ಬಗಲಾದಿಗ್ಬಂಧನ ಸ್ತೋತ್ರ !

ಸಾಧಕರಿಗೆ ಸೂಚನೆ

ಸಾಧಕರು ಕಾಲಾನುಸಾರ ಬಗಲಾಮುಖಿ ದೇವಿಗೆ ಭಾವಪೂರ್ಣ ಪ್ರಾರ್ಥನೆ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ದೇವಿಯ ‘ಬಗಲಾದಿಗ್ಬಂಧನ ಸ್ತೋತ್ರ’ವನ್ನು ಕೇಳಬೇಕು !

ಇತ್ತೀಚೆಗೆ ಸಾಧಕರಿಗೆ ೭ ನೇ ಪಾತಾಳದ ಕೆಟ್ಟ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತೊಂದರೆ ಕೊಡುತ್ತಿವೆ. ಈ ಕೆಟ್ಟ ಶಕ್ತಿಗಳೊಂದಿಗೆ ಸಗುಣ ಹಾಗೂ ನಿರ್ಗುಣ ಇವೆರಡೂ ಸ್ತರಗಳಲ್ಲಿ ಒಂದೇ ಸಲ ಸೂಕ್ಷ್ಮದಿಂದ ನಾಮಜಪಾದಿ ಉಪಾಯಗಳ ಮೂಲಕ ಹೋರಾಡಬೇಕಾಗುತ್ತಿದೆ. ಸಾಧಕರು ಉಪಾಸ್ಯ ದೇವತೆಗೆ ಭಾವಪೂರ್ಣ ಪ್ರಾರ್ಥನೆ ಮಾಡಿ ಕಾಲಾನುಸಾರ ಶ್ರೀಕೃಷ್ಣನ ನಾಮಜಪ ಮತ್ತು ಪ್ರಾಣವಹನ ಪದ್ಧತಿಗನುಸಾರ ಕಂಡು ಹಿಡಿದ ನಾಮಜಪ ಮಾಡಬೇಕು. ಇವುಗಳು ಸಾಧಕರನ್ನು ಕೆಟ್ಟ ಶಕ್ತಿಗಳ ತೊಂದರೆಯಿಂದ ನಿರ್ಗುಣ ಸ್ತರದಲ್ಲಿ ರಕ್ಷಣೆ ಮಾಡುತ್ತಿವೆ.

ಸಗುಣ ಸ್ತರದಲ್ಲಿ ಸಾಧಕರ ರಕ್ಷಣೆಯಾಗಲು ಅವರು ಕಾಲಾನುಸಾರ ದೇವಿಗೆ ಭಾವಪೂರ್ಣ ಪ್ರಾರ್ಥನೆ ಮಾಡಬೇಕು. ಅದರೊಂದಿಗೆ ಬಗಲಾಮುಖಿ ದೇವಿಯ ೨೦ ನಿಮಿಷದ ‘ಬಗಲಾದಿಗ್ಬಂಧನ ಸ್ತೋತ್ರ’ವನ್ನು ಬೆಳಗ್ಗೆ ಮತ್ತು ಸಾಯಂಕಾಲ ಕೇಳುವುದರಿಂದ ಅವರಿಗಾಗುವ ತೊಂದರೆಯ ಪ್ರಮಾಣವು ಕಡಿಮೆಯಾಗಿ ಅವರ ಸುತ್ತಲೂ ದೇವಿಯ ರಕ್ಷಣಾಕವಚವು ನಿರ್ಮಾಣವಾಗುವುದು. ಅದರಿಂದ ಸೂಕ್ಷ್ಮ ಸ್ತರದೊಂದಿಗೆ ಮತ್ತು ಸ್ಥೂಲದಿಂದಾಗುವ ತೊಂದರೆಯೂ ತುಂಬಾ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಬಗಲಾದಿಗ್ಬಂಧನ ಸ್ತೋತ್ರದ ಆಡಿಯೋ ಇಲ್ಲಿ ನೀಡಲಾಗಿದೆ.

(ಈ ಆಡಿಯೋವನ್ನು ಆನ್‌ಲೈನ್ ಕೇಳಬಹುದು. ಸದ್ಯ ಆಡಿಯೋ ಡೌನ್‌ಲೋಡ್ ಮಾಡುವ ಸೌಲಭ್ಯವಿಲ್ಲ ಎಂಬುದನ್ನು ಸಾಧಕರು ಗಮನದಲ್ಲಿಟ್ಟುಕೊಳ್ಳಬೇಕು.)

ಕು. ಮಧುರಾ ಭೋಸಲೆ (ಸೂಕ್ಷ್ಮದಲ್ಲಿ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ. (೧೪.೭.೨೦೧೯, ರಾತ್ರಿ ೧೧.೨೦)