ಅಗ್ನಿಹೋತ್ರ – ಮಹತ್ವ ಅಪಾರ, ನಿತ್ಯವೂ ತಪ್ಪದೇ ಮಾಡಿ

ಅಗ್ನಿಹೋತ್ರದ ಮಹತ್ವ

ಪಂಚಮಹಾಯಜ್ಞಗಳಲ್ಲಿ ಸುಲಭವಾಗಿ ಮತ್ತು ಎಲ್ಲರೂ ಮಾಡಬಹುದಾದ ಯಜ್ಞವೆಂದರೆ ಅಗ್ನಿಹೋತ್ರ ! ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ. ಅನಾದಿಕಾಲದಿಂದಲೂ ಅಗ್ನಿಹೋತ್ರವು ಮನುಷ್ಯನ ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ ಆಗುವ ಮಾಲಿನ್ಯವನ್ನು ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ. ದೇವಯಜ್ಞ ಅಥವಾ ಅಗ್ನಿಹೋತ್ರವನ್ನು ಮಾಡುವುದರಿಂದ ವಾಯು, ಮಳೆ ಮತ್ತು ಜಲ ಇವುಗಳ ಶುದ್ಧಿಯಾಗುತ್ತದೆ, ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುತ್ತದೆ.

ಅಗ್ನಿಹೋತ್ರ ಲಾಭಗಳು, ಅಗ್ನಿಹೋತ್ರ ಹೇಗೆ ಮಾಡುವುದು
ಅಗ್ನಿಹೋತ್ರ ಲಾಭಗಳು, ಅಗ್ನಿಹೋತ್ರ ಹೇಗೆ ಮಾಡುವುದು

ಅಗ್ನಿಹೋತ್ರ ಹೋಮ ಸಾಮಗ್ರಿಗಳು

  • ಹವನಪಾತ್ರ : ಅಗ್ನಿಹೋತ್ರಕ್ಕಾಗಿ ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆ
  • ಗೋವಂಶದ ಬೆರಣಿ : ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ತಯಾರಿಸಲು ದೇಶಿ ಗೋವುಗಳ ಸೆಗಣಿಯ ಬೆರಣಿ
  • ಅಕ್ಕಿ (ಅಕ್ಷತೆ) : ಪಾಲಿಶ್ ಮಾಡದ ಅಖಂಡ ಅಕ್ಕಿಯನ್ನೇ ಉಪಯೋಗಿಸಬೇಕು
  • ಆಕಳ ತುಪ್ಪ : ದೇಶಿ ಆಕಳಿನ ತುಪ್ಪವನ್ನು ಬಳಸಿ
  • ಶುದ್ಧ ಕರ್ಪೂರ : ಇದನ್ನು ಅಗ್ನಿ ಪ್ರಜ್ವಲಿಸಲು ಅಥವಾ ಆಹುತಿ ಎಂದು ಅರ್ಪಿಸಲು
  • ಇತರ ಸಾಮಗ್ರಿಗಳು : ಬೆಂಕಿ ಪೊಟ್ಟಣ, ತಾಮ್ರದ ತಟ್ಟೆ, ಚಮಚ, ಕೈಬೀಸಣಿಗೆ, ವಿಭೂತಿ ಸಂಗ್ರಹಿಸಿಡಲು ಗಾಜಿನ ಅಥವಾ ಮಣ್ಣಿನ ಪಾತ್ರೆ

ಅಗ್ನಿಹೋತ್ರ ಮಾಡುವ ಸಮಯ

ಅಗ್ನಿಹೋತ್ರ ಮಾಡುವ ಸಮಯ, ಸೂರ್ಯೋದಯ
ಅಗ್ನಿಹೋತ್ರ ಮಾಡುವ ಸಮಯ, ಸೂರ್ಯಾಸ್ತ

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಮಾಡಬೇಕು

ಸೃಷ್ಟಿಯಲ್ಲಿರುವ ಪ್ರತಿಯೊಂದು ವಿಷಯವು ಸ್ಥಳ, ಕಾಲ ಮತ್ತು ಸಮಯಕ್ಕೆ ಬದ್ಧವಾಗಿರುತ್ತದೆ. ಕಾಲಕ್ಕನುಸಾರ ಪ್ರತಿಯೊಂದು ವಿಷಯದ ಸ್ಥಳ ಮತ್ತು ಅದಕ್ಕನುಸಾರ ಆ ಕೃತಿ ಘಟಿಸಲು ಬೇಕಾಗುವ ಸಮಯವು ಈಶ್ವರನ ಯೋಜನೆಯೇ ಆಗಿರುತ್ತವೆ. ಆದ್ದರಿಂದ ಯಾವುದಾದರೊಂದು ಕೃತಿಯನ್ನು ಕಾಲಕ್ಕನುಸಾರ (ಮುಹೂರ್ತಕ್ಕನುಸಾರ) ಮಾಡಿದರೆ ವ್ಯಕ್ತಿಗೆ ಅಪೇಕ್ಷಿತ ಲಾಭ ಸಿಗುತ್ತದೆ. ಆದುದರಿಂದ ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರವನ್ನು ಮಾಡುವುದಕ್ಕೆ ಮಹತ್ವವಿದೆ. – ಸೌ. ಪ್ರಿಯಾಂಕಾ ಗಾಡ್ಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ನಿಮ್ಮ ಊರಿನ ಸೂರ್ಯೋದಯ ಹಾಗೂ ಸೂರ್ಯಾಸ್ತದ ನಿಖರವಾದ ಸಮಯವನ್ನು ತಿಳಿದುಕೊಳ್ಳಲು ಸನಾತನ ಪಂಚಾಂಗ ಆ್ಯಪ ಉಪಯೋಗಿಸಿ! ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ –  ಗೂಗಲ್ ಪ್ಲೇ ಸ್ಟೋರ್ | ಆ್ಯಪಲ್ ಆ್ಯಪ್ ಸ್ಟೋರ್ 

ಅಗ್ನಿಹೋತ್ರ ಮಾಡುವ ವಿಧಾನ

ಅಗ್ನಿಹೋತ್ರ ಮಾಡುವ ವಿಧಾನ 
ಅಗ್ನಿಹೋತ್ರವನ್ನು ಮಾಡುವಾಗ ಈ ಮುದ್ರೆಯನ್ನು ಮಾಡಿ

ಅಗ್ನಿಹೋತ್ರದ ಪ್ರತ್ಯಕ್ಷ  ಕೃತಿಯನ್ನು ಮಾಡುವ ವಿಧಾನ

ಅ. ಯೋಗ್ಯ ದಿಕ್ಕು : ಅಗ್ನಿಹೋತ್ರ ಮಾಡುವಾಗ ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಆ. ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ಪ್ರಜ್ವಲಿಸುವ ಕೃತಿ : ಹವನಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ ೨–೩ ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು, ಏಕೆಂದರೆ ಹೀಗೆ ಮಾಡುವುದರಿಂದ ಬಾಯಿಯಲ್ಲಿನ ರೋಗಜಂತುಗಳು ಅಗ್ನಿಯಲ್ಲಿ ಹೋಗುತ್ತವೆ. ಅಗ್ನಿಯನ್ನು ಪ್ರಜ್ವಲಿಸಲು ಸೀಮೆಎಣ್ಣೆಯಂತಹ ಜ್ವಲನಶೀಲ ಪದಾರ್ಥಗಳನ್ನು ಉಪಯೋಗಿಸಬಾರದು. ಅಗ್ನಿಯನ್ನು ಧೂಮರಹಿತವಾಗಿ ಪ್ರಜ್ವಲಿಸಬೇಕು, ಅಂದರೆ ಅದರಿಂದ ಹೊಗೆ ಬರಬಾರದು.

ಹವನ ಸಾಮಗ್ರಿಗಳನ್ನು ಅಗ್ನಿಗೆ ಅರ್ಪಿಸುವುದು

ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೂ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಕೆಳಗೆ ನೀಡಿರುವ ಮಂತ್ರಗಳ ಪೈಕಿ ಮೊದಲನೆಯ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮೆ (ಮಧ್ಯದ ಬೆರಳು), ಅನಾಮಿಕೆ (ಕಿರುಬೆರಳಿನ ಹತ್ತಿರದ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ (ಈ ಸಮಯದಲ್ಲಿ ಹೆಬ್ಬೆರಳನ್ನು ಮೇಲ್ಮುಖವಾಗಿ ಅಂದರೆ ಆಕಾಶದತ್ತ ಮಾಡಿಡಬೇಕು) ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) (ಚಿತ್ರ ನೋಡಿ)  ಆಮೇಲೆ ಎರಡನೇ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು.

ಅಗ್ನಿಹೋತ್ರ ಮಂತ್ರ

ಅ. ಸೂರ್ಯೋದಯದ ಸಮಯದಲ್ಲಿ ಪಠಿಸಬೇಕಾದ ಮಂತ್ರ

ಸೂರ್ಯಾಯ ಸ್ವಾಹಾ, ಸೂರ್ಯಾಯ ಇದಂ ನ ಮಮ । ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ ।।

ಆ. ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕಾದ ಮಂತ್ರ

ಅಗ್ನಯೇ ಸ್ವಾಹಾ, ಅಗ್ನಯ ಇದಂ ನ ಮಮ । ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ ।।

ಅಗ್ನಿಹೋತ್ರ ಮಾಡುವಾಗ ಇದನ್ನು ಪಾಲಿಸಿ

ಮಂತ್ರಗಳ ಉಚ್ಚಾರವನ್ನು ಹೇಗೆ ಮಾಡಬೇಕು ?

ಮಂತ್ರಗಳ ಉಚ್ಚಾರವು ಅಗ್ನಿಹೋತ್ರದ ಸ್ಥಳದಲ್ಲಿ ಝೇಂಕರಿಸುವಂತಹ ನಾದಮಯ ರೀತಿಯಲ್ಲಿ, ಹೆಚ್ಚು ಗಡಿಬಡಿಯಿಂದಲೂ ಅಲ್ಲ (ವೇಗವಲ್ಲದ) ಮತ್ತು ಹೆಚ್ಚು ನಿಧಾನವಾಗಿಯೂ ಅಲ್ಲ, ಹೀಗೆ ಸ್ಪಷ್ಟ ಮತ್ತು ಗಟ್ಟಿಧ್ವನಿಯಲ್ಲಿ ಹೇಳಬೇಕು.

ಮಂತ್ರವನ್ನು ಹೇಳುವಾಗ ಭಾವ ಹೇಗಿರಬೇಕು ?

ಮಂತ್ರದಲ್ಲಿನ ಸೂರ್ಯ, ಅಗ್ನಿ, ಪ್ರಜಾಪತಿ ಈ ಶಬ್ದಗಳು ಈಶ್ವರ ವಾಚಕವಾಗಿವೆ. ‘ಸೂರ್ಯ, ಅಗ್ನಿ, ಪ್ರಜಾಪತಿ ಇವರ ಆಂತರ್ಯದಲ್ಲಿರುವ ಪರಮಾತ್ಮನ ಶಕ್ತಿಗೆ ನಾನು ಆಹುತಿಯನ್ನು ಅರ್ಪಿಸುತ್ತಿದ್ದೇನೆ, ಇದು ನನ್ನದಲ್ಲ’ ಎಂಬ ಅರ್ಥದಲ್ಲಿ ಈ ಮಂತ್ರವಿದೆ. ಇಡೀ ಸೃಷ್ಟಿಯನ್ನು ನಿರ್ಮಿಸುವ, ಅದನ್ನು ಧಾರಣೆ ಮಾಡುವ ಮತ್ತು ಅದರ ಪೋಷಣೆ ಮಾಡುವ ಪರಮಾತ್ಮನ ಶಕ್ತಿಯ ಕುರಿತು ಶರಣಾಗತಭಾವವನ್ನು ಈ ಮಂತ್ರದಲ್ಲಿ ಹೇಳಲಾಗಿದೆ; ಆದುದರಿಂದ ಈ ಮಂತ್ರಗಳನ್ನು ಶರಣಾಗತಭಾವದಿಂದ ಹೇಳಬೇಕು.

ಮಂತ್ರವನ್ನು ಯಾರು ಹೇಳಬೇಕು ?

ಮನೆಯಲ್ಲಿ ಒಬ್ಬರು ಅಗ್ನಿಹೋತ್ರವನ್ನು ಮಾಡುವಾಗ, ಮನೆಯಲ್ಲಿರುವ ಇತರ ಸದಸ್ಯರು ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದು, ಆಹುತಿ ನೀಡುವ ವ್ಯಕ್ತಿಯೊಂದಿಗೆ ಅಗ್ನಿಹೋತ್ರದ ಮಂತ್ರವನ್ನು ಹೇಳಬಹುದು. – ಡಾ. ಶ್ರೀಕಾಂತ ಶ್ರೀಗಜಾನನಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

ಅಗ್ನಿಹೋತ್ರವಾದ ನಂತರ ಇದನ್ನು ಮಾಡಿ

ಧ್ಯಾನ ಧಾರಣೆ

ಅಗ್ನಿಹೋತ್ರವಾದ ನಂತರ ವಾತಾವರಣದ ಶುದ್ಧಿಯಾಗುವುದರಿಂದ ಇತರ ಸಮಯಕ್ಕೆ ಹೋಲಿಸಿದರೆ ಮನಸ್ಸು ಏಕಾಗ್ರವಾಗಲು ಹೆಚ್ಚಿನ ಸಮಯ ತಗುಲುವುದಿಲ್ಲಿ. ಆದುದರಿಂದ ಪ್ರತಿಯೊಂದು ಅಗ್ನಿಹೋತ್ರದ ನಂತರ ಸಾಧ್ಯವಿದ್ದಷ್ಟು ಹೆಚ್ಚು ಸಮಯವನ್ನು ಧ್ಯಾನಕ್ಕಾಗಿ ಇಡಬೇಕು. ಕನಿಷ್ಠ ಅಗ್ನಿಯು ಶಾಂತವಾಗುವ ವರೆಗಾದರೂ ಧ್ಯಾನವನ್ನು ಮಾಡಬೇಕು. ಅದರಲ್ಲೂ ಮನೆ ಮಂದಿಯೆಲ್ಲ ಸೇರಿ ಕುಳಿತು ಇಷ್ಟ ದೇವತೆಯ ನಾಮ ಜಪಿಸಿದರೆ ಎಲ್ಲರಿಗೂ ಅದರ ಲಾಭವಾಗುತ್ತದೆ. ಯಾವ ನಾಮ ಜಪಿಸಬೇಕು ಎಂದು ತಿಳಿದಿಲ್ಲವೇ? ಇಲ್ಲಿ ಕ್ಲಿಕ್ ಮಾಡಿ, ತಿಳಿದುಕೊಳ್ಳಿ !

ವಿಭೂತಿ (ಭಸ್ಮ) ತೆಗೆದಿಡಬೇಕು

ಮುಂದಿನ ಅಗ್ನಿಹೋತ್ರವನ್ನು ಮಾಡುವುದಕ್ಕಿಂತ ಸ್ವಲ್ಪ ಮೊದಲು ಹವನಪಾತ್ರೆಯಲ್ಲಿನ ವಿಭೂತಿ (ಭಸ್ಮ)ಯನ್ನು ತೆಗೆದು ಗಾಜಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿಡಬೇಕು.

ಅಗ್ನಿಹೋತ್ರದ ವಿಭೂತಿಯ ಅನೇಕ ಉಪಯೋಗಗಳು

೧. ವಿಭೂತಿಯನ್ನು ಮನೆಯಲ್ಲಿ ಊದುವುದರಿಂದ ವಾಸ್ತು ಶುದ್ಧಿಯಾಗುತ್ತದೆ ೨. ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯ ವಿಕಾರಗಳಲ್ಲಿ ಸುಧಾರಣೆಯಾಗಲು ಸಹಾಯವಾಗುತ್ತದೆ ೩. ಪ್ರಾಣಶಕ್ತಿ ಕಡಿಮೆಯಾಗಿದೆ ಎನಿಸಿದಾಗ ಚಿಟಿಕೆ ವಿಭುತಿಯನ್ನು ಸೇವಿಸುವುದರಿಂದ ಪ್ರಾಣಶಕ್ತಿಯಲ್ಲಿ ಹೆಚ್ಚಳವಾಗುತ್ತದೆ ೪. ಚಿಟಿಕೆ ವಿಭೂತಿಯನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ತೀರ್ಥ ಪ್ರಾಶನದ ಲಾಭವಾಗುತ್ತದೆ ೫. ಹೋಟೆಲ ಅಥವಾ ಹೊರಗಿನ ಊಟ-ತಿಂಡಿಯನ್ನು ಸೇವಿಸುವ ಮೊದಲು ಅದರ ಮೇಲೆ ಚಿಟಿಕೆ ವಿಭೂತಿಯನ್ನು ಸಿಂಪಡಿಸಿದರೆ ಅದರಲ್ಲಿರಬಹುದಾದ ನಕಾರಾತ್ಕಕ ಶಕ್ತಿ ನಾಶವಾಗುತ್ತದೆ ೬. ಕೈದೋಟದಲ್ಲಿರುವ ಗಿಡ-ಮರಗಳಿಗೆ ಈ ವಿಭೂತಿಯನ್ನು ಗೊಬ್ಬರವೆಂದೂ ಉಪಯೋಗಿಸಬಹುದು

ಅಗ್ನಿಹೋತ್ರದ ಅನೇಕ ಲಾಭಗಳು

೧. ಚೈತನ್ಯದಾಯಕ ಮತ್ತು ಔಷಧಿ ವಾತಾವರಣ ನಿರ್ಮಾಣವಾಗುತ್ತದೆ
೨. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ
೩. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳು ಆಗುತ್ತವೆ
೪. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗಿ ಮನೋ ರೋಗಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುತ್ತದೆ
೫. ರೋಗಜಂತುಗಳ ಪ್ರತಿರೋಧ

ಅಗ್ನಿಹೋತ್ರದ ಬಗ್ಗೆ ಇನ್ನಷ್ಟು ಮಾಹಿತಿಯಿರುವ ಲೇಖನಗಳು

ಮುಂಬರುವ ಮೂರನೇ ಮಹಾಯುದ್ಧದಲ್ಲಿ ಉಪಯೋಗಿಸಲಾಗುವ ಅಣ್ವಸ್ತ್ರಗಳಿಂದ ಹರಡುವ ವಿಕಿರಣಗಳ ಮಾರಣಾಂತಿಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಅಗ್ನಿಹೋತ್ರ ಮಾಡಬೇಕು !

– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ

ಹೋಳಿಯ ಬಣ್ಣ ನೈಸರ್ಗಿಗವಾಗಿರಲಿ

ಹೋಳಿಯಲ್ಲಿ ಕೃತಕ ಬಣ್ಣಗಳಿಂದ ಆಡುವ ಮೊದಲು ಇವುಗಳ ಬಗ್ಗೆ ವಿಚಾರ ಮಾಡಿ!

ಬಣ್ಣ ತೆಗೆಯುವ ಉಪಾಯ

ತ್ವಚೆಗೆ ಹಾನಿಯಾಗದಂತೆ ಹೋಳಿ ಬಣ್ಣಗಳನ್ನು ತೆಗೆಯಲು ೧೦ ಸುಲಭ ಉಪಾಯಗಳು

ಲಕ್ಷ್ಮಣನಿಗೆ ಶ್ರೀರಾಮನ ಉಡುಗೊರೆ

ಹೋಳಿಯ ದಿನದ ಬಗ್ಗೆ ಪ್ರಚಲಿತವಾಗಿರುವ ಒಂದು ಕಥೆಯನ್ನು ನೋಡೋಣ

ಸನಾತನದ ‘ಅಗ್ನಿಹೋತ್ರ’ ಗ್ರಂಥ

ಅಗ್ನಿಹೋತ್ರ ಮಾಡುವ ಬಗ್ಗೆ ಅಗ್ನಿಹೋತ್ರ ಪುಸ್ತಕವನ್ನು ನೀವು ಹುಡುಕುತ್ತಿದ್ದರೆ, ಸನಾತನದ ‘ಅಗ್ನಿಹೋತ್ರ ಗ್ರಂಥ’ವನ್ನು ಇಂದೇ ತರಿಸಿಕೊಳ್ಳಿ, ಮತ್ತು ಆದಷ್ಟು ಹೆಚ್ಚು ಜನರಲ್ಲಿ ಅಗ್ನಿಹೋತ್ರದ ಜಾಗೃತಿ ಮೂಡಿಸಿ !

5 thoughts on “ಅಗ್ನಿಹೋತ್ರ – ಮಹತ್ವ ಅಪಾರ, ನಿತ್ಯವೂ ತಪ್ಪದೇ ಮಾಡಿ”

  1. ಅಗ್ನಿ ಹೋತ್ರ ಮಾಡುವ ಮಂತ್ರ ಹಾಗೂ ಪ್ರಯೋಗಗಳನ್ನು ತಿಳಿಯಬೇಕಾಗಿದೆ

    Reply

Leave a Comment