ಅಪಘಾತಪೀಡಿತರ ಕಡೆಗೆ ದುರ್ಲಕ್ಷ ಮಾಡದೇ ಅವರಿಗೆ ತಕ್ಷಣ ಸಹಾಯ ಮಾಡಿ !

ಅಪಘಾತವಾದಾಗ ಅಪಘಾತಪೀಡಿತರಿಗೆ ಸಹಾಯ ಮಾಡಲು ಸಾಮಾನ್ಯವಾಗಿ ಯಾರೂ ಧೈರ್ಯವನ್ನು ಮಾಡುವುದಿಲ್ಲ. ಅಪಘಾತಪೀಡಿತರಿಗೆ ಸಹಾಯ ಮಾಡಿದರೆ ಮುಂದೆ ಸಾಕ್ಷಿ, ಪುರಾವೆಗಳಿಗಾಗಿ ಪೊಲೀಸ್ ಠಾಣೆಗೆ ಓಡಾಡಬೇಕಾಗುತ್ತದೆ. ಈ ತೊಂದರೆಯಿಂದ ದೂರವಿರಲು ಬಹಳಷ್ಟು ಜನರು ಸಹಾಯ ಮಾಡುವ ಇಚ್ಛೆಯಿದ್ದರೂ ಅಪಘಾತಪೀಡಿತರಿಗೆ ಸಹಾಯ ಮಾಡುವುದಿಲ್ಲ.

ಆದರೆ ಅಪಘಾತ ಪೀಡಿತರಿಗೆ ಸಹಾಯ ಮಾಡದೇ ಇರುವುದು ಯೋಗ್ಯವಲ್ಲ. ಅಪಘಾತವಾಗಿರುವುದನ್ನು ನೋಡಿ ನಾಗರಿಕರು ತಕ್ಷಣ ಪೊಲೀಸರ 100 ಕ್ರಮಾಂಕಕ್ಕೆ ದೂರವಾಣಿ ಕರೆ ಮಾಡಿ ಅಪಘಾತದ ಸ್ಥಳ ಮತ್ತು ಅಪಘಾತದ ಗಾಂಭೀರ್ಯದ ಬಗ್ಗೆ ಮಾಹಿತಿಯನ್ನು ನೀಡಬೇಕು.

ತಮ್ಮ ಬಳಿ ಚತುಶ್ಚಕ್ರ ವಾಹನವಿದ್ದರೆ ಅಪಘಾತ ಪೀಡಿತರನ್ನು ಸಮೀಪದ ಆಸ್ಪತ್ರೆಗೆ ಸೇರಿಸಬೇಕು. ಹೀಗೆ ಮಾಡಲು ಸಾಧ್ಯವಿಲ್ಲದಿದ್ದರೆ ರಸ್ತೆಯಲ್ಲಿ ಹೋಗಿ-ಬರುವ ವಾಹನವಿರುವವರ ಬಳಿ ಸಹಾಯ ಕೇಳಿ ಅಥವಾ ಪೊಲೀಸರಿಗೆ ಆಂಬುಲೆನ್ಸ್ ಕಳಿಸಲು ತಿಳಿಸಿ.

ಇಂತಹ ಸಂದರ್ಭದಲ್ಲಿ ‘ತಮ್ಮ ಸಮಯ ವ್ಯರ್ಥವಾಗುತ್ತದೆ’ ಅಥವಾ ‘ನಂತರ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ’ ಎಂಬ ವಿಚಾರಗಳನ್ನು ಮಾಡಬೇಡಿ. ‘ನಮಗೆ ಅಪಘಾತವಾಗಿದ್ದರೆ, ನಾವೂ ಸಹ ಯಾರಿಂದಲಾದರೂ ಸಹಾಯದ ಅಪೇಕ್ಷೆಯನ್ನು ಮಾಡುತ್ತಿದ್ದೆವು’ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಹಾಗೆಯೇ ಮಾನವೀಯತೆಯನ್ನು ತೋರಿಸಿ ಅಪಘಾತ ಪೀಡಿತರಿಗೆ ಸಹಾಯ ಮಾಡಬೇಕು. ಅಪಘಾತ ಪೀಡಿತರಿಗೆ ತಕ್ಷಣ ಸಹಾಯ ದೊರಕಿಸಿ ಕೊಡಲು ಸುಲಭವಾಗಬೇಕೆಂದು ಪೊಲೀಸ್, ಆಂಬುಲೆನ್ಸ್ ಮತ್ತು ಅಗ್ನಿಶಾಮಕದಳಗಳ ದೂರವಾಣಿ ಕ್ರಮಾಂಕಗಳನ್ನು ತಮ್ಮ ಸಂಚಾರಿವಾಣಿಯಲ್ಲಿ ನೋಂದಾಯಿಸಿಡಿ. – (ಪರಾತ್ಪರ ಗುರು) ಡಾ. ಜಯಂತ ಆಠವಲೆ

1 thought on “ಅಪಘಾತಪೀಡಿತರ ಕಡೆಗೆ ದುರ್ಲಕ್ಷ ಮಾಡದೇ ಅವರಿಗೆ ತಕ್ಷಣ ಸಹಾಯ ಮಾಡಿ !”

  1. ಆಧ್ಯಾತ್ಮಿಕ ಚಿಂತನೆ ಮತ್ತು ಜಿಲ್ಲೆಯ ಸಮುದಾಯದ ಪರವಾಗಿ ಹಾರೈಸುವೆ ಕೆ ಜೆ ಪಂಪಾಪತಿ ಶಿವಮೊಗ್ಗ ತಾಲ್ಲೂಕು ಐಟಿ ಘಟಕ ಸಂಘಟನೆ ಕಾರ್ಯದರ್ಶಿ

    Reply

Leave a Comment