ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’

Article also available in :

ವಾಹನದ ಅಪಘಾತವಾಗಬಾರದೆಂದು ಸಾಧಕರು ವಹಿಸಬೇಕಾದ ದಕ್ಷತೆ ಮತ್ತು ಪ್ರಯಾಣದಲ್ಲಿ ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ

ಸದ್ಯ ಆಪತ್ಕಾಲದ ತೀವ್ರತೆ ಮತ್ತು ಕೆಟ್ಟ ಶಕ್ತಿಗಳ ಆಕ್ರಮಣಗಳು ಹೆಚ್ಚಾಗುತ್ತಲೇ ಇವೆ. ಆದುದರಿಂದ ಸಾಧಕರ ಸಂದರ್ಭದಲ್ಲಿ ವಾಹನದ ಅಪಘಾತಗಳಾಗುವ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಇದಕ್ಕಾಗಿ ಸಾಧಕರು ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳನ್ನು ನಡೆಸುವಾಗ ಮುಂದಿನಂತೆ ಕಾಳಜಿ ವಹಿಸಬೇಕು.

೧. ಸಾಧಕರು ವಹಿಸಬೇಕಾದ ಕಾಳಜಿ

ಅ. ವಾಹನವನ್ನು ಆರಂಭಿಸುವ ಮೊದಲು ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡಬೇಕು. ಪ್ರಯಾಣದಲ್ಲಿ ಆಧ್ಯಾತ್ಮಿಕ ಸ್ತರದ ಉಪಾಯಗಳ ಮೂಲಕ ಸಂರಕ್ಷಣ ಕವಚವನ್ನು ನಿರ್ಮಾಣವಾಗಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು.

ಆ. ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ದ್ವಿಚಕ್ರವನ್ನು ನಡೆಸಲು ವೇಗಮಿತಿ (ಸ್ಪೀಡ್ ಲಿಮಿಟ್) ೪೦ ಕಿಲೋಮೀಟರ್ ಮತ್ತು ಚತುಷ್ಚಕ್ರವನ್ನು ನಡೆಸಲು ವೇಗಮಿತಿ ೬೦ ಕಿಲೋಮೀಟರ್ ಹೀಗಿರುತ್ತದೆ. ನಗರಗಳಲ್ಲಿ ಸಾರ್ವಜನಿಕ ರಸ್ತೆಗಳು, ಹೆದ್ದಾರಿ (ಹೈವೆ), ಸೇತುವೆ ಮುಂತಾದ ಸ್ಥಳಗಳಲ್ಲಿ ವಾಹನದ ವೇಗ ಮಿತಿ ಎಷ್ಟಿರಬೇಕು ? ಎಂಬುದರ ಬಗ್ಗೆ ಅಲ್ಲಲ್ಲಿ ಫಲಕಗಳನ್ನು ಹಾಕಲಾಗಿರುತ್ತದೆ. ಆ ವೇಗಮಿತಿಯ, ಹಾಗೆಯೇ ಇತರ ನಿಯಮಗಳನ್ನು ಪಾಲಿಸಿ ವಾಹನವನ್ನು ಚಲಾಯಿಸಬೇಕು.

ಇ. ದ್ವಿಚಕ್ರ ವಾಹನ ಚಲಾಯಿಸುವಾಗ ಶಿರಸ್ತ್ರಾಣದ (ಹೆಲ್ಮೆಟ್‌ನ) ಮತ್ತು ಚತುಷ್ಚಕ್ರ ವಾಹನ ಚಲಾಯಿಸುವಾಗ ‘ಸೀಟ್ ಬೆಲ್ಟ್’ ಬಳಸಬೇಕು.

ಈ. ವಾಹನವನ್ನು ಚಲಾಯಿಸುತ್ತಿರುವಾಗ ಸಂಚಾರವಾಣಿಯಲ್ಲಿ ಮಾತನಾಡಬಾರದು, ಹಾಗೆಯೇ ಸಂಚಾರವಾಣಿಯನ್ನು ಉಪಯೋಗಿಸಬಾರದು.

೨. ಪ್ರಯಾಣದಲ್ಲಿ ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’ !

೨ ಅ. ಯಂತ್ರವನ್ನು ತಯಾರಿಸುವ ಮತ್ತು ಅದನ್ನು ಸಿದ್ಧಪಡಿಸುವ ಪದ್ಧತಿ

ಇಲ್ಲಿ ನೀಡಲಾದ ಯಂತ್ರವನ್ನು ಒಂದು ಬಿಳಿ ಕಾಗದದ ಮೇಲೆ ಪೆನ್‌ನಿಂದ ಬರೆಯಬೇಕು. ಅದಕ್ಕಾಗಿ ಮೊದಲು ಚೌಕೋನವನ್ನು ಬಿಡಿಸಬೇಕು. ಯಂತ್ರದಲ್ಲಿ ನೀಡಿದಂತೆ ಆಯಾ ಚೌಕೋನದಲ್ಲಿ ಆಯಾ ಸಂಖ್ಯೆಯನ್ನು ಬರೆಯಬೇಕು. ಸಂಖ್ಯೆಯನ್ನು ಬರೆಯುವಾಗ ಚಿಕ್ಕ ಅಂಕೆಯಿಂದ ಆರಂಭಿಸಿ ದೊಡ್ಡ ಅಂಕೆಯ ವರೆಗೆ ಸಂಖ್ಯೆಗಳನ್ನು ಬರೆಯಬೇಕು. (ಉದಾ. ಮೊದಲು ಯಂತ್ರದ ೪ ನೇ ಸ್ತಂಭದ ೩ ನೇ ಸಾಲಿನಲ್ಲಿ ‘೧’ ಈ ಸಂಖ್ಯೆಯನ್ನು ಬರೆಯಬೇಕು, ಅನಂತರ ೩ ನೇ ಸ್ತಂಭದ ೧ ನೇ ಸಾಲಿನಲ್ಲಿ ‘೨’ ಈ ಸಂಖ್ಯೆಯನ್ನು ಬರೆಯಬೇಕು ಇತ್ಯಾದಿ.)

ಪ್ರತಿಯೊಂದು ಸಂಖ್ಯೆಯನ್ನು ಬರೆಯುವಾಗ ಮೊದಲು ‘ಓಂ ಹ್ರೀಂ ನಮಃ |’, ಎಂದು ನಾಮಜಪಿಸಬೇಕು ಮತ್ತು ನಂತರ ಸಂಖ್ಯೆ ಯನ್ನು ಬರೆಯಬೇಕು. ಈ ರೀತಿ ಯಂತ್ರವನ್ನು ಕಾಗದದ ಮೇಲೆ ಬಿಡಿಸಿದ ನಂತರ ಆ ಯಂತ್ರದ ಸುತ್ತಲೂ ಊದುಬತ್ತಿಯಿಂದ ನಿವಾಳಿಸಬೇಕು. ಅನಂತರ ಕಣ್ಣುಗಳನ್ನು ಮುಚ್ಚಿ ‘ಅಂಜನಿಸುತ-ಹನುಮಾನ್ ರಕ್ಷತು ರಕ್ಷತು ಸ್ವಸ್ತಿ|’ (ಅಂದರೆ ‘ಅಂಜನಿಪುತ್ರ ಹನುಮಂತನು ನಮ್ಮ ರಕ್ಷಣೆಯನ್ನು ಮಾಡಲಿ ಮತ್ತು ನಮ್ಮ ಪ್ರಯಾಣವು ನಿರ್ವಿಘ್ನವಾಗಿ ನೆರವೇರಲಿ’) ಈ ಮಂತ್ರಜಪವನ್ನು ಹೇಳುತ್ತಾ ಬಲಗೈಯ ಮಧ್ಯದ ಬೆರಳನ್ನು ಯಂತ್ರದಲ್ಲಿನ ಒಂದು ಚೌಕೋನದ ಮೇಲೆ ಇಡಬೇಕು. ನಂತರ ಕಣ್ಣುಗಳನ್ನು ತೆರೆದು ಆ ಚೌಕೋನದಲ್ಲಿ ಬರೆದ ಸಂಖ್ಯೆಯಷ್ಟು ಮೇಲಿನ ಮಂತ್ರಜಪವನ್ನು ಮಾಡಬೇಕು (ಅಂದರೆ ೧೬ ಸಂಖ್ಯೆಯ ಮೇಲೆ ಬೆರಳಿದ್ದರೆ ೧೬ ಬಾರಿ ಮಂತ್ರ ಜಪಿಸಬೇಕು). ಈಗ ಈ ‘ಅಪಘಾತ ನಿವಾರಣೆ ಯಂತ್ರ’ವು ಸಿದ್ಧವಾಗಿದೆ.

೨ ಆ. ಯಂತ್ರವನ್ನು ಬಳಸುವ ಪದ್ಧತಿ

ಈ ಯಂತ್ರವು ತಯಾರಾದ ನಂತರ ಪ್ರಯಾಣದ ಸಮಯದಲ್ಲಿ (ಸಾರ್ವಜನಿಕ ವಾಹನದಿಂದ ಪ್ರಯಾಣ ಮಾಡುವಾಗಲೂ) ತಮ್ಮ ಕಿಸೆಯಲ್ಲಿ ಇಟ್ಟುಕೊಳ್ಳಬೇಕು. ಯಾರಲ್ಲಿ ವೈಯಕ್ತಿಕ ವಾಹನವಿದೆಯೋ ಮತ್ತು ಯಾರಿಗೆ ಮೇಲಿಂದ ಮೇಲೆ ದೂರದ ಪ್ರಯಾಣ ಮಾಡಬೇಕಾಗುತ್ತದೆಯೋ, ಅವರು ಯಂತ್ರವನ್ನು ಬರೆದ ಕಾಗದದ ‘ಲ್ಯಾಮಿನಶನ್’ ಮಾಡಿಟ್ಟುಕೊಳ್ಳಬೇಕು. ನಂತರ ಈ ಯಂತ್ರವನ್ನು ಚತುಷ್ಚಕ್ರ ವಾಹನದೊಳಗೆ ಚಾಲಕನ ಎದುರಿರುವ ಗಾಜಿಗೆ (‘ವಿಂಡ್‌ಸ್ಕ್ರೀನ್’ಗೆ) ಬಲಬದಿಗೆ ಒಳಗಿನ ಬದಿಯಿಂದ (ಚಾಲಕನಿಗೆ ಕಾಣುವಂತೆ) ಹಚ್ಚಬೇಕು. ದ್ವಿಚಕ್ರ ವಾಹನಕ್ಕೆ ಮುಂದಿನ ಬದಿಗೆ ನಿರ್ಗುಣ (ಹೊರಗಿನ ಬದಿಗೆ) ಹಚ್ಚಬೇಕು. ಈ ಯಂತ್ರವು ಅಪಘಾತಗಳಿಂದ ರಕ್ಷಣೆ ಮಾಡುತ್ತದೆ. ಅದನ್ನು ಕಾರ್ಯನಿರತ ಮಾಡಲು ಪ್ರಯಾಣವನ್ನು, ಹಾಗೆಯೇ ವಾಹನವನ್ನು ನಡೆಸಲು ಆರಂಭಿಸುವಾಗ ಪ್ರತಿ ಬಾರಿ ಯಂತ್ರಕ್ಕೆ ತಮ್ಮ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡಬೇಕು.

(ಆಧಾರ : ಗ್ರಂಥ ‘ಯಂತ್ರ ರಹಸ್ಯ ದರ್ಶನ’)

೨ ಇ. ಮಹತ್ವದ ಸೂಚನೆ

೧. ‘ಅಪಘಾತ ನಿವಾರಣೆ ಯಂತ್ರ’ವನ್ನು ಬಿಡಿಸಲು ಅದರಲ್ಲಿನ ಖಾಲಿ ಚೌಕೋನಗಳ ಪ್ರತಿಯನ್ನು (ಪ್ರಿಂಟ್) ತೆಗೆಯಬಹುದು. ಅದರ ಮೇಲೆ ಶೇ. ೬೦ ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕರಿಂದ ಯಂತ್ರದಲ್ಲಿನ ಎಲ್ಲ ಸಂಖ್ಯೆಗಳನ್ನು ಕೈಯಿಂದ ಬರೆಸಿಕೊಳ್ಳಬೇಕು.

೨. ಯಂತ್ರವನ್ನು ತಯಾರಿಸುವವರು ಆರಂಭದಲ್ಲಿ ಭಗವಾನ ಶ್ರೀಕೃಷ್ಣ ಮತ್ತು ಹನುಮಂತನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.

೩. ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನದಿಂದ ಪ್ರಯಾಣಕ್ಕೆ ಹೊರಡುವ ಮೊದಲು ವಾಹನವನ್ನು ಗೋಮೂತ್ರದಿಂದ ಅಥವಾ ಸಾತ್ತ್ವಿಕ ವಿಭೂತಿ ಹಾಕಿದ ನೀರಿನಿಂದ ಶುದ್ಧ ಮಾಡಬೇಕು. ಹೀಗೆ ಮಾಡುವುದು ಸಾಧ್ಯವಿಲ್ಲದಿದ್ದರೆ ಬಿಳಿ ಕಾಗದದಲ್ಲಿ ಚಿಟಿಕೆಯಷ್ಟು ಸಾತ್ತ್ವಿಕ ವಿಭೂತಿಯನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ನಿಮ್ಮ ವಾಹನದಲ್ಲಿ ಮತ್ತು ವಾಹನದ ಸುತ್ತಲೂ ಊದಬೇಕು.

೩. ವಾಹನದಲ್ಲಿ ನಾಮಪಟ್ಟಿಗಳನ್ನು ಹಚ್ಚುವುದು

ವಾಹನದಲ್ಲಿ ನಾಮಪಟ್ಟಿಗಳನ್ನು ಹಚ್ಚಿರದಿದ್ದರೆ ಮೊತ್ತಮೊದಲು ಅವುಗಳನ್ನು ಹಚ್ಚಬೇಕು. (ಅವುಗಳು ಯಾವುವು ಮತ್ತು ಯಾವ ಪದ್ಧತಿಯಿಂದ ಹಚ್ಚಬೇಕೆಂದು ಮುಂದೆ ನೀಡಲಾಗಿದೆ.) ಈ ನಾಮಪಟ್ಟಿಗಳಿಂದ ನಿಮ್ಮ ವಾಹನದ ಸುತ್ತಲೂ ದೇವತೆಗಳ ಚೈತನ್ಯದ ಸಂರಕ್ಷಣಕವಚವು ನಿರ್ಮಾಣವಾಗುವುದು ಮತ್ತು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ತಮ್ಮ ರಕ್ಷಣೆಯಾಗುವುದು. ವಾಹನವನ್ನು ನಡೆಸುವ ಮೊದಲು ಅದನ್ನು ಭಕ್ತಿಭಾವದಿಂದ ಒರೆಸಬೇಕು ಮತ್ತು ತಮ್ಮನ್ನು ರಕ್ಷಿಸಲು ಅದಕ್ಕೆ ಪ್ರಾರ್ಥಿಸಬೇಕು.

೩ ಅ. ಚತುಷ್ಚಕ್ರ ವಾಹನದಲ್ಲಿನ ನಾಮಪಟ್ಟಿಗಳ ರಚನೆ

ವಾಹನಶುದ್ಧಿಗಾಗಿ ವಾಹನದಲ್ಲಿ ದೇವತೆಗಳ ನಾಮಪಟ್ಟಿಗಳನ್ನು ಹಚ್ಚುವಾಗ ಮೇಲ್ಛಾವಣಿಯ ಒಳಗಿನ ಬದಿಯಲ್ಲಿ ಅವುಗಳ ರಚನೆ ಯನ್ನು ಕೆಳಗೆ ನೀಡಿದ ಕ್ರಮಾಂಕಗಳಿಗನುಸಾರ ಮಾಡಬೇಕು.

೧. ಚಾಲಕನ ಆಸನದ ಎದುರು – ಶ್ರೀಕೃಷ್ಣ

೨. ಚಾಲಕನ ಪಕ್ಕದ ಆಸನದ ಎದುರು – ಗಣಪತಿ

೩. ಚಾಲಕನ ಹಿಂದಿನ ಬದಿಗೆ ಎಡಬದಿಯ ಕಿಟಕಿಯ ಮೇಲೆ – ಶ್ರೀರಾಮ

೪. ಚಾಲಕನ ಹಿಂದಿನ ಬದಿಗೆ ಬಲಬದಿಯ ಕಿಟಕಿಯ ಮೇಲೆ – ದತ್ತ

೫. ವಾಹನದ ಹಿಂದಿನ ಬದಿಗೆ ಎಡಗಡೆಗೆ – ದೇವಿ (ದುರ್ಗಾ, ಅಂಬಾದೇವಿ, ಭವಾನಿದೇವಿ, ರೇಣುಕಾದೇವಿ ಇತ್ಯಾದಿಗಳ ಪೈಕಿ ಯಾವುದೂ)

೬. ವಾಹನದ ಹಿಂದಿನ ಬದಿಗೆ ಮಧ್ಯಭಾಗದಲ್ಲಿ – ಶಿವ

೭. ವಾಹನದ ಹಿಂದಿನ ಬದಿಗೆ ಬಲಬದಿಗೆ – ಮಾರುತಿ

೩ ಆ. ದ್ವಿಚಕ್ರ ವಾಹನದಲ್ಲಿ ನಾಮಪಟ್ಟಿಗಳನ್ನು ಹಚ್ಚುವ ಪದ್ಧತಿ

ದ್ವಿಚಕ್ರದ ಮುಂದಿನ ಬದಿಗೆ ‘ಗಣಪತಿ’ ಮತ್ತು ಹಿಂದಿನ ಬದಿಗೆ ‘ಶ್ರೀಕೃಷ್ಣ’ ಈ ದೇವತೆಗಳ ನಾಮಪಟ್ಟಿಗಳನ್ನು ಹಚ್ಚಬೇಕು.

೩ ಇ. ಮೇಲಿನ ರೀತಿಯಲ್ಲಿ ವಾಹನಶುದ್ಧಿಯನ್ನು ಮಾಡಿ ಮತ್ತು ‘ಅಪಘಾತ ನಿವಾರಣೆ ಯಂತ್ರ’ವನ್ನು ಹತ್ತಿರವಿಟ್ಟುಕೊಂಡು ವಾಹನದಿಂದ ಪ್ರಯಾಣ ಮಾಡಬೇಕು. ಪ್ರಯಾಣ ಸುಖಕರವಾದ ನಂತರ ಶ್ರೀಕೃಷ್ಣ ಮತ್ತು ಹನುಮಂತನ ಚರಣಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸಬೇಕು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೩.೨೦೨೨)

3 thoughts on “ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’”

Leave a Comment