ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯಲ್ಲಿನ ಆವಶ್ಯಕ ವಸ್ತುಗಳು

೧. ಜಂತು ರಹಿತ (ಸ್ಟೆರಲೈಸ್ಡ್) ‘ಗಾಸ್ ಡ್ರೆಸಿಂಗ್ಸ್

೨. ಸ್ಟಿಕಿಂಗ್ ಪ್ಲಾಸ್ಟರ್ ರೋಲ್

೩. ಬ್ಯಾಂಡ್ ಏಡ್

೪. ಮೊಣಕೈ, ಮೊಣಕಾಲು ಅಥವಾ ಪಾದಕ್ಕೆ ಕಟ್ಟಲು ‘ಕ್ರೇಪ್ ಬ್ಯಾಂಡೇಜಸ್’

೫. ಸುತ್ತುಪಟ್ಟಿಗಳು

೬. ತ್ರಿಕೋನ ಪಟ್ಟಿಗಳು

೭. ಹತ್ತಿ ಸುರುಳಿ

೮. ವಿವಿಧ ಸಂಪರ್ಕ ಸಂಖ್ಯೆ ಮತ್ತು ವಿಳಾಸ ಬರೆದ ಪುಸ್ತಕ

ಔಷಧಿ

೧. ‘ಡೆಟಾಲ್’ ಅಥವಾ ‘ಸ್ಯಾವ್‌ಲಾನ್’

೨. ‘ಬೆಟಾಡಿನ್’ ಅಥವಾ ‘ಸೋಫ್ರಾಮೈಸಿನ್ ಮುಲಾಮು’

೩. ‘ಪ್ಯಾರಸಿಟಮಾಲ್’ ಮಾತ್ರೆಗಳು (೫೦೦ ಮಿ.ಗ್ರಾಂ.)

ಪ್ರಥಮ ಚಿಕಿತ್ಸೆಯ ಸಾಧನಗಳು

೧. ಬಳಸಿ ಬಿಸಾಡುವ ಕೈಗವಸುಗಳು

೨. ಬಳಸಿ ಬಿಸಾಡುವ ‘ಫೇಸ್ ಮಾಸ್ಕ್

೩. ಸೇಫ್ಟಿಪಿನ್ಸ್, ಚಿಮುಟ (ಫೋರ್‌ಸೆಪ್-ಟ್ವೀಜರ್), ಉಷ್ಣತಾಮಾಪಕ (ಥರ್ಮಾಮೀಟರ್)

೪. ‘ಸರ್ಜಿಕಲ್’ ಕತ್ತರಿ (೧೨ ಸೆಂ.ಮೀ. ಉದ್ದ)

ಇತರ ವಸ್ತುಗಳು

ಕೈ ತೊಳೆಯುವ ಸಾಬೂನು ಮತ್ತು ಚಿಕ್ಕ ಕರವಸ್ತ್ರ

ಪ್ಲಾಸ್ಟಿಕಿನ ಸ್ವಚ್ಛ ಕಾಗದ : ರೋಗಿಯ ಎದೆಯಲ್ಲಿ ತೀಕ್ಷ್ಣ ಆಯುಧ ಸೇರಿಕೊಂಡಿದ್ದರೆ ಅಥವಾ ಅವನ ಎದೆಗೆ ಬಂದೂಕಿನ ಗುಂಡು ತಗಲಿದ್ದರೆ ಈ ಪ್ಲಾಸ್ಟಿಕಿನ ಸ್ವಚ್ಛ ಕಾಗದ ಉಪಯೋಗಕ್ಕೆ ಬರುತ್ತದೆ.

ಗಾಯಗಳನ್ನು ಸ್ವಚ್ಛಗೊಳಿಸಲು ಬಳಸಿದ ಹತ್ತಿಯ ಉಂಡೆಗಳನ್ನು ನಂತರ ಸರಿಯಾಗಿ ವಿಲೇವಾರಿ ಮಾಡುವುದಕ್ಕಾಗಿ/ಸಂಗ್ರಹಿಸಿಡಲು ಪ್ಲಾಸ್ಟಿಕ್ / ಕಾಗದದ ಚೀಲ

ಟಾರ್ಚ್

Leave a Comment