‘ಮಾಸ್ಕ್’ನ ಬಳಕೆ ವಿಷಯದಲ್ಲಿ ಕೆಲವು ಮಹತ್ವದ ಸೂಚನೆಗಳು

ಪ್ರತಿಯೊಬ್ಬರಿಗೂ ‘ಈ ರೋಗಾಣುವಿನಿಂದ ತಮ್ಮ ರಕ್ಷಣೆಯಾಗಬೇಕೆಂದು ತಾವು ಮಾಸ್ಕ್ ಉಪಯೋಗಿಸಬೇಕು’, ಎಂದು ಅನಿಸುತ್ತದೆ. ಆದರೆ ನಿಜವಾಗಿಯೂ ಮಾಸ್ಕ್ ಆವಶ್ಯಕವಿದೆಯೇ ? ಎಂದು ನೋಡೋಣ…

ವಿವಿಧ ಆಪತ್ಕಾಲೀನ ಪ್ರಸಂಗದಲ್ಲಿ ಮಾಡಬೇಕಾದ ಪ್ರಥಮೋಪಚಾರ ಮತ್ತು ಇತರ ಉಪಾಯಯೋಜನೆ

೧. ಪ್ರಥಮ ಚಿಕಿತ್ಸೆಯ ವ್ಯಾಖ್ಯೆ ಆಕಸ್ಮಿಕವಾಗಿ ರೋಗಿಯಾದ (ಅನಾರೋಗ್ಯವಾದ) / ಅಪಘಾತದಿಂದಾಗಿ ಗಾಯಗೊಂಡ ವ್ಯಕ್ತಿಗೆ ಡಾಕ್ಟರ್, ವೈದ್ಯ ಅಥವಾ ಆಂಬುಲೆನ್ಸ್ ಲಭ್ಯವಾಗುವವರೆಗೆ ಮಾಡಬೇಕಾದ ತಾತ್ಕಾಲಿಕ ಅಥವಾ ಪ್ರಾಥಮಿಕ ಸ್ವರೂಪದ ಚಿಕಿತ್ಸೆಗೆ ‘ಪ್ರಥಮ ಚಿಕಿತ್ಸೆ’ ಎನ್ನುತ್ತಾರೆ. ಪ್ರಥಮ ಚಿಕಿತ್ಸೆಯಲ್ಲಿ ವೈದ್ಯಕೀಯ ಚಿಕಿತ್ಸೆಗಳು (ಮೆಡಿಕಲ್ ಟ್ರೀಟ್‌ಮೆಂಟ್) ಒಳಗೊಂಡಿರುವುದಿಲ್ಲ. ೨. ಮೂಲಭೂತ ಉದ್ದೇಶಗಳು ಅ. ರೋಗಿಯ ಪ್ರಾಣಾಪಾಯವನ್ನು ದೂರಗೊಳಿಸುವುದು ಆ. ರೋಗಿಯ ಸ್ಥಿತಿ ಹೆಚ್ಚು ಗಂಭೀರವಾಗಲು ಬಿಡದಿರುವುದು ಇ. ರೋಗಿಯು ಬೇಗನೆ ಗುಣಮುಖನಾಗಲು ಪ್ರಯತ್ನಿಸುವುದು ಈ. ರೋಗಿಗೆ ಶೀಘ್ರ ವೈದ್ಯಕೀಯ ಸಹಾಯ … Read more

ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಬಳಸಬೇಕಾದ AB-CABS ಪದ್ಧತಿ

ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಮೂಲಭೂತ ಜೀವರಕ್ಷಣೆಯ ಸಹಾಯ ನೀಡುವಾಗ ಪ್ರಥಮ ಚಿಕಿತ್ಸಕನು AB-CABS ಪದ್ಧತಿಯನ್ನು ಉಪಯೋಗಿಸುವುದು ಉಪಯುಕ್ತವಾಗಿದೆ.

ಅಪಘಾತಪೀಡಿತರ ಕಡೆಗೆ ದುರ್ಲಕ್ಷ ಮಾಡದೇ ಅವರಿಗೆ ತಕ್ಷಣ ಸಹಾಯ ಮಾಡಿ !

‘ನಮಗೆ ಅಪಘಾತವಾಗಿದ್ದರೆ, ನಾವೂ ಸಹ ಯಾರಿಂದಲಾದರೂ ಸಹಾಯದ ಅಪೇಕ್ಷೆಯನ್ನು ಮಾಡುತ್ತಿದ್ದೆವು’ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಹಾಗೆಯೇ ಮಾನವೀಯತೆಯನ್ನು ತೋರಿಸಿ ಅಪಘಾತ ಪೀಡಿತರಿಗೆ ಸಹಾಯ ಮಾಡಬೇಕು.

ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯಲ್ಲಿನ ಆವಶ್ಯಕ ವಸ್ತುಗಳು

೧. ಜಂತು ರಹಿತ (ಸ್ಟೆರಲೈಸ್ಡ್) ‘ಗಾಸ್ ಡ್ರೆಸಿಂಗ್ಸ್ ೨. ಸ್ಟಿಕಿಂಗ್ ಪ್ಲಾಸ್ಟರ್ ರೋಲ್ ೩. ಬ್ಯಾಂಡ್ ಏಡ್ ೪. ಮೊಣಕೈ, ಮೊಣಕಾಲು ಅಥವಾ ಪಾದಕ್ಕೆ ಕಟ್ಟಲು ‘ಕ್ರೇಪ್ ಬ್ಯಾಂಡೇಜಸ್’ ೫. ಸುತ್ತುಪಟ್ಟಿಗಳು ೬. ತ್ರಿಕೋನ ಪಟ್ಟಿಗಳು ೭. ಹತ್ತಿ ಸುರುಳಿ ೮. ವಿವಿಧ ಸಂಪರ್ಕ ಸಂಖ್ಯೆ ಮತ್ತು ವಿಳಾಸ ಬರೆದ ಪುಸ್ತಕ ಔಷಧಿ ೧. ‘ಡೆಟಾಲ್’ ಅಥವಾ ‘ಸ್ಯಾವ್‌ಲಾನ್’ ೨. ‘ಬೆಟಾಡಿನ್’ ಅಥವಾ ‘ಸೋಫ್ರಾಮೈಸಿನ್ ಮುಲಾಮು’ ೩. ‘ಪ್ಯಾರಸಿಟಮಾಲ್’ ಮಾತ್ರೆಗಳು (೫೦೦ ಮಿ.ಗ್ರಾಂ.) ಪ್ರಥಮ ಚಿಕಿತ್ಸೆಯ ಸಾಧನಗಳು ೧. … Read more