ಶ್ರೀವಿಷ್ಣುತತ್ತ್ವ ಜಾಗೃತಿ ಸಮಾರಂಭ !

ಭುಗು ಮಹರ್ಷಿಗಳ ಆಜ್ಞೆಯಂತೆ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ನೆರವೇರಿತು ಪರಾತ್ಪರ ಗುರು ಡಾ. ಆಠವಲೆಯವರ ‘ಶ್ರೀವಿಷ್ಣುತತ್ತ್ವ ಜಾಗೃತಿ’ ಸಮಾರಂಭ !

ವಿಷ್ಣುಸಹಸ್ರನಾಮದ ಪಠಣ ನಡೆಯುತ್ತಿರುವಾಗ ಅದನ್ನು ಕೇಳುತ್ತಿರುವ (ಎಡದಿಂದ) ಸದ್ಗುರು (ಸೌ.) ಬಿಂದಾ ಸಿಂಗಬಾಳ, ಮಧ್ಯದಲ್ಲಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ

ಭಗವಾನ್ ಶ್ರೀ ಮಹಾವಿಷ್ಣುವು ವಿಶ್ವ ಪಾಲಕನಾಗಿದ್ದಾನೆ. ಅವನ ಕೃಪೆಯಿಂದಲೇ ಈ ವಿಶ್ವದ ನಿಯಂತ್ರಣವಾಗುತ್ತದೆ. ಸದ್ಯ ಯುಗಗಳ ಸಂಧಿಕಾಲವು ನಡೆದಿದೆ. ಇಡೀ ಸೃಷ್ಟಿಯು ಆಪತ್ಕಾಲದ ಹೊಸ್ತಿಲಿನ ಮೇಲಿದೆ. ಇಂತಹ ಆಪತ್ಕಾಲದಲ್ಲಿ ಭಕ್ತವತ್ಸಲ ಶ್ರೀ ಮಹಾವಿಷ್ಣುವಿನ ಅವತಾರವೆಂದು ಮಹರ್ಷಿಗಳು ಗೌರವಿಸಿದ ಪರಾತ್ಪರ ಗುರು ಡಾ. ಆಠವಲೆಯವರಿಗೆ, ‘ಹೇ, ಭಗವಂತ, ಧರ್ಮದ ಪುನರ್‌ಸ್ಥಾಪನೆ ಮಾಡಲು ಭಕ್ತರನ್ನು ರಕ್ಷಿಸಲು ತಾವು ನಿರ್ಗುಣ ಸ್ಥಿತಿಯಿಂದ ಸಗುಣ ಸ್ಥಿತಿಗೆ ಬರಬೇಕು’, ಎಂದು ಪ್ರಾರ್ಥನೆ ಮಾಡಲು ಡಿಸೆಂಬರ್ 11, 2019 ರಂದು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ‘ಶ್ರೀವಿಷ್ಣುತತ್ತ್ವ ಜಾಗೃತಿ ಸಮಾರಂಭ’ವು ನೆರವೇರಿತು. ಭುಗು ಮಹರ್ಷಿಗಳು ಚೆನ್ನೈನ ಶ್ರೀ. ಸೆಲ್ವಂ ಗುರೂಜಿ ಇವರ ಮಾಧ್ಯಮದಿಂದ ಮಾಡಿದ ಆಜ್ಞೆಗನುಸಾರ ಮಾರ್ಗಶಿರ ಹುಣ್ಣಿಮೆಯ ದತ್ತಜಯಂತಿಯ ಶುಭದಿನದಂದು (ಡಿಸೆಂಬರ್ ೧೧ ರಂದು) ಸಾಕ್ಷಾತ್ ಭೂವೈಕುಂಠವಾಗಿರುವ ರಾಮನಾಥಿ ಆಶ್ರಮದಲ್ಲಿ ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ಈ ದಿವ್ಯ ಸಮಾರಂಭವು ನೆರವೇರಿತು. ಅತ್ಯಂತ ಶಾರೀರಿಕ ತೊಂದರೆ ಇರುವಾಗಲೂ ಮಹರ್ಷಿಗಳ ಆಜ್ಞೆಯಿಂದ ಪರಾತ್ಪರ ಗುರು ಡಾ. ಆಠವಲೆಯವರು ಕೆಲವು ಸಮಯ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಐಹಿಕ ಮತ್ತು ಪಾರಮಾರ್ಥಿಕ ಕಲ್ಯಾಣವಾಗಲು, ಹಾಗೆಯೇ ಮೋಕ್ಷಪ್ರಾಪ್ತಿಯಾಗಲು ಮಾನವನು ಯಾರಿಗೆ ಶರಣು ಹೋಗಬೇಕೋ, ಅಂತಹ ಏಕೈಕ ಪುರುಷೋತ್ತಮನೆಂದರೆ ಭಗವಾನ್ ಶ್ರೀವಿಷ್ಣು ! ಭಗವಾನ್ ಮಹಾವಿಷ್ಣುವಿನ ಪ್ರತಿಯೊಂದು ಅವತಾರವು ಭಕ್ತರ ಉದ್ಧಾರಕ್ಕಾಗಿಯೇ ಇದೆ. ಭಕ್ತನು ಆರ್ತವಾಗಿ ಮೊರೆ ಹೋಗಬೇಕು ಮತ್ತು ಭಗವಂತನು ಅವನ ಕಲ್ಯಾಣಕ್ಕಾಗಿ ಕೂಡಲೇ ಧಾವಿಸಿ ಬರಬೇಕು, ಈ ಅಲೌಕಿಕ ಪ್ರೀತಿಗೆ ಅನೇಕ ಯುಗಗಳು ಸಾಕ್ಷಿದಾರರಾಗಿವೆ. ಗುರುರೂಪಿ ಭಗವಂತನನ್ನು ಇದೇ ರೀತಿ ಆರ್ತವಾಗಿ ಕರೆಯಲು ಈ ಸಮಾರಂಭವಿತ್ತು. ಈ ದಿನದಂದು ಭಕ್ತರ ಉದ್ಧಾರಕ್ಕಾಗಿ ಆ ವಿಷ್ಣುಸ್ವರೂಪಿ ಗುರುದೇವರ ಸ್ತುತಿ ಮಾಡುವ, ಗುರುದೇವರಲ್ಲಿನ ವಿಷ್ಣುತತ್ತ್ವವನ್ನು ಅನುಭವಿಸುವ ಸೌಭಾಗ್ಯವು ಸನಾತನದ ಸಾಧಕರಿಗೆ ಲಭಿಸಿತು. ಸಗುಣದ ನಂತರ ನಿರ್ಗುಣದ ಅನುಭೂತಿಯನ್ನು ನೀಡುವ ಶ್ರೀವಿಷ್ಣುಸ್ವರೂಪ ಪರಾತ್ಪರ ಗುರು ಡಾಕ್ಟರರ ಉಪಸ್ಥಿತಿಯಲ್ಲಿ ನೆರವೇರಿದ ಸಮಾರಂಭಗಳನ್ನು ಸಾಧಕರು ಇಂದಿನವರೆಗೆ ಅನುಭವಿಸಿದ್ದಾರೆ. ಮಾರ್ಗಶಿರ ಹುಣ್ಣಿಮೆಯಂದು ಮಾತ್ರ ಶಬ್ದಗಳಲ್ಲಿಯೂ ವರ್ಣಿಸಲು ಸಾಧ್ಯವಿಲ್ಲ ಇಂತಹ ದಿವ್ಯ ಭಾವಸಮಾರಂಭವನ್ನು ಸಾಧಕರು ಅನುಭವಿಸಿದರು. ಶ್ರೀವಿಷ್ಣುಸಹಸ್ರನಾಮದಿಂದ ಶ್ರೀಮಹಾವಿಷ್ಣುವನ್ನು ಜಾಗೃತ ಮಾಡಲಾಗುತ್ತದೆ. ಕೊಳಲು, ಸಿತಾರ ಈ ವಾದ್ಯಗಳ ನಿರ್ಮಿತಿಯು ವೈಕುಂಠ ಲೋಕದಲ್ಲಿ ಕೇವಲ ಶ್ರೀವಿಷ್ಣುವಿನ ಸ್ತುತಿ ಮಾಡಲಿಕ್ಕಾಗಿಯೇ ಆಗಿದೆ. ಈ ದೈವೀ ವಾದ್ಯಗಳ ನಾದದಿಂದ ಮತ್ತು ಗಾಯನ ಮತ್ತು ನೃತ್ಯ ಇವುಗಳ ಮೂಲಕ ಶ್ರೀವಿಷ್ಣುವಿನ ರಾಜೋಪಚಾರ ಪೂಜೆಯನ್ನು ಮಾಡಲಾಗುತ್ತದೆ, ಅದೇ ವಿಷ್ಣುಲೋಕವು ಇಂದು ಭೂಮಿಯ ಮೇಲೆ ಸನಾತನದ ರಾಮನಾಥಿ ಆಶ್ರಮದಲ್ಲಿ ಅವತರಿಸಿತು.

ವಿಷ್ಣುಸಹಸ್ರನಾಮದ ಪಠಣ ಮಾಡುತ್ತಿರುವ (ಎಡಗಡೆಗೆ) ಶ್ರೀ. ದಾಮೋದರ ವಝೆ ಗುರೂಜಿ ಮತ್ತು ಪಕ್ಕದಲ್ಲಿ ಶ್ರೀ. ಸಿದ್ಧೇಶ ಕರಂದೀಕರ

ಸಮಾರಂಭದ ಆರಂಭದಲ್ಲಿ ಸನಾತನದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಪುಷ್ಪಾರ್ಚನೆ ಮಾಡಿದರು. ಶ್ರೀವಿಷ್ಣುಸಹಸ್ರನಾಮದ ಸಂಕೀರ್ತನ, ಕೊಳಲುವಾದನ, ಸಿತಾರವಾದನ, ಗಾಯನ ಮತ್ತು ನೃತ್ಯ ಇವುಗಳ ವಿಲಕ್ಷಣ ಸಂಗಮದ ಮಾಧ್ಯಮದಿಂದ ಶ್ರೀವಿಷ್ಣುತತ್ತ್ವದ ಆವಾಹನೆ ಮಾಡಲಾಯಿತು. ಸನಾತನ ಪುರೋಹಿತ ಪಾಠಶಾಲೆಯ ಸಂಚಾಲಕರಾದ ಮತ್ತು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ದಾಮೋದರ ವಝೆಗುರುಜಿ ಮತ್ತು ಪುರೋಹಿತರಾದ ಶ್ರೀ. ಸಿದ್ಧೇಶ ಕರಂದೀಕರ ಇವರು ಶ್ರೀವಿಷ್ಣುಸಹಸ್ರನಾಮದ ಭಾವಪೂರ್ಣ ಪಠಣ ಮಾಡಿದರು. ಭಟ್ಕದ ಸನಾತನದ ಸಾಧಕ, ಉಚ್ಚ ಲೋಕದಿಂದ ಜನ್ಮಕ್ಕೆ ಬಂದ ಶ್ರೀ. ಪಾರ್ಥ ಪೈ (೧೫ ವರ್ಷ) ಇವರು ಕೊಳಲುವಾದನ ಮಾಡಿದರೆ, ಶೇ. ೬೧ ಆಧ್ಯಾತ್ಮಿಕ ಮಟ್ಟದ ಸಾಂಗ್ಲಿಯ ಶ್ರೀ ಮನೋಜ ಸಹಸ್ರಬುದ್ಧೆ ಇವರು ಸಿತಾರವಾದನ ಮಾಡಿದರು. ಸಂಗೀತಸಾಧನೆಯ ಮೂಲಕ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ಕು. ತೇಜಲ ಪಾತ್ರೀಕರ ಮತ್ತು ಸೌ. ಅನಘಾ ಜೋಶಿ ಈ ಇಬ್ಬರೂ ಸಹೋದರಿಯರು ಗಾಯನ ಸೇವೆಯನ್ನು ಪ್ರಸ್ತುತ ಪಡಿಸಿದರು. ಆ ಸಮಯದಲ್ಲಿ ಶ್ರೀ. ರಾಮಚಂದ್ರ ಚ್ಯಾರಿ ಇವರು ಹಾರ್ಮೋನಿಯಮ್‌ನ್ನು ಮತ್ತು ಶ್ರೀ. ಶೈಲೇಶ ಬೆಹರೆ ಇವರು ತಾಳವನ್ನು ನುಡಿಸಿದರು. ಶ್ರೀ. ಗಿರಿಜಯ ಪ್ರಭುದೇಸಾಯಿ ಇವರು ಸಿತಾರವಾದನ ಮತ್ತು ಗಾಯನದ ಸಮಯದಲ್ಲಿ ತಬಲಾವಾದನ ಮಾಡಿ ಅವರಿಗೆ ಜೊತೆ ನೀಡಿದರು. ಅದರ ನಂತರ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ, (ಮಹರ್ಲೋಕದಿಂದ ಪೃಥ್ವಿಯ ಮೇಲೆ ಜನ್ಮಕ್ಕೆ ಬಂದ) ಛತ್ತಿಸಗಡದ ಬಾಲಸಾಧಕಿ ಕು. ಶರ್ವರಿ ಕಾನಸ್ಕರ (೧೨ ವರ್ಷ) ಇವಳು ನೃತ್ಯ ಸೇವೆಯನ್ನು ಪ್ರಸ್ತುತ ಪಡಿಸಿದಳು. ಸದ್ಗುರುದ್ವಯರು ಪರಾತ್ಪರ ಗುರು ಡಾಕ್ಟರರಿಗೆ ಮಾಡಿದ ಮಂಗಲ ದೀಪಾರತಿಯಿಂದ ಈ ದೈವೀ ಭಾವಸಮಾರಂಭವು ಮುಕ್ತಾಯಗೊಂಡಿತು. ಸಮಾರಂಭದ ಭಾವಪೂರ್ಣ ನಿರುಪಣೆಯನ್ನು ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕ ಶ್ರೀ. ವಿನಾಯಕ ಶಾನಬಾಗ ಇವರು ಮಾಡಿದರು. ಈ ಸಮಾರಂಭಕ್ಕೆ ಸನಾತನದ ಸದ್ಗುರು ಮತ್ತು ಸಂತರು ಉಪಸ್ಥಿತರಿದ್ದರು, ಹಾಗಾಯೇ ಗಣಕೀಯ ಯಂತ್ರದ ಮೂಲಕ ಈ ಸಮಾರಂಭದ ಲಾಭವನ್ನು ಸನಾತನದ ಎಲ್ಲೆಡೆಯ ಸಾಧಕರು ಪಡೆದರು.

ಗಮನಾರ್ಹ ಅಂಶಗಳು

೧. ಪರಾತ್ಪರ ಗುರು ಡಾ. ಆಠವಲೆಯವರ ಹಿರಿಯ ಸಹೋದರ ಪೂ. ಅನಂತ ಆಠವಲೆ ಮತ್ತು ಅವರ ಪತ್ನಿ ಸೌ. ಸುನಿತಿ ಆಠವಲೆ ಇವರೂ ಸಮಾರಂಭದಲ್ಲಿ ಉಪಸ್ಥಿತರಿದ್ದರು.

೨. ಸನಾತನದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಸೂಕ್ಷ್ಮ-ಜ್ಞಾನ ಪ್ರಾಪ್ತಮಾಡಿಕೊಳ್ಳುವ ಸಾಧಕರಾದ ಶ್ರೀ. ರಾಮ ಹೊನಪ, ಶ್ರೀ. ನಿಷಾದ ದೇಶಮುಖ ಮತ್ತು ಕು. ಮಧುರಾ ಭೋಸಲೆ ಇವರು ಭಾವಸಮಾರಂಭದ ಸಮಯದಲ್ಲಿ ಮಾಡಿದ ಸೂಕ್ಷ್ಮ ಪರೀಕ್ಷಣೆಯನ್ನು ಮಂಡಿಸಿದರು.

೩. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಜೋತಿಷ್ಯ ವಿಭಾಗದ ಸಾಧಕರಾದ ಶ್ರೀ. ರಾಜ ಕರ್ವೆ ಇವರು ಸಮಾರಂಭದ ಬಗ್ಗೆ ಮಾಡಿದ ಜೋತಿಷ್ಯಶಾಸ್ತ್ರೀಯ ವಿಶ್ಲೇಷಣೆಯನ್ನೂ ಈ ಸಮಯದಲ್ಲಿ ಶ್ರೀ. ವಿನಾಯಕ ಶಾನಬಾಗ ಇವರು ಓದಿ ಹೇಳಿದರು.

೪. ಸಮಾರಂಭದ ನಂತರ ಸಾಧಕರು ಭಗವಾನ್ ಶ್ರೀಕೃಷ್ಣನ ಜಯಘೋಷವನ್ನು ಮಾಡಿದರು.

Leave a Comment