ರಾಮಕವಚ ಧಾರಣೆ ಮಾಡುವುದು

೧. ರಾಮಕವಚ ಧಾರಣೆ ಮಾಡುವುದು

ಅ. ರಾಮಕವಚ ಧಾರಣೆ ಮಾಡುವ ಮೊದಲು ಮುಂದಿನಂತೆ ಪ್ರಾರ್ಥಿಸಬೇಕು, ‘ಹೇ ಶ್ರೀರಾಮ, ನಿನ್ನ ಕವಚವನ್ನು ನಾನು (ತನ್ನ ಜನ್ಮನಾಮವನ್ನು ಹೇಳಬೇಕು, ಅದು ನೆನಪಿಲ್ಲದಿದ್ದರೆ, ವ್ಯಾವಹಾರಿಕ ಹೆಸರನ್ನು ಹೇಳಬೇಕು) ಧಾರಣೆ ಮಾಡಲಿದ್ದೇನೆ. ಈ ಕವಚದಿಂದ ಕೆಟ್ಟ ಶಕ್ತಿಗಳ ತೊಂದರೆಯಿಂದ ನನ್ನ ರಕ್ಷಣೆಯಾಗಲಿ. ನನ್ನ ಸಾಧನೆಯು ಒಳ್ಳೆಯದಾಗಲಿ ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ.’

ಆ. ಶುಚಿರ್ಭೂತರಾಗಿ ಮುಂದಿನಂತೆ ರಾಮಕವಚವನ್ನು ಧಾರಣೆ ಮಾಡಬೇಕು. ರಾಮಕವಚವನ್ನು ಹೇಳುವ ಸಾಧಕನ ಆಚರಣೆಯು ಶುದ್ಧವಾಗಿರಬೇಕು. ತನ್ನ ಕುಲದೇವತೆಯನ್ನು ಸ್ಮರಣೆ ಮಾಡಿ ಕೈಜೋಡಿಸಿ ರಾಮಕವಚದಲ್ಲಿನ ಈ ಮುಂದಿನ ಮಂತ್ರವನ್ನು ಹೇಳಬೇಕು. ಆಗ ಒಂದು ಊದುಬತ್ತಿ ಹಚ್ಚಬೇಕು. ಒಂದು ಕೆಂಪು ಬಣ್ಣದ ರೇಷ್ಮೆ ದಾರವನ್ನು ತೆಗೆದುಕೊಂಡು ಅದಕ್ಕೆ ವಿಭೂತಿ ಹಚ್ಚಬೇಕು. ಮಂತ್ರ ಹೇಳುವಾಗ ‘ಪಾತು’ ಈ ಶಬ್ದ ಬರುವಾಗ ದಾರಕ್ಕೆ ಗಂಟು ಹಾಕಬೇಕು. ದಾರಕ್ಕೆ ಹೀಗೆ ೧೧ ಗಂಟು ಹಾಕಬೇಕು.

ರಾಮಕವಚ ಮಂತ್ರ

ಶಿರೋ ಮೇ ರಾಘವಃ ಪಾತು, ಭಾಲನ್ ದಶರಥಾತ್ಮಜಃ || ೪ || (ತಲೆ ಮತ್ತು ಹಣೆ)
ಕೌಸಲ್ಯೇಯೋ ದೃಶೌ ಪಾತು, ವಿಶ್ವಾಮಿತ್ರಪ್ರಿಯಃ ಶ್ರುತೀ | (ಕಣ್ಣು ಮತ್ತು ಕಿವಿ)
ಘ್ರಾಣಮ್ ಪಾತು ಮಖತ್ರಾತಾ, ಮುಖಂ ಸೌಮಿತ್ರಿವತ್ಸಲಃ || ೫ || (ಮೂಗು ಮತ್ತು ಮುಖ)
ಜಿಹ್ವಾಂ ವಿದ್ಯಾನಿಧಿಃ ಪಾತು, ಕಂಠಮ್ ಭರತವಂದಿತಃ | (ನಾಲಿಗೆ ಮತ್ತು ಕಂಠ)
ಸ್ಕಂಧೌ ದಿವ್ಯಾಯುಧ ಪಾತು, ಭುಜೌ ಭಗ್ನೇಶಕಾರ್ಮುಕಃ || ೬ || (ಭುಜ ಮತ್ತು ಬಾಹು)
ಕರೌ ಸೀತಾಪತಿಃ ಪಾತು, ಹೃದಯಂ ಜಾಮದಗ್ನ್ಯಜಿತ್ | (ಎರಡೂ ಕೈ ಮತ್ತು ಹೃದಯ)
ಮಧ್ಯಮ್ ಪಾತು ಖರಧ್ವಂಸೀ, ನಾಭಿಂ ಜಾಂಬವದಾಶ್ರಯಃ || ೭ || (ಹೃದಯ ಮತ್ತು ನಾಭಿಯ ಮಧ್ಯದ ಭಾಗ ಮತ್ತು ಹೊಕ್ಕಳು)
ಸುಗ್ರೀವೇಶಃ ಕಟೀ ಪಾತು, ಸಕ್ಥಿನೀ ಹನುಮತ್ಪ್ರಭುಃ | (ಸೊಂಟ ಮತ್ತು ಮೇಲ್ತೊಡೆ)
ಊರೂ ರಘೂತ್ತಮಃ ಪಾತು, ರಕ್ಷಃಕುಲವಿನಾಶಕೃತ್ || ೮ || (ಕೆಳತೊಡೆಗಳು)
ಜಾನುನೀ ಸೇತುಕೃತ್ ಪಾತು, ಜಂಘೇ ದಶಮುಖಾಂತಕಃ | (ಮೊಣಕಾಲು ಮತ್ತು ಮೀನಖಂಡ)
ಪಾದೌ ವಿಭೀಷಣಶ್ರೀದಃ, ಪಾತು ರಾಮೋಖಿಲಂ ವಪುಃ || ೯ || (ಕಾಲು)
ಏತಾಮ್ ರಾಮಬಲೋಪೇತಾಮ್, ರಕ್ಷಾಂ ಯಃ ಸುಕೃತೀ ಪಠೇತ್ |
ಸ ಚಿರಾಯುಃ ಸುಖೀ ಪುತ್ರೀ, ವಿಜಯೀ ವಿನಯೀ ಭವೇತ್ || ೧೦ ||
- ಶ್ರೀರಾಮರಕ್ಷಾಸ್ತೋತ್ರ

ಇ. ಒಂದು ತಟ್ಟೆಯಲ್ಲಿ ವಿಭೂತಿ ತೆಗೆದುಕೊಳ್ಳಬೇಕು, ಆ ವಿಭೂತಿಯಲ್ಲಿ ಗಂಟು ಹಾಕಿದ ದಾರವನ್ನು ತಿರುಗಿಸುತ್ತಾ ಈ ಮೇಲಿನ ಮಂತ್ರವನ್ನು ಪುನಃ ಹೇಳಬೇಕು. ದಾರಕ್ಕೆ ವಿಭೂತಿ ಹಚ್ಚಬೇಕು. ನಂತರ ಈ ದಾರವನ್ನು ಕೊರಳಿನಲ್ಲಿ ಧರಿಸಬೇಕು. ಪ್ರತಿದಿನ ಬೆಳಗ್ಗೆ ದಾರಕ್ಕೆ ಊದುಬತ್ತಿ ತೋರಿಸಿ ಅದನ್ನು ಶುದ್ಧೀಕರಣ ಮಾಡಬೇಕು. ಪ್ರತಿದಿನ ಶುಚಿರ್ಭೂತರಾಗಿ ಈ ಕವಚವನ್ನು ಒಮ್ಮೆ ಹೇಳಬೇಕು. ಕವಚ ಹೇಳುವಾಗ ಶರೀರದ ಆಯಾಯ ಅವಯವಗಳಿಗೆ ಬಲ ಕೈಯ ೫ ಬೆರಳುಗಳಿಂದ ಸ್ಪರ್ಶ ಮಾಡಬೇಕು, ಉದಾ. ಪ್ರಾರಂಭದಲ್ಲಿ ಎಲ್ಲಿ ‘ಶಿರೋ’ ಹೇಳಿದೆಯೊ, ಅಲ್ಲಿ ತಲೆಗೆ ೫ ಬೆರಳುಗಳನ್ನು ತಾಗಿಸಬೇಕು. (ಶ್ಲೋಕದ ಸಾಲಿನಲ್ಲಿ ಮುಂದೆ ಕಂಸದಲ್ಲಿ ಸ್ಪರ್ಶ ಮಾಡುವ ಅವಯವಗಳ ಹೆಸರನ್ನು ನೀಡಲಾಗಿದೆ.)

೨. ಪ್ರಾರ್ಥನೆ ಮತ್ತು ಶ್ಲೋಕ ಹೇಳುವುದು

೨ ಅ. ಪ್ರಾರ್ಥನೆ : ಹೇ ಶ್ರೀಕೃಷ್ಣಾ, (ಇದು ಬೇರೆ ಉಪಾಯ ಆಗಿರುವುದರಿಂದ ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಬೇಕು.)

ಹೇ ಆತ್ಮಶಕ್ತಿ, ಹೇ ಚೈತನ್ಯಶಕ್ತಿ, ಹೇ ‘ಓಂ’ಕಾರ, ಸದ್ಯ ನಡೆಯುತ್ತಿರುವ ಆಪತ್ಕಾಲದಲ್ಲಿ ನಮ್ಮೆಲ್ಲ ಸಾಧಕರನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸಿರಿ. ‘ಈ ಧರ್ಮಕಾರ್ಯವನ್ನು ನಾನು ಮಾಡುತ್ತಿಲ್ಲ, ನನ್ನಲ್ಲಿರುವ ಚೈತನ್ಯಶಕ್ತಿಯೇ ಮಾಡುತ್ತಿದೆ’ ಎಂಬುದು ನನಗೆ ನಿರಂತರವಾಗಿ ಗಮನದಲ್ಲಿರಲಿ ಹಾಗೂ ಅದರ ಅನುಸಂಧಾನದಲ್ಲಿದ್ದು ನನ್ನಿಂದ ಕಾರ್ಯವಾಗಲಿ, ಅದರಿಂದ ನಾನು ಪ್ರತಿಯೊಂದು ಕಾರ್ಯ ಮಾಡುವಾಗ ‘ಆ ಶಕ್ತಿಯೇ ಕಾರ್ಯ ಮಾಡುತ್ತಿದೆ’ ಎಂಬುದು ನಿರಂತರ ನನ್ನ ಗಮನದಲ್ಲಿರುವುದು.

೨ ಆ. ಶ್ಲೋಕ : ಪ್ರಾರ್ಥನೆ ಆದ ಮೇಲೆ ಮುಂದಿನ ಶ್ಲೋಕವನ್ನು ೫ ಸಲ ಹೇಳಬೇಕು, ‘ಓಂ ನಮೋ ಜೀ ಆದ್ಯಾ | ವೇದ ಪ್ರತಿಪಾದ್ಯಾ |
ಜಯ ಜಯ ಸ್ವಸಂವೇದ್ಯಾ | ಆತ್ಮರೂಪಾ ||’
ಮೇಲಿನ ಪ್ರಾರ್ಥನೆ ಮಾಡುವಾಗ ಹಾಗೂ ಶ್ಲೋಕ ಹೇಳುವಾಗ ‘ಎಲ್ಲೆಡೆ ಚೈತನ್ಯವಿದೆ’ ‘ನಾನು ಕೂಡ ಚೈತನ್ಯವೇ ಆಗಿದ್ದೇನೆ’ ‘ನನ್ನ ಎದುರಿನಲ್ಲಿಯೂ ಚೈತನ್ಯವಿದೆ’ ‘ಚೈತನ್ಯದ ಹೊರತು ಬೇರೆ ಏನೂ ಇಲ್ಲ.’ ‘ಅಖಿಲ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಚೈತನ್ಯವೇ ನನ್ನ ದೇಹದಲ್ಲಿ ಕಾರ್ಯನಿರತವಾಗುತ್ತಿದೆ’ ‘ನನ್ನ ದೇಹವೂ ಆ ಬ್ರಹ್ಮಾಂಡದಲ್ಲಿನ ಚೈತನ್ಯದಲ್ಲಿ ಸಮಾವೇಶವಾಗಿದೆ.’ ಎಂಬ ಭಾವವನ್ನಿಡಬೇಕು.

೨ ಇ. ತಲೆಯಿಂದ ಕಾಲಿನ ಪಾದಗಳವರೆಗಿನ ಎಲ್ಲ ಅವಯವಗಳನ್ನು, ನವದ್ವಾರಗಳನ್ನು ಮತ್ತು ಷಟ್ಚಕ್ರಗಳನ್ನು ಎರಡೂ ಕೈಗಳಿಂದ ಸ್ಪರ್ಶ ಮಾಡುವುದು : ಮೇಲಿನ ಪ್ರಾರ್ಥನೆ ಮತ್ತು ಶ್ಲೋಕ ಹೇಳಿದ ಮೇಲೆ ತಮ್ಮ ಎರಡೂ ಕೈಗಳಿಂದ ತಲೆಯಿಂದ ಕಾಲಿನ ಪಾದಗಳವರೆಗಿನ ಅವಯವಗಳನ್ನು (ತಲೆ, ಹಣೆ, ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ, ಗಲ್ಲ, ಗದ್ದ, ಕಂಠ, ಭುಜಗಳು, ತೋಳುಗಳು, ಕೈಗಳು, ಹೃದಯ, ನಾಭಿ, ಸೊಂಟ, ತೊಡೆಗಳು ಮೊಣಕಾಲು, ಕಾಲುಗಳು, ಪಾದಗಳು) ಸ್ಪರ್ಶ ಮಾಡುತ್ತಾ ಆಯಾಯ ಅವಯವಗಳ ಮೇಲೆ ಕೈತಿರುಗಿಸಬೇಕು ಹಾಗೂ ನವದ್ವಾರಗಳು ಮತ್ತು ಷಟ್ಚಕ್ರಗಳನ್ನು ಕೂಡ ಸ್ಪರ್ಶ ಮಾಡಬೇಕು, ಅದರಿಂದ ಅವುಗಳು ಚೈತನ್ಯಭರಿತವಾಗುವವು.

– (ಪರಾತ್ಪರ ಗುರು) ಪಾಂಡೆ ಮಹಾರಾಜ, ಸನಾತನ ಆಶ್ರಮ, ದೇವದ್, ಪನವೇಲ್ (೨.೬.೨೦೧೮)

Leave a Comment