎಂದು ಹೇಳುತ್ತಾರೆ; ಆದರೆ ಪ್ರತೀ ೧೫-೨೦ ನಿಮಿಷಗಳಿಗೊಮ್ಮೆ ಇತರರಿಗೆ ‘ಗಂಟೆ ಎಷ್ಟಾಯಿತು ? (!)’ ಎಂದು ಕೇಳುತ್ತಾರೆ.

ಈ. ಜನಪ್ರಿಯತೆಯ ಆಸಕ್ತಿ ಇರುವವರು

ಗುರುಪದವಿಯ ಆಸಕ್ತಿ ಇದ್ದು ಸ್ವಲ್ಪ ಪ್ರಗತಿ ಹೊಂದಿರುವ ಕೆಲವರು ‘ಇವನಿಗೆ ಈ ಸಾಧನೆ ಹೇಳುವುದು, ಅವನಿಗೆ ಆ ಸಾಧನೆ ಹೇಳುವುದು’ ಹೀಗೆ ಮಾಡುತ್ತಾರೆ. ಇದರಿಂದ ಅವರು ಹೇಳಿರುವ ಸಾಧನೆಯನ್ನು ಮಾಡುವವರೇನೋ ಪ್ರಗತಿ ಹೊಂದುತ್ತಾರೆ; ಆದರೆ ಅವರು ಸ್ವತಃ ಇದ್ದಲ್ಲಿಯೇ ಇರುತ್ತಾರೆ !

ಉ. ಶಿಷ್ಯರಿಗೆ ಎಲ್ಲ ಜ್ಞಾನವನ್ನು ಕೊಟ್ಟರೆ ತಮಗೆ ಮಹತ್ವ ಉಳಿಯುವುದಿಲ್ಲ, ಎನ್ನುವ ಭಯದಿಂದ ಕೆಲ ಗುರುಗಳು ಶಿಷ್ಯರಿಗೆ ಸಂಪೂರ್ಣ ಜ್ಞಾನವನ್ನು ಕೊಡುವುದಿಲ್ಲ.

ಡಾಂಭಿಕ ಗುರುಗಳಿಗಿರುವ ಅಪಾಯ

ಡಾಂಭಿಕ ಗುರುಗಳಿಗೆ ಕುಷ್ಠರೋಗ (ಮಹಾರೋಗ) ಬರುತ್ತದೆ ಮತ್ತು ಹಿಂದಿನ ಜನ್ಮದಲ್ಲಿನ ಶಿಷ್ಯರು ಹುಳಗಳಾಗಿ ಆ ಗುರುಗಳನ್ನು ತಿನ್ನುತ್ತಾರೆ. (ಆಧಾರ ಗೊತ್ತಿಲ್ಲ)

ಡಾಂಭಿಕ ಗುರುಗಳ ಬಗ್ಗೆ ಏನು ಮಾಡಬೇಕು ?

ಯಾವನು ತನ್ನ ಶಿಷ್ಯನಿಗೆ ‘ಸಾಧನೆಯಲ್ಲಿ ಹೇಗಿರಬೇಕು’, ಎಂಬುದನ್ನು ಕಲಿಸುವುದಿಲ್ಲವೋ, ‘ಇಂದ್ರಿಯಗಳನ್ನು ನಿಯಂತ್ರಿಸಿ ಹತೋಟಿಯಲ್ಲಿ ಹೇಗಿಡಬೇಕು’, ಎಂಬುದನ್ನು ಕಲಿಸುವುದಿಲ್ಲವೋ, ಇಂತಹ ಗುರುಗಳು ನಯಾಪೈಸೆಗೆ ಮೂರು, ಇಷ್ಟು ಅಗ್ಗ ಸಿಕ್ಕಿದರೂ, ಅವರ ಸಹವಾಸಕ್ಕೆ ಹೋಗಬಾರದು. ಅವರಿಂದ ದೂರವಿರಬೇಕು.
– ಶ್ರೀ ದಾಸಬೋಧ, ದಶಕ ೫, ಸಮಾಸ ೨, ದ್ವಿಪದಿ ೨೧

೪. ಡಾಂಭಿಕ ಗುರುಗಳ ಬಗ್ಗೆ ಸಂತರು ಏನು ಮಾಡಬೇಕು ?

ಪ್ರಶ್ನೆ : ಡಾಂಭಿಕ ಗುರುಗಳು ಗುರುತನವನ್ನು ದುರುಪಯೋಗಗೊಳಿಸಿ ಶಿಷ್ಯರಿಗೆ ತೊಂದರೆ ಕೊಡಲಾರಂಭಿಸಿದರೆ ಏನು ಮಾಡಬೇಕು ? ಶಿಷ್ಯರು ಅವರ ವಿರುದ್ಧ ಹೋಗಲು ಪ್ರಯತ್ನಿಸಿದರೆ ಅವರಿಗೆ ಅಮಂಗಳವಾಗುವುದು ಎನ್ನುವ ಅಭಿಪ್ರಾಯವಾಗಿದೆ.

ಶ್ರೀ ಗುಲಾಬರಾವ್ ಮಹಾರಾಜರು : ಶಿಷ್ಯರು ಪೀಡಿತರಾಗಿದ್ದರೆ ಮತ್ತು ಅವರ ಸಿದ್ಧಾಂತದ ಅಭಿಮಾನಿಗಳಲ್ಲದಿದ್ದರೆ, ಆಗ ಐದನೆಯ ಭೂಮಿಕೆಯ (ಜ್ಞಾನಯೋಗಕ್ಕನುಸಾರವಾಗಿ ೧ ರಿಂದ ೩ ಇವು ಸಾಧನಭೂಮಿಕೆಗಳಾಗಿವೆ ಮತ್ತು ೪ ರಿಂದ ೭ ಇವು ಫಲಭೂಮಿಕೆಗಳಾಗಿವೆ.) ಕೆಳಗಿರುವ ಸಾಧುವು ಅಲ್ಲಿ ಹೋಗಿ ಅವನ ಢಾಂಭಿಕತನವನ್ನು ಬಯಲು ಮಾಡಬೇಕು ಮತ್ತು ಅವನ ಶಿಷ್ಯರನ್ನು ಬೆದರಿಸಿ, ಮೊದಲು ಅವನಿಗೆ (ಡಾಂಭಿಕ ಗುರುವಿಗೆ) ಕಲಿಸಿ, ನಂತರ ಅವನಿಂದಲೇ ಶಿಷ್ಯರಿಗೆ ಸನ್ಮಾರ್ಗವನ್ನು ತೋರಿಸಬೇಕು.

ಯಾರಾದರೊಬ್ಬ ಶಿಷ್ಯನು ಕೇವಲ ಭಾವದಿಂದಲೇ ಬ್ರಹ್ಮಜ್ಞಾನಿಯಾಗಿದ್ದರೆ, ಅವನೆದುರು ಮಾತ್ರ ಯಾರದೂ ಏನೂ ನಡೆಯಲಾರದು.

ಒಂದು ವೇಳೆ ಶಿಷ್ಯರೂ ಆ ಢೋಂಗಿ ಸಿದ್ಧಾಂತದ ಅಭಿಮಾನಿಗಳಾಗಿದ್ದು ದುರಾಚಾರಿಗಳಾಗಿದ್ದರೆ, ಎಲ್ಲರ ಗ್ರಹಚಾರ ಕೆಟ್ಟಿದೆ ಎಂದು ತಿಳಿದುಕೊಂಡು ಮಹಾತ್ಮನು ಅಲ್ಲಿಗೆ ಹೋಗಬಾರದು.

(ಆಧಾರ : ಸನಾತನ ನಿರ್ಮಿತ ‘ಗುರುಗಳ ವಿಧಗಳು ಮತ್ತು ಗುರುಮಂತ್ರ’ ಗ್ರಂಥ)

2 thoughts on “ಡಾಂಭಿಕ ಅಥವಾ ಅಧಿಕಾರವಿಲ್ಲದ ಗುರುಗಳು”

  1. Hi I have intrested joint to your trust
    My age 46 my parents passed away
    My he go to passed her father house
    He was not returning I have already
    Guru I want place for sadhana morning to evening give to any work
    Your ashram evening 8PM to morning 8AM I want time for sadhana

    Reply

Leave a Comment