ಜಗತ್ತಿನಾದ್ಯಂತದ ವಿಜ್ಞಾನಿಗಳಿಗೆ ಆಧ್ಯಾತ್ಮಿಕ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ಅವರನ್ನು ಈಶ್ವರಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು

ಪರಾತ್ಪರ ಗುರು ಡಾ. ಆಠವಲೆಯವರ ಉದಾತ್ತ ದೃಷ್ಟಿಕೋನ !

ಸಾಮಾನ್ಯವಾಗಿ ಸಮಾಜದಲ್ಲಿನ ವಿಜ್ಞಾನಿಗಳಿಗೆ ಇತರ ವಿಜ್ಞಾನಿಗಳೊಂದಿಗೆ ಹೊಂದಿಕೊಂಡು ಅವರೊಂದಿಗೆ ಕಾರ್ಯ ಮಾಡುವುದು ಕಠಿಣವಾಗಿರುತ್ತದೆ. ಅವರಲ್ಲಿನ ‘ನನಗೆ ಹೆಚ್ಚು ತಿಳಿಯುತ್ತದೆ’, ಎಂಬ ಅಹಂಕಾರ ಅಡ್ಡ ಬರುತ್ತದೆ ಅಥವಾ ಸಂಶೋಧನೆಯ ಶ್ರೇಯಸ್ಸು ತಮಗೊಬ್ಬರಿಗೇ ಸಿಗಬೇಕು ಎಂಬ ಮಾನಸಿಕತೆ ಇರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಕಲಿಯುವ ತಳಮಳ ಎಷ್ಟಿದೆ ಎಂದರೆ, ಅವರು ಸೂಕ್ಷ್ಮ ಮತ್ತು ಸ್ಥೂಲ ಈ ಎರಡೂ ಸ್ತರದಲ್ಲಿ ಅಸಾಧಾರಣ ಸಂಶೋಧನೆಯನ್ನು ಮಾಡಿದ್ದರೂ, ಈಗಲೂ ಸಹ ಅವರು ಪ್ರತಿಕ್ಷಣ ಶೇ. ೧೦೦ ರಷ್ಟು ಕಲಿಯುವ ಸ್ಥಿತಿಯಲ್ಲಿರುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಸನಾತನದ ನಿಯತಕಾಲಿಕೆಗಳು, ಜಾಲತಾಣಗಳು ಹಾಗೂ ಧ್ವನಿಚಿತ್ರಮುದ್ರಿಕೆಗಳ ಮಾಧ್ಯಮದಿಂದ ಸತತವಾಗಿ ಇತರ ವಿಜ್ಞಾನಿಗಳಿಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ಸಹಭಾಗಿಯಾಗಲು ಕರೆ ನೀಡುತ್ತಿರುತ್ತಾರೆ.

ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಸಂಶೋಧನೆಯ ಪರಿಚಯ ಮಾಡಿಕೊಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುವ ವಿಜ್ಞಾನಿಗಳನ್ನು ಭೇಟಿಯಾಗುತ್ತಿರುತ್ತಾರೆ. ಇದುವರೆಗೆ ವಿವಿಧ ಕ್ಷೇತ್ರಗಳಲ್ಲಿನ ೪೦ ಕ್ಕಿಂತ ಹೆಚ್ಚು ವಿಜ್ಞಾನಿಗಳು ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಸಂಶೋಧನೆಯಿಂದ ಪ್ರಭಾವಿತರಾಗಿ ಒಟ್ಟಿಗೆ ಕಾರ್ಯ ಮಾಡಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಕೆಲವರು ಗೋವಾದ ರಾಮನಾಥಿಯ ಸನಾತನದ ಆಶ್ರಮಕ್ಕೂ ಬಂದಿದ್ದಾರೆ.

೧. ಡಾ. ಥಾರ್ನಟನ್ ಸ್ಟ್ರೀಟರ್ ಮತ್ತು ಡಾ. ಕಿಂಬರ್ಲಿ ಶಿಪ್ಕಿ, ಇಂಗ್ಲೆಂಡ್

(ಎಡಗಡೆಯಿಂದ) ಡಾ. ಕಿಂಬರ್ಲಿ ಶಿಪ್ಕಿ ಮತ್ತು ಡಾ. ಥಾರ್ನಟನ್ ಸ್ಟ್ರೀಟರ್ ಇವರಿಗೆ ಸೂಕ್ಷ್ಮ ಜಗತ್ತಿನ ಬಗ್ಗೆ ಪ್ರದರ್ಶನವನ್ನು ತೋರಿಸುತ್ತಿರುವಾಗ ಶ್ರೀ. ಶಾನ್ ಕ್ಲಾರ್ಕ್

ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಬುದ್ಧಿಗೆ ಮೀರಿದ ವಿವಿಧ ಘಟನೆಗಳನ್ನು ತಿಳಿದುಕೊಂಡು ಅವುಗಳನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ನಮೂದಿಸಲು ೩.೨.೨೦೧೪ ರಂದು ಇಂಗ್ಲೆಂಡಿನ ಡಾ. ಥಾರ್ನಟನ್ ಸ್ಟ್ರೀಟರ್ ಮತ್ತು ಡಾ. ಕಿಂಬರ್ಲಿ ಶಿಪ್ಕಿ ಈ ಇಬ್ಬರು ಸಂಶೋಧಕರು ಆಶ್ರಮಕ್ಕೆ ಭೇಟಿ ನೀಡಿದರು. ಒಂದು ವೈಜ್ಞಾನಿಕ ಪ್ರಯೋಗ ಮಾಡಲೆಂದು ಅವರು ಆಶ್ರಮದಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರ ನಿವಾಸದ ಕೋಣೆಗೆ ಹೋದಾಗ ಅವರಿಗೆ ಅನುಭೂತಿ ಬಂದಿತು. ‘ಪರಾತ್ಪರ ಗುರು ಡಾ. ಆಠವಲೆಯವರ ನಿವಾಸದ ಕೋಣೆಯಲ್ಲಿನ ಗೋಡೆಯನ್ನು ಸ್ಪರ್ಶಿಸಿದಾಗ ಅದು ಉಸಿರಾಡುವಂತೆ ಅಲುಗಾಡುತ್ತಿದೆ’, ಎಂದು ಅವರಿಗೆ ಅನಿಸಿತು. ಅವರಿಗೆ ಅಲ್ಲಿಯ ಭೂಮಿಯಿಂದ ಸ್ಪಂದನಗಳು ಬರುತ್ತಿವೆ ಎಂದೆನಿಸಿತು. ಪರಾತ್ಪರ ಗುರು ಡಾ. ಆಠವಲೆಯವರ ಅತ್ಯಂತ ಸಾಮಾನ್ಯ ಜೀವನಶೈಲಿಯನ್ನು ನೋಡಿ ಅವರು ಆಶ್ಚರ್ಯಪಟ್ಟರು. ಅವರ ಭೇಟಿಯಲ್ಲಿ ಇಬ್ಬರಿಗೂ ಶಾಂತಿಯ ಅನುಭೂತಿ ಬಂದಿತು. ಆಶ್ರಮದಿಂದ ಹೊರಡುವಾಗ ಡಾ. ಸ್ಟ್ರೀಟರ್ ಇವರು, “ಈ ಆಶ್ರಮವು ಆಧ್ಯಾತ್ಮಿಕ ಶಿಕ್ಷಣದ ವಿವಿಧ ಅಂಗಗಳನ್ನು ಕಲಿಸುವ ಆಧ್ಯಾತ್ಮಿಕ ವಿಶ್ವವಿದ್ಯಾಲಯವಾಗಿದೆ” ಎಂದರು.

೨. ಪೂ. (ಡಾ.) ರಘುನಾಥ ಶುಕ್ಲ, ಪುಣೆ

ಶಾಸ್ತ್ರಜ್ಞ ಪೂ. ಡಾ. ರಘುನಾಥ್ ಶುಕ್ಲ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯದ ಬಗ್ಗೆ ತಿಳಿಸುತ್ತಿರುವ ಸಾಗುರು (ಸೌ.) ಅಂಜಲಿ ಗಾಡಗೀಳ

ಪುಣೆಯ ಪೂ. ಡಾ. ರಘುನಾಥ ಶುಕ್ಲ ಇವರು ರಾಷ್ಟ್ರೀಯ ರಾಸಾಯನಿಕ ಪ್ರಯೋಗಶಾಲೆ (ಎನ್.ಸಿ.ಎಲ್.)ಯಲ್ಲಿ ವಿಜ್ಞಾನಿ (ನಿವೃತ್ತ), ಜ್ಯೋತಿಷ್ಯ ಮಹಾಮಹೋಪಾಧ್ಯಾಯ, ವಾಸ್ತುಶಾಸ್ತ್ರವಾಚಸ್ಪತಿ, ವಿದ್ಯಾವಾಚಸ್ಪತಿ, ವಿಜ್ಞಾನಾಚಾರ್ಯ ಮತ್ತು ಜಾಗತಿಕ ಕೀರ್ತಿಯ ಸಂಶೋಧಕರು ! ಅವರನ್ನು ಸನಾತನದ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಭೇಟಿಯಾಗಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡುತ್ತಿರುವ ಸಂಶೋಧನಾ ಕಾರ್ಯದ ಮಾಹಿತಿ ನೀಡಿದರು. ಈ ಭೇಟಿಯಲ್ಲಿ ಪೂ. ಡಾ. ರಘುನಾಥ ಶುಕ್ಲ ಇವರು ಪರಾತ್ಪರ ಗುರು ಡಾ. ಆಠವಲೆಯವರ ಕುರಿತು “ಗುರುದೇವರಿಗೆ ವೈಶ್ವಿಕ ಆಧ್ಯಾತ್ಮಿಕ ಜ್ಞಾನ (ಅವಕಾಶ ಜ್ಞಾನ) ದೊರೆಯುತ್ತಿದೆ. ಅವರು ನಮ್ಮೆಲ್ಲರ ಆಧ್ಯಾತ್ಮಿಕ ಮತ್ತು ವ್ಯವಹಾರಿಕ ಅಡಚಣೆಗಳನ್ನು ಬಗೆಹರಿಸುತ್ತಿದ್ದಾರೆ. ಅವರ ಕಾರ್ಯ ತುಂಬಾ ಶ್ರೇಷ್ಠವಾಗಿದೆ” ಎಂದರು.

೩. ಡಾ. ಪ್ರದೀಪ ದೇಶಪಾಂಡೆ, ಅಮೇರಿಕಾ

ಡಾ. ಪ್ರದೀಪ ದೇಶಪಾಂಡೆ ಇವರು ಅಮೇರಿಕದ ಲುಯಿವ್ಹಿಲ ವಿದ್ಯಾಪೀಠದ ರಾಸಾಯನಿಕ ಅಭಿಯಾಂತ್ರಿಕಿ ಶಾಖೆಯ ಪ್ರೊಫೆಸರ್ ಎಮೆರಿಟಸ್ ಆಗಿದ್ದಾರೆ. ಅವರು ‘ಸಿಕ್ಸ್ ಸಿಗ್ಮಾ ಆಂಡ್ ಅಡವಾಂಸ್ಡ್ ಕಂಟ್ರೋಲ್ಸ್’ ಎಂಬ ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿ.ಇ.ಓ.) ಕೂಡ. ಅವರು 17.1.2015 ರಂದು ಗೋವಾದ ರಾಮನಾಥಿಯಲ್ಲಿನ,  ಸನಾತನ ಆಶ್ರಮಕ್ಕೆ ಭೇಟಿ ನೀಡಲೆಂದು ಬಂದಿದ್ದರು. ಆಶ್ರಮದಲ್ಲಿನ ಆಧ್ಯಾತ್ಮಿಕ ಸಂಶೋಧನೆ ಮತ್ತು ಆಶ್ರಮ ದಲ್ಲಿ ದೊರಕಿದ ದೈವೀ ಕಣಗಳನ್ನು ಕಂಡು ಅವರು ತುಂಬಾ ಪ್ರಭಾವಿತರಾದರು. ಪರಾತ್ಪರ ಗುರು ಡಾ. ಆಠವಲೆಯವರು ಸ್ವಲ್ಪ ಸಮಯದ ವರೆಗೆ ನಿವಾಸ ಮಾಡಿದ ಆಶ್ರಮದಲ್ಲಿನ ಕೋಣೆಯಲ್ಲಿ ನಾಮಜಪಕ್ಕಾಗಿ ಕುಳಿತುಕೊಳ್ಳುವ ಮೊದಲು ಮತ್ತು ಕುಳಿತ ನಂತರ ೫ ಸಾಧಕರ ‘ಜಿ.ಡಿ.ವಿ. ಬಯೋವೇಲ್’ ಎಂಬ ಉಪಕರಣದಿಂದ ಅಳೆದ ಅಳತೆಗಳನ್ನು ನಮೂದಿಸಲಾಯಿತು. ಸಾಧಕರ ಊರ್ಜಾಕ್ಷೇತ್ರ ಹಾಗೂ ಅವರ ಕುಂಡಲಿನಿ ಚಕ್ರಗಳ ಮೇಲೆ ಬಹಳ ಸಕಾರಾತ್ಮಕ ಪರಿಣಾಮವಾಗಿರುವುದು ಈ ಪ್ರಯೋಗದಿಂದ ಕಂಡು ಬಂತು. ಈ ಬದಲಾವಣೆಯನ್ನು ಕಂಡು ಡಾ. ದೇಶಪಾಂಡೆ ಇವರು ಆಶ್ಚರ್ಯಪಟ್ಟರು. ‘ಸಾಮಾನ್ಯವಾಗಿ ಈ ಬದಲಾವಣೆಯಾಗಲು ಅನೇಕ ತಿಂಗಳು ಬೇಕು, ಎಂದು ಅವರ ಅನುಭವವಿತ್ತು. ಅಮೇರಿಕಾಗೆ ತೆರಳಿದ ನಂತರ ಅವರು ಆಶ್ರಮದಲ್ಲಿ ದೊರಕಿದ ದೈವೀ ಕಣಗಳ ಬಗ್ಗೆಯೂ ಸ್ವತಂತ್ರವಾಗಿ ಆಳವಾದ ಸಂಶೋಧನೆ ಮಾಡಿದರು ಮತ್ತು ಅದರ ಮೇಲಾಧಾರಿತ ೨ ಶೋಧಪ್ರಬಂಧಗಳನ್ನು ಸಹ ಅವರು ಸ್ವತಃ ಪ್ರಕಾಶಿಸಿದರು.

೪. ಶ್ರೀ. ಮಯಂಕ ಬಡಜಾತ್ಯಾ, ಭಾರತ

ಪರಾತ್ಪರ ಗುರು ಡಾಕ್ಟರ ಆಠವಲೆಯವರ ದೇಹದಿಂದ ಪ್ರಕ್ಷೇಪಿತವಾಗುವ ಸಾತ್ವಿಕ ಊರ್ಜೆಯ (ಶಕ್ತಿಯ) ‘ಲೇಕರ ಎಂಟೆನಾ’ದ ಮೂಲಕ ಅಧ್ಯಯನ ಮಾಡುತ್ತಿರುವಾಗ ಶ್ರೀ. ಮಯಂಕ ಬಡಜಾತ್ಯಾ

ಶ್ರೀ. ಬಡಜಾತ್ಯಾ ಇವರು ಓರ್ವ ‘ಬಾಯೋ-ಆರ್ಕಿಟೆಕ್ಟ’ ಉದ್ಯಮಿಗಳಾಗಿದ್ದು ಅವರು ವಾಸ್ತುಕಲೆ (ಆರ್ಕಿಟೆಕ್ಚರ), ವಾಸ್ತುಶಾಸ್ತ್ರ, ಮಾನವಿ ಊರ್ಜೆ ಮತ್ತು ಪರ್ಯಾವರಣ ಈ ವಿಷಯಗಳ ಮೇಲೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಅವರಿಗೆ ಅತೀಂದ್ರಿಯ ವಿಷಯಗಳ ಮೇಲಿನ ಸಂಶೋಧನೆಯಲ್ಲಿ ೨೦ ವರ್ಷಗಳ ಅನುಭವವಿದೆ. ಸನಾತನ ಆಶ್ರಮದಲ್ಲಿ ದೈವೀ ಕಣಗಳು ದೊರಕುವುದು, ಯಾವುದೇ ಬಾಹ್ಯ ಕಾರಣವಿಲ್ಲದೇ ರಕ್ತದ ಕಲೆಗಳು ಮೂಡುವುದು, ದೇವತೆಯ ಚಿತ್ರವು ತಾನಾಗಿಯೇ ಹೊತ್ತಿ ಉರಿಯುವುದು ಇತ್ಯಾದಿ ವಿವಿಧ ಬುದ್ಧಿಯ ಆಚೆಗಿನ ಘಟನೆಗಳ ಕುರಿತು ಅವರಿಗೆ ತುಂಬಾ ಜಿಜ್ಞಾಸೆಯಿತ್ತು. ಅದರ ಬಗ್ಗೆ ಸಂಶೋಧನೆ ಮಾಡಲು ಅವರು 13.6.2014 ರಂದು ಸನಾತನದ ರಾಮನಾಥಿ ಆಶ್ರಮಕ್ಕೆ ಭೇಟಿ ನೀಡಿದರು. ಅವರು ‘ಈಸ್ಮಾಗ ಸ್ಪಿಯಾನ್’ (ಈ ಉಪಕರಣವು ಪರಮಾಣು-ಒತ್ತಡದ (ಎಲೆಕ್ಟ್ರೋ-ಸ್ಟ್ರೆಸ್) ಅಳತೆಯನ್ನು ಮಾಡುತ್ತದೆ) ಮತ್ತು ‘ಲೇಕರ ಎಂಟಿನಾ’ ಇವುಗಳ ಮಾಧ್ಯಮದಿಂದ ತುಂಬಾ ಸಂಶೋಧನೆಗಳನ್ನು ಮಾಡಿದರು. ಆಶ್ರಮದಲ್ಲಿನ ಚೈತನ್ಯಯುಕ್ತ ವಾತಾವರಣದಿಂದ ಸಾಧಕರ ಮೇಲೆ ಮತ್ತು ಸಾಧಕರಿಂದ ಈ ವಾತಾವರಣದ ಮೇಲಾಗುವ ಪರಿಣಾಮದ ಅಧ್ಯಯನಕ್ಕಾಗಿ ಮತ್ತೊಮ್ಮೆ ಇಲ್ಲಿ ಬರುತ್ತೇನೆ ಎಂದು ಹೇಳಿದರು.

Leave a Comment