ಅನಿಷ್ಟ (ಕೆಟ್ಟ) ಶಕ್ತಿಗಳು ಶರೀರದ ಮೇಲೆ ತಂದಿರುವ ತೊಂದರೆದಾಯಕ ಆವರಣವನ್ನು ತೆಗೆಯುವುದರ ಬಗ್ಗೆ ಗಮನಕ್ಕೆ ಬಂದ ಅಂಶಗಳು !

ಪೂ. (ಡಾ.) ಮುಕುಲ ಗಾಡಗೀಳ

ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹುಡುಕುವ ಮೊದಲು ಮತ್ತು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ಮೊದಲು ಅನಿಷ್ಟ (ಕೆಟ್ಟ) ಶಕ್ತಿಗಳು ಶರೀರದ ಮೇಲೆ ತಂದಿರುವ ತೊಂದರೆದಾಯಕ ಆವರಣವನ್ನು ತೆಗೆಯುವುದರ ಅಧ್ಯಯನದ ಕೊನೆಯಲ್ಲಿ ಗಮನಕ್ಕೆ ಬಂದ ಅಂಶಗಳು !

೧. ಅನಿಷ್ಟ ಶಕ್ತಿಗಳು ವ್ಯಕ್ತಿಯ ಮೇಲೆ ತೊಂದರೆದಾಯಕ ಆವರಣವನ್ನು ತಂದಿದ್ದರೆ ಸೂಕ್ಷ್ಮದಲ್ಲಿ ಏನು ಅರಿವಾಗುತ್ತದೆ ?

೧ ಅ. ಆವರಣ ಬಂದಿರುವ ವ್ಯಕ್ತಿಗೆ ಅದರ ಬಗ್ಗೆ ಏನು ಅರಿವಾಗುತ್ತದೆ ? : ಯಾವ ವ್ಯಕ್ತಿಯ ಮೇಲೆ ಆವರಣ ಬಂದಿದೆಯೋ, ಅವನಿಗೆ ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುತ್ತಿದ್ದರೆ, ಶರೀರ ಜಡವಾಗಿರುವುದರ ಅರಿವಾಗುತ್ತದೆ. ಸಂಪೂರ್ಣ ಶರೀರದ ಮೇಲೆ ಆವರಣ ಬಂದಿದ್ದಲ್ಲಿ ತನ್ನ ಶರೀರದ ಸುತ್ತಲೂ ಏನೋ ಇದೆ ಮತ್ತು ತಾನು ಯಾವುದಾದರೊಂದು ಕೋಶದೊಳಗೆ ಇದ್ದೇನೆ, ಎಂದು ಅನಿಸುತ್ತದೆ. ಶರೀರದ ಕೆಲವೊಂದು ಭಾಗದ ಮೇಲೆ ಆವರಣ ಬಂದಿದ್ದಲ್ಲಿ ಅಲ್ಲಿಯೂ ಕೆಲವು ಲಕ್ಷಣಗಳ ಅರಿವಾಗುತ್ತದೆ, ಉದಾ. ತಲೆಯ ಮೇಲೆ ಆವರಣ ಬಂದಿದ್ದಲ್ಲಿ ತನ್ನನ್ನು ಮೇಲಿನಿಂದ ಯಾರೋ ಒತ್ತುತ್ತಿದ್ದಾರೆ, ಎಂದು ಅನಿಸುತ್ತದೆ, ಕಣ್ಣುಗಳ ಮೇಲೆ ಆವರಣ ಬಂದಿದ್ದರೆ ಕಣ್ಣುಗಳ ಮೇಲೆ ಪಟ್ಟಿ ಅಥವಾ ಪರದೆ ಇದೆ ಎಂದು ಅನಿಸುತ್ತದೆ, ಎದೆ ಮತ್ತು ಕುತ್ತಿಗೆಯ ಮೇಲೆ ಆವರಣ ಬಂದಿದ್ದಲ್ಲಿ ಶ್ವಾಸವನ್ನು ತೆಗೆದುಕೊಳ್ಳಲು ಯಾರೋ ಅಡಚಣೆಯನ್ನು ತರುತ್ತಿದ್ದಾರೆ, ಎಂದು ಅನಿಸುತ್ತದೆ.

೧ ಆ. ಸೂಕ್ಷ್ಮ ವಿಷಯಗಳನ್ನು ತಿಳಿದುಕೊಳ್ಳಬಲ್ಲ ವ್ಯಕ್ತಿಗೆ ಏನು ಅರಿವಾಗುತ್ತದೆ ? : ಸೂಕ್ಷ್ಮವನ್ನು ತಿಳಿದುಕೊಳ್ಳಬಲ್ಲ ಬೇರೆ ವ್ಯಕ್ತಿಗೆ ಆವರಣ ಬಂದಿರುವ ವ್ಯಕ್ತಿಯು ಸ್ಪಷ್ಟವಾಗಿ ಕಾಣಿಸುವುದಿಲ್ಲ, ಮಸುಕಾಗಿ ಕಾಣಿಸುತ್ತಾನೆ, ಹಾಗೆಯೇ ಅವನು ಸಮೀಪ ಬಂದರೆ ಒತ್ತಡವೆನಿಸುತ್ತದೆ, ವಾಕರಿಕೆ ಬಂದಂತಾಗುತ್ತದೆ ಮತ್ತು ಕೆಲವೊಮ್ಮೆ ದುರ್ಗಂಧವೂ ಬರುತ್ತದೆ.

೨. ಆವರಣವು ವ್ಯಕ್ತಿಯ ಸುತ್ತಲೂ ಎಷ್ಟು ದೂರದ ವರೆಗೆ ಹರಡಿರುತ್ತದೆ ?

ಅನಿಷ್ಟ ಶಕ್ತಿಗಳು ವ್ಯಕ್ತಿಯ ಸುತ್ತಲೂ ನಿರ್ಮಾಣ ಮಾಡಿದ ಆವರಣವು ಅವನ ಶರೀರದಿಂದ ಸಾಧಾರಣ ೨ ರಿಂದ ೩ ಸೆಂ.ಮೀ. ನಿಂದ ೧೫ ಸೆಂ.ಮೀ. ವರೆಗೆ, ಮತ್ತು ಕೆಲವೊಮ್ಮೆ ೨ ರಿಂದ ೩ ಮೀ. ನಷ್ಟು ಉದ್ದದ ವರೆಗೆ ಹರಡಿರಬಹುದು. (ಆವರಣದ ಉದ್ದ ಎಷ್ಟಿದೆ ?, ಇದು ಸೂಕ್ಷ್ಮವನ್ನು ತಿಳಿದುಕೊಳ್ಳುವ ವ್ಯಕ್ತಿಗೆ ಅವನ ಅಂಗೈಗಾಗುವ ಆವರಣದ ಸ್ಪರ್ಶದಿಂದ ತಿಳಿಯುತ್ತದೆ. ಅದಕ್ಕಾಗಿ ಆವರಣವಿರುವ ವ್ಯಕ್ತಿಯ ಎದುರು ಅಂಗೈಯನ್ನು ಹಿಡಿದು ದೂರದಿಂದ ನಿಧಾನವಾಗಿ ಅವನ ಸಮೀಪ ಬರಬೇಕಾಗುತ್ತದೆ. ಆವರಣ ಬಂದಿರುವ ವ್ಯಕ್ತಿಗೂ ಸೂಕ್ಷ್ಮದ ವಿಷಯಗಳು ತಿಳಿಯುತ್ತಿದ್ದಲ್ಲಿ ಮತ್ತು ಅವನ ಮೇಲಿನ ಆವರಣವು ೩೦ ರಿಂದ ೪೦ ಸೆಂ.ಮೀ. ದ ವರೆಗೆ ಇದ್ದರೆ ಅವನು ತನ್ನ ಅಂಗೈಯನ್ನು ದೂರದಿಂದ ನಿಧಾನವಾಗಿ ತನ್ನ ವರೆಗೆ ತಂದರೆ ಅವನಿಗೆ ತನ್ನ ಮೇಲಿನ ಆವರಣದ ಉದ್ದ ತಿಳಿಯುತ್ತದೆ.)

೩. ವ್ಯಕ್ತಿಯ ಮೇಲೆ ಬಂದಿರುವ ತೊಂದರೆದಾಯಕ ಆವರಣವು ಹೇಗಿರುತ್ತದೆ ?

ಈ ಆವರಣವು ಕೆಲವೊಮ್ಮೆ ವ್ಯಕ್ತಿಯ ತಲೆಯ ಸುತ್ತಲೂ ಗೋಲಾಕಾರದಂತೆ, ಕೆಲವೊಮ್ಮೆ ಅವನ ಕಣ್ಣುಗಳ ಮೇಲೆ ಪಟ್ಟಿಯನ್ನು ಕಟ್ಟಿದಂತೆ, ಕೆಲವೊಮ್ಮೆ ಅವನು ಕಂಬಳಿಯನ್ನು ಹೊದ್ದುಕೊಂಡಂತೆ, ಕೆಲವೊಮ್ಮೆ ಕೇವಲ ಅವನ ಶರೀರದ ಮುಂದಿನ ಬದಿಗೆ, ಕೆಲವೊಮ್ಮೆ ಕೇವಲ ಅವನ ಶರೀರದ ಅರ್ಧಭಾಗದ ಮೇಲೆ, ಕೆಲವೊಮ್ಮೆ ಅವನ ಸಂಪೂರ್ಣ ಶರೀರದ ಮೇಲೆ, ಹಾಗೆಯೇ ಕೆಲವೊಮ್ಮೆ ತೆಳು ಮತ್ತು ಕೆಲವೊಮ್ಮೆ ಗಟ್ಟಿ (ರಬ್ಬರ್ ಹಾಗೆ) ಇರುತ್ತದೆ.

೪. ಮೊದಲು ಕುಂಡಲಿನೀ ಚಕ್ರಗಳ ಮೇಲೆ ಆವರಣ ಬರುವುದು ಮತ್ತು ಅದರ ನಂತರ ತೊಂದರೆ ಹೆಚ್ಚಾಗಿ ಶರೀರದ ಮೇಲೆ ಹೊರಗಡೆಯೂ ಆವರಣ ಬರುವುದು :

ಸಾಮಾನ್ಯವಾಗಿ ಅನಿಷ್ಟ ಶಕ್ತಿಗಳು ಮೊದಲಿಗೆ ವ್ಯಕ್ತಿಯ ಯಾವುದಾದರೊಂದು ಕುಂಡಲಿನೀಚಕ್ರದ ಮೇಲೆ ಆವರಣವನ್ನು ತರುತ್ತವೆ ಮತ್ತು ನಂತರ ಅದನ್ನು ಹೆಚ್ಚಿಸಿ ಅವನ ಶರೀರದ ಮೇಲೆ ಹೊರಗಡೆಯೂ ಆವರಣವನ್ನು ತರುತ್ತವೆ. ಯಾವಾಗ ಶರೀರದ ಯಾವುದಾದರೊಂದು ಭಾಗದ ಮೇಲೆ ಹೊರಗಡೆ ಆವರಣ ಬರುತ್ತದೆಯೋ, ಆಗ ಹೆಚ್ಚಾಗಿ ಆ ಸ್ಥಳದಲ್ಲಿರುವ ಕುಂಡಲಿನಿಚಕ್ರದ ಮೇಲೆ ಅಥವಾ ಆ ಭಾಗದ ಸಮೀಪವಿರುವ ಕುಂಡಲಿನಿಚಕ್ರದ ಮೇಲೆ (ಉದಾ. ಕಣ್ಣುಗಳ ಮೇಲೆ ಆವರಣ ಬಂದಿದ್ದಲ್ಲಿ ಆಜ್ಞಾಚಕ್ರದ ಮೇಲೆ) ಆವರಣ ಬಂದಿರುತ್ತದೆ. ಕೆಲವೊಮ್ಮೆ ಕುಂಡಲಿನಿಚಕ್ರದ ಮೇಲೆ ಆವರಣ ಬರದೇ ಕೇವಲ ಶರೀರದ ಮೇಲೆ ಹೊರಗಡೆ ಆವರಣ ಬರುತ್ತದೆ. ಯಾವಾಗ ಕುಂಡಲಿನಿ ಚಕ್ರದ ಸ್ಥಳದಲ್ಲಿ ಆವರಣ ಬರುತ್ತದೆಯೋ, ಆಗ ಅಲ್ಲಿ ಬಹಳಷ್ಟು ಒತ್ತಡದ ಅರಿವಾಗುತ್ತದೆ; ಆದರೆ ಯಾವಾಗ ಶರೀರದ ಹೊರಗಡೆಯೂ ಆವರಣ ಬಂದಿರುತ್ತದೆ, ಆಗ ಆ ವ್ಯಕ್ತಿಗೆ ತನ್ನ ಮೇಲೆ ಆವರಣ ಬಂದಿದೆ, ಎಂಬುದು ತಿಳಿಯುವುದಿಲ್ಲ. ಅವನಿಗೆ ಮಾನಸಿಕ ತೊಂದರೆ ಮಾತ್ರ ಆಗುತ್ತಿರುತ್ತದೆ.

೫. ಅನಿಷ್ಟ ಶಕ್ತಿಗಳು ತೊಂದರೆದಾಯಕ ಆವರಣವನ್ನು ತಂದಿರುವುದರಿಂದ ವ್ಯಕ್ತಿಗಾಗುವ ಕೆಲವು ತೊಂದರೆಗಳು ಮತ್ತು ಆವರಣವನ್ನು ತೆಗೆಯುವುದರ ಆವಶ್ಯಕತೆ :

ಅನಿಷ್ಟ ಶಕ್ತಿಗಳು ತಂದಿರುವ ಆವರಣದಿಂದಾಗಿ ವ್ಯಕ್ತಿಗೆ ಏನೂ ತೋಚದಿರುವುದು, ಮನಸ್ಸು ಅಸ್ವಸ್ಥವಾಗುವುದು, ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವುದು, ನಿರುತ್ಸಾಹ, ನಾಮಜಪ ಮಾಡಬಾರದೆಂದು ಅನಿಸುವುದು, ಉಪಾಯಗಳ ಪರಿಣಾಮವಾಗದಿರುವುದು, ಈ ರೀತಿಯ ತೊಂದರೆಗಳಾಗುತ್ತವೆ. ಕೆಲವೊಮ್ಮೆ ಶರೀರದ ಯಾವುದಾದರೊಂದು ಭಾಗದಲ್ಲಿ ವೇದನೆಗಳಾಗುವುದು, ಪಿತ್ತವಾಗುವುದು ಈ ರೀತಿಯ ತೊಂದರೆಗಳೂ ಆಗುತ್ತವೆ. ವ್ಯಕ್ತಿಯ ಮೇಲೆ ತೊಂದರೆದಾಯಕ ಆವರಣ ಬಂದಿದ್ದರೆ, ಅವನು ಬಹಳಷ್ಟು ಸಲ ಮುದ್ರೆ ಮತ್ತು ನ್ಯಾಸವನ್ನು ಮಾಡಿ ತನ್ನ ಮೇಲೆ ಆಧ್ಯಾತ್ಮಿಕ ಉಪಾಯ ಮಾಡಿದರೂ, ಆವರಣದಿಂದಾಗಿ ಆ ಉಪಾಯಗಳ ಸಾತ್ತ್ವಿಕ ಸ್ಪಂದನಗಳು ಅವನ ವರೆಗೆ ತಲುಪುವುದಿಲ್ಲ, ಆದುದರಿಂದ ಅವನ ತೊಂದರೆಗಳು ಕಡಿಮೆಯಾಗುವುದಿಲ್ಲ.

೬. ವ್ಯಕ್ತಿಯ ಮೇಲೆ ಅನಿಷ್ಟ ಶಕ್ತಿಗಳು ಆವರಣ ತಂದಿದ್ದರೆ ಪ್ರಾಣಶಕ್ತಿವಹನ ಉಪಾಯ ಪದ್ಧತಿಗನುಸಾರ ಉಪಾಯವನ್ನು ಹುಡುಕುವಾಗ ಏನು ಅರಿವಾಗುತ್ತದೆ ?

೬ ಅ. ಶರೀರದ ಮೇಲೆ ಆವರಣವಿದ್ದಲ್ಲಿ ಏನು ಅರಿವಾಗುತ್ತದೆ ? : ನಮ್ಮ ತೊಂದರೆಗಾಗಿ ನಾವು ಸ್ವತಃ ಆಧ್ಯಾತ್ಮಿಕ ಉಪಾಯಗಳನ್ನು ಹುಡುಕುತ್ತಿರುವಾಗ ಯಾವಾಗ ನ್ಯಾಸಮಾಡುವ ಸ್ಥಾನವನ್ನು ಹುಡುಕಲು ಕೈಯ ಬೆರಳುಗಳನ್ನು ಕುಂಡಲಿನೀಚಕ್ರಗಳ ಮೇಲಿನಿಂದ ತಿರುಗಿಸುತ್ತೇವೆಯೋ (ಶರೀರದ ಮುಂದಿನ ಮಧ್ಯಭಾಗದ ಮೇಲಿನಿಂದ, ಕೈ ಬೆರಳುಗಳನ್ನು ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ತರುವುದು), ಆಗ ಶರೀರದ ಮೇಲೆ ಅನಿಷ್ಟ ಶಕ್ತಿಗಳು ಆವರಣವನ್ನು ತಂದಿದ್ದರೆ ಅದು ನಮ್ಮ ಕೈಯ ಬೆರಳುಗಳಿಗೆ ಅರಿವಾಗುತ್ತದೆ. ಆವರಣವು ತೆಳುವಾಗಿದ್ದಲ್ಲಿ ನಮ್ಮ ಕೈಯ ಬೆರಳುಗಳು ಕುಂಡಲಿನಿ ಚಕ್ರಗಳ ಮೇಲಿನಿಂದ ಮೇಲೆ ಮೇಲೆ ಸರಿಯುತ್ತವೆ; ಆದರೆ ಆಗ ನಮ್ಮ ಕುಂಡಲೀನಿ ಚಕ್ರಗಳಿಗೆ ಬೆರಳುಗಳಿಂದ ಪ್ರಕ್ಷೇಪಿತವಾಗುವ ಪ್ರಾಣಶಕ್ತಿಯ ಸ್ಪಂದನಗಳ ಅರಿವಾಗುವುದಿಲ್ಲ. ದೇಹದ ಮೇಲೆ ತೆಳುವಾದ ಆವರಣವನ್ನು ತಂದು ಅನಿಷ್ಟ ಶಕ್ತಿಗಳು ಆವರಣವಿದೆ, ಎಂಬುದನ್ನು ತಿಳಿಯಲು ಬಿಡುವುದಿಲ್ಲ ಮತ್ತು ನಮ್ಮನ್ನು ಮೋಸಗೊಳಿಸುತ್ತವೆ. ಯಾವಾಗ ಆವರಣವು ಬಹಳ ದಟ್ಟವಾಗಿರುತ್ತದೋ, ಆಗ ನಮ್ಮ ಕೈಯ ಬೆರಳುಗಳನ್ನು ಕುಂಡಲಿನಿ ಚಕ್ರಗಳ ಮೇಲಿನಿಂದ ಮೇಲೆ ಮೇಲೆ ಸರಿಸುವುದು ಕಠಿಣವಾಗುತ್ತದೆ ಮತ್ತು ನಮ್ಮ ಶರೀರದ ಮೇಲೆ ಎಂತಹದೋ ಪದರಿದೆ ಎಂದು ಅರಿವಾಗುತ್ತದೆ. ಕೆಲವೊಂದು ಸಲ ಆವರಣವಿರುವ ಭಾಗದಿಂದ ಕೈಯ ಬೆರಳುಗಳು ಮೇಲೆ ಸರಿಯು ವುದೇ ಇಲ್ಲ. (ಆವರಣದಿಂದಾಗಿಯೇ ಅಲ್ಲ, ಕುಂಡಲಿನಿ ಚಕ್ರಗಳ ಸ್ಥಳದಲ್ಲಿ ಬಹಳಷ್ಟು ಕಪ್ಪು ಶಕ್ತಿ ಇದ್ದರೂ ಕೈಯ ಬೆರಳುಗಳು ಮೇಲೆ ಸರಿಯುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ) ಆದುದರಿಂದ ನಮಗೆ ನ್ಯಾಸವನ್ನು ಮಾಡುವ ಸ್ಥಾನವನ್ನು ಹುಡುಕಲು ಬರುವುದಿಲ್ಲ.

೬ ಅ ೧. ಮಾಯಾವೀ ಆವರಣವಿದ್ದಲ್ಲಿ ಏನು ಅರಿವಾಗುತ್ತದೆ ಮತ್ತು ಆಗ ಏನು ಮಾಡಬೇಕು ? : ಕೆಲವೊಮ್ಮೆ ನಮಗೆ ತೊಂದರೆಯಾಗುತ್ತಿರುತ್ತದೆ; ಆದರೆ ನ್ಯಾಸ ಮಾಡುವ ಸ್ಥಾನವನ್ನು ಹುಡುಕಲು ಕುಂಡಲಿನಿ ಚಕ್ರಗಳ ಮೇಲೆ ಕೈಯ ಬೆರಳುಗಳನ್ನು ತಿರುಗಿಸಿದಾಗ ಎಲ್ಲಿಯೂ ಅಡಚಣೆ ಅಥವಾ ಯಾವುದೇ ಚಕ್ರದ ಮೇಲೆ ಒತ್ತಡವೆನಿಸುವುದಿಲ್ಲ, ಹಾಗೆಯೇ ಆವರಣದ ಅರಿವೂ ಆಗುವುದಿಲ್ಲ. ಆಗ ನಮ್ಮ ಮೇಲೆ ಮಾಯಾವಿ ಆವರಣವು ಬಂದಿರಬಹುದು. ಈ ಮಾಯಾವಿ ಆವರಣವನ್ನು ದೂರಗೊಳಿಸಲು ಕುಂಡಲಿನಿ ಚಕ್ರಗಳ ಮೇಲೆ ಕೈಯ ಬೆರಳುಗಳನ್ನು ತಿರುಗಿಸುವಂತೆ, ನಮ್ಮ ಅಂಗೈಯನ್ನು ತಿರುಗಿಸಿದರೆ ಅಂಗೈಯಿಂದ ಪ್ರಕ್ಷೇಪಿತವಾಗುವ ನಿರ್ಗುಣ ಸ್ಪಂದನಗಳಿಂದ ಮಾಯಾವಿ ಆವರಣವು ದೂರವಾಗಿ ಶರೀರದ ಮೇಲಿನ ಆವರಣವು ಪ್ರಕಟವಾಗುತ್ತದೆ ಮತ್ತು ಅದು ಚಕ್ರಗಳ ಮೇಲೆ ಬೆರಳುಗಳನ್ನು ತಿರುಗಿಸುವಾಗ ಅರಿವಾಗುತ್ತದೆ.

೬ ಆ. ಕುಂಡಲಿನಿ ಚಕ್ರಗಳ ಮೇಲೆ ಆವರಣವಿದ್ದರೆ ಏನು ಅರಿವಾಗುತ್ತದೆ ? : ಕೇವಲ ಯಾವುದಾದರೊಂದು ಕುಂಡಲಿನಿ ಚಕ್ರದ ಮೇಲೆ ಆವರಣ ಬಂದಿದ್ದಲ್ಲಿ, ಉಪಾಯವನ್ನು ಹುಡುಕಲು ಆ ಕುಂಡಲಿನಿ ಚಕ್ರದ ಸ್ಥಾನದ ಮೇಲೆ ಕೈಯ ಬೆರಳುಗಳನ್ನು ತಿರುಗಿಸುತ್ತಿರುವಾಗ ನಮ್ಮ ಬೆರಳುಗಳಿಗೆ ಅಡಚಣೆಯೆನಿಸುವುದಿಲ್ಲ; ಆದರೆ ಆಗ ನಮಗೆ ಶ್ವಾಸವನ್ನು ತೆಗೆದುಕೊಳ್ಳಲು ಅಡಚಣೆ ಆಗುತ್ತದೆ ಅಥವಾ ಆ ಸ್ಥಾನದಲ್ಲಿ ವೇದನೆಗಳ ಅರಿವಾಗುತ್ತದೆ.

೭. ಅನಿಷ್ಟ ಶಕ್ತಿಗಳು ತಂದಿರುವ ಆವರಣವನ್ನು ತೆಗೆಯುವ ಬಗ್ಗೆ ಗಮನದಲ್ಲಿಡಬೇಕಾದ ಸರ್ವಸಾಧಾರಣ ಸೂಚನೆಗಳು

೭ ಅ. ಆವರಣವನ್ನು ತೆಗೆಯಲು ಪ್ರಾರಂಭಿಸುವಾಗ ಮೊದಲು ಉಪಾಸ್ಯ ದೇವತೆಗೆ ಭಾವಪೂರ್ಣ ಪ್ರಾರ್ಥನೆ ಮಾಡಬೇಕು ! : ಪ್ರಾರ್ಥನೆಯನ್ನು ಹೀಗೆ ಮಾಡಬೇಕು, ಹೇ ದೇವತೆ, ನಿನ್ನ ಕೃಪೆಯಿಂದ ನನಗೆ ನನ್ನ ಶರೀರದ ಮೇಲಿನ ಆವರಣವನ್ನು ತೆಗೆಯಲು ಸಾಧ್ಯವಾಗಲಿ ಮತ್ತು ನನಗಾತ್ತಿರುವ ಅನಿಷ್ಟ ಶಕ್ತಿಗಳ ತೊಂದರೆಗಳು ಬೇಗನೆ ದೂರವಾಗಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !

೭ ಆ. ಆವರಣವನ್ನು ತೆಗೆಯುವಾಗ ನಾಮಜಪ ಮಾಡಬೇಕು ! : ಆವರಣವನ್ನು ತೆಗೆಯುವಾಗ ತಮ್ಮ ಉಪಾಸ್ಯದೇವತೆಯ ಅಥವಾ ಶ್ರೀಕೃಷ್ಣನ ನಾಮಜಪವನ್ನು ಮಾಡಬೇಕು. ಹೀಗೆ ಮಾಡುವುದರಿಂದ ದೇವರ ಸಹಾಯ ದೊರಕಿ ಆವರಣವು ಬೇಗನೆ ದೂರವಾಗುತ್ತದೆ, ಹಾಗೆಯೇ ಅನಿಷ್ಟ ಶಕ್ತಿಗಳ ತೊಂದರೆಯಿಂದ ನಮ್ಮ ರಕ್ಷಣೆಯಾಗಲು ಸಹಾಯವಾಗುತ್ತದೆ. (ನಮ್ಮ ತೊಂದರೆಗಳಿಗೆ ಮುದ್ರೆ, ನ್ಯಾಸ ಮತ್ತು ನಾಮಜಪ ಹುಡುಕಿ ಉಪಾಯವನ್ನು ಮಾಡುತ್ತಿರುವಾಗಲೂ ಯಾವಾಗ ನಾವು ನಡುನಡುವೆ ಆವರಣವನ್ನು ತೆಗೆಯುತ್ತಿರುತ್ತೇವೆಯೋ, ಆಗ ಉಪಾಯದಿಂದ ಬಂದಂತಹ ಜಪವನ್ನು ಮಾಡಬೇಕು.)

೭ ಇ. ಆವರಣವನ್ನು ತೆಗೆಯುವಾಗ ಕಣ್ಣುಗಳನ್ನು ಮುಚ್ಚಬಾರದು, ತೆರೆದಿಡಬೇಕು ! : ಇದರಿಂದ ಆವರಣವು ಬೇಗನೆ ಹೋಗುತ್ತದೆ; ಏಕೆಂದರೆ ಆಗ ನಮ್ಮ ಕಣ್ಣುಗಳಿಂದ ಪ್ರಕ್ಷೇಪಿತವಾಗುತ್ತಿರುವ ತೇಜತತ್ತ್ವವು ಆವರಣವನ್ನು ತೆಗೆಯಲು ಸಹಾಯ ಮಾಡುತ್ತದೆ.

೭ ಈ. ಆವರಣವನ್ನು ತೆಗೆದ ನಂತರ ಉಪಾಸ್ಯದೇವತೆಗೆ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು !

೮. ಅನಿಷ್ಟ (ಕೆಟ್ಟ) ಶಕ್ತಿಗಳು ತಂದಿರುವ ಆವರಣವನ್ನು ತೆಗೆಯುವ ಪದ್ಧತಿ

೮ ಅ. ಶರೀರದ ಮೇಲಿನ ಆವರಣವನ್ನು ಮುಂದಿನಂತೆ ತೆಗೆಯಬಹುದು !

೮ ಅ ೧. ತನ್ನ ಕೈಗಳಿಂದ ಅಥವಾ ಯಾವುದಾದರೊಂದು ಸಾತ್ತ್ವಿಕ ವಸ್ತವಿನ ಸಹಾಯದಿಂದ ಆವರಣವನ್ನು ತೆಗೆಯಬಹುದು !

ಅ. ಸೆಕೆಯಾದಾಗ ನಾವು ಕೆಲವೊಂದು ಬಾರಿ ನಮ್ಮ ಕೈಗಳಿಂದ ಹೇಗೆ ಗಾಳಿಯನ್ನು ಬೀಸಿಕೊಳ್ಳುತ್ತೇವೆಯೋ, ಹಾಗೆ ನಮ್ಮ ಎರಡೂ ಕೈಗಳಿಂದ ನಮ್ಮ ಶರೀರದ ಮೇಲಿನ ಆವರಣವನ್ನು ಶರೀರದಿಂದ ದೂರ ಸರಿಸಬೇಕು. ಕೈಗಳಿಂದ ಆವರಣವನ್ನು ದೂರ ಸರಿಸುವಾಗ ಕೈಗಳ ಬೆರಳುಗಳಿಂದ ಅವಿರತವಾಗಿ ಪ್ರಕ್ಷೇಪಿತವಾಗುತ್ತಿರುವ ಪ್ರಾಣಶಕ್ತಿಯಿಂದಾಗಿ ಆವರಣವು ದೂರವಾಗಲು ಸಹಾಯವಾಗುತ್ತದೆ.

ಆ. ಶರೀರದ ಮೇಲಿನ ಆವರಣವನ್ನು ನಮ್ಮ ಕೈಗಳ ಮುಷ್ಟಿಗಳಲ್ಲಿ ಒಟ್ಟುಗೂಡಿಸಿದಂತೆ ಮಾಡಿ ಅದನ್ನು ಕುಳಿತ ಸ್ಥಾನದಿಂದ ಶರೀರದಿಂದ ದೂರ ಚೆಲ್ಲಬೇಕು.

ಇ. ಆವರಣವನ್ನು ದೂರ ಮಾಡಲು ಸಾತ್ತ್ವಿಕ ವಸ್ತುಗಳು, ಉದಾ. ಸನಾತನ ಪ್ರಭಾತ ನಿಯತಕಾಲಿಕೆ, ನವಿಲುಗರಿಗಳ ಗೊಂಚಲು, ಪ್ರಜ್ವಲಿಸದ ಸಾತ್ತ್ವಿಕ ಊದುಬತ್ತಿ ಮುಂತಾದವುಗಳನ್ನು ಉಪಯೋಗಿಸಿದಾಗ ಆವರಣವು ದೂರವಾಗಿರುವ ಅನುಭವವು ಕೆಲವು ಸಾಧಕರಿಗೆ ಬಂದಿದೆ. ಈ ವಸ್ತುಗಳಿಂದ ಆವರಣವನ್ನು ತೆಗೆಯುವಾಗ ಹೇಗೆ ಕೈಗಳಿಂದ ಆವರಣವನ್ನು ಶರೀರದಿಂದ ದೂರ ಸರಿಸುತ್ತೇವೆಯೋ ಹಾಗೆ ಅಥವಾ ಈ ವಸ್ತುವನ್ನು ಶರೀರದ ಸುತ್ತಲೂ ತಿರುಗಿಸಿ ಆವರಣವನ್ನು ತೆಗೆಯಬಹುದು. ಸಾತ್ತ್ವಿಕ ವಸ್ತುಗಳಲ್ಲಿನ ಒಳ್ಳೆಯ ಶಕ್ತಿಯಿಂದಾಗಿ ಶರೀರದ ಮೇಲಿನ ಆವರಣವು ದೂರವಾಗಲು ಸಹಾಯವಾಗುತ್ತದೆ.

೮ ಅ ೨. ಶರೀರದ ಮೇಲಿನ ಆವರಣವನ್ನು ತೆಗೆಯುವಾಗ ಆವರಣದ ಹೊರಗಿನ ಭಾಗದಿಂದ ಪ್ರಾರಂಭಿಸಿ ಶರೀರದ ವರೆಗಿನ ಆವರಣವನ್ನು ತೆಗೆಯಬೇಕು ! : ಶರೀರದ ಸುತ್ತಲೂ ಸಾಧಾರಣ ೪೦ ಸೆಂ.ಮೀ. ದೂರದ ವರೆಗೆ ಆವರಣವು ಬಂದಿದ್ದಲ್ಲಿ ಅದನ್ನು ನಾವೇ ಸ್ವತಃ ತೆಗೆಯಬಹದು; ಏಕೆಂದರೆ ಅಲ್ಲಿಯವರೆಗೆ ನಮ್ಮ ಕೈಗಳು ಹೋಗುತ್ತವೆ. ಅದಕ್ಕಿಂತಲೂ ಹೆಚ್ಚು ದೂರದವರೆಗೆ ಆವರಣ ಬಂದಿದ್ದಲ್ಲಿ ಅದನ್ನು ಒಳ್ಳೆಯ ಸಾಧನೆಯಿರುವ ಮತ್ತು ಅನಿಷ್ಟ ಶಕ್ತಿಗಳ ತೊಂದರೆಯಿಲ್ಲದಿರುವ ಬೇರೆ ವ್ಯಕ್ತಿಯಿಂದ ತೆಗೆಸಿಕೊಳ್ಳಬೇಕಾಗುತ್ತದೆ. ಬೇರೆ ವ್ಯಕ್ತಿ ಉಪಲಬ್ಧ ವಿಲ್ಲದಿದ್ದಲ್ಲಿ ಸ್ವತಃ ಆವರಣವನ್ನು ತೆಗೆಯಲು ಉಪಾಯ ಮಾಡಬೇಕು. ಅದರಿಂದಲೂ ಆವರಣವನ್ನು ತೆಗೆಯಲು ಬರುತ್ತದೆ. ನಾವೇ ನಮ್ಮ ಆವರಣವನ್ನು ತೆಗೆಯುವಾಗ ಮೊದಲಿಗೆ ಕೈಗಳನ್ನು ಉದ್ದ ಮಾಡಿ ತಮ್ಮ ಮೇಲಿನ ದೂರದಲ್ಲಿನ ಆವರಣವನ್ನು ತೆಗೆಯಬೇಕು. ನಂತರ ಕೈಯನ್ನು ಸ್ವಲ್ಪ ಶರೀರದ ಬಳಿ ತೆಗೆದುಕೊಂಡು ಅಲ್ಲಿನ ಆವರಣವನ್ನು ತೆಗೆಯಬೇಕು. ಅದರ ನಂತರ ಕೈಯನ್ನು ಇನ್ನೂ ಹತ್ತಿರ ತೆಗೆದುಕೊಂಡು ಅಲ್ಲಿನ ಆವರಣವನ್ನು ತೆಗೆಯಬೇಕು. ಹೀಗೆ ಮಾಡುತ್ತಾ ಶರೀರದ ಹತ್ತಿರದ ಆವರಣವನ್ನು ತೆಗೆಯಬೇಕು. ಈ ರೀತಿ ಆವರಣದ ಹೊರಗಿನ ಭಾಗದಿಂದ ಪ್ರಾರಂಭಿಸಿ ಶರೀರದವರೆಗಿನ ಆವರಣವನ್ನು ತೆಗೆಯಬೇಕು. ಪ್ರತಿಯೊಂದು ಹಂತಕ್ಕೆ ಸಾಧಾರಣ ಅರ್ಧದಿಂದ ಒಂದು ನಿಮಿಷ ಆವರಣವನ್ನು ತೆಗೆಯಬೇಕು. ಬೇರೆಯವರ ಆವರಣವನ್ನು ತೆಗೆಯುವಾಗಲೂ ಇದೇ ಪದ್ಧತಿಯನ್ನು ಉಪಯೋಗಿಸಬೇಕು.

೮ ಅ ೩. ಆವರಣವನ್ನು ಕೆಳಗಿನಿಂದ ಮೇಲಿನವರೆಗೆ ಹಂತಹಂತವಾಗಿ ತೆಗೆಯುವುದು ! : ಶರೀರದ ಕೇವಲ ಯಾವುದಾದರೊಂದು ಭಾಗದ ಮೇಲೆ, ಉದಾ. ಎದೆಯ ಮೇಲೆ ಆವರಣ ಬಂದಿದ್ದಲ್ಲಿ ಅಲ್ಲಿನ ಆವರಣವನ್ನು ಮೇಲಿನಂತೆ ತೆಗೆಯಬೇಕು; ಆದರೆ ಶರೀರದ ದೊಡ್ಡ ಭಾಗದ ಮೇಲೆ ಉದಾ. ತಲೆಯಿಂದ ಎದೆಯ ವರೆಗೆ ಆವರಣ ಬಂದಿದ್ದಲ್ಲಿ ಅದನ್ನು ಕೆಳಗಿನಿಂದ ಮೇಲಿನ ವರೆಗೆ ಹಂತಹಂತವಾಗಿ ತೆಗೆಯುತ್ತಾ ಹೋಗಬೇಕು, ಉದಾ. ಮೊದಲಿಗೆ ೨ – ೩ ನಿಮಿಷ ಎದೆಯ ಮೇಲಿನ ಆವರಣವನ್ನು ತೆಗೆಯಬೇಕು. ಅಲ್ಲಿನ ಆವರಣವನ್ನು ತೆಗೆಯುವಾಗ ಮೇಲೆ ಹೇಳಿದಂತೆ ಆವರಣದ ಹೊರಗಿನ ಭಾಗದಿಂದ ಪ್ರಾರಂಭಿಸಿ ಶರೀರದವರೆಗಿನ ಆವರಣವನ್ನು ತೆಗೆಯುವ ಪದ್ಧತಿಯನ್ನು ಅವಲಂಬಿಸಬೇಕು. (ಹೀಗೆ ಪ್ರತಿಯೊಂದು ಹಂತದಲ್ಲಿ ಮಾಡಬೇಕು.) ಅನಂತರ ತಮ್ಮ ಕುಂಡಲಿನಿಚಕ್ರಗಳ ಮೆಲೆ ಬೆರಳುಗಳನ್ನು ತಿರುಗಿಸಿ ಈಗ ಆವರಣ ಎಲ್ಲಿಯ ವರೆಗಿದೆ, ಎಂಬುದನ್ನು ನೋಡಬೇಕು. ಆಗ ಎದೆಯ ಮೇಲಿನ ಆವರಣವು ಕಡಿಮೆಯಾಗಿ ಕುತ್ತಿಗೆಯ ಮೇಲಿನ ಆವರಣದ ಅರಿವಾಗುತ್ತಿದ್ದರೆ ಅಲ್ಲಿನ ಆವರಣವನ್ನು ಮೇಲಿನಂತೆ ತೆಗೆಯಬೇಕು. ಈ ರೀತಿ ಹಂತಹಂತವಾಗಿ ತಲೆಯವರೆಗಿನ ಆವರಣವನ್ನು ತೆಗೆಯ ಬೇಕು. ಅನಿಷ್ಟ ಶಕ್ತಿಗಳು ಹೆಚ್ಚಾಗಿ ವ್ಯಕ್ತಿಯ ಶರೀರದ ಮೇಲಿನಿಂದ ಕೆಳಗಿನ ವರೆಗೆ, ಅಂದರೆ ಆಜ್ಞಾಚಕ್ರದಿಂದ ಪ್ರಾರಂಭಿಸಿ ಕೆಳಕೆಳಗಿನ ಕುಂಡಲಿನಿ ಚಕ್ರಗಳವರೆಗೆ ಆವರಣವನ್ನು ತರುತ್ತವೆ. (ಕೆಲವೊಮ್ಮೆ ವಿರುದ್ಧವು ಆಗುತ್ತದೆ.) ಎಲ್ಲಿಂದ ಅವು ಆವರಣವನ್ನು ತರಲು ಪ್ರಾರಂಭಿಸಿರುತ್ತವೆಯೋ, ಅಲ್ಲಿ ಅದು ಗಟ್ಟಿಯಾಗಿರುತ್ತದೆ ಮತ್ತು ಮುಂದೆ ತೆಳುವಾಗುತ್ತಾ ಹೋಗುತ್ತದೆ. ತೆಳುವಾದ ಆವರಣವನ್ನು ತೆಗೆಯುವುದು ಸುಲಭವಾಗಿರುತ್ತದೆ, ಆದುದರಿಂದ ಅದನ್ನು ಮೊದಲು ತೆಗೆಯಬೇಕು.

೮ ಅ ೪. ತಮ್ಮ ಮೇಲೆ ಆವರಣ ಬಂದಿದೆಯೋ ಅಥವಾ ಇಲ್ಲವೋ, ಎಂಬುದು ಸರಿಯಾಗಿ ತಿಳಿಯದಿದ್ದರೆ ಸಹಸ್ರಾರಚಕ್ರದಿಂದ ಸ್ವಾಧಿಷ್ಠಾನ ಚಕ್ರದವರೆಗಿನ ಆವರಣವನ್ನು ತೆಗೆಯುವ ಕೃತಿ ! : ನಮ್ಮ ಮೇಲೆ ಆವರಣ ಬಂದಿದೆಯೋ ಅಥವಾ ಇಲ್ಲವೋ ಎಂಬುದು ಅಂಶ ೬ ಅ ನಲ್ಲಿ ನೀಡಲಾದ ಪದ್ಧತಿಗನುಸಾರ ಸರಿಯಾಗಿ ತಿಳಿಯದೇ ಇದ್ದರೆ, ಸಹಸ್ರಾರಚಕ್ರದಿಂದ ಸ್ವಾಧಿಷ್ಠಾನಚಕ್ರದ ವರೆಗೆ ಒಂದೊಂದೇ ಚಕ್ರದ ಮೇಲಿನ ಆವರಣವನ್ನು ತೆಗೆಯುವ ಕೃತಿಯನ್ನು ೧೦ – ೧೫ ನಿಮಿಷ ಮಾಡಬೇಕು. ನಂತರ ಮುದ್ರೆ, ನ್ಯಾಸ ಮತ್ತು ನಾಮಜಪ ಉಪಾಯ ಅಥವಾ ಇತರ ಉಪಾಯಗಳನ್ನು ಮಾಡಬೇಕು. ಹೀಗೆ ಮಾಡಿದರೆ ಶರೀರ ಮತ್ತು ಚಕ್ರಗಳ ಮೇಲೆ ಅಲ್ಪಸ್ವಲ್ಪ ಆವರಣ ಬಂದಿದ್ದರೂ, ಅದು ದೂರವಾಗುವುದರಿಂದ ಮುಂದಿನ ಉಪಾಯಗಳು ಪರಿಣಾಮಕಾರಿಯಾಗಲು ಸಹಾಯವಾಗುತ್ತದೆ.

೮ ಆ. ಕುಂಡಲಿನಿಚಕ್ರದ ಮೇಲಿನ ಆವರಣವನ್ನು ತೆಗೆಯುವ ಕೃತಿ ! : ಶರೀರದ ಹೊರಗಡೆ ಬಂದಿರುವ ಆವರಣವನ್ನು ತೆಗೆದನಂತರ ಆ ಭಾಗದಲ್ಲಿನ ಕುಂಡಲಿನಿಚಕ್ರದ ಮೇಲಿನ ಅಥವಾ (ಚಕ್ರಗಳ ಮೇಲಿನ) ಆವರಣವನ್ನು ತೆಗೆಯಬೇಕು. ಮೊದಲಿಗೆ ಸ್ವಲ್ಪ ಸಮಯ ಶರೀರದ ಹೊರಗಡೆ ಆವರಣ ಬಂದ ಮೇಲೆ ಅದನ್ನು ನಾವು ಹೇಗೆ ತೆಗೆಯುತ್ತೇವೆಯೋ, ಹಾಗೆ ಆ ಚಕ್ರದ ಮೇಲಿನ ಆವರಣವನ್ನು ತೆಗೆಯಬೇಕು. ಇದರಿಂದ ಆ ಚಕ್ರದ ಮೇಲೆ ಅರಿವಾಗುವ ಒತ್ತಡ ಕಡಿಮೆಯಾಗಿ ಅದು ಸಹಿಸುವ ಹಂತಕ್ಕೆ ಬರುತ್ತದೆ. ಅದರ ನಂತರ ಆ ಚಕ್ರದ ಮೇಲೆ ಉಪಾಯ ಮಾಡಲು ಪ್ರಾಣಶಕ್ತಿವಹನ ಉಪಾಯ ಪದ್ಧತಿಗನುಸಾರ ಉಪಾಯವನ್ನು ಹುಡುಕಿ ಯಾವ ಮುದ್ರೆ, ನ್ಯಾಸ ಮತ್ತು ನಾಮಜಪ ಬರುತ್ತದೆಯೋ, ಅದನ್ನು ಮಾಡಬೇಕು. ಮುದ್ರೆ, ನ್ಯಾಸ ಮತ್ತು ನಾಮಜಪ ಮಾಡಿ ಆ ಚಕ್ರದ ಮೇಲೆ ಉಪಾಯ ಮಾಡಿದ್ದರಿಂದ ಅಲ್ಲಿರುವ ಆವರಣ ಸಂಪೂರ್ಣ ದೂರವಾಗಿ ನಮಗೆ ಹಗುರ ವೆನಿಸತೊಡಗುತ್ತದೆ. (ಯಾವಾಗ ಯಾವುದಾದರೊಂದು ಚಕ್ರದ ಮೇಲೆ ಬಹಳಷ್ಟು ಒತ್ತಡದ ಅರಿವಾಗುತ್ತದೆಯೋ, ಆಗ ಅಲ್ಲಿ ಆವರಣ ಹೆಚ್ಚು ಪ್ರಮಾಣದಲ್ಲಿರುವುದರಿಂದ ಮುದ್ರೆ, ನ್ಯಾಸ ಮತ್ತು ನಾಮಜಪ ಇವುಗಳ ಉಪಾಯದ ಸ್ಪಂದನಗಳು ಆ ಚಕ್ರದ ವರೆಗೆ ತಲುಪುವುದಿಲ್ಲ. ಆದುದರಿಂದ ಮೊದಲಿಗೆ ಅಲ್ಲಿನ ಆವರಣವನ್ನು ಕೆಲವು ಪ್ರಮಾಣದಲ್ಲಿ ತೆಗೆಯಬೇಕಾಗುತ್ತದೆ. ಅದರ ನಂತರ ಹುಡುಕಿದ ಮುದ್ರೆ, ನ್ಯಾಸ ಮತ್ತು ನಾಮಜಪ ಈ ಉಪಾಯಗಳಿಂದ ಆ ಆವರಣವು ಸಂಪೂರ್ಣ ದೂರವಾಗುತ್ತದೆ.)

೮ ಆ ೧. ಆಜ್ಞಾಚಕ್ರ ಮತ್ತು ಅನಾಹತಚಕ್ರದ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಆವರಣವಿದ್ದರೆ ಮತ್ತು ಶ್ವಾಸವನ್ನು ತೆಗೆದುಕೊಳ್ಳಲು ತೊಂದರೆಯಾಗುತ್ತಿದ್ದಲ್ಲಿ ಮೊದಲಿಗೆ ಆಜ್ಞಾಚಕ್ರದ ಮೇಲಿನ ಆವರಣವನ್ನು ತೆಗೆಯಬೇಕು ! : ಬಹಳಷ್ಟು ಸಲ ಸಾಧಕರ ಆಜ್ಞಾಚಕ್ರ ಮತ್ತು ಅನಾಹತಚಕ್ರದ ಮೇಲೆ ಆವರಣ ಬಂದಿರುತ್ತದೆ. ಯಾವಾಗ ಆವರಣವು ಬಹಳಷ್ಟು ಪ್ರಮಾಣದಲ್ಲಿರುತ್ತದೆಯೋ, ಆಗ ಕೆಲವೊಂದು ಬಾರಿ ಆ ಸಾಧಕನಿಗೆ ಶ್ವಾಸ ತೆಗೆದುಕೊಳ್ಳಲು ತೊಂದರೆಯಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಗಮನಕ್ಕೆ ಬಂದ ವಿಷಯವೆಂದರೆ, ಅನಿಷ್ಟ ಶಕ್ತಿಗಳ ಮುಖ್ಯ ಆಕ್ರಮಣದ ಸ್ಥಾನ ಆಜ್ಞಾಚಕ್ರವಾಗಿರುತ್ತದೆ ಮತ್ತು ಅವು ಅಲ್ಲಿ ಸ್ಥಾನವನ್ನು ನಿರ್ಮಾಣ ಮಾಡಿ ಅನಾಹತಚಕ್ರದ ಮೇಲೆ ತೊಂದರೆದಾಯಕ ಶಕ್ತಿಯನ್ನು ಬಿಟ್ಟು ಶ್ವಾಸವನ್ನು ತೆಗೆದುಕೊಳ್ಳಲು ಅಡಚಣೆಯನ್ನು ತರುತ್ತವೆ. ಇಂತಹ ಸಮಯದಲ್ಲಿ ಮೊದಲಿಗೆ ಅನಾಹತಚಕ್ರದ ಮೇಲಿನ ಆವರಣವನ್ನು ತೆಗೆಯತೊಡಗಿದರೆ ಹೆಚ್ಚು ಪರಿಣಾಮ ಕಂಡು ಬರುವುದಿಲ್ಲ; ಏಕೆಂದರೆ ಅನಿಷ್ಟ ಶಕ್ತಿಗಳ ಸ್ಥಾನ ಆಜ್ಞಾಚಕ್ರವಿರುತ್ತದೆ. ತದ್ವಿರುದ್ಧ ಮೊದಲಿಗೆ ಆಜ್ಞಾಚಕ್ರದ ಮೇಲಿನ ಆವರಣವನ್ನು ತೆಗೆದರೆ ಅನಿಷ್ಟ ಶಕ್ತಿಗಳ ಸ್ಥಾನ ನಷ್ಟವಾಗ ತೊಡಗುವುದರಿಂದ ಅವುಗಳಿಗೆ ಅನಾಹತಚಕ್ರದ ಮೇಲೆ ತೊಂದರೆದಾಯಕ ಶಕ್ತಿಯನ್ನು ಬಿಟ್ಟು ತೊಂದರೆಗಳನ್ನು ನೀಡಲು ಬರುವುದಿಲ್ಲ. ಆದುದರಿಂದ ಅನಾಹತಚಕ್ರದ ಮೇಲಿನ ಆವರಣವು ತನ್ನಿಂದ ತಾನೆ ದೂರವಾಗಿ ಸಾಧಕನಿಗೆ ಶ್ವಾಸವನ್ನು ಸಹಜವಾಗಿ ತೆಗೆದುಕೊಳ್ಳಲು ಆಗುತ್ತದೆ.

೯. ಆಧ್ಯಾತ್ಮಿಕ ಉಪಾಯಗಳನ್ನು (ನಾಮಜಪ, ಮಂತ್ರಜಪ) ಮಾಡುವ ಮೊದಲು ತಮ್ಮ ಮೇಲೆ ಆವರಣ ಇಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು !

ನಾಮಜಪ-ಉಪಾಯ, ಮಂತ್ರ-ಉಪಾಯ ಮುಂತಾದ ಉಪಾಯಗಳನ್ನು ಮಾಡುವ ಮೊದಲೂ ತಮ್ಮ ಮೇಲೆ ಆವರಣವಿಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆವರಣವಿದ್ದರೆ ಅದನ್ನು ತೆಗೆಯಬೇಕು ಮತ್ತು ನಂತರ ಆಧ್ಯಾತ್ಮಿಕ ಉಪಾಯಗಳನ್ನು ಕೊಡಬೇಕು.

೧೦. ಅನಿಷ್ಟ ಶಕ್ತಿಗಳು ನಮ್ಮ ಮೇಲೆ ಆವರಣವನ್ನು ತಂದಿವೆ ಏನು ?, ಎಂಬುದನ್ನು ಆಗಾಗ ನೋಡುವುದು ಆವಶ್ಯಕವಾಗಿದೆ !

ತೊಂದರೆಯಿರುವ ಸಾಧಕರು ಒಂದು ಗಂಟೆಯಲ್ಲಿ ೨-೩ ಬಾರಿ ತಮ್ಮ ಮೇಲೆ ಆವರಣ ಬಂದಿದೆಯೇ ?, ಎಂಬುದನ್ನು ನೋಡಬೇಕು. ಅವರು ತಮ್ಮ ಕೈಯ ಬೆರಳುಗಳನ್ನು ಸ್ವಾಧಿಷ್ಠಾನಚಕ್ರದಿಂದ ಸಹಸ್ರಾರ ಚಕ್ರದವರೆಗೆ ಒಯ್ಯಬೇಕು ಮತ್ತು ಪುನಃ ಅವುಗಳನ್ನು ಸ್ವಾಧಿಷ್ಠಾನ ಚಕ್ರದವರೆಗೆ ತೆಗೆದುಕೊಂಡು ಬರಬೇಕು. ಹೀಗೆ ೨-೩ ಬಾರಿ ಮಾಡಬೇಕು. ಈ ಸಂಪೂರ್ಣ ಕೃತಿಗಾಗಿ ೧-೨ ನಿಮಿಷಗಳು ಬೇಕಾಗುತ್ತವೆ. ತೊಂದರೆಯಿರದ ಸಾಧಕರು ದಿನದಲ್ಲಿ ನಡುನಡುವೆ ತಮ್ಮ ಮೇಲೆ ಆವರಣ ಬರದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತಮ್ಮ ಮೇಲೆ ಆವರಣ ಬಂದಿದ್ದಲ್ಲಿ ಅದನ್ನು ತೆಗೆಯಬೇಕು.

– (ಪೂ.) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೫.೭.೨೦೧೭)

ನಾನು ಅನಿಷ್ಟ (ಕೆಟ್ಟ) ಶಕ್ತಿಗಳ ತೀವ್ರ ತೊಂದರೆಯಿರುವ ಸಾಧಕರಿಗೆ ಪ್ರಾಣ ಶಕ್ತಿವಹನ ಉಪಾಯಪದ್ಧತಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹುಡುಕಿ ಕೊಡುವ ಸೇವೆಯನ್ನು ಮಾಡುತ್ತೇನೆ. ಇಂತಹ ಸಾಧಕರಿಗೆ ಮುದ್ರೆ, ನ್ಯಾಸ ಮತ್ತು ನಾಮಜಪವನ್ನು ಹುಡುಕುವಾಗ, ಸದ್ಯ ಸಾಧಕರ ಮೇಲೆ ಅನಿಷ್ಟ ಶಕ್ತಿಗಳು ಮೇಲಿಂದ ಮೇಲೆ ತೊಂದರೆದಾಯಕ ಆವರಣವನ್ನು ತರುತ್ತಿವೆ, ಹಾಗೆಯೇ ಆ ಆವರಣವನ್ನು ಒಂದು ಬಾರಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ ತೆಗೆದರೂ, ಅದು ಪುನಃ ಪುನಃ ಬರುತ್ತಿದೆ ಎಂಬುದು ಗಮನಕ್ಕೆ ಬಂದಿತು. ಈ ಸಂದರ್ಭದಲ್ಲಿನ ಅಂಶಗಳನ್ನು ಇಲ್ಲಿ ನೀಡಲಾಗಿದೆ. – (ಪೂ.) ಡಾ. ಮುಕುಲ ಗಾಡಗೀಳ, ರಾಮನಾಥಿ ಆಶ್ರಮ, ಗೋವಾ

Leave a Comment