ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಇತಿಹಾಸ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಮುಲ್ಕಿಯಲ್ಲಿದ್ದು ಸಾಂಪ್ರದಾಯಕವಾಗಿ ಸಾಮಾಜಿಕವಾಗಿ ವೇದಘೋಷಗಳೊಂದಿಗೆ ಎಲ್ಲ ವರ್ಗದ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ರಥವನ್ನು ಮೊಗವೀರರು ಅಲಂಕರಿಸುತ್ತಾರೆ. ಕೊರಗರ ಕೋಲುಕುಣಿತ, ಬ್ರಾಹ್ಮಣರ ವೇದಘೋಷಗಳಿಂದ ಮತ್ತು ಆಗಾಮ; ಜೈನರು, ಮುಸ್ಲಿಂರು ಭಾಗವಹಿಸುತ್ತಾರೆ ದೇವಸ್ಥಾನದ ಆಡಳಿತ ಮಂಡಳಿಯು ಆಟೋಟಗಳ ಸ್ವರ್ಧೆಗಳನ್ನು ಏರ್ಪಡಿಸುತ್ತದೆ. ಅವುಗಳೆಂದರೆ ಹಗ್ಗದ ಓಟ ತುಳಿದಾರ.

ಬಪ್ಪ ಬ್ಯಾರಿ ಎಂಬ ಕೇರಳ ಮುಸಲ್ಮಾನ ವ್ಯಾಪಾರಿಯು ದೇವಸ್ಥಾನವನ್ನು ಕಟ್ಟಿರುವರು. ಇದು ದೇವಿಯ ಮಹಿಮೆಯನ್ನು ತಿಳಿಸುತ್ತದೆ. ಮುಲ್ಕಿ ನದಿಯ ಪ್ರವಾಹದಲ್ಲಿ ದೇವಸ್ಥಾನವು ನಶಿಸಿತು. ಆದರೆ ೫ ಲಿಂಗಗಳ ಪೀಠಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಒಂದು ದಿನ ಬಪ್ಪ ಬ್ಯಾರಿ ಹಡಗು ಆ ಕಲ್ಲುಗಳಿಗೆ ಡಿಕ್ಕಿ ಹೊಡೆಯಿತು. ಆಗ ಅವನಿಗೆ ದುರ್ಗಾದೇವಿಯು ಕನಸಿನಲ್ಲಿ ಬಂದು ಆ ಲಿಂಗಗಳಿಗೆ ದೇವಸ್ಥಾನವನ್ನು ಕಟ್ಟಲು ಹೇಳಿದಂತಾಯಿತು. ಆದ್ದರಿಂದ ಈ ಸ್ಥಳವನ್ನು ಬಪ್ಪ ಎಂದು ಕರೆಯುತ್ತಾರೆ.

ಆ ೫ ಲಿಂಗಗಳು ಯಾವುವೆಂದರೆ ಮೂಲ ದುರ್ಗ, ಅಗ್ನಿ ದುರ್ಗ, ಜಲದುರ್ಗ, ವನದುರ್ಗ, ಆಗ್ರಾದುರ್ಗ ಇವೆಲ್ಲವುಗಳು ಒಂದೇ ಪಾಣಿಪೀಠದಲ್ಲಿ ಸ್ಥಾಪಿಸಿದ್ದಾರೆ. ಮುಖ್ಯವಾದ ಹಬ್ಬಗಳು ಯಾವುವೆಂದರೆ ಕಾರ್ತಿಕ ಪೂಜಾ ದೀಪೋತ್ಸವ, ಶರನ ನವರಾತ್ರಿ ಯುಗಾದಿ ಮತ್ತು ಶುಕ್ರವಾರ ವಿಶೇಷ ಪೂಜೆಗಳು ಜಾತ್ರೆಯು ಮಾರ್ಚ್-ಏಪ್ರಿಲ್‌ಗಳಲ್ಲಿ ೯ ದಿನಗಳು ನಡೆಯುತ್ತವೆ. ಅದೇ ಸಮಯದಲ್ಲಿ ೨ ಗುಂಪುಗಳ ನಡುವೆ ನಡೆಯುವ ತುಳಿದಾರ ಆಟವು ಭಕ್ತಾದಿಗಳಲ್ಲಿ ಆನಂದವನ್ನು ತರುತ್ತವೆ. ದೇವಸ್ಥಾನವು ೫ ರಥಗಳನ್ನು ಹೊಂದಿದೆ. ಮತ್ತು ಬ್ರಹ್ಮರಥವು ತುಂಬಾ ಎತ್ತರ ಮತ್ತು ಗಟ್ಟಿಯಾಗಿದೆ.

ಬಪ್ಪ ಬ್ಯಾರಿ ಮನೆತನದವರು ಉತ್ಸವಗಳಲ್ಲಿ ಪ್ರಸಾದವನ್ನು ಹಂಚುತ್ತಾರೆ ಈ ಮನೆತನದವರು ಹೂವು ಹಣ್ಣುಗಳನ್ನು ಅರ್ಪಿಸುತ್ತಾರೆ. ಇದರಿಂದ ಮತ ಬೇಧವಿಲ್ಲದೆ ಇಲ್ಲಿನ ಉತ್ಸವ ನಡೆಯುತ್ತಾ ಬಂದಿದೆ.

ಹಬ್ಬಗಳು ಮತ್ತು ಉತ್ಸವಗಳು

ಪಥ ನಜೆ

ಪಥನಜೆಯು ವೃಷಭ ಮಾಸದ ೧೦ನೇ ದಿನ ಆಚರಿಸುತ್ತಾರೆ. ವಸಂತ ಪೂಜೆಯನ್ನು ದೇವಿಗೆ ಯುಗಾದಿಯಿಂದ ಪಥನಜೆಯವರೆಗೆ ಮಾಡುವರು. ಈ ದಿನದಂದು ದೊಡ್ಡರಂಗ ಪೂಜೆಯನ್ನು ದೇವಿಗೆ ಸಲ್ಲಿಸುತ್ತಾರೆ. ಅದರ ನಂತರ ಬಲಿ ಉತ್ಸವ ಮತ್ತು ಓಲಗಪೂಜೆ ಮಾಡುತ್ತಾರೆ. ನಂತರ ಪ್ರಸಾದವನ್ನು ಹಂಚುತ್ತಾರೆ. ಬಲಿ ದೇವರು ಪಥನಜೆಯ ದಿವಸ ಗರ್ಭ ಗುಡಿಯಲ್ಲಿ ಸ್ಥಾಪಿತನಾಗಿ ದೀಪಾವಳಿಯ ದಿವಸ ಹೊರಬರುವರು.

ಶರನ್ನವರಾತ್ರಿ

ಶರನ್ನವರಾತ್ರಿಯನ್ನು ಆಶ್ವಿಜ ಶುದ್ದ ಪ್ರತಿಪದೆಯಿಂದ ಮಹಾನವಮಿಯವರೆಗೆ ಆಚರಿಸುತ್ತಾರೆ. ಈ ದಿನ ದೇವಿ ಮಹಾತ್ಮೆಯ ಕಥೆಯ ಪಠನ, ವೇದ ಪಾರಾಯಣ, ಪುರಾಣವಚನವನ್ನು ಬೋಧಿಸುತ್ತಾರೆ. ದೇವತೆಯನ್ನು ವಿವಿಧ ರೀತಿಯಲ್ಲಿ ಅಲಂಕರಿಸುತ್ತಾರೆ, ಮತ್ತು ಕಾರ್ಥಿ ಪೂಜೆ, ಕನ್ನಿಕ ಪೂಜೆಯನ್ನು ಪ್ರತಿದಿನ ಮಾಡುತ್ತಾರೆ. ಮಧ್ಯಾಹ್ನದ ನಂತರ ಮಹಾಪೂಜೆಯನ್ನು ಮಾಡುತ್ತಾರೆ. ಮತ್ತು ಸಿಹಿಗಳನ್ನು ದೇವರಿಗೆ ಅರ್ಪಿಸುತ್ತಾರೆ. ಸಂಜೆಯ ಸಮಯದಲ್ಲಿ ನಡುರಂಗ ಪೂಜೆ ಮತ್ತು ಮಹಾಪೂಜೆಯನ್ನು ಮಾಡುತ್ತಾರೆ. ಮಹಾನವಮಿಯ ದಿವಸ ಮಹಾ ಚಂಡಿಕಯಾಗವನ್ನು ಮಾಡುತ್ತಾರೆ ಮತ್ತು ಪುಸ್ತಕ ವಿಸರ್ಜನೆ ಪೂಜೆಯು ಶ್ರವಣ ನಕ್ಷತ್ರದ ರಾತ್ರಿಯ ಹೊತ್ತಿನಲ್ಲಿ ಆಚರಿಸುತ್ತಾರೆ. ವಿಜಯದಶಮಿಯ ದಿವಸ ಮಹಾ ಮಂತ್ರಾಕ್ಷತೆಯನ್ನು ಮಧ್ಯಾಹ್ನನದ ನಂತರ ಆಚರಿಸುತ್ತಾರೆ.

ದೀಪಾವಳಿ

ದೀಪಾವಳಿಯನ್ನು ಆಶ್ವಿಜ ಬಹುಳ ಅಮವಾಸ್ಯೆಯ ದಿವಸ ಆಚರಿಸುತ್ತಾರೆ. ಈ ದಿವಸದಂದು ದೊಡ್ಡರಂಗಪೂಜೆ, ಬಲಿಂದ್ರ ಪೂಜೆ ಮತ್ತು ದೀಪಾರಾಧನೆಯನ್ನು ರಾತ್ರಿಯ ಹೊತ್ತಿನಲ್ಲಿ ಆಚರಿಸುತ್ತಾರೆ. ಬಲಿಯನ್ನು ಚಿನ್ನ ಪ್ರಭಾವಳಿ ಮತ್ತು ವಿವಿಧ ಚಿನ್ನದ ಆಭರಣಗಳಿಂದ ಅಲಂಕರಿಸುತ್ತಾರೆ ದೇವರನ್ನು ಗರ್ಭಗುಡಿಯಿಂದ ತಂದು ಉತ್ಸವವನ್ನು ಪ್ರಾರಂಭ ಮಾಡುತ್ತಾರೆ. ನಿತ್ಯ ಬಲಿಯು ಸಹ ಈ ದಿನದಂದು ಪ್ರಾರಂಭ ಮಾಡುತ್ತಾರೆ.

ದೀಪೋತ್ಸವ

ತುಳಸಿ ಪೂಜೆ ಮತ್ತು ಉತ್ಸವ ಬಲಿಯನ್ನು ಕಾರ್ತಿಕ ಶುದ್ದ ದ್ವಾದಶಿಯಿಂದ ಹುಣ್ಣಿಮೆವರೆಗೂ ಮತ್ತು ಅಮವಾಸ್ಯೆಯ ದಿನದಂದು ಆಚರಿಸುತ್ತಾರೆ. ದೀಪೋತ್ಸವವನ್ನು ಆಚರಿಸುತ್ತಾರೆ. ಈ ದಿವಸದಂದು ವನಭೋಜ ಶ್ರೀವೆಂಕಟರಮಣ ದೇವಸ್ಥಾನದಿಂದ ಈ ದೇವಸ್ಥಾನಕ್ಕೆ ಉತ್ಸವ ಮೂರ್ತಿಯು ಬರುತ್ತದೆ.

ಬಲಿ ಉತ್ಸವ ಸೇವೆ

ದೇವಿಯ ಸನ್ನಿಧಿಯಲ್ಲಿ ಬಲಿ ಉತ್ಸವ ಸೇವೆಯನ್ನು ಆಚರಿಸುತ್ತಾರೆ. ಶುದ್ದ ದ್ವಾದಶಿಯ ಕುಂಭಮಾಸದಲ್ಲಿ ದೊಡ್ಡರಂಗಪೂಜೆಯನ್ನು ಸಂಜೆಯ ವೇಳೆಯಲ್ಲಿ ಮತ್ತು ಬಲಿಮೂರ್ತಿಯನ್ನು ಪ್ರಭಾವಳಿ ಮತ್ತು ಒಡವೆಗಳಿಂದ ಅಲಂಕರಿಸುತ್ತಾರೆ. ಮೀನಾಮಾಸದ ಶುದ್ದಚತುರ್ಥಿಯ ದಿವಸ ಮತ್ತು ಧ್ವಜಾರೋಹಣ ಉತ್ಸವ ಬಲಿಯನ್ನು ೧೫ ದಿನಗಳ ಕಾಲ ಆಚರಿಸುತ್ತಾರೆ.

ಅಂಕುರಾದಿ ದೇವಿಕೋತ್ಸವ

ಮೀನ ಮಾಸದ ಶುದ್ದ ತ್ರಯೋದಶಿಯ ದಿವಸ ಅಂಕುರಾದಿ ದೇವಿಕೋತ್ಸವವನ್ನು ಆಚರಿಸುತ್ತಾರೆ. ರಾತ್ರಿಯಲ್ಲಿ ಬಲಿ ಉತ್ಸವದ ನಂತರ ತಂತ್ರಿ, ಆರ್ಚಕ, ಕಾರ್ಯನಿರ್ವಾಹಣಾಧಿಕಾರಿಗಳು ಖಜಾನೆ ಕೀಲಿಯನ್ನು ತೆಗೆದುಕೊಂಡು ಶ್ರೀದೇವಿಯ ರೇಷ್ಮೆಪೀತಾಂಬರಿ ಮತ್ತು ಒಡವೆಗಳನ್ನು ಕಂಬಳದ ಮೈದಾನಕ್ಕೆ ತೆಗೆದುಕೊಂಡು ಹೋಗಿ ಭೂಮಿ ಪೂಜೆಯನ್ನು ಮಾಡುತ್ತಾರೆ. ಆನಂತರ ಕೀಲಿಯನ್ನು, ಪೀತಾಂಬರವನ್ನು ಮತ್ತು ಒಡವೆಯನ್ನು ಬೆಳ್ಳಿಯ ತಟ್ಟೆಯಲ್ಲಿ ದೇವಸ್ಥಾನಕ್ಕೆ ತರಲಾಗುವುದು. ಆನಂತರ ದಿನ ನಿತ್ಯ ಅಂಕುರ ಪೂಜೆಯನ್ನು ಮಾಡಲಾಗುತ್ತದೆ. ಮತ್ತು ವಿಸರ್ಜನೆ ಪೂಜೆಯನ್ನು ಹಗಲು ರಥೋತ್ಸವ ದಿನದಂದು ಮಾಡುತ್ತಾರೆ. ಜಾತ್ರೆಯ ಮೊದಲನೆಯ ದಿನದಂದು ಹೊತ್ತಿಸಿದ ಸಿಂಹಯಾಗದ ಅಗ್ನಿಯನ್ನು ಕೊನೆಯ ದಿನದವರೆಗೂ ಆರಿಹೋಗದಂತೆ ನೋಡಿಕೊಳ್ಳುತ್ತಾರೆ. ಧ್ವಜಾರೋಹಣದ ನಂತರ ಬಪ್ಪನಾಡು ಜಾತ್ರೆಯನ್ನು ೮ ದಿನಗಳು ವಿಜೃಂಭಣೆಯಿಂದ ಆಚರಿಸುತ್ತಾರೆ.

ಧ್ವಜಾರೋಹಣ 

ಮೀನಮಾಸದ ಶುದ್ದ ಚತುರ್ದಶಿಯ ದಿವಸ ನಡೆಯುತ್ತದೆ. ದೇವಿಯನ್ನು ಬಂಗಾರದ ವಡವೆಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಶ್ರೀ ಭಗವತಿ ಪರಿವಾರವು ಸಸಿಹಿತ್ತಲಿನಿಂದ ಮತ್ತು ಶ್ರೀ ಜಾರಂದಾಯ ದೈವ ಕೊಲಚಿಕಂಬದಿಂದಲೂ ದೇವಿಯ ದರ್ಶನಕ್ಕೆ ಬರುತ್ತಾರೆ. ಇದರ ನಂತರ ಬೆಳ್ಳಿಯ ಗರುಡನನ್ನು ಧ್ವಜಸ್ತಂಭದ ಮೇಲೆರಿಸುತ್ತಾರೆ. ಇದರ ದರ್ಶನದ ನಂತರ ಪ್ರಸಾದ ವಿನಿಯೋಗ ನಡೆಯುತ್ತದೆ. ಗುಡಿಯಲ್ಲಿ ಒಲಗ ಪೂಜೆ ನವಕಲಶಾಭಿಷೇಕ, ಮಹಾಪೂಜೆ, ನಿತ್ಯ ಬಲಿ ಪೂಜೆ ನಡೆಯುತ್ತದೆ. ನಂತರ ಭಕ್ತಾದಿಗಳಿಗೆ ಭೋಜನವನ್ನು ಏರ್ಪಡಿಸುತ್ತಾರೆ. ಸಾಯಂಕಾಲ ಬಲಿ ಉತ್ಸವ, ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವವನ್ನು ಮಾಡುವರು. ನಿತ್ಯ ಬಲಿ ಪೂಜೆಯ ನಂತರ ಪ್ರಭಾವಳಿ ಮತ್ತು ವಡವೆಗಳಿಂದ ಅಲಂಕರಿಸುತ್ತಾರೆ. ಭೂತಬಲಿಯನ್ನು ಮಧ್ಯರಾತ್ರಿಯಲ್ಲಿ ಮಾಡುತ್ತಾರೆ. ಬೆಳಿಗ್ಗೆ ಆಯನದ ದೀಪೋತ್ಸವ ಬಲಿ, ಸಣ್ಣ ರಥೋತ್ಸವವನ್ನು ಆಚರಿಸುತ್ತಾರೆ. ರಥದಲ್ಲಿರುವ ದೇವಿಗೆ ಹೂವುಗಳ ಪೂಜೆಯನ್ನು ಆಚರಿಸುತ್ತಾರೆ. ಇದಾದ ನಂತರ ಎರಡನೇ ದಿನ ಬಲಿ ಉತ್ಸವ ಮತ್ತು ಆಯನದ ದೀಪೋತ್ಸವ; ಮೂರನೇ ದಿನ ಪೇಟೆ ಸವಾರಿ, ಪಲ್ಲಕ್ಕಿ ಸವರಿ; ನಾಲ್ಕನೇ ದಿನ ಬೊಂಬೆ ರಥೋತ್ಸವ ಪಲ್ಲಕ್ಕಿ ಉತ್ಸವ ಕೊಪ್ಪಲ ಸವಾರಿ; ಐದನೇ ದಿನ ಬಾಕಿಮಾರು ದೀಪೋತ್ಸವ; ಆರನೇ ದಿನ ಕೆರೆ ದೀಪೋತ್ಸವ; ಏಳನೇ ದಿನ ಹಗಲು ರಥರೋಹಣ, ರಾತ್ರಿಚಂದ್ರ ಮಂಡಲ ಉತ್ಸವ, ಶಯನೋತ್ಸವ ನಡೆಯುತ್ತವೆ.

ಕವಾಟೋಧ್ಘಾಟನೆ ಬ್ರಹ್ಮ ರಥೋತ್ಸವ, ಅವಭೃತ

ಜಾತ್ರೆಯ ೮ನೇ ದಿನದಲ್ಲಿ ಕವಾಟೋಧ್ಘಾಟನೆ (ದೇವಸ್ಥಾನದ ಬಾಗಿಲು ತೆಗೆಯುವುದು) ಮುಂಜಾನೆ ನಡೆಯುತ್ತದೆ. ಆ ದಿನ ಶ್ರೀ ದೇವಿ ದರ್ಶನ ತುಂಬಾ ಪುಣ್ಯಕರ. ಆ ದಿನದಲ್ಲಿ ಪಂಚಾಮೃತಾಭಿಷೇಕ, ದೇವಿಗೆ ಬಿಸಿನೀರಿನ ಜಳಕ, ಮಹೋತ್ಸವದ ವಿಶೇಷ ಪೂಜೆಯನ್ನು ಮಾಡುತ್ತಾರೆ. ಭಕ್ತಾದಿಗಳು ಹಣ್ಣುಗಳನ್ನು ನೈವೆದ್ಯಕ್ಕೆ ಅರ್ಪಿಸಿ ಪ್ರಸಾದವನ್ನು ಪಡೆಯುತ್ತಾರೆ. ಆಂದು ತುಲಾಭಾರ ಸೇವೆ ನಡೆಯುತ್ತದೆ.

ಅಂದಿನ ರಾತ್ರಿ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ಉತ್ಸವಕ್ಕೆ ತೆಗೆದುಕೊಂಡು ಹೋಗುತ್ತಾರೆ. ಬಳಿಕ ವಸಂತಮಂಟಪದಲ್ಲಿ ಪೂಜೆ ನಡೆಯುತ್ತದೆ. ಭಕ್ತಾಧಿಗಳು ಇದರ ಜೊತೆಗೆ ಬಕಳಿ ಬಾತ್ ಮತ್ತು ಉರುಳು ಸೇವೆ ಮಾಡುತ್ತಾರೆ ನಂತರ ಶ್ರೀದೇವಿ ಉತ್ಸವವು ಮಲ್ಕಿ ನಗರದಲ್ಲಿ ಹಾದುಹೋಗುತ್ತದೆ. ಬಪ್ಪಬ್ಯಾರಿ ಮನೆತನದವರು ಹೂ ಮತ್ತು ಹಣ್ಣುಗಳನ್ನು ದೇವಿಗೆ ಅರ್ಪಿಸುತ್ತಾರೆ. ನಂತರ ಭಕ್ತಾದಿಗಳಿಗೆ ಪ್ರಸಾದ ಹಂಚುತ್ತಾರೆ. ನಂತರ ಶ್ರೀ ದೇವಿಯು ಬಪ್ಪನಾಡು ರಸ್ತೆಗೆ ಬಂದಾಗ ಬ್ರಹ್ಮರಥ ಮತ್ತು ಭಗವತಿ ಪರಿವಾರ, ಹಳ್ಳಿಯ ಸಾವಚಿತರು ಅಲ್ಲಿಗೆ ಬರುತ್ತಾರೆ. ಅನಂತರ ಮಹಾಮಂಗಳಾರತಿ ನಡೆಯುತ್ತಿದೆ. ನಂತರ ದೇವಸ್ಥಾನ ಸುತ್ತಲು ಸುತ್ತುತ್ತದೆ.

ರಥೋತ್ಸವ ನಡೆದ ನಂತರ ದೇವಿ ಸೇವೆ ಮಾಡುತ್ತಾರೆ. ಮಹಾಮಂಗಳಾರತಿ ನಂತರ ದೇವಿಯನ್ನು ಪಲ್ಲಕ್ಕಿಯಲ್ಲಿ ಕೂರಿಸುತ್ತಾರೆ. ಕಟ್ಟೆಪೂಜೆಯನ್ನು ಚಂದ್ರ ಸೇನಾಕುದುರ, ಶಾಂಭವಿ ನದಿಯ ಉತ್ತರದ ದ್ವೀಪದಲ್ಲಿ ಆಚರಿಸುತ್ತಾರೆ. ದೇವಿಯ ಉತ್ಸವ ಮೂರ್ತಿಗೆ ಸ್ನಾನ ಮಾಡಿಸುತ್ತಾರೆ. ತಂತ್ರಿ ಮತ್ತು ಪರಿಚಕ್ರಗಳು ಆದಾದ ನಂತರ ಕನಕ ವಿಸರ್ಜನೆ, ಕಟ್ಟೆಪೂಜೆ, ಭಗವತಿಯ ವಿಶೇಷ ದರ್ಶನ ಮತ್ತು ಪ್ರಸಾದವನ್ನು ಆದವೂರು ಮಠ ಉಡುಪಿಯವರು ಹಂಚುವರು. ನಂತರ ದೇವರನ್ನು ವಿಮಾನ ರಥದಲ್ಲಿ ಕೂರಿಸಿ ದೇವಸ್ಥಾನಕ್ಕೆ ವಾಪಸ್ಸು ಆಗುವರು. ನಂತರ ತೋಟದಾರ ಸೇವೆಯನ್ನು ಬಪ್ಪನಾಡು ಮತ್ತು ಕರುನಾಡು ಗುಂಪಿನವರು ಸೇವೆ ಸಲ್ಲಿಸುವರು. ಭಗವತಿ ಪರಿವಾರ ಕೂಡ ರಥದ ಜೊತೆ ವಾಪಸ್ಸಾಗುವರು. ಕಟ್ಟೆಪೂಜೆಯನ್ನು ನಂತರ ಪದುಮನೆ ಕಟ್ಟೆ ರಥ ದೇವಸ್ಥಾನಕ್ಕೆ ವಾಪಸ್ಸಾಗುವುದು.

ದೇವಸ್ಥಾನದಲ್ಲಿ ಜಳಕದ ದರ್ಶನ, ಬಲಿ ಮತ್ತು ಪ್ರಸಾದವನ್ನು ಶ್ರೀ ಭಗವತಿ ಮತ್ತು ಭಕ್ತಾದಿಗಳಿಗೆ ಹಂಚಿದ ನಂತರ ದೇವರನ್ನು ಚಂದ್ರಮಂಡಲ ರಥದಲ್ಲಿ ಇಡುವರು. ನಂತರ ಮಂಗಳಾರತಿ ಮಾಡುವರು. ರಥ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವುದು. ವಸಂತ ಮಂಟಪದಲ್ಲಿ ದೇವರನ್ನು ಇಟ್ಟು ನಂತರ ಯಾಗದ ಪುರ್ಣಾಹುತಿ ಕೊಡಿಪೂಜೆ ಧ್ವಜಾವರೋಹಣ ಮಾಡುವರು. ನಂತರ ದೇವಸ್ಥಾನಕ್ಕೆ ವಾಪಸ್ಸು ಆಗುವರು. ಬಳಿಕ ಓಲಗ ಪೂಜೆ, ಮಹಾಪೂಜೆ, ನಿತ್ಯ ಬಲಿ ಮಾಡುವರು.

ಮರುದಿನ ಭಕ್ತಾದಿಗಳು ಕಾರ್ತಿಪೂಜೆ, ಕುಂಕುಮಾರ್ಚನೆ ಹಣ್ಣು ಕಾÄ ಸೇವೆಯನ್ನು ದೇವಿಗೆ ಅರ್ಪಿಸುವರು, ನಂತರ ೨೫ ಕಳಶಾಭಿಷೇಕ ಶುದ್ಧೀಕರಣ ಸಂಪ್ರೋಕ್ಷಣೆ ಮಾಡಲಾಗುತ್ತದೆ.

1 thought on “ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ”

Leave a Comment