ಏಕಮೇವ ಅದ್ವಿತೀಯ ಸಂಶೋಧಕರು !

ಗುರು, ಸದ್ಗುರು, ಪರಾತ್ಪರ ಗುರುಗಳಿಂದಾಗಿಯೇ ಜಿಜ್ಞಾಸುಗಳು ಮುಮುಕ್ಷುಗಳಾಗುತ್ತಾರೆ, ಮುಮುಕ್ಷು ಸಾಧನೆಯನ್ನು ಮಾಡಿ ಸಾಧಕನಾಗುತ್ತಾನೆ ಮತ್ತು ಅವನು ಮುಂದೆ ಶಿಷ್ಯನಾಗಿ ಗುರುಗಳ ಕೃಪೆಯಿಂದ ಸಂತ, ಗುರು, ಸದ್ಗುರು ಆಗುತ್ತಾನೆ.

‘ಜಿಜ್ಞಾಸುವೇ ಜ್ಞಾನದ ನಿಜವಾದ ಅಧಿಕಾರಿ’, ಎಂದು ಹೇಳಲಾಗುತ್ತದೆ. ಜಿಜ್ಞಾಸೆಯಿದ್ದರೆ, ‘ಹೀಗೇಕೆ’, ‘ಹಾಗೇಕೆ’ ? ಎಂಬ ಪ್ರಶ್ನೆಗಳು ಬರುತ್ತವೆ. ಆಮೇಲೆ ಅದರ ಹಿಂದಿನ ಕಾರಣಗಳನ್ನು ಹುಡುಕುವ ಪ್ರಯತ್ನ ಪ್ರಾರಂಭವಾಗುತ್ತದೆ ! ಮನುಷ್ಯನಲ್ಲಿ ಮೂಲದಲ್ಲಿಯೇ ಜಿಜ್ಞಾಸು ವೃತ್ತಿಯಿರುವುದರಿಂದ ಸೃಷ್ಟಿಯ ಉತ್ಪತ್ತಿಯಿಂದ ಅವನು ಜಿಜ್ಞಾಸೆಯಿಂದ ಪ್ರತಿಯೊಂದು ವಿಷಯವನ್ನು ಅರಿತುಕೊಳ್ಳುತ್ತಿದ್ದಾನೆ. ಇದು ಅವನಲ್ಲಿನ ಸಂಶೋಧಕ ವೃತ್ತಿಯೇ ಆಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಏನಾದರೊಂದು ಸಂಶೋಧನೆ ಮಾಡುತ್ತಿರುತ್ತಾನೆ. ಜೀವನವನ್ನು ಜೀವಿಸುವ ಕಲೆಯೂ ಒಂದು ಸಂಶೋಧನೆಯೇ ಆಗಿದೆ, ಎಂದು ಹೇಳಿದರೆ ತಪ್ಪಾಗಲಾರದು. ಇಂದು ಇದೇ ಸಂಶೋಧಕ ವೃತ್ತಿಯಿಂದ ವಿಜ್ಞಾನವು ಮಂಗಳ ಗ್ರಹದ ಮೇಲೆ ಯಾನವನ್ನು ಕಳುಹಿಸುವ ಪ್ರಯತ್ನ ಮಾಡಿತು. ಉಪಗ್ರಹಗಳ ಮೂಲಕ ಸಂಪರ್ಕ ವ್ಯವಸ್ಥೆ ನಿರ್ಮಾಣವಾಯಿತು. ಇದೆಲ್ಲವೂ ಭೌತಿಕ ಸಂಶೋಧನೆಯ ಪರಿಣಾಮದ ಯಶಸ್ಸಾಗಿದೆ.

ಇಂತಹ ಸಂಶೋಧಕರ ಸಂಖ್ಯೆ ಲಕ್ಷಗಟ್ಟಲೆ ಇರಬಹುದು; ಆದರೆ ಅದೇ ಸಮಯದಲ್ಲಿ ‘ನಾವು ಜೀವನವನ್ನು ಏತಕ್ಕಾಗಿ ನಡೆಸುತ್ತಿದ್ದೇವೆ’, ‘ನಾನು ಯಾರು ?’, ‘ನನ್ನ ಉತ್ಪತ್ತಿ ಎಲ್ಲಿಂದ ಆಯಿತು ?’, ‘ದೇವರು ಇದ್ದಾನೆಯೇ ?’, ‘ಭೂತಗಳು ಇರುವವೇ ?’ ‘ಅಸುರರು ಇದ್ದಾರೆಯೇ ?’ ‘ಚಮತ್ಕಾರಗಳು ಆಗುತ್ತವೆಯೇ ?’ ಇಂತಹ ಉತ್ತರಗಳನ್ನು ಹುಡುಕುವ ಸಂಶೋಧಕರು ಈ ಪೃಥ್ವಿಯ ಮೇಲೆ ವಿರಳವಾಗಿದ್ದರೆ. ತಮ್ಮ ಜೀವನದ ಉದ್ದೇಶವನ್ನು ತಿಳಿದುಕೊಳ್ಳುವ ಜಿಜ್ಞಾಸುಗಳು ಮತ್ತು ಅದನ್ನು ಅರಿತುಕೊಂಡು ಆ ಉದ್ದೇಶದವರೆಗೆ ಹೋಗಲು ಪ್ರಯತ್ನಿಸುವವರು ಬೆರಳೆಣಿಕೆಯಷ್ಟು ಮಾತ್ರ ಇರಬಹುದು. ‘ಭಾರತವು ಜಗತ್ತಿನ ಆಧ್ಯಾತ್ಮಿಕ ಗುರುವಾಗಿದೆ’, ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಸ್ವತಃ ಜನ್ಮಕ್ಕೆ ಬರುವ ಕಾರಣ, ಅದರ ಹಿಂದಿನ ಉದ್ದೇಶ, ಈ ಅನಾದಿಕಾಲದಿಂದ ಮನುಷ್ಯನ ಮನಸ್ಸಿನಲ್ಲಿ ನಿರ್ಮಾಣವಾಗುವ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿ ಸಿಗುತ್ತವೆ ಮತ್ತು ಅದರಿಂದ ಮನುಷ್ಯನ ಅಂತಿಮ ಧ್ಯೇಯ ತಲುಪುವ ಮಾರ್ಗದರ್ಶನವೂ ಇಲ್ಲಿ ಸಿಗುತ್ತದೆ. ಭಾರತವು ಗುರು, ಸದ್ಗುರು, ಪರಾತ್ಪರ ಗುರುಗಳ ಗಣಿಯಾಗಿದೆ. ಇವರಿಂದಾಗಿಯೇ ಜಿಜ್ಞಾಸುಗಳು ಮುಮುಕ್ಷುಗಳಾಗುತ್ತಾರೆ, ಮುಮುಕ್ಷು ಸಾಧನೆಯನ್ನು ಮಾಡಿ ಸಾಧಕನಾಗುತ್ತಾನೆ ಮತ್ತು ಅವನು ಮುಂದೆ ಶಿಷ್ಯನಾಗಿ ಗುರುಗಳ ಕೃಪೆಯಿಂದ ಸಂತ, ಗುರು, ಸದ್ಗುರು ಆಗುತ್ತಾನೆ.

ಈಗಿನ ವಿಜ್ಞಾನಯುಗದಲ್ಲಿ, ಬುದ್ಧಿಪ್ರಾಮಾಣ್ಯವಾದಿಗಳ ಮತ್ತು ಕೇವಲ ಸುಖೋಪಭೋಗ ಪಡೆಯುವವರ ಕಾಲದಲ್ಲಿ, ಹಾಗೆಯೇ ಪಾಶ್ಚಾತ್ಯರ ವಿಕೃತಿಯ ಅನುಕರಣೆಯಿಂದಾಗಿ ಇಂತಹ ಜಿಜ್ಞಾಸೆ ಇರುವವರು ತುಂಬಾ ಕಡಿಮೆಯಾಗಿದ್ದಾರೆ. ಇಂತಹ ಸಮಯದಲ್ಲಿ ಹಣ, ಪ್ರಸಿದ್ಧಿ ಮತ್ತು ಪ್ರಚಂಡ ಬುದ್ಧಿಶಕ್ತಿಯಿರುವಾಗ ಕೇವಲ ಮತ್ತು ಕೇವಲ ಜಿಜ್ಞಾಸು ವೃತ್ತಿಯಿಂದ ಸಮ್ಮೋಹನ ಉಪಚಾರತಜ್ಞರಾಗಿರುವ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರು 37 ವರ್ಷಗಳ ಹಿಂದೆ ಅಧ್ಯಾತ್ಮವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡತೊಡಗಿದರು. ಇದರಿಂದ ಮುಂದೆ ಸನಾತನ ಸಂಸ್ಥೆಯ ಜನ್ಮವಾಯಿತು ಮತ್ತು ಇಂದು ಸಾವಿರಾರು ಜಿಜ್ಞಾಸುಗಳು ಅಧ್ಯಾತ್ಮವನ್ನು ತಿಳಿದುಕೊಂಡು ಅದಕ್ಕನುಸಾರ ಸಾಧನೆಯನ್ನು ಮಾಡಿ ಸಂತ, ಗುರು, ಸದ್ಗುರು ಮತ್ತು ಪರಾತ್ಪರ ಗುರುಗಳ ಮಟ್ಟದ ವರೆಗೆ ತಲುಪಿದ್ದಾರೆ. ಇದು ಯಾರಿಗಾದರೂ ಚಮತ್ಕಾರವೆಂದು ಅನಿಸಬಹುದು; ಆದರೆ ಜಿಜ್ಞಾಸೆಯೇ  ಈ ಚಮತ್ಕಾರದ ಹಿಂದಿನ ಮೂಲ ಬೀಜ ಆಗಿದೆ !

ಬುದ್ಧಿಪ್ರಾಮಾಣ್ಯವಾದಿಗಳ ದ್ವೇಷ !

ನ್ಯೂಟನ್ನನು ಗುರುತ್ವಾಕರ್ಷಣೆಯನ್ನು ಕಂಡುಹಿಡಿದನು, ಎಂದು ಹೇಳುತ್ತಾರೆ. ಈಗ ನ್ಯೂಟನ್ ಅಲ್ಲ, ಭಾರತೀಯ ಋಷಿಮುನಿಗಳು ಗುರುತ್ವಾಕರ್ಷಣೆಯನ್ನು ಕಂಡುಹಿಡಿದರು, ಎಂದು ಹೇಳುತ್ತಿದ್ದಾರೆ. ಇರಲಿ. ಇದರ ಅರ್ಥ ನ್ಯೂಟನ್ನನು ಗುರುತ್ವಾಕರ್ಷಣೆಯನ್ನು ಕಂಡುಹಿಡಿಯುವ ಮೊದಲು ಗುರುತ್ವಾಕರ್ಷಣೆ ಇರಲೇ ಇಲ್ಲ ಹೀಗಾಗುವುದಿಲ್ಲ !  ಹೀಗೆ ಹೇಳುವುದು ಮೂರ್ಖತನವಾಗುವುದು. ಇದು ಅಧ್ಯಾತ್ಮಕ್ಕೂ ಅನ್ವಯಿಸುತ್ತದೆ. ಅಧ್ಯಾತ್ಮಶಾಸ್ತ್ರವು ಅನಾದಿ ಮತ್ತು ಅನಂತವಾಗಿದೆ. ‘ಇದನ್ನು ಯಾರು ಕಂಡುಹಿಡಿದರು, ಎಂದು ಹೇಳಲು ಬರುವುದಿಲ್ಲ; ಆದರೆ ಅದರಲ್ಲಿನ ತತ್ತ್ವಗಳು ಮತ್ತು ಸಿದ್ಧಾಂತಗಳಿಗನುಸಾರ ಆಚರಣೆ ಮಾಡಿ ಅನುಭೂತಿ ಪಡೆಯುವವರು ತುಂಬಾ ಜನರಿದ್ದಾರೆ. ಸನಾತನ ವೈದಿಕ ಧರ್ಮದಲ್ಲಿ ಲಕ್ಷಗಟ್ಟಲೆ ವರ್ಷ ಗಳಿಂದ ಋಷಿಮುನಿಗಳು ಅನೇಕ ಪ್ರಯೋಗಗಳನ್ನು ಮಾಡಿ ಈಶ್ವರನ ವಿವಿಧ ತತ್ತ್ವಗಳ ಮಾಹಿತಿ ಪಡೆದು ಅವುಗಳನ್ನು ಗ್ರಂಥಗಳ ರೂಪದಲ್ಲಿ ಸಮಾಜದ ಮುಂದಿಟ್ಟಿದ್ದಾರೆ. ಇದರಿಂದ ಮುಂದೆ ಕೋಟಿಗಟ್ಟಲೆ ಜನರು ಈ ತತ್ತ್ವಗಳ ಅನುಭೂತಿಗಳನ್ನು ಪಡೆದರು ಮತ್ತು ಈಗಲೂ ಪಡೆಯುತ್ತಿದ್ದಾರೆ; ಆದರೆ ಸದ್ಯದ ಕಾಲದಲ್ಲಿ ಅದನ್ನು ಬುದ್ಧಿಯಿಂದ ಹುಡುಕುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿಯೂ ಪಾಶ್ಚಾತ್ಯ ದೇಶಗಳಲ್ಲಿ ಇಂತಹ ಸಂಶೋಧನೆಗಳನ್ನು ಮಾಡಲಾಗುತ್ತಿದೆ;ಆದರೆ ಭಾರತದಲ್ಲಿ ಸಂಕುಚಿತ ವೃತ್ತಿಯ ಬುದ್ಧಿಪ್ರಾಮಾಣ್ಯವಾದಿಗಳು ಮಾತ್ರ ಈಶ್ವರೀ ತತ್ತ್ವಗಳನ್ನು, ದೇವತೆಗಳನ್ನು, ವಿವಿಧ ಶಾಸ್ತ್ರಗಳನ್ನು ಒಪ್ಪದೇ ತಮ್ಮ ಆ ತೋರಿಸುತ್ತಿದ್ದಾರೆ. ಗುರುತ್ವಾಕರ್ಷಣೆಯು ಕಣ್ಣಿಗೆ ಕಾಣಿಸುವುದಿಲ್ಲ; ಆದರೆ ಅದನ್ನು ನ್ಯೂಟನ್ನನು ತೋರಿಸಿಕೊಟ್ಟನು, ಆದುದರಿಂದ ಅವರು ಅವನನ್ನು ನಂಬುತ್ತಾರೆ; ಆದರೆ ಹಿಂದೂ ಧರ್ಮದಲ್ಲಿನ ಸನಾತನ ವೈದಿಕ ಧರ್ಮದಲ್ಲಿನ ವಿವಿಧ ಆಚಾರಧರ್ಮದಿಂದ ಆಗುವ ಆಧ್ಯಾತ್ಮಿಕ ಲಾಭಗಳನ್ನು ನತದೃಷ್ಟರು ಒಪ್ಪುವುದಿಲ್ಲ. ಇಂತಹ ಬುದ್ಧಿಪ್ರಾಮಾಣ್ಯವಾದಿಗಳಲ್ಲಿ ಜಿಜ್ಞಾಸೆಯೇ ಇಲ್ಲದಿರು ವುದರಿಂದ ಅಥವಾ ದ್ವೇಷದಿಂದ ಜಿಜ್ಞಾಸೆಯನ್ನು ತೋರಿಸದೇ ಇದನ್ನು ಟೀಕಿಸುವುದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ. ಇದನ್ನು ನಾವು ತಿಳಿಯಬೇಕು.

ಜನ್ಮ-ಮೃತ್ಯು ಚಕ್ರದಿಂದ ಬಿಡಿಸುವ ಸಂಶೋಧಕರು

ಸನಾತನ ಹಿಂದೂ ಧರ್ಮದ ಪ್ರತಿಯೊಂದು ಕೃತಿಯ ಹಿಂದಿನ ಆಧ್ಯಾತ್ಮಿಕ ಲಾಭವನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಮತ್ತು ವೈಜ್ಞಾನಿಕ ಉಪಕರಣಗಳ ಮೂಲಕ ಜಗತ್ತಿನ ಮುಂದಿಡುವ ಪರಾತ್ಪರ ಗುರು ಡಾ. ಆಠವಲೆಯವರು ಏಕಮೇವಾದ್ವಿತೀಯ ಸಂಶೋಧಕರಾಗಿದ್ದಾರೆ. ಕಳೆದ 37 ವರ್ಷಗಳಲ್ಲಿ ಅಧ್ಯಾತ್ಮವನ್ನು ತಿಳಿದುಕೊಳ್ಳಲು ಅವರು ತೋರಿಸಿದ ಜಿಜ್ಞಾಸು ವೃತ್ತಿಯಿಂದಲೇ ಅವರಿಗೆ ಅದು ಸಾಧ್ಯವಾಯಿತು. ಕೆಲವು ಪಾಶ್ಚಾತ್ಯ ಸಂಶೋಧಕರೂ ಅವರ ಸಂಶೋಧನೆಯ ಕಾರ್ಯದ ಬಗ್ಗೆ ಮುಕ್ತಕಂಠದಿಂದ ಪ್ರಶಂಸೆ ಮಾಡಿದ್ದಾರೆ. ಅನೇಕ ಪಾಶ್ಚಾತ್ಯರೂ ಹಿಂದೂ ಧರ್ಮದಲ್ಲಿನ ಧಾರ್ಮಿಕ ಕೃತಿಗಳ ಹಿಂದಿನ ಆಧ್ಯಾತ್ಮಿಕ ಲಾಭವನ್ನು ಪಡೆಯುತ್ತಿದ್ದಾರೆ. ಅವುಗಳ ಹಿಂದಿನ ಕಾರ್ಯಕಾರಣಭಾವವನ್ನೂ ಅರಿತುಕೊಳ್ಳುತ್ತಿದ್ದಾರೆ. ಅನೇಕ ದೇಶಗಳಲ್ಲಿನ ಪರಿಷತ್ತುಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಸಂಶೋಧನೆಗಳ ಶೋಧಪ್ರಬಂಧಗಳನ್ನು ಓದಿದ್ದಾರೆ ಮತ್ತು ಅದರ ಪ್ರಶಂಸೆಯೂ ಆಗಿದೆ. ಈ ಸಂಶೋಧನೆಗಳ ಲಾಭವು ಮುಂದೆ ಮನುಕುಲಕ್ಕೆ ನಿರಂತರವಾಗಿ ಆಗಲಿದೆ. ‘ಹಿಂದೂ ಧರ್ಮವೆಂದರೆ ಹಿಂದುಳಿದ ಮತ್ತು ಹಳೆಯ ರೂಢಿ ಪರಂಪರೆಗಳ ಧರ್ಮ’ ಎಂದು ಪಾಶ್ಚಾತ್ಯ ಮತ್ತು ಪಾಶ್ಚಾತ್ಯರ ಅಂಧಾನುಕರಣೆ ಮಾಡುವ ಭಾರತೀಯರು ಟೀಕಿಸುತ್ತಿರುತ್ತಾರೆ. ಇಂತಹವರ ಕಣ್ಣುಗಳಲ್ಲಿ ಅಂಜನವನ್ನು ಹಾಕುವ ಈ ಸಂಶೋಧನೆಗಳನ್ನು ಯಾರಾದರೂ  ಜಿಜ್ಞಾಸೆ ಯಿಂದ ಅಧ್ಯಯನ ಮಾಡಿದರೆ, ಆ ವ್ಯಕ್ತಿಗೆ ಅದರ ಲಾಭ ಈ ಜನ್ಮದಲ್ಲಿ ಮಾತ್ರವಲ್ಲ, ಅವನ ಮುಂದಿನ ಜನ್ಮ ಆಗದಿರಲೂ ಆಗುವುದು, ಅಂದರೆ ಅವನು ಜೀವನಮುಕ್ತನಾಗುವನು ! ಅಣುಬಾಂಬ್, ಪರಮಾಣು ಬಾಂಬ್, ಹೈಡ್ರೋಜನ್ ಬಾಂಬ್ ತಯಾರಿಸಿ ಒಂದೇ ಸಮಯದಲ್ಲಿ ಲಕ್ಷಗಟ್ಟಲೆ ಜನರ ಪ್ರಾಣ ತೆಗೆದು ಕೊಳ್ಳುವ ಶಕ್ತಿಯನ್ನು ನಿರ್ಮಾಣ ಮಾಡುವ ಸಂಶೋಧನೆಗಿಂತ ಅಧ್ಯಾತ್ಮದಲ್ಲಿನ ಕೃತಿಗಳ ಲಾಭಗಳ ಸಂಶೋಧನೆಯನ್ನು ಮಾಡಿ ಕೋಟಿಗಟ್ಟಲೆ ಜನರನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಶಾಶ್ವತವಾಗಿ ಮುಕ್ತಗೊಳಿಸುವ ಪರಾತ್ಪರ ಗುರು ಡಾ. ಆಠವಲೆಯವರಂತಹ ಆಧ್ಯಾತ್ಮಿಕ ಸಂಶೋಧಕರು ಯಾವಾಗಲೂ ಶ್ರೇಷ್ಠರಾಗಿದ್ದಾರೆ !

Leave a Comment