‘ಗುರುಗಳೇ ನಮ್ಮ ಚಿಂತೆಯನ್ನು ಹೊರುತ್ತಾರೆ’,  ಎಂದು ಶಿಷ್ಯನಿಗೆ ಪೂರ್ಣ ಖಾತ್ರಿ ಇರುವುದು !

ಶಿಷ್ಯನ ಹಿಂದಿನ ಜನ್ಮದ ಪುಣ್ಯದಿಂದಾಗಿ ಗುರುಗಳು ಸಾಧಕನ ಜೀವನದಲ್ಲಿ ಬರುವುದು !

ಗುರುಗಳ ಪರಿಚಯವಾಗುವುದು, ಅವರು ಸಾಧಕನ ಜೀವನದಲ್ಲಿ ಬರುವುದು, ಅವರು ಪ್ರಾರಬ್ಧಾಧೀನ ವಿಷಯಗಳಿಂದ ಹೊರಗೆ ಹೇಗೆ ಬರುವುದು, ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಲು ಹಿಂದಿನ ಜನ್ಮದ ಪುಣ್ಯ ಇರುವುದು ಆವಶ್ಯಕವಾಗಿದೆ. ಗುರುಗಳು ಸಾಧಕನ ಜೀವನದಲ್ಲಿ ಬಂದು ಅವರ ಜೀವನದ ಕಾರ್ಯಭಾರವನ್ನು ಹೊರುವುದು, ಇದು ಅತ್ಯಂತ ಭಾಗ್ಯದ ವಿಷಯವೆನ್ನಬಹುದು. ಕಲಿಯುಗದಲ್ಲಿ ಇಂತಹ ದೃಶ್ಯ ಅಪರೂಪಕ್ಕೆ ಕಂಡುಬರುತ್ತದೆ.

ಗುರುಗಳು ಎಂದಿಗೂ ಶಿಷ್ಯನನ್ನು ಪ್ರಯಾಣದ ಮಧ್ಯದಲ್ಲಿ, ಒಂಟಿಯಾಗಿ ಬಿಡುವುದಿಲ್ಲ, ಮೋಕ್ಷದವರೆಗೂ ಕರೆದುಕೊಂಡು ಹೋಗುತ್ತಾರೆ. ವ್ಯವಹಾರದಲ್ಲಿ ಮಾತ್ರ ಹೀಗೆ ಇರುವುದಿಲ್ಲ. ವ್ಯವಹಾರದಲ್ಲಿ ಮಾಯೆಯಲ್ಲಿನ ಅನೇಕ ಪ್ರಯಾಣಗಳು ಅಪೂರ್ಣವಾಗುತ್ತವೆ; ಏಕೆಂದರೆ ಅದರಲ್ಲಿ ಚೈತನ್ಯಮಯ ಶಕ್ತಿಯ ಅಭಾವವಿರುತ್ತದೆ. ಆಧ್ಯಾತ್ಮಿಕ ಪ್ರಯಾಣದ ಸಮಯದಲ್ಲಿ ಚೈತನ್ಯದ ಸಹಾಯ ಸಿಗುತ್ತಿರುವುದರಿಂದ ಮತ್ತು ಅದರಲ್ಲಿ ಗುರುಕೃಪೆಯಿಂದ ಅಖಂಡತೆ ಬರುವುದರಿಂದ ಆ ಪ್ರಯಾಣದಲ್ಲಿ ಯಾವುದೇ ಚಿಂತೆ ಇರುವುದಿಲ್ಲ; ಏಕೆಂದರೆ ‘ಗುರುಗಳೇ ನಮ್ಮ ಚಿಂತೆಯನ್ನು ಹೊರುತ್ತಾರೆ’, ಎಂದು ಶಿಷ್ಯನಿಗೆ ಪೂರ್ಣ ಭರವಸೆ ಇರುತ್ತದೆ.

– ಸೂಕ್ಷ್ಮ-ಜಗತ್ತಿನಲ್ಲಿನ ‘ಓರ್ವ ವಿದ್ವಾನ’ (ಸನಾತನದ ಸಾಧಕಿ ಸೌ. ಅಂಜಲಿ ಗಾಡಗೀಳ ಈ ‘ಓರ್ವ ವಿದ್ವಾನ’ ಈ ಹೆಸರಿನಿಂದಲೂ ಬರೆಯುತ್ತಾರೆ.)

Leave a Comment