ಅಂಗೈಗಳನ್ನು ಜೋಡಿಸಿ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ!

Article also available in :

Contents

ಅಂಗೈಗಳನ್ನು ಜೋಡಿಸಿದ ಮುದ್ರೆಯ ಆವಿಷ್ಕಾರ

ಸದ್ಗುರು (ಡಾ.) ಮುಕುಲ ಗಾಡಗೀಳ
ಸದ್ಗುರು (ಡಾ.) ಮುಕುಲ ಗಾಡಗೀಳ

2021 ರಲ್ಲಿ ಸನಾತನದ ರಾಮನಾಥಿ ಆಶ್ರಮದಲ್ಲಿ ಯಜ್ಞ ನಡೆದಿತ್ತು. ಆಗ ನನಗೆ ಯಜ್ಞದಲ್ಲಿ ಆಹುತಿಯನ್ನು ನೀಡುವ ಯಜಮಾನರ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವು ಬಂದಿದೆ ಎಂದು ಅರಿವಾಯಿತು. ನಾನು ಅವರ ಮೇಲಿನ ಆವರಣವನ್ನು ತೆಗೆಯಲು ಪ್ರಯತ್ನಿಸಿದೆ; ಆದರೆ ಅದು ದೂರವಾಗುತ್ತಿರಲಿಲ್ಲ. ಆಗ, ಕೆಟ್ಟ ಶಕ್ತಿ ಯಜಮಾನರ ಮೇಲೆ ಮೇಲಿನಿಂದ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಬಿಡುತ್ತಿದೆ, ಆದುದರಿಂದ ಅವರ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ದೂರವಾಗುತ್ತಿಲ್ಲ. ಮತ್ತು ಇದಕ್ಕಾಗಿ ಮೊದಲಿಗೆ ಮೇಲಿನಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ತಡೆಯಬೇಕು, ಎಂದು ನನ್ನ ಗಮನಕ್ಕೆ ಬಂದಿತು. ಇದಕ್ಕಾಗಿ ದೇವರು ನನಗೆ ಮುಂದಿನಂತೆ ಸೂಚಿಸಿದರು, ಒಂದು (ಬಲಗೈ) ಅಂಗೈಯನ್ನು ತಲೆಯ ಮೇಲೆ 1-2 ಸೆಂ.ಮೀ. ಅಂತರದಲ್ಲಿ ನಮ್ಮತ್ತ ಇಟ್ಟುಕೊಳ್ಳಬೇಕು ಮತ್ತು ಅದರ ಮೇಲೆ ಇನ್ನೊಂದು (ಎಡಗೈ) ಅಂಗೈ ಮೊದಲಿನ ಅಂಗೈನ ವಿರುದ್ಧ ದಿಕ್ಕಿಗೆ, ಅಂದರೆ ಮೇಲಿನ ದಿಶೆಗೆ ಇಟ್ಟುಕೊಳ್ಳಬೇಕು. (ಛಾಯಾಚಿತ್ರ 1 ನೋಡಿ) ಈ ಹೊಸ ಮುದ್ರೆಗೆ ನಾನು ‘ಎರಡೂ ಅಂಗೈಗಳನ್ನು ಜೋಡಿಸಿದ (ಸಂಯೋಜಿತ) ಮುದ್ರೆ’, ಎಂಬ ಹೆಸರು ಕೊಟ್ಟೆ. ನಾನು ಈ ಮುದ್ರೆಯನ್ನು ಮಾಡಿ ‘ಮಹಾಶೂನ್ಯ’ ನಾಮಜಪವನ್ನು ಮಾಡಿದೆ. ಆಗ ೧೦ ನಿಮಿಷಗಳ ನಂತರ ಮೇಲಿನಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹ ನಿಂತಿತ್ತು. ಹಾಗೆಯೇ ಯಜಮಾನರ ಮೇಲೆ ಬಂದ ಆವರಣವೂ ಬಹಳ ಕಡಿಮೆಯಾಯಿತು.

ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆಯಿಂದಾದ ಪರಿಣಾಮ

ಒಂದು (ಬಲಗೈ) ಅಂಗೈಯನ್ನು ತಲೆಯ ಮೇಲೆ ೧ -೨ ಸೆಂ.ಮೀ. ಅಂತರದಲ್ಲಿ ಮುಂದೆ ನಮ್ಮ ದಿಶೆಗೆ ಬರುವಂತೆ ಇಟ್ಟುಕೊಳ್ಳಬೇಕು ಮತ್ತು ಅದರ ಮೇಲೆ ಇನ್ನೊಂದು (ಎಡಗೈ) ಅಂಗೈ ಮೊದಲಿನ ಅಂಗೈನ ವಿರುದ್ಧ ದಿಕ್ಕಿಗೆ, ಅಂದರೆ ಮೇಲಿನ ದಿಶೆಗೆ ಬರುವಂತೆ ಇಟ್ಟುಕೊಳ್ಳಬೇಕು
ಛಾಯಾಚಿತ್ರ 1

ಯಜ್ಞದ ಯಜಮಾನರಿಗಾಗಿ ಆ ಹೊಸ ಮುದ್ರೆಯಿಂದ ಉಪಾಯವನ್ನು ಮಾಡುತ್ತಿರುವಾಗ, ಆ ಮುದ್ರೆಯಲ್ಲಿನ ಮೇಲಿನ ದಿಕ್ಕಿಗೆ ಇರುವ ಅಂಗೈಯಿಂದಾಗಿ ಉಪಾಯವಾಗಿ ಕೆಟ್ಟ ಶಕ್ತಿಗಳು ಬಿಡುತ್ತಿರುವ ತೊಂದರೆದಾಯಕ ಶಕ್ತಿಯ ಪ್ರವಾಹವು ತಡೆಯಲ್ಪಟ್ಟಿತು ಮತ್ತು ಸ್ವಂತ ದಿಕ್ಕಿಗೆ ಇರುವ ಅಂಗೈಯಿಂದ ನನ್ನ ಮೇಲೆ, ಅಂದರೆ ನಾನು ಉಪಾಯ ಮಾಡುತ್ತಿರುವ ಯಜ್ಞಕ್ಕೆ ಕುಳಿತ ಯಜಮಾನರ ಮೇಲೆ ಉಪಾಯವಾಗಿ ಅವರ ಮೇಲಿನ ಆವರಣವು ಕಡಿಮೆಯಾಯಿತು ಎಂದು ನನ್ನ ಗಮನಕ್ಕೆ ಬಂತು. ಈ ರೀತಿ ಈ ವಿನೂತನ ‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಆವಿಷ್ಕಾರವಾಯಿತು.

ಎರಡೂ ಅಂಗೈಗಳ ಜೋಡಿಸಿದ ಮುದ್ರೆಯಿಂದ ಆವರಣವನ್ನು ತೆಗೆಯುವ ಆವಶ್ಯಕತೆ

ಹಿಂದೆ ಕೆಟ್ಟ ಶಕ್ತಿಗಳು ಶರೀರದ ಮೇಲೆ ಆವರಣವನ್ನು ತರುತ್ತಿದ್ದವು, ಆಗ ಆ ಆವರಣ ಯಾವುದಾದರೊಂದು ಚಕ್ರದ ಮೇಲೆ ಅಥವಾ ಹೆಚ್ಚೆಂದರೆ 2 ಚಕ್ರಗಳ ಮೇಲೆ ಇರುತ್ತಿತ್ತು. ಆಗ ‘ಮುಷ್ಠಿಯಿಂದ ಆವರಣ ತೆಗೆಯುವುದು’ (ಶರೀರದ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣ ಎರಡೂ ಕೈಗಳ ಮುಷ್ಠಿಯಲ್ಲಿ ಒಟ್ಟುಗೂಡಿಸುವುದು ಮತ್ತು ಅದನ್ನು ಶರೀರದಿಂದ ದೂರ ಎಸೆಯುವುದು (ಛಾಯಾಚಿತ್ರ 2 ಮತ್ತು ಛಾಯಾಚಿತ್ರ 2 ಅ ನೋಡಿ) ಈ ಪದ್ಧತಿ ಲಾಭದಾಯಕವಾಗುತ್ತಿತ್ತು.

ತೊಂದರೆದಾಯಕ ಶಕ್ತಿಯ ಆವರಣ ಎರಡೂ ಕೈಗಳ ಮುಷ್ಠಿಯಲ್ಲಿ ಒಟ್ಟುಗೂಡಿಸುವುದು
ಛಾಯಾಚಿತ್ರ 2

ಮುಷ್ಠಿಯಲ್ಲಿರುವ ತೊಂದರೆದಾಯಕ ಶಕ್ತಿಯನ್ನು ಶರೀರದಿಂದ ದೂರ ಎಸೆಯುವುದು
ಛಾಯಾಚಿತ್ರ 2 ಅ

ಅನಂತರ ಸೂಕ್ಷ್ಮದಲ್ಲಿನ ಯುದ್ಧದ ಸ್ತರ ಹೆಚ್ಚಾಯಿತು. ಆಗ ಕೆಟ್ಟ ಶಕ್ತಿಗಳು ಶರೀರದ ಮೇಲೆ ಒಂದೆರಡು ಚಕ್ರಗಳ ಮೇಲೆ ಆವರಣವನ್ನು ತರದೇ ತಲೆಯಿಂದ ಎದೆಯವರೆಗೆ ಅಥವಾ ತಲೆಯಿಂದ ಸೊಂಟದವರೆಗೆ ಆವರಣವನ್ನು ತಂದು ಅನುಕ್ರಮವಾಗಿ 4 ಚಕ್ರಗಳನ್ನು (ಸಹಸ್ರಾರದಿಂದ ಅನಾಹತಚಕ್ರ) ಅಥವಾ 6 ಚಕ್ರಗಳ ಮೇಲೆ (ಸಹಸ್ರಾರದಿಂದ ಸ್ವಾಧಿಷ್ಠಾನಚಕ್ರ) ಆವರಣ ಹಾಕತೊಡಗಿದವು. ಆ ಸಮಯದಲ್ಲಿ ಗೋಪುರ (ಟಾವರ್) ಮುದ್ರೆ ಶರೀರದ ಮೇಲಿಂದ ತಿರುಗಿಸುವುದು ಈ ಪದ್ಧತಿಯನ್ನೇ ಬಳಸಬೇಕಾಯಿತು.

ಈ ಮುದ್ರೆ ಎಂದರೆ ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಪರಸ್ಪರ ಜೋಡಿಸಿ ಮತ್ತು ಮಣಿಕಟ್ಟುಗಳನ್ನು ತಲೆಯ ಎರಡು ಬದಿಗಳಿಗೆ ಸಮಾಂತರವಾಗಿಟ್ಟು ತಾಗಿಸಿ ‘ಗೋಪುರ ಮುದ್ರೆ’ (ಛಾಯಾಚಿತ್ರ 3 ನೋಡಿ)ಯನ್ನು ಮಾಡುವುದು ಮತ್ತು ಈ ಮುದ್ರೆಯನ್ನು ಕುಂಡಲಿನಿ ಚಕ್ರಗಳಿಂದ (ಸಹಸ್ರಾರದಿಂದ ಸ್ವಾಧಿಷ್ಠಾನಚಕ್ರದ ವರೆಗೆ) ‘ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ’ ಹೀಗೆ 7-8 ಸಲ ತಿರುಗಿಸುವುದು.

ಗೋಪುರ ಮುದ್ರೆ - ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಪರಸ್ಪರ ಜೋಡಿಸಿ ಮತ್ತು ಮಣಿಕಟ್ಟು ಗಳನ್ನು ತಲೆಗೆ ಎರಡು ಬದಿಗಳಿಗೆ ತಾಗಿಸುವುದು
ಛಾಯಾಚಿತ್ರ 3

ಅನಂತರ ಸೂಕ್ಷ್ಮದಲ್ಲಿನ ಯುದ್ಧದ ಸ್ತರ ಮತ್ತಷ್ಟು ಹೆಚ್ಚಾಯಿತು. ಆಗ ಕೆಟ್ಟ ಶಕ್ತಿಗಳು ಕೇವಲ ಒಂದೇ ಸಲ ವ್ಯಕ್ತಿಯ ಮೇಲೆ ಆವರಣವನ್ನು ತಂದು ಶಾಂತವಾಗದೇ ಆ ವ್ಯಕ್ತಿಯ ಮೇಲೆ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಸತತವಾಗಿ ಬಿಡತೊಡಗಿದವು. ಆದುದರಿಂದ ಆಗ ‘ಮುಷ್ಠಿಗಳಿಂದ ಆವರಣ ತೆಗೆಯುವುದು’ ಅಥವಾ ‘ಗೋಪುರ ಮುದ್ರೆಯನ್ನು ಶರೀರದ ಮೇಲೆ ತಿರುಗಿಸಿ ಆವರಣ ತೆಗೆಯುವುದು’ ಈ ಎರಡೂ ಪದ್ಧತಿಗಳ ಉಪಯೋಗ ಆಗುತ್ತಿರಲಿಲ್ಲ; ಏಕೆಂದರೆ ತೊಂದರೆದಾಯಕ ಶಕ್ತಿಯ ಪ್ರವಾಹ ಸತತವಾಗಿ ಬರುತ್ತಿದ್ದುದರಿಂದ ಎಷ್ಟೇ ಆವರಣ ತೆಗೆದರೂ ಅದು ಮುಗಿಯುತ್ತಲೇ ಇರಲಿಲ್ಲ. ಇದಕ್ಕಾಗಿ ವ್ಯಕ್ತಿಯ ಕಡೆಗೆ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಮೊದಲು ತಡೆಯ ಬೇಕಾಗುತ್ತದೆ. ಇದನ್ನು ಮಾಡಲು ‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯು ಉಪಯುಕ್ತವಾಗುತ್ತದೆ.

ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆಯಿಂದ ಶರೀರದ ಮೇಲಿನ ಆವರಣವನ್ನು ತೆಗೆಯುವ ಪದ್ಧತಿ

ಮೊದಲು ‘ಪ್ರಾಣಶಕ್ತಿವಹನ ಉಪಾಯ ಪದ್ಧತಿ’ಯಿಂದ (ಶರೀರ ಮತ್ತು ಶರೀರದ ಚಕ್ರಗಳ ಮೇಲೆ ಕೈಬೆರಳುಗಳನ್ನು ತಿರುಗಿಸಿ ಬೆರಳುಗಳಿಂದ ಪ್ರಕ್ಷೇಪಿತವಾಗುವ ಪ್ರಾಣಶಕ್ತಿಯ ಮೂಲಕ ಆಧ್ಯಾತ್ಮಿಕ ತೊಂದರೆ ಅಥವಾ ರೋಗಕ್ಕೆ ಕಾರಣವಾಗಿರುವ ಶರೀರದ ಅಡಚಣೆಯ ಸ್ಥಾನವನ್ನು ಕಂಡು ಹಿಡಿಯಬೇಕು. ಅನಂತರ ಆ ಸ್ಥಾನದಲ್ಲಿ ಅಡಚಣೆಯ ತೀವ್ರತೆಗನುಸಾರ ಕೈ ಬೆರಳುಗಳ ಮುದ್ರೆ ಮತ್ತು ನಾಮಜಪವನ್ನು ಕಂಡುಹಿಡಿದು ಅವುಗಳ ಮೂಲಕ ಉಪಾಯವನ್ನು ಮಾಡುವುದು) ಯಾವ ಜಪವನ್ನು ಮಾಡಬೇಕು ಎಂದು ಕಂಡು ಹಿಡಿಯಬೇಕು. (ಇದರ ಸಂಕ್ಷಿಪ್ತ ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಸನಾತನದ ಗ್ರಂಥ ‘ರೋಗ ನಿವಾರಣೆಗಾಗಿ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಹೇಗೆ ಹುಡುಕಬೇಕು?’ ಓದಿ.) ಶರೀರದ ಆವರಣವನ್ನು ತೆಗೆಯುವಾಗ ಕಂಡು ಹಿಡಿದ ನಾಮಜಪವನ್ನು ಸತತ ಮಾಡಬೇಕು. ಶರೀರದ ಮೇಲಿನ ಆವರಣವನ್ನು ದೂರ ಮಾಡಲು ‘ಎರಡೂ ಅಂಗೈಗಳನ್ನು ಜೋಡಿ ಸಿದಮುದ್ರೆ’ಯನ್ನು ಮಾಡಬೇಕು ಮತ್ತು ಆ ಮುದ್ರೆಯನ್ನು ಕುಂಡಲಿನಿ ಚಕ್ರಗಳ ಮೇಲಿಂದ (ಸಹಸ್ರಾರದಿಂದ ಸ್ವಾಧಿಷ್ಠಾನಚಕ್ರದ ವರೆಗೆ) ‘ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ’ ಹೀಗೆ 7-8 ಸಲ ತಿರುಗಿಸಬೇಕು. ಪ್ರತಿಯೊಂದು ಚಕ್ರದ ಮೇಲೆ ಬಂದಾಗ ಅಲ್ಲಿ ಸಾಧಾರಣ ಅರ್ಧ ನಿಮಿಷ ನಿಲ್ಲಬೇಕು. ಮುದ್ರೆಯನ್ನು ಚಕ್ರಗಳ ಮೇಲೆ ತಿರುಗಿಸುವಾಗ ಕೈಗಳು ಶರೀರದಿಂದ 2 ರಿಂದ 3 ಸೆಂ.ಮೀ. ದೂರವಿರಬೇಕು.

ಈ ಪದ್ಧತಿಯಿಂದ ಆವರಣವನ್ನು ತೆಗೆದರೆ ಶರೀರದ ಮೇಲಿನ ಆವರಣದಿಂದ ಬಂದ ಜಡತ್ವ ಅಥವಾ ಒತ್ತಡ ಬಹಳಷ್ಟು ಕಡಿಮೆಯಾಗಿರುವುದು ಅರಿವಾಗುತ್ತದೆ. ಮುಂದೆ ಉಳಿದ ಆವರಣವನ್ನು ಮೇಲೆ ನೀಡಿದಂತು ‘ಮುಷ್ಠಿಗಳಿಂದ ಆವರಣವನ್ನು ತೆಗೆಯುವುದು’ ಈ ಪದ್ಧತಿಯಿಂದ ಅಥವಾ ಆವಶ್ಯಕವೆನಿಸಿದರೆ ‘ಗೋಪುರ ಮುದ್ರೆ’ಯನ್ನು ಬಳಸಿ ಸಂಪೂರ್ಣವಾಗಿ ದೂರ ಮಾಡಬಹುದು.

ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆಯ ಬಗ್ಗೆ ಗಮನಕ್ಕೆ ಬಂದ ಇನ್ನೂ ಕೆಲವು ಲಾಭಗಳು

ಅ. ಸೇವೆಯನ್ನು ಮಾಡುತ್ತಿರುವ ಕೋಣೆಯಲ್ಲಿ ಊರ್ಧ್ವ ದಿಕ್ಕಿನಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ತಡೆಯಲು ಸಾಧ್ಯವಾಗುವುದು, ಹಾಗೆಯೇ ಪಾತಾಳದಿಂದ ಅಂದರೆ ಭೂಮಿಯಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನೂ ತಡೆಯಲು ಸಾಧ್ಯವಾಗುವುದು

ಮೇಲಿನಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹ, ಹಾಗೆಯೇ ಪಾತಾಳದಿಂದ ಅಂದರೆ ಭೂಮಿಯಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನೂ ತಡೆಯಲು ನಮ್ಮ ಒಂದು ಕೈಯ ಅಂಗೈಯನ್ನು ಮೇಲಿನ ದಿಶೆಗೆ ಬರುವಂತೆ ಮತ್ತು ಇನ್ನೊಂದು ಕೈಯ ಅಂಗೈಯನ್ನು ಕೆಳಗೆ ಭೂಮಿಯ ದಿಶೆಗೆ ಬರುವಂತೆ
ಛಾಯಾಚಿತ್ರ 4

ನಾವು ಗಣಕಯಂತ್ರದಲ್ಲಿ ಸೇವೆಯನ್ನು ಮಾಡುತ್ತಿರುವಾಗ ಕೆಲವೊಮ್ಮೆ ‘ಗಣಕಯಂತ್ರವು ಮೇಲಿಂದ ಮೇಲೆ ಬಂದ ಬೀಳುತ್ತದೆ ಅಥವಾ ಮಾಡುತ್ತಿರುವ ಸೇವೆಯಲ್ಲಿ ಮೇಲಿಂದ ಮೇಲೆ ಅಡಚಣೆ (ಎರರ್) ಬರುತ್ತಿರುತ್ತದೆ. ಹಾಗೆಯೇ ಇನ್ನೂ ಬೇರೆ ಯಾವುದೋ ಸೇವೆಯನ್ನು ಮಾಡುತ್ತಿರುವಾಗಲೂ ಅದರಲ್ಲಿ ಮೇಲಿಂದ ಮೇಲೆ ಅಡಚಣೆಗಳು ಬರುತ್ತಿರುತ್ತವೆ. ಆಗ ಸೂಕ್ಷ್ಮದಿಂದ ನೋಡಿದರೆ, ಕೆಟ್ಟ ಶಕ್ತಿಗಳು ನಮ್ಮ ಸೇವೆಯ ಮಾಧ್ಯಮದ ಮೇಲೆ ಮೇಲಿನಿಂದ ತೊಂದರೆದಾಯಕ ಶಕ್ತಿಯನ್ನು ಬಿಡುತ್ತಿರುತ್ತವೆ’ ಎಂದು ಗಮನಕ್ಕೆ ಬರುತ್ತದೆ. ಆಗ ಆ ತೊಂದರೆದಾಯಕ ಶಕ್ತಿಯನ್ನು ತಡೆಯಲು, ‘ಎರಡೂ ಅಂಗೈಗಳ ಜೋಡಿಸಿದ ಮುದ್ರೆ’ಯ ಉಪಯೋಗವಾಗುತ್ತದೆ. ಆಗ ‘ನಮ್ಮ ಒಂದು ಕೈಯ ಅಂಗೈಯನ್ನು ಮೇಲಿನ ದಿಶೆಗೆ ಮತ್ತು ಇನ್ನೊಂದು ಕೈಯ ಅಂಗೈಯನ್ನು ಕೆಳಗೆ ಭೂಮಿಯ ದಿಶೆಯತ್ತ’, ಮುದ್ರೆಯನ್ನು ಮಾಡಿ ಅದನ್ನು ನಮ್ಮೆದುರು ಹಿಡಿಯಬೇಕು (ಛಾಯಾಚಿತ್ರ 4 ನೋಡಿ) (ಸಾಧ್ಯವಿದ್ದರೆ ನಾವು ಸೇವೆ ಮಾಡುತ್ತಿರುವ ಮಾಧ್ಯಮವಾಗಿರುವ, ಉದಾ. ಗಣಕಯಂತ್ರ ಅಥವಾ ಯಾವುದಾದರೊಂದು ಯಂತ್ರದ ಮೇಲೆಯೂ ಪ್ರತ್ಯಕ್ಷ ಉಪಾಯ ಮಾಡಬಹುದು. ಆಗ ‘ಎರಡೂ ಅಂಗೈಗಳ ಜೋಡಿಸಿದ ಮುದ್ರೆ’ಯನ್ನು ಗಣಕಯಂತ್ರ ಅಥವಾ ಆ ಯಂತ್ರದ ಮೇಲೆ ಹಿಡಿಯಬೇಕು. ಅದರಿಂದ ಗಣಕಯಂತ್ರ ಅಥವಾ ಯಂತ್ರದ ಮೇಲೆಯೂ ಉಪಾಯವಾಗುತ್ತದೆ, ಹಾಗೆಯೇ ಮೇಲಿಂದ ಬರುತ್ತಿರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನೂ ತಡೆಗಟ್ಟಬಹುದು.) ಕೆಟ್ಟ ಶಕ್ತಿಯನ್ನು ಹೋಗಲಾಡಿಸುವ ದಿಕ್ಕಿನಲ್ಲಿ ಅಂಗೈಯನ್ನು ಹಿಡಿಯಬೇಕು ಮತ್ತು ತೊಂದರೆಯ ಆವಶ್ಯಕತೆಗನುಸಾರ ‘ಶೂನ್ಯ, ಮಹಾಶೂನ್ಯ, ನಿರ್ಗುಣ ಅಥವಾ ಓಂ’ ಇವುಗಳ ಪೈಕಿ ಯಾವುದಾದರೊಂದು ನಾಮಜಪವನ್ನು ಮಾಡಬೇಕು. ನಮಗೆ ಕೋಣೆಯಲ್ಲಿ ಹಗುರ ಅನಿಸತೊಡಗಿದರೆ, ಈ ಉಪಾಯವನ್ನು ನಿಲ್ಲಿಸಬೇಕು.

ಹಾಗೆಯೇ ಕೆಲವೊಮ್ಮೆ ಕೆಟ್ಟ ಶಕ್ತಿಗಳು ಪಾತಾಳದಿಂದ ಅಂದರೆ ಭೂಮಿಯಿಂದ ತೊಂದರೆದಾಯಕ ಶಕ್ತಿಯನ್ನು ಬಿಡುತ್ತಿರುತ್ತವೆ. ಈ ತೊಂದರೆದಾಯಕ ಶಕ್ತಿಗಳನ್ನು ತಡೆಯಲೂ ಛಾಯಾಚಿತ್ರ 4 ರಲ್ಲಿ ತೋರಿಸಿದಂತೆ ಮಾಡಿದ ಮುದ್ರೆಯ ಉಪಯೋಗವನ್ನು ಮಾಡಿಕೊಳ್ಳಬಹುದು. ಆ ಸಮಯದಲ್ಲಿ ಭೂಮಿಯಿಂದ ಬರುವ ತೊಂದರೆದಾಯಕ ಶಕ್ತಿ ಭೂಮಿಯ ದಿಕ್ಕಿಗೆ ಇರುವ ಅಂಗೈ ಮತ್ತು ನಾಮಜಪ ಇವುಗಳ ಮೂಲಕ ತಡೆಯಲ್ಪಡುತ್ತವೆ.

ಆ. ನಮ್ಮ ಎದುರಿನಿಂದ ನಮ್ಮ ಮೇಲೆ ಬರುವ ತೊಂದರೆದಾಯಕ ಶಕ್ತಿಯನ್ನು ತಡೆಯಲು ಸಾಧ್ಯವಾಗುವುದು, ಹಾಗೆಯೇ ನಮ್ಮೆದುರು ಇರುವ ತೊಂದರೆದಾಯಕ ಶಕ್ತಿಯ ಆವರಣವನ್ನು ದೂರ ಮಾಡಲು ಸಾಧ್ಯವಿರುವುದು

ನಮ್ಮೆದುರು ಇರುವ ತೊಂದರೆದಾಯಕ ಶಕ್ತಿಯ ಆವರಣವನ್ನು ದೂರ ಮಾಡಲು ನಮ್ಮ ಒಂದು ಅಂಗೈ ನಮ್ಮ ಕಡೆಗೆ ಬರುವಂತೆ ಮತ್ತು ಎರಡನೇ ಅಂಗೈ ನಮ್ಮ ಎದುರಿನ ದಿಶೆಗೆ ಬರುವಂತೆ’ ಮುದ್ರೆಯನ್ನು ಮಾಡಬೇಕು
ಛಾಯಾಚಿತ್ರ 5

ಕೆಲವೊಮ್ಮೆ ಕೆಟ್ಟ ಶಕ್ತಿಗಳು ನಮ್ಮ ಎದುರಿನಿಂದ ನಮ್ಮ ಮೇಲೆ ತೊಂದರೆದಾಯಕ ಶಕ್ತಿಯನ್ನು ಬಿಡುತ್ತಿರುತ್ತವೆ. ಹಾಗೆಯೇ ಕೆಲವೊಮ್ಮೆ ಕೆಟ್ಟ ಶಕ್ತಿಗಳು ನಮ್ಮೆದುರು ತೊಂದರೆದಾಯಕ ಶಕ್ತಿಯ ಆವರಣವನ್ನು ಸೃಷ್ಟಿಸಿರುತ್ತವೆ. ಇಂತಹ ಎರಡೂ ಸಮಯದಲ್ಲಿ ‘ಎರಡೂ ಅಂಗೈಗಳ ಜೋಡಿಸುವ ಮುದ್ರೆ’ಯ ಉಪಯೋಗವಾಗುತ್ತದೆ. ಆಗ ‘ನಮ್ಮ ಒಂದು ಅಂಗೈ ನಮ್ಮತ್ತ ಬರುವಂತೆ ಮತ್ತು ಎರಡನೇ ಅಂಗೈ ನಮ್ಮ ಎದುರಿನ ದಿಶೆಗೆ ಬರುವಂತೆ’ ಮುದ್ರೆಯನ್ನು ಮಾಡಬೇಕು (ಛಾಯಾಚಿತ್ರ 5 ನೋಡಿ), ಹಾಗೆಯೇ ಆವಶ್ಯಕವಾದ ನಾಮಜಪವನ್ನು ಮಾಡಬೇಕು. ಆ ಸಮಯದಲ್ಲಿ ನಮ್ಮ ಶರೀರ ಹಗುರವೆನಿಸುವವರೆಗೆ ಈ ಉಪಾಯವನ್ನು ಮಾಡಬೇಕು.

ಗುರುಕೃಪೆಯಿಂದಲೇ ಶರೀರದ ಮೇಲಿನ ಆವರಣವನ್ನು ತೆಗೆಯುವ ಈ ಪದ್ಧತಿಯ ಆವಿಷ್ಕಾರವಾಯಿತು. ಇದಕ್ಕಾಗಿ ನಾವೆಲ್ಲ ಸಾಧಕರು ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೯.೭.೨೦೨೩)

Leave a Comment