ಸಾಧಕರಿಗೆ ಮಹತ್ವದ ಸೂಚನೆ !

ಸಾಧಕರಿಗೆ ಮಹತ್ವದ ಸೂಚನೆ !

ಪ್ರತಿದಿನ ಮುಂದಿನ ಆಧ್ಯಾತ್ಮಿಕ ಉಪಾಯಗಳನ್ನು ಗಾಂಭೀರ್ಯದಿಂದ ಮಾಡಿ !

ಪರಾತ್ಪರ ಗುರು ಡಾಕ್ಟರರು ಹೇಳಿರುವ ಆಧ್ಯಾತ್ಮಿಕ ಉಪಾಯಗಳೆಂದರೆ ‘ಆಪತ್ಕಾಲದಲ್ಲಿ ಜೀವಂತವಾಗಿ ಉಳಿಯಲು ಸಿಕ್ಕಿರುವ ಸಂಜೀವಿನಿಯೇ’ ಎಂದು ಗಮನದಲ್ಲಿಟ್ಟುಕೊಂಡು ಎಲ್ಲ ಉಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ !

ಈಗ ಎಲ್ಲೆಡೆ ಪ್ರತಿಕೂಲ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಸಮಯದಲ್ಲಿ ಎಲ್ಲ ಸಾಧಕರು ಇಲ್ಲಿ ನೀಡಿರುವ ಉಪಯಗಳು ತಮ್ಮಿಂದ ಪ್ರತಿದಿನ ಆಗುತ್ತಿವೆಯಲ್ಲ ಎಂಬುವುದರ ಬಗ್ಗೆ ಗಮನ ಹರಿಸಬೇಕು.

೧. ನಾಮಜಪ

‘ಜಾಗತಿಕ ಸಾಂಕ್ರಾಮಿಕ ರೋಗ’ ಎಂದು ಗುರುತಿಸಲ್ಪಟ್ಟಿರುವ ಕೊರೋನಾದ ವಿರುದ್ಧ ರಾಜ್ಯ ಮತ್ತು ಕೇಂದ್ರ ಸರಕಾರಗಳು, ತಜ್ಞ ವೈದ್ಯರು ನೀಡಿರುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಅದರೊಟ್ಟಿಗೆ ನಮ್ಮಲಿರುವ ಆಧ್ಯಾತ್ಮಿಕ ಬಲ ಹೆಚ್ಚಿಸಲು ಪೂ. ಡಾ. ಮುಕುಲ ಗಾಡಗೀಳ್ ಇವರು ನೀಡಿರುವ ನಾಮಜಪವನ್ನು (ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ಗುರುದೇವ ದತ್ತ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಓಂ ನಮಃ ಶಿವಾಯ |) ಪ್ರತಿದಿವಸ ೧೦೮ ಬಾರಿ ಜಪಿಸಬೇಕು. ನಾಮಜಪ ಮಾಡಲು ಯಾವುದೇ ಬಂಧನ ಇರುವುದಿಲ್ಲ, ಮಾಸಿಕ ಸರದಿ ಇರುವ ಸಾಧಕಿಯರು, ಜನನ-ಮರಣದ ಸೂತಕ ಇರುವವರು ಈ ನಾಮಜಪ ಮಾಡಬಹುದು.

೨. ಸ್ತೋತ್ರ ಪಠಿಸುವುದು

ಆಪತ್ಕಾಲದಲ್ಲಿ ರಕ್ಷಣೆಯಾಗಬೇಕೆಂದು ಪ್ರತಿದಿನ ಬೆಳಗ್ಗೆ ಚಂಡೀಕವಚ (ದೇವಿಕವಚ) ಹಾಗೂ ಸಾಯಂಕಾಲ ಬಗಲಾಮುಖಿ ದಿಗ್ಬಂಧನ ಸ್ತೋತ್ರವನ್ನು ಕೇಳಬೇಕು.

೩. ರಕ್ಷಾಯಾಂತ್ರ ಮತ್ತು ರಾಮಕವಚ ಧರಿಸಿ

ಪರಾತ್ಪರ ಗುರು ಪಾಂಡೆ ಮಹಾರಾಜರ ಆಜ್ಞೆಯಂತೆ ಪ್ರತಿದಿನ ರಕ್ಷಾಯಂತ್ರವನ್ನು ಮತ್ತು ರಾಮಕವಚವನ್ನು ಧರಿಸಿ. ರಕ್ಷಾಯಾಂತ್ರ ಮತ್ತು ರಾಮಕವಚದ ದಾರವನ್ನು, ತಾಯಿತದಲ್ಲಿ ಹಾಕಿರುವ ರಕ್ಷಾಯಂತ್ರವನ್ನು ಪ್ರತಿ ೨ ತಿಂಗಳಿಗೊಮ್ಮೆ ಬದಲಾಯಿಸಿ. ಹಳೆಯ ದಾರಗಳನ್ನು ಮತ್ತು ರಕ್ಷಾಯಂತ್ರವನ್ನು ಅಗ್ನಿಯಲ್ಲಿ ವಿಸರ್ಜಿಸಿ. ತಾಯಿತವನ್ನು ಬದಲಾಯಿಸುವ ಅವಶ್ಯಕತೆಯಿಲ್ಲ.

೪. ಗಂಟೆಗೊಮ್ಮೆ ಊದುಬತ್ತಿ, ಸನಾತನ ಪ್ರಭಾತ ಅಥವಾ ಸ್ವಂತ ಕೈಗಳಿಂದ ಸಪ್ತಚಕ್ರಗಳ ಮೇಲಿರುವ ಆವರಣವನ್ನು ತೆಗೆಯಿರಿ

ಪ್ರತಿ ಗಂಟೆಗೊಮ್ಮೆ ಸಹ್ರಾರದಿಂದ ಸ್ವಾಧಿಷ್ಠಾನ ಚಕ್ರದ ವರೆಗೆ ಎಲ್ಲ ಚಕ್ರಗಳ ಮೇಲೆ ಬಂದಿರುವ ಕಪ್ಪು ಶಕ್ತಿಯ ಆವರಣವನ್ನು ತೆಗೆಯಬೇಕು. ಅಧ್ಯಾತಮಿಕ ತೊಂದರೆ ಇರುವ ಸಾಧಕರು ಊದುಬತ್ತಿ ಅಥವಾ ಸನಾತನ ಪ್ರಭಾತದ ಸಹಾಯದಿಂದ, ಹಾಗು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕರು ಸ್ವಂತ ಕೈಗಳಿಂದ ಈ ಆವರಣವನ್ನು ತೆಗೆಯಬಹುದು. ಈ ಪ್ರಕ್ರಿಯೆಯನ್ನು ೨-೩ ನಿಮಿಷಗಳ ಕಾಲ ಮಾಡಿ, ನಂತರ ‘ಭೇಮಸೇನಿ’ ಕರ್ಪೂರದ ಸುಗಂಧವನ್ನು ತೆಗೆದುಕೊಂಡು ಉಪಾಯ ಮಾಡಬೇಕು. ‘ನನ್ನ ದೇಹದ ಶುದ್ಧಿಯಾಗಿ ನನ್ನಲ್ಲಿ ಉತ್ಸಾಹ ನಿರ್ಮಾಣವಾಗಲಿ’ ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿ.

ಅಸುರಿ ಶಕ್ತಿಗಳು ಸಾಧಕರ ಸಾಧನೆಯಲ್ಲಿ ವಿಘ್ನಗಳನ್ನು ನಿರ್ಮಿಸಲು ಶತಪ್ರಯತ್ನಗಳನ್ನು ಮಾಡುತ್ತಿವೆ. ಆಪತ್ಕಾಲದಲ್ಲಿ ಈ ತೊಂದರೆಗಳು ಹೆಚ್ಚಾಗುತ್ತಿವೆಯೇ ಹೊರತು ಕಡಿಮೆಯಾಗುವುದಿಲ್ಲ, ಆದುದರಿಂದ ಎಲ್ಲ ಸಾಧಕರು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು ಅನಿವಾರ್ಯವಾಗಿದೆ.

ಸಾಧಕರೇ, ಸರ್ವಶಕ್ತಿವಂತ ಈಶ್ವರನು ನಮ್ಮೊಂದಿಗಿರುವುದರಿಂದ ಯಾವುದೇ ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ ಧೃತಿಗೆಡದೆ ಸ್ಥಿರವಾಗಿದ್ದು ಶ್ರದ್ಧೆಯಿಂದ ಎಲ್ಲ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ !

– ಸದ್ಗುರು ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೭.೪.೨೦೨೦)

ಸಾಧಕರು ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ನೀಡುವಾಗ ‘ಮೇಲಿನೆ ಆಧ್ಯಾತ್ಮಿಕ ಉಪಾಯಗಳು ಆಗುತ್ತಿವೆಯೇ’ ಎಂದು ಕೂಡ ವರದಿಯಲ್ಲಿ ಸೇರಿಸಿ ತಿಳಿಸಬೇಕು.

Leave a Comment