ಗುರುಗಳು

ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಮೂಲಕ ಮನುಷ್ಯನಿಗೆ ಸುಖ-ದುಃಖಗಳ ಅನುಭವಗಳು ಬರುತ್ತವೆ, ಆದರೆ ಸಾಧನೆಯಿಂದ ಸುಖ-ದುಃಖಗಳ ಆಚೆಗಿನ ಚಿರಂತರ ಆನಂದದ ಅನುಭೂತಿ ಬರುತ್ತದೆ. ಈಶ್ವರಪ್ರಾಪ್ತಿಗಾಗಿ ದಿನನಿತ್ಯ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳಿಂದ ಏನೆಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆಯೋ, ಅದನ್ನು `ಸಾಧನೆ’ ಎನ್ನುತ್ತಾರೆ.

ಗುರುರ್ಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||

ಕೇವಲ ಈ ಒಂದು ಶ್ಲೋಕದಿಂದ ‘ಗುರು’ ಎಂಬ ಶಬ್ದದ ಮಹಾನತೆ ಗಮನಕ್ಕೆ ಬರುತ್ತದೆ.

೧. `ಗುರು’ ಎಂಬ ಶಬ್ದದ ಅರ್ಥ : ಯಾರು ಶಿಷ್ಯನ ಅಜ್ಞಾನವನ್ನು ದೂರ ಮಾಡಿ, ಅವನ ಆಧ್ಯಾತ್ಮಿಕ ಉನ್ನತಿ ಆಗಬೇಕೆಂದು ಅವನಿಗೆ ಸಾಧನೆ ಹೇಳಿ ಅದನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಅನುಭೂತಿ ನೀಡುತ್ತಾರೆ, ಅವರಿಗೆ ಗುರು ಎಂದು ಕರೆಯುತ್ತಾರೆ. ಶಿಷ್ಯನ ಪರಮಮಂಗಲ, ಅಂದರೆ ಮೋಕ್ಷಪ್ರಾಪ್ತಿ, ಎಂಬುದು ಅವನಿಗೆ ಕೇವಲ ಗುರುಕೃಪೆಯಿಂದಲೇ ಆಗುವುದು.

೨. ಗುರು ಉಪದೇಶ : ಗುರು-ಶಿಷ್ಯ ಪರಂಪರೆಯು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಗುರುಗಳು ಶಿಷ್ಯನು ಯಾವ ಸಾಧನೆ ಮಾಡುವ ಅವಶ್ಯಕವಿದೆ, ಎಂಬುದನ್ನು ಗುರುತಿಸುತ್ತಾರೆ. ಗುರುಗಳಿಗ ಶಿಷ್ಯನಿಗೆ ಏನು ಬೇಕು ಎಂದು ತಿಳಿದುಕೊಂಡು ಅಥವಾ ಸಾಧಕನ/ ಶಿಷ್ಯನ ಏನು ಅವಸ್ಥೆ ಇದೆ, ಅವನಿಗೆ ಆಧ್ಯಾತ್ಮಿಕ ಪ್ರಗತಿಯ ದೃಷ್ಟಿಯಿಂದ ಏನು ಅವಶ್ಯಕವಿದೆ, ಎಂಬುದನ್ನು ಗುರುತಿಸಿ ಅವನಿಗೆ ಅದನ್ನು ಕೊಡುತ್ತಿರುತ್ತಾರೆ. ಇದೇ ಗುರು ಉಪದೇಶ. ಗುರುಗಳೇ ಶಿಷ್ಯನ
 ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಳ್ಳುತ್ತಾರೆ. ಅದಕ್ಕಾಗಿ ಶಿಷ್ಯನು ಗುರುಚರಣ
ಗಳ ಹತ್ತಿರ ಇರುತ್ತಾನೆ. ಗುರುಗಳು ಸಾಧನೆ ಹೇಳಿ ಶಿಷ್ಯನಿಂದ ಅದನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಅನುಭೂತಿಯೂ ನೀಡುತ್ತಾರೆ. ಆದುದರಿಂದ ಅಲ್ಪಾವಧಿಯಲ್ಲಿ ಶಿಷ್ಯನ ಆಧ್ಯಾತ್ಮಿಕ ಪ್ರಗತಿ ಶೀಘ್ರವಾಗುತ್ತದೆ.

ಗುರುದೇವರ ಕೃಪೆಯಿಂದ ಭವಸಾಗರವನ್ನು ಪಾರಾಗಲು ಆಗುತ್ತದೆ !

ಗುರುಗಳು ಜೀವನದಲ್ಲಿ ಬಂದಾಗ, ಹಂತಹಂತವಾಗಿ ಕೃತಿ, ಕರ್ಮ, ದೃಷ್ಟಾಂತ, ಸಾಕ್ಷಾತ್ಕಾರ, ಅನುಭೂತಿಗಳಿಂದ ಕಲಿಸುವುದು, ಸ್ವಸ್ವರೂಪದ ಅನುಭೂತಿ ಕೊಡುವುದು, ಅಸ್ತಿತ್ವದಿಂದ ಕಲಿಸುವುದು ಹಾಗೂ ಆತ್ಮಜ್ಞಾನವನ್ನು ಮಾಡಿಸುವುದು, ಈ ಮಾಧ್ಯಮದಿಂದ ಜೀವದ ಪ್ರತಿಯೊಂದು ಹಂತದ ಪ್ರವಾಸವನ್ನು ತಮ್ಮ ಕೃಪೆಯ ಬಲದಿಂದ, ಅದೇ ರೀತಿ ಸಂಕಲ್ಪಶಕ್ತಿಯ ಬಲದಿಂದ ಸಹಜವಾಗಿ ಮಾಡಿಸಿಕೊಳ್ಳುತ್ತಾರೆ. ಆದ್ದರಿಂದ ಜೀವವು ಭವಸಾಗರದಿಂದ ಬೇಗನೇ ಮುಕ್ತವಾಗುತ್ತದೆ.

ಜೀವನ ಸಾರ್ಥಕ ಮಾಡಿಕೊಳ್ಳುವುದು!

ಸಂತರೊಂದಿಗಿದ್ದರೆ ಹಾಗೂ ಸಂತರ ಕೃತಿಗಳನ್ನು ಪ್ರತ್ಯಕ್ಷ ಹಾಗೂ ಆಂತರ್ಯದಿಂದ ವೀಕ್ಷಿಸಿದರೆ ಜೀವನವು ಸಾರ್ಥಕವಾಗುತ್ತದೆ. ಈ ಕೃತಿಯಲ್ಲಿನ ಚೈತನ್ಯದ ಅನುಸಂಧಾನದಿಂದ ಆ ಜೀವವು ಅಲ್ಪಾವಧಿಯಲ್ಲಿ ಮೋಕ್ಷದ ವರೆಗಿನ ಮಾರ್ಗಕ್ರಮಣ ಮಾಡುತ್ತದೆ.

ಮೋಕ್ಷಪದವಿಯನ್ನು ಕರುಣಿಸುವ ಗುರುಪದವಿಗೆ ‘ಗುರುದೇವರು’ ಎನ್ನುತ್ತಾರೆ !

ಒಮ್ಮೆ ಗುರುಗಳ ಕೈಯನ್ನು ಹಿಡಿದರೆ, ಗುರುಗಳು ಶಿಷ್ಯನಿಗೆ ಹಲವಾರು ಜನ್ಮಗಳ ತನಕ ಜೊತೆಯಾಗಿದ್ದು ಕೊನೆಯಲ್ಲಿ ಮೋಕ್ಷ ಮಾರ್ಗದ
ವರೆಗೆ ಕೊಂಡೊಯ್ಯುತ್ತಾರೆ; ಆದ್ದರಿಂದ ಮೋಕ್ಷವನ್ನು ಕರುಣಿಸುವ ಆ ಗುರುಪದವಿಗೆ ಸರ್ವೋಚ್ಚ ಪದ, ಅಂದರೆ ‘ಗುರುದೇವರು’ ಈ ಉಪಮೆ ನೀಡುತ್ತಾರೆ. – (ಪೂ.) ಸೌ. ಅಂಜಲಿ ಗಾಡಗಿಳ

ಗುರುಪೂರ್ಣಿಮೆಯನ್ನು ಏಕೆ ಆಚರಿಸಬೇಕು ?

ಆಷಾಢದಲ್ಲಿನ ಹುಣ್ಣಿಮೆಯಂದು ಗುರುಪೂಜೆಯ ಮಹತ್ವ

ಗುರುರೇವ ಜಗತ್ಸರ್ವಂ, ಬ್ರಹ್ಮಾವಿಷ್ಣುಶಿವಾತ್ಮಕಮ್ |
ಗುರೊಃ ಪರಾತರಂ ನಾಸ್ತಿ, ತಸ್ಮಾತ್ಸಂಪೂಜಯೆದ್ ಗುರುಮ್ ||

ಅರ್ಥ : ಶ್ರೀಗುರು ಅಂದರೆ ಬ್ರಹ್ಮಾ, ವಿಷ್ಣು ಮತ್ತು ಶಿವ ಸ್ವರೂಪ (ಉತ್ಪತ್ತಿ, ಸ್ಥಿತಿ ಮತ್ತು ಲಯಾತ್ಮಕ) ಸಂಪೂರ್ಣ ಜಗತ್ತು! ಗುರುಗಳಿಗಿಂತ ಶ್ರೇಷ್ಠರು ಬೇರೆ ಯಾವುದೂ ಇಲ್ಲ. ಹಾಗಾಗಿ ಗುರುಗಳ ಪೂಜೆ ಯೋಗ್ಯ ರೀತಿಯಲ್ಲಿ ಮಾಡಬೇಕು.

ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದು, ಎಂಬ ಒಂದೇ ಉದ್ದೇಶದಿಂದ ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸುವುದಿಲ್ಲ. ಆ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನ ಇದು ಎಂದಿಗಿಂತಲೂ ಸಾವಿರ ಪಟ್ಟು ಹೆಚ್ಚಿರುತ್ತದೆ. ಮಹೋತ್ಸವದ ಕಾರ್ಯದಲ್ಲಿ ಕೃತಿಶೀಲರಾಗಿ ಸಹಭಾಗಿಯಾಗುವವರಿಗೆ ಭಾಗವಹಿಸಿದ ಪ್ರಮಾಣದಲ್ಲಿ ಅದರ ಲಾಭವಾಗುತ್ತದೆ. ಆ ದಿನ ಕೇವಲ ದರ್ಶನಕ್ಕೆ ಬರುವವರಿಗೆ ಕಡಿಮೆ ಲಾಭವಾಗುತ್ತದೆ. ನಿಜವಾದ ಶಿಷ್ಯನಿಗೆ ಗುರುಗಳ ಕ್ಷಣಕ್ಷಣವೂ ಸ್ಮರಣೆಯಾಗುತ್ತದೆ. ಮೇಲುಮೇಲಿನ ಶಿಷ್ಯನಿಗೆ ಕನಿಷ್ಟಪಕ್ಷ ವರ್ಷದಲ್ಲಿ ಒಮ್ಮೆಯಾದರೂ ಗುರುಗಳ ಸ್ಮರಣೆಯಾಗಬೇಕು, ಇದಕ್ಕಾಗಿಯೂ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ !

(ಈ ವರ್ಷ ಗುರುಪೂರ್ಣಿಮೆ ಜುಲೈ ೧೬ ರಂದು ಇದೆ)

ಆಧಾರ : ಸನಾತನದ ಗ್ರಂಥ ‘ಶಿಷ್ಯ’

Leave a Comment