ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನ – ಕಟರಾದ (ಜಮ್ಮು) ಶ್ರೀ ವೈಷ್ಣೋದೇವಿ !

ಶ್ರೀ ವೈಷ್ಣೋದೇವಿಯ ದೇವಸ್ಥಾನ ಹಿಂದೂಗಳ ಒಂದು ಪವಿತ್ರ ಸ್ಥಳವಾಗಿದ್ದು, ದೇವಿ ಶ್ರೀ ಕಾಳಿ, ದೇವಿ ಶ್ರೀ ಸರಸ್ವತಿ ಮತ್ತು ದೇವಿ ಶ್ರೀ ಲಕ್ಷ್ಮೀ ಪಿಂಡಿ ರೂಪದಲ್ಲಿ ಗುಹೆಯಲ್ಲಿ ವಿರಾಜಮಾನರಾಗಿದ್ದಾರೆ.

ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ !

೫೧ ಶಕ್ತಿಪೀಠಗಳ ಪೈಕಿ ಒಂದಾದ ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿಯ ತಾರಾಪೀಠದ ಸಂಕ್ಷಿಪ್ತ ಪರಿಚಯ.

ಪಾಕಿಸ್ತಾನದಲ್ಲಿರುವ ಶಕ್ತಿಪೀಠ ಶ್ರೀ ಹಿಂಗಲಾಜಮಾತಾ

ಹಿಂಗಲಾಜಮಾತಾ ದೇವಸ್ಥಾನವು ೫೧ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಅದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿದೆ. ಈ ಸ್ಥಳದಲ್ಲಿ ಸತಿಯ ಬ್ರಹ್ಮರಂಧ್ರವು (ತಲೆ) ಬಿದ್ದಿತ್ತು.

ರಜರಪ್ಪಾದ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ

ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಜರಪ್ಪಾದ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು

ಋಷಿಮುನಿಗಳು ದೇವಲೋಕದಿಂದ ಕಲ್ಪವೃಕ್ಷವನ್ನು (ತೆಂಗಿನ ಮರ) ತರಿಸಿ ಎಳನೀರಿನಿಂದ ಅಭಿಷೇಕ ಮಾಡಿ ದೇವಿಯನ್ನು ಸೌಮ್ಯರೂಪಕ್ಕೆ ತಂದರು. ಆದ್ದರಿಂದ ದೇವಿಯು ಲಿಂಗರೂಪದಲ್ಲಿ (ಕಲ್ಲಿನ ರೂಪದಲ್ಲಿ) ನಂದಿನಿ ನದಿಯ ಮಧ್ಯದಲ್ಲಿ ನೆಲೆನಿಂತಳು. ಆದ್ದರಿಂದ ಇವಳನ್ನು ಶ್ರೀ ದುರ್ಗಾಪರಮೇಶ್ವರಿ ಎಂದು ಕರೆದರು.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ (ಮಂದಾರ್ತಿ)

ಉಡುಪಿ ಜಿಲ್ಲೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪುಣ್ಯ ಕ್ಷೇತ್ರ ಮಂದಾರ್ತಿ ಇದೆ. ಶ್ರೀ ದುರ್ಗಾಪರಮೇಶ್ವರೀಯು ಕ್ಷೇತ್ರದ ಅಧಿದೇವತೆಯಾಗಿದ್ದು ನಾಗಸುಬ್ರಹ್ಮಣ್ಯ, ವೀರಭದ್ರ, ಕಲ್ಲುಕುಟ್ಟಿಗ, ಕ್ಷೇತ್ರಪಾಲ, ವ್ಯಾಘ್ರ (ಹುಲಿ ದೇವರು) ಬೊಬ್ಬರ್ಯ ಮತ್ತು ನಂದೀಶ್ವರ ಪರಿವಾರ ದೇವರಾಗಿದ್ದಾರೆ.

ಶ್ರೀ ರಾಜರಾಜೇಶ್ವರಿ ದೇವಸ್ಥಾನ (ಪೊಳಲಿ, ದಕ್ಷಿಣ ಕನ್ನಡ ಜಿಲ್ಲೆ)

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ ಶ್ರೀರಾಜರಾಜೇಶ್ವರಿ ದೇವಸ್ಥಾನವಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸುತ್ತುವರಿದು ಪಾಲ್ಗುಣಿ ಹೊಳೆ ಹರಿದು ಹೋಗುತ್ತಾಳೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಪೊಳಲಿಯು ಪ್ರವಾಸಿಗರನ್ನು ತನ್ನ ನೈಸರ್ಗಿಕ ಸೌಂದರ್ಯ ಹಾಗು ದೃಷ್ಯ ಸಲಕರಣೆಯಿಂದ ಆಕರ್ಷಿಸುತ್ತಿದೆ.

ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಇತಿಹಾಸ ಸ್ವರ್ಣ ರೇಖಾಂಕಿತಂ ಲಿಂಗಂ, ನಾಸ್ತಿ ನಾಸ್ತಿ, ಜಗತ್ರಾಯೆ ವಾಮ ಭಗದಿತಂ ಲಿಂಗಂ ನ ಭೂತೊ ನಃ ಭವಿಷ್ಯತಿ ಪರಶುರಾಮ ಸೃಷ್ಟಿಯಲ್ಲಿ ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಕೊಲ್ಲೂರು ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಏಳು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಕೊಲ್ಲೂರು ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರ ಸ್ಕಂದ ಪುರಾಣದಲ್ಲಿ ಶ್ರೀ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಕೋಲ ಮಹರ್ಷಿಯು ತಪಸ್ಸುಗೈದುದರಿಂದ ಇದು ಕೋಲಾಪುರವೆನಿಸಿತು. ಇದು ಇಂದಿನ ಕೊಲ್ಲೂರು ಎಂದು ಹೆಸರಾಯಿತು. ಇದು ಒಂದು ಶಕ್ತಿಯ ಆರಾಧನೆಯ ಕ್ಷೇತ್ರ. … Read more

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಮುಲ್ಕಿಯಲ್ಲಿದ್ದು, ಸಾಂಪ್ರದಾಯಕವಾಗಿ ಸಾಮಾಜಿಕವಾಗಿ ವೇದಘೋಷಗಳೊಂದಿಗೆ ಎಲ್ಲ ವರ್ಗದ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ