ನಿಯಮಿತವಾಗಿ ಅಗ್ನಿಹೋತ್ರ ಮಾಡುವವರು ಇದನ್ನೂ ಮಾಡಿ !

ಯಾರು ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುತ್ತಾರೆಯೋ, ಅವರು ಅಗ್ನಿಹೋತ್ರದಲ್ಲಿ ಹೀನಾ ಸುಗಂಧದ್ರವ್ಯದ ಅಥವಾ ಗುಗ್ಗುಳದ ಆಹುತಿಯನ್ನು ನೀಡಿ ಮತ್ತು ಈ ಸಾಮಗ್ರಿಗಳು ಲಭ್ಯವಿಲ್ಲದಿದ್ದರೆ ತುಳಸಿ ಎಲೆ (ಕಡಿಮೆಪಕ್ಷ ೫) ಅಥವಾ ದೇಶಿ ಹಸುವಿನ ಗೋಮೂತ್ರ (ಕಡಿಮೆ ಪಕ್ಷ ೧ ಚಮಚ) ಅಥವಾ ಕರ್ಪೂರದ ೪-೫ ತುಂಡುಗಳ ಆಹುತಿಯನ್ನು ಕೊಡಬೇಕು !

೧. ಹೀನಾ ಸುಗಂಧದ್ರವ್ಯದ ಅಹುತಿಯನ್ನು ಕೊಟ್ಟರೆ ಸೂಕ್ಷ್ಮ ಸ್ತರದಲ್ಲಾಗುವ ಪರಿಣಾಮ

ಹೀನಾ ಸುಗಂಧದ್ರವ್ಯದಲ್ಲಿ ಶ್ರೀಮಹಾಲಕ್ಷ್ಮಿದೇವಿಯ ತಾರಕ ಶಕ್ತಿ ಕಾರ್ಯನಿರತವಾಗಿರುತ್ತದೆ. ಅಗ್ನಿಹೋತ್ರವನ್ನು ಮಾಡುವಾಗ ಹೀನಾ ಸುಗಂಧದ್ರವ್ಯದ ಆಹುತಿಯನ್ನು ಕೊಡುವುದರಿಂದ ಸುಗಂಧದ್ರವ್ಯದಲ್ಲಿರುವ ಆಪಮಯ ಘಟಕಗಳ ವಿಘಟನೆಯಾಗಿ ಅವುಗಳು ಸುಗಂಧಿತ ಧೂಮವಾಗಿ ರೂಪಾಂತರವಾಗುತ್ತದೆ. ಈ ಸುಗಂಧದಲ್ಲಿ ಪ್ರಾಣಶಕ್ತಿಯ ಗಂಧಮಯ ಲಹರಿ ಮತ್ತು ಧೂಮದಲ್ಲಿ ಪ್ರಾಣಶಕ್ತಿಯ ಮೂಲ ವಾಯುರೂಪವು ಕಾರ್ಯನಿರತವಾಗುತ್ತದೆ. ಆದುದರಿಂದ ಹೀನಾ ಸುಗಂಧದ್ರವ್ಯದ ಆಹುತಿಯನ್ನು ಕೊಟ್ಟ ನಂತರ ಹೋಮದಿಂದ ಬರುವ ಸುಗಂಧದ ಧೂಮವು ಶ್ವಾಸದ ಮೂಲಕ ವ್ಯಕ್ತಿಯ ದೇಹದಲ್ಲಿ ಹೋದ ನಂತರ ಚೈತನ್ಯಯುಕ್ತ ಸುಗಂಧದ ವಾಯುಲಹರಿಗಳಿಂದ ಅವರ ಉಸಿರಾಟದ ಮಾರ್ಗದಲ್ಲಿನ ಅಡಚಣೆಗಳು ದೂರವಾಗುತ್ತವೆ ಮತ್ತು ಅವರ ಪ್ರಾಣಶಕ್ತಿಯೂ ಹೆಚ್ಚಾಗಲು ಸಹಾಯವಾಗುತ್ತದೆ.

೨. ಗುಗ್ಗುಳ ಧೂಪದ ಆಹುತಿ ನೀಡುವುದರಿಂದಾಗುವ ಪರಿಣಾಮ

ಹೋಮದಲ್ಲಿ ಗುಗ್ಗುಳ ಧೂಪದ ಆಹುತಿಯನ್ನು ಕೊಟ್ಟಾಗ ಗುಗ್ಗುಳದ ಸುಗಂಧದಿಂದ ವಾತಾವರಣದಲ್ಲಿ ದತ್ತ ತತ್ತ್ವದ ಸುಗಂಧ ಲಹರಿಗಳು ಪ್ರಕ್ಷೇಪಿತವಾಗುವುದರಿಂದ ವ್ಯಕ್ತಿಯ ಸೂಕ್ಷ್ಮಕೋಶಗಳ ಶುದ್ಧಿಯಾಗಿ ಅವನಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆ ಹೆಚ್ಚಾಗುತ್ತದೆ. ಅದೇ ರೀತಿ ಹೋಮದಲ್ಲಿರುವ ಗುಗ್ಗುಳ ಧೂಪದ ಸಾತ್ತ್ವಿಕ ಧೂಮದ ಕಡೆಗೆ ವಾಸ್ತು ಮತ್ತು ಅದರ ಸುತ್ತಮುತ್ತಲಿನ ವಾತಾವರಣದಲ್ಲಿನ ರಜ-ತಮ ಪ್ರಧಾನ ತೊಂದರೆದಾಯಕ (ಕಪ್ಪು) ಶಕ್ತಿಯ ಲಹರಿಗಳು ಆಕರ್ಷಿಸುತ್ತವೆ ಮತ್ತು ಗುಗ್ಗುಳದಲ್ಲಿನ ದೇವಿತತ್ತ್ವದಿಂದ ಈ ತೊಂದರೆದಾಯಕ ಶಕ್ತಿ ಲಹರಿಗಳ ವಿಘಟನೆಯಾಗುತ್ತದೆ. ಇದರಿಂದ ವಾಸ್ತುವಿನಲ್ಲಿರುವ ವ್ಯಕ್ತಿಗೆ ಸೂಕ್ಷ್ಮದಿಂದ ವಿವಿಧ ಪ್ರಕಾರದ ಶಾರೀರಿಕ ಮತ್ತು ಮಾನಸಿಕ ಸ್ತರದಲ್ಲಿ ತೊಂದರೆ ಕೊಡುವ ಕೆಟ್ಟ ಶಕ್ತಿಗಳ ನಾಶವಾಗಿ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಲಭಿಸುತ್ತದೆ.

೩. ಹೀನಾ ಸುಗಂಧದ್ರವ್ಯ ಅಥವಾ ಗುಗ್ಗುಳ ಧೂಪ ಇಲ್ಲದಿದ್ದರೆ ಇದನ್ನು ಮಾಡಿ

೩ ಅ. ತುಳಸಿ ಎಲೆಗಳ ಆಹುತಿಯನ್ನು ನೀಡುವುದು

ತುಳಸಿಯ ಎಲೆಗಳಲ್ಲಿ ವಿಷ್ಣುತತ್ತ್ವ ಮತ್ತು ಪ್ರಾಣಶಕ್ತಿಯು ಬಹಳಷ್ಟು ಪ್ರಮಾಣದಲ್ಲಿರುತ್ತದೆ. ಆದುದರಿಂದ ಅಗ್ನಿಹೋತ್ರವನ್ನು ಮಾಡುವಾಗ ಕಡಿಮೆಪಕ್ಷ ತುಳಸಿಯ ೫ ಎಲೆಗಳ ಆಹುತಿಯನ್ನು ಕೊಟ್ಟರೆ ವಾತಾವರಣದಲ್ಲಿ ಧೂಮದ ರೂಪದಲ್ಲಿನ ವಿಷ್ಣುತತ್ತ್ವಮಯ ವಾಯುಲಹರಿಗಳು ಮತ್ತು ಪ್ರಾಣಶಕ್ತಿಯುಕ್ತ ದೈವೀ ಸುಗಂಧವು ಹರಡುತ್ತದೆ. ವಿಷ್ಣುತತ್ತ್ವಮಯ ವಾಯುಲಹರಿಗಳಿಂದ ವಾಸ್ತುವಿನ ಶುದ್ಧಿಯಾಗುತ್ತದೆ. ಪ್ರಾಣಶಕ್ತಿ ಯುಕ್ತ ದೈವೀ ಸುಗಂಧದ ಲಹರಿಗಳಿಂದ ವಾಸ್ತುವಿನಲ್ಲಿರುವ ವ್ಯಕ್ತಿಗಳ ಪ್ರಾಣಶಕ್ತಿಯು ಹೆಚ್ಚಾಗುತ್ತದೆ.

೩ ಆ. ಗೋಮೂತ್ರದ ಆಹುತಿಯನ್ನು ನೀಡುವುದು

ಗೋಮೂತ್ರದಲ್ಲಿರುವ ಮಾರಕ ಶಕ್ತಿಯಿಂದ ವಾಸ್ತುವಿನಲ್ಲಿರುವ ಮತ್ತು ಅದರ ಸುತ್ತಮುತ್ತಲಿನ ವಾತಾವರಣದಲ್ಲಿರುವ ಸೂಕ್ಷ್ಮಜೀವಿಗಳು (ಜಂತುಗಳ) ನಾಶವಾಗುತ್ತವೆ. ಈ ರೀತಿ ತುಳಸಿ ಎಲೆಗಳ ಮತ್ತು ಗೋಮೂತ್ರದ ಆಹುತಿಯನ್ನು ಅಗ್ನಿಹೋತ್ರದ ಹೋಮದಲ್ಲಿ ಕೊಡುವುದರಿಂದ ವಾಸ್ತು ಶುದ್ಧವಾಗಿ ವಾಸ್ತುವಿನ ಸುತ್ತಲೂ ಸೂಕ್ಷ್ಮ ರಕ್ಷಣಾಕವಚ ನಿರ್ಮಾಣವಾಗುತ್ತದೆ.

೩ ಇ. ಕರ್ಪೂರದ ಆಹುತಿಯನ್ನು ನೀಡುವುದು

ಕರ್ಪೂರದಲ್ಲಿ ಶಿವತತ್ತ್ವವಿರುವುದರಿಂದ ಅಗ್ನಿಹೋತ್ರದ ಹೋಮದಲ್ಲಿ ಕರ್ಪೂರದ ತುಂಡುಗಳ ಆಹುತಿ ಕೊಟ್ಟರೆ ಅದರಿಂದ ಶಿವತತ್ತ್ವಮಯ ತಾರಕ-ಮಾರಕ ಶಕ್ತಿ ಮತ್ತು ಚೈತನ್ಯದ ಲಹರಿಗಳು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ. ಅದರಿಂದ ವಾಸ್ತುವಿನ ಶುದ್ಧಿಯಾಗಿ ವಾಸ್ತುವಿನ ಸುತ್ತಲೂ ಸೂಕ್ಷ್ಮದಲ್ಲಿ ರಕ್ಷಣಾಕವಚ ನಿರ್ಮಾಣವಾಗುತ್ತದೆ.

೪. ಅಗ್ನಿಹೋತ್ರದ ಹೋಮದಲ್ಲಿ ಹೀನಾ, ಗುಗ್ಗುಳ, ತುಳಸಿ ಎಲೆ, ಗೋಮೂತ್ರ ಅಥವಾ ಕರ್ಪೂರದ ಆಹುತಿ ಕೊಟ್ಟರೆ ವಿವಿಧ ಸ್ತರಗಳಲ್ಲಿ ಆಗುವ ಲಾಭಗಳು

ಅಗ್ನಿಹೋತ್ರದ ಹೋಮದಲ್ಲಿ ಹೀನಾ, ಗುಗ್ಗುಳ, ತುಳಸಿ ಎಲೆ, ಗೋಮೂತ್ರ ಅಥವಾ ಕರ್ಪೂರ ಇವುಗಳ ಆಹುತಿಯನ್ನು ಕೊಟ್ಟಾಗ ಹೋಮದಿಂದ ಬರುವ ಸುಗಂಧದ ಧೂಮವನ್ನು ತೆಗೆದುಕೊಳ್ಳಬೇಕು ಮತ್ತು ದೀರ್ಘ ಶ್ವಾಸವನ್ನು ತೆಗೆದುಕೊಂಡು ಈ ಧೂಮವನ್ನು ಹೆಚ್ಚೆಚ್ಚು ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಶರೀರದಲ್ಲಿ ಶ್ವಾಸದ ಮೂಲಕ ಹೋದ ಔಷಧಿ ಧೂಮದ ಲಾಭವು ಕೇವಲ ಶಾರೀರಿಕ ಸ್ತರದಲ್ಲಿಯೇ ಅಲ್ಲ, ಆಧ್ಯಾತ್ಮಿಕ ಸ್ತರದಲ್ಲಿಯೂ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ. ಇದರಿಂದ ವ್ಯಕ್ತಿಗೆ ಆಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ನಾಶವಾಗಲು ಸಹಾಯವಾಗುತ್ತದೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಲಭಿಸಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೧.೨೦೨೨)

2 thoughts on “ನಿಯಮಿತವಾಗಿ ಅಗ್ನಿಹೋತ್ರ ಮಾಡುವವರು ಇದನ್ನೂ ಮಾಡಿ !”

  • Namaskar Shyamala ji

   There are numerous online platforms which will cater to this. We are however unable to recommend any particular platform or vendor.

   Warm regards,
   Sanatan Sanstha

   Reply

Leave a Comment