ಪ್ರತಿದಿನ ದುರ್ಗಾ ಸಪ್ತಶತಿ ಸ್ತೋತ್ರದ ದೇವೀ ಕವಚವನ್ನು ಪಠಿಸಿರಿ !

‘ಆಪತ್ಕಾಲದಲ್ಲಿ ಎಲ್ಲ ಅವಯವಗಳ ರಕ್ಷಣೆಯಾಗುವ ಸಲುವಾಗಿ ಪ್ರತಿದಿನ ಬೆಳಗ್ಗೆ ದೇವಿಕವಚವನ್ನು ಪಠಿಸಬೇಕು !’, ಎಂದು ಮಹಾನ ದತ್ತಯೋಗಿ ಪ.ಪೂ. ಸದಾನಂದಸ್ವಾಮಿಗಳು ಪ.ಪೂ. ಆಬಾ ಉಪಾಧ್ಯೆ ಇವರ ಮಾಧ್ಯಮದಿಂದ ಸಾಧಕರಿಗೆ ಹೇಳುವುದು

ಪುಣೆಯ ಮಹಾನ್ ಸಂತರಾದ ಪ.ಪೂ. ಆಬಾ ಉಪಾಧ್ಯೆ ಇವರ ಮಾಧ್ಯಮದಿಂದ ಮೂರುವರೆ ಸಾವಿರ ವರ್ಷಗಳ ಹಿಂದಿನ ಮಹಾಯೋಗಿ ಶ್ರೀ ಸದ್ಗುರು ಸದಾನಂದಸ್ವಾಮಿಗಳು ಮಾತನಾಡುತ್ತಾರೆ ಹಾಗೂ ಅವರು ಈ ಗುರುವಾಣಿಯ ಮುಖಾಂತರ ಭಕ್ತರಿಗೆ ಆಯಾ ಸಮಯದಲ್ಲಿ ಸಂದೇಶವನ್ನು ನೀಡುತ್ತಿರುತ್ತಾರೆ. ಇತ್ತೀಚೆಗೆ ಅವರ ಗುರುವಾಣಿಯನ್ನು ಕೇಳುವ ಸದ್ಭಾಗ್ಯ ನಮಗೆ ಪ್ರಾಪ್ತವಾಯಿತು. ಅವರಿಗೆ ಸಾಧಕರ ಆರೋಗ್ಯದ ವಿಷಯವಾಗಿ ಪ್ರಶ್ನೆಯನ್ನು ಕೇಳಿದಾಗ, ಅವರು ಈಗ ಪೃಥ್ವಿಯ ಮೇಲೆ ಅನಾಚಾರ ವೃದ್ಧಿಸುತ್ತಲೇ ಹೋಗುವುದು. ಇದರೊಂದಿಗೆ ನಮಗೆ ಅಸುರಿ ಶಕ್ತಿಯ ಅಕ್ರಮಣವನ್ನು ಕೂಡ ಎದುರಿಸಬೇಕಾಗುವುದು.

ಆಪತ್ಕಾಲದಲ್ಲಿ ದೇಹದ ರಕ್ಷಣೆಯಾಗುವ ಸಲುವಾಗಿ, ಹಾಗೆಯೇ ಅನೇಕ ವ್ಯಾಧಿಗಳಿಂದ (ಉದಾ : ಎಲುಬು ನೋವು, ಸ್ನಾಯು ನೋವು, ಅನೇಕ ತೀವ್ರ ರೋಗಗಳು, ರಕ್ತವ್ಯಾಧಿ) ಮುಕ್ತರಾಗಲು ಸಾಧಕರು ಪ್ರತಿದಿನ ದುರ್ಗಾಸಪ್ತಶತಿಯ ಚಂಡಿಕವಚ (ದೇವಿಕವಚ)ವನ್ನು ಪಠಿಸುವುದು ಅವಶ್ಯಕವಿದೆ. ಇದರಿಂದ ದೇಹದ ಸುತ್ತಲೂ ಅಭೇದ್ಯವಾದ ಶಕ್ತಿ ಕವಚ ನಿರ್ಮಾಣವಾಗಲು ಸಹಾಯಕವಾಗುವುದು.

(ದುರ್ಗಾ ಸಪ್ತಶತಿ ಈ ಸ್ತೋತ್ರದ ಪುಸ್ತಕದಲ್ಲಿ ದೇವಿಕವಚವಿದೆ. ಇದನ್ನೇ ಚಂಡಿ ಕವಚವೆನ್ನುತ್ತಾರೆ. ಸಾಧಾರಣವಾಗಿ ಪುಟ ಸಂಖ್ಯೆ ೫೧ ರಿಂದ ಇದು ಪ್ರಾರಂಭವಾಗುತ್ತದೆ ಹಾಗೂ ಪುಟ ಸಂಖ್ಯೆ ೬೦ ಕ್ಕೆ ಕೊನೆಯಾಗುತ್ತದೆ. ಇದರ ಆರಂಭ ಹಾಗೂ ಅಂತ್ಯ ಹೀಗಿದೆ – ಅಥ ಚಂಡಿಕವಚಮ್ ॥ ಶ್ರೀ ಗಣೇಶಾಯ ನಮಃ….. ವಾರಾಹಪುರಾಣೆ ಹರಿಹರಬ್ರಹ್ಮವಿರಚಿತಂ ದೇವ್ಯಾಂ ಕವಚಮ್‌॥- ಸಂಕಲನಕಾರರು)

Audio Download


– ಸದ್ಗುರು (ಸೌ.) ಅಂಜಲಿ ಗಾಡಗೀಳ, ಬೆಂಗಳೂರು (೩೦.೧೧.೨೦೧೫)

2 thoughts on “ಪ್ರತಿದಿನ ದುರ್ಗಾ ಸಪ್ತಶತಿ ಸ್ತೋತ್ರದ ದೇವೀ ಕವಚವನ್ನು ಪಠಿಸಿರಿ !”

Leave a Comment