ಕೊರೋನಾ ರೋಗಾಣು (ವೈರಸ್) – ಆಧ್ಯಾತ್ಮಿಕ ಬಲ ಹೆಚ್ಚಿಸಲು ಉಪಯುಕ್ತ ಮಾಹಿತಿ

ಸೂಚನೆ : ರಾಜ್ಯ ಮತ್ತು ಕೇಂದ್ರ ಸರಕಾರಗಳು, ತಜ್ಞ ವೈದ್ಯರು ಕೊರೋನಾ ರೋಗಾಣು ಸೋಂಕು ಹರಡುವುದನ್ನು ತಡೆಯಲು ನೀಡಿರುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಕೊರೋನಾ ರೋಗಾಣುಗಳ ವಿರುದ್ಧ ತಮ್ಮಲ್ಲಿ ನಿರೋಧಕ ಕ್ಷಮತೆಯು ನಿರ್ಮಾಣವಾಗಲು ವೈದ್ಯರ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆದು ಅವುಗಳನ್ನು ಪಾಲಿಸಿ. ಆಧ್ಯಾತ್ಮಿಕ ಉಪಾಯಗಳು ಯಾವುದೇ ವೈದ್ಯಕೀಯ ಉಪಚಾರಕ್ಕೆ ಪರ್ಯಾಯವಾಗಿರದೇ, ವೈದ್ಯಕೀಯ ಉಪಾಯಗಳನ್ನು ಮಾಡುವಾಗ ಅವುಗಳೊಂದಿಗೆ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಉಪಯುಕ್ತವಾಗಿವೆ. ಆಧ್ಯಾತ್ಮಿಕ ಬಲ ಹೆಚ್ಚಾಗಲೆಂದು ಈ ಜಪವನ್ನು ಮಾಡುವುದರ ಬಗ್ಗೆ ವಾಚಕರು ಸ್ವತಃ ನಿರ್ಧರಿಸಬೇಕು ಎಂದು ಸೂಚಿಸುತ್ತೇವೆ.

ವಿಶ್ವಾದ್ಯಂತ ಮರಣಮೃದಂಗ ಬಾರಿಸಿರುವ, ಕೊರೋನಾ ವೈರಾಣು ಭಾರತದಲ್ಲಿಯೂ ಕಾಲಿಟ್ಟಿದ್ದು ಅನೇಕ ರಾಜ್ಯಗಳಲ್ಲಿ ಕೊರೋನಾ ಸೋಂಕಿತ ರೋಗಿಗಳ ಪತ್ತೆಯಾಗಿವೆ, ಮತ್ತೆ ಕೆಲವರು ಅದರಿಂದ ಮೃತಪಟ್ಟಿದ್ದಾರೆ. ಕೊರೋನಾ ವೈರಾಣು ಸಾಂಕ್ರಾಮಿಕವಾಗಿ ಹರಡುವುದರಿಂದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಸಾರ ಮಾಧ್ಯಮಗಳು ಕೂಡ ನಾಗರಿಕರ ಈ ಭಯಕ್ಕೆ ಮತ್ತೊಂದಿಷ್ಟು ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿವೆ. ಈ ವೈರಾಣು ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆ, ರಾಜಕೀಯ, ವ್ಯಾಪಾರ, ಉದ್ಯೋಗ, ಶಿಕ್ಷಣಕ್ಷೇತ್ರ ಇತ್ಯಾದಿ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ‘ಜಾಗತಿಕ ಸಾಂಕ್ರಾಮಿಕ ರೋಗ’ ಎಂದು ಘೋಷಿಸಿದೆ. ಈ ಆಪತ್ಕಾಲದ ಹಿನ್ನೆಲೆಯಲ್ಲಿ ಕೊರೋನಾದ ಸಂಕಟದ ಮೂಲ ಕಾರಣ ಮತ್ತು ಅದರ ಮೂಲ ಉಪಾಯದ ಬಗ್ಗೆ ತಿಳುವಳಿಕೆ ಪಡೆಯುವುದು ಮಹತ್ವದ್ದಾಗಿದೆ.

ಈ ಲೇಖನದಲ್ಲಿ ಓದಿ…

1. ಆಪತ್ಕಾಲ ಎಂದರೇನು ?
2. ಕೆಟ್ಟ ಶಕ್ತಿಗಳು ಈ ಹೆಚ್ಚುತ್ತಿರುವ ರಜ-ತಮದ ಲಾಭ ಪಡೆಯುತ್ತವೆ
3. ಕೊರೋನಾ ವೈರಾಣು ಹರಡುವುದರ ಸೂಕ್ಷ್ಮದ ಕಾರಣ
4. ಕೊರೋನಾ ಸಾಂಕ್ರಾಮಿಕ ರೋಗವು ಕೊನೆಗೊಳ್ಳುವುದು ಯಾವಾಗ?
5. ಕೊರೋನಾ ಸಾಂಕ್ರಾಮಿಕ ರೋಗದಿಂದ ತಮ್ಮನ್ನು ಹೇಗೆ ರಕ್ಷಿಸುವುದು ?
6. ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆಧ್ಯಾತ್ಮಿಕ ಬಲ ಹೆಚ್ಚಾಗಲೆಂದು ಏನು ಮಾಡಬೇಕು ?

ಆಪತ್ಕಾಲ ಎಂದರೇನು ?

ಕಾಲವು ಅನಂತವಾಗಿರುವುದರಿಂದ ಅದನ್ನು ಯುಗಗಳಲ್ಲಿಯೇ ಎಣಿಸಬೇಕು. ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ನಾಲ್ಕು ಯುಗಗಳ ಒಂದು ಚಕ್ರವಿರುತ್ತದೆ. ಇಂತಹ ಚಕ್ರಗಳು ಅನಂತ ಕಾಲದಿಂದ ನಡೆಯುತ್ತಾ ಬಂದಿವೆ ಮತ್ತು ನಡೆಯುತ್ತಾ ಇರಲಿವೆ. ಕಾಲಾನುಸಾರ ಎಲ್ಲವೂ ಬದಲಾಗುತ್ತಿರುತ್ತದೆ. ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಕಾಲ ಇತ್ಯಾದಿ ಹೇಗೆ ಸಂಧಿಕಾಲವೋ, ಅದೇ ರೀತಿ ಈಗಿನ ಕಾಲವೂ ಕಲಿಯುಗಾಂತರ್ಗತ….(ಅನೇಕ ಚಕ್ರಗಳ)… ಕಲಿಯುಗದ ಕೊನೆಯಾಗಿ ಕಲಿಯುಗಾಂತರ್ಗತ…. ಕಲಿಯುಗದ ಸಂಧಿಕಾಲವಾಗಿದೆ. ಅದು ಕೂಡ ೨೦೨೪ ರಲ್ಲಿ ಕೊನೆಗೊಳ್ಳಲಿದ್ದು, ಕಲಿಯುಗಾಂತರ್ಗತ…. ಕಲಿಯುಗದ ಕೊನೆಯಾಗಿ ಕಲಿಯುಗಾಂತರ್ಗತ…. ಸತ್ಯಯುಗ ಪ್ರಾರಂಭವಾಗಲಿದೆ. ಅಲ್ಲಿಯ ವರೆಗಿನ ಸಮಯದಲ್ಲಿ ರಜ-ತಮದ ಪ್ರಭಾವವು ಹೆಚ್ಚಾಗುತ್ತಾ ಹೋಗುತ್ತದೆ. ಜನರು ಸಾಧನೆಯನ್ನು ಮಾಡದೇ ಇರುವುದರಿಂದ ಅವರ ಮೇಲೆ ಈ ರಜ-ತಮದ ಪ್ರಭಾವವು ಸುಲಭವಾಗಿ ಆಗುತ್ತದೆ. ಈ ಪ್ರಭಾವವು ಜನರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯದ ಮೇಲೆಯೂ ಆಗುತ್ತದೆ. ಹೆಚ್ಚುವ ಅನೈತಿಕ ಕೃತಿಗಳಿಂದ, ಜೀವನಶೈಲಿಯಿಂದ ವಾತಾವರಣದಲ್ಲಿ ಇನ್ನಷ್ಟು ರಜ-ತಮದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಸಮಷ್ಟಿ ಪ್ರಾರಬ್ಧವೂ ಹೆಚ್ಚಾಗುತ್ತದೆ. (ಪ್ರಾರಬ್ಧದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.) ಇದರಿಂದಾಗಿ ಮುಂಬರುವ ಕಾಲದಲ್ಲಿ ಘಟಿಸುವ ದೊಡ್ಡ ಘಟನೆಗಳು (ಭೂಕಂಪ, ನೆರೆ, ಬರಗಾಲ, ಸಾಂಕ್ರಾಮಿಕ ರೋಗ) ನಮ್ಮ ದೇಶದ ಸಮಷ್ಟಿ ಪ್ರಾರಬ್ಧದ ಮೇಲೆ ಅವಲಂಬಿಸಿರುತ್ತವೆ.

ಕೆಟ್ಟ ಶಕ್ತಿಗಳು ಈ ಹೆಚ್ಚುತ್ತಿರುವ ರಜ-ತಮದ ಲಾಭ ಪಡೆಯುತ್ತವೆ

ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ನಡುವೆ ಅನಾದಿಕಾಲದಿಂದ ಯುದ್ಧ ನಡೆಯುತ್ತಿದೆ. ಈ ಯುದ್ಧ ಏಕೆ ನಡೆಯುತ್ತಿದೆ? ಕೆಟ್ಟ ಶಕ್ತಿಗಳು (ಅಂದರೆ ಪಾತಾಳದ ಬಲಾಢ್ಯ ಅಸುರೀ ಶಕ್ತಿಗಳು) ಒಳ್ಳೆಯ ಶಕ್ತಿಗಳನ್ನು (ದೇವ-ದೇವತೆಗಳನ್ನು) ಸೋಲಿಸಿ ಸಪ್ತ ಪಾತಾಳ ಮಾತ್ರವಲ್ಲ ಸಪ್ತಲೋಕಗಳ ಮೇಲೆಯೂ ತಮ್ಮ ಅಧಿಪತ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ಯಾವಾಗ ರಜ-ತಮದ ಪ್ರಮಾ ಹೆಚ್ಚಾಗುತ್ತದೆಯೋ, ಆಗ ಅಲ್ಲಿನ ವಾತಾವರಣವು ಕೆಟ್ಟ ಶಕ್ತಿಗಳಿಗೆ ಅನುಕೂಲಕರವಾಗುತ್ತದೆ. ಆಗ ಕೆಟ್ಟ ಶಕ್ತಿಗಳು ಆ ರಜ-ತಮದ ಲಾಭವನ್ನು ಪಡೆದುಕೊಳ್ಳಲು ತಮ್ಮ ಕಾರ್ಯವನ್ನು ಹೆಚ್ಚಿಸುತ್ತವೆ. ಅದು ಸೂಕ್ಷ್ಮ ಸ್ತರದಲ್ಲಿದ್ದರೂ ಅದರ ಪರಿಣಾಮವು ಸ್ಥೂಲದಲ್ಲಿ ಕಾಣಿಸುತ್ತದೆ.

ಕೊರೋನಾ ವೈರಾಣು ಹರಡುವುದರ ಸೂಕ್ಷ್ಮದ ಕಾರಣ

ಸ್ಥೂಲದಲ್ಲಿ ಕೊರೋನಾ ವೈರಾಣು ಹರಡುವುದರ ಕಾರಣ ವಿಜ್ಞಾನವು ತಿಳಿಸಿದೆ. ಆದರೆ ಇದು ಜಾಗತಿಕ ಮಟ್ಟದ ಸಾಂಕ್ರಾಮಿಕ ರೋಗವಾಗುವುದರ ಹಿಂದೆ ಬಲಾಢ್ಯ ಅಸುರೀ ಶಕ್ತಿಗಳು (ಪಾತಾಳದ ಮಾಂತ್ರಿಕರು) ಕಾರಣರಾಗಿದ್ದಾರೆ. ಕೊರೋನಾ ವೈರಾಣುವಿನಲ್ಲಿ ಕಪ್ಪು ಶಕ್ತಿಯನ್ನು ತುಂಬಿಸಿ ಅದರ ಸಾಂಕ್ರಾಮಿಕತೆಯನ್ನು ಹೆಚ್ಚಿಸಿರುವ ಮಾಂತ್ರಿಕರು, ಚಿಕ್ಕ ಕೆಟ್ಟ ಶಕ್ತಿಗಳನ್ನು ಉಪಯೋಗಿಸಿ ರೋಗವನ್ನು ವೇಗವಾಗಿ ಹರಡುವಂತೆ ಮಾಡಿವೆ.

ಕೊರೋನಾ ಸಾಂಕ್ರಾಮಿಕ ರೋಗವು ಕೊನೆಗೊಳ್ಳುವುದು ಯಾವಾಗ?

ಯಾವುದರ ಸೃಷ್ಟಿ ಆಗಿದೆಯೋ, ಅದರ ಲಯವಾಗುತ್ತದೆ – ಇದು ಜಗದ ನಿಯಮ. ಅದರಂತೆಯೇ ಈ ಕೊರೋನಾ ಸಾಂಕ್ರಾಮಿಕ ರೋಗವೂ ಕೊನೆಗೊಳ್ಳಲಿದೆ. ಯಾವಾಗ ಈ ಕೊರೋನಾ ಸಾಂಕ್ರಾಮಿಕ ರೋಗ ನಿರ್ಮಿಸಿರುವ ಮತ್ತು ಹರಡುತ್ತಿರುವವ ಬಲಾಢ್ಯ ಅಸುರೀ ಶಕ್ತಿಗಳ ಶಕ್ತಿಯು ಕುಂದುತ್ತದೆಯೋ, ಆಗ ಈ ಕೊರೋನಾ ಸಾಂಕ್ರಾಮಿಕವೂ ಕೊನೆಗೊಳ್ಳಲಿದೆ.

ಆದರೆ ಅನೇಕ ದಾರ್ಶನಿಕ ಸಂತರು, ನಾಡಿಪಟ್ಟಿ (ತಾಳೆಗರಿ) ವಾಚಕರು ಮುಂಬರುವ ಕಾಲದಲ್ಲಿ ಅನೇಕ ನೈಸರ್ಗಿಕ, ಅಲ್ಲದೇ ಮಾನವನಿರ್ಮಿತ ವಿಪತ್ತುಗಳ ಪರ್ವತವೇ ಬಂದೆರಗಲಿದೆಯೆಂದು ಹೇಳಿದ್ದಾರೆ. ‘ಕೊರೋನಾದ ಸಾಂಕ್ರಾಮಿಕ’ವು ಈ ಆಪತ್ಕಾಲದ ಸ್ಥಿತಿಯ ಒಂದು ಸಣ್ಣ ತುಣುಕಾಗಿದೆ.

ಇವೆಲ್ಲವುಗಳನ್ನು ಗಮನದಲ್ಲಿಟ್ಟು ಆಪತ್ಕಾಲವನ್ನು ಎದುರಿಸಲು ಎಲ್ಲರೂ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಆಧ್ಯಾತ್ಮಿಕ ಮುಂತಾದ ಸ್ತರಗಳಲ್ಲಿ ಪೂರ್ವಸಿದ್ಧತೆ ಮಾಡುವುದು ಆವಶ್ಯಕವಿದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದ ತಮ್ಮನ್ನು ಹೇಗೆ ರಕ್ಷಿಸುವುದು ?

ಇಂದು ಅನೇಕ ತಜ್ಞರು, ರಾಷ್ಟೀಯ ಹಾಗು ಸ್ಥಳೀಯ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಕೊರೋನಾ ಸಾಂಕ್ರಾಮಿಕವನ್ನು ಹರಡುವುದರಿಂದ ತಡೆಯಲು ಅನೇಕ ಉಪಾಯಗಳನ್ನು ತಿಳಿಸಿವೆ. ಆದರೆ ಸಮಸ್ಯೆ ಯಾವುದೇ ಇರಲಿ ಅದಕ್ಕೆ ಸ್ಥೂಲ ಹಾಗೂ ಸೂಕ್ಷ್ಮ ಕಾರಣಗಳಿರುತ್ತದೆ. ಅಂದರೆ ಪ್ರತಿಯೊಂದು ಸಮಸ್ಯೆಗೂ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿರುತ್ತವೆ. ಹಾಗಾಗಿ ಸಮಸ್ಯೆಯನ್ನು ಬಗೆಹರಿಸಲು ಅದಕ್ಕೆ ಮೂರು ರೀತಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಸಮಸ್ಯೆಯ ಸ್ಥೂಲ ಭಾಗವನ್ನು ಎದುರಿಸಲು ಇಂದು ಜಗಿತ್ತಿನಾದ್ಯಂತ ಲಾಕ್ ಡೌನ್ (ದಿಗ್ಬಂಧ), ಸೋಶಿಯಲ್ ಡಿಸ್ಟೆಂಸಿಂಗ್ ಮುಂತಾದ ಉಪಾಯಗಳನ್ನು ಅಳವಡಿಸಲಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಮಸ್ಯೆಯನ್ನು ಎದುರಿಸಲು ಮಾನಸಿಕವಾಗಿ ಸಜ್ಜುಗೊಳ್ಳಲು ಜನರಲ್ಲಿರುವ ಕೆಲವು ಮೂಲಭೂತ ವಿಚಾರಗಳಲ್ಲಿ ಬದಲಾವಣೆಯನ್ನು ತರುವ ಅವಶ್ಯಕತೆ ಇದೆ. ಉದಾಹರಣೆಗೆ ಜನರ ಮನಸ್ಸಿನಲ್ಲಿ ಸ್ವಾಭಾವಿಕವಾಗಿ ಬರುವ ಚಿಂತೆಯ ವಿಚಾರಗಳನ್ನು ಸ್ವಯಂಸೂಚನೆಗಳ ಮೂಲಕ ದೂರಗೊಳಿಸುವುದು, ತಮ್ಮಲಿರುವ ನಿರ್ದಿಷ್ಟ ಸ್ವಭಾವದೋಷಗಳನ್ನು ಕಡಿಮೆ ಮಾಡಿ ಮನಸ್ಸನ್ನು ಈ ಆಪತ್ಕಾಲವನ್ನು ಎದುರಿಸಲು ಸಜ್ಜುಗೊಳಿಸುವುದು ಇತ್ಯಾದಿ.

(ವಾಚಕರಿಂದ ಕೊರೋನಾ ಗೆ ಸಂಬಂಧಿಸಿದ ಬಂದಂತಹ ಕೆಲವು ವಿಚಾರಗಳಿಗೆ ಸ್ವಯಂಸೂಚನೆಗಳನ್ನು ಇಲ್ಲಿ ನೀಡಿದ್ದೇವೆ)
(ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಯನ್ನು ಹೇಗೆ ಮಾಡಬೇಕು ಎಂದು ವಿವರವಾಗಿ ಈ ಪುಟದಲ್ಲಿ ನೀಡಿದ್ದೇವೆ)

ಆದರೆ ಮೇಲೆ ನೋಡಿದಂತೆ ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಅದಕ್ಕೆ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಯೋಜನೆಯನ್ನು ಮಾಡದೇ ಪರ್ಯಾಯವಿಲ್ಲ. ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದರಿಂದ ವ್ಯಷ್ಟಿ ಮತ್ತು ಸಮಷ್ಟಿ ಪ್ರಾರಬ್ಧದಿಂದ ನಮಗೆ ರಕ್ಷಣೆ ಸಿಗುತ್ತದೆ, ಮತ್ತು ಅದರ ಪರಿಣಾಮವಾಗಿ ಈ ವೈರಾಣುದಂತಹ ಸೋಂಕುಗಳನ್ನು ಹರಡುವ ಕೆಟ್ಟ ಶಕ್ತಿಗಳ ಶಕ್ತಿಯು ಕುಂದುತ್ತದೆ.

ಹಾಗಾದರೆ ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆಧ್ಯಾತ್ಮಿಕ ಬಲ ಹೆಚ್ಚಾಗಲೆಂದು ಏನು ಮಾಡಬೇಕು ?

ಕೊರೋನಾ ರೋಗಾಣುವಿನ ಹಾವಾಳಿ ಹರಡುತ್ತಿರುವುದರಿಂದ ರಾಷ್ಟ್ರದ ಮೇಲೆ ಬಂದಿರುವ ಸಂಕಟದ ಬಗ್ಗೆ ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಬಲವು ಹೆಚ್ಚಾಗಲು ಮುಂದಿನ ನಾಮಜಪ ಇಲ್ಲಿ ನೀಡಿರುವ ಕ್ರಮದಲ್ಲೇ ಜಪಿಸಬೇಕು.

ಶ್ರೀ ದುರ್ಗಾದೇವ್ಯೈ ನಮಃ |
ಶ್ರೀ ದುರ್ಗಾದೇವ್ಯೈ ನಮಃ |
ಶ್ರೀ ದುರ್ಗಾದೇವ್ಯೈ ನಮಃ |
ಶ್ರೀ ಗುರುದೇವ ದತ್ತ |
ಶ್ರೀ ದುರ್ಗಾದೇವ್ಯೈ ನಮಃ |
ಶ್ರೀ ದುರ್ಗಾದೇವ್ಯೈ ನಮಃ |
ಶ್ರೀ ದುರ್ಗಾದೇವ್ಯೈ ನಮಃ |
ಓಂ ನಮಃ ಶಿವಾಯ |

ಇಲ್ಲಿ ನೀಡಿರುವ 8 ಜಪಗಳು ಸೇರಿ ಒಂದು ನಾಮಜಪವಾಗುತ್ತವೆ.

ಈ ನಾಮಜಪವನ್ನು ಕೇಳಲು ಕೆಳಗೆ ಕ್ಲಿಕ್ ಮಾಡಿ…

ಈ ನಾಮಜಪವನ್ನು ಎಷ್ಟು ಸಲ ಮಾಡಬೇಕು?

ಯಾರಿಗೆ ಕೊರೋನಾ ಸೋಂಕು ತಗುಲಲಿಲ್ಲ ಅಥವಾ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ : ಈ ನಾಮಜಪವನ್ನು ಪ್ರತಿದಿನ 1 ಮಾಲೆ (108 ಸಲ) ಮಾಡಬೇಕು. ಈ ರೀತಿ ಜಪ ಮಾಡಲು ಸಾಧಾರಣ 40 ನಿಮಿಷಗಳು ತಗಲುತ್ತವೆ.

ಯಾರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಅಥವಾ ರೋಗ ತಗುಲಿದೆ : ಅಂತಹವರು ಆಧ್ಯಾತ್ಮಿಕ ಬಲ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಲು ಈ ನಾಮಜಪವನ್ನು ಪ್ರತಿದಿನ 6 ಮಾಲೆ (648 ಸಲ) ಮಾಡಬೇಕು. ಇಷ್ಟು ಜಪಿಸಲು ಸಾಧಾರಣ 7 ಗಂಟೆಗಳ ಸಮಯ ತಗಲುತ್ತದೆ.

ಈ ನಾಮ ಜಪಿಸಿದರೆ ಮಾತ್ರ ಸಾಕೇ ?

೧. ಕೊರೋನಾ ಸಾಂಕ್ರಾಮಿಕ ರೋಗವು ಹರಡಲು ಶೇ.೮೦ ರಷ್ಟು ಆಧ್ಯಾತ್ಮಿಕ ಕಾರಣಗಳಿದ್ದು, ಉಳಿದ ಶೇ.೨೦ ರಷ್ಟು ಭೌತಿಕ ಕಾರಣಗಳಿವೆ. ಈ ನಾಮಜಪವು ವೈರಾಣುವಿನಲ್ಲಿರುವ ರಜ-ತಮಯುಕ್ತ ಕಪ್ಪು ಶಕ್ತಿಯನ್ನು ಕಡಿಮೆ ಮಾಡಿ ಆ ಶೇ.೮೦ ರಷ್ಟು ಆಧ್ಯಾತ್ಮಿಕ ಕಾರಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

೨. ಈ ಜಪದಿಂದ ಸಮಷ್ಟಿ ಪ್ರಾರಬ್ಧವು ಕಡಿಮೆಯಾಗುವುದಿಲ್ಲ ಎಂದು ಗಮದಲ್ಲಿ ಇಟ್ಟುಕೊಳ್ಳಿ. (ವೈರಾಣು ಎಷ್ಟು ಹರಡುತ್ತದೆ ಎಂಬುವುದು ಆ ಸ್ಥಳದ ಸಮಷ್ಟಿ ಪ್ರಾರಬ್ಧದ ಮೇಲೆ ಅವಲಂಬಿಸಿರುತ್ತದೆ)

೩. ಯಾರೊಬ್ಬರ ಜೀವನದಲ್ಲಿ ಮೃತ್ಯುಯೋಗವಿದ್ದರೆ ಅದನ್ನು ತಡೆಯಲು ಸಾಧ್ಯವಿಲ್ಲ ಎಂಬುವುದನ್ನು ಕೂಡ ಇಲ್ಲಿ ಗಮನದಲ್ಲಿ ಇಟ್ಟುಕೊಳ್ಳುವಂತಹ ವಿಷಯ. ಆದರೆ ಅಪಮೃತ್ಯು ಯೋಗವಿದ್ದರೆ, ದೇವರ ಕಠೋರ ಉಪಾಸನೆಯಿಂದ ಅದನ್ನು ಜಯಿಸಬಹುದಾಗಿದೆ.

೪. ಈ ಜಪವನ್ನು ಮಾಡುವುದರಿಂದ ನಮ್ಮ ಕುಂಡಲಿನಿ ಚಕ್ರಗಳ ಶುದ್ಧಿಯಾಗುತ್ತದೆ.
ಶ್ರೀ ದುರ್ಗಾದೇವ್ಯೈ ನಮಃ | – ವಿಶುದ್ಧ ಚಕ್ರದ ಮೇಲೆ ಪರಿಣಾಮ ಬೀರುತ್ತದೆ
ಶ್ರೀ ಗುರುದೇವ ದತ್ತ | – ಆಜ್ಞಾ ಚಕ್ರದ ಮೇಲೆ ಪರಿಣಾಮ ಬೀರುತ್ತದೆ
ಓಂ ನಮಃ ಶಿವಾಯ | – ಮಣಿಪುರ ಚಕ್ರದ ಮೇಲೆ ಪರಿಣಾಮ ಬೀರುತ್ತದೆ

ಇದರಿಂದಾಗಿ ಆಧ್ಯಾತ್ಮಿಕ ಬಲವು ಹೆಚ್ಚಾಗುತ್ತದೆ. ಬನ್ನಿ, ಭಾವಪೂರ್ಣವಾಗಿ ಈ ನಾಮಜಪವನ್ನು ಮಾಡೋಣ ಮತ್ತು ಆತ್ಮಬಲವನ್ನು ಹೆಚ್ಚಿಸೋಣ.

ಸೂಚನೆಗಳು :
೧. ಈ ಜಪವನ್ನು ಕೇವಲ ಕೇಳುವುದರಿಂದ ಸ್ವಲ್ಪ ಮಟ್ಟಕ್ಕೆ ನಮ್ಮ ಸುತ್ತಮುತ್ತಲಿನ ವಾತಾವರಣದ ಶುದ್ಧಿಯಾಗುತ್ತದೆ
೨. ಈ ಜಪವನ್ನು ಶ್ರದ್ಧೆಯಿಂದ ಕೇಳಿದರೆ ವಾತಾವರಣದೊಂದಿಗೆ ಚಕ್ರಗಳ ಶುದ್ಧಿಯೂ ಆಗುತ್ತದೆ.
೩. ಭಾವಪೂರ್ಣವಾಗಿ ನಾಮ ಜಪಿಸುವುದರಿಂದ ವಾತಾವರಣದೊಂದಿಗೆ ಜಪ ಮಾಡುವ ವ್ಯಕ್ತಿಗೂ ಅತ್ಯಧಿಕ ಲಾಭವಾಗುತ್ತದೆ.

4 thoughts on “ಕೊರೋನಾ ರೋಗಾಣು (ವೈರಸ್) – ಆಧ್ಯಾತ್ಮಿಕ ಬಲ ಹೆಚ್ಚಿಸಲು ಉಪಯುಕ್ತ ಮಾಹಿತಿ”

  1. ಕೊರೋನ ಪ್ರತಿಬಂಧಕ ನಾಮಜಪ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು, ಇದರಿಂದ ಸುಮಾರು ಜನಕ್ಕೆ ಉಪಯೋಗವಾಗಿದೆ

    Reply

Leave a Comment