ಪ್ರಥಮ ಚಿಕಿತ್ಸಕನಲ್ಲಿ ಇರಬೇಕಾದ ಗುಣಗಳು

೧. ವ್ಯಾವಹಾರಿಕ ಗುಣಗಳು

೧ ಅ. ವ್ಯವಸ್ಥಿತತೆ : ಪ್ರಥಮ ಚಿಕಿತ್ಸೆ ನೀಡುವಾಗ ಎಲ್ಲ ಕೃತಿಗಳನ್ನು ಶಾಂತ ರೀತಿಯಲ್ಲಿ, ಕಾಳಜಿಯಿಂದ, ಯೋಗ್ಯ ಗತಿಯಿಂದ, ತಪ್ಪಿಲ್ಲದೆ ಮತ್ತು ವ್ಯವಸ್ಥಿತವಾಗಿ ಮಾಡಬೇಕು.

೧ ಆ. ಮಿತವ್ಯಯ : ಪ್ರಥಮ ಚಿಕಿತ್ಸೆಗೆ ತಗಲುವ ವಸ್ತುಗಳ ಲಭ್ಯತೆ ಹೆಚ್ಚಿರಲಿ ಅಥವಾ ಕಡಿಮೆಯಿರಲಿ, ಪ್ರಥಮ ಚಿಕಿತ್ಸೆಯ ವಸ್ತುಗಳನ್ನು ಮಿತವಾಗಿಯೇ ಬಳಸಬೇಕು.

೧ ಇ. ಸಮಯಪ್ರಜ್ಞೆ, ಚಾತುರ್ಯ ಮತ್ತು ಅಧ್ಯಯನ ವೃತ್ತಿ ಇರಬೇಕು : ಘಟನೆಯ ಸ್ಥಳದಲ್ಲಿ ಲಭ್ಯವಿರುವ ಸಾಧನ ಸಾಮಗ್ರಿಗಳು ಮತ್ತು ಲಭ್ಯ ವ್ಯಕ್ತಿಗಳ ಸಹಾಯದಿಂದ ಪ್ರಥಮ ಚಿಕಿತ್ಸೆ ಮಾಡಲು ಸಾಧ್ಯವಾಗಬೇಕಾದರೆ ಸಮಯಪ್ರಜ್ಞೆ, ಚಾತುರ್ಯ ಮತ್ತು ಅಧ್ಯಯನವೃತ್ತಿ ಇರಬೇಕು.

೧ ಈ. ಸಂಘಟನಾ ಕೌಶಲ್ಯ : ಕೆಲವೊಮ್ಮೆ ಅಪಘಾತದ ಸ್ಥಳದಲ್ಲಿ ಸಮನ್ವಯದ ಗೊಂದಲವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಥಮ ಚಿಕಿತ್ಸಕನು ಸಹೋದ್ಯೋಗಿಗಳು ಮತ್ತು ಅಪಘಾತದ ಸ್ಥಳದಲ್ಲಿ ಸಹಾಯಕ್ಕಾಗಿ ಉಪಸ್ಥಿತರಿದ್ದ ಜನರೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ಕೌಶಲ್ಯವನ್ನು ಮೈಗೂಡಿಸಿ ಕೊಳ್ಳಬೇಕು.

೧ ಉ. ನೇತೃತ್ವಗುಣ : ರೋಗಿಯ ನಿರೀಕ್ಷಣೆ ಮಾಡಿ ತಕ್ಷಣ ನಿರ್ಣಯ ತೆಗೆದುಕೊಳ್ಳುವುದು, ರೋಗಿಗೆ ಧೈರ್ಯ ತುಂಬುವುದು, ಅವನಿಗೆ ಅತೀಕಡಿಮೆ ತೊಂದರೆಯಾಗುವಂತೆ ನೋಡಿಕೊಳ್ಳುವುದು, ರೋಗಿಯ ಸಂಬಂಧಿಕರಿಗೆ ಯುಕ್ತಿಯಿಂದ ಸಂದೇಶ ಕೊಡುವುದು, ಪ್ರಥಮ ಚಿಕಿತ್ಸೆ ಮಾಡುವಾಗಲೇ ಆವಶ್ಯಕತೆಗನುಸಾರ ರೋಗಿಯನ್ನು ಆಸ್ಪತ್ರೆಗೆ ಕಳುಹಿಸಲು ಆಯೋಜನೆ ಮಾಡುವುದು ಮುಂತಾದ ಕೃತಿಗಳನ್ನು ಮಾಡಲು ಪ್ರಥಮ ಚಿಕಿತ್ಸಕನು ತನ್ನಲ್ಲಿ ನೇತೃತ್ವ ಗುಣವನ್ನು ವಿಕಸಿತಗೊಳಿಸುವುದು ಅತ್ಯಂತ ಆವಶ್ಯಕವಾಗಿದೆ.

೨. ಮಾನಸಿಕ ಗುಣಗಳು

೨ ಅ. ನಿರ್ಭಯತೆ : ರೋಗಿಯು ರಕ್ತಮಯವಾಗಿರುವುದು, ಸ್ಥಳದಲ್ಲಿಯೇ ಅವನು ಮೃತನಾಗುವುದು ಮುಂತಾದ ಪ್ರಸಂಗಗಳನ್ನು ಪ್ರಥಮ ಚಿಕಿತ್ಸಕನು ನಿರ್ಭಯದಿಂದ ಎದುರಿಸಬೇಕು.

೨ ಆ. ತಾಳ್ಮೆ : ಭೂಕಂಪ, ದೊಡ್ಡ ದೊಡ್ಡ ಕಟ್ಟಡಗಳ ಕುಸಿತ, ನೆರೆಗಳಂತಹ ವಿಪತ್ತುಗಳ ಸಮಯದಲ್ಲಿ ಅನೇಕರು ಗಾಯಗೊಳ್ಳುತ್ತಾರೆ. ಬೇರೆ ತರಹದ ಹಾನಿಗಳೂ ತುಂಬ ಪ್ರಮಾಣದಲ್ಲಿ ಆಗಿರುತ್ತವೆ. ಇಂತಹ ಸಮಯದಲ್ಲಿ ಪ್ರಥಮ ಚಿಕಿತ್ಸಕನು ತಾಳ್ಮೆಯಿಂದ ಮತ್ತು ಮನಸ್ಸಿನಿಂದ ಸ್ಥಿರವಾಗಿದ್ದು ಸರಿಯಾದ ಕೃತಿಗಳನ್ನು ಮಾಡುವುದು ಅಪೇಕ್ಷಿತವಾಗಿದೆ.

೨ ಇ. ಆಜ್ಞಾಪಾಲನೆ ಮಾಡುವುದು : ಪ್ರಥಮಚಿಕಿತ್ಸೆ ಮಾಡುವಾಗ ತಜ್ಞರ ಆಜ್ಞಾಪಾಲನೆ ಮಾಡುವುದು ಅಪೇಕ್ಷಿತವಿರುತ್ತದೆ.

೩. ಆಧ್ಯಾತ್ಮಿಕ ಗುಣಗಳು

೩ ೧. ಪ್ರಥಮ ಚಿಕಿತ್ಸೆಯನ್ನು ‘ಸಾಧನೆ’ ಎಂದು ತಿಳಿಯುವುದು : ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನಗಳಿಗೆ ‘ಸಾಧನೆ’ ಎನ್ನುತ್ತಾರೆ. ‘ಸಕಾಮ ಸಾಧನೆ’ ಮತ್ತು ‘ನಿಷ್ಕಾಮ ಸಾಧನೆ’ ಇವು ಸಾಧನೆಯ ಎರಡು ವಿಧಗಳಾಗಿವೆ. ಸಕಾಮ ಸಾಧನೆಯನ್ನು ವೈಯಕ್ತಿಕ ಆಕಾಂಕ್ಷೆಗಳ (ಉದಾ. ಕುಟುಂಬದ ಏಳಿಗೆ, ಸಂತಾನಪ್ರಾಪ್ತಿ ಇತ್ಯಾದಿಗಳ) ಪೂರ್ತಿಗಾಗಿ ಮಾಡಲಾಗುತ್ತದೆ, ಆದರೆ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡುವುದು, ಹಾಗೆಯೇ ಇತರರಿಗೂ ಪ್ರಥಮ ಚಿಕಿತ್ಸೆಯನ್ನು ಕಲಿಸುವುದು ಸಮಷ್ಟಿಯ ಹಿತಕ್ಕಾಗಿ ಮಾಡಿದ ಒಂದು ರೀತಿಯ ನಿಷ್ಕಾಮ ಸಾಧನೆಯೇ ಆಗಿದೆ !

೩ ಆ. ಅಖಂಡ ನಾಮಜಪ ಮಾಡುವುದು : ಉಪಾಸ್ಯ ದೇವತೆಯ ನಾಮಜಪ ಮಾಡುತ್ತಾ ಮಾಡಿದ ಕರ್ಮವು (ಉದಾ. ಪ್ರಥಮ ಚಿಕಿತ್ಸೆ) ‘ಅಕರ್ಮ ಕರ್ಮ’ವಾಗುತ್ತದೆ, ಅಂದರೆ ಮಾಡುವವನಿಗೆ ಅದರಿಂದ ಪಾಪ-ಪುಣ್ಯ ತಗಲುವುದಿಲ್ಲ, ಬದಲಿಗೆ ಅವನ ಸಾಧನೆಯಾಗುತ್ತದೆ.

೩ ಇ. ಕರ್ತೃತ್ವವನ್ನು ಈಶ್ವರನಿಗೆ ಅರ್ಪಿಸುವುದು : ಪ್ರಥಮ ಚಿಕಿತ್ಸಕನು ರೋಗಿಗೆ ಚಿಕಿತ್ಸೆ ನೀಡುವಾಗ ‘ಪ್ರತಿಯೊಂದು ಕೃತಿಯನ್ನು ಈಶ್ವರನೇ ನನ್ನ ಮಾಧ್ಯಮದಿಂದ ಮಾಡುತ್ತಿದ್ದಾನೆ’ ಎಂಬ ಭಾವವನ್ನು ಇಟ್ಟರೆ ಅವನಿಂದ ‘ನಿಷ್ಕಾಮ ಕರ್ಮಯೋಗ’ವಾಗುತ್ತದೆ.

೩ ಈ. ಪ್ರೀತಿ (ನಿರಪೇಕ್ಷ ಪ್ರೇಮ) : ‘ಪ್ರೇಮ’ ಎಂದರೆ ‘ಪ್ರೀತಿ’ಯಲ್ಲ. ಹೆಚ್ಚಾಗಿ ಪ್ರೇಮದಲ್ಲಿ ಅಪೇಕ್ಷೆ ಇರುತ್ತದೆ. ಪ್ರಥಮ ಚಿಕಿತ್ಸಕನು ಅಪೇಕ್ಷೆಯನ್ನಿಡದೇ ಸೇವಾಭಾವದ ಭೂಮಿಕೆಯಿಂದ ರೋಗಿಗೆ ಚಿಕಿತ್ಸೆ ನೀಡಬೇಕು !

1 thought on “ಪ್ರಥಮ ಚಿಕಿತ್ಸಕನಲ್ಲಿ ಇರಬೇಕಾದ ಗುಣಗಳು”

Leave a Comment