ಗುರುಪೂರ್ಣಿಮೆ – 2023 Guru Purnima

ಗುರುಪೂರ್ಣಿಮೆ – ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ !

ಗುರುಕೃಪಾ ಹಿ ಕೇವಲಂ ಶಿಷ್ಯಪರಮಮಂಗಲಂ

ಗುರುಪೂರ್ಣಿಮೆ (ವ್ಯಾಸ ಪೂರ್ಣಿಮೆ) ಅಂದರೆ ಶಿಷ್ಯನೋರ್ವನ ಜೀವನದಲ್ಲಿ ಬರುವಂತಹ ಮಹತ್ವದ ದಿನ. ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ. 3 ಜುಲೈ, 2023, ಸೋಮವಾರದಂದು ನಾವೆಲ್ಲರೂ ಕೃತಜ್ಞರಾಗಿ ಗುರುಪೂರ್ಣೀಮೆಯನ್ನು ಆಚರಿಸಲಿದ್ದೇವೆ.

ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಇಂತಹ ಮಹಾನ್ ಗುರುಗಳ ಋಣವನ್ನು ತೀರಿಸುವುದು ಅಸಾಧ್ಯ. ಆದರೂ ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ.

ಗುರುಪೂರ್ಣಿಮೆ, 2023
ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ !

ಗುರುಪೂರ್ಣಿಮಾ ಮಹೋತ್ಸವದ ನೇರ ಪ್ರಸಾರ

ದೇವರು ಮಾನವನಿಗೆ ಎಲ್ಲ ರೀತಿಯ ಭಾವಗಳನ್ನು ಕರುಣಿಸಿದ್ದಾರೆ, ಸಮಾಧಾನ (ಶಾಂತಿ ಅಥವಾ ಆನಂದ) ಒಂದನ್ನು ಬಿಟ್ಟು. ಅದನ್ನು ಗುರುಗಳೇ ನೀಡಬಲ್ಲರು…

– ಪ.ಪೂ. ಭಕ್ತರಾಜ ಮಹಾರಾಜ

Watch Live

DAYS
HOURS
MINUTES
SECONDS

 ಇತರ ಭಾಷೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ನೇರ ಪ್ರಸಾರ ವೀಕ್ಷಿಸಿ

2 July, 5:30 p.m.

3 July, 8:00 p.m.

3 July, 7:30 p.m.

3 July, 7:30 p.m.

3 July, 6:00 p.m.


ಗುರುಪೂರ್ಣಿಮೆಯ ಮಹತ್ವ

ಗುರು-ಶಿಷ್ಯ ಪರಂಪರೆಯು ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಆದರೆ ಕಾಲದ ಪ್ರವಾಹದಲ್ಲಿ ಮಹಾನ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆಯ ನಿಮಿತ್ತ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ತಿಳಿಸಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದವಕಾಶ ಲಭಿಸುತ್ತದೆ.

ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗ (ಸತ್‌ಗಾಗಿ ಮಾಡಿದ ಅರ್ಪಣೆ) ಇವುಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ೧ ಸಾವಿರ ಪಟ್ಟು ಹೆಚ್ಚಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ.

ಗುರುದಕ್ಷಿಣೆ – ತನು, ಮನ, ಧನದ ತ್ಯಾಗ

ಗುರುಪೂರ್ಣೆಮೆ ಅಂದರೆ ಗುರುಚರಣಗಳಲ್ಲಿ ತನು, ಮನ, ಧನವನ್ನು ಅರ್ಪಿಸುವ ದಿನ. ಇವುಗಳ ತ್ಯಾಗದಿಂದ ಗುರುಗಳ ಮನಸ್ಸು ಜಯಿಸಿ ಗುರುಕೃಪೆಯನ್ನು ಸುಲಭವಾಗಿ ಗಳಿಸಬಹುದು.

ಸನಾತನದ ಆಧ್ಯಾತ್ಮಿಕ ಕಾರ್ಯಕ್ಕೆ ದಾನ ನೀಡಿ

ಸನಾತನ ಸಂಸ್ಥೆಗೆ ದಾನ ನೀಡಿ

ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನದಂದು ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ. ಈ ನಿಮಿತ್ತ ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರ ಪಟ್ಟು ಹೆಚ್ಚಾಗುತ್ತದೆ. ಗುರುಪೂರ್ಣಿಮೆಯ ನಿಮಿತ್ತ ಗುರುಕಾರ್ಯಕ್ಕಾಗಿ ಮನೆಯಲ್ಲೇ ಕುಳಿತು ಆನ್‌ಲೈನ್ ಅರ್ಪಣೆ ನೀಡುವ ಸೌಲಭ್ಯ ಲಭ್ಯವಿದೆ. ಚಿತ್ರದ ಮೇಲೆ ಕ್ಲಿಕ್ ಮಾಡಿ, ದಾನ ನೀಡಿ!

ಗುರು ಪೂಜೆ

ಗುರುಪೂರ್ಣಿಮೆಯಂದು ಗುರುಗಳ ಅಥವಾ ವ್ಯಾಸ ಮಹರ್ಷಿಗಳನ್ನು ಪೂಜಿಸಲಾಗುತ್ತದೆ. ಇಲ್ಲಿ ನೀಡಿರುವ ಪೂಜೆಯ ವಿಧಾನವನ್ನು ಅನುಸರಿಸಿ ತಾವೂ ಮನೆಯಲ್ಲೇ ಗುರುಪೂಜೆಯನ್ನು ಮಾಡಿ ಗುರುಕೃಪೆಯನ್ನು ಪಡೆಯಿರಿ.

ಗುರು ಪೂಜೆ

ಗುರುಪೂರ್ಣಿಮೆಯಂದು ಗುರುಗಳ ಅಥವಾ ವ್ಯಾಸ ಮಹರ್ಷಿಗಳನ್ನು ಪೂಜಿಸಲಾಗುತ್ತದೆ. ಇಲ್ಲಿ ನೀಡಿರುವ ಪೂಜೆಯ ವಿಧಾನವನ್ನು ಅನುಸರಿಸಿ ತಾವೂ ಮನೆಯಲ್ಲೇ ಗುರುಪೂಜೆಯನ್ನು ಮಾಡಿ ಗುರುಕೃಪೆಯನ್ನು ಪಡೆಯಿರಿ.

ಗುರುಗಳ ಬಗ್ಗೆ ಭಾವ ಹೆಚ್ಚಿಸಲು ಈ ಪ್ರಯತ್ನಗಳನ್ನು ಮಾಡಿ

  • ಬೆಳಗ್ಗೆ ಗುರುಗಳಿಗೆ ಮಾನಸಪೂಜೆಯನ್ನು ಸಲ್ಲಿಸಿ
  • ಆದಷ್ಟು ಹೆಚ್ಚು ಗುರುತತ್ತ್ವ ಗ್ರಹಿಸಲು ದಿನವಿಡೀ ಪ್ರಾರ್ಥನೆಯನ್ನು ಮಾಡಿ
  • ದೇವರು ನಮ್ಮ ಮುಂದೆ ತಂದಿಟ್ಟಿರುವ ಪರಿಸ್ಥಿಯಲ್ಲಿ ಗುರುಗಳಿಗೆ ಅಪೇಕ್ಷಿತವಿರುವಂತಹ ಪ್ರಯತ್ನಗಳನ್ನು ಮಾಡಿ
  • ಗುರುಗಳು ಪ್ರೀತಿಯ ಸುರಿಮಳೆಗೈಯುತ್ತಾರೆ, ಅದರ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸಿ
  • ಸತ್ಸೇವೆಯ ಮಾಧ್ಯಮದಿಂದ ಸಾಕ್ಷಾತ ಗುರುಗಳ ಸೇವೆಯಲ್ಲಿ ಭಾಗವಹಿಸಿ ಸ್ವಂತ ಉದ್ಧಾರ ಮಾಡಿಕೊಳ್ಳಿ
  • ಗುರುಗಳು ನೀಡಿರುವ ಜಪ/ಗುರುಮಂತ್ರವನ್ನು ಆದಷ್ಟು ಜಪಿಸಿ. ಗುರುಮಂತ್ರ ಇಲ್ಲದಿದ್ದರೆ ಕುಲದೇವತೆಯ ನಾಮ ಜಪಿಸಿ

ಗುರು-ಶಿಷ್ಯ ಪರಂಪರೆ

ಭಾರತೀಯ ಸಂಸ್ಕೃತಿಯ ಮಹಾನತೆಯನ್ನು ಕೆಲವೇ ಕೆಲವು ಶಬ್ದಗಳಲ್ಲಿ ವಿವರಿಸಬೇಕಾದಲ್ಲಿ, ಮನಸ್ಸಿಗೆ ಬರುವಂತ ಶಬ್ದಗಳೆಂದರೆ ‘ಗುರು-ಶಿಷ್ಯ ಪರಂಪರೆ’. ‘ಗುರುಗಳ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಪುರಂದರದಾಸರು ಹೇಳಿದ್ದಾರೆ. ಗುರುಗಳ ಶಿಷ್ಯನ ಜೀವನದಲ್ಲಿ ಆವರಿಸಿರುವ ಕತ್ತಲೆಯನ್ನು ಪರಬ್ರಹ್ಮನ ಅನಂತ ಬೆಳಕಿನಿಂದ ಬೆಳಗಿಸುತ್ತಾರೆ. ಗುರು-ಶಿಷ್ಯ ಪರಂಪರೆ, ಗುರುಮಂತ್ರ, ಗುರುಗಳ ಕಾರ್ಯ ಇತ್ಯಾದಿಗಳ ಬಗ್ಗೆ ಅನೇಕ ಲೆಖನಗಳಿಗಾಗಿ…

ಸನಾತನ ಸಂಸ್ಥೆಯ ಗುರು ಪರಂಪರೆ

ಶಿಷ್ಯರ ಹಾಗೂ ಶ್ರದ್ಧಾವಂತರ ಏಳ್ಗೆಗಾಗಿ ಭಾರತದಾದ್ಯಂತ ಅವಿರತವಾಗಿ ಪ್ರಯಾಣ ಮಾಡಿರುವ, ಅಧ್ಯಾತ್ಮದ ಅತ್ಯುಚ್ಚ ಪದವಿಯನ್ನು ತಲುಪಿರುವ ಸಂತರ ಗುರು ಪರಂಪರೆಯು ಸನಾತನ ಸಂಸ್ಥೆಗೆ ಲಭಿಸಿದೆ. ಇಂತಹ ಮಹಾನ್ ಗುರುಪರಂಪರೆಯ ಕೃಪಾಛತ್ರದಲ್ಲಿರುವುದೇ ಅಪಾರವಾದ ಭಾಗ್ಯ. ಸನಾತನದ ಗುರುಪರಂಪರೆಗೆ ನಮ್ಮ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸಿ, ಗುರುತತ್ತ್ವಕ್ಕೆ ಅಪೇಕ್ಷಿತವಿರುವಂತಹ ಅಧ್ಯಾತ್ಮಪ್ರಸಾರ ನಮ್ಮಿಂದಾಗಲಿ, ಅದರಿಂದ ನಮ್ಮೆಲ್ಲರ ಆಧ್ಯಾತ್ಮಿಕ ಉನ್ನತಿಯಾಗಲಿ ಎಂದು ಪ್ರಾರ್ಥಿಸೋಣ…

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರ ಗುರುಗಳಾದ ಸಂತ ಭಕ್ತರಾಜ ಮಹಾರಾಜರ ಆಶೀರ್ವಾದದಿಂದ ಈ ಜಗತ್ತಿಗೆ ಗುರುಕೃಪಾಯೋಗ ನೀಡಿದ್ದಾರೆ. ಸಾವಿರಾರು ಸಾಧಕರು ಆನಂದಪ್ರಾಪ್ತಿಯ (ಈಶ್ವರಪ್ರಾಪ್ತಿಯ) ಅಂದರೆ ಆಧ್ಯಾತ್ಮಿಕ ಪ್ರಗತಿಯ ಈ ಅತ್ಯಂತ ಮಹಾಮಾರ್ಗದ ಅನುಭೂತಿಯನ್ನು ಪಡೆದಿದ್ದಾರೆ. ತಾವೂ ಇದರ ಲಾಭ ಪಡೆದುಕೊಳ್ಳಿ…

ಸನಾತನದ ಉಚಿತ ಸತ್ಸಂಗಗಳಲ್ಲಿ ಭಾಗವಹಿಸಿ

ಗುರುಪೂಜೆಯ ವಿಧಿ

ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ‘ಗುರುಪರಂಪರಾ ಸಿದ್ಧ್ಯರ್ಥಂ ವ್ಯಾಸಪೂಜಾಂ ಕರಿಷ್ಯೇ|’ ಎಂದು ಸಂಕಲ್ಪ ಮಾಡುತ್ತಾರೆ. ಒಂದು ಶುಭ್ರವಸ್ತ್ರವನ್ನು ಹಾಸಿ ಅದರ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಗಂಧದಿಂದ ಹನ್ನೆರಡು ರೇಖೆ (ಗೆರೆ)ಗಳನ್ನು ಎಳೆಯುತ್ತಾರೆ. ಇದೇ ವ್ಯಾಸಪೀಠ. ಅನಂತರ ಬ್ರಹ್ಮ, ಪರಾತ್ಪರಶಕ್ತಿ, ವ್ಯಾಸ, ಶುಕದೇವ, ಗೌಡಪಾದ, ಗೋವಿಂದಸ್ವಾಮಿ ಮತ್ತು ಶಂಕರಾಚಾರ್ಯರನ್ನು ಈ ವ್ಯಾಸಪೀಠದ ಮೇಲೆ ಆವಾಹಿಸಿ ಅವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡುತ್ತಾರೆ. ಈ ದಿನ, ದೀಕ್ಷಾಗುರು ಹಾಗೂ ತಂದೆ-ತಾಯಿಯರ ಪೂಜೆಯನ್ನೂ ಮಾಡುವ ಪದ್ಧತಿಯಿದೆ.

ಗುರು-ಶಿಷ್ಯ ಪರಂಪರೆಗೆ ಸಂಬಂಧಿಸಿದ ಗ್ರಂಥಗಳು

ಗುರು ಎಂದು ಯಾರಿಗೆ ಹೇಳಬೇಕು, ಗುರು ಶಿಷ್ಯ ಪರಂಪರೆ ಎಂದರೇನು, ಗುರುಮಂತ್ರವೆಂದರೇನು, ಗುರುಗಳು ಶಿಷ್ಯರಿಗೆ ಕಲಿಸುವ ಪದ್ಧತಿಗಳು ಯಾವುವು ಮುಂತಾದ ಅನೇಕ ಪ್ರಶ್ನೆಗಳ ಉತ್ತರಗಳನ್ನು ಪಡೆಯಿರಿ…

ಆಪತ್ಕಾಲದ ಸ್ಥಿತಿಯಲ್ಲಿ ಧರ್ಮಶಾಸ್ತ್ರಕ್ಕನುಸಾರ ಗುರುಪೂರ್ಣಿಮೆಯನ್ನು ಆಚರಿಸುವ ಪದ್ಧತಿ

ಗುರುಪೂರ್ಣಿಮೆಯಂದು ಹೆಚ್ಚಿನ ಜನರು ತಮ್ಮ ಶ್ರೀಗುರುಗಳ ಬಳಿ ಹೋಗಿ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಕೆಲವರು ಶ್ರೀಗುರುಗಳಿಗೆ, ಕೆಲವರು ತಂದೆ-ತಾಯಿಗೆ, ಕೆಲವರು ವಿದ್ಯಾಗುರುಗಳಿಗೆ (ನಮಗೆ ಜ್ಞಾನ ನೀಡಿದವರಿಗೆ ಅಂದರೆ ಶಿಕ್ಷಕರಿಗೆ), ಕೆಲವರು ಆಚಾರ್ಯಗುರುಗಳಿಗೆ (ತಮ್ಮಲ್ಲಿ ಪರಂಪರೆಗನುಸಾರ ಪೂಜೆಗೆ ಬರುವ ಗುರೂಜಿಗಳು), ಇನ್ನು ಕೆಲವರು ಮೋಕ್ಷಗುರು (ನಮಗೆ ಸಾಧನೆಯ ದೃಷ್ಟಿಕೋನವನ್ನು ನೀಡಿ ಮೋಕ್ಷದ ಮಾರ್ಗವನ್ನು ತೋರಿಸಿದ ಗುರುಗಳು) ಗಳ ಬಳಿ ಹೋಗಿ ಅವರ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಆಪತ್ಕಾಲವಿದ್ದಾಗಲೂ ನಾವು ಮನೆಯಲ್ಲಿಯೇ ಇದ್ದು ಭಕ್ತಿಭಾವದಿಂದ ಶ್ರೀ ಗುರುಗಳ ಛಾಯಾಚಿತ್ರವನ್ನಿಟ್ಟು ಪೂಜೆ ಅಥವಾ ಮಾನಸಪೂಜೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ನಮಗೆ ಒಂದು ಸಾವಿರ ಪಟ್ಟು ಗುರುತತ್ತ್ವದ ಲಾಭವಾಗುತ್ತದೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಉಪಾಸ್ಯದೇವತೆ, ಸಂತರು ಅಥವಾ ಶ್ರೀಗುರುಗಳು ಬೇರೆ ಬೇರೆ ಆಗಿದ್ದರೂ, ಗುರುತತ್ತ್ವವು ಒಂದೇ ಆಗಿರುತ್ತದೆ.

ಎಲ್ಲ ಭಕ್ತರು ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಸಂಘಟಿತಶಕ್ತಿಯ ಲಾಭವಾಗುತ್ತದೆ
ಸಂಪ್ರದಾಯಗಳಲ್ಲಿನ ಎಲ್ಲ ಭಕ್ತರು ಸಾಧ್ಯವಾದರೆ ಒಂದೇ ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಮಾಡಬೇಕು. ‘ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಸಂಘಟಿತಶಕ್ತಿಯ’ ಹೆಚ್ಚು ಲಾಭವಾಗುತ್ತದೆ. ಆದ್ದರಿಂದ ಸಾಧ್ಯವಿದ್ದರೆ ಎಲ್ಲರೂ ಒಂದು ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ಪೂಜೆ ಮಾಡಬೇಕು.

ಅ. ಬೆಳಗ್ಗಿನ ಸಮಯ ಪೂಜೆಗೆ ಉತ್ತಮವೆಂದು ಹೇಳಲಾಗುತ್ತದೆ. ಬೆಳಗ್ಗೆ ಪೂಜೆ ಮಾಡಲು ಸಮಯವಿರುವವರು ಬೆಳಗ್ಗಿನ ಸಮಯವನ್ನು ನಿರ್ಧರಿಸಿ ಪೂಜೆ ಮಾಡಬಹುದು.

ಆ. ಕೆಲವು ಅನಿವಾರ್ಯ ಕಾರಣಗಳಿಂದ ಬೆಳಗ್ಗೆ ಪೂಜೆ ಮಾಡಲು ಸಾಧ್ಯವಿಲ್ಲದವರು ಸಾಯಂಕಾಲ ಒಂದು ಸಮಯವನ್ನು ನಿಶ್ಚಯಿಸಿ ಆ ಸಮಯದಲ್ಲಿ ಆದರೆ ಸೂರ್ಯಾಸ್ತದ ಮೊದಲು ಅಂದರೆ ಸಂಜೆ ೭ ಗಂಟೆ ಒಳಗೆ ಪೂಜೆ ಮಾಡಬಹುದು.

ಇ. ನಿರ್ಧರಿತ ಸಮಯದಲ್ಲಿ ಪೂಜೆ ಮಾಡಲು ಸಾಧ್ಯವಿಲ್ಲದವರು ತಮ್ಮತಮ್ಮ ಸಮಯಕ್ಕನುಸಾರ ಸೂರ್ಯಾಸ್ತದ ಮೊದಲು ಪೂಜೆ ಮಾಡಬಹುದು.

ಈ. ಪ್ರತಿಯೊಬ್ಬರೂ ತಮ್ಮ ತಮ್ಮ ಸಂಪ್ರದಾಯಕ್ಕನುಸಾರ ಶ್ರೀ ಗುರುಗಳು ಅಥವಾ ಉಪಾಸ್ಯದೇವತೆಯ ಚಿತ್ರ, ಮೂರ್ತಿ ಅಥವಾ ಪಾದುಕೆಗಳನ್ನಿಟ್ಟು ಮನೆಯಲ್ಲಿ ಪೂಜೆ ಮಾಡಬೇಕು.

ಉ. ಚಿತ್ರ, ಮೂರ್ತಿ ಅಥವಾ ಪಾದುಕೆಗಳಿಗೆ ಗಂಧವನ್ನು ಹಚ್ಚಿ ಪುಷ್ಪವನ್ನು ಅರ್ಪಿಸಬೇಕು. ಧೂಪ, ದೀಪ ಮತ್ತು ನೈವೇದ್ಯವನ್ನು ತೋರಿಸಿ ಪಂಚೋಪಚಾರ ಪೂಜೆ ಮಾಡಬೇಕು. ನಂತರ ಶ್ರೀಗುರುಗಳ ಆರತಿ ಮಾಡಬೇಕು.

ಊ. ಸಾಮಗ್ರಿಗಳ ಅಭಾವದಿಂದಾಗಿ ಪ್ರತ್ಯಕ್ಷ ಪೂಜೆ ಮಾಡಲು ಸಾಧ್ಯವಿಲ್ಲದಿರುವವರು ಶ್ರೀಗುರುಗಳ ಅಥವಾ ಉಪಾಸ್ಯ ದೇವತೆಯ ಮಾನಸಪೂಜೆ ಮಾಡಬೇಕು.
(ಮಾನಸಪೂಜೆಯನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ!)

ಎ. ನಂತರ ಶ್ರೀ ಗುರುಗಳು ನೀಡಿರುವ ಮಂತ್ರವನ್ನು ಜಪಿಸಬೇಕು. ಶ್ರೀ ಗುರುಗಳು ನಮ್ಮ ಜೀವನದಲ್ಲಿ ಬಂದ ನಂತರದನಮ್ಮ ಅನುಭೂತಿಗಳನ್ನು ಸ್ಮರಣೆ ಮಾಡಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು.

ಏ. ಆ ಸಮಯದಲ್ಲಿ ‘ವರ್ಷವಿಡೀ ನಾವು ಸಾಧನೆ ಮಾಡುವಾಗ ಎಲ್ಲಿ ಹಿಂದೆ ಉಳಿದೆವು ? ನಾವು ಶ್ರೀ ಗುರುಗಳ ಬೋಧನೆಯನ್ನು ಎಷ್ಟು ಪ್ರಮಾಣದಲ್ಲಿ ಆಚರಣೆ ಮಾಡಿದ್ದೇವೆ ?’, ಎಂಬುದರ ಸಿಂಹಾವಲೋಕನ ಮಾಡಿ ಅದರ ಬಗ್ಗೆ ಚಿಂತನೆ ಮಾಡಬೇಕು.