ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನ – ಕಟರಾದ (ಜಮ್ಮು) ಶ್ರೀ ವೈಷ್ಣೋದೇವಿ !

Article also available in :

ಶ್ರೀ ವೈಷ್ಣೋದೇವಿಯ ದೇವಸ್ಥಾನ ಹಿಂದೂಗಳ ಒಂದು ಪವಿತ್ರ ಸ್ಥಳವಾಗಿದೆ. ಶ್ರೀ ವೈಷ್ಣೋದೇವಿಯನ್ನು ‘ಮಾತಾ ರಾಣಿ’ ಎಂದೂ ಕರೆಯುತ್ತಾರೆ. ಶ್ರೀ ವೈಷ್ಣೋದೇವಿಯ ದೇವಸ್ಥಾನವು ಸಮುದ್ರತೀರದಿಂದ ೫ ಸಾವಿರ ೨೦೦ ಅಡಿ ಎತ್ತರದಲ್ಲಿದೆ. ಈ ದೇವಸ್ಥಾನ ಜಮ್ಮು ಜಿಲ್ಲೆಯ ಕಟರಾದಿಂದ ೧೪ ಕಿಲೋಮೀಟರ್ ಎತ್ತರದಲ್ಲಿ ಒಂದು ಬೆಟ್ಟದ ಮೇಲೆ ಇದೆ. ಅತ್ಯಂತ ಜಾಗೃತ ದೇವಸ್ಥಾನವೆಂದು ಪ್ರಸಿದ್ಧವಾಗಿರುವ ಈ ಸ್ಥಳಕ್ಕೆ ದೇಶಾದ್ಯಂತದ ಲಕ್ಷಾವಧಿ ಭಕ್ತರು ದರ್ಶನಕ್ಕೆ ಬರುತ್ತಾರೆ.

ಪ್ರಭು ಶ್ರೀರಾಮನ ಆಜ್ಞೆಯಿಂದ ಉತ್ತರ ಭಾರತದ ಮಾಣಿಕ ಬೆಟ್ಟದ ಮೇಲೆ ಧ್ಯಾನ ಸ್ಥಿತಿಯಲ್ಲಿ ಕುಳಿತಿರುವ ಶ್ರೀ ವೈಷ್ಣೋದೇವಿ !

ಶ್ರೀ ವೈಷ್ಣೋದೇವಿ (ಎಡಬದಿಯಿಂದ ದೇವಿ ಶ್ರೀ ಸರಸ್ವತಿ, ದೇವಿ ಶ್ರೀ ಲಕ್ಷ್ಮೀ ಮತ್ತು ದೇವಿ ಶ್ರೀ ಕಾಳಿ)

ಅ. ಪುರಾಣಗಳಲ್ಲಿ ದೇವಿಯ ಮಹಾತ್ಮೆಯನ್ನು ವರ್ಣಿಸಲಾಗಿದೆ. ದಕ್ಷಿಣ ಭಾರತದ ರತ್ನಾಕರ ಸಾಗರ ಇವರ ಮನೆಯಲ್ಲಿ ವೈಷ್ಣೋದೇವಿಯು ಅವತರಿಸಿದ್ದಳು. ವೈಷ್ಣೋದೇವಿಗೆ ಬಾಲ್ಯದಲ್ಲಿ ‘ತ್ರಿಕುಟಾ’ ಎಂಬ ಹೆಸರಿನಿಂದ ಕರೆಯುತ್ತಿದ್ದರು; ಆದರೆ ಭಗವಾನ ಶ್ರೀವಿಷ್ಣುವಿನ ಕುಲದಲ್ಲಿ ಜನಿಸಿರುವುದರಿಂದ ಅವಳಿಗೆ ‘ವೈಷ್ಣವೀ’ ಎಂಬ ಹೆಸರು ಬಂತು. ತ್ರಿಕುಟಾ ೯ ವರ್ಷದವಳಿದ್ದಾಗ ತಂದೆಯ ಬಳಿ ಸಮುದ್ರತೀರದಲ್ಲಿ ತಪಸ್ಸು ಮಾಡಲು ಅನುಮತಿಯನ್ನು ಕೇಳಿ ಪಡೆದಳು.

ಆ. ಸಮುದ್ರತೀರದಲ್ಲಿ ತಪಸ್ಸು ಮಾಡುತ್ತಿರುವಾಗ ತ್ರಿಕುಟಾ ರಾಮರೂಪದಲ್ಲಿದ್ದ ಶ್ರೀವಿಷ್ಣುವಿಗೆ ಪ್ರಾರ್ಥನೆಯನ್ನು ಮಾಡಿದಳು. ಸೀತೆಯನ್ನು ಹುಡುಕುತ್ತಾ ಶ್ರೀರಾಮನು ತನ್ನ ಸೈನ್ಯದೊಂದಿಗೆ ಸಮುದ್ರತೀರವನ್ನು ತಲುಪಿದನು. ಆಗ ಧ್ಯಾನಮಗ್ನಳಾಗಿರುವ ದಿವ್ಯ ಬಾಲಿಕೆಯು ಅವನ ಗಮನವನ್ನು ಸೆಳೆದಳು. ತ್ರಿಕುಟಾ ಕಣ್ಣುಗಳನ್ನು ತೆರೆದಳು. ಅವಳು ಶ್ರೀರಾಮನಿಗೆ, “ನಾನು ನಿಮ್ಮನ್ನು ನನ್ನ ಪತಿಯೆಂದು ಸ್ವೀಕರಿಸಿದ್ದೇನೆ” ಎಂದು ಹೇಳಿದಳು. ಶ್ರೀರಾಮನು ಅವಳಿಗೆ, “ಈ ಅವತಾರಕಾಲದಲ್ಲಿ ನಾನು ಕೇವಲ ಸೀತೆಯೊಂದಿಗೆ ಏಕನಿಷ್ಠವಿರುವ ಪ್ರಮಾಣ ಮಾಡಿದ್ದೇನೆ” ಎಂದು ಹೇಳಿದನು. ತದನಂತರ ಭಗವಂತನು ಅವಳಿಗೆ, “ಕಲಿಯುಗದಲ್ಲಿ ನಾನು ಕಲ್ಕಿಯ ರೂಪದಲ್ಲಿ ಅವತಾರ ತಾಳುವೆನು, ಆಗ ನಿನ್ನ ಈ ಇಚ್ಛೆಯು ಪೂರ್ಣವಾಗುವುದು,” ಎಂಬ ಆಶ್ವಾಸನೆಯನ್ನು ನೀಡಿದನು.

ಇ. ಶ್ರೀರಾಮನು ತ್ರಿಕುಟಾಳಿಗೆ ಉತ್ತರ ಭಾರತದಲ್ಲಿನ ಮಾಣಿಕ ಬೆಟ್ಟದ ಮೇಲಿನ ತ್ರಿಕುಟ ಸಾಲಿನಲ್ಲಿರುವ ಗುಹೆಯಲ್ಲಿ ಧ್ಯಾನಸ್ಥಳಾಗಿರಲು ಹೇಳಿದನು. ಅನಂತರ ಶ್ರೀರಾಮನು ರಾವಣನ ವಿರುದ್ಧ ಜಯಗೊಳಿಸಬೇಕೆಂದು ತ್ರಿಕುಟಾ ‘ನವರಾತ್ರಿ’ಯ ಉಪಾಸನೆಯನ್ನು ಮಾಡಿದಳು. ಶ್ರೀರಾಮನು ಅವಳಿಗೆ, ‘ತ್ರಿಕುಟಾ ಶ್ರೀ ವೈಷ್ಣೋದೇವಿಯ ರೂಪದಲ್ಲಿ ಪ್ರಸಿದ್ಧಳಾಗುವಳು ಮತ್ತು ಅಮರಳಾಗುವಳು. ಇಡೀ ಜಗತ್ತು ಶ್ರೀ ವೈಷ್ಣೋದೇವಿಯ ಸ್ತುತಿಯನ್ನು ಮಾಡುವುದು,’ ಎಂಬ ಆಶೀರ್ವಾದ ಕೊಟ್ಟಿದ್ದನು.

ಗುಡ್ಡದ ದಿಕ್ಕಿನಲ್ಲಿ ಕಾಣಿಸಿದ ದೇವಿಯ ರೂಪಕ್ಕೆ ನಮಸ್ಕಾರ ಮಾಡುತ್ತಿರುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಭಕ್ತ ಶ್ರೀಧರನ ಅನ್ನಸಂತರ್ಪಣೆಯಲ್ಲಿ ಬಂದ ಅಡಚಣೆಯನ್ನು ದೂರಗೊಳಿಸಿ ಭೈರವನಾಥ ಎಂಬ ರಾಕ್ಷಸನ ಕಲ್ಯಾಣವನ್ನು ಮಾಡುವ ಮಾತೆ ಶ್ರೀ ವೈಷ್ಣೋದೇವಿ !

ಅ. ಭಕ್ತ ಶ್ರೀಧರನ ಅನ್ನಸಂತರ್ಪಣೆಯಲ್ಲಿ ಬಂದ ಅಡಚಣೆಯನ್ನು ದೂರಮಾಡುವುದು

ಶ್ರೀಧರ ಎಂಬ ಹೆಸರಿನ ಶ್ರೀ ವೈಷ್ಣೋದೇವಿಯ ಭಕ್ತನಿದ್ದನು. ಒಮ್ಮೆ ಅವನಿಗೆ ದೇವಿಯು ಓರ್ವ ಸುಂದರ ಹುಡುಗಿಯ ರೂಪದಲ್ಲಿ ದರ್ಶನ ನೀಡಿ, ಭಿಕ್ಷುಕರಿಗೆ ಹಾಗೂ ಭಕ್ತರಿಗಾಗಿ ಅನ್ನಸಂತರ್ಪಣೆಯನ್ನು ಮಾಡಲು ಹೇಳಿದಳು. ಅವನ ಅನ್ನಸಂತರ್ಪಣೆಗೆ ಸ್ವಾರ್ಥಿ ಭೈರವನಾಥ ಎಂಬ ರಾಕ್ಷಸನೂ ಬಂದಿದ್ದನು, ಆದುದರಿಂದ ಶ್ರೀಧರನು ಅನ್ನಸಂತರ್ಪಣೆ ಹೇಗೆ ಆಗುವುದು ಎಂದು ಚಿಂತೆಯನ್ನು ಮಾಡುತ್ತಿದ್ದನು. ಆಗ ದೇವಿಯು ಬಾಲಿಕೆಯ ರೂಪದಲ್ಲಿ ಬಂದು ಶ್ರೀಧರನನಿಗೆ ಆಶ್ವಾಸನೆಯನ್ನು ನೀಡಿದಳು ಮತ್ತು ದೇವಿಯ ಕೃಪೆಯಿಂದ ಅನ್ನಸಂತರ್ಪಣೆ ಯಾವುದೂ ಅಡಚಣೆಯಿಲ್ಲದೇ ನೆರವೇರಿತು.

ಆ. ಶ್ರೀ ವೈಷ್ಣೋದೇವಿಯ ಬಾಣದಿಂದ ಉಗಮವಾದ ಬಾಣಗಂಗಾ ನದಿ !

ಭೈರವನಾಥನಿಗೆ ಬಾಲಿಕೆಯಲ್ಲಿ ಅಲೌಕಿಕ ಶಕ್ತಿಯಿರುವುದು ಗಮನಕ್ಕೆ ಬಂದಿತು. ಅವನು ಅವಳನ್ನು ದೇವಿಯ ಅವತಾರವೆಂದು ತಿಳಿದುಕೊಂಡನು. ಅವನು ದೇವಿಯ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದನು. ಅವನು ಆ ದಿವ್ಯ ಬಾಲಿಕೆಯನ್ನು ೯ ತಿಂಗಳು ಹುಡುಕಿದನು. ಭೈರವನಿಂದ ದೂರ ಓಡಿ ಹೋಗುವಾಗ ದೇವಿಯು ಪೃಥ್ವಿಯ ಮೇಲೆ ಒಂದು ಬಾಣವನ್ನು ಬಿಟ್ಟಳು. ಅದರಿಂದ ನೀರು ಹೊರಗೆ ಚಿಮ್ಮಿತು. ಇದನ್ನೇ ‘ಬಾಣಗಂಗಾ’ ನದಿಯೆಂದು ಗುರುತಿಸಲಾಗುತ್ತದೆ. ಈ ನದಿಯ ತೀರದಲ್ಲಿ ದೇವಿಯ ಹೆಜ್ಜೆಗಳ ಗುರುತುಗಳಿವೆ. ಅವು ಇಂದಿಗೂ ಹಾಗೆಯೇ ಇವೆ. ಅವುಗಳನ್ನು ‘ಚರಣಪಾದುಕಾ’ ಎಂದು ಕರೆಯಲಾಗುತ್ತದೆ.

ಇ. ತಪಸ್ಸು ಭಂಗಪಡಿಸಿದ್ದರಿಂದ ಭೈರವನಾಥ ರಾಕ್ಷಸನ ತಲೆಯನ್ನು ದೇಹದಿಂದ ಬೇರೆ ಮಾಡುವುದು

ಶ್ರೀ ವೈಷ್ಣೋದೇವಿಯು ೯ ತಿಂಗಳು ತಪಸ್ಸು ಮಾಡಿ ಆಧ್ಯಾತ್ಮಿಕ ಜ್ಞಾನ ಮತ್ತು ಶಕ್ತಿಯನ್ನು ಪ್ರಾಪ್ತಮಾಡಿಕೊಂಡಳು. ಭೈರವನಾಥನಿಗೆ ವೈಷ್ಣೋದೇವಿಯ ತಪಸ್ಸು ಮಾಡುವ ಸ್ಥಳ ತಿಳಿಯಿತು, ಇದರಿಂದ ಅವಳ ತಪಸ್ಸು ಭಂಗವಾಯಿತು. ಕೊನೆಗೆ ದೇವಿಯು ಶ್ರೀ ಮಹಾಕಾಳಿಯ ರೂಪವನ್ನು ತಾಳಿ ಭೈರವನಾಥನ ತಲೆಯನ್ನು ದೇಹದಿಂದ ಬೇರೆ ಮಾಡಿದಳು. ಅವನ ತಲೆಯು ಪವಿತ್ರ ಗುಹೆಯಿಂದ ಎರಡೂವರೆ ಕಿಲೋಮೀಟರ್ ದೂರದಲ್ಲಿ ಹೋಗಿ ಬಿದ್ದಿತು. ಆ ಸ್ಥಳದಲ್ಲಿ ಶ್ರೀ ಭೈರವನಾಥನ ದೇವಸ್ಥಾನವಿದೆ.

ಈ. ಭೈರವನಾಥನ ಮೋಕ್ಷಪ್ರಾಪ್ತಿಯ ಇಚ್ಛೆಯನ್ನು ಅರಿತು ಅವನನ್ನು ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತಗೊಳಿಸುವುದು

ಭೈರವನಾಥನು ಮೋಕ್ಷ ಸಿಗಬೇಕೆಂದು ಅವಳ ತಪಸ್ಸನ್ನು ಭಂಗಗೊಳಿಸಿದ್ದನು, ಇದು ದೇವಿಗೆ ತಿಳಿದಿತ್ತು. ಆದುದರಿಂದ ದೇವಿಯು ಅವನನ್ನು ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತಗೊಳಿಸಿದಳು ಮತ್ತು ‘ಎಲ್ಲಿಯವರೆಗೆ ಭಕ್ತರು ನನ್ನ ದರ್ಶನದ ನಂತರ ನಿನ್ನ ದರ್ಶನವನ್ನು ಪಡೆಯುವುದಿಲ್ಲವೋ, ಅಲ್ಲಿಯವರೆಗೆ ಅವರಿಗೆ ನನ್ನ ದರ್ಶನದ ಸಂಪೂರ್ಣ ಫಲಪ್ರಾಪ್ತಿ ಆಗುವುದಿಲ್ಲ’ ಎಂಬ ವರವನ್ನೂ ನೀಡಿದಳು. ಇದೇ ಸಮಯದಲ್ಲಿ ವೈಷ್ಣೋದೇವಿಯು ೩ ಪಿಂಡಿಗಳೊಂದಿಗೆ (ತಲೆಗಳೊಂದಿಗೆ) ಒಂದು ದೊಡ್ಡ ಶಿಲೆಯ ಆಕಾರವನ್ನು ತಾಳಿದಳು ಮತ್ತು ಧ್ಯಾನಮಗ್ನಳಾದಳು. ಈಗ ಶ್ರೀ ವೈಷ್ಣೋದೇವಿ ಮಾತೆಯ ದೇವಸ್ಥಾನದಲ್ಲಿ ಎಲ್ಲರಿಗೂ ಇದೇ ಶಿಲೆಯ ದರ್ಶನ ಸಿಗುತ್ತದೆ.

ಮುಂದೆ ಭಕ್ತ ಶ್ರೀಧರನು ದೇವಿಯನ್ನು ಹುಡುಕುತ್ತ ಇಲ್ಲಿಗೆ ಬಂದನು. ಅವನು ಅಲ್ಲಿಯೇ ಆ ಶಿಲೆಯ ರೂಪದಲ್ಲಿರುವ ದೇವಿಯ ಸೇವೆಯಲ್ಲಿ ತಲ್ಲೀನನಾದನು. ಅಂದಿನಿಂದ ಶ್ರೀಧರನ ಮನೆತನವು ಅನೇಕ ಪೀಳಿಗೆಗಳಿಂದ ದೇವಿಯ ಅರ್ಚಕರೆಂದು ಸೇವೆಯನ್ನು ಸಲ್ಲಿಸುತ್ತಿದೆ.

ಯಾವ ಸ್ಥಳದಲ್ಲಿ ಶ್ರೀ ವೈಷ್ಣೋದೇವಿಯು ಭೈರವನಾಥನನ್ನು ವಧಿಸಿದಳೋ, ಆ ಸ್ಥಳವು ‘ಭವನ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಸ್ಥಳದಲ್ಲಿ ದೇವಿ ಶ್ರೀ ಕಾಳಿ (ಬಲಬದಿಗೆ), ದೇವಿ ಶ್ರೀ ಸರಸ್ವತಿ (ಎಡಬದಿಗೆ) ಮತ್ತು ದೇವಿ ಶ್ರೀ ಲಕ್ಷ್ಮೀ (ಮಧ್ಯಭಾಗದಲ್ಲಿ) ಪಿಂಡಿಯ ರೂಪದಲ್ಲಿ ಗುಹೆಯಲ್ಲಿ ವಿರಾಜಮಾನರಾಗಿದ್ದಾರೆ. ಒಟ್ಟಿಗಿರುವ ಈ ಪಿಂಡಗಳ ರೂಪಕ್ಕೆ ವೈಷ್ಣೋದೇವಿ ಎನ್ನಲಾಗುತ್ತದೆ.

(ಆಧಾರ : ಜಾಲತಾಣ)

Leave a Comment