ಗುರುಗಳ ವೈಶಿಷ್ಟ್ಯಗಳು

ಅ. ಶಿಷ್ಯನಿಗೆ ಭಗವಂತನ ಅಸ್ತಿತ್ವದ ಮನವರಿಕೆ ಮಾಡಿಕೊಟ್ಟು ಈಶ್ವರಪ್ರಾಪ್ತಿ ಮಾಡಿಸಿಕೊಡುವುದು : ಹೇಗೆ ಅಮಾವಾಸ್ಯೆಯಂದು ಕತ್ತಲಿರುತ್ತದೋ ಅನಂತರ ಪಾಡ್ಯದಿಂದ ಸ್ವಲ್ಪಸ್ವಲ್ಪವೇ ಬೆಳೆಯುತ್ತಾ ಹುಣ್ಣಿಮೆಯಂದು ಪೂರ್ಣ ಚಂದ್ರನು ಪ್ರಕಾಶಿಸುವಂತೆ ಗುರು ಶಿಷ್ಯನನ್ನು ಅವನ ಭ್ರಮೆಯಂತಹ ಮಾಯೆಯ ಅಜ್ಞಾನಮಯ ಅಂಧಃಕಾರಸ್ಥಿತಿಯಿಂದ ಸಾಧನೆಯ ಮೂಲಕ ಮುಕ್ತಗೊಳಿಸಿ ಸತ್ಯ, ಚೈತನ್ಯಮಯ ಹಾಗೂ ಪ್ರಕಾಶಮಯವಾಗಿರುವಂತಹ ಈಶ್ವರನ ಅಸ್ತಿತ್ವವನ್ನು ಮನವರಿಕೆ ಮಾಡಿಕೊಟ್ಟು ಈಶ್ವರಪ್ರಾಪ್ತಿ ಮಾಡಿಸಿಕೊಡುತ್ತಾರೆ.

ಆ. ಭಗವಂತ ಹಾಗೂ ಶಿಷ್ಯನನ್ನು ಸೇರಿಸುವ ಕೊಂಡಿ : ಗುರು ಇವರು ಭಗವಂತನನ್ನು ಹಾಗೂ ಶಿಷ್ಯನನ್ನು, ಅಂದರೆ ಜೀವ ಹಾಗೂ ಶಿವನನ್ನು ಸೇರಿಸುವ ಒಂದು ಕೊಂಡಿಯಾಗಿದ್ದಾರೆ. ವಿದ್ಯೆ ಹಾಗೂ ಜ್ಞಾನ ಇದು ಗುರು ಶಿಷ್ಯರ ನಡುವಿನ ಮಾಧ್ಯಮವಾಗಿದೆ, ಹಾಗೂ ಮನಸ್ಸು ಇದು ಶರೀರ ಹಾಗೂ ಆತ್ಮವನ್ನು ಸೇರಿಸುವ ಮಾಧ್ಯಮವಾಗಿದೆ; ಆದ್ದರಿಂದ ಮೊದಲ ನಮಸ್ಕಾರ ಗುರುಗಳಿಗೆ ಸಲ್ಲಿಸಬೇಕು.

ಇ. ಎಲ್ಲ ಭಾವಗಳಿಂದ ಮುಕ್ತ, ಗುಣಾತೀತ ಹಾಗೂ ಎಲ್ಲಾ ಸದ್ಗುಣಗಳಿಂದ ಯುಕ್ತವಾಗಿರುವ ಗುರುತತ್ತ್ವ

ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್ ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ |
ಏಕಂ ನಿತ್ಯಂ ವಿಮಲಮಚಲಮ್ ಸರ್ವಧೀಸಾಕ್ಷಿಭೂತಮ್ ಭಾವಾತೀತಮ್ ತ್ರಿಗುಣರಹಿತಮ್ ಸದ್ಗುರುಮ್ ತಂ ನಮಾಮಿ ||

ಅರ್ಥ : ಬ್ರಹ್ಮಸ್ವರೂಪ, ಆನಂದರೂಪ, ಪರಮೋಚ್ಛ ಸುಖವನ್ನು ನೀಡುವ, ಕೇವಲ ಜ್ಞಾನಸ್ವರೂಪ, ದ್ವಂದ್ವರಹಿತ, ಆಕಾಶದಂತೆ (ನಿರಾಕಾರ), ‘ತತ್ತ್ವಮಸಿ ಎಂಬ ಮಹಾವಾಕ್ಯದ ಲಕ್ಷ್ಯ ( ‘ಅದು ನೀನಾಗಿದ್ದೀಯ, ಎಂಬ ವೇದವಾಕ್ಯವು ಯಾರನ್ನು ಉದ್ದೇಶಿಸಿ ಹೇಳಲಾಗಿದೆಯೋ ಅವರು ), ಏಕೈಕ, ನಿತ್ಯ, ಶುದ್ಧ, ಸ್ಥಿರ, ಸರ್ವಜ್ಞ, ಸರ್ವಸಾಕ್ಷಿ, ಭಾವಾತೀತ ಹಾಗೂ ಗುಣಾತೀತವಾಗಿರುವಂತಹ ಸದ್ಗುರುಗಳಿಗೆ ನಾನು ನಮಿಸುತ್ತೇನೆ.

ವಿವರಣೆ : ಬ್ರಹ್ಮಾನಂದದಲ್ಲಿ ಮಗ್ನರಾಗಿರುವ, ಆನಂದಮೂರ್ತಿ ಹಾಗೂ ಅಜ್ಞಾನಮಯವಾಗಿರುವಂತಹ ಭವಸಾಗರದಲ್ಲಿನ ಅಡಚಣೆಗಳಿಂದ ಭಯ ಉತ್ಪನ್ನವಾಗಿರುವುದರಿಂದ ಭಯವನ್ನು ದೂರ ಮಾಡಿ ಅವನಿಗೆ ಸತ್ಯದ ಮನವರಿಕೆ ಮಾಡಿಕೊಟ್ಟು ಆಶ್ವಾಸನೆ ನೀಡುವ (ನಿಶ್ಚಿಂತಗೊಳಿಸುವ), ಭಗವಂತನ ಸತ್ಯ ಸ್ವರೂಪವನ್ನು ತಿಳಿದಿರುವ, ಜ್ಞಾನಮೂರ್ತಿ, ಸುಖ-ದುಃಖದ ಮಾಯಾಸ್ವರೂಪವಾಗಿರುವ ಭ್ರಾಮಕ ಭ್ರಮೆಯಿಂದ ದೂರವಿರುವ, ಯಾವಾಗಲೂ ಆನಂದಾವಸ್ಥೆಯಲ್ಲಿರುವ, ಆಕಾಶದಂತೆ ಅಪರಿಮಿತ, ಗಂಭೀರ, ಸತರ್ಕ, ಸ್ವಚ್ಛ ‘ತತ್ತ್ವಮಸಿ ಇತ್ಯಾದಿ ಮಹಾವಾಕ್ಯಗಳ ಅನುಭವವನ್ನು ಪಡೆದುಕೊಳ್ಳುವ; ಎಲ್ಲ ಕಡೆ ಭಗವಂತನ ಅಸ್ತಿತ್ವವಿದೆ, ಎಂಬುದನ್ನು ಒಂದೊಂದು ಕ್ಷಣವೂ ಅನುಭವ ಪಡೆದುಕೊಳ್ಳುವ, ಯಾವಾಗಲು ನಿತ್ಯವಾಗಿರುವ ಒಂದೇ ತತ್ತ್ವದಿಂದ ಅಸ್ತಿತ್ವದಲ್ಲಿರುವ; ನಿರ್ಮಲ, ದೋಷರಹಿತ, ಶುಭ್ರ, ಸ್ಥಿರ, ಅಚಲ, ಎಂದಿಗೂ ಸಾಕ್ಷೀರೂಪವಾಗಿರುವ, ಎಲ್ಲಾ ಭಾವಗಳಿಂದ ಮುಕ್ತ; ಸತ್ವ, ರಜ, ತಮ, ಗುಣರಹಿತ, ಗುಣಾತೀತ ಹೀಗೆ ಎಲ್ಲ ಸದ್ಗುಣಗಳ ಯುಕ್ತವಾಗಿರುವ ಸದ್ಗುರುಗಳಿಗೆ ನಾನು ನಮಸ್ಕರಿಸುತ್ತೇನೆ.

ಈ. ಆಚರಣೆ : ಗುರು ಇವರು ಸ್ವತಃ ಸ್ವಯಂಪೂರ್ಣರು, ಆದರ್ಶರೂ ಆಗಿರುತ್ತಾರೆ. ಅವರ ಜೀವನದಲ್ಲಿನ ಪ್ರತಿಯೊಂದು ಕೃತಿಯೂ ಆದರ್ಶವಾಗಿಯೇ ಇರುತ್ತದೆ. ಅವರು ಯಾವಾಗಲೂ ಎಲ್ಲ ಜೀವಗಳ, ಪ್ರಾಣಿಮಾತ್ರರ ಕಲ್ಯಾಣಕ್ಕಾಗಿ ಕಷ್ಟವನ್ನು ಸಹಿಸಿಕೊಳ್ಳುತ್ತಿರುತ್ತಾರೆ. ಆದ್ದರಿಂದ ಸಾಧಕರು ಗುರುಗಳ ಆಜ್ಞೆಯಂತೆ, ಆಚರಣೆಯಂತೆ ನಡೆದುಕೊಳ್ಳಬೇಕು.

ಶ್ರೀಮದ್‌ಭಗವದ್ಗೀತಾ, ಅಧ್ಯಾಯ ೩, ಶ್ಲೋಕ ೨೧ ರಲ್ಲಿ ಭಗವಂತನು ನುಡಿಯುತ್ತಾನೆ, ಶ್ರೇಷ್ಠ ಮನುಷ್ಯನ ಆಚರಣೆ ಹೇಗಿರುತ್ತದೆಯೋ ಅದರಂತೆ ಇತರರೆಲ್ಲರೂ ಆಚರಿಸುತ್ತಾರೆ. ಅವನು ಯಾವುದನ್ನು ಪ್ರಮಾಣವೆಂದು ಹೇಳುವನೋ, ಅದರಂತೆ ಮನುಷ್ಯ ಸಮುದಾಯವೆಲ್ಲಾ ವರ್ತಿಸುತ್ತದೆ.

ಸಂತ ತುಕಾರಾಮ ಮಹಾರಾಜರು ನುಡಿಯುತ್ತಾರೆ

ಬೋಲೆ ತೈಸಾ ಚಾಲೆ, ತ್ಯಾಚೀ ವಂದಾವೀ ಪಾವುಲೆ |

ಸಂತರು ಹೇಗೆ ಮಾತನಾಡುತ್ತಾರೋ, ಅದೇರೀತಿ ನಡೆದುಕೊಳ್ಳುತ್ತಾರೆ; ಆದ್ದರಿಂದ ಅವರು ಮಹಾನ್ ಆಗಿದ್ದಾರೆ. ಅಂತಹವರಿಗೆ ನಮಸ್ಕಾರ ಮಾಡಿರಿ. ಇಷ್ಟೇ ಅಲ್ಲ, ಅವರ ಸಾಧನೆಯಿಂದ ಅವರಲ್ಲಿ ಎಷ್ಟು ಶಕ್ತಿಯಿರುತ್ತದೆ ಅಂದರೆ, ಅವರ ಬಲಗಾಲಿನ ಹೆಬ್ಬೆಟ್ಟಿನ ನೀರಿನ ತೀರ್ಥವನ್ನು ಸೇವಿಸಿದರೆ ಪಾಪ ಪರಿಮಾರ್ಜನೆಯಾಗುತ್ತದೆ.

– ಪ.ಪೂ. ಪರಶರಾಮ ಪಾಂಡೆ, ಸನಾತನ ಆಶ್ರಮ, ದೇವದ, ಪನವೇಲ್ (೩೦.೬.೨೦೧೬)

1 thought on “ಗುರುಗಳ ವೈಶಿಷ್ಟ್ಯಗಳು”

Leave a Comment