ಮಕರ ಸಂಕ್ರಾಂತಿ (Makar Sankranti 2023)

ಮಕರ ಸಂಕ್ರಾಂತಿಯ ಮಹತ್ವ

‘ಮಕರ ಸಂಕ್ರಾಂತಿ’ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಇದರೊಂದಿಗೆ ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನನ್ನು ವಧಿಸಿದ್ದಳು ಎಂಬ ಕಥೆಯೂ ಇದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. 2023 ರಲ್ಲಿ ಮಕರ ಸಂಕ್ರಾಂತಿಯು 15 ಜನವರಿ 2023, ರವಿವಾರದಂದು ಆಚರಿಸಲಾಗುವುದು. ಸಂಕ್ರಾಂತಿಯಂದು ಒಬ್ಬರಿಗೊಬ್ಬರು ಎಳ್ಳು-ಬೆಲ್ಲ (ಎಳ್ಳು ಬೆಲ್ಲದ ಜೊತೆ ಕಬ್ಬು, ಕೊಬ್ಬರಿ, ಕಡಲೆಬೀಜ, ಹುರಿಗಡಲೆ ಕೂಡ) ಹಂಚುತ್ತಾರೆ. ಇದು ಪ್ರೀತಿ ಮತ್ತು ಸೌಹಾರ್ದತೆ ಹೆಚ್ಚಿಸುವ ಹಬ್ಬವಾಗಿದೆ.

ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಾಧನೆಯ ದೃಷ್ಟಿಯಿಂದ ಮಕರ ಸಂಕ್ರಾಂತಿಯ ಮಹತ್ವ

ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.

ಮಕರ ಸಂಕ್ರಾಂತಿಯ ಪುಣ್ಯಕಾಲದಲ್ಲಿ ಇವನ್ನು ಮಾಡಿ !

ದಾನ ಮಾಡುವಂತಹ ವಸ್ತುಗಳು : ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’


ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು ? : ಇತ್ತೀಚೆಗೆ ಸಾಬೂನು ಇಡುವ ಡಬ್ಬಿ, ಸ್ಟೀಲ್ ಪಾತ್ರೆ, ಪ್ಲಾಸ್ಟಿಕ್‌ನ ವಸ್ತುಗಳಂತಹ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಸಾಧನೆಗೆ ಪೂರಕ ಹಾಗೂ ಮಾರ್ಗದರ್ಶಕವಾಗಿರುವ ವಸ್ತುಗಳನ್ನು ಕೊಡಬೇಕು.


ಅಸಾತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವುದರಿಂದ ಆಗುವ ಪರಿಣಾಮಗಳ ಚಿತ್ರ

ಅಸಾತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವುದರಿಂದ ಆಗುವ ಪರಿಣಾಮಗಳ ಚಿತ್ರ

ಅಸಾತ್ತ್ವಿಕ ವಸ್ತುಗಳಲ್ಲಿ ಮಾಯಾವಿ ಸ್ಪಂದನಗಳ ಪ್ರಮಾಣವು ಹೆಚ್ಚಿರುವುದರಿಂದ ಜೀವದಲ್ಲಿನ ಆಸಕ್ತಿಯು ಹೆಚ್ಚುತ್ತದೆ. ಅಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ಕೊಡುವಾಗ ಅಪೇಕ್ಷೆ, ಆಸಕ್ತಿಗಳ ಪ್ರಮಾಣವು ಹೆಚ್ಚಿರುವುದರಿಂದ ಕೊಡುಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುತ್ತದೆ. ಅದು ಹೇಗೆಂದು ನೋಡೋಣ…


ಸಾತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವುದರಿಂದ ಆಗುವ ಪರಿಣಾಮಗಳ ಚಿತ್ರ

ಸಾತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವುದರಿಂದ ಆಗುವ ಪರಿಣಾಮಗಳ ಚಿತ್ರ

ಸಾತ್ತ್ವಿಕ ವಸ್ತುಗಳಿಂದಾಗಿ ಜೀವದಲ್ಲಿನ ಜ್ಞಾನಶಕ್ತಿ (ಪ್ರಜ್ಞಾಶಕ್ತಿ) ಮತ್ತು ಭಕ್ತಿಯು ಜಾಗೃತವಾಗುತ್ತದೆ. ಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವಾಗ ಉದ್ದೇಶವು ಶುದ್ಧ ಮತ್ತು ಪ್ರೇಮಭಾವವು ಅಧಿಕವಾಗಿರುವುದರಿಂದ ನಿರಪೇಕ್ಷತೆಯು ಬರುತ್ತದೆ. ಇದರಿಂದ ಕೊಡು – ಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುವುದಿಲ್ಲ. ಅದು ಹೇಗೆಂದು ನೋಡೋಣ…


ಸನಾತನದ ಗ್ರಂಥಗಳು ಹಾಗೂ ಸಾತ್ತ್ವಿಕ ಉತ್ಪಾದನೆಗಳಿಗೋಸ್ಕರ ಭೇಟಿ ನೀಡಿ !

ಮಕರ ಸಂಕ್ರಾಂತಿಗೆ ಉಡುಗೊರೆಯಾಗಿ ಸನಾತನದ ಗ್ರಂಥಗಳು ಹಾಗೂ ಸಾತ್ತ್ವಿಕ ಉತ್ಪಾದನೆಗಳಿಗೋಸ್ಕರ ಭೇಟಿ ನೀಡಿ !
ಸನಾತನದ ಗ್ರಂಥಗಳು ಹಾಗೂ ಸಾತ್ತ್ವಿಕ ಉತ್ಪಾದನೆಗಳಿಗೋಸ್ಕರ ಭೇಟಿ ನೀಡಿ ! ಮೊಬೈಲ್





ಅರಿಶಿಣ ಕುಂಕು ಕಾರ್ಯಕ್ರಮದ ಪಂಚೋಪಚಾರ

ಅರಶಿನ ಕುಂಕುಮ ಹಚ್ಚುವುದು

ಅರಶಿನ ಕುಂಕುಮ ಹಚ್ಚುವುದರಿಂದ ಮುತ್ತೈದೆಯಲ್ಲಿರುವ ಶ್ರೀದುರ್ಗಾದೇವಿಯ ಸುಪ್ತ ತತ್ತ್ವವು ಜಾಗೃತವಾಗಿ ಮುತ್ತೈದೆಯ ಕಲ್ಯಾಣವು ಆಗುತ್ತದೆ.

ಅತ್ತರು ಹಚ್ಚುವುದು

ಅತ್ತರಿನಿಂದ ಪ್ರಕ್ಷೇಪಿತವಾಗುವ ಗಂಧಕಣಗಳಿಂದ ದೇವತೆಯ ತತ್ತ್ವವು ಪ್ರಸನ್ನವಾಗಿ ಆ ಮುತ್ತೈದೆಗಾಗಿ ಕಡಿಮೆ ಕಾಲಾವಧಿಯಲ್ಲಿ ಕಾರ್ಯ ಮಾಡುತ್ತದೆ. (ಆ ಮುತ್ತೈದೆಯ ಕಲ್ಯಾಣವಾಗುತ್ತದೆ)

ಪನ್ನೀರನ್ನು ಸಿಂಪಡಿಸುವುದು

ಪನ್ನೀರಿನಿಂದ (ಗುಲಾಬ್ ಜಲ) ಪ್ರಕ್ಷೇಪಿಸುವ ಸುಗಂಧಿತ ಲಹರಿಗಳಿಂದ ದೇವತೆಯ ಲಹರಿಗಳು ಕಾರ್ಯನಿರತವಾಗಿ ವಾತಾವರಣವು ಶುದ್ಧವಾಗುತ್ತದೆ ಮತ್ತು ಉಪಚಾರ ಮಾಡುವ ಮುತ್ತೈದೆಗೆ ಕಾರ್ಯನಿರತ ದೇವತೆಯ ಸಗುಣ ತತ್ತ್ವದಿಂದ ಹೆಚ್ಚು ಲಾಭ ಸಿಗುತ್ತದೆ.

ಉಡಿ ತುಂಬಿಸುವುದು

ಉಡಿ ತುಂಬಿಸುವುದು ಅಂದರೆ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಶ್ರೀ ದುರ್ಗಾದೇವಿಯ ಇಚ್ಛಾಶಕ್ತಿಯನ್ನು ಆಹ್ವಾನಿಸುವುದು. ಉಡಿ ತುಂಬಿಸುವ ಪ್ರಕ್ರಿಯೆಯಿಂದ ಬ್ರಹ್ಮಾಂಡದಲ್ಲಿರುವ ಶ್ರೀ ದುರ್ಗಾದೇವಿಯ ಇಚ್ಛಾಶಕ್ತಿಯು ಕಾರ್ಯನಿರತವಾಗುವುದರಿಂದ ಶ್ರದ್ಧೆಯಿಂದ ಉಡಿ ತುಂಬಿಸುವ ಜೀವದ ಅಪೇಕ್ಷಿತ ಇಚ್ಛೆಯು ಪೂರ್ಣವಾಗುತ್ತದೆ.

ಬಾಗಿನ ನೀಡುವುದು

ಬಾಗಿನ ನೀಡುವಾಗ ಯಾವಾಗಲೂ ಸೆರಗಿನ ತುದಿಯನ್ನು ಬಾಗಿನಕ್ಕೆ ಆಧಾರ ನೀಡಿ ನಂತರ ಅದನ್ನು ಕೊಡಲಾಗುತ್ತದೆ. ಬಾಗಿನ ನೀಡುವುದು ಅಂದರೆ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದ ತ್ಯಾಗದೊಂದಿಗೆ ಶರಣಾಗುವುದು. ಸೆರಗಿನ ತುದಿಯ ಆಧಾರ ನೀಡುವುದು ಅಂದರೆ ಶರೀರದ ಮೇಲಿರುವ ವಸ್ತ್ರದ ಆಸಕ್ತಿಯನ್ನು ಸಹ ತ್ಯಾಗ ಮಾಡಿ ದೇಹಬುದ್ಧಿಯನ್ನು ತ್ಯಾಗ ಮಾಡಲು ಕಲಿಯುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಗಳು ಬೇಗನೇ ಪ್ರಸನ್ನರಾಗಿ ಬಾಗಿನ ನೀಡುವ ಮುತ್ತೈದೆಗೆ ಇಚ್ಛಿತ ಫಲಪ್ರಾಪ್ತಿಯಾಗುತ್ತದ

ಕಿಂಕ್ರಾಂತ

ಸಂಕ್ರಾಂತಿಯ ಮರುದಿನವನ್ನು ಕಿಂಕ್ರಾಂತ ಅಥವಾ ಕರಿದಿನ ಎನ್ನಲಾಗುತ್ತದೆ. ಈ ದಿನ ದೇವಿಯು ಕಿಂಕರಾಸುರನೆಂಬ ಅಸುರನನ್ನು ವಧಿಸಿದ್ದಳು.

ಮಕರ ಸಂಕ್ರಾಂತಿಯ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿದೆ !

ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯವರೆಗಿನ ಕಾಲವನ್ನು ‘ದಕ್ಷಿಣಾಯಣ’ ಎನ್ನುತ್ತಾರೆ. ಸೂರ್ಯನ ದಕ್ಷಿಣಾಯಣ ಆರಂಭವಾಗುವುದಕ್ಕೆ ಬ್ರಹ್ಮಾಂಡದ ಸೂರ್ಯನಾಡಿ ಕಾರ್ಯನಿರತವಾಗುವುದು ಎಂದು ಹೇಳುತ್ತಾರೆ. ಬ್ರಹ್ಮಾಂಡದ ಸೂರ್ಯನಾಡಿಯು ಕಾರ್ಯನಿರತವಾಗುವುದರಿಂದ (ಸೂರ್ಯನ ದಕ್ಷಿಣಾಯಣದಲ್ಲಿ) ಬ್ರಹ್ಮಾಂಡದಲ್ಲಿನ ರಜ-ತಮಾತ್ಮಕ ಲಹರಿಗಳು ಹೆಚ್ಚು ಪ್ರಮಾಣದಲ್ಲಿರುತ್ತದೆ.

ಮಕರ ಸಂಕ್ರಾಂತಿಯ ದಿನ ಸೂರ್ಯನ ಉತ್ತರಾಯಣವು ಆರಂಭವಾಗುತ್ತದೆ. ಸೂರ್ಯನ ಉತ್ತರಾಯಣ ಆರಂಭವಾಗುವುದನ್ನೇ ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದೆಂದು ಹೇಳುತ್ತಾರೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದರಿಂದ ಸೂರ್ಯನ ಉತ್ತರಾಯಣದಲ್ಲಿ, ಬ್ರಹ್ಮಾಂಡದಲ್ಲಿ ರಜ-ಸತ್ತ್ವಾತ್ಮಕ ಲಹರಿಗಳ ಪ್ರಮಾಣವು ಅಧಿಕ ವಾಗಿರುತ್ತದೆ. ಆದುದರಿಂದ ಈ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿರುತ್ತದೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗಿರುವುದರಿಂದ ಈ ಕಾಲದಲ್ಲಿ ವಾತಾವರಣವು ಕೂಡ ಎಂದಿಗಿಂತಲೂ ಹೆಚ್ಚು ಶೀತಲವಾಗಿರುತ್ತದೆ. ಈ ಕಾಲದಲ್ಲಿ ಎಳ್ಳನ್ನು ತಿನ್ನುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಎಳ್ಳೆಣ್ಣೆಯಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಕ್ಷಮತೆಯು ಅಧಿಕವಾಗಿರುತ್ತದೆ, ಅಲ್ಲದೆ ಎಳ್ಳನ್ನು ತಿನ್ನುವುದರಿಂದ ಶರೀರದಲ್ಲಿನ ಚಂದ್ರನಾಡಿಯು ಕಾರ್ಯನಿರತವಾಗುತ್ತದೆ.

ಇದರಿಂದಾಗಿ ಜೀವವು ವಾತಾವರಣದೊಂದಿಗೆ ಬೇಗನೆ ಹೊಂದಿಕೊಳ್ಳುತ್ತದೆ; ಏಕೆಂದರೆ ಈ ಸಮಯದಲ್ಲಿ ಬ್ರಹ್ಮಾಂಡದ ಚಂದ್ರನಾಡಿಯೇ ಕಾರ್ಯನಿರತವಾಗಿರುತ್ತದೆ. ಜೀವದ ಶರೀರದಲ್ಲಿನ ವಾತಾವರಣ ಮತ್ತು ಬ್ರಹ್ಮಾಂಡದಲ್ಲಿನ ವಾತಾವರಣ ಒಂದಾಗುವುದರಿಂದ ಸಾಧನೆ ಮಾಡುವಾಗ ಜೀವಕ್ಕೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.
– ಶ್ರೀಗುರುತತ್ತ್ವ (೧೪.೧.೨೦೦೪, ಮಧ್ಯಾಹ್ನ ೩.೩೩)

ಮಕರ ಸಂಕ್ರಾಂತಿ ದಿನದ ಇತರ ವೈಶಿಷ್ಟ್ಯಗಳು



ಮಕರ ಸಂಕ್ರಾಂತಿ ಆಚರಣೆಯ ಬಗ್ಗೆ ವಿಶೇಷ ವಿಡಿಯೋ

4 thoughts on “ಮಕರ ಸಂಕ್ರಾಂತಿ (Makar Sankranti 2023)”

  1. ಸಂಕ್ರಾತಿ ಹಬ್ಬದ ವಿಶೇಷ ಮತ್ತು ಏಕೆ ಆಚರಿಸಬೇಕು, ಹಾಗೂ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಓದಿದೆ, ಧನ್ಯವಾದ.

    Reply
    • ನಮಸ್ಕಾರ
      ಈ ಮಾಹಿತಿಯನ್ನು ನಿಮ್ಮ ಪರಿಚಯದವರಿಗೂ ಕಳುಹಿಸಿ, ಅವರೂ ಸಂಕ್ರಾಂತಿಯ ಲಾಭವನ್ನು ಪಡೆಯುವಂತೆ ಆಗಲಿ!

      Reply

Leave a Comment