ಅಗ್ನಿಹೋತ್ರ (ಭಾವೀ ಮಹಾಯುದ್ಧದ ಕಾಲದಲ್ಲಿ ಎದುರಾಗುವ ಸಮಸ್ಯೆಗಳ ಸಮಯದಲ್ಲಿ ಹಾಗೂ ದಿನನಿತ್ಯದಲ್ಲಿಯೂ ಉಪಯುಕ್ತ !)

ಸನಾತನದ ಭಾವೀ ಆಪತ್ಕಾಲದ ಸಂಜೀವನಿ ಈ ಗ್ರಂಥಮಾಲಿಕೆಯ ಗ್ರಂಥ !

ಮನೋಗತ

ತ್ರಿಕಾಲಜ್ಞಾನಿ ಸಂತರು, ಮುಂದೆ ಭೀಕರ ಆಪತ್ಕಾಲ ಬರಲಿದೆ ಮತ್ತು ಅದರಲ್ಲಿ ಜಗತ್ತಿನಲ್ಲಿನ ಬಹಳಷ್ಟು ಜನರು ನಾಶವಾಗುವವರಿದ್ದಾರೆ ಎಂದು ಹೇಳಿದ್ದಾರೆ. ಮುಂದೆ ಆಪತ್ಕಾಲ ಬರಲಿದೆ ಎಂದು ಹೇಳುವುದಕ್ಕಿಂತ ಈಗ ಆಪತ್ಕಾಲ ಪ್ರಾಾರಂಭವಾಗಿದೆ ಎನ್ನುವುದೇ ಸೂಕ್ತವಾಗಿದೆ. ಆಪತ್ಕಾಲದಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾಗಬಹುದು. ಈಗ ಜಗತ್ತಿನಲ್ಲಿನ ಎಲ್ಲ ರಾಷ್ಟ್ರಗಳ ಬಳಿ ಎರಡನೇ ಮಹಾಯುದ್ಧಕ್ಕಿಂತ ಮಹಾ ಸಂಹಾರಕ ಅಣ್ವಸ್ತ್ರಗಳಿವೆ.

ಮುಂದೆ ಅವುಗಳನ್ನು ಒಬ್ಬರ ಮೇಲೊಬ್ಬರು ಉಪಯೋಗಿಸಬಹುದು. ಈ ಯುದ್ಧದಲ್ಲಿ ಬದುಕಬೇಕಾದರೆ, ಅಣ್ವಸ್ತ್ರಗಳನ್ನು ನಿಷ್ಕಿ ಪ್ರಭಾವಿ ಉಪಾಯಗಳು ಬೇಕು; ಹಾಗೆಯೇ ಈ ಅಣ್ವಸ್ತ್ರಗಳಿಂದ ಹೊರಸೂಸುವ ವಿಕಿರಣಗಳ ಹರಡುವಿಕೆಯನ್ನು ನಾಶಗೊಳಿಸುವ ಉಪಾಯಗಳೂ ಬೇಕು. ಇದಕ್ಕೆ ಸ್ಥೂಲದಲ್ಲಿನ ಉಪಾಯಗಳು ಉಪಯೋಗಕ್ಕೆ ಬರಲಾರವು, ಏಕೆಂದರೆ ಅಣುಬಾಂಬು ಸಾಮಾನ್ಯ ಬಾಂಬಿಗಿಂತ ಸೂಕ್ಷ್ಮ ವಾಗಿದೆ. ಸ್ಥೂಲ (ಉದಾ. ಬಾಣವನ್ನು ಬಿಟ್ಟು ಶತ್ರುವನ್ನು ನಾಶ ಮಾಡುವುದು), ಸ್ಥೂಲ ಅಧಿಕ ಸೂಕ್ಷ್ಮ (ಉದಾ. ಮಂತ್ರವನ್ನು ಹೇಳಿ ಬಾಣವನ್ನು ಬಿಡುವುದು), ಸೂಕ್ಷ್ಮತರ (ಉದಾ. ಕೇವಲ ಮಂತ್ರವನ್ನು ಹೇಳುವುದು) ಮತ್ತು ಸೂಕ್ಷ್ಮತಮ (ಉದಾ. ಸಂತರ ಸಂಕಲ್ಪ) ಹೀಗೆ ಮುಂದುಮುಂದಿನ ಪ್ರಭಾವಶಾಲಿ ಹಂತಗಳಿವೆ. ಸ್ಥೂಲಕ್ಕಿಂತ ಸೂಕ್ಷ್ಮವು ಅನೇಕ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಆದುದರಿಂದ ಅಣುಬಾಂಬಿನಂತಹ ಪ್ರಭಾವಿ ಸಂಹಾರಕ ವಿಕಿರಣಗಳ ಹರಡುವಿಕೆಯನ್ನು ತಡೆಗಟ್ಟಲು ಸೂಕ್ಷ್ಮದಲ್ಲಿಯೇ ಏನಾದರೂ ಮಾಡಬೇಕಾಗುತ್ತದೆ. ಇದಕ್ಕೆ ಋಷಿಮುನಿಗಳು ಯಜ್ಞದ ಪ್ರಥಮಾವತಾರವಾಗಿರುವ ಅಗ್ನಿಹೋತ್ರವನ್ನು ಮಾಡಲು ಹೇಳಿದ್ದಾರೆ. ಅಗ್ನಿಹೋತ್ರವು ಮಾಡಲು ಅತ್ಯಂತ ಸುಲಭ, ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಆಗುವ ಮತ್ತು ಸೂಕ್ಷ್ಮದಲ್ಲಿ ಪ್ರಭಾವಿ ಪರಿಣಾಮವನ್ನು ಬೀರುವ ಉಪಾಯವಾಗಿದೆ.

ಇದರಿಂದ ವಾತಾವರಣವು ಚೈತನ್ಯಮಯ ವಾಗುತ್ತದೆ ಮತ್ತು ರಕವಚವೂ ನಿರ್ಮಾಣವಾಗುತ್ತದೆ. ಪ್ರತಿದಿನ ಅಗ್ನಿಹೋತ್ರ ಮಾಡುವುದು ಕೇವಲ ಆಪತ್ಕಾಲದ ದೃಷ್ಟಿಯಿಂದ ಮಾತ್ರವಲ್ಲದೇ, ನಿತ್ಯವೂ ಉಪಯುಕ್ತವಾಗಿದೆ. ಈ ಲೇಖನದಿಂದ ವಾಚಕರಿಗೆ ಅಗ್ನಿಹೋತ್ರದ ಪರಿಚಯವಾಗುವುದು. ಅಗ್ನಿ ಹೋತ್ರದ ಬಗ್ಗೆ ಸವಿಸ್ತಾರ ವಿವೇಚನೆಯನ್ನು ಅಗ್ನಿಹೋತ್ರ ಈ ಗ್ರಂಥದಲ್ಲಿ ನೀಡಲಾಗಿದೆ. ವಾಚಕರು ಈ ಗ್ರಂಥವನ್ನು ಅವಶ್ಯವಾಗಿ ತಮ್ಮ ಬಳಿ ಸಂಗ್ರಹಿಸಿಡಬೇಕು.
ಸಂತ–ಮಹಾತ್ಮರು, ಜ್ಯೋತಿಷಿಗಳು ಮುಂತಾದವರು ಹೇಳಿದಂತೆ ಮುಂಬರುವ ಕಾಲವು ಭೀಕರ ಆಪತ್ಕಾಲವಾಗಿದ್ದು ಈ ಕಾಲದಲ್ಲಿ ಸಮಾಜವು ಅನೇಕ ಆಪತ್ತುಗಳನ್ನು ಎದುರಿಸಬೇಕಾಗಬಹುದು. ಇಂತಹ ಆಪತ್ಕಾಲದಲ್ಲಿ ತನ್ನೊಂದಿಗೆ ಕುಟುಂಬದವರ ಆರೋಗ್ಯವನ್ನು ರಕ್ಷಿಸುವುದು ದೊಡ್ಡ ಸವಾಲಾಗಿರುತ್ತದೆ. ಆಪತ್ಕಾಲದಲ್ಲಿ ಸಾರಿಗೆಯ ಸಾಧನಗಳು ಇಲ್ಲದಿರುವುದರಿಂದ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವುದು, ಡಾಕ್ಟರ್ ಅಥವಾ ವೈದ್ಯರನ್ನು ಸಂಪರ್ಕಿಸುವುದು ಮತ್ತು ಮಾರುಕಟ್ಟೆಯಲ್ಲಿ ಔಷಧಿಗಳು ದೊರೆಯುವುದು ಕಠಿಣವಾಗುವುದು. ಈ ಆಪತ್ಕಾಲದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ರೋಗಗಳನ್ನು ಎದುರಿಸುವ ಸಿದ್ಧತೆಯ ಒಂದು ಭಾಗವೆಂದು ಸನಾತನ ಸಂಸ್ಥೆಯು ಭಾವೀ ಆಪತ್ಕಾಲದಲ್ಲಿ ಸಂಜೀವನಿ ಈ ಗ್ರಂಥಮಾಲಿಕೆಯನ್ನು ತಯಾರಿಸಿದೆ. ೨೦.೧೧.೨೦೧೬ ತನಕ ಈ ಮಾಲಿಕೆಯ ೧೨ ಗ್ರಂಥಗಳು ಪ್ರಕಾಶನಗೊಂಡಿವೆ. ಈ ಗ್ರಂಥಮಾಲಿಕೆಯಲ್ಲಿ ಅಗ್ನಿಹೋತ್ರಈ ಗ್ರಂಥದ ಪರಿಚಯವನ್ನು ಈ ಲೇಖನದ ಮೂಲಕ ನೀಡುತ್ತಿದ್ದೇವೆ.

೧. ಅಗ್ನಿಹೋತ್ರ

೧ ಅ. ವ್ಯಾಖ್ಯೆ : ಅಗ್ನಿಹೋತ್ರವೆಂದರೆ ಅಗ್ನ ಯಂತರ್ಯಾಮಿ (ಅಗ್ನಿಯಲ್ಲಿ) ಆಹುತಿಯನ್ನು ಅರ್ಪಿಸಿ ಮಾಡಲಾಗುವ ಈಶ್ವರನ ಉಪಾಸನೆ.

೧ ಆ. ಅಣುಯುದ್ಧದ ಸಂದರ್ಭದಲ್ಲಿ ಅಗ್ನಿಹೋತ್ರದ ಮಹತ್ವ

೧. ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜ–ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘ ಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ರಕ್ಷಾ ಕವಚವನ್ನು ನಿರ್ಮಾಣ ಮಾಡುತ್ತದೆ. ಈ ಕವಚವು ತೇಜದ ಸ್ಪರ್ಶಕ್ಕೆ ಅತ್ಯಂತ ಸಂವೇದನ ಶೀಲವಾಗಿರುತ್ತದೆ. ಸೂಕ್ಷ ಈ ಕವಚವು ನಸುಗೆಂಪು ಬಣ್ಣದಲ್ಲಿ ಕಾಣಿಸುತ್ತದೆ.

೨. ಯಾವಾಗ ಒಳ್ಳೆಯ ವಿಷಯಗಳಿಗೆ ಸಂಬಂಧಿಸಿದ ತೇಜವು ಈ ಕವಚದ ಸಮೀಪ ಬರುತ್ತದೆಯೋ, ಆಗ ಕವಚದಲ್ಲಿನ ನಸುಗೆಂಪು ಬಣ್ಣದ ತೇಜದಲ್ಲಿನ ಕಣಗಳು ಈ ತೇಜವನ್ನು ತಮ್ಮಲ್ಲಿ ಸಮಾವೇಶಗೊಳಿಸಿಕೊಂಡು ಕವಚವನ್ನು ಬಲಶಾಲಿಯಾಗಿ ಮಾಡುತ್ತವೆ.

೩. ರಜ–ತಮಾತ್ಮಕ ತೇಜಕಣಗಳು ಕರ್ಕಶ ಸ್ವರೂಪದಲ್ಲಿ ಆಘಾತವನ್ನು ನಿರ್ಮಾಣ ಮಾಡುತ್ತವೆ; ಆದುದರಿಂದ ಅವು ಹತ್ತಿರ ಬರುವುದು ಕವಚಕ್ಕೆ ಮೊದಲೇ ತಿಳಿಯುತ್ತದೆ ಮತ್ತು ಅದು ಪ್ರತ್ಯುತ್ತರವೆಂದು ತನ್ನಿಂದ ಅನೇಕ ತೇಜಲಹರಿಗಳನ್ನು ವೇಗದಿಂದ ಹೊರಸೂಸಿ ಆ ಕರ್ಕಶ ನಾದವನ್ನೇ ನಾಶ ಮಾಡುತ್ತದೆ ಮತ್ತು ಅದರಲ್ಲಿನ ನಾದವನ್ನು ಉತ್ಪನ್ನ ಮಾಡುವ ತೇಜಕಣಗಳನ್ನೂ ನಾಶ ಮಾಡುತ್ತದೆ. ಇದರಿಂದ ಆ ರಜ–ತಮಾತ್ಮಕ ಲಹರಿಗಳಲ್ಲಿನ ತೇಜವು ಆಘಾತ ಮಾಡಲು ಸಾಮರ್ಥ್ಯಹೀನವಾಗುತ್ತದೆ; ಅಂದರೆ ಬಾಂಬ್‌ನಲ್ಲಿನ ಆಘಾತ ಮಾಡುವ ವಿಘಾತಕ ಸ್ವರೂಪದಲ್ಲಿ ಹೊರಸೂಸುವ ಶಕ್ತಿಯ ವಲಯಗಳು ಮೊದಲೇ ನಾಶವಾಗುವುದರಿಂದ ವಿಕಿರಣಗಳನ್ನು ಹೊರಸೂಸುವ ದೃಷ್ಟಿಯಿಂದ ಬಾಂಬ್ ನಿಷ್ಕ್ರೀಯ ವಾಗುತ್ತದೆ. ಆದುದರಿಂದ ಅದನ್ನು ಹಾಕಿದರೂ ಮುಂದೆ ಆಗುವ ಮನುಷ್ಯಹಾನಿಯು ಕೆಲವು ಪ್ರಮಾಣದಲ್ಲಿಯಾದರೂ ತಡೆಗಟ್ಟಲ್ಪಡುತ್ತದೆ. ಬಾಂಬ್ ಸ್ಫೋಟವಾದರೂ, ಅದರಿಂದ ವೇಗವಾಗಿ ಹೋಗುವ ತೇಜರೂಪಿ ರಜ–ತಮಾತ್ಮಕ ಲಹರಿಗಳು ವಾಯುಮಂಡಲದಲ್ಲಿನ ಸೂಕ್ಷ ಅಗ್ನಿಕವಚಕ್ಕೆ ಅಪ್ಪಳಿಸಿ ಅಲ್ಲಿಯೇ ವಿಘಟನೆಯಾಗುತ್ತವೆ ಮತ್ತು ಅವುಗಳ ಸೂಕ್ಷ್ಮ–ಪರಿಣಾಮವೂ ಅಲ್ಲಿಯೇ ಕೊನೆಗೊಳ್ಳುವುದರಿಂದ ವಾಯುಮಂಡಲವು ಮುಂದಿನ ಪ್ರದೂಷಣೆಯ ಅಪಾಯದಿಂದ ಮುಕ್ತವಾಗುತ್ತದೆ. – ಓರ್ವ ವಿದ್ವಾಂಸ (ಸನಾತನದ ಸದ್ಗುರು (ಸೌ.) ಅಂಜಲಿ ಗಾಡಗೀಳರ ಲೇಖನಗಳು ಓರ್ವ ವಿದ್ವಾಸ, ಗುರುತತ್ತ್ವ ಮುಂತಾದ ಹೆಸರಿನಿಂದ ಪ್ರಸಿದ್ಧವಾಗಿವೆ), ೧೮.೨.೨೦೦೮, ಸಾಯಂ. ೬.೫೫)

೧ ಇ. ಅಗ್ನಿಹೋತ್ರದಿಂದಾಗುವ ಲಾಭಗಳು

೧ ಇ ೧. ಚೈತನ್ಯದಾಯಕ ಮತ್ತು ಔಷಧಿ ವಾತಾವರಣ ನಿರ್ಮಾಣವಾಗುತ್ತದೆ.

೨. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ: ಅಗ್ನಿಹೋತ್ರದಿಂದ ವನಸ್ಪತಿಗಳಿಗೆ ವಾತಾವರಣದಿಂದ ಪೋಷಕದ್ರವ್ಯಗಳು ಸಿಗುತ್ತವೆ ಮತ್ತು ಅವು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತವೆ. ಅಗ್ನಿಹೋತ್ರದ ಭಸ್ಮದಿಂದ ಗದ್ದೆ ಮತ್ತು ವನಸ್ಪತಿಗಳ ಬೆಳವಣಿಗೆಯ ಮೇಲೆ ಉತ್ತಮ ಪರಿಣಾಮವಾಗುತ್ತದೆ. ಇದರ ಪರಿಣಾಮದಿಂದ ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ದವಸಧಾನ್ಯ, ಹಣ್ಣು, ಹೂವು ಮತ್ತು ಕಾಯಿಪಲ್ಲೆಗಳು ಬೆಳೆಯುತ್ತವೆ. – ಹೋಮಾ ಥೆರಪಿ ಹೆಸರಿನ ಕರ ಪತ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕ ನಗರ, ಧುಳೆ, ಮಹಾರಾಷ್ಟ್ರ.

೩. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳು ಆಗುತ್ತವೆ.

ಅ. ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗಿ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುತ್ತವೆ.

ಆ. ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ.

ಇ. ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ.

ಈ. ಮಂದಬುದ್ಧಿಯ ಮಕ್ಕಳು ಅವರ ಮೇಲೆ ಮಾಡಲಾಗುವ ಚಿಕಿತ್ಸೆಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾರೆ.

೪. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗಿ ಮನೋ ರೋಗಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುವುದು :

ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುವ ವಿವಿಧ ಸ್ತರದಲ್ಲಿನ ಸ್ತ್ರೀ–ಪುರುಷರಲ್ಲಿ ಮತ್ತು ಬಾಲ–ವೃದ್ಧರಲ್ಲಿ ಒಂದುರೀತಿಯ ಹೆಚ್ಚಿನ ಸಮಾಧಾನ, ಜೀವನದ ಕಡೆಗೆ ನೋಡುವ ಸಕಾರಾತ್ಮಕ ದೃಷ್ಟಿಕೋನ, ಮನಃಶಾಂತಿ, ಆತ್ಮವಿಶ್ವಾಸ ಮತ್ತು ಕಾರ್ಯದ ಕಡೆಗೆ ಹೆಚ್ಚು ಒಲವು ಇಂತಹ ಗುಣಗಳು ನಿರ್ಮಾಣವಾಗಿ ಹೆಚ್ಚಳವಾಗುತ್ತಿರುವುದು ಅನುಭವಕ್ಕೆ ಬಂದಿರುತ್ತದೆ. ಸಾರಾಯಿ ಮತ್ತು ಇತರ ಹಾನಿಕರ ಮಾದಕದ್ರವ್ಯಗಳ ವ್ಯಸನಾಧೀನ ವ್ಯಕ್ತಿಗಳು ಅಗ್ನಿಹೋತ್ರದ ವಾತಾವರಣದಲ್ಲಿ ಆ ವ್ಯಸನಗಳಿಂದ ಮುಕ್ತರಾಗಬಲ್ಲರು; ಏಕೆಂದರೆ ಅವರಲ್ಲಿ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗುತ್ತದೆ, ಎಂಬುದು ಗಮನಕ್ಕೆ ಬಂದಿದೆ. – ಡಾ. ಶ್ರೀಕಾಂತ ಶ್ರೀಗಜಾನನಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

೫. ನರವ್ಯೂಹದ ಮೇಲಾಗುವ ಪರಿಣಾಮ : ಜ್ವಾಲೆಯಿಂದ ಹೊರ ಬರುವ ಹೊಗೆಯು ಮೆದುಳು ಮತ್ತು ನರವ್ಯೂಹದ ಮೇಲೆ ಪ್ರಭಾವೀ ಪರಿಣಾಮವನ್ನು ಬೀರುತ್ತದೆ.

– ಹೋಮಾ ಥೆರಪಿ ಹೆಸರಿನ ಕರಪತ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕನಗರ, ಧುಳೆ, ಮಹಾರಾಷ್ಟ್ರ.

೬. ರೋಗಜಂತುಗಳ ಪ್ರತಿರೋಧ : ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ ಎಂದು ಕೆಲವು ಸಂಶೋಧಕರಿಗೆ ತಿಳಿದುಬಂದಿದೆ. – ಡಾ. ಶ್ರೀಕಾಂತ ಶ್ರೀಗಜಾನನ ಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

೧ ಈ. ಅಗ್ನಿಹೋತ್ರದ ಸ್ವರೂಪ ಮತ್ತು ಪ್ರಕ್ರಿಯೆ : ಸೂರ್ಯನು ಶಕ್ತಿಯನ್ನು ಕೊಡುತ್ತಾನೆ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತಾನೆ. ಇದರಿಂದ ಪ್ರದೂಷಣೆಯನ್ನು ನಾಶಗೊಳಿಸಲು ಯಾವ ಸ್ಥಿತಿಯು ಆವಶ್ಯಕ ಮತ್ತು ಪೂರಕವಾಗಿರುತ್ತದೆಯೋ, ಅದು ತಾನಾಗಿಯೇ ನಿರ್ಮಾಣವಾಗುತ್ತದೆ. ಇದರಿಂದ ಪೃಥ್ವಿಗೆ ಶಾಂತಸ್ಥಿತಿ ಪ್ರಾಾಪ್ತವಾಗುತ್ತದೆ. ಅಗ್ನಿಹೋತ್ರವು ಜನಿತ್ರವಾಗಿದೆ (ಜನರೇಟರ್) ಮತ್ತು ಅದರಲ್ಲಿನ ಅಗ್ನಿಝೋತವು ಯಂತ್ರವಾಗಿದೆ (ಟರ್ಬೈನ್). ಅಗ್ನಿಯ ಮಾಧ್ಯಮದಿಂದ ಆಕಳ ಬೆರಣಿ, ಆಕಳ ತುಪ್ಪ ಮತ್ತು ಅಕ್ಷತೆಯ ಅಕ್ಕಿ ಈ ಘಟಕಗಳು ಪರಸ್ಪರ ಸಂಯೋಗಗೊಂಡು ಒಂದು ಅಪೂರ್ವ ಶಕ್ತಿಯು ನಿರ್ಮಾಣವಾಗುತ್ತದೆ. ಅದು ಸುತ್ತಮುತ್ತಲಿನ ವಸ್ತುಗಳ ಮೇಲೆ ಅಪ್ಪಳಿಸುತ್ತದೆ, ಅವುಗಳ ಸುತ್ತಲೂ ಹರಡುತ್ತದೆ, ಅವುಗಳಲ್ಲಿನ ವಿಘಾತಕ ಶಕ್ತಿಯನ್ನು ನಿಷ್ಕ್ರೀಯಗೊಳಿಸುತ್ತದೆ. ಇದರಿಂದ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಆಮೇಲೆ ಆ ವಾತಾವರಣದಲ್ಲಿನ ಸಾವಯವ (ಜೈವಿಕ) ದ್ರವ್ಯಗಳಿಗೆ ಬದುಕಲು, ವೃದ್ಧಿಯಾಗಲು ಮತ್ತು ವಿಸ್ತಾರವಾಗಲು ಪೂರಕ ಇಂಧನಗಳ ಪೂರೈಕೆಯನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಅಗ್ನಿಹೋತ್ರ ಪ್ರಕ್ರಿಯೆಯು ವಾಯುಮಂಡಲದ ಹಾನಿಯನ್ನು ಪರೋಕ್ಷವಾಗಿ ತುಂಬಿಸುತ್ತದೆ.

– ಹೋಮಾ ಥೆರಪಿ ಹೆಸರಿನ ಕರಪತ್ರ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕನಗರ, ಧುಳೆ, ಮಹಾರಾಷ್ಟ್ರ.

೧ ಉ. ಹವನ

೧ ಉ ೧. ಹವನ ಪಾತ್ರೆ

೧ ಉ ೧ ಅ. ಪಿರಮಿಡ್ ಆಕಾರದ ತಾಮ್ರದ ಪಾತ್ರೆ : ಅಗ್ನಿಹೋತ್ರಕ್ಕಾಗಿ ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆಯು ಆವಶ್ಯಕವಾಗಿದೆ.

೧ ಉ ೨. ಹವನದ್ರವ್ಯಗಳು

೧ ಉ ೨ ಅ. ಗೋವಂಶದ ಬೆರಣಿ : ಆಕಳ ಸೆಗಣಿಯನ್ನು ತೆಗೆದು ಕೊಳ್ಳಬೇಕು. ಸೆಗಣಿಯಿಂದ ಚಪ್ಪಟೆ ಆಕಾರದಲ್ಲಿ ತೆಳುವಾದ ಬೆರಣಿಗಳನ್ನು ತಟ್ಟಬೇಕು ಮತ್ತು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ಬೆರಣಿಗಳಿಂದ ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ತಯಾರಿಸಬೇಕು.

೧ ಉ ೨ ಆ. ಅಕ್ಕಿ (ಅಕ್ಷತೆ) : ಅಕ್ಕಿಯನ್ನು ಪಾಲಿಶ್ ಮಾಡಿದಾಗ ಅದರಲ್ಲಿನ ಗುಣಧರ್ಮಗಳು ನಾಶವಾಗುತ್ತವೆ; ಆದುದರಿಂದ ಪಾಲಿಶ್ ಮಾಡಿದ ಅಕ್ಕಿಯನ್ನು ಉಪಯೋಗಿಸಬಾರದು. ಅಕ್ಕಿಕಾಳು ತುಂಡಾಗಿದ್ದರೆ ಅವುಗಳಲ್ಲಿನ ಸೂಕ್ಷ್ಮಶಕ್ತಿಯ ಅಂತರ್‌ರಚನೆಯು ನಾಶ ವಾಗುತ್ತದೆ. ಆದುದರಿಂದ ಅವು ಚೈತನ್ಯವನ್ನು ನೀಡುವ ಅಗ್ನಿಹೋತ್ರಕ್ಕೆ ಅಪಾತ್ರವಾಗುತ್ತವೆ. ಆದುದರಿಂದ ಪಾಲಿಶ್ ಮಾಡದ ಅಖಂಡ ಅಕ್ಕಿಯನ್ನೇ ಉಪಯೋಗಿಸಬೇಕು.

೧ ಉ ೨ ಇ. ಆಕಳ ತುಪ್ಪ : ಆಕಳ ಹಾಲಿನಿಂದ ತಯಾರಿಸಿದ ಬೆಣ್ಣೆಯನ್ನು ಮಂದ ಅಗ್ನಿಯ ಮೇಲೆ ಕಾಯಿಸಬೇಕು. ಕೆಳಭಾಗದಲ್ಲಿ ಬಿಳಿ ಬಣ್ಣದ ಪದಾರ್ಥವು ಕಾಣಿಸತೊಡಗಿದಾಗ ಅದನ್ನು ಸೋಸಿ ತೆಗೆಯಬೇಕು. ಉಳಿದ ದ್ರವ್ಯವೆಂದರೆ ತುಪ್ಪ. ಈ ತುಪ್ಪವನ್ನು ಶೀತಪೆಟ್ಟಿಗೆಯಲ್ಲಿ (ಫ್ರಿಜ್‌ನಲ್ಲಿ) ಇಡದಿದ್ದರೂ ಬಹಳ ದಿನಗಳವರೆಗೆ ಚೆನ್ನಾಗಿಯೇ ಉಳಿಯುತ್ತದೆ. ತುಪ್ಪವು ಒಂದು ವಿಶೇಷ ಔಷಧಿ ಪದಾರ್ಥವಾಗಿದೆ. ಅದನ್ನು ಅಗ್ನಿಹೋತ್ರದ ಅಗ್ನಿಯಲ್ಲಿ ಹವ್ಯ ಪದಾರ್ಥವೆಂದು ಉಪಯೋಗಿಸಿದರೆ ಅದು ವಹನ ಪ್ರತಿನಿಧಿಯಾಗಿ ಸೂಕ್ಷ್ಮ ಇಂಧನವನ್ನು (ಶಕ್ತಿಯನ್ನು) ತೆಗೆದುಕೊಂಡು ಹೋಗುವ ಕಾರ್ಯವನ್ನು ಮಾಡುತ್ತದೆ. ಆಕಳ ತುಪ್ಪದಲ್ಲಿ ಶಕ್ತಿಶಾಲೀ ಇಂಧನವು ಸುಪ್ತಾವಸ್ಥೆಯಲ್ಲಿರುತ್ತದೆ.

೧ ಊ. ಅಗ್ನಿಹೋತ್ರವನ್ನು ಸಾಧನೆ ಎಂದು ಪ್ರತಿದಿನ ನಿತ್ಯ ನೇಮದಿಂದ ಮಾಡುವುದು ಆವಶ್ಯಕವಿರುವುದು:

ಅಗ್ನಿಹೋತ್ರ ಮಾಡುವುದು ನಿತ್ಯೋಪಾಸನೆಯಾಗಿದೆ. ಇದೊಂದು ವ್ರತವಾಗಿದೆ. ಈಶ್ವರನು ನಮಗೆ ಈ ಜೀವನವನ್ನು ನೀಡಿದ್ದಾನೆ. ಅದಕ್ಕಾಗಿ ಅವನು ನಮಗೆ ಪ್ರತಿದಿನ ಪೋಷಕವಾಗಿರುವಂತಹದ್ದು ಎಲ್ಲವನ್ನೂ ನೀಡಿರುತ್ತಾನೆ. ಆ ಪ್ರಯುಕ್ತ ಪ್ರತಿದಿನ ಕೃತಜ್ಞತೆ ವ್ಯಕ್ತಪಡಿಸಲು ಪ್ರತಿದಿನ ಅಗ್ನಿಹೋತ್ರ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅಲ್ಲದೇ ಅದನ್ನು ಸಾಧನೆ ಎಂದು ಪ್ರತಿದಿನ ಮಾಡುವುದು ಆವಶ್ಯಕವಾಗಿದೆ.

ಇಂದೇ ಓದಿ ಮತ್ತು ಆಚರಣೆಗೆ ತನ್ನಿ !

Leave a Comment