ಪರಾತ್ಪರ ಗುರು ಡಾ. ಆಠವಲೆ  – ವೈಜ್ಞಾನಿಕವೃತ್ತಿಯ ಉನ್ನತ ಸಂತರು !

ಸಾಮಾನ್ಯವಾಗಿ ಅಧ್ಯಾತ್ಮದ ಅಧಿಕಾರಿ ವ್ಯಕ್ತಿಗಳು ಅವರಿಗೆ ದೊರಕಿದ ಸಿದ್ಧಿಗಳಿಂದ ಅಥವಾ ಅವರ ಗುರುಗಳ ಕೃಪೆಯಿಂದ ವಿವಿಧ ಕ್ಷೇತ್ರಗಳಲ್ಲಿ ಬುದ್ಧಿಗೆ ನಿಲುಕದ ಕಾರ್ಯ ಮಾಡುವುದು ಕಾಣಿಸುತ್ತದೆ, ಉದಾ.ದೊಡ್ಡ ಪ್ರಮಾಣದಲ್ಲಿ ವ್ಯಸನಮುಕ್ತಿ ಮಾಡುವುದು, ತೀವ್ರ ರೋಗಗಳನ್ನು ಗುಣ ಪಡಿಸುವುದು ಇತ್ಯಾದಿ. ಇದರ ಅನೇಕ ದಾಖಲೆಗಳು ನಮ್ಮ ಧರ್ಮಗ್ರಂಥಗಳಲ್ಲಿ ಮತ್ತು ಸಂತರ ಚರಿತ್ರೆಗಳಲ್ಲಿ ಕಂಡುಬರುತ್ತವೆ. ಸಾಮಾನ್ಯ ವ್ಯಕ್ತಿಗಳು ಈ ಘಟನೆಗಳನ್ನು ‘ಚಮತ್ಕಾರ’ ಎಂದು ನೋಡುತ್ತಾರೆ ಆದರೆ ‘ಅದರ ಹಿಂದಿನ ಶಾಸ್ತ್ರವೇನು ?’ ಎಂಬುದರ ವಿಚಾರ ಮಾಡುವುದಿಲ್ಲ. ಹಾಗಾಗಿ ಈ ‘ಚಮತ್ಕಾರಗಳು ಕೇವಲ ಆ ಒಬ್ಬ ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗೆ ಸೀಮಿತವಾಗಿರುತ್ತವೆ. ಆ ಅಧಿಕಾರಿ ವ್ಯಕ್ತಿಗೆ ಇತರರಿಗೆ ಇಂತಹ ‘ಚಮತ್ಕಾರ’ ಮಾಡಲು ಕಲಿಸಲು ಆಗುವುದಿಲ್ಲ. ಉನ್ನತಮಟ್ಟದ ಸಂತರಿಗೆ ಇಂತಹ ಚಮತ್ಕಾರ ಮಾಡುವ ಅವಶ್ಯಕತೆ ಇರುವುದಿಲ್ಲ. ಕೇವಲ ಅವರ ಅಸ್ತಿತ್ವದಿಂದಲೇ ಬುದ್ಧಿಗೆ ನಿಲುಕದ ಅನೇಕ ಘಟನೆಗಳು ಘಟಿಸುತ್ತಿರುತ್ತವೆ. ಪರಾತ್ಪರ ಗುರು ಡಾ. ಆಠವಲೆ ಯವರು ಅಂತಹ ಓರ್ವ ಉಚ್ಚಮಟ್ಟದ ಸಂತರಾಗಿದ್ದಾರೆ.ಕೇವಲ ಅವರ ಅಸ್ತಿತ್ವದಿಂದಲೇ ಘಟಿಸುವ ಅನೇಕ ಬುದ್ಧಿಗೆ ನಿಲುಕದ ಘಟನೆಗಳನ್ನು ‘ಕೇವಲ ಚಮತ್ಕಾರ ಎಂದು ತಿಳಿದು ಬಿಡದೇ, ಆ ಘಟನೆ ಗಳ ಹಿಂದೆ ಯಾವ ಶಾಸ್ತ್ರೀಯ ಕಾರಣಗಳಿವೆ, ಎಂಬುದರ ಬಗ್ಗೆ ಅವರು ಕಳೆದ ೩೭ ವರ್ಷಗಳಿಂದ ನಿರಂತರವಾಗಿ ಅಧ್ಯಯನ ಮಾಡುತ್ತಿ ದ್ದಾರೆ. ಇದೇ ಅವರ ಸಂತತ್ವದ ಹಿಂದಿನ ವೈಜ್ಞಾನಿಕವೃತ್ತಿಯ ಮೂಲವಾಗಿದೆ. ಇದರಿಂದಲೇ ಅವರಿಗೆ  ತಮ್ಮ ಅಸ್ತಿತ್ವದಿಂದ ಘಟಿಸುತ್ತಿರುವ ಚಮತ್ಕಾರ (ಅಂದರೆ ಬುದ್ಧಿಗೆ ನಿಲುಕದ ಘಟನೆ)ಗಳ ವಿಶ್ಲೇಷಣೆಯನ್ನು ಒಬ್ಬಿಬ್ಬರಿಗಲ್ಲದೇ, ಪೂರ್ಣ ಸಮಾಜಕ್ಕೆ ಕಲಿಸಲು ಸಾಧ್ಯವಾಗಿದೆ.

ಲೋಲಕದಿಂದ ಪರೀಕ್ಷಣೆಯನ್ನು ಮಾಡುತ್ತಿರುವಾಗ ಪರಾತ್ಪರ ಗುರು ಡಾ. ಆಠವಲೆ (29.12.2009)

ಸಂಶೋಧನೆಗಾಗಿ ಮತ್ತು ಅಧ್ಯಯನಕ್ಕಾಗಿ ತಮ್ಮ ವಸ್ತುಗಳನ್ನು ಯೋಗ್ಯ ರೀತಿಯಲ್ಲಿ ಜತನ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ವಿವಿಧ ವಸ್ತುಗಳಲ್ಲಾಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ವಸ್ತುಗಳ ಜತನ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ, ಅವರು ತಮ್ಮ ಕೂದಲು ಮತ್ತು ಉಗುರುಗಳನ್ನೂ ಜೋಪಾನವಾಗಿಟ್ಟಿದ್ದಾರೆ.

೧. ಉಗುರುಗಳನ್ನು ಜೋಪಾನ ಮಾಡುವ ಪದ್ಧತಿಯಲ್ಲಿ ಹಂತಹಂತವಾಗಿ ಆಗಿರುವ ಬದಲಾವಣೆ

ಪರಾತ್ಪರ ಗುರು ಡಾ. ಆಠವಲೆಯವರು ಜೋಪಾನ ಮಾಡುವ ಪ್ರತಿಯೊಂದು ವಸ್ತುವಿನ ಮೇಲೆ ಜೋಪಾನ ಮಾಡಿದ ದಿನಾಂಕ ಮತ್ತು ವಸ್ತುವಿನ ಹೆಸರನ್ನು ಬರೆಯುತ್ತಾರೆ.

ಅ. ಕೈ ಮತ್ತು ಕಾಲುಗಳ ಬೆರಳಿನ ಉಗುರುಗಳನ್ನು ಒಟ್ಟಿಗೆ ಜೋಪಾನ ಮಾಡುವುದು

ಆ. ಕೈ ಮತ್ತು ಕಾಲುಗಳ ಬೆರಳಿನ ಉಗುರುಗಳನ್ನು ಬೇರೆ ಬೇರೆ ಜೋಪಾನ ಮಾಡುವುದು

ಇ. ಬಲಗೈ ಮತ್ತು ಎಡಗೈ ಹಾಗೂ ಕಾಲುಗಳ ಉಗುರುಗಳನ್ನು ಬೇರೆ ಬೇರೆ ಜೋಪಾನ ಮಾಡುವುದು

ಈ. ಎಡಗೈ ಮತ್ತು ಬಲಗೈ ಹಾಗೂ ಕಾಲುಗಳ ಪ್ರತಿಯೊಂದು ಬೆರಳಿನ ಉಗುರುಗಳನ್ನು ಬೇರೆ ಬೇರೆ ಜೋಪಾನ ಮಾಡುವುದು

೨. ಕೂದಲುಗಳನ್ನು ಜೋಪಾನ ಮಾಡುವ ಪದ್ಧತಿಯಲ್ಲಿ ಹಂತಹಂತವಾಗಿ ಆಗಿರುವ ಬದಲಾವಣೆ

ಅ. ಎಲ್ಲ ಕೂದಲುಗಳನ್ನು ಒಟ್ಟು ಮಾಡಿಡುವುದು

ಆ. ತಲೆಯ ಹಾಗೂ ಗಡ್ಡದ ಕೂದಲುಗಳನ್ನು ಪ್ರತ್ಯೇಕವಾಗಿ ಜೋಪಾನ ಮಾಡುವುದು.

ಇ. ತೊಡೆಯ ಮೇಲಿನ ಕೂದಲುಗಳನ್ನು ಬೇರೆ ಜೋಪಾನ ಮಾಡುವುದು

ಈ. ಮೂಗಿನಲ್ಲಿನ ಕೂದಲುಗಳನ್ನು ಬೇರೆ ಜೋಪಾನ ಮಾಡುವುದು

– (ಪೂ.) ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ ಗೋವಾ.

೧. ಬುದ್ಧಿಗೆ ನಿಲುಕದ ಘಟನೆಗಳ ಹಿಂದಿನ ಶಾಸ್ತ್ರವನ್ನು ಕಂಡು ಹಿಡಿಯುವ ವೃತ್ತಿ !

ಪರಾತ್ಪರ ಗುರು ಡಾ. ಆಠವಲೆಯವರಿಗೆ ಮೊದಲಿನಿಂದಲೂ ಫಲಿತಾಂಶದ (end result) ಕಡೆಗಿರದೇ, ಅದನ್ನು ಸಾಧಿಸುವುದರ ಹಿಂದಿನ ಕಾರಣಗಳನ್ನು ಅರಿಯುವ ಕಡೆಗೆ (wanting to know the basic laws/principles) ಹೆಚ್ಚು ಒಲವಿದೆ. ಈ ಅಂಶವನ್ನು ನಾವು ಒಂದು ಉದಾಹರಣೆಯಿಂದ ತಿಳಿದುಕೊಳ್ಳೋಣ. ಸನಾತನದ ಸಾಧಕರಿಗೆ ೨೦೦೦ ನೇ ಇಸವಿಯಿಂದ ಸೂಕ್ಷ್ಮದ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಲು ಪ್ರಾರಂಭವಾಯಿತು. ಆರಂಭದಲ್ಲಿ ಇಂತಹ ತೊಂದರೆಗಳಿಗೆ ಆಧ್ಯಾತ್ಮಿಕ ಉಪಾಯ ಮಾಡುವ ಅನೇಕ ಸಂತರು ಸನಾತನದ ಸಾಧಕರ ಮೇಲೆ ಉಪಾಯ ಮಾಡಿದರು. ಆ ಉಪಾಯಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಯಶಸ್ಸು ಕೂಡ ಸಿಕ್ಕಿತು; ಆದರೆ ಆ ಉಪಾಯಗಳು ನಡೆಯುತ್ತಿರುವಾಗ ಪರಾತ್ಪರ ಗುರು ಡಾ. ಆಠವಲೆಯವರ ಗಮನವು ಕೇವಲ ‘ಸಾಧಕರ ತೊಂದರೆಗಳು ಕಡಿಮೆಯಾಗುತ್ತಿವೆಯಲ್ಲ’ ಎಂಬುದರ ಕಡೆಗೆ ಮಾತ್ರ ಇರದೆ, ‘ಆ ಸಂತರು ನಿರ್ಧಿಷ್ಟವಾಗಿ ಏನು ಮಾಡುತ್ತಿದ್ದಾರೆ ?’, ‘ಸಂತರ ಕೃತಿಯಿಂದ ಸೂಕ್ಷ್ಮ ಸ್ತರದಲ್ಲಿ ಏನು ಪ್ರಕ್ರಿಯೆ ನಡೆಯುತ್ತದೆ?’, ‘ಸಾಧಕರ ತೊಂದರೆಗಳು ನಿರ್ಧಿಷ್ಟವಾಗಿ ಯಾವುದರಿಂದ ಕಡಿಮೆಯಾಗುತ್ತವೆ ?’ ಎಂಬುದರ ಕಡೆಗೆ ಇರುತ್ತಿತ್ತು. ೨೦೦೦ ನೇ ಇಸವಿಯಿಂದ ೨೦೦೩-೨೦೦೪ ರ ವರೆಗೆ ಅನೇಕ ಸಂತರು ಮಾಡಿದ ಉಪಾಯಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ವಿಸ್ತಾರವಾಗಿ ಅಧ್ಯಯನ ಮಾಡಿದರು. ‘ಕೆಟ್ಟ ಶಕ್ತಿಗಳ ತೊಂದರೆ ಇರುವವರಿಗೆ ನಾಮಜಪಾದಿ ಉಪಾಯಗಳನ್ನು ಹೇಗೆ ಮಾಡಬೇಕು’ ಎಂಬುದನ್ನು ಕಲಿಯಲು ಅವರು ಓರ್ವ ಸಂತರ ಬಳಿ ಸತತ ೩ ತಿಂಗಳು ಪ್ರತಿದಿನ ಹೋಗುತ್ತಿದ್ದರು. ಅನಂತರ ಅದರಿಂದ ಕಲಿಯಲು ಸಿಕ್ಕಿದ ಅಂಶಗಳ ಆಧಾರದಲ್ಲಿ ಅವರು ‘ಕೆಟ್ಟ ಶಕ್ತಿಗಳ ತೊಂದರೆ ಎಂದರೆ ನಿರ್ಧಿಷ್ಟವಾಗಿ ಏನು ?’, ‘ಅವುಗಳಲ್ಲಿ ಎಷ್ಟು ವಿಧಗಳಿವೆ ?’, ‘ಅವುಗಳ ಮೇಲೆ ಉಪಾಯವನ್ನು ಹೇಗೆ ಮಾಡಬೇಕು?’, ‘ಸಂತರು ಪ್ರತ್ಯಕ್ಷ ಮಾಡಿದ ನಾಮಜಪಾದಿ ಉಪಾಯಗಳಿಗೆ ಸಾಧಕರು ಯಾವ ಉಪಾಯಗಳನ್ನು ಜೋಡಿಸಬಹುದು’, ಇತ್ಯಾದಿ ವಿಷಯಗಳನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿದರು. ಈ ಅಧ್ಯಯನದಿಂದ ಅವರು ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ಬಗೆಗಿನ ಜ್ಞಾನದ ಒಂದು ದೊಡ್ಡ ವಿಷಯವನ್ನೇ ಜಗತ್ತಿನ ಮುಂದೆ ತೆರೆದಿಟ್ಟರು. ಕೆಟ್ಟ ಶಕ್ತಿಗಳ ಬಗೆಗಿನ ಹಾಗೂ ಅವುಗಳ ತೊಂದರೆಗಳನ್ನು ಹೇಗೆ ಗುರುತಿಸಬೇಕು, ಅವುಗಳ ತೊಂದರೆಗೊಳಗಾದ ವ್ಯಕ್ತಿ ಸ್ವತಃ ಯಾವ ವಿವಿಧ ಉಪಾಯಗಳನ್ನು ಮಾಡಬೇಕು ಮುಂತಾದ ಮಾಹಿತಿಗಳನ್ನು ಸನಾತನದ ನಿಯತಕಾಲಿಕೆಗಳು, ಗ್ರಂಥಗಳು, ವಿಡಿಯೋ ಮತ್ತು ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ಉಚಿತವಾಗಿ ದೊರಕಿಸಿಕೊಟ್ಟಿದ್ದಾರೆ. ಇಂತಹ ಅತೀ ಕ್ಲಿಷ್ಟಕರ ಸೂಕ್ಷ್ಮದಲ್ಲಿನ ಸಮಸ್ಯೆಗಳ ಹಾಗೂ ಅವುಗಳ ಉಪಾಯಗಳ ಬಗ್ಗೆ ಅವರು ಪ್ರತಿಯೊಂದು ಹಂತದಲ್ಲಿ ಮೂಲಭೂತ ಶಾಸ್ತ್ರವನ್ನು ಕಂಡು ಹಿಡಿದಿರುವುದರಿಂದ ಈ ಸಮಸ್ಯೆಗಳಲ್ಲಿ ಸಿಲುಕಿರುವ ಜಗತ್ತಿನಾದ್ಯಂತದ ಎಲ್ಲ ವ್ಯಕ್ತಿ ಗಳನ್ನು ಉಪಾಯದ ಬಗ್ಗೆ ಸ್ವಾವಲಂಬಿ ಮಾಡಿದ್ದಾರೆ.

೨. ‘ಪ್ರಾಣಿಮಾತ್ರರಿಗೆ ಒಳ್ಳೆಯದನ್ನು ಮಾಡುವ ತಳಮಳವೇ ಪರಾತ್ಪರ ಗುರು ಡಾಕ್ಟರರ ಸಂಶೋಧನೆಯ ವೃತ್ತಿಯ ಮೂಲವಾಗಿದೆ !

ಪ್ರಾಣಿಮಾತ್ರರ ಬಗೆಗಿರುವ ಶೇ. ೧೦೦ ರಷ್ಟು ಪ್ರೀತಿ ಮತ್ತು ಇದರೊಂದಿಗೆ ಪ್ರಾಣಿಮಾತ್ರರಿಗೆ ಒಳ್ಳೆಯದನ್ನು ಮಾಡುವ ಮೂಲಭೂತ ತಳಮಳದಿಂದ ಪ್ರೇರಣೆ ಪಡೆದ ಶೇ. ೧೦೦ರಷ್ಟು ಜಿಜ್ಞಾಸೆಯು ಪರಾತ್ಪರ ಗುರು ಡಾ. ಆಠವಲೆಯವರ ಸಂಶೋಧನ ವೃತ್ತಿಯ ಮೂಲವಾಗಿರುವುದು ಕಂಡುಬರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ  ಸಂಶೋಧನೆಯ ಉದ್ದೇಶವು ಸಮಾಜಕ್ಕೆ ‘ಹಿಂದೂ ಧರ್ಮದ ಮಹತ್ವ ತಿಳಿಯಬೇಕು‘, ‘ಸಾಧನೆಯ ಮಹತ್ವ ತಿಳಿಯಬೇಕು‘ ಮತ್ತು ‘ಎಲ್ಲರೂ ಸಾಧನೆಯನ್ನು ಮಾಡಿ ಆನಂದಪ್ರಾಪ್ತಿ ಮಾಡಿಕೊಳ್ಳಬೇಕು‘ ಎಂಬುದೇ ಆಗಿದೆ. ಈ ತಳಮಳದಿಂದಲೇ ಅವರು ವಿವಿಧ ರೀತಿಯ ಸಾವಿರಾರು ಆಧ್ಯಾತ್ಮಿಕ ಘಟನೆಗಳ ‘ನ ಭೂತೊ ನ ಭವಿಷ್ಯತಿ’ ಎನ್ನುವಷ್ಟು ಸಂಶೋಧನೆ ಮಾಡಿದ್ದಾರೆ. ಅದರೊಂದಿಗೆ ಮುಂದಿನ ಪೀಳಿಗೆಗಳಿಗೆ ಅದನ್ನು ಅಧ್ಯಯನ ಮಾಡಲು ಸಾಧ್ಯವಾಗಬೇಕೆಂದು, ಇಂತಹ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳಿಗೆ ಸಂಬಂಧಿಸಿದ ಆಧ್ಯಾತ್ಮಿಕ ಘಟನೆಗಳನ್ನು, ಉದಾ. ಉನ್ನತ ಸಂತರು ಮಾಡಿದ ಯಜ್ಞಗಳು ಅಥವಾ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಯಲ್ಲಿನ ಕೆಟ್ಟ ಶಕ್ತಿಯ ಪ್ರಕಟೀಕರಣದ ವಿಡಿಯೋಗಳ ಸಾವಿರಾರು ಗಂಟೆಗಳ ಚಿತ್ರೀಕರಣ ಮಾಡಿಟ್ಟಿದ್ದಾರೆ.

೩. ತಮ್ಮ  ಸಂಶೋಧಕವೃತ್ತಿಯನ್ನು ಇತರರಲ್ಲಿ ಮೂಡಿಸಿ ಅವರಿಂದಲೂ ಉತ್ತಮ ಕಾರ್ಯ ಮಾಡಿಸಿಕೊಳ್ಳುವುದು !

ಕೆಟ್ಟ ಶಕ್ತಿಗ ಬಗ್ಗೆ ಸಂಶೋಧನೆಯನ್ನು ಮಾಡುವಾಗ ತೊಂದರೆ ಇರುವ ಸಾಧಕರಿಗೆ ಯಾವುದಾದರೂ ಶಾರೀರಿಕ ಕಾಯಿಲೆ ಇದೆಯೇ ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿರುವ ಪರಾತ್ಪರ ಗುರು ಡಾ. ಆಠವಲೆ ಮತ್ತು ಡಾ. (ಸೌ.) ನಂದಿನಿ ಸಾಮಂತ  (2008)

ಸಾಮಾನ್ಯವಾಗಿ ಸ್ವತಃ ತಮ್ಮ ಸಂಶೋಧಕ ವೃತ್ತಿಯನ್ನು ಕಾಪಾಡುವುದು ಮತ್ತು ಅದನ್ನು ಬೆಳೆಸುವುದೇ ಕಠಿಣವಾಗಿರುತ್ತದೆ, ಇನ್ನು ಯಾವುದಾದರೊಬ್ಬ ಸಂಶೋಧಕನು ಸಾಮಾನ್ಯ ವ್ಯಕ್ತಿಯಲ್ಲಿ ಸಂಶೋಧಕ ದೃಷ್ಟಿಯನ್ನು ಮೂಡಿಸುವುದು, ಆ ವ್ಯಕ್ತಿಗೆ ಸಂಶೋಧನೆಯನ್ನು ಕಲಿಸುವುದು ಬಹಳ ಕಠಿಣವಾಗಿದೆ. ಈ ಹಿನ್ನೆಲೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ನಿರ್ಮಿಸಿದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನ ವಿಭಾಗವು ಅದಕ್ಕೆ ಅಪವಾದವಾಗಿದೆ. ಈ ವಿಭಾಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ನಡೆಯುವ ಸಂಶೋಧನೆಯ ವ್ಯಾಪ್ತಿ ನೋಡಿದರೆ ಪರಾತ್ಪರ ಗುರುಗಳ ತಳಮಳ ಮತ್ತು ಆಧ್ಯಾತ್ಮಿಕ ಅಧಿಕಾರವನ್ನು ನಾವು ಅನುಭವಿಸಬಹುದು.

ಪರಾತ್ಪರ ಗುರು ಡಾ. ಆಠವಲೆಯವರು ಸಂಶೋಧನೆಯ ಬಗ್ಗೆ ಸ್ವಲ್ಪವೂ ಮಾಹಿತಿ ಹಾಗೂ ಶಿಕ್ಷಣವಿಲ್ಲದ ಸಾಧಕರನ್ನು ಸಂಶೋಧನ ಗುಂಪಿನಲ್ಲಿ ಸೇರಿಸಿ ಅವರಲ್ಲಿ ಸಂಶೋಧಕ ವೃತ್ತಿ ಮತ್ತು ಸಂಶೋಧನೆಯ ಕೌಶಲ್ಯವನ್ನು ನಿರ್ಮಾಣ ಮಾಡಿದರು. ಈ ಗುಂಪಿನಲ್ಲಿ ವಿವಿಧ ವೈಜ್ಞಾನಿಕ ಉಪಕರಣಗಳಿಂದ ಸಂಶೋಧನೆ ಮಾಡುವ ಸಾಧಕರು, ಅವರ ಜೊತೆಗೆ ಸೂಕ್ಷ್ಮದಲ್ಲಿನ ಸಂಶೋಧನೆ ಮಾಡುವ ಸಾಧಕರು, ಪರಿಶೀಲನೆಯ ಮಾಪನಗಳ ನೋಂದಣಿಯನ್ನು ಬೆರಳಚ್ಚು ಮಾಡುವವರು, ವಿಶ್ಲೇಷಣೆ ಮಾಡುವವರು, ವಿಶ್ಲೇಷಣಾತ್ಮಕ ಲೇಖನಗಳನ್ನು ಬರೆಯುವವರು ಹಾಗೂ ವೈಜ್ಞಾನಿಕ ಪರಿಷತ್ತುಗಳಲ್ಲಿ ಮಂಡಿಸಲು ಶೋಧಪ್ರಬಂಧಗಳನ್ನು ಬರೆಯುವವರು, ಶೋಧಪ್ರಬಂಧಗಳನ್ನು ಮಂಡಿಸುವವರು ಇತ್ಯಾದಿ ಅನೇಕ ಸಾಧಕರನ್ನು ಸಿದ್ಧಪಡಿಸಿದ್ದಾರೆ. ಆಯಾ ಸಾಧಕರಲ್ಲಿ ಆವಶ್ಯಕವಿರುವ ಪ್ರತಿಯೊಂದು ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಪರಾತ್ಪರ ಗುರು ಡಾ. ಆಠವಲೆಯವರು ಬಹಳ ಪರಿಶ್ರಮಪಟ್ಟಿದ್ದಾರೆ. ಅದರ ಮಾಹಿತಿ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ವೈಜ್ಞಾನಿಕ ಸಂಶೋಧನೆಯ ಕಾರ್ಯ ಮತ್ತು ಅದರಿಂದ ಆಗಿರುವ ಪರಾತ್ಪರ ಗುರುಗಳ ಗುಣಗಳ ದರ್ಶನವನ್ನು ಅವರ ಕೋಮಲ ಚರಣಗಳಲ್ಲಿ ಸಮರ್ಪಿಸುತ್ತಿದ್ದೇನೆ !

– ಡಾ. (ಸೌ.) ನಂದಿನಿ ಸಾಮಂತ, ಮಹರ್ಷಿ ವಿಶ್ವವಿದ್ಯಾಲಯ, ಗೋವಾ.

Leave a Comment