ಮುಂಬರುವ ಭೀಕರ ಕಾಲವನ್ನು ಎದುರಿಸಲು ಪ್ರಥಮ ಚಿಕಿತ್ಸೆ ಕಲಿಯಿರಿ !

ಸಾಮಾನ್ಯವಾಗಿ ಪ್ರಥಮ ಚಿಕಿತ್ಸೆ ಎಂದರೆ ರೋಗಿಗೆ ವೈದ್ಯಕೀಯ ಉಪಚಾರ ಸಿಗುವ ತನಕ ನೀಡಲಾಗುವ ಪ್ರಾಥಮಿಕ ಉಪಚಾರವಾಗಿದೆ !

ಇಂದಿನ ಒತ್ತಡಭರಿತ ಜೀವನಶೈಲಿಯಿಂದಾಗಿ ಆರೋಗ್ಯದ ಮೇಲೆ ವಿಪರೀತ ಪರಿಣಾಮವಾಗಿ ಹೃದ್ರೋಗಗಳಂತಹ ಕೆಲವು ಗಂಭೀರ ರೋಗಗಳ ಪ್ರಮಾಣ ಹೆಚ್ಚಾಗುತ್ತಿದೆ, ಆಧುನಿಕ ಯಂತ್ರಗಳ ಬಳಕೆಯಿಂದ ದುರ್ಘಟನೆಗಳಲ್ಲಾಗಿರುವ ಹೆಚ್ಚಳ ಇತ್ಯಾದಿ ಕಾರಣಗಳೊಂದಿಗೆ ಮುಂಬರುವ ಮೂರನೇ ಮಹಾಯುದ್ಧ, ನೈಸರ್ಗಿಕ ವಿಪತ್ತುಗಳು, ದಂಗೆ ಇತ್ಯಾದಿಗಳ ಬಗ್ಗೆ ವಿಚಾರ ಮಾಡಿ ಸಮಾಜ ಮತ್ತು ರಾಷ್ಟ್ರಕ್ಕಾಗಿ ಕರ್ತವ್ಯವೆಂದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಪ್ರಥಮ ಚಿಕಿತ್ಸೆ ತರಬೇತಿ ಪಡೆಯುವುದು ಆವಶ್ಯಕವಾಗಿದೆ. ನೀರಿನಲ್ಲಿ ಮುಳುಗಿ ಪ್ರಜ್ಞೆ ತಪ್ಪುವುದು, ಆಕಸ್ಮಿಕವಾಗಿ ಹೃದಯಾಘಾತವಾಗುವುದು ಇಂತಹ ಅನೇಕ ಪ್ರಸಂಗಗಳಲ್ಲಿ ವೈದ್ಯಕೀಯಸಹಾಯ ಸಿಗುವ ತನಕದ ಕಾಲಾವಧಿಯು ಅತ್ಯಂತ ಮಹತ್ವದ್ದಾಗಿರುತ್ತದೆ. ಕೆಲವು ನಿಮಿಷಗಳ ಈ ಕಾಲಾವಧಿಯಲ್ಲಿ ಸಿಗುವ ಯೋಗ್ಯ ಪ್ರಥಮ ಚಿಕಿತ್ಸೆಯಿಂದಾಗಿ ರೋಗಿಯು ಮೃತ್ಯುವಿನ ದವಡೆಯಿಂದ ಪಾರಾಗಬಹುದು. ಈ ವಾರದ ವಿಶೇಷಾಂಕವನ್ನು ಓದಿ ಮತ್ತು ‘ಪ್ರಥಮ ಚಿಕಿತ್ಸೆ ತರಬೇತಿಯನ್ನು ಪಡೆದು ಎಲ್ಲ ಪ್ರಜ್ಞಾವಂತ ನಾಗರಿಕರೂ ಉತ್ತಮ ಪ್ರಥಮ ಚಿಕಿತ್ಸಕರಾಗಲಿ, ಹಾಗೆಯೇ ಮುಂಬರುವ ಮಹಾಯುದ್ಧದ ಕಾಲದಲ್ಲಿ ಸಮಾಜ ಮತ್ತು ರಾಷ್ಟ್ರದ ಸೇವೆಗಾಗಿ ಪ್ರತಿಯೊಂದು ಮನೆಯೂ ಪ್ರಥಮ ಚಿಕಿತ್ಸಾ ಕೇಂದ್ರವಾಗಲಿ ಎಂದು ಈಶ್ವರನಚರಣಗಳಲ್ಲಿ ಪ್ರಾರ್ಥನೆ !

ಮೂರನೇ ಮಹಾಯುದ್ಧ

ಯುದ್ಧಕಾಲವೆಂದರೆ ನಾಗರಿಕರ ರಾಷ್ಟ್ರಾಭಿಮಾನದ ಸತ್ವ ಪರೀಕ್ಷೆಯ ಕಾಲ ! ಈ ಕಾಲದಲ್ಲಿ ಸ್ವರಾಷ್ಟ್ರಕ್ಕಾಗಿ ಯೋಗದಾನ ನೀಡುವುದು ಎಲ್ಲ ನಾಗರಿಕರ ಅಲಿಖಿತ ರಾಷ್ಟ್ರೀಯ ಕರ್ತವ್ಯವಾಗಿದೆ. ಯುದ್ಧಜನ್ಯ ಪರಿಸ್ಥಿತಿಯಲ್ಲಂತೂ ರಾಷ್ಟ್ರದ ನಿಜವಾದ ಸಂಪತ್ತಾಗಿರುವ ಮಾನವಶಕ್ತಿ ಅರ್ಥಾತ್ ನಾಗರಿಕರು ಮತ್ತು ಸೈನಿಕರ ಹಾನಿಯು ಅತ್ಯಧಿಕ ಪ್ರಮಾಣದಲ್ಲಾಗುತ್ತದೆ. ಈ ಹಾನಿಯನ್ನು ತಪ್ಪಿಸಲು ಮತ್ತು ಪ್ರತಿಯೊಬ್ಬ ನಾಗರಿಕನನ್ನು ಯುದ್ಧಕ್ಕೆ ಸಜ್ಜಾಗಿಸಲು ಎರಡನೇ ಮಹಾಯುದ್ಧದ ಕಾಲದಲ್ಲಿ ದೇಶದಲ್ಲಿನ ನಾಗರಿಕರ ಸಹಾಯದಿಂದ ಇಂಗ್ಲೆಂಡ್‌ಅಲ್ಲಲ್ಲಿ ಪ್ರಥಮ ಚಿಕಿತ್ಸೆಯ ವಿಶೇಷ ತಂಡಗಳನ್ನು ರಚಿಸಿತ್ತು. ಈ ತಂಡಗಳು ಗಾಯಾಳು ಸೈನಿಕರು ಮತ್ತು ನಾಗರಿಕರಿಗೆ ಸರಿಯಾದ ಸಮಯಕ್ಕೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ರಕ್ಷಿಸುವ, ಹಾಗೆಯೇ ಪುನಃ ಯುದ್ಧಕ್ಕಾಗಿ ಅವರನ್ನು ಸಜ್ಜುಗೊಳಿಸುವ ಮಹತ್ವಪೂರ್ಣ ಕಾರ್ಯವನ್ನು ಮಾಡುತ್ತಿದ್ದವು. ಇಂದು ಜಗತ್ತು ಮೂರನೇ ಮಹಾಯುದ್ಧದ ಹೊಸ್ತಿಲಿನಲ್ಲಿದೆ. ಆದುದರಿಂದ ಮುಂಬರುವ ಯುದ್ಧದ ಕಾಲದಲ್ಲಿ ರಾಷ್ಟ್ರದ ಹಿತಕ್ಕಾಗಿ ಯೋಗದಾನ ನೀಡಲು ಎಲ್ಲ ನಾಗರಿಕರೂ ಪ್ರಥಮ ಚಿಕಿತ್ಸೆಯ ತರಬೇತಿ ಪಡೆದು ರಾಷ್ಟ್ರ ಕರ್ತವ್ಯವನ್ನು ನಿಭಾಯಿಸಲು ಪ್ರಯತ್ನಿಸಬೇಕು.

ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳು

ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳು ಯಾವಾಗ ಭಯಾನಕ ರೂಪವನ್ನು ತಾಳುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದಾದರೊಂದು ರಾಜ್ಯದ ನೈಸರ್ಗಿಕ ವಿಕೋಪವಿರಲಿ ಅಥವಾ ದೇಶಾದ್ಯಂತ ದಂಗೆಗಳ ಮಾಧ್ಯಮದಿಂದ ಭುಗಿಲೇಳುವ ಹಿಂಸಾಚಾರವಿರಲಿ, ಇಂತಹ ವಿಪತ್ತುಗಳಲ್ಲಿ ಮನುಷ್ಯ ಹಾನಿ ಅತ್ಯಲ್ಪವಾಗಬೇಕು ಎಂಬುದಕ್ಕಾಗಿ ಸದಾಸಿದ್ಧರಾಗಿರುವುದು ಸರಕಾರ ಮತ್ತು ಆಡಳಿತದ ಜೊತೆಗೆ ನಾಗರಿಕರ ಹೊಣೆಯೂ ಆಗಿದೆ. ನೆರೆ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳು; ದಂಗೆ ಹಾಗೂ ಅರಾಜಕತೆಯಂತಹ ಮಾನವ ನಿರ್ಮಿತ ವಿಪತ್ತುಗಳು ಮತ್ತು ಯುದ್ಧದಂತಹ ರಾಷ್ಟ್ರೀಯ ವಿಪತ್ತುಗಳಿಂದ ಮನುಷ್ಯಹಾನಿ ಹೆಚ್ಚಾಗುತ್ತದೆ. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಸಾಮಾಜಿಕ ಬಂಧುತ್ವ, ಯುದ್ಧಕಾಲದಲ್ಲಿ ರಾಷ್ಟ್ರಬಂಧುತ್ವ ಮತ್ತು ದಂಗೆಗಳ ಕಾಲದಲ್ಲಿ ಧರ್ಮಬಂಧುತ್ವವನ್ನು ಪ್ರತಿಯೊಬ್ಬರೂ ನಿಭಾಯಿಸಬೇಕಾಗುತ್ತದೆ.

Leave a Comment