ಸಾಧನೆಯಲ್ಲಿ ಯಾವುದೇ ಅಡಚಣೆ ಅಥವಾ ಯಾವುದೇ ತೊಂದರೆಯನ್ನು ದೂರಗೊಳಿಸಲು ಸಾಧಕರು ಖಾಲಿ ಕಾಗದದಲ್ಲಿ ಶ್ರೀಕೃಷ್ಣನ ನಾಮಜಪದ ಮಂಡಲ ಹಾಕುತ್ತಾರೆ ಹಾಗೂ ಅದರಲ್ಲಿ ಅಡಚಣೆ ಅಥವಾ ತೊಂದರೆಯ ವಿವರಣೆಯನ್ನು ಬರೆದು ಅದು ದೂರವಾಗಬೇಕೆಂದು ಪ್ರಾರ್ಥನೆಯನ್ನು ಬರೆಯುತ್ತಾರೆ. ಅದೇ ರೀತಿ ಸಾಧಕರು ಯಾವುದೇ ಸಂಭಾವ್ಯ ತೊಂದರೆಯನ್ನು ಶ್ರೀಕೃಷ್ಣನ ನಾಮಜಪದ ಮಂಡಲದಲ್ಲಿ ಬರೆದು ‘ಆ ತೊಂದರೆಯಾಗಬಾರದು ಹಾಗೂ ತನ್ನ ಸುತ್ತಲೂ ಶ್ರೀಕೃಷ್ಣನ ನಾಮಜಪದ ರಕ್ಷಣಾಕವಚ ನಿರ್ಮಾಣವಾಗಲಿ’ ಎಂಬ ಪ್ರಾರ್ಥನೆಯನ್ನೂ ಬರೆಯುತ್ತಾರೆ. ಈ ರೀತಿ ಮಾಡಿದ ಉಪಾಯದಿಂದ ತಕ್ಷಣ ಪರಿಣಾಮವಾಗಿರುವುದು ಕಾಣಿಸುತ್ತದೆ ಹಾಗೂ ತೊಂದರೆಯ ತೀವ್ರತೆ ಸುಮಾರು ಶೇ. ೫೦ ರಷ್ಟು ಕಡಿಮೆಯಾಗಿರುವುದು ಅರಿವಾಗುತ್ತದೆ.

ಇದರ ಒಂದು ಸಣ್ಣ ಉದಾಹರಣೆ – ಮಳೆಗಾಲದ ಸಮಯ, ಒಮ್ಮೆ ೮ – ೧೦ ಸಾಧಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ರೈಲು ಒಂದು ಜಾಗದಲ್ಲಿ ೨-೩ ಗಂಟೆ ನಿಂತಿತ್ತು. ಅದರ ಕಾರಣ ತಿಳಿಯುತ್ತಿರಲಿಲ್ಲ. ನಾನು ಅವರಿಗೆ ನಾಮಜಪ ಮಂಡಲದ ಉಪಾಯವನ್ನು ಸೂಚಿಸಿದೆ. ಅವರು ಹಾಗೆ ಮಾಡಿದಾಗ ಕೇವಲ ೨-೩ ನಿಮಿಷಗಳಲ್ಲಿ ಅವರ ರೈಲು ಹೊರಟಿತು.
ಈ ಉಪಾಯದಿಂದ ಲಾಭ ಆಗುವುದರ ಕಾರಣ
ಸಾಧಕರು ನಾಮಜಪದ ಮಂಡಲ ಹಾಕಿದರೆ ಅವರಿಗೆ ಇಷ್ಟು ಸುಲಭದ ಉಪಾಯದಿಂದ ಅಷ್ಟು ಲಾಭ ಹೇಗಾಗುತ್ತದೆ ಎಂದು ವಿಚಾರ ಮಾಡಿದಾಗ ಅರಿವಾದ ಅಂಶವೆಂದರೆ, ‘ಹೆಚ್ಚಿನ ಸಾಧಕರು ಕಳೆದ ೧೫ ರಿಂದ ೨೦ ವರ್ಷಗಳಿಂದ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಗುರುಕೃಪಾಯೋಗಾನುಸಾರ ಸಾಧನೆ ಮಾಡುತ್ತಿದ್ದಾರೆ. ಅವರು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಪ್ರಸ್ತುತ ಕಾಲಕ್ಕೆ ಅನುಕೂಲಕರ ಹಾಗೂ ಈಶ್ವರನಿಗೆ ಅಪೇಕ್ಷಿತವಿರುವ ಸಮಾಜ ಸಾತ್ತ್ವಿಕವಾಗುವ ಸಮಷ್ಟಿ ಸಾಧನೆ ಮಾಡುತ್ತಿದ್ದಾರೆ. ಅವರ ಇಷ್ಟು ವರ್ಷಗಳ ತಪಶ್ಚರ್ಯೆ ಆಗಿರುವುದರಿಂದ ಅವರ ವಾಣಿಯಲ್ಲಿ ಹಾಗೂ ಲೇಖನದಲ್ಲಿ ಚೈತನ್ಯ ನಿರ್ಮಾಣವಾಗಿದೆ. ಆದ್ದರಿಂದ ಅವರು ಬರೆದಿರುವ ದೇವರ ನಾಮಜಪದಿಂದ ಆ ದೇವತೆಯ ಅಸ್ತಿತ್ವ ನಿರ್ಮಾಣವಾಗಿರುವುದರಿಂದ ಆ ನಾಮಜಪ ಫಲದಾಯಕವಾಗುತ್ತದೆ ಹಾಗೂ ಸಾಧಕರಿಗೆ ಆ ನಾಮಜಪದ ಲಾಭವಾಗುತ್ತದೆ.
ಸಾಧಕರು ನಾಮಜಪ ಮಾಡಿದಾಗ ಕೂಡ ಇದೇ ಅನುಭೂತಿಯನ್ನು ಅನುಭವಿಸುತ್ತಾರೆ. ಆದ್ದರಿಂದ ಅವರು ಮಾಡುತ್ತಿರುವ ಪಂಚತತ್ತ್ವಗಳ ನಾಮಜಪ, ಉಚ್ಚ ದೇವತೆಗಳ ನಾಮಜಪ ಹಾಗೂ ‘ಶೂನ್ಯ, ಮಹಾಶೂನ್ಯ, ನಿರ್ಗುಣ ಹಾಗೂ ಓಂ’, ಈ ನಿರ್ಗುಣ ಸ್ತರದ ನಾಮಜಪಗಳು ಅವರಿಗೆ ಸಿದ್ಧವಾದಂತೆಯೇ!
ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ದೇವತೆಗಳ ಕೃಪಾಶೀರ್ವಾದ ಗಳಿಸುವ ಸಾಧನೆಯನ್ನು ಮಾಡಿಸಿಕೊಂಡಿರುವುದಕ್ಕಾಗಿ ಅವರ ಚರಣಗಳಿಗೆ ಎಷ್ಟೇ ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೆ!
– ಸದ್ಗುರು ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ ಗೋವಾ.
ಹೊಸ ವಸ್ತುಗಳನ್ನು ಬಳಸುವ ಮೊದಲು ಇದನ್ನು ಮಾಡಿ…
ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ
ಅಂಗೈಗಳನ್ನು ಜೋಡಿಸಿ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ!
ದೇವತೆಯ ಯಂತ್ರದಲ್ಲಿ ತೊಂದರೆದಾಯಕ ಸ್ಪಂದನಗಳು ಬಂದಿದ್ದರೆ ಅದರ ಮೇಲೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು !
ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’
ಶರೀರದಲ್ಲಿ ಉಷ್ಣತೆ ಹೆಚ್ಚಾದರೆ ಏನು ಮಾಡಬಹುದು?