ಮತ್ತೊಮ್ಮೆ ‘ಆನಂದದಾಯಿ ಗುರುಕುಲರೂಪಿ ಧರ್ಮಶಿಕ್ಷಣಪದ್ಧತಿ’ಯನ್ನು ಭಾರತದಲ್ಲಿ ತರಲು ಕಟಿಬದ್ಧರಾಗೋಣ !

ಸದ್ಗುರು (ಸೌ.) ಅಂಜಲಿ ಗಾಡಗೀಳ

ಶಾಲೆ ಪ್ರಾರಂಭವಾಗಿ ಒಂದು ತಿಂಗಳೂ ಪೂರ್ಣವಾಗಿರುವುದಿಲ್ಲ, ಆಗಲೇ ಶಾಲೆಯ ವೇಳಾಪತ್ರಿಕೆಯಲ್ಲಿ ಸಿಕ್ಕಿಕೊಂಡ ಮಕ್ಕಳು ಬೇಸರಗೊಳ್ಳುತ್ತಾರೆ. ಅವರಿಗೆ ‘ಯಾವಾಗ ಒಂದು ಸಲ ಈ ಶಾಲೆ ಬಿಡುತ್ತದೆ, ಎಂದು ಅನಿಸುತ್ತಿರುತ್ತದೆ. ಪರೀಕ್ಷೆಯ ಸಮಯದಲ್ಲಂತೂ ಪಠ್ಯ ಪುಸ್ತಕಗಳಲ್ಲಿನ ಅದೇ ವಿಷಯವನ್ನೇ ಓದಿ ಓದಿ ಅವರು ತುಂಬಾ ಸುಸ್ತಾಗಿರುತ್ತಾರೆ. ಪರೀಕ್ಷೆಯ ಕಾಲದಲ್ಲಿ ‘ಪರೀಕ್ಷೆ ಮುಗಿದ ಕೂಡಲೇ, ಎಲ್ಲಿ ಯಾದರೂ ಒಳ್ಳೆಯ ಸ್ಥಳಕ್ಕೆ ಹೋಗಿ ತಿರುಗಾಡಿ ಮೋಜು ಮಾಡಿ ಬರಬೇಕು…’ ಎಂಬ ಮಾತುಗಳು ಮನೆಮನೆಗಳಲ್ಲಿ ಪಾಲಕರ ಮತ್ತು ಮಕ್ಕಳ ಬಾಯಿಯಿಂದ ಕೇಳಲು ಸಿಗುತ್ತದೆ. ಇದುವೇ ಇಂದಿನ ಪಠ್ಯಕ್ರಮದ ಮತ್ತು ವಿಜ್ಞಾನದ ದೊಡ್ಡ ಅಪಯಶವಾಗಿದೆ. ಶಾಲೆಯ ಚೀಲದ ಭಾರ ಹೆಚ್ಚಾಗಿದೆ; ಆದರೆ ಅದಕ್ಕನುಸಾರ ಜ್ಞಾನ ಹೆಚ್ಚಾಗಿಲ್ಲ. ಮಕ್ಕಳು ಶಾಲೆಗೆ ಹೋಗಿ, ಅಧ್ಯಯನ ಮಾಡಿ ಆನಂದದಿಂದ್ದರೆ ಯಾರಿಗೆ ಬೇಡಾಗಿದೆ ? ಆದರೆ ಸದ್ಯದ ಸ್ಥಿತಿಯಲ್ಲಿ ಅದು ಸಾಧ್ಯವಿದೆ ಎಂದು ಅನಿಸುವುದಿಲ್ಲ.

ಅಧ್ಯತ್ಮದಲ್ಲಿ ಮಾತ್ರ ಇದಕ್ಕೆ ವಿರುದ್ಧ ಸ್ಥಿತಿ ಇರುತ್ತದೆ. ಸ್ವಲ್ಪ ಹಿಂದಿನ ಕಾಲದಲ್ಲಿನ ಗುರುಕುಲಗಳ ದೃಶ್ಯವನ್ನು ನೆನಪಿಸಿಕೊಂಡು ನೋಡಿ.. !, ತಕ್ಷಣ ಮುಖದ ಮೇಲೆ ಆನಂದ ಪಸರಿಸುತ್ತದೆ; ಏಕೆಂದರೆ ಹಿಂದೆ ಗುರುಕುಲಗಳಲ್ಲಿ ಹಿಂದೂ ಧರ್ಮದಲ್ಲಿನ ಆಚಾರ-ವಿಚಾರಗಳಿಗೆ, ಹಿಂದೂ ಧರ್ಮದಲ್ಲಿನ ಶಾಸ್ತ್ರಶುದ್ಧ ಪ್ರಮಾಣಗಳಿಗೆ ಅತ್ಯಂತ ಮಹತ್ವವನ್ನು ನೀಡಿ ದೇವತೆಗಳ, ಋಷಿಗಳ ಕೃಪೆಯಿಂದ ಅಧ್ಯಯನ ಮತ್ತು ಅಧ್ಯಾಪನ ಮಾಡಲಾಗುತ್ತಿತ್ತು. ಆದುದರಿಂದ ಆ ವಾತಾವರಣವು ಚೈತನ್ಯದಿಂದ ತುಂಬಿರುತ್ತಿತ್ತು ಮತ್ತು ಅದರಿಂದ ಆನಂದದ ಅರಿವಾಗುತ್ತಿತ್ತು. ಈಗ ಇದೆಲ್ಲ ಕಾಲದ ಪ್ರವಾಹದಲ್ಲಿ ನಾಶವಾಗಿದೆ. ಅಧ್ಯಾತ್ಮದ ವಿಷಯದಲ್ಲಿನ ಗ್ರಂಥಗಳು, ಸಂತರ ಚರಿತ್ರೆಗಳು, ದೇವತೆಗಳ ಪೌರಾಣಿಕ ಕಥೆಗಳು, ಸಂತರು ಯಾವುದಾದರೊಂದು ವಿಷಯದ ಬಗ್ಗೆ ಮಾಡಿದ ಮಾರ್ಗದರ್ಶನಗಳನ್ನು ಎಷ್ಟು ಬಾರಿ ಓದಿದರೂ, ಮತ್ತು ಪ್ರತಿದಿನ ಅದನ್ನೇ-ಅದನ್ನೇ ಓದಿದರೂ, ಅದರಿಂದ ದೊರಕುವ ಆನಂದದಲ್ಲಿ ಹೆಚ್ಚಳವೇ ಆಗುತ್ತದೆ, ಹೊರತು ಬೇಸರವಾಗುವುದಿಲ್ಲ. ಏಕೆಂದರೆ ಈ ರೀತಿಯ ಗ್ರಂಥಗಳನ್ನು ಓದುವುದರಿಂದ ನಮಗೆ ಚೈತನ್ಯ ದೊರಕಿ ಬುದ್ಧಿ ಶುದ್ಧವಾಗುತ್ತಾ ಹೋಗುತ್ತದೆ ಮತ್ತು ಅದರಿಂದ ಆನಂದ ದೊರಕುತ್ತದೆ. ಆದುದರಿಂದ ಸಂತರ ಚರಿತ್ರೆಗಳನ್ನು ಪ್ರತಿದಿನ ಓದಿದರೂ ನಮಗೆ ಅದರಲ್ಲಿನ ಹೊಸ ಅರ್ಥ ಅರಿವಾಗುತ್ತದೆ. ಇದರ ಕಾರಣವೇನೆಂದರೆ ಪ್ರತಿದಿನದ ವಾಚನದಿಂದ ನಮ್ಮ ‘ಸ್ಥೂಲದೇಹ, ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹ’ಗಳು ಶುದ್ಧವಾಗುತ್ತಾ ಹೋಗುತ್ತವೆ. ಇದರಿಂದ ಆಯಾ ದೇಹದ ಸ್ತರದಲ್ಲಿ ಅಂದರೆ, ಮನಸ್ಸಿನಿಂದ ಮತ್ತು ಬುದ್ಧಿಯಿಂದ ವಿಚಾರಮಾಡಿದಾಗ ಸಂತರ ಚರಿತ್ರೆಗಳಲ್ಲಿನ ಭಾವಾರ್ಥ ಬೇರೆ ಅರಿವಾಗುತ್ತದೆ, ಆದುದರಿಂದ ಪ್ರತಿದಿನ ಬೇರೆ ಆನಂದ ಸಿಗುತ್ತದೆ.

ವಿಜ್ಞಾನವು ಚೈತನ್ಯರಹಿತವಾಗಿರುವುದರಿಂದ ಅದು ವಿದ್ಯಾರ್ಥಿಗಳಿಗೆ ಹತಾಶವಾಗುವುದನ್ನು ಕಲಿಸುತ್ತದೆ. ಹತಾಶತನವು ಬೇಸರ ತರುವಂತಹದ್ದಾಗಿರುವುದರಿಂದ ಇಂತಹ ಅಭ್ಯಾಸದಿಂದ ವಿದ್ಯಾರ್ಥಿಗಳಿಗೆ ಒತ್ತಡಬರುತ್ತದೆ; ಆದರೆ ಅಧ್ಯಾತ್ಮ ಮಾತ್ರ ನಿತ್ಯನೂತನ ಮತ್ತು ಚೈತನ್ಯಮಯ ವಾಗಿರುವುದರಿಂದ ಅದು ಭಕ್ತರಿಗೆ, ಭಾವಿಕರಿಗೆ, ವಿದ್ಯಾರ್ಥಿಗಳಿಗೆ ಪ್ರತಿದಿನ ಬೇರೆ ಬೇರೆ ಪದ್ಧತಿಯ ಆನಂದವನ್ನು ನೀಡುತ್ತದೆ, ಹೇಗೆ ನಾವು ಆಳವಾಗಿ ಓದುತ್ತಾ ಹೋಗುತ್ತೇವೆಯೋ, ಹಾಗೆ ಆನಂದವು ದ್ವಿಗುಣಿತವಾಗುವುದರಿಂದ ನಮಗೆ ಸಮಾಧಾನ ಸಿಗುತ್ತದೆ, ಆದುದರಿಂದಲೇ ‘ಸಂತ-ಚರಿತ್ರೆಗಳನ್ನು ಓದುವಾಗ ಅದರಿಂದ ತುಂಬಾ ಬೇಸರವಾಯಿತು, ಇದು ಯಾವಾಗ ಓದಿ ಮುಗಿಯುತ್ತದೆ’, ಎಂದು ಹೇಳಿರುವುದು ಯಾರಿಂದಲೂ ಯಾವಾಗಲೂ ಕೇಳಿಯೇ ಇಲ್ಲ, ಇದರ ಕಾರಣವೇನೆಂದರೆ ಸಂತರ ಚರಿತ್ರೆಗಳಲ್ಲಿನ ಚೈತನ್ಯ ಮತ್ತು ಅವುಗಳಲ್ಲಿನ ಸಂತರ ಅನುಭೂತಿಗಳು ! ಹಾಗಾದರೆ, ನಡೆಯಿರಿ ಮತ್ತೊಮ್ಮೆ ‘ಆನಂದದಾಯಿ ಗುರುಕುಲರೂಪಿ ಧರ್ಮಶಿಕ್ಷಣಪದ್ಧತಿ’ಯನ್ನು ಭಾರತದಲ್ಲಿ ತರಲು ಕಟಿಬದ್ಧರಾಗೋಣ ಮತ್ತು ಮುಂದಿನ ಪೀಳಿಗೆಗಳಿಗಾದರೂ ಚೈತನ್ಯದ ಮತ್ತು ಅದರಿಂದ ದೊರಕುವ ದೇವರ ಕೃಪೆಯ ಆನಂದವನ್ನು ನೀಡಲು ಸಜ್ಜಾಗೋಣ !

ಪರಾತ್ಪರ ಗುರು ಡಾ. ಆಠವಲೆಯವರು ಇಂತಹ ಒಂದು ಅಧ್ಯಾತ್ಮ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಮಾಡುವ ಸಂಕಲ್ಪವನ್ನು ಮಾಡಿದ್ದಾರೆ.

– (ಸದ್ಗುರು) ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೬.೪.೨೦೧೨)

Leave a Comment