ವಿಶೇಷ ಆನ್ಲೈನ್ ಸತ್ಸಂಗಗಳು
ಸಮಾಜಕ್ಕೆ ಉಪಯುಕ್ತವಾದ, ಧರ್ಮ, ಅಧ್ಯಾತ್ಮ ಮತ್ತು ಬಾಲಸಂಸ್ಕಾರದ ಉಚಿತ ಸತ್ಸಂಗಗಳ ನೇರ ಪ್ರಸಾರ ವೀಕ್ಷಿಸಿ !
ಸಮಾಜಕ್ಕೆ ಉಪಯುಕ್ತವಾದ, ಧರ್ಮ, ಅಧ್ಯಾತ್ಮ ಮತ್ತು ಬಾಲಸಂಸ್ಕಾರದ ಉಚಿತ ಸತ್ಸಂಗಗಳ ನೇರ ಪ್ರಸಾರ ವೀಕ್ಷಿಸಿ !
ಕಳೆದ ಸತ್ಸಂಗದಲ್ಲಿ ನಾವು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಕಿರುಪರಿಚಯ ಪಡೆದುಕೊಂಡಿದ್ದೆವು. ಅದರಲ್ಲಿ ಸ್ವಭಾವವೆಂದರೇನು, ಸ್ವಭಾವದೋಷಗಳ ದುಷ್ಪರಿಣಾಮಗಳು ಯಾವವು, ಹಾಗೆಯೇ ನಿಜವಾದ ಅರ್ಥದಲ್ಲಿ ವ್ಯಕ್ತಿತ್ವ ವಿಕಾಸವಾಗುವುದರಲ್ಲಿ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಹೇಗೆ ಮಹತ್ವದ್ದಾಗಿದೆ ಎಂಬಿತ್ಯಾದಿ ಕೆಲವು ಅಂಶಗಳು ನೋಡಿದ್ದೆವು. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯನ್ನು ಸರಿಯಾಗಿ ತಿಳಿದುಕೊಂಡು ಅದನ್ನು ನಡೆಸಲು ಪ್ರಾಥಮಿಕ ಹಂತದಲ್ಲಿ ನಮಗೆ ನಮ್ಮ ಸ್ವಭಾವದ ಚಿಂತನವಾಗುವುದು ಮಹತ್ವದ್ದಾಗಿರುತ್ತದೆ. ಆದುದರಿಂದಲೇ ಕಳೆದ ವಾರದಲ್ಲಿ ನಾವು ನಮ್ಮ ಸ್ವಭಾವದ ಚಿಂತನ ಮಾಡಿಕೊಂಡು ಬರಲು ನಿರ್ಧರಿಸಿದ್ದೆವು. ಅದರಲ್ಲಿ ನಮ್ಮಲ್ಲಿರುವ ದೋಷಗಳು, ಅಯೋಗ್ಯ … Read more
ಹಿಂದಿನ ಸತ್ಸಂಗದಲ್ಲಿ ನಾವು ಭಾವವೆಂದರೇನು, ಭಾವ ಮತ್ತು ಭಾವನೆಗಳ ವ್ಯತ್ಯಾಸ, ಹಾಗೆಯೇ ಭಾವಜಾಗೃತಿಯ ಪ್ರಯತ್ನಗಳಲ್ಲಿ ಮಾನಸ ಪೂಜೆಯ ಮಹತ್ವ ಮತ್ತು ಅದನ್ನು ಹೇಗೆ ಮಾಡುವುದೆಂದು ತಿಳಿದುಕೊಂಡೆವು. ಭಾವವಿದ್ದಲ್ಲಿ ದೇವರು ಇರುತ್ತಾರೆ ಎಂದು ಹೇಳಿರುವುದರಿಂದ ನಾಮಜಪ, ಪ್ರಾರ್ಥನೆ, ಕೃತಜ್ಞತೆಯೊಂದಿಗೆ, ಮಾನಸ ಪೂಜೆ ಎಂಬ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಿ ಭಗವಂತನ ಅಖಂಡ ಅನುಸಂಧಾನದಲ್ಲಿರಲು ಹೇಗೆ ಸಾಧ್ಯವಾಗುತ್ತದೆ ಎಂದೂ ಕಲಿತೆವು. ಅಷ್ಟಾಂಗ ಸಾಧನೆಯ ಅಂಶಗಳನ್ನು ತಿಳಿದುಕೊಳ್ಳುವಾಗ ನಾವು ಸ್ವಭಾವದೋಷ ನಿರ್ಮೂಲನೆ ಮಾಡುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ಇಂದು ನಾವು ವಿಸ್ತಾರವಾಗಿ ಈ ಪ್ರಕ್ರಿಯೆಯ … Read more
ಇಂದಿನ ಸತ್ಸಂಗದಲ್ಲಿ ನಾವು ಭಾವಜಾಗೃತಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಸಾಧನೆಯಲ್ಲಿ ಭಾವಕ್ಕೆ ಅಸಾಧಾರಣ ಮಹತ್ವ ಇದೆ. ಭಾವವಿದ್ದಲ್ಲಿ ದೇವರು, ಅಂದರೆ ಎಲ್ಲಿ ಭಾವವಿರುತ್ತದೆ ಅಲ್ಲಿ ಭಗವಂತನ ಅಸ್ತಿತ್ವ ಇರುತ್ತದೆ, ಎಂದು ಹೇಳುತ್ತಾರೆ. ಭಾವ ಎಂದರೆ ಏನು, ಅದರ ಮಹತ್ವ ಏನು, ಮತ್ತು ಭಾವಜಾಗೃತಿಗಾಗಿ ಯಾವ ಪ್ರಯತ್ನಗಳನ್ನು ಮಾಡಬಹುದು ಎಂದು ನಾವೀಗ ತಿಳಿದುಕೊಳ್ಳೋಣ. ಭಾವ ಎಂದರೆ ಏನು ? ಭಾವ ಪದದ ಉತ್ಪತ್ತಿ ಮತ್ತು ಅರ್ಥ ಭಾವ ಪದ ಭಾ ಮತ್ತು ವ ಈ ಎರಡು ಅಕ್ಷರಗಳಿಂದ ಕೂಡಿದೆ. ಇದರಲ್ಲಿ … Read more
ಅಷ್ಟಾಂಗ ಸಾಧನೆ ಸಾಧನೆ ಮಾಡುವಾಗ ಗುರುಕೃಪೆಯು ಅತ್ಯಂತ ಮಹತ್ವದ್ದಾಗಿರುತ್ತದೆ. ಶಿಷ್ಯನ ನಿಜವಾದ ಪ್ರಗತಿಯು ಗುರುಕೃಪೆಯಿಂದಲೇ ಆಗುತ್ತದೆ; ಆದ್ದರಿಂದಲೇ ‘ಗುರುಕೃಪಾ ಹಿ ಕೇವಲಂ ಶಿಷ್ಯಪರಮಮಂಗಲಮ್’, ಅಂದರೆ ಶಿಷ್ಯನ ಪರಮಮಂಗಲವು ಗುರುಕೃಪೆಯಿಂದಲೇ ಸಾಧ್ಯವಿದೆ ಎಂದು ಹೇಳಲಾಗಿದೆ. ಗುರುಗಳು ವಿವಿಧ ಮಾಧ್ಯಮಗಳಿಂದ ಶಿಷ್ಯನಿಗೆ ಕಲಿಸುತ್ತಿರುತ್ತಾರೆ, ಆತನನ್ನು ರೂಪಿಸುತ್ತಿರುತ್ತಾರೆ. ಗುರುಕೃಪೆಯ ಮಾಧ್ಯಮದಿಂದ ವ್ಯಕ್ತಿಯು ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಮಾರ್ಗವನ್ನು ಕ್ರಮಿಸುವುದನ್ನೇ ಗುರುಕೃಪಾಯೋಗ ಎನ್ನುತ್ತಾರೆ. ಸಾಧನೆಯ ವಿಧಗಳು ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ಎರಡು ಅಂಗಗಳಿವೆ. ಒಂದು ವ್ಯಷ್ಟಿ ಸಾಧನೆ ಮತ್ತು ಎರಡನೆಯದು ಸಮಷ್ಟಿ ಸಾಧನೆ. ವ್ಯಷ್ಟಿ ಸಾಧನೆ … Read more
ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಪ್ರತಿಷ್ಠಾಪಿಸಲಾದ ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಸಂದರ್ಭದಲ್ಲಿ ಬಂದ ಅನುಭೂತಿ
ಸಾಧನೆಯನ್ನು ಮಾಡುತ್ತಿರುವಾಗ ನಾಮಜಪವು ಸಾಧನೆಯ ಅಡಿಪಾಯವಾಗಿರುತ್ತದೆ. ಸತ್ಸಂಗದಿಂದ ಅಡಿಪಾಯ ಗಟ್ಟಿಯಾಗಲು ಸಹಾಯವಾಗುತ್ತದೆ. ಸತ್ಸಂಗದಿಂದ ನಮ್ಮ ಸಾಧನೆಯು ಸ್ಥಿರವಾಗುತ್ತದೆ. ಹಾಗಾಗಿ ಇಂದು ನಾವು ಸತ್ಸಂಗದ ಮಹತ್ವವೇನು ಎಂದು ತಿಳಿದುಕೊಳೋಣ. ಸತ್ಸಂಗ ಎಂದರೆ ಏನು? ಸತ್ಸಂಗ ಎಂದರೆ ಸತ್ ನ ಸಂಗ. ಸತ್ ಅಂದರೆ ಈಶ್ವರ ಅಥವಾ ಬ್ರಹ್ಮತತ್ತ್ವ ಮತ್ತು ಸಂಗ ಎಂದರೆ ಸಹವಾಸ! ಪ್ರತ್ಯಕ್ಷ ಈಶ್ವರನ ಸಹವಾಸ ಸಿಗುವುದು ಅಸಾಧ್ಯ. ಸಂತರು ಈಶ್ವರನ ಸಗುಣ ರೂಪವಾಗಿರುವುದರಿಂದ ಸಂತರ ಸಹವಾಸವೇ ನಮಗೆ ಸರ್ವಶ್ರೇಷ್ಠ ಸತ್ಸಂಗವಾಗುತ್ತದೆ. ಆದರೆ ನಮಗೆ ಸಂತರ ಸಹವಾಸ … Read more
ಕಳೆದ ಸತ್ಸಂಗದಲ್ಲಿ ನಾವು ದೇವರಿಗೆ ಪ್ರಾರ್ಥನೆಯನ್ನು ಮಾಡುವುದರ ಮಹತ್ವವನ್ನು ತಿಳಿದುಕೊಂಡೆವು. ಪ್ರಾರ್ಥನೆ ಮಾಡುವಾಗ ದೇವರಲ್ಲಿ ಏನನ್ನು ಬೇಡಬೇಕು, ಪ್ರಾರ್ಥನೆ ಮಾಡುವುದರ ಮಹತ್ವವನ್ನು ಗಮನದಲ್ಲಿರಿಸಿಕೊಂಡು ನಾವು ಆಧ್ಯಾತ್ಮಿಕ ಸ್ತರದ ಕೆಲವು ಪ್ರಾರ್ಥನೆಗಳ ಉದಾಹರಣೆಗಳನ್ನೂ ನೋಡಿದೆವು. ಹೆಚ್ಚು ಹೆಚ್ಚು ಪ್ರಾರ್ಥನೆಯಾಗಲು ಕೆಲವು ಪ್ರಯತ್ನಗಳನ್ನು ಮಾಡುವುದಾಗಿ ನಿರ್ಧರಿಸಿದ್ದೆವು. ಉದಾ. ಪ್ರಾರ್ಥನೆಯ ನೆನಪಾಗಲು ಮೊಬೈಲ್ ನಲ್ಲಿ ಅಲಾರ್ಮ್ ಹಾಕಿಡುವುದು. ಪ್ರಾರ್ಥನೆಯ ಕಾಗದವನ್ನು ಕಣ್ಣಿಗೆ ಕಾಣುವ ಜಾಗದಲ್ಲಿ ಗೋಡೆಗೆ ಅಂಟಿಸಿಡುವುದು ಇತ್ಯಾದಿ. ಹಿಂದಿನ ಸತ್ಸಂಗದಲ್ಲಿ ನಾವು ದೈನಂದಿನ ಕೃತಿಗಳನ್ನು ಮಾಡುತ್ತಿರುವಾಗ ಆಧ್ಯಾತ್ಮಿಕ ಸ್ತರದಲ್ಲಿ ನಾವು … Read more
ನಾವು ಅನೇಕ ಬಾರಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಬೆಳಗ್ಗೆ ಎದ್ದ ನಂತರ, ದೇವರ ಪೂಜೆಯನ್ನು ಮಾಡುವಾಗ, ಮನೆಯಿಂದ ಹೊರಗೆ ಬೀಳುವಾಗ, ಕೆಲವೊಮ್ಮೆ ದೇವಸ್ಥಾನಕ್ಕೆ ದೇವರದರ್ಶನಕ್ಕೆ ಹೋದಾಗ ಅಥವಾ ಕಠಿಣ ಪ್ರಸಂಗವನ್ನು ಎದುರಿಸುವ ಸಮಯ ಬಂದರೆ, ದೇವರಿಗೆ ಮನಸ್ಸಿನಲ್ಲಿಯೇ ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡುತ್ತೇವೆ. ಹಾಗಾದರೆ ಇಂದು ನಾವು ಪ್ರಾರ್ಥನೆ ಎಂದರೆ ಏನು, ನಾವು ಪ್ರಾರ್ಥನೆಯನ್ನು ಏಕೆ ಮಾಡುತ್ತೇವೆ, ಅದರಿಂದ ನಮಗೇನು ಲಾಭವಾಗುತ್ತದೆ, ಎಂದು ತಿಳಿದುಕೊಳ್ಳೋಣ. ಪ್ರಾರ್ಥನೆಯ ಮಾಧ್ಯಮದಿಂದ ದೇವರ ಬಳಿ ಏನು ಬೇಡಬೇಕು, ವ್ಯಾವಹಾರಿಕ ವಿಷಯಗಳ ಬಗ್ಗೆ ಬೇಡಿಕೆಯಿಟ್ಟರೆ … Read more
ನಾಮಜಪದಲ್ಲಿ ಸಂಖ್ಯಾತ್ಮಕ ಹಾಗೂ ಗುಣಾತ್ಮಕ ವೃದ್ಧಿ ಆಗಲು ಮಾಡಬೇಕಾದ ಪ್ರಯತ್ನಗಳು ನಾವು ನಾಮಜಪವನ್ನು ಮಾಡುತ್ತೇವೆ, ಆಗ ನಮ್ಮ ಗಮನ ಬಹಳಷ್ಟು ಸಲ ನಾಮಜಪದ ಸಂಖ್ಯೆಗಳ ಕಡೆಗೆ ಹೆಚ್ಚು ಇರುತ್ತದೆ. ಆದರೆ ನಾವು ಮಾಡುತ್ತಿರುವ ನಾಮಜಪ ನಿಜವಾಗಿಯೂ ದೇವರ ಚರಣಗಳವರೆಗೆ ತಲುಪುತ್ತಿದೆಯೇ ಎನ್ನುವ ಅನುಭೂತಿಯನ್ನು ನಾವು ಪಡೆಯಬೇಕು. ಇದರರ್ಥ ನಾಮಜಪದ ಸಂಖ್ಯೆಯತ್ತ ಗಮನ ನೀಡಬಾರದು ಎಂದಲ್ಲ! ಸಾಧನೆಯ ಪ್ರಾಥಮಿಕ ಹಂತದಲ್ಲಿ ಸಂಖ್ಯಾತ್ಮಕ ನಾಮಜಪವೂ ಅಷ್ಟೇ ಮಹತ್ವದ್ದಾಗಿದೆ. ಆದರೆ ಸಂಖ್ಯಾತ್ಮಕ ನಾಮಜಪ ಮಾಡುತ್ತಾ, ಮಾಡುತ್ತಾ, ನಾವು ಮನಸ್ಸಿನಲ್ಲಿ ಈಶ್ವರನನ್ನು ಅನುಭವಿಸುತ್ತಾ … Read more
