ಗುರುಗಳ ಆಜ್ಞೆಯನ್ನು ಚಾಚೂತಪ್ಪದೇ ಪಾಲಿಸುವ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರು!

ಗುರುಗಳು ಗಿಡದ ಎಲೆಗಳನ್ನು ಕೀಳಲು, ಪುನಃ ಗಿಡಕ್ಕೆ ಅಂಟಿಸಲು ಹೇಳುವುದು !

ತುಕಾಯಿ (ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಗುರುಗಳು) ಒಮ್ಮೆ ಹೊಲದಲ್ಲಿ ಅರಳಿ ಮರದ ಕೆಳಗೆ ಕುಳಿತಿದ್ದರು. ಗಣೂ (ಚಿಕ್ಕವರಿರುವಾಗ) (ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರು) ಹಿಂದೆ ನಿಂತಿದ್ದನು. ತುಕಾಯಿಯವರು “ಅರೆ, ಈ ಮರದ ಎಲೆಗಳನ್ನು ಕೀಳು ನೋಡೋಣ” ಎಂದರು. ಆಗ ಗಣೂ ಮರದ ಮೇಲೆ ಹತ್ತಿ ಅದರ ಎಲೆಗಳನ್ನು ಕೀಳತೊಡಗಿದನು. ಕೆಲವು ಎಲೆಗಳು ತುಕಾಯಿಯವರ ಬಳಿ ಬಿದ್ದವು. ತುಕಾಯಿಯವರು ಕೆಲವು ಎಲೆಗಳನ್ನು ಕೈಯಲ್ಲಿ ತೆಗೆದುಕೊಂಡು ನೋಡಿದರು. ಆ ಎಲೆಗಳಿಂದ ಹಾಲು ಒಸರುತ್ತಿತ್ತು. ಅವರು ಕೂಗಿ “ಅರೆ, ಈಗ ಸಾಕು ಸಾಕು! ಎಲೆಗಳನ್ನು ಕಿತ್ತರೆ, ಆ ಮರಕ್ಕೆ ನೋವಾಗುತ್ತದೆ. ನೋಡು ಅದರಿಂದ ಹಾಲು ಒಸರುತ್ತಿದೆ. ಕಿತ್ತ ಎಲೆಗಳನ್ನು ಎಲ್ಲಿಂದ ಕಿತ್ತಿರುವಿಯೋ ಅಲ್ಲಿಯೇ ಅಂಟಿಸು” ಎಂದರು .

ಆಜ್ಞೆಯನ್ನು ಶಿರಸಾ ವಹಿಸಿ ಗಣೂ ಕಿತ್ತಿರುವ ಎಲ್ಲ ಎಲೆಗಳನ್ನು ಒಂದೊಂದಾಗಿ ಕಿತ್ತ ಸ್ಥಳದಲ್ಲಿ ಪುನಃ ಅಂಟಿಸಲು ಪ್ರಾರಂಭಿಸಿದನು. ಸ್ವಲ್ಪ ಸಮಯದಲ್ಲಿಯೇ ಎಲ್ಲ ಎಲೆಗಳನ್ನು ಅವುಗಳ ಸ್ಥಳದಲ್ಲಿ ಅಂಟಿಸಿದನು. ಆಗ ತುಕಾಯಿಯವರು “ಶಹಬ್ಬಾಸ್! ಇದಕ್ಕೆ ಆಜ್ಞಾಪಾಲನೆಯೆನ್ನುತ್ತಾರೆ!” ಎಂದರು .

ಗುರುಗಳು ನದಿಯಲ್ಲಿ ಧುಮುಕುವ ಆಜ್ಞೆ ನೀಡುವುದು !

ಒಮ್ಮೆ ತುಕಾಯಿಯವರು ಗಣೂನಿಗೆ “ನದಿಯಲ್ಲಿ ಧುಮುಕು” ಎಂದು ಆಜ್ಞೆ ಮಾಡಿದರು. ಗಣೂ ಧುಮುಕಿದನು. ಆದರೆ ಮೇಲೆ ಬರಲು ಗುರುಗಳು ಆಜ್ಞಾಪಿಸದೇ ಇದ್ದುದರಿಂದ ಅವನು ಹಾಗೆಯೇ ತಳದಲ್ಲಿಯೇ ಬಿದ್ದಿದ್ದನು. ತುಕಾಯಿಯವರು ಕಿರುಚಾಡತೊಡಗಿದರು. ಅದರಿಂದ ಜನರು ಕೂಡಿದರು. ಅವರು ನದಿಯಲ್ಲಿ ಬಲೆಯನ್ನು ಎಸೆದರು. ಆದರೆ ಗಣೂ ಸಿಗಲಿಲ್ಲ. ಎಲ್ಲರೂ ಅಳತೊಡಗಿದರು. ಈ ರೀತಿ ಎರಡು ಮೂರು ಗಂಟೆ ನಡೆದಿತ್ತು. ಕೊನೆಯಲ್ಲಿ ತುಕಾಯಿ “ಮಗೂ, ಈಗ ನೀನು ಮೇಲೆ ಬರದಿದ್ದರೆ, ನಾನು ನದಿಯಲ್ಲಿ ಧುಮುಕಿ ಪ್ರಾಣ ಬಿಡುತ್ತೇನೆ’’ ಎಂದು ಕೂಗಿದರು. ಗುರುಗಳ ಶಬ್ದ ಕಿವಿಗೆ ಬಿದ್ದ ಕೂಡಲೇ ಗಣೂ ನೀರಿನಿಂದ ಮೇಲೆ ಬಂದನು. ತುಕಾಯಿಯವರು ಪ್ರಿಯ ಶಿಷ್ಯನನ್ನು ಎದೆಗವಚಿಕೊಂಡರು.

– (ಸದ್ಗುರು) ಡಾ. ವಸಂತ ಬಾಳಾಜಿ ಆಠವಲೆ (ವರ್ಷ 1991)

Leave a Comment