ಮಹಾಶಿವರಾತ್ರಿ (Mahashivratri 2023)

ಮಹಾಶಿವರಾತ್ರಿ ಯಾವಗ ಇದೆ ?

ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ. ಮಾಘ ಕೃಷ್ಣ ಚತುರ್ದಶಿಯಂದು, ದೇವಲೋಕದಲ್ಲಿ (ಅಲ್ಲಿಯ ಕಾಲಗಣನೆಗನುಸಾರ ಪ್ರತಿ ದಿನ) ಶಿವನು ರಾತ್ರಿಯ ಒಂದು ಪ್ರಹರ ವಿಶ್ರಾಂತಿಯನ್ನು ಪಡೆಯುವಾಗ, ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ. 2023 ರಲ್ಲಿ ಮಹಾಶಿವರಾತ್ರಿಯು, ಫೆಬ್ರವರಿ 18 ರಂದು ಆಚರಿಸಲಾಗುವುದು. ಶಿವ ಪೂಜೆಯ ಸಮಯವು ರಾ. 12.09 ರಿಂದ 12.58 ರ ವರೆಗೆ (ಅಂದರೆ ಫೆಬ್ರವರಿ 18 ಮತ್ತು ಫೆಬ್ರವರಿ 19 ರ ನಡುವಿನ ರಾತ್ರಿ) ಇರುವುದು. ಮಹಾಶಿವರಾತ್ರಿಯು ಭಾರತದಾದ್ಯಂತ ಆಚರಿಸಲ್ಪಡುವ ವಿಶೇಶ ವ್ರತವಾಗಿದೆ.

ಮಹಾಶಿವರಾತ್ರಿ – ಮಹತ್ವ ಏನು ?

ಮಹಾಶಿವರಾತ್ರಿಯ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತುಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಈ ಸಮಯದಲ್ಲಿ ತಿಳಿದೋ ತಿಳಿಯದೆಯೋ ಶಿವ ಪೂಜೆ-ಉಪಾಸನೆ ಮಾಡಿದ್ದಲ್ಲಿ, ಆ ಉಪಾಸನೆಯಲ್ಲಿ ಏನಾದರೂ ಕುಂದು ಕೊರತೆಯಿದ್ದರೂ, ಫಲ ಮಾತ್ರ ೧೦೦ ಶೇ. ದೊರೆಯುತ್ತದೆ. ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮಾಡುವ ಉಪಾಸನೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಶಿವ ತತ್ತ್ವದ ಲಾಭವೂ ಆಗುತ್ತದೆ.

ಈ ಕಾಲಾವಧಿಯಲ್ಲಿ ವಿಶ್ವದ ತಮೋಗುಣವನ್ನು ಶಿವತತ್ತ್ವ ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ತ್ವವನ್ನು ಆಕರ್ಷಿಸಬೇಕು.

ಮಹಾಶಿವರಾತ್ರಿ ವ್ರತವನ್ನು ಹೇಗ ಮಾಡಬೇಕು ?

ಮಹಾಶಿವರಾತ್ರಿ ವ್ರತಕ್ಕೆ ‘ಉಪವಾಸ, ಪೂಜೆ ಮತ್ತು ಜಾಗರಣೆ’ ಹೀಗೆ ಮೂರು ಅಂಗಗಳಾಗಿವೆ.

ಮಾಘ ಕೃಷ್ಣ ತ್ರಯೋದಶಿಯಂದು ಏಕಭುಕ್ತರಾಗಿರಬೇಕು (ಒಪ್ಪೊತ್ತಿನ ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ಮಹಾಶಿವರತ್ರಿ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಷೋಡಶೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ 108 ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.

ಯಾಮಪೂಜೆ

ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು.

12, 14 ಅಥವಾ 24 ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ) ಯನ್ನು ಮಾಡಬೇಕು.

ಮಹಾಶಿವರಾತ್ರಿ ದಿನ ಇವನ್ನು ತಪ್ಪದೇ ಮಾಡಿ !

  • ದಿನವಿಡೀ ಶಿವನ ನಾಮಜಪ ಮಾಡಿ
  • ಸಾಧ್ಯವಾದರೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ
  • ಶಿವನಿಗೆ ಬಿಳಿ ಅಕ್ಷತೆ, ಬಿಳಿ ಹೂವು, ಬಿಲ್ವಪತ್ರೆ ಅರ್ಪಿಸಿ ಪೂಜೆ ಮಾಡಿ
  • ಶಿವನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಿರಿ

ಓಂ ನಮಃ ಶಿವಾಯ| ನಾಮವನ್ನು ಆದಷ್ಟು ಹೆಚ್ಚು ಜಪಿಸಿ

ಸನಾತನ ತಯಾರಿಸಿದ ಶಿವನ 'ಓಂ ನಮಃ ಶಿವಾಯ' ನಾಮಪಟ್ಟಿ.

ಓಂ ನಮಃ ಶಿವಾಯ| ಜಪವನ್ನು ಕೇಳಿ, ಅದರೊಂದಿಗೆ ಜಪಿಸಿ !

ಸನಾತನ ಸಾಧನಾ ಸಂವಾದ ಸತ್ಸಂಗ, sadhana samvad satsang, sanatan sanstha

ಮಹಾಶಿವರಾತ್ರಿಯಂದು ಮಾತ್ರವಲ್ಲ, ಇತರ ಹಬ್ಬಹರಿದಿನಗಳಂದು ಕೂಡ ಸಾಧನೆಯೆಂದು ಏನು ಮಾಡಿದರೆ ನಮಗೆ ಹೆಚ್ಚಿನ ಆಧ್ಯಾತ್ಮಿಕ ಲಾಭವಾಗುತ್ತದೆ ಎಂದು ತಿಳಿದುಕೊಳ್ಳಲು ಸನಾತನದ ಆನ್‌ಲೈನ್ ಸತ್ಸಂಗಗಳಲ್ಲಿ ಭಾಗವಹಿಸಿ ! ಕೆಳಗಿನ ಬಟನ್ ಒತ್ತಿ, ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ… 

ಶಿವಲಿಂಗಕ್ಕೆ ಅಭಿಷೇಕ ಮಾಡುವುದು

ಶಿವ ತತ್ತ್ವದ ಹೆಚ್ಚಿನ ಲಾಭವಾಗಬೇಕೆಂದು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. ಇದರಲ್ಲಿ ರುದ್ರಾಭಿಷೇಕ, ಅಘುರುದ್ರ, ಮಹಾರುದ್ರ, ಅತಿರುದ್ರ ಮುಂತಾದ ವಿಧಗಳಿವೆ. ರುದ್ರಾಭಿಷೇಕವೆಂದರೆ ರುದ್ರದ ಒಂದು ಆವರ್ತನ. ಅಘುರುದ್ರ ಎಂದರೆ ರುದ್ರದ 121 ಆವರ್ತನೆಗಳು, ಮಹಾರುದ್ರ ಎಂದರೆ 11 ಲಘುರುದ್ರ, ಮತ್ತು ಅತಿರುದ್ರ ಎಂದರೆ 11 ಮಹಾರುದ್ರ.
ತಣ್ಣೀರು, ಹಾಲು ಅಥವಾ ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. 14ನೇ ಶತಮಾನದ ಮೊದಲು ಶಿವಲಿಂಗಕ್ಕೆ ಕೇವಲ ನೀರಿನಿಂದ ಅಭಿಷೇಕವನ್ನು ಮಾಡಲಾಗುತ್ತಿತ್ತು. ಏಕೆಂದರೆ ಹಾಲು ಮತ್ತು ತುಪ್ಪ ಇವು ‘ಸ್ಥಿತಿ’ಯ ಪ್ರತೀಕವೆಂದೂ, ‘ಲಯ’ದ ದೇವತೆಯಾದ ಶಿವನ ಪೂಜೆಯಲ್ಲಿ ಅವುಗಳು ನಿಷಿದ್ಧವೆಂದೂ ಉಪಯೋಗಿಸಲಾಗುತ್ತಿರಲಿಲ್ಲ. ಕ್ರಮೇಣ, ಹಾಲನ್ನು ಶಕ್ತಿಯ ಪ್ರತೀಕವೆಂದು ತಿಳಿಯಲಾಯಿತು, ಆದುದರಿಂದ ಪಂಚಾಮೃತ, ಹಾಲಿನ ಅಭಿಷೇಕವನ್ನು ಮಾಡಲಾಗುತ್ತಿದೆ.

ಶಿವಲಿಂಗಕ್ಕೆ ಭಸ್ಮವನ್ನು ಹಚ್ಚುವುದು

ಶಿವಪೂಜೆಯಲ್ಲಿ ಬಿಳಿ ಅಕ್ಷತೆಯನ್ನು ಉಪಯೋಗಿಸುವುದು

ಶಿವನಿಗೆ ಬಿಳಿ ಹೂವುಗಳನ್ನು ಅರ್ಪಿಸುವುದು

ಬಿಲ್ವಾರ್ಚನೆ – ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸುವುದು

ಬಿಲ್ವಪತ್ರೆಗೆ ಸಂಬಂಧಿಸಿದಂತೆ ಈ ನಿಯಮಗಳೇನಾದರೂ ನಿಮಗೆ ತಿಳಿದಿವೆಯೇ ?

ಬಿಲ್ವಪತ್ರೆಯ ಮರದಲ್ಲಿ ದೇವತೆಗಳು ವಾಸಿಸುತ್ತಾರೆ. ಆದುದರಿಂದ ಬಿಲ್ವಪತ್ರೆಯ ಮರದ ಬಗ್ಗೆ ಕೃತಜ್ಞತೆಯ ಭಾವವಿಟ್ಟುಕೊಂಡು, ಪ್ರಾರ್ಥನೆ ಸಲ್ಲಿಸಿದ ನಂತರ ಬಿಲ್ವಪತ್ರೆಯನ್ನು (ಎಲೆಗಳನ್ನು) ಆರಿಸಬೇಕು. ಸೋಮವಾರ, ಚತುರ್ಥಿ, ಅಷ್ಟಮಿ ಹಾಗೂ ಅಮಾವಾಸ್ಯೆಯ ತಿಥಿಗಳಂದು, ಹಾಗೆಯೇ ಸಂಕ್ರಾಂತಿಯ ಸಮಯದಲ್ಲಿ ಬಿಲ್ವಪತ್ರೆಗಳನ್ನು ಆರಿಸುವುದು ನಿಷಿದ್ಧವೆಂದು ಪರಿಗಣಿಸಲಾಗಿದೆ. ಶಿವನಿಗೆ ಬಿಲ್ವಪತ್ರೆ ಅತ್ಯಂತ ಪ್ರಿಯವಾದದ್ದು, ಆದುದರಿಂದ ನಿಷಿದ್ಧ ಕಾಲವನ್ನು ಬಿಟ್ಟು ಹಿಂದಿನ ದಿನ ಆರಿಸಿದ ಬಿಲ್ವಪತ್ರಗಳನ್ನು ಅರ್ಪಿಸಬಹುದು. ಬಿಲ್ವಪತ್ರೆಗಳಲ್ಲಿ ದೇವತೆಗಳ ತತ್ತ್ವವ ಅತ್ಯಧಿಕ ಪ್ರಮಾಣದಲ್ಲಿರುವುದರಿಂದ ಅನೇಕ ದಿನಗಳ ವರೆಗೆ ಅದು ಹಾಗೇಯೇ ಇರುತ್ತದೆ.

ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಹೇಗೆ ಅರ್ಪಿಸಬೇಕು ?

ಸಾಮಾನ್ಯ ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಇಂತಹವರು ಶಿವನ ತಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.
ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುವವರು ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಶಿವನೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.
ಬಿಲ್ವಪತ್ರೆಗಳನ್ನು ಇಡೀ ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಭಾಗಕ್ಕೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ.

ಬಿಲ್ವಪತ್ರೆಯ ಮಹತ್ವ

ಬಿಲ್ವಪತ್ರೆಯ ಸೂಕ್ಷ್ಮಚಿತ್ರ, ಬಿಲ್ವಪತ್ರೆ ಮಹತ್ವ, ಬಿಲ್ವಪತ್ರೆ ಏಕೆ ಅರ್ಪಿಸಬೇಕು subtle image of bel leaf, importance of bel leaf

ಮಹಾಶಿವರಾತ್ರಿಯಂದು ಈ ಸುಗಂಧದ ಊದುಬತ್ತಿಯನ್ನು ಹಚ್ಚಿ

ದೇವಸ್ಥಾನಗಳಿಗೆ ತೆರಳಿ ಶಿವನ ದರ್ಶನ ಪಡೆಯುವುದು

ಶಿವಲಿಂಗದ ದರ್ಶನವನ್ನು ಹೀಗೆ ಪಡೆಯಬೇಕು

ಶಿವಾಲಯದಲ್ಲಿ ಶಿವಲಿಂಗದ ದರ್ಶನ ಪಡೆಯುವ ಯೋಗ್ಯ ಪದ್ಧತಿ. How to pray in a Shiva temple, Kannada

ಶಿವಲಿಂಗಕ್ಕೆ ಪ್ರದಕ್ಷಿಣೆ ಹೀಗೆ ಹಾಕಬೇಕು

ಶಿವನ ಉಪಾಸನೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ

ಹೋಳಿಯ ಬಣ್ಣ ನೈಸರ್ಗಿಗವಾಗಿರಲಿ

ಹೋಳಿಯಲ್ಲಿ ಕೃತಕ ಬಣ್ಣಗಳಿಂದ ಆಡುವ ಮೊದಲು ಇವುಗಳ ಬಗ್ಗೆ ವಿಚಾರ ಮಾಡಿ!

ಬಣ್ಣ ತೆಗೆಯುವ ಉಪಾಯ

ತ್ವಚೆಗೆ ಹಾನಿಯಾಗದಂತೆ ಹೋಳಿ ಬಣ್ಣಗಳನ್ನು ತೆಗೆಯಲು ೧೦ ಸುಲಭ ಉಪಾಯಗಳು

ಲಕ್ಷ್ಮಣನಿಗೆ ಶ್ರೀರಾಮನ ಉಡುಗೊರೆ

ಹೋಳಿಯ ದಿನದ ಬಗ್ಗೆ ಪ್ರಚಲಿತವಾಗಿರುವ ಒಂದು ಕಥೆಯನ್ನು ನೋಡೋಣ

ಶಿವನ ಬಗ್ಗೆ ಶಾಸ್ತ್ರೀಯ ಮಾಹಿತಿಯಿರುವ ಗ್ರಂಥಗಳಿಗಾಗಿ Sanatanshop.com

Sanatan books, ಸನಾತನದ ಪುಸ್ತಕಗಳು ಶಿವ

ಇಂದೇ ನೋಡಿ, ಮಹಾಶಿವರಾತ್ರಿಗೆ ಸಂಬಂಧಿಸಿದ ವೀಡಿಯೋ !

ಆಪತ್ಕಾಲದಲ್ಲಿ ಮಹಾಶಿವರಾತ್ರಿಯನ್ನು ಹೀಗೆ ಆಚರಿಸಿ !

ಆಪತ್ಕಾಲದ ಸಮಯದಲ್ಲಿ ಏನು ಮಾಡಬೇಕು, ಮಹಾಶಿವರಾತ್ರಿಯಂದು ಶಿವತತ್ತ್ವದ ಲಾಭವನ್ನು ಪಡೆದುಕೊಳ್ಳಲು ಯಾವ ಕೃತಿಯನ್ನು ಮಾಡಬೇಕು, ಈ ವಿಷಯದಲ್ಲಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ.

೧. ಕೊರೋನಾ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ನಿರ್ಬಂಧಗಳಿಂದ ಯಾರಿಗೆ ಮಹಾಶಿವರಾತ್ರಿಯಂದು ಶಿವದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲವೋ ಅವರು ತಮ್ಮ ಮನೆಯಲ್ಲಿಯೇ ಶಿವಲಿಂಗದ ಪೂಜೆಯನ್ನು ಮಾಡಬೇಕು.

೨. ಒಂದು ವೇಳೆ ಶಿವಲಿಂಗ ಉಪಲಬ್ಧವಿಲ್ಲದಿದ್ದಲ್ಲಿ, ಶಿವನ ಚಿತ್ರದ ಪೂಜೆಯನ್ನು ಮಾಡಬೇಕು.

೩. ಶಿವನ ಚಿತ್ರ ಕೂಡ ಲಭ್ಯವಿಲ್ಲದಿದ್ದರೆ, ಮಣೆಯ ಮೇಲೆ ಶಿವಲಿಂಗದ ಅಥವಾ ಶಿವನ ಚಿತ್ರವನ್ನು ಬಿಡಿಸಿ ಅದರ ಪೂಜೆಯನ್ನು ಮಾಡಬೇಕು.

೪. ಇದರಲ್ಲಿ ಯಾವುದೂ ಸಾಧ್ಯವಿಲ್ಲದಿದ್ದರೆ, ಶಿವನ ‘ಓಂ ನಮಃ ಶಿವಾಯ |’ ಈ ನಾಮಮಂತ್ರವನ್ನು ಬರೆದು ಅದನ್ನು ಪೂಜಿಸಬಹುದು. ಶ್ರಾವಣ ಸೋಮವಾರದಂದು ಉಪವಾಸವನ್ನು ಮಾಡಿ ಶಿವನನ್ನು ವಿಧಿವತ್ತಾಗಿ ಪೂಜೆಯನ್ನು ಮಾಡಲು ಇಚ್ಛಿಸುವವರೂ ಈ ರೀತಿ ಮಾಡಬಹುದು.

೫. ಮಾನಸಪೂಜೆ : ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ, ಇದು ಅಧ್ಯಾತ್ಮದ ಒಂದು ಮಹತ್ವದ ಸಿದ್ಧಾಂತವಾಗಿದೆ. ಅದರಂತೆ ಸ್ಥೂಲ ವಿಷಯಗಳಿಗಿಂತ ಸೂಕ್ಷ್ಮ ವಿಷಯದಲ್ಲಿ ಅಧಿಕ ಸಾಮರ್ಥ್ಯವಿರುತ್ತದೆ. ಈ ತತ್ತ್ವಗಳಿನುಸಾರ ಪ್ರತ್ಯಕ್ಷ ಶಿವಪೂಜೆಯನ್ನು ಮಾಡುವುದು ಸಾಧ್ಯವಿಲ್ಲದಿದ್ದರೆ ಶಿವನ ಮಾನಸಪೂಜೆಯನ್ನೂ ಮಾಡಬಹುದು. ಶಿವನ ಮಾನಸಪೂಜೆಯು ಈ ಲಿಂಕ್ ನಲ್ಲಿ ಲಭ್ಯವಿದೆ.

ಆಪತ್ಕಾಲವನ್ನು ಪಾರು ಮಾಡಲಿಕ್ಕಿದ್ದರೆ ಸಾಧನೆಯ ಬಲ ಆವಶ್ಯಕವಾಗಿದೆ. ಅದಕ್ಕಾಗಿ ಎಂದಿನಂತೆ ವ್ರತ ಮಾಡಲು ಮಿತಿ ಇದ್ದರೆ, ಅದರಿಂದ ಬೇಸರ ಪಡದೇ ಹೆಚ್ಚೆಚ್ಚು ಪರಿಶ್ರಮ ವಹಿಸಿ ಸಾಧನೆ ಮಾಡುವತ್ತ ಗಮನವನ್ನು ಕೇಂದ್ರೀಕರಿಸಿ. ಶಿವರಾತ್ರಿ ನಿಮಿತ್ತ ಭಗವಾನ ಶಿವನಲ್ಲಿ ಶರಣಾಗಿ ಪ್ರಾರ್ಥಿಸೊಣ. ‘ಹೇ ಶಿವಶಂಕರಾ ಸಾಧನೆ ಮಾಡಲು ನಮಗೆ ಶಕ್ತಿ, ಬುದ್ಧಿ ಹಾಗೂ ಪ್ರೇರಣೆ ನೀಡಿ. ನಮ್ಮ ಸಾಧನೆಯಲ್ಲಿ ಬರುವ ಅಡಚಣೆಗಳ ಲಯವಾಗಲಿ’ ಎಂದು ಶರಣಾಗತ ಭಾವದಿಂದ ಪ್ರಾರ್ಥನೆ ಮಾಡೋಣ.

ಧರ್ಮಪ್ರಸಾರದ ಕಾರ್ಯದಲ್ಲಿ ಕೈಜೋಡಿಸಿ

ಇಲ್ಲಿ ನೀಡಿರುವ ಫ್ಲೆಕ್ಸ ಫಲಕಗಳನ್ನು ಪ್ರಾಯೋಜಿಸಿ, ನಿಮ್ಮ ಹತ್ತಿರದ ದೇವಸ್ಥಾನಗಳಲ್ಲಿ ಅವುಗಳನ್ನು ಪ್ರದರ್ಶಿಸಿ. ಫಲಕಗಳಿಗಾಗಿ 9342599299 ಗೆ ಸಂಪರ್ಕಿಸಿ!

ಶೃಂಗದರ್ಶನ ಸನಾತನ ಸಂಸ್ಥೆಯ ಫಲಕ
ಶಿವಲಿಂಗದ ಪ್ರದಕ್ಷಿಣೆ ಸನಾತನ ಸಂಸ್ಥೆಯ ಫಲಕ
ಶಿವ ಪೂಜೆ ಸನಾತನ ಸಂಸ್ಥೆಯ ಫಲಕ

Leave a Comment