ಹೊಸ ವಸ್ತುಗಳನ್ನು ಬಳಸುವ ಮೊದಲು ಇದನ್ನು ಮಾಡಿ…

ಯಾವುದೇ ವಸ್ತುವಿನ ಉತ್ಪಾದನೆಯಾಗುತ್ತಿರುವಾಗ ಅದರಲ್ಲಿ ಉತ್ಪಾದನೆಯ ಸ್ಥಳದ ಮತ್ತು ಅದನ್ನು ತಯಾರಿಸುವವರ ಸ್ಪಂದನಗಳು ಬರುತ್ತಿರುತ್ತವೆ. ಕೆಲವೊಮ್ಮೆ ಈ ಸ್ಪಂದನಗಳು ನಕಾರಾತ್ಮಕವಾಗಿರಲೂ ಬಹುದು. ಆ ವಸ್ತುವನ್ನು ಬಳಸುವವರಿಗೆ ಆ ನಕಾರಾತ್ಮಕ ಸ್ಪಂದನಗಳಿಂದ ತೊಂದರೆಯಾಗಬಹುದು. ಇದಕ್ಕಾಗಿ ಯಾವಾಗಲೂ ಸಿದ್ಧ ಉಡುಪು, ಚಪ್ಪಲಿಗಳಂತಹ ವೈಯಕ್ತಿಕ ಬಳಕೆಯ ಹೊಸ ವಸ್ತುಗಳನ್ನು ಬಳಸುವ ಮೊದಲು ಆಧ್ಯಾತ್ಮಿಕ ಸ್ತರದಲ್ಲಿ ಅವುಗಳ ಶುದ್ಧೀಕರಣ ಮಾಡಿಯೇ ಅನಂತರ ಬಳಸಬೇಕು.

ಆಧ್ಯಾತ್ಮಿಕ ಸ್ತರದ ಶುದ್ಧೀಕರಣ ಎಂದರೇನು?

  • ಗೋಮೂತ್ರ ಸಿಂಪಡಿಸುವುದು
  • ವಿಭೂತಿ ಹಚ್ಚುವುದು
  • ಗೋಮೂತ್ರ ಮತ್ತು ವಿಭೂತಿ ಮಿಶ್ರಿತ ನೀರಿನಿಂದ ತೊಳೆಯುವುದು
  • ಬಿಸಿಲು ತೋರಿಸುವುದು

ಇವುಗಳ ಪೈಕಿ ೧-೨ ಮಾಧ್ಯಮಗಳಿಂದ ಶುದ್ಧೀಕರಣ ಮಾಡಬೇಕು.

ಆಧ್ಯಾತ್ಮಿಕ ಸ್ತರದ ಶುದ್ಧೀಕರಣವಾಗಲೆಂದೇ ಹಿಂದಿನ ಕಾಲದಲ್ಲಿ ಹೊಸ ವಸ್ತುಗಳನ್ನು ತಂದ ತಕ್ಷಣ, ಅವನ್ನು ದೇವರ ಚರಣಗಳಲ್ಲಿ ಅರ್ಪಿಸುತ್ತಿದ್ದರು ಮತ್ತು ನಂತರವೇ ಬಳಸುತ್ತಿದ್ದರು. ದೇವರ ಚರಣಗಳಲ್ಲಿ ಅರ್ಪಿಸಿದ ವಸ್ತು ದೇವರ ಪ್ರಸಾದವಾಗುತ್ತದೆ. ಅದರಲ್ಲಿ ಸಾತ್ತ್ವಿಕ (ಸಕಾರಾತ್ಮಕ) ಸ್ಪಂದನಗಳು ಬರುತ್ತವೆ. ಇಂತಹ ವಸ್ತುಗಳ ಬಳಕೆಯಿಂದ ನಮಗೂ ಆಧ್ಯಾತ್ಮಿಕ ಲಾಭವಾಗುತ್ತದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

Leave a Comment