ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಬಳಸಬೇಕಾದ AB-CABS ಪದ್ಧತಿ

ಗಂಭೀರ ಸ್ಥಿತಿಯಲ್ಲಿರುವ ರೋಗಿಯೆಂದರೆ ಯಾವುದೇ ಕಾರಣದಿಂದ ಹೃದಯ ಕ್ರಿಯೆ, ಶ್ವಾಸಕ್ರಿಯೆ ನಿಂತು ಹೋದ, ಪ್ರಜ್ಞೆ ತಪ್ಪಿದ, ಮರಣೋನ್ಮುಖ ಅಥವಾ ಪ್ರತಿಸ್ಪಂದಿಸದ ರೋಗಿ. ಇಂತಹ ರೋಗಿಗೆ ಮೂಲಭೂತ ಜೀವರಕ್ಷಣೆಯ ಸಹಾಯ ನೀಡುವಾಗ ಪ್ರಥಮ ಚಿಕಿತ್ಸಕನು AB-CABS ಪದ್ಧತಿಯನ್ನು ಉಪಯೋಗಿಸುವುದು ಉಪಯುಕ್ತವಾಗಿದೆ. (ಈ ಹಿಂದೆ ಪ್ರಥಮ ಚಿಕಿತ್ಸೆಯ ABC (ಇನ್ನೊಂದು ಹೆಸರು DRSABCD) ಎಂಬ ಪದ್ಧತಿಯನ್ನು ಉಪಯೋಗಿಸಲಾಗುತ್ತಿತ್ತು.) ಆಂಗ್ಲ ಮೊದಲಕ್ಷರಗಳಿಂದ ನಿರ್ಮಾಣಗೊಂಡ AB-CABS ಶಬ್ದವು (ಪದ್ಧತಿಯು) ಮೂಲಭೂತ ಜೀವರಕ್ಷಣೆ ಸಹಾಯದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಮಹತ್ವದ ಹಂತಗಳನ್ನು ಸರಿಯಾದ ಕ್ರಮದಲ್ಲಿ ಗಮನದಲ್ಲಿಡಲು ಪ್ರಥಮ ಚಿಕಿತ್ಸಕನಿಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಗ್ಲ ಮೊದಲಕ್ಷರಗಳ ಸಂಕ್ಷಿಪ್ತ ವಿವರಣೆ ಮುಂದಿನಂತಿದೆ.

A – Airway ? : ರೋಗಿಯ ಉಸಿರಾಟದ ಮಾರ್ಗ ತೆರೆದಿದೆಯೇ ?

B – Breathing ? : ರೋಗಿಯ ಉಸಿರಾಟ ನಡೆಯುತ್ತಿದೆಯೇ ?

C – Chest Compressions : ಎದೆಯನ್ನು ಒತ್ತುವ ಕ್ರಿಯೆ ಮಾಡಿ

A – Opening the Airway : ಉಸಿರಾಟದ ಮಾರ್ಗವನ್ನು ತೆರೆಯಿರಿ.

B – Breathing for the patient (30:2) : ರೋಗಿಯ ಎದೆಯನ್ನು ಒತ್ತುವ ಕ್ರಿಯೆಯನ್ನು ೩೦ ಬಾರಿ ಮಾಡಿದ ನಂತರ ೨ ಬಾರಿ ಬಾಯಿಂದ ಬಾಯಿಗೆ ಉಸಿರು ನೀಡಿ. ರೋಗಿಯ ಉಸಿರಾಟ ನಡೆಯುತ್ತಿದ್ದರೆ (ಅಥವಾ ಮೇಲಿನ ಉಪಚಾರಗಳ ನಂತರ ರೋಗಿಯ ಉಸಿರಾಟ ಸರಿಯಾಗಿ ಮತ್ತು ತಾನಾಗಿಯೇ ಆಗತೊಡಗಿದ ನಂತರ) ಮುಂದಿನವುಗಳನ್ನು ಪರಿಶೀಲಿಸಿ.

S – check for

Serious Bleeding : ತುಂಬಾ ರಕ್ತಸ್ರಾವವಾಗುತ್ತಿದೆಯೇ ?

Shock : ಮರ್ಮಾಘಾತವಾಗಿದೆಯೇ ?

Spinal Injury : ಬೆನ್ನುಮೂಳೆಗಳಿಗೆ ಪೆಟ್ಟಾಗಿದೆಯೇ ?

Leave a Comment