ಪಾಕಿಸ್ತಾನದಲ್ಲಿರುವ ಶಕ್ತಿಪೀಠ ಶ್ರೀ ಹಿಂಗಲಾಜಮಾತಾ

ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಹಿಂಗಲಾಜಮಾತಾ

ಹಿಂಗಲಾಜಮಾತಾ ದೇವಸ್ಥಾನವು ೫೧ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಅದು ಪಾಕಿಸ್ತಾನದಲ್ಲಿದೆ. ಈ ಸ್ಥಳದಲ್ಲಿ ಸತಿಯ ಬ್ರಹ್ಮರಂಧ್ರವು (ತಲೆ) ಬಿದ್ದಿತ್ತು. ಅದು ಬಲುಚಿಸ್ತಾನದ ಲಾರಿ ತಾಲೂಕಿನಲ್ಲಿ ಒಂದು ದಟ್ಟವಾದ ಕಣಿವೆಪ್ರದೇಶದಲ್ಲಿದೆ. ಹಿಂಗೋಲ ನದಿಯ ತೀರದಲ್ಲಿ ಮತ್ತು ಮಕರಾನ ಮರುಭೂಮಿಯ ಖೇರಥಾರ ಎಂಬ ಬೆಟ್ಟಗಳಲ್ಲಿ ನೆಲೆಸಿರುವ ಶ್ರೀ ಹಿಂಗಲಾಜಮಾತೆಯ ದೇವಸ್ಥಾನವು ಕೋಟ್ಯಂತರ ಹಿಂದೂಗಳ ಶ್ರದ್ಧಾಸ್ಥಾನವಾಗಿದೆ.

ಶ್ರೀ ಹಿಂಗಲಾಜಮಾತೆಯ ಸ್ವಯಂಭೂ ಶಿಲೆ

ಶ್ರೀ ಹಿಂಗಲಾಜಮಾತೆಯ ದೇವಸ್ಥಾನವು ಒಂದು ನೈಸರ್ಗಿಕ ಗುಹೆಯಲ್ಲಿದೆ. ದೇವಸ್ಥಾನದಲ್ಲಿ ಒಂದು ಮಣ್ಣಿನ ಯಜ್ಞವೇದಿಯಿದೆ. ಈ ದೇವಸ್ಥಾನದಲ್ಲಿ ದೇವಿಯ ಮೂರ್ತಿಯಿರದೇ ಸ್ವಯಂಭೂ ಶಿಲೆಯಿದೆ. ಈ ಶಿಲೆಯನ್ನು ಸಿಂಧೂರದಿಂದ ಅಲಂಕರಿಸಲಾಗಿದೆ. ಅದಕ್ಕೆ ಸಂಸ್ಕೃತದಲ್ಲಿ ‘ಹಿಂಗುಲಾ’ ಎನ್ನುತ್ತಾರೆ. ಅಂದಿನಿಂದ ಬಹುಶಃ ಶ್ರೀ ಹಿಂಗಲಾಜಮಾತೆಗೆ ಈ ಹೆಸರು ಲಭಿಸಿರಬಹುದು. ಈ ಪ್ರದೇಶದಲ್ಲಿ ಶ್ರೀ ಹಿಂಗಲಾಜದೇವಿಗೆ ‘ಹಿಂಗುಲಾದೇವಿ’ ಎಂದು ಕರೆಯುತ್ತಾರೆ. ಕಳೆದ ೩ ದಶಮಾನಗಳಲ್ಲಿ ಈ ದೇವಸ್ಥಾನವು ತುಂಬಾ ಜನಪ್ರಿಯವಾಗಿದೆ. ಡೋಡಿಯಾ ರಾಜಪೂತರಿಗೆ ದೇವಿಯು ಪ್ರಥಮ ಕುಲದೇವಿಯೆಂದು ಪೂಜನೀಯಳಾಗಿದ್ದಾಳೆ. ಈ ಪರಿಸರದಲ್ಲಿ ಹಿಂಗಲಾಜದೇವಿಯ ದೇವಸ್ಥಾನವಲ್ಲದೇ ಇತರ ಪೂಜಾಸ್ಥಳಗಳಿವೆ.

(ಆಧಾರ : ಜಾಲತಾಣ)

Leave a Comment