ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 1)

ಪರಿವಿಡಿ

1. ವಿಷಯಪ್ರವೇಶ ಮತ್ತು “ಆನ್ ಲೈನ್ ಸತ್ಸಂಗವನ್ನು ಪ್ರಾರಂಭಿಸುವ ಉದ್ದೇಶ
2. ಸಂಸ್ಥೆ ಮತ್ತು ಸಂಸ್ಥಾಪಕರ ಪರಿಚಯ
3. ಅಧ್ಯಾತ್ಮದ ಮಹತ್ವ
3 ಅ. ಪ್ರಾಣಿಮಾತ್ರರ ಧ್ಯೇಯ – ಚಿರಂತನ ಹಾಗೂ ಸರ್ವೋಚ್ಚ ಆನಂದದ ಪ್ರಾಪ್ತಿ
3 ಆ. ಜೀವನದಲ್ಲಿನ ಶೇ. 80 ರಷ್ಟು ಸಮಸ್ಯೆಗಳ ಕಾರಣವು ಆಧ್ಯಾತ್ಮಿಕವಾಗಿರುತ್ತದೆ
3 ಇ. ಕಲಿಯುಗದಲ್ಲಿ ನಾಮಸ್ಮರಣೆಯೇ ಸಾಧನೆ
3 ಈ. ಅಧ್ಯಾತ್ಮವು ಕೃತಿಯ ಶಾಸ್ತ್ರ
* ಪ್ರವಚನ ಮತ್ತು ಸತ್ಸಂಗಗಳ ಮಹತ್ವ
* ಅಧ್ಯಾತ್ಮದ ಮಹತ್ವ
* ಪಿತೃದೋಷ ಮತ್ತು ದತ್ತ ಜಪ
4. ಪಿತೃದೋಷ ಮತ್ತು ದತ್ತನ ನಾಮಜಪದ ಮಹತ್ವ
4 ಅ. ಪಿತೃದೋಷ ಎಂದರೇನು ?
4 ಆ. ಪೂರ್ವಜರಿಂದಾಗುವ ತೊಂದರೆಗಳ ಲಕ್ಷಣಗಳು
4 ಇ. ದತ್ತನ ನಾಮಜಪವನ್ನು ಯಾರು ಮತ್ತು ಎಷ್ಟು ಮಾಡಬೇಕು ?
4 ಈ. ದತ್ತನ ನಾಮಜಪದ ಮಹತ್ವ
5. ಆಪತ್ಕಾಲ ಮತ್ತು ಸಾಧನೆಯ ಮಹತ್ವ
5 ಅ. ಕೊರೋನಾ ಮಹಾಮಾರಿ ಮತ್ತು ಮೂರನೆಯ ಮಹಾಯುದ್ಧದ ಮುನ್ನುಡಿ
5 ಆ. ದ್ರಷ್ಟಾರ ಸಂತರು ಮತ್ತು ಭವಿಷ್ಯಕಾರರು ಆಪತ್ಕಾಲದ ಬಗ್ಗೆ ನೀಡಿರುವ ಸಂಕೇತಗಳು
5 ಇ. ಆಪತ್ಕಾಲವು ಕಾಲಚಕ್ರದ ಪರಿಣಾಮ
5 ಈ. ಆಪತ್ಕಾಲದಲ್ಲಿ ಭಗವಂತನು ಭಕ್ತರ ಕಾಳಜಿ ವಹಿಸುತ್ತಾನೆ
6. ಸಂದೇಹ ನಿವಾರಣೆ

——————————————————-

1. ವಿಷಯಪ್ರವೇಶ ಮತ್ತು ಪ್ರವಚನದ ಉದ್ದೇಶ :

ಸನಾತನ ಸಂಸ್ಥೆಯು ಅಧ್ಯಾತ್ಮಪ್ರಸಾರ ಮಾಡುವ ಒಂದು ಸಂಸ್ಥೆಯಾಗಿದೆ. ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಭಾಷೆಯಲ್ಲಿ ಪರಿಚಯ ಮಾಡಿಸಿ ಕೊಡುವುದು ಹಾಗೂ ಸಾಧಕರಿಗೆ ವೈಯಕ್ತಿಕ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನವನ್ನು ನೀಡಿ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸಿಕೊಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಭಾರತ ದೇಶವು ಜಗತ್ತಿನ ಆಧ್ಯಾತ್ಮಿಕ ರಾಜಧಾನಿಯಾಗಿದೆ. ಇಡೀ ಜಗತ್ತಿನ ಜನರು ಮನಃಶಾಂತಿ ಪಡೆಯಲು ಭಾರತಕ್ಕೆ ಬರುತ್ತಾರೆ. ಸನಾತನ ಸಂಸ್ಕೃತಿಯು ಭಾರತದ ಆತ್ಮವಾಗಿದೆ; ಆದರೆ ದುರಾದೃಷ್ಟವೆಂದರೆ ಅಧ್ಯಾತ್ಮ ಅಥವಾ ಸಾಧನೆಯ ಶಿಕ್ಷಣವು ದೊರಕದ ಕಾರಣ ಇಂದು ನಮ್ಮ ಸ್ಥಿತಿಯು ಕಸ್ತೂರಿಮೃಗದಂತಾಗಿದೆ. ಕಸ್ತೂರಿಮೃಗದ ನಾಭಿ(ಹೊಕ್ಕುಳು) ಯಲ್ಲಿಯೇ ಕಸ್ತೂರಿಯಿರುತ್ತದೆ ಆದರೂ ಆ ಮೃಗವು ಕಸ್ತೂರಿಯನ್ನು ಹುಡುಕುತ್ತ ಅಲ್ಲಿ ಇಲ್ಲಿ ಓಡಾಡುತ್ತದೆ; ಹಾಗೆಯೇ ನಾವೆಲ್ಲರೂ ಜೀವನವಿಡೀ ಆನಂದವನ್ನು ಹುಡುಕುತ್ತ ಓಡಾಡುತ್ತೇವೆ. ಆದರೆ ನಾವು ಈ ಆನಂದವನ್ನು ಶಾಶ್ವತವಾಗಿ ಅನುಭವಿಸಲು ಆಗುವುದಿಲ್ಲ. ಕೆಲವು ಕ್ಷಣ ಮಾತ್ರ ಈ ಆನಂದವನ್ನು ನಾವು ಅನುಭವಿಸುತ್ತೇವೆ. ಇದಕ್ಕೆ ಕಾರಣವೆಂದರೆ ಆನಂದವನ್ನು ಹೇಗೆ ಪಡೆಯಬೇಕು ಎಂಬುದನ್ನು ನಮಗೆ ಕಲಿಸಿರುವುದಿಲ್ಲ. ಇದಲ್ಲದೇ ಇಂದ್ರಿಯಗಳಿಂದ ಸಿಗುವ ಸುಖವನ್ನೇ ಬಹಳಷ್ಟು ಬಾರಿ ಆನಂದ ಎಂದು ಪರಿಗಣಿಸಲಾಗುತ್ತದೆ. ಒಳ್ಳೆಯ ಹಾಡನ್ನು ಕೇಳುವುದು, ಇಷ್ಟವಾದ ತಿಂಡಿ-ತಿನಿಸುಗಳನ್ನು ತಿನ್ನುವುದು, ಪ್ರವಾಸಿ ತಾಣಗಳಿಗೆ ಹೋಗಿ ನಿಸರ್ಗಸೌಂದರ್ಯವನ್ನು ವೀಕ್ಷಿಸುವುದು, ಹೊಸ ಬಟ್ಟೆ ಖರೀದಿಸುವುದು, ಇವೆಲ್ಲವುಗಳಿಂದ ನಾವು ಆನಂದವನ್ನು ಪಡೆಯಲು ಪ್ರಯತ್ನಿಸುತ್ತೇವೆ. ಆದರೆ ಇವುಗಳಲ್ಲಿನ ಯಾವ ಸಂಗತಿಯನ್ನೂ ನಾವು ಸತತವಾಗಿ ಮಾಡಲು ಸಾಧ್ಯವಿಲ್ಲ. ಆದುದರಿಂದ ಸ್ವಲ್ಪ ಕಾಲದ ನಂತರ ಅದರಿಂದ ಆನಂದ ಸಿಗುವುದಿಲ್ಲ ಮತ್ತು ಮನಸ್ಸು ಅಸ್ವಸ್ಥ ಅಥವಾ ನಿರಾಶವಾಗುತ್ತದೆ. ಕೆಲವರ ಜೀವನದಲ್ಲಿ ನಿರಾಶೆಯ ಪ್ರಮಾಣವು ಎಷ್ಟು ಹೆಚ್ಚಾಗುತ್ತದೆಂದರೆ ಅವರು ಯಾವುದಾದರೊಂದು ವ್ಯಸನಕ್ಕೆ ಅಧೀನರಾಗುತ್ತಾರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ತಪ್ಪು ಹೆಜ್ಜೆ ತೆಗೆದುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಆನಂದವು ಆತ್ಮಕ್ಕೆ ಬರುವ ಅನುಭವವಾಗಿದೆ ಎಂಬುದೇ ನಮಗೆ ತಿಳಿದಿರುವುದಿಲ್ಲ; ವ್ಯಕ್ತಿಯು ಯಾವಾಗ ಸತ್-ಚಿತ್-ಆನಂದ ಸ್ವರೂಪಿ ಈಶ್ವರನ ಸಮೀಪಕ್ಕೆ ಹೋಗಲು ಪ್ರಯತ್ನಿಸುತ್ತಾನೆಯೋ ಆಗ ಆತನ ಆನಂದಾವಸ್ಥೆಯು ಹೆಚ್ಚಾಗುತ್ತದೆ. ಅರ್ಥಾತ್ ಇದೆಲ್ಲವೂ ಅನುಭವಿಸುವಂತಹ ವಿಷಯ, ಅಂದರೆ ಪ್ರತ್ಯಕ್ಷ ಕೃತಿಯನ್ನು ಮಾಡಿ ಅನುಭೂತಿ ಪಡೆಯುವ ವಿಷಯವಾಗಿದೆ.

ಧರ್ಮಶಾಸ್ತ್ರದಲ್ಲಿ ಈಶ್ವರಪ್ರಾಪ್ತಿಯ ಅರ್ಥಾತ್ ಆನಂದಪ್ರಾಪ್ತಿಯ ಹಲವಾರು ಮಾರ್ಗಗಳನ್ನು ಹೇಳಲಾಗಿದೆ. ಆದರೆ ಈ ಸಾವಿರಾರು ಸಾಧನಾಮಾರ್ಗಗಳ ಪೈಕಿ ನಿರ್ದಿಷ್ಟವಾಗಿ ಯಾವ ಸಾಧನೆಯನ್ನು ಇಂದು ಪ್ರಾರಂಭ ಮಾಡಬೇಕು ಎಂಬುದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಆದುದರಿಂದ ಬಹಳಷ್ಟು ಜನರು ಅವರಿಗೆ ಯಾವುದು ಇಷ್ಟವಾಗುತ್ತದೆಯೋ ಅಥವಾ ಮಾಡಬೇಕೆಂದೆನಿಸುತ್ತದೆಯೋ ಅದರಂತೆ ಸಾಧನೆಯನ್ನು ಮಾಡಲು ಪ್ರಯತ್ನಿಸುತ್ತಾರೆ. ಯಾರು ಪ್ರತ್ಯಕ್ಷ ಸಾಧನೆ ಮಾಡುವುದಿಲ್ಲವೋ ಅವರಿಗೆ ಅಧ್ಯಾತ್ಮದ ಬಗ್ಗೆ ಮಾಹಿತಿಯನ್ನು ಕೇಳಿಸಿಕೊಳ್ಳುವ ಮಾತ್ರದಿಂದ ಯಾವುದೇ ಲಾಭವಾಗುವುದಿಲ್ಲ. ಅಯೋಗ್ಯ ರೀತಿಯಲ್ಲಿ ಸಾಧನೆ ಮಾಡುವವರಿಗೂ ಲಾಭವಾಗುವುದಿಲ್ಲ. ತದ್ವಿರುದ್ಧವಾಗಿ ಇಂತಹವರ ಸಾಧನೆಯು ಯೋಗ್ಯವಾಗಿ ಆಗದ ಕಾರಣ ಇವರಿಗೆ ಅನುಭೂತಿಗಳು ಬರುವುದಿಲ್ಲ ಮತ್ತು ಇವರಲ್ಲಿ ಅಧ್ಯಾತ್ಮದ ಮೇಲಿನ ವಿಶ್ವಾಸವೂ ಕಡಿಮೆಯಾಗತೊಡಗುತ್ತದೆ. ದೇವಸ್ಥಾನದಲ್ಲಿ ಹರಿಕಥೆ-ಪ್ರವಚನಗಳಿಗೆ ಹೋಗುವವರಲ್ಲಿ ಹಲವರಿಗೆ ತಾವು ಸಾಧನೆ ಮಾಡುತ್ತಿದ್ದೇವೆ ಎಂದೆನಿಸುತ್ತದೆ. ಧಾರ್ಮಿಕ ಪುಸ್ತಕಗಳನ್ನು ಓದುವ ಹಾಗೂ ಅಭ್ಯಾಸ ಮಾಡುವವರಿಗೂ, ತಮಗೆ ಅಧ್ಯಾತ್ಮದಲ್ಲಿ ಅಲ್ಪ-ಸ್ವಲ್ಪ ತಿಳಿಯುತ್ತದೆ ಎಂದೆನಿಸುತ್ತದೆ; ಆದರೆ ನಿಜವಾಗಿಯೂ ಈ ಮೇಲಿನ ಎರಡು ಉದಾಹರಣೆಗಳಲ್ಲಿಯೂ ಬಹುಶಃ ಹೀಗಿರುವುದಿಲ್ಲ. ಈಜುವುದರ ಬಗ್ಗೆ ಉತ್ತಮ ಪ್ರವಚನವನ್ನು ಕೇಳಿಸಿಕೊಂಡರೂ ಅಥವಾ ಅದಕ್ಕೆ ಸಂಬಂಧಪಟ್ಟ ಉತ್ಕöÈಷ್ಟ ಪುಸ್ತಕವನ್ನು ಓದಿದರೂ ಅದರಿಂದ ವ್ಯಕ್ತಿಗೆ ಪ್ರತ್ಯಕ್ಷ ಈಜುವುದರಿಂದ ಸಿಗುವಂತಹ ಆನಂದವು ಸಿಗುವುದಿಲ್ಲ; ಅಂತೆಯೇ ಹರಿಕಥೆ ಅಥವಾ ಪ್ರವಚನಗಳಿಗೆ ಹೋಗುವವರಿಂದ ಅಥವಾ ಪುಸ್ತಕಗಳನ್ನು ಓದುವವರಿಂದ ನಿಜವಾದ ಸಾಧನೆಯು ಆಗುತ್ತಿರುವುದಿಲ್ಲ. ಸಾಧನೆ ಎಂದರೆ ನಿರ್ದಿಷ್ಟವಾಗಿ ಏನು ಮತ್ತೆ ಯೋಗ್ಯ ಸಾಧನೆಯನ್ನು ಹೇಗೆ ಮಾಡಬೇಕು ಎಂಬುದು ಎಲ್ಲರಿಗೂ ತಿಳಿಯಬೇಕು ಎಂಬುದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಪ್ರವಚನಗಳನ್ನೂ, ಸತ್ಸಂಗಗಳನ್ನೂ ತೆಗೆದುಕೊಳ್ಳಲಾಗುತ್ತದೆ. ಇಂದಿನ ಈ ಪ್ರವಚನವನ್ನೂ ಈ ಉದ್ದೇಶಕ್ಕಾಗಿಯೇ ಆಯೋಜಿಸಲಾಗಿದೆ. ಮೊದಲಿಗೆ ನಾವು ಸನಾತನ ಸಂಸ್ಥೆ ಹಾಗೂ ಸಂಸ್ಥೆಯ ಸಂಸ್ಥಾಪಕರ ಬಗ್ಗೆ ತಿಳಿದುಕೊಳ್ಳೋಣ.

2. ಸನಾತನ ಸಂಸ್ಥೆ ಮತ್ತು ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರ ಪರಿಚಯ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಇವರು ಸನಾತನ ಸಂಸ್ಥೆಯ ಮಾಧ್ಯಮದಿಂದ ವ್ಯಕ್ತಿಯು ಶೀಘ್ರ ಗತಿಯಲ್ಲಿ ಆಧ್ಯಾತ್ಮಿಕ ಉನ್ನತಿ ಹೊಂದಬಹುದಾದಂತಹ ಸಾಧನಾಮಾರ್ಗದ ಬಗ್ಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಅವರು ವ್ಯಕ್ತಿಯು ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಬಹುದಾದ ‘ಗುರುಕೃಪಾಯೋಗ’ವನ್ನು ಹೇಳಿದ್ದಾರೆ. ಜ್ಞಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಇವುಗಳ ಸಂಗಮವಾಗಿರುವ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ ಹಲವಾರು ಸಾಧಕರು ಆಧ್ಯಾತ್ಮಿಕ ಪ್ರಗತಿ ಹೊಂದಿ ಮಾನವಜೀವನವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ತನ್ನ 45 ನೆಯ ವಯಸ್ಸಿನಲ್ಲಿ ಸಾಧನೆಯನ್ನು ಪ್ರಾರಂಭಿಸಿ ಕೆಲವೇ ವರ್ಷಗಳಲ್ಲಿ ಅಧ್ಯಾತ್ಮದ ಸರ್ವೋಚ್ಚ ಶಿಖರವನ್ನು ಮುಟ್ಟಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ವೈದ್ಯಕೀಯ ಕ್ಷೇತ್ರದ ಡಾಕ್ಟರ್ ಆಗಿದ್ದಾರೆ. ಮುಂಬೈಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 1971 ರಿಂದ 1978 ರ ತನಕ ಇಂಗ್ಲಂಡ್ ನಲ್ಲಿ ಸಂಮ್ಮೋಹನೋಪಚಾರ ಪದ್ಧತಿಯ ವಿಷಯದಲ್ಲಿ ಸಂಶೋಧನೆಯನ್ನು ಮಾಡಿದರು ಮತ್ತು ವಿವಿಧ ಶಾಸ್ತ್ರೀಯ ಪರಿಷತ್ತುಗಳಲ್ಲಿ ಶೋಧ-ಪ್ರಬಂಧಗಳನ್ನು ಮಂಡಿಸಿದರು. 1978 ರಲ್ಲಿ ಮುಂಬೈಗೆ ಹಿಂದಿರುಗಿ ಸಂಮ್ಮೋಹನೋಪಚಾರ ತಜ್ಞರಾಗಿ ವೃತ್ತಿಯನ್ನು ಪ್ರಾರಂಭಿಸಿ ಸಂಶೋಧನೆಯನ್ನು ಮುಂದುವರಿಸಿದರು. 1982 ರಲ್ಲಿ ಅವರು ‘ಭಾರತೀಯ ವೈದ್ಯಕೀಯ ಸಂಮೋಹನ ಮತ್ತು ಸಂಶೋಧನಾ ಸಂಸ್ಥೆ’ಯನ್ನು ಸ್ಥಾಪಿಸಿ ಈ ವಿಷಯದ ಬಗ್ಗೆ ಒಂದು ನಿಯತಕಾಲಿಕೆಯನ್ನು (ಜರ್ನಲ್) ಪ್ರಾರಂಭಿಸಿದರು. ಅಂತೆಯೇ ಭಾರತದ ವಿವಿಧ ಸ್ಥಳಗಳಲ್ಲಿ ಸಂಮೋಹನೋಪಚಾರ ಪದ್ಧತಿಯ ಅಭ್ಯಾಸವರ್ಗಗಳನ್ನು ತೆಗೆದುಕೊಂಡರು. 1967 ರಿಂದ 1982 ರ ತನಕ 15 ವರ್ಷಗಳ ಕಾಲ ಮಾನಸಿಕ ವಿಕಾರಗಳಿಗೆ ಸಂಮೋಹನೋಪಚಾರ ತಜ್ಞರಾಗಿ ಸಂಶೋಧನೆಯನ್ನು ಮಾಡಿದ ನಂತರ ಅವರ ಗಮನಕ್ಕೆ ಬಂದ ವಿಷಯವೇನೆಂದರೆ ಸುಮಾರು ಶೇ. 30 ರಷ್ಟು ರೋಗಿಗಳು ಪ್ರಸ್ತುತದಲ್ಲಿ ಪ್ರಚಲಿತವಿದ್ದ ಉಪಚಾರಗಳಿಂದ ಗುಣಮುಖರಾಗುತ್ತಿರಲಿಲ್ಲ; ಅದರಲ್ಲಿ ಕೆಲವರು ಪುಣ್ಯಕ್ಷೇತ್ರಗಳಿಗೆ ಹೋಗಿ, ಕೆಲವರು ಸಂತರಲ್ಲಿಗೆ ಹೋಗಿ, ಮತ್ತೆ ಕೆಲವರು ನಾರಾಯಣ-ನಾಗಬಲಿಯಂತಹ ಧಾರ್ಮಿಕ ವಿಧಿಯನ್ನು ಮಾಡಿ ಗುಣಮುಖರಾಗುತ್ತಿದ್ದರು ಪರಾತ್ಪರ ಗುರು ಡಾ. ಆಠವಲೆಯವರು ಮೂಲತಃ ಸಂಶೋಧಕ ಪ್ರವೃತ್ತಿಯವರಾಗಿದ್ದರಿಂದ ಅವರು ಇವೆಲ್ಲವನ್ನೂ ಅಭ್ಯಾಸ ಮಾಡಿದರು. ಆಗ ಅವರಿಗೆ ತಿಳಿದು ಬಂದ ಸಂಗತಿಯೆಂದರೆ ಶಾರೀರಿಕ ಮತ್ತು ಮಾನಸಿಕ ಶಾಸ್ತ್ರಗಳಿಗಿಂತಲೂ ಉಚ್ಚ ಮಟ್ಟದ ಒಂದು ಶಾಸ್ತ್ರವಿದೆ ಮತ್ತೆ ಅದೆಂದರೆ ಅಧ್ಯಾತ್ಮಶಾಸ್ತ್ರ. ಆಗ ಎಂದರೆ 1982 ರಲ್ಲಿ ಅವರು ಆಸ್ತಿಕರಾದರು. ಜಿಜ್ಞಾಸು ವೃತ್ತಿಯುಳ್ಳವರಾಗಿದ್ದರಿಂದ ಅವರು ಅಧ್ಯಾತ್ಮಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿದರು ಮತ್ತು ಹಲವಾರು ಸಂತರ ಬಳಿ ಹೋಗಿ ಸಂದೇಹನಿವಾರಣೆಯನ್ನು ಮಾಡಿಕೊಂಡರು, ಸ್ವತಃ ಸಾಧನೆಯನ್ನು ಮಾಡಿದರು ಮತ್ತು ತನಗೆ ದೊರಕಿದ ಜ್ಞಾನದ ಉಪಯೋಗವು ರೋಗಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಆಗಬೇಕು ಎಂಬುದಕ್ಕಾಗಿ ಅಧ್ಯಾತ್ಮಶಾಸ್ತ್ರದ ಬಗ್ಗೆ 1987 ರಲ್ಲಿ ಒಂದು ಗ್ರಂಥವನ್ನು ಬರೆದರು. ಗ್ರಂಥಲೇಖನದ ಅವರ ಕಾರ್ಯವು ಇಂದಿಗೂ ನಡೆಯುತ್ತಿದೆ. ಡಿಸೆಂಬರ್ 2019 ರ ತನಕ ಸನಾತನದ 322 ಗ್ರಂಥಗಳ 78 ಲಕ್ಷ 54 ಸಾವಿರ ಪ್ರತಿಗಳು ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲಯಾಳಮ್, ಬಂಗಾಲಿ, ಒಡಿಯಾ, ಆಸಾಮಿ, ಗುರುಮುಖಿ, ಸರ್ಬಿಯನ್, ಜರ್ಮನ್, ಸ್ಪ್ಯಾನಿಶ್, ಫ್ರೆಂಚ್ ಮತ್ತೆ ನೇಪಾಳಿ ಹೀಗೆ 17 ಭಾಷೆಗಳಲ್ಲಿ (ಎಲ್ಲ ಭಾಷೆಗಳನ್ನೂ ಹೇಳಲು ಕಠಿಣವಾದರೆ 2-3 ಹೇಳಿ ನಂತರ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಇವೆ ಎಂದು ಹೇಳಬಹುದು. ಅವರ ಗ್ರಂಥರಚನಾಕಾರ್ಯವು ಈಗಲೂ ನಡೆಯುತ್ತಿದೆ. ಅವರ ಪ್ರೇರಣೆಯಿಂದಲೇ ಸತ್ಸಂಗ, ಬಾಲಸಂಸ್ಕಾರವರ್ಗ, ಸನಾತನ ಪ್ರಭಾತ ವರ್ತಮಾನಪತ್ರಿಕೆ, ಸಂಕೇತಸ್ಥಳ, ಗ್ರಂಥಗಳು ಹಾಗೂ ಸಂಶೋಧನೆಯ ಮೇಲಿನ ಸಾಹಿತ್ಯ ಮುಂತಾದ ಮಾಧ್ಯಮಗಳಿಂದ ಅಧ್ಯಾತ್ಮ ಪ್ರಸಾರದ ಕಾರ್ಯವು ವ್ಯಾಪಕವಾಗಿ ನಡೆಯುತ್ತಿದೆ.

3. ಅಧ್ಯಾತ್ಮದ ಮಹತ್ವ

ಸರ್ವೋಚ್ಚ ಹಾಗೂ ಸತತವಾಗಿ ಉಳಿಯುವ ಸುಖವೆಂದರೆ ‘ಆನಂದ’

3ಅ. ಪ್ರಾಣಿಮಾತ್ರರ ಧ್ಯೇಯ – ಚಿರಂತನ ಹಾಗೂ ಸರ್ವೋಚ್ಚ ಆನಂದದ ಪ್ರಾಪ್ತಿ : ನಾವು ನಮ್ಮ ನಮ್ಮ ಕೆಲಸಗಳನ್ನು ಬಿಟ್ಟು ಇಲ್ಲಿ ಏಕೆ ಸೇರಿದ್ದೇವೆ ? ಇಲ್ಲಿ ಏನನ್ನಾದರೂ ಕಲಿಯಲು ಸಿಗಬಹುದು ಮತ್ತು ಅದರಿಂದ ನಮಗೆ ಸುಖ ಸಿಗಬಹುದು ಎಂಬ ಅಪೇಕ್ಷೆಯಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಕ್ರಿಮಿಕೀಟಗಳಿಂದ ಹಿಡಿದು ಪ್ರಗತಿ ಹೊಂದಿರುವ ಮಾನವನವರೆಗೂ ಪ್ರತಿಯೊಂದು ಪ್ರಾಣಿಯೂ ಸರ್ವೋಚ್ಚ ಸುಖವನ್ನು ಸತತವಾಗಿ ಪಡೆದುಕೊಳ್ಳಲು ಚಡಪಡಿಸುತ್ತದೆ. ಆದರೆ ಸುಖವನ್ನು ಹೇಗೆ ಪಡೆಯುವುದು ಇದನ್ನು ಶಾಲೆ ಅಥವಾ ಮಹಾವಿದ್ಯಾಲಯಗಳಲ್ಲಿ ಕಲಿಸುವುದಿಲ್ಲ. ಸರ್ವೋಚ್ಚ ಮತ್ತು ಸಾತತ್ಯದಿಂದ ಉಳಿಯುವ ಸುಖಕ್ಕೆ ‘ಆನಂದ’ ಎಂದು ಹೇಳುತ್ತಾರೆ. ಆನಂದವನ್ನು ಪಡೆದುಕೊಳ್ಳುವ ಶಾಸ್ತ್ರವೇ ಅಧ್ಯಾತ್ಮ ಶಾಸ್ತ್ರ. ಈ ಪ್ರವಚನದಿಂದ ನಾವು ಕಾಲಾನುಸಾರ ಅವಶ್ಯವಿರುವ ಸಾಧನೆಯ ಒಂದೊಂದು ಹಂತವನ್ನು ತಿಳಿದುಕೊಳ್ಳುವವರಿದ್ದೇವೆ.

3ಆ. ಜೀವನದ 80% ಸಮಸ್ಯೆಗಳ ಹಿಂದೆ ಆಧ್ಯಾತ್ಮಿಕ ಕಾರಣಗಳಿರುತ್ತವೆ
ಜೀವನದಲ್ಲಿ ಬರುವ 80% ಸಮಸ್ಯೆಗಳಿಗೆ ಅಧ್ಯಾತ್ಮವೇ ಕಾರಣವಾಗಿರುತ್ತದೆ. ಆಧ್ಯಾತ್ಮಿಕ ಸಮಸ್ಯೆಗಳ ನಿವಾರಣೆಗಾಗಿ ಸಾಧನೆಯು ಅತ್ಯವಶ್ಯಕ
ಸಾಮಾನ್ಯವಾಗಿ ವ್ಯಕ್ತಿಯ ಜೀವನದಲ್ಲಿ 20% ಸಮಸ್ಯೆಗಳು ಶಾರೀರಿಕ ಮತ್ತು ಮಾನಸಿಕ ಕಾರಣಗಳಿಂದ ಉದ್ಭವಿಸುತ್ತವೆ, 30 % ಸಮಸ್ಯೆಗಳು ಶಾರೀರಿಕ ಅಥವಾ ಮಾನಸಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿಂದ ಉದ್ಭವಿಸುತ್ತವೆ ಮತ್ತು ಬಾಕಿ 50% ಸಮಸ್ಯೆಗಳು ಕೇವಲ ಆಧ್ಯಾತ್ಮಿಕ ಕಾರಣಗಳಿಂದಲೇ ಉದ್ಭವಿಸುತ್ತವೆ. ಅಂದರೆ ಜೀವನದಲ್ಲಿ ಬರುವ 80% ಸಮಸ್ಯೆಗಳಿಗೆ ಮೂಲ ಕಾರಣ ಅಧ್ಯಾತ್ಮವೇ ಆಗಿರುತ್ತದೆ. ಸಾಧನೆಯಿಂದ ಈ ಆಧ್ಯಾತ್ಮಿಕ ಸಮಸ್ಯೆಗಳು ಪರಿಹಾರವಾಗುತ್ತವೆ ಅಥವಾ ಅದನ್ನು ಸಹಿಸುವ ಅಂದರೆ ಪ್ರಾರಬ್ಧವನ್ನು ಭೋಗಿಸುವ ಶಕ್ತಿಯು ಸಿಗುತ್ತದೆ. ಐಹಿಕ ಸುಖವನ್ನು ಇಚ್ಛಿಸುವವರಿಗೆ ಸಕಾಮ ಸಾಧನೆಯ ಸುಖ ಸಿಗುತ್ತದೆ ಹಾಗೂ ಅವರ ದುಃಖದ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಪಾರಮಾರ್ಥಿಕ ಆನಂದವನ್ನು ಬಯಸುವವರಿಗೆ ನಿಷ್ಕಾಮ ಸಾಧನೆಯಿಂದ ಆನಂದಾವಸ್ಥೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ.

3ಇ. ಕಲಿಯುಗದಲ್ಲಿ ನಾಮಸ್ಮರಣೆಯೇ ಸಾಧನೆ :
ಭಗವಂತನ ಪ್ರಾಪ್ತಿಗಾಗಿ ಮಾಡಬೇಕಾದ ಉಪಾಸನೆಯು ಯುಗಾನುಸಾರ ಬೇರೆ ಬೇರೆ ಹೇಳಲಾಗಿದೆ. ಸತ್ಯಯುಗದಲ್ಲಿ ಎಲ್ಲ ಜನರು ಸೋಹಂಭಾವದಲ್ಲಿ ಇರುತ್ತಿದ್ದರು. ಆಗ ಜ್ಞಾನಮಾರ್ಗದಿಂದ ಈಶ್ವರನ ಸ್ವರೂಪವನ್ನು ಅರಿತುಕೊಳ್ಳುತ್ತಿದ್ದರು. ತ್ರೇತಾಯುಗದಲ್ಲಿ ತಪಶ್ವರ್ಯ, ಮತ್ತು ದ್ವಾಪರಯುಗದಲ್ಲಿ ಕರ್ಮಕಾಂಡ ಇವು ಮುಖ್ಯ ಸಾಧನಾಮಾರ್ಗಗಳಾಗಿದ್ದವು. ‘ಕಲಿಯುಗದಲ್ಲಿ ನಾಮವೇ ಆಧಾರ’ ಎಂದು ಸಂತರು ಹೇಳಿದ್ದಾರೆ. ಹಾಗೂ ಶ್ರೀಮದ್ಭಗವದ್ಗೀತೆಯಲ್ಲಿ ಸ್ವತಃ ಭಗವಂತ ಶ್ರೀಕೃಷ್ಣನು ‘ಯಜ್ಞಾನಾಂ ಜಪಯಜ್ಞೋಸ್ಮಿ’ ಎಂದು ಹೇಳಲಾಗಿದೆ. ಇದರ ಅರ್ಥ ಕಲಿಯುಗದಲ್ಲಿ ನಾಮಜಪವು ಸರ್ವಶ್ರೇಷ್ಠ ಸಾಧನೆಯಾಗಿದೆ. ನಾಮಜಪದ ವೈಶಿಷ್ಟ್ಯ ವೆಂದರೆ ಅದಕ್ಕೆ ಸ್ಥಳ, ಕಾಲ ಇವುಗಳ ಬಂಧನವಿರುವುದಿಲ್ಲ. ಅಂದರೆ ಎದ್ದಾಗ, ಮಲಗಿದಾಗ, ಪ್ರವಾಸ ಮಾಡುವಾಗ, ಮನೆಯಲ್ಲಿರುವಾಗ ಅಥವಾ ಕಚೇರಿಯಲ್ಲಿ(ಆಫೀಸ್) ಕೆಲಸಗಳನ್ನು ಮಾಡುವಾಗ ನಾವು ನಾಮಸ್ಮರಣೆ ಮಾಡಬಹುದು.

3ಈ. ಅಧ್ಯಾತ್ಮವು ಕೃತಿಯ ಶಾಸ್ತ್ರ :
ಅಧ್ಯಾತ್ಮದಲ್ಲಿ ಕೃತಿಯನ್ನು ಮಾಡಲು 98% ಮಹತ್ವವಿದೆ
ಕೆಲವು ಜನರಿಗೆ ನಾವು ದೇವರಿಗಾಗಿ (ದೇವರ ಪ್ರೀತ್ಯರ್ಥ) ಬಹಳಷ್ಟನ್ನು ಮಾಡುತ್ತಿರುತ್ತೇವೆ. ಆದರೆ ನಮಗೆ ಸತ್ಸಂಗದ ಅವಶ್ಯಕತೆ ಏನಿದೆ? ಎಂದು ಅನಿಸುತ್ತಿರಬಹುದು. ಆದರೆ ದೇವರು ಏನೆಲ್ಲ ಮಾಡುತ್ತಾನೆಯೋ ಅದನ್ನು ಕಾಲಾನುಸಾರವೇ ಮಾಡುತ್ತಾನಲ್ಲವೇ? ಮತ್ತು ಅಧ್ಯಾತ್ಮದಲ್ಲಿ ಮುಂದುಮುAದಿನ ಹಂತಕ್ಕೆ ಹೋಗುತ್ತೇವೆಯೋ ಇಲ್ಲವೋ ಇದನ್ನೆಲ್ಲ ನೋಡುವುದು ಮಹತ್ವದ್ದಾಗಿದೆ. ಹೇಗೆ ವ್ಯಾವಹಾರಿಕ ಶಿಕ್ಷಣದಲ್ಲಿ ಒಂದನೆಯ ತರಗತಿಯಿಂದ ಎರಡನೆಯ , ಮೂರನೆಯ ತರಗತಿಗೆ ಹೇಗೆ ಹೋಗುತ್ತೇವೆಯೋ ಹಾಗೆಯೇ ಅಧ್ಯಾತ್ಮದಲ್ಲಿಯೂ ಹಂತಗಳಿರುತ್ತವೆ. ಅನೇಕ ಜನರು ಅಧ್ಯಾತ್ಮ ವಿಷಯದ ಕಥೆಗಳು, ಕೀರ್ತನೆಗಳು, ಪ್ರವಚನಗಳು ಮತ್ತು ವ್ಯಾಖ್ಯಾನಗಳನ್ನು ಕೇಳುತ್ತಾರೆ. ಹಾಗೂ ಗ್ರಂಥವಾಚನವನ್ನು ಮಾಡುತ್ತಾರೆ, ಆದರೆ ಪ್ರತ್ಯಕ್ಷದಲ್ಲಿ ಕೃತಿಯಲ್ಲಿ ಅಷ್ಟೇನೂ ಅಳವಡಿಸಿಕೊಳ್ಳುವುದಿಲ್ಲ. ಅಧ್ಯಾತ್ಮವನ್ನು ಕೃತಿಯಲ್ಲಿ ತರಲು ಗಮನ ನೀಡದಿದ್ದಲ್ಲಿ ಕೇವಲ ತಾತ್ತ್ವಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋದರೆ ಅನಂತಕಾಲದ ತನಕ ತಿಳಿಯುತ್ತಲೇ ಇರಬಹುದು. ಏಕೆಂದರೆ ಅಧ್ಯಾತ್ಮವು ಅನಂತದ ಜ್ಞಾನವಾಗಿದೆ. ಅಧ್ಯಾತ್ಮದಲ್ಲಿ ತಾತ್ತ್ವಿಕ ವಿಷಯವನ್ನು ಅರಿತುಕೊಳ್ಳುವುದಕ್ಕೆ ಹೆಚ್ಚು ಮಹತ್ವವಿಲ್ಲ ಅಧ್ಯಾತ್ಮಕ್ಕೆ ಜೀವನದಲ್ಲಿ ಎಷ್ಟು ಮಹತ್ವವಿದೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಪ್ರತ್ಯಕ್ಷ ಸಾಧನೆಯನ್ನು ಮಾಡಿ ಅದರ ಅನುಭವವನ್ನು ಪಡೆದುಕೊಳ್ಳುವುದು. ಅಂದರೆ ಅಧ್ಯಾತ್ಮವನ್ನು ಜೀವಿಸುವುದು ಮಹತ್ವದ್ದಾಗಿದೆ. ಸಂತ ಜ್ಞಾನೇಶ್ವರ ಮಹಾರಾಜರು, ‘ಒಂದಾದರೂ ದ್ವಿಪದಿಯನ್ನು ಅನುಭವಿಸಬೇಕು’ ಎಂದಿದ್ದಾರೆ. ಅಧ್ಯಾತ್ಮವು ಪ್ರಾಯೋಗಿಕ ಮತ್ತು ಅನುಭೂತಿಯ ಶಾಸ್ತ್ರವಾಗಿದೆ. ಸಾಧನೆಯನ್ನು ಮಾಡದಿದ್ದರೆ ಅನುಭೂತಿ ಬರಲಾರದು. ಹಾಗಾಗಿ ನಾವು ಸಾಧನೆಯನ್ನು ಮಾಡುವುದು ಎಂದರೆ ನಿರ್ದಿಷ್ಟವಾಗಿ ಏನು ಮಾಡಲಿಕ್ಕಿದೆ ಎಂದು ಇಂದು ಈ ಸತ್ಸಂಗದಲ್ಲಿ ಮುಖ್ಯವಾಗಿ ತಿಳಿದುಕೊಳ್ಳುವವರಿದ್ದೇವೆ.

4. ಪಿತೃದೋಷ ಮತ್ತು ದತ್ತನ ನಾಮಜಪದ ಮಹತ್ವ

ಇಂದಿನ ಪ್ರವಚನಗಳಲ್ಲಿ ನಾವು ಪಿತೃದೋಷ ಮತ್ತು ದತ್ತನ ನಾಮಜಪದ ಮಹತ್ವವನ್ನು ಅರಿತುಕೊಳ್ಳುವವರಿದ್ದೇವೆ

4ಅ. ಪಿತೃದೋಷ ಅಂದರೇನು? : ಮೊದಲಿಗೆ ನಾವು ಪಿತೃದೋಷ ಅಂದರೆ ಏನು ಅಂತ ತಿಳಿದುಕೊಳ್ಳೋಣ. ನಾವು ಹಿಂದೂ ಸಂಸ್ಕೃತಿಯಲ್ಲಿ ಮಾತೃ-ಪಿತೃ ಪೂಜೆಗೆ ಬಹಳ ಮಹತ್ವವಿದೆ. ಹಿಂದೂ ಧರ್ಮದಲ್ಲಿ ನಾಲ್ಕು ಋಣಗಳನ್ನು ಹೇಳಲಾಗಿದೆ. ಅದರಲ್ಲಿ ಪಿತೃಋಣವು ಸಹ ಒಂದು ಋಣವಾಗಿದೆ. ಜೀವಂತವಿರುವಾಗ ತಂದೆತಾಯಿಯ ಸೇವೆಯನ್ನು ಮಾಡುವುದು ಮತ್ತು ಮೃತ್ಯುವಿನ ನಂತರ ಮರ್ತ್ಯಲೋಕದಿಂದ ಅವರನ್ನು ಮುಕ್ತಗೊಳಿಸಲು ಶ್ರಾದ್ಧಾದಿ ಧಾರ್ಮಿಕ ವಿಧಿಗಳನ್ನು ಮಾಡುವುದರ ಮೂಲಕ ಪಿತೃಋಣದಿಂದ ಮುಕ್ತರಾಗಬಹುದು. ನಾವು ಪೂರ್ವಜರ ಸಂಪತ್ತು ಆಸ್ತಿಗಳನ್ನು ಉಪಯೋಗಿಸುತ್ತಿರುತ್ತೇವೆ. ಆದರೆ ಅವರಿಗೆ ಮೃತ್ಯುಲೋಕದಿಂದ ಮುಕ್ತಿ ನೀಡಲು ಏನೂ ಮಾಡುವುದಿಲ್ಲ. ಇಂದಿನ ಆಧುನಿಕ ಕಾಲದಲ್ಲಿ ಪೂರ್ವಜರ ವಿಷಯದಲ್ಲಿ ಕೃತಜ್ಞತಾ ಭಾವವೇ ಉಳಿದಿಲ್ಲ. ಹೆಚ್ಚಿನ ಜನರು ಪೂರ್ವಜರ ಮುಕ್ತಿಯತ್ತ ದುರ್ಲಕ್ಷ್ಯ ಮಾಡುತ್ತಾರೆ. ಹಾಗಾಗಿ ಅವರು ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾರೆ ಮತ್ತು ನಾವು ಅವರ ಮುಕ್ತಿಗಾಗಿ ಏನಾದರೊಂದು ಪ್ರಯತ್ನ ಮಾಡಬೇಕು ಎಂಬ ಉದ್ದೇಶದಿಂದ ಪೂರ್ವಜರು ನಮ್ಮ ಸಾಂಸಾರಿಕ ಜೀವನದಲ್ಲಿ ಅಡಚಣೆಗಳನ್ನು ತಂದೊಡ್ಡುತ್ತಾರೆ. ಈ ಅಡಚಣೆಗಳ ನಿಮಿತ್ತ ಸಮಾಜದ ಜನರು ತಮ್ಮ ಮುಕ್ತಿಗಾಗಿ ಪ್ರಯತ್ನಗಳನ್ನು ಹುಡುಕತೊಡಗುತ್ತಾರೆ. ಯಾರು ಪೂರ್ವಜರ ಸ್ಮರಣೆಯಿಟ್ಟು ನಿಯಮಿತವಾಗಿ ಧಾರ್ಮಿಕ ಕೃತಿಗಳನ್ನು ಮಾಡುತ್ತಾರೆಯೋ ಅವರ ಕಲ್ಯಾಣವೂ ಖಂಡಿತವಾಗಿಯೂ ಆಗಲಿದೆ.
ಸ್ಲೈಡ್ : ಪೂರ್ವಜರಿಂದ ತೊಂದರೆ ಆಗಬಾರದು ಎಂದು ಪ್ರತಿದಿನ ‘ಶ್ರೀಗುರುದೇವ ದತ್ತ’ ಈ ನಾಮಜಪವನ್ನು ಮಾಡಿ

4ಆ. ಪೂರ್ವಜರಿಂದ ತೊಂದರೆಯಾಗುತ್ತಿರುವುದರ ಲಕ್ಷಣಗಳು : ನಮಗೆ ಪೂರ್ವಜರಿಂದ ತೊಂದರೆಯಿದೆಯೋ ಇಲ್ಲವೇ ಎಂದು ಗುರುತಿಸಲು ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ ಹೀಗೆ ಕೆಲವು ಲಕ್ಷಣಗಳಿವೆ. ಅದನ್ನು ನಾವು ಅರಿತುಕೊಳ್ಳೋಣ. ಶರೀರಕ್ಕೆ ಅಸಾಧ್ಯ ರೋಗ ಬರುವುದು, ಅಥವಾ ಅನಾರೋಗ್ಯ ಉಂಟಾಗುವುದು, ಚರ್ಮರೋಗಗಳಾಗುವುದು, ಹಾವು ಕಡಿಯುವುದು, ಇವೆಲ್ಲ ಪಿತೃದೋಷದ ಕೆಲವು ಶಾರೀರಿಕ ಸ್ತರದ ಲಕ್ಷಣಗಳಾಗಿವೆ. ಮನಸ್ಸು ಅಶಾಂತ, ಅಸ್ವಸ್ಥವಾಗವುದು, ಭಯವೆನಿಸುವುದು, ಬೆಚ್ಚಿಬೀಳುವುದು, ಭ್ರಮೆಯಾಗುವುದು, ಕೆಟ್ಟ ಕನಸುಗಳು ಬೀಳುವುದು, ನಿದ್ರಾಹೀನತೆ, ಗರ್ಭಧಾರಣೆ ಆಗದಿರುವುದು, ಪದೇ ಪದೇ ಯಾವುದೇ ಕಾರಣವಿಲ್ಲದಿದ್ದರೂ ಗರ್ಭಪಾತ ವಾಗುವುದು, ಮಕ್ಕಳು ಸಮಯಕ್ಕೆ ಮೊದಲೇ ಹುಟ್ಟುವುದು, ಬುದ್ಧಿಮಾಂದ್ಯ ಮಕ್ಕಳು ಹುಟ್ಟುವುದು ಅಥವಾ ಅಂಗವಿಕಲ ಮಕ್ಕಳು ಹುಟ್ಟುವುದು, ಮಕ್ಕಳು ಹುಟ್ಟಿದರೂ ಬಾಲ್ಯದಲ್ಲಿಯೇ ಮೃತ್ಯುವಾಗುವುದು, ಹಣ ಇದ್ದರೂ ಮನೆಯಲ್ಲಿ ಸಮಾಧಾನ ಇಲ್ಲದಿರುವುದು, ಹಣ ಸಾಕಾಗದಿರುವುದು, ಮುಂತಾದ ರೀತಿಯ ತೊಂದರೆಗಳಾಗುತ್ತವೆ. ಈ ಲಕ್ಷಣಗಳ ಅಭ್ಯಾಸವನ್ನು ಮಾಡಿದರೆ ಗಮನಕ್ಕೆ ಬರುವುದೇನೆಂದರೆ ಕಲಿಯುಗದಲ್ಲಿ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಎಲ್ಲರಿಗೂ ಪೂರ್ವಜರಿಂದ ತೊಂದರೆಗಳಿರುತ್ತವೆ. ಆ ತೊಂದರೆ ದೂರವಾಗಬೇಕು ಮತ್ತು ಪಿತೃಗಳಿಗೆ ಗತಿ ಸಿಗಬೇಕು ಎಂದು ಅತ್ಯಂತ ಸುಲಭ ಹಾಗೂ ಸಹಜ ಉಪಾಯವೆಂದರೆ ಪ್ರತಿಯೊಬ್ಬರೂ ಪ್ರತಿದಿನ ‘ಶ್ರೀ ಗುರುದೇವ ದತ್ತ’ ಜಪ ಮಾಡಬೇಕು.

4ಇ. ದತ್ತನ ನಾಮಜಪವನ್ನು ಯಾರು ಮತ್ತು ಎಷ್ಟು ಮಾಡಬೇಕು? : ಈಗ ನಾವು ಪೂರ್ವಜರ ತೊಂದರೆಗಳನ್ನು ನೋಡಿದೆವು, ಆ ರೀತಿಯ ತೊಂದರೆಗಳು ನಮಗೆ ಇಲ್ಲದಿದ್ದರೂ ಮುಂದೆ ಆಗಬಾರದು ಎಂದು ಹಾಗೂ ಅಲ್ಪಸ್ವಲ್ಪ ತೊಂದರೆಯಾಗುತ್ತಿದ್ದಲ್ಲಿ ಕಡಿಮೆ ಪಕ್ಷ 1 ರಿಂದ 2 ಗಂಟೆ ದತ್ತನ ನಾಮಜಪ ಮಾಡಬೇಕು. ಮಧ್ಯಮ ತೊಂದರೆಯಿದ್ದಲ್ಲಿ 2 ರಿಂದ 4 ಗಂಟೆ ದತ್ತನ ನಾಮಜಪ ಮಾಡಬೇಕು ಹಾಗೂ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ 7 ಪ್ರದಕ್ಷಿಣೆಗಳನ್ನು ಹಾಕಬೇಕು. ತೀವ್ರ ತೊಂದರೆಯಿದ್ದಲ್ಲಿ 4 ರಿಂದ 6 ಗಂಟೆ ನಾಮಜಪ ಮಾಡಬೇಕು. ಯಾವುದಾದರೊಂದು ಜ್ಯೋತಿರ್ಲಿಂಗವಿರುವಲ್ಲಿಗೆ ಹೋಗಿ ನಾರಾಯಣಬಲಿ, ನಾಗಬಲಿ, ತ್ರಿಪಿಂಡಿ ಶ್ರಾದ್ಧ, ಕಾಲಸರ್ಪಶಾಂತಿಯAತಹ ವಿಧಿಗಳನ್ನು ಈ ಕ್ಷೇತ್ರದ ಅಧಿಕಾರಿ ವ್ಯಕ್ತಿಯ ಬಳಿ ವಿಚಾರಿಸಿಕೊಳ್ಳಬೇಕು. ಅದರ ಜೊತೆಗೆ ಯಾವುದಾರೊಂದು ದತ್ತಕ್ಷೇತ್ರದಲ್ಲಿದ್ದು ಸಾಧನೆಯನ್ನು ಮಾಡಬೇಕು ಅಥವಾ ಸಂತಸೇವೆ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು.
4ಈ. ದತ್ತನ ನಾಮಜಪದ ಮಹತ್ವ : ಇಂದು ಸಮಾಜದ ಹೆಚ್ಚಿನ ಜನರು ಸಾಧನೆಯನ್ನು ಮಾಡುತ್ತಿಲ್ಲ, ಹಾಗೂ ಮಾಯೆಯಯಲ್ಲಿ ಸಿಲುಕಿಕೊಂಡಿದ್ದಾರೆ. ಮಾಯೆಯಲ್ಲಿ ಸಿಲುಕಿರುವುದರಿಂದ ಅವರ ಇಚ್ಛೆ ವಾಸನೆಗಳು ಮೃತ್ಯುವಿನ ನಂತರವೂ ಹಾಗೆಯೇ ಇರುತ್ತವೆ. ಇಂತಹವರ ಲಿಂಗದೇಹವು ಅತೃಪ್ತವಾಗಿರುತ್ತದೆ. ಇಂತಹ ಅತೃಪ್ತ ಲಿಂಗದೇಹವು ಮರ್ತ್ಯಲೋಕದಲ್ಲಿ ಅಂದರೆ ಮೃತ್ಯುಲೋಕದಲ್ಲಿ ಸಿಲುಕಿ ಕೊಂಡಿರುತ್ತಾರೆ. ‘ಪೂರ್ವಜರಿಗೆ ಗತಿ ನೀಡುವುದು’ ಇದು ಶ್ರೀ ದತ್ತತತ್ತ್ವದ ವಿಶೇಷ ಕಾರ್ಯವೇ ಆಗಿರುವುದರಿಂದ ದತ್ತನ ನಾಮಜಪದಿಂದ ಕಡಿಮೆ ಕಾಲಾವಧಿಯಲ್ಲಿ ಲಿಂಗದೇಹಕ್ಕೆ ಹಾಗೂ ವಾತಾವರಣದ ಕಕ್ಷೆಯಲ್ಲಿ ಸಿಲುಕಿರುವ ಅವರ ಇತರ ಪೂರ್ವಜರಿಗೂ ಗತಿ ಸಿಗುತ್ತದೆ. ದತ್ತಗುರುಗಳ ನಾಮಜಪವನ್ನು ಮನಸ್ಸಿಟ್ಟು ಏಕಾಗ್ರತೆಯಿಂದ ಮಾಡಲು ಪ್ರಯತ್ನಿಸಬೇಕು. ದತ್ತನ ನಾಮಜಪದಿಂದ ಅತೃಪ್ತ ಪೂರ್ವಜರ ತೊಂದರೆಯಿಂದ ರಕ್ಷಣೆಯಾಗುತ್ತದೆ. ನಾಮಜಪದಿಂದ ಉತ್ಪನ್ನವಾದ ಶಕ್ತಿಯಿಂದ ನಾಮಜಪಿಸುವವರ ಸುತ್ತಲೂ ಸಂರಕ್ಷಕ ಕವಚವು ತಯಾರಾಗುತ್ತದೆ. ನಾಮಜಪ ಮಾಡುವ ಮೊದಲು ಶ್ರೀ ದತ್ತಗುರುಗಳಲ್ಲಿ ಪ್ರಾರ್ಥನೆಯನ್ನು ಮಾಡಬಹುದು. ಉದಾ, ಹೇ ದತ್ತಾತ್ರೇಯನೆ, ಭುವರ್ಲೋಕದಲ್ಲಿ ಸಿಲುಕಿರುವ ನನ್ನ ಅತೃಪ್ತ ಪೂರ್ವಜರಿಗೆ ಮುಂದಿನ ಗತಿ ನೀಡಿ. ಹೇ ದತ್ತಾತ್ರೇಯ, ಅತೃಪ್ತ ಪೂರ್ವಜರ ತೊಂದರೆಯಿAದ ನೀನೇ ನಮ್ಮ ರಕ್ಷಣೆಯನ್ನು ಮಾಡಿ. ನಿಮ್ಮ ಸಂರಕ್ಷಣಾ ಕವಚವು ನನ್ನ ಸುತ್ತಲೂ ಸತತವಾಗಿರಲಿ.

ನಾವೆಲ್ಲರೂ ಮುಂದಿನ ವಾರದಲ್ಲಿ ಶ್ರೀ ದತ್ತಗುರುಗಳ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಹೆಚ್ಚುಹೆಚ್ಚು ಸಮಯ ಮತ್ತು ಭಾವಪೂರ್ಣವಾಗಿ ಮಾಡಲು ಪ್ರಯತ್ನ ಮಾಡೋಣ. ಈ ಸಂಕೇತಸ್ಥಳದಲ್ಲಿ ಪಿತೃದೋಷ, ದತ್ತಗುರುಗಳ ನಾಮಜಪ, ಅಧ್ಯಾತ್ಮದ ಮಹತ್ವ, ವಿಜ್ಞಾನದ ಮಿತಿ ಮುಂತಾದ ಮಾಹಿತಿ ಲಭ್ಯವಿದೆ. www.sanatanshop.com ಸಂಕೇತಸ್ಥಳದಲ್ಲಿ ಆನಂದೀ ಜೀವನಕ್ಕಾಗಿ ಅಧ್ಯಾತ್ಮ, ಸುಗಮ ಅಧ್ಯಾತ್ಮಶಾಸ್ತ್ರ, ಆಚಾರಧರ್ಮ, ಹಿಂದೂ ಧರ್ಮ ಹಾಗೂ ಧರ್ಮಗ್ರಂಥ ಮುಂತಾದ ವಿವಿಧ ವಿಷಯಗಳ ಗ್ರಂಥಗಳು ಮಾರಾಟಕ್ಕಾಗಿ ಲಭ್ಯವಿದೆ. ತಾವೆಲ್ಲರೂ ಅಗತ್ಯವಾಗಿ ಅದರ ಲಾಭ ಪಡೆದುಕೊಳ್ಳಿ

5. ಆಪತ್ಕಾಲ ಮತ್ತು ಸಾಧನೆಯ ಮಹತ್ವ

5ಅ. ಕೊರೊನಾ ಮಹಾಮಾರಿ ಮತ್ತು ಮೂರನೆಯ ಮಹಾಯುದ್ಧದ ನಾಂದಿ(ಮುನ್ನುಡಿ) : ನಾವು ಕಳೆದ ಕೆಲವು ತಿಂಗಳಿನಿAದ ಕೊರೊನಾ ಎಂಬ ಹೆಸರಿನ ಸೂಕ್ಷ್ಮ ವೈರಾಣುವು ಜಗತ್ತಿನಾದ್ಯಂತ ಹಾಹಾಕಾರವನ್ನು ಹಬ್ಬಿಸುತ್ತಿರುವುದನ್ನು ನೋಡುತ್ತಿದ್ದೇವೆ. ಕೊರೊನಾ ವೈರಾಣುವಿನ ಸಂಸರ್ಗದಿAದ 26 ಸಪ್ಟಂಬರ ತನಕ 10 ಲಕ್ಷ (ನಿಖರವಾದ ಅಂಕಿಅAಶ : 9ಲಕ್ಷ 88 ಸಾವಿರದ 532)) ಜನರು ಮೃತ್ಯು ಹೊಂದಿದ್ದಾರೆ. ಭಾರತ ಒಂದರಲ್ಲಿಯೇ ಸುಮಾರು 1 ಲಕ್ಷ ದಷ್ಟು (ನಿಖರವಾಗಿ 92 ಸಾವಿರದ 290) ಜನರು ಸತ್ತಿದ್ದಾರೆ. ಮತ್ತು ಜಗತ್ತಿನಾದ್ಯಂತ ಸುಮಾರು ಮೂರುಕಾಲು ಕೋಟಿ ಜನರು (ನಿಖರವಾದ ಅಂಕಿಅಂಶ : 3 ಕೋಟಿ 24 ಸಾವಿರ 60 ಸಾವಿರ 127) ಜನರು ಸೊಂಕಿತರಾಗಿದ್ದಾರೆ.

ಅದೇ ರೀತಿ ಅನೇಕ ದೇಶಗಳ ರಾಜಕಾರಣಿಗಳಲ್ಲಿ ದೇಶವಿಸ್ತಾರದ ಭೂಮಿಕೆಯಿಂದ ಇನ್ನೊಂದು ದೇಶದ ಭೂಮಿಯನ್ನು ಕಬಳಿಸಿ ಅಸ್ಥಿರತೆಯನ್ನು ಹುಟ್ಟಿಸಲಾಗುತ್ತಿದೆ. ಇದರಿಂದ ಸಂಪೂರ್ಣ ಜಗತ್ತಿನಲ್ಲಿಯೇ ಯುದ್ಧಜನ್ಯ ಪರಿಸ್ಥಿತಿಯು ಬಂದೊದಗಿದೆ. ಇದನ್ನೆಲ್ಲ ನಾವು ನೋಡುತ್ತಿದ್ದೇವೆ. ಭಾರತ-ಚೀನಾ ಗಡಿಯಲ್ಲಿಯೂ ಒತ್ತಡವು ಹೆಚ್ಚಾಗುತ್ತಿದೆ. ಒಂದು ರೀತಿಯಲ್ಲಿ ಸಂಪೂರ್ಣ ಜಗತ್ತು ಎರಡು ಗುಂಪುಗಳಲ್ಲಿ ವಿಭಜಿಸಲ್ಪಟ್ಟಿದೆ. ಹಾಗಾಗಿ ಮೂರನೆಯ ಮಹಾಯುದ್ಧವು ಯಾವಾಗ ಭುಗಿಲೇಳುವುದು ಎಂದು ಹೇಳಲಾಗುವುದಿಲ್ಲ. ಮೇಲೆಮೇಲೆ ನೋಡಿದಾಗ ಎಲ್ಲ ಪರಿಸ್ಥಿತಿಯು ಭೌತಿಕ ಅನಿಸಿದರೂ ಇದೆಲ್ಲವೂ ಕಾಲಚಕ್ರದ ಪರಿಣಾಮವಾಗಿದೆ ಎಂದು ಗಮನದಲ್ಲಿರಿಸಕೊಳ್ಳಬೇಕು.

5ಆ. ದೃಷ್ಟಾರ ಸಂತರು ಮತ್ತು ಭವಿಷ್ಯಕಾರರು ಆಪತ್ಕಾಲದ ಬಗ್ಗೆ ಹೇಳಿದಂತಹ ಸಂಕೇತಗಳು (ಮುನ್ಸೂಚನೆಗಳು)
* ಮೂರನೆಯ ಮಹಾಯುದ್ಧವು ಎಷ್ಟು ಭಯಂಕರವಾಗಿರಲಿದೆ ಎಂದರೆ ಇದರ ಎದುರು ಮೊದಲಿನ ಎರಡು ಮಹಾಯುದ್ಧಗಳು ಮಕ್ಕಳಾಟಿಕೆಯಂತೆ ಅನಿಸಲಿದೆ! – ನಾಸ್ಟರ್‌ಡಾಮಸ್
* ಮೂರನೆಯ ಮಹಾಯುದ್ಧವು ಅತ್ಯಂತ ಭಯಂಕರವಾಗಿರಲಿದೆ. ದೊಡ್ಡ ಪ್ರಮಾಣದಲ್ಲಿ ಸಂಹಾರವಾಗಲಿದೆ. ಊರಿಗೆ ಊರುಗಳು ವಿನಾಶಗೊಳ್ಳುವುವು. ಇದರಿಂದ ಪಾರಾಗಲು ಸಾಧನೆಯ ಬಲವಿರುವುದು ಅತ್ಯಂತ ಅವಶ್ಯಕವಾಗಿದೆ! – ಪರಾತ್ಪರ ಗುರು ಡಾ.ಆಠವಲೆ

ಅನೇಕ ದೃಷ್ಟಾರ ಸಾಧು-ಸಂತರು, ಭವಿಷ್ಯಕಾರರು ಇವೆಲ್ಲರೂ ಇದಕ್ಕೂ ಮೊದಲು ಸಹ ಮಹಾಭೀಷಣ ಆಪತ್ಕಾಲದ ವಿಷಯದಲ್ಲಿ ಸೂಚಿಸಿದ್ದಾರೆ. ನಾಲ್ಕು ನೂರು ವರ್ಷಗಳ ಮೊದಲು ನಾಸ್ಟರ್‌ಡಾಮಸ್ ಎಂಬ ಪ್ರಸಿದ್ಧ ದೃಷ್ಟಾರನೊಬ್ಬರು ಫ್ರಾನ್ಸ್ ದೇಶದಲ್ಲಿ ಆಗಿಹೋದರು. ಅವರು ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದರು ಮತ್ತು ಅವೆಲ್ಲವೂ ಹೇಗೆ ಹೇಳಿದ್ದರೋ ಹಾಗೆಯೆ ಆಗಿವೆ. ಅವರು ಮೊದಲನೆಯ ಹಾಗೂ ಎರಡನೆಯ ಮಹಾಯುದ್ಧದ ವಿಷಯದಲ್ಲಿ ಏನೆಲ್ಲ ಹೇಳಿದ್ದರೋ ಅವೆಲ್ಲವೂ ವಾಸ್ತವದಲ್ಲಿಯೂ ಘಟಿಸಿದೆ. ನಾಸ್ಟರ್‌ಡಾಮಸ್ ರು ಮೂರನೆಯ ಮಹಾಯುದ್ದಧ ವಿಷಯದಲ್ಲಿ ಏನು ಹೇಳಿದ್ದಾರೆಂದು ಅವರ ಮಾತುಗಳಲ್ಲಿಯೇ ಒಮ್ಮೇ ಕೇಳಿಕೊಳ್ಳೋಣ. ಮೂರನೆಯ ಮಹಾಯುದ್ಧವು ಎಷ್ಟು ಭಯಂಕರವಾಗಿರಲಿದೆ ಎಂಧರೆ ನಿಮಗೆ ಮೊದಲ ಎರಡು ಮಹಾಯುದ್ಧಗಳು ಮಕ್ಕಳಾಟಿಕೆಯಂತೆ ಅನಿಸಲಿವೆ. ಈ ಭವಿಷ್ಯವಾಣಿಯಿಂದ ಮುಂಬರುವ ವಿಶ್ವಯುದ್ಧದ ಭಯಾನಕ ಸ್ವರೂಪವು ತಮ್ಮ ಗಮನಕ್ಕೆ ಬಂದಿರಬಹುದು. ಭಾರತದಲ್ಲಿರುವ ಅನೇಕ ಸಂತರು ಸಹ ಇದೇ ರೀತಿ ಹೇಳಿದ್ದಾರೆ. ಸನಾತನ ಸಂಸ್ಥೆಯ ಸಂಸ್ಫಾಪಕ ಪರಾತ್ಪರ ಗುರು ಡಾ.ಆಠವಲೆಯವರು ಸಹ ಮೂರನೆಯ ಮಹಾಯುದ್ಧವು ಅತ್ಯಂತ ಮಹಾಭಯಂಕರವಾಗಿರಲಿದೆ. ಇದರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸಂಹಾರವಾಗಲಿದೆ. ಊರಿಗೆ ಊರುಗಳೇ ವಿನಾಶವಾಗಿ ಹೋಗಲಿವೆ. ಇದರಿಂದ ಪಾರಾಗಿ ಹೋಗಲು ಸಾಧನೆಯ ಬಲವಿರುವುದು ಅವಶ್ಯವಾಗಿದೆ. ವರ್ಷ 2020ರಿಂದ 2023ರ ವರ್ಷಗಳು ಆಪತ್ಕಾಲ ಹಾಗೂ ಯುದ್ಧಕಾಲವಾಗಿರಲಿವೆ. ಅನಂತರ 2023ರಲ್ಲಿ ಹಿಂದೂ ರಾಷ್ಟçದ ಅಂದರೆ ರಾಮರಾಜ್ಯಕ್ಕೆ ಸಮಾನವಾದ ಈಶ್ವರೀ ರಾಜ್ಯವು ಸ್ಥಾಪನೆಯಾಗಲಿದೆ’ ಎಂದು ಹೇಳಿದ್ದಾರೆ

ಈ ಕೆಲವು ಉದಾಹರಣೆಗಳಿಂದ ತಮಗೆಲ್ಲ ಆಪತ್ಕಾಲವು ಪ್ರಾರಂಭವಾಗಿದೆ ಎಂದು ಗಮನಕ್ಕೆ ಬಂದಿರಬಹುದು ಮತ್ತು ಕೊರೊನಾ ಮಹಾಮಾರಿಯು ಅದರ ಒಂದು ತುಣುಕಾಗಿದೆ. ವರ್ಷದ ಹಿಂದೆ ಯಾರೂ ಇಂತಹ ಒಂದು ಸೂಕ್ಷ್ಮವಾದ ವೈರಾಣುವು ಸಂಪೂರ್ಣ ಜಗತ್ತಿನ ವ್ಯವಹಾರಗಳನ್ನೆಲ್ಲ ಸ್ಥಗಿತಗೊಳಿಸಲಿದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಸಂತರು ತ್ರಿಕಾಲದರ್ಶಿಗಳಾಗಿರುವುದರಿಂದ ಅವರಿಗೆ ಕೆಲವು ಕುರುಹುಗಳನ್ನು (ಮುನ್ಸೂಚನೆ) ನೀಡಿ ನಮ್ಮನ್ನು ಜಾಗರೂಕಗೊಳಿಸುತ್ತಿದ್ದಾರೆ. ಈ ಕುರುಹುಗಳನ್ನು ಗುರುತಿಸಿ ಸಂತರ ಆಜ್ಞಾಪಾಲನೆಯನ್ನು ಮಾಡಿದರೆ ಆಪತ್ಕಾಲವು ಸುಸಹ್ಯವಾಗಲಿದೆ.

5ಇ. ಆಪತ್ಕಾಲವು ಕಾಲಚಕ್ರದ ಪರಿಣಾಮ :
ಕೊರೊನಾ ಮಹಾಮಾರಿಯಿಂದ ಸಂಪೂರ್ಣ ಜಗತ್ತಿನ ಆರ್ಥಿಕತೆಯು ಅಲ್ಲೋಲಕಲ್ಲೋಲವಾಗಿದೆ. ನಿರುದ್ಯೋಗ, ಹಣದುಬ್ಬರ, ಇವೆಲ್ಲ ವ್ಯಕ್ತಿಯ ದೈನಂದಿನ ಜೀವನದಲ್ಲಿ ನೇರ ಪರಿಣಾಮ ಬೀರುತ್ತವೆ. ಈ ಸ್ಥಿತಿಯು ಬದಲಾಗಿ ಅದು ಮೊದಲಿನಂತೆ ಯಾವಾಗ ಆಗಲಿದೆ, ಈ ವಿಷಯದಲ್ಲಿ ಯಾರು ನಿಶ್ಚಿತವಾಗಿ ಏನೂ ಹೇಳಲಾಗದು. ಎಲ್ಲರೂ ಕೊರೊನಾದ ಲಸಿಕೆಗಾಗಿ ನೊಡುತ್ತಿದ್ದರೂ ಆ ಲಸಿಕೆಯಿಂದ ಎಲ್ಲ ಪರಿಸ್ಥಿತಿ ಸರಿಹೋಗುವುದು ಎಂಬ ಲಕ್ಷಣಗಳು ಎಲ್ಲಿಯೂ ಕಾಣಿಸುತ್ತಿಲ್ಲ. ಕಾಲಚಕ್ರದ ಪರಿಣಾಮವೇ ಇದಾಗಿದೆ. ಕಲಿಯುಗಾಂತರ್ಗತ ಕಲಿಯಗಾಂತರ್ಗತ ಕಲಿಯುಗವು ಸಮಾಪ್ತಿಯಾಗಿ ಕಲಿಯುಗಾಂತರ್ಗತ ಸತ್ಯಯುಗವು ಪ್ರಾರಂಭವಾಗುವ ಕಾಲ ಇದಾಗಿದೆ. ಇದಕ್ಕೆ ಸಂಧಿಕಾಲ ಎನ್ನಲಾಗುತ್ತದೆ. ಇದು ಹೊರಗಿನಿಂದ ಕಠಿಣ ಕಾಲ ಅನಿಸಿದರೂ ಈ ಕಾಲದಲ್ಲಿ ಸಾಧನೆಯನ್ನು ಮಾಡುವುದರಿಂದ ಅದರ ಆಧ್ಯಾತ್ಮಿಕ ಫಲವು ಅನೇಕ ಪಟ್ಟು ಹೆಚ್ಚು ಸಿಗುತ್ತದೆ. ಸದ್ಯದ ಕೊರೊನಾ ಮಹಾಮಾರಿಯ ಕಾಲದಲ್ಲಿ ನಮ್ಮಲ್ಲಿ ಮೊಬೈಲ್, ಟಿ.ವಿ, ಇಂಟರನೆಟ್ ಮುಂತಾದ ಸುಖಸೌಕರ್ಯಗಳಿವೆ. ಮುಂದೆ ಕೊರೊನಾಕ್ಕಿಂತಲೂ ಭೀಷಣ ಆಪತ್ಕಾಲವನ್ನು ಎದುರಿಸಲಿಕ್ಕಿದೆ, ಆದರೆ ಆ ಕಾಲದಲ್ಲಿ ಈ ಎಲ್ಲ ಸೌಲಭ್ಯಗಳು ಇಲ್ಲವಾಗುವುದು. ಇಂತಹ ಸಮಯದಲ್ಲಿ ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಆತ್ಮಬಲವು ಹೆಚ್ಚಾಗುವುದು ಅವಶ್ಯವಾಗಿದೆ. ಈ ಆತ್ಮಬಲವನ್ನು ಹೆಚ್ಚಿಸಲು ಸಾಧನೆಯನ್ನೇ ಮಾಡಬೇಕಾಗಿದೆ.

5ಈ. ಆಪತ್ಕಾಲದಲ್ಲಿ ಭಗವಂತನು ಭಕ್ತರ ಕಾಳಜಿಯನ್ನು ವಹಿಸುತ್ತಾನೆ : ಸಾಧನೆಯ ಬಲವಿದ್ದರೆ, ಈಶ್ವರನು ಹೇಗೆ ಕಾಳಜಿ ವಹಿಸುತ್ತಾನೆ ಅಥವಾ ಭಕ್ತರ ರಕ್ಷಣೆಗಾಗಿ ಅವತರಿಸುತ್ತಾನೆ ಇದರ ಉದಾಹರಣೆಗಳು ನಮ್ಮ ಗ್ರಂಥಧಲ್ಲಿ ಹಾಗೂ ಪುರಾಣಗಳಲ್ಲಿದೆ. ನಮಗೆಲ್ಲರಿಗೂ ಭಕ್ತ ಪ್ರಹ್ಲಾದನ ವಿಷಯವು ಸಹ ಗೊತ್ತಿದೆ. ಭಕ್ತ ಪ್ರಹ್ಲಾದನಿಗೆ ಹಿರಣ್ಯಕಶ್ಯಪುವು ಬಹಳ ಹಿಂಸಿಸಿದನು. ಪ್ರಹ್ಲಾದನು ದೇವತೆಗಳಿಂದ ವರವನ್ನು ಪಡೆದು ಅಹಂಕಾರಿಯಾಗಿದ್ದ ಹಿರಣ್ಯಕಶ್ಯಪುವಿನ ಅಧಿಕಾರವನ್ನು ಒಪ್ಪಿಕೊಳ್ಳದೇ ಶ್ರೀವಿಷ್ಣುವಿನ ನಾಮಸ್ಮರಣೆಯನ್ನು ಪ್ರಾರಂಭಿಸಿದನು. ಅವನು ಆ ನಾಮಜಪ ಮಾಡಬಾರದು ಎಂದು ಅವನನ್ನು ಕುದಿಯುತ್ತಿದ್ದ ಎಣ್ಣೆಯೊಳಗೆ ಹಾಕಲಾಯಿತು, ಎತ್ತರದ ಪರ್ವತಗಳ ತುದಿಯಿಂದ ಕೆಳಗೆ ಎಸೆಯಲಾಯಿತು. ಹಾಗೂ ಉನ್ಮತ್ತ ಆನೆಗಳಿಂದ ತುಳಿಸಲಾಯಿತು. ಆದರೆ ಪ್ರತಿಬಾರಿ ಪ್ರಹ್ಲಾದನ ರಕ್ಷಣೆಯಾಯಿತು. ಅವನಿಗೆ ಈ ಭಯಂಕರ ಸಂಕಟಗಳ ಬಿಸಿ ತಗಲಲಿಲ್ಲ. ಬದಲಾಗಿ ಭಗವಂತ ವಿಷ್ಣುವು ಪ್ರಹ್ಲಾದನಿಗಾಗಿ ನರಸಿಂಹ ಅವತಾರವನ್ನು ತಾಳಿದನು ಮತ್ತು ಅವರು ಹಿರಣ್ಯಕಶ್ಯಪುವನ್ನು ನಾಶಮಾಡಿದರು. ಇದು ಕೇವಲ ಪುರಾಣದ ಕಥೆಯಲ್ಲ; ಇಂದಿನ ಕಾಲದಲ್ಲಿಯೂ ಇಂತಹ ಅನೇಕರು ಈಶ್ವರನ ಕೃಪೆಯ ಬಗ್ಗೆ ಬುದ್ಧ್ದಿಯ ಆಚೆಗಿನ ಅನುಭೂತಿಗಳನ್ನು ಪಡೆದುಕೊಂಡಿದ್ದಾರೆ. ಹೇಗೆ ಬೀಸುವ ಕಲ್ಲಿನಲ್ಲಿ ಎಲ್ಲ ಧಾನ್ಯಗಳು ಹುಡಿಯಾಗಿ ಹೋಗುತ್ತವೆ, ಆದರೆ ಗೂಟದ ಹತ್ತಿರವಿರುವ ಧಾನ್ಯಗಳು ಹಾಗೆಯೇ ಉಳಿಯುತ್ತವೆ. ಅದೇ ರೀತಿ ನಾವು ಸಹ ಸಾಧನಾರೂಪೀ ಗೂಟ ಹಿಡಿದುಕೊಂಡರೆ ಆಪತ್ಕಾರೂಪೀ ಬೀಸುವಕಲ್ಲಿನಲ್ಲಿ ಸಿಲುಕಿ ಕೊಳ್ಳಲಾರೆವು. ಸಾಧನೆ ಬಿಟ್ಟರೆ ಬೇರೆ ದಾರಿಯಿಲ್ಲ, ಈ ದಾರಿ ಹಿಡಿಯದಿದ್ದರೆ ಉದ್ಧಾರವಾಗುವುದಿಲ್ಲ. ಉದ್ಧಾರವಾಗದೇ ಮುಕ್ತಿಯಿಲ್ಲ ಮತ್ತು ಮುಕ್ತಿಯಿಲ್ಲದೇ ಮೋಕ್ಷವಿಲ್ಲ ಎಂದು ಸಂತರು ಹೇಳಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಅಧ್ಯಾತ್ಮವನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಅಮೂಲ್ಯವಾದ ಮನುಷ್ಯ ಜನ್ಮವು ವ್ಯರ್ಥವಾಗಿ ಹೋಗಬಹುದು.

6. ಸಂದೇಹ ನಿವಾರಣೆ

ಈ ಮೊದಲ ಪ್ರವಚನದಲ್ಲಿ ನಾವೆಲ್ಲರೂ ಅಧ್ಯಾತ್ಮದ ಮಹತ್ವ ಮತ್ತು ಪಿತೃದೋಷ ದೂರಗೊಳಿಸಲು ದತ್ತನ ನಾಮಜಪಿಸುವುದರ ಮಹತ್ವವನ್ನು ಅರಿತುಕೊಂಡೆವು. ಈಗ ಹೇಳಿದ ವಿಷಯದಲ್ಲಿ ಯಾರಿಗಾದರೂ ಏನಾದರೂ ಸಂದೇಹವಿದ್ದಲ್ಲಿ ಅಥವಾ ಪ್ರಶ್ನೆಗಳಿದ್ದಲ್ಲಿ ವಿಚಾರಿಸಬಹುದು. ಪ್ರವಚನದಲ್ಲಿ ಸಂದೇಹ ನಿವಾರಣೆಗಾಗಿಯೂ ಸಹ ಸಮಯವನ್ನು ಮೀಸಲಿಡಲಾಗಿದೆ. ಯಾಕೆಂದರೆ ಅಧ್ಯಾತ್ಮದ ತಾತ್ತ್ವಿಕ ವಿವೇಚನೆ ಎಷ್ಟು ಹೇಳಿದರೂ ಯಾರಾದರೊಬ್ಬರಿಗೆ ಸಂದೇಹ ಬಂದಲ್ಲಿ ಅದು ನಿವಾರಣೆಯಾಗದೇ ಸಾಧನೆಯನ್ನು ಸರಿಯಾಗಿ ಮಾಡಲು ಆಗುವುದಿಲ್ಲ.

Leave a Comment