ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!

Article also available in :

ಎಷ್ಟೋ ವರ್ಷಗಳಿಂದ ಭಾರತದಾದ್ಯಂತ ಸಣ್ಣಪುಟ್ಟ ನೆಪಗಳನ್ನು ಒಡ್ಡಿ ದಂಗೆಗಳನ್ನು ಎಬ್ಬಿಸಲಾಗುತ್ತಿದೆ. ಮುಂಬೈನಲ್ಲಿ ನಡೆದ ದಂಗೆ, ಆಜಾದ್ ಮೈದಾನದ ದಂಗೆ, ಸಿಎಎ ಕಾಯಿದೆಯ ವಿರುದ್ಧ ನಡೆದ ಆಂದೋಲನದ ನಂತರ ದೆಹಲಿಯಲ್ಲಿ ನಡೆದ ದಂಗೆ ಮತ್ತು 2020-21ರ ರೈತ ಆಂದೋಲನದ ನಂತರ ಜನವರಿ 26 ರಂದು ನಡೆದ ದಂಗೆ ಇವು ಕೆಲವು ಉದಾಹರಣೆಗಳಾಗಿವೆ. ದಂಗೆಗಳಲ್ಲಿ ನಡೆಯುವ ಹತ್ಯೆ, ಕಿಚ್ಚಿಡುವಿಕೆ, ಹೊಡೆದಾಟ, ಸ್ತ್ರೀಯರ ಮೇಲಿನ ದೌರ್ಜನ್ಯ, ಪೊಲೀಸರ ಮೇಲೆ ನಡೆಯುವ ಮಾರಣಾಂತಿಕ ಹಲ್ಲೆ ಮುಂತಾದವುಗಳನ್ನು ನೋಡಿದಾಗ ಸಾಮಾನ್ಯರ ಎದೆ ಝಲ್ಲೆನಿಸುತ್ತದೆ. ‘ಬರುವ ಆಪತ್ಕಾಲದಲ್ಲೂ ಪೂರ್ವನಿಯೋಜಿತ ದಂಗೆಗಳು ನಡೆಯಬಹುದು’ ಎಂಬ ವಿಚಾರದಿಂದ ಒತ್ತಡ ಉಂಟಾಗಬಹುದು.

ಪ್ರವಾಹ, ಭೂಕಂಪ, ದಂಗೆ, ಮಹಾಯುದ್ಧ ಮುಂತಾದ ಆಪತ್ತುಗಳ ಸಮಯದಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಹ ಸಮಯದಲ್ಲಿ ಎಲ್ಲೆಡೆ ವಿಧ್ವಂಸವಾಗುವುದು, ಬೆಂಕಿ ಹತ್ತುವುದು, ಗಲ್ಲಿಗಲ್ಲಿಗಳಲ್ಲಿ ಮೃತದೇಹಗಳು ಬಿದ್ದಿರುವುದು ಇಂತಹ ಸ್ಥಿತಿ ಎದುರಿಗಿರುತ್ತದೆ. ಇಂತಹ ಘಟನೆಗಳನ್ನು ನೋಡಿ ಅಥವಾ ಕೇಳಿ ಅನೇಕರಿಗೆ ಮನಸ್ಸು ಅಸ್ಥಿರವಾಗುವುದು, ಒತ್ತಡ ಬರುವುದು, ಚಿಂತೆಯಾಗುವುದು, ಭಯವಾಗುವುದು, ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗದಿರುವುದು ಮುಂತಾದ ತೊಂದರೆಗಳಾಗುತ್ತವೆ. ಅನೇಕರಿಗೆ ಭವಿಷ್ಯದಲ್ಲಿ ಬರಬಹುದಾದ ಇಂತಹ ಆಪತ್ತುಗಳ ಕಲ್ಪನೆಯಿಂದಲೂ ಮನಸ್ಸು ಅಸ್ವಸ್ಥವಾಗುತ್ತದೆ ಹಾಗೆಯೇ ಸಂಬಂಧಿಕರಲ್ಲೂ ಭಾವನಾತ್ಮಕವಾಗಿ ಸಿಲುಕಿಕೊಳ್ಳುವಂತಾಗುತ್ತದೆ. ಈ ರೀತಿ ಆಗಬಾರದು, ಅಂದರೆ ಮನಸ್ಸಿನ ಸಮತೋಲನ ತಪ್ಪದಂತೆ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗಬೇಕು ಎಂದರೆ, ಇದಕ್ಕಾಗಿ ‘ಸ್ವಯಂಸೂಚನೆ’ಗಳನ್ನು ತೆಗೆದುಕೊಳ್ಳಬಹುದು. ಆಪತ್ಕಾಲದ ಇಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಮನೋಬಲ ನಿರ್ಮಾಣವಾಗಲಿ ಎಂದು ‘ಸ್ವಯಂಸೂಚನೆ-ಉಪಚಾರ ಪದ್ಧತಿ’ಯನ್ನು ಬಳಸಬೇಕು. ಇದರಿಂದ ಮನಸ್ಸಿನ ಮೇಲಿನ ಒತ್ತಡ ದೂರವಾಗುವುದು!

ಸ್ವಯಂಸೂಚನೆ ಸತ್ರ ಎಂದರೆ ಏನು ಮತ್ತು ಅದನ್ನು ಹೇಗೆ ಮಾಡಬೇಕು?

ಸ್ವಭಾವದೋಷಗಳ ಮೇಲೆ ಆವಶ್ಯಕವಿರುವ ಸೂಚನೆಯನ್ನು ಬಾಹ್ಯಮನಸ್ಸಿನಿಂದ ಅಂತರ್ಮನಸ್ಸಿಗೆ ನೀಡುವ ಪ್ರಕ್ರಿಯೆಯನ್ನು ‘ಸ್ವಯಂಸೂಚನೆ’ ಎನ್ನುತ್ತಾರೆ. ಉಪಾಸ್ಯದೇವತೆ ಅಥವಾ ಗುರುಗಳಿಗೆ ‘ಸ್ವಯಂಸೂಚನೆಯು ನನ್ನ ಅಂತರ್ಮನಸ್ಸಿನವರೆಗೆ ತಲುಪಲಿ’ ಎಂದು ಪ್ರಾರ್ಥಿಸಬೇಕು. ಮನಸ್ಸು ಏಕಾಗ್ರವಾಗಲು 2 ನಿಮಿಷ ನಾಮಜಪ ಮಾಡಿ ಸ್ವಯಂಸೂಚನೆ ನೀಡಬೇಕು ಮತ್ತು ಕೊನೆಯಲ್ಲಿ ಕೃತಜ್ಞತೆ ವ್ಯಕ್ತಪಡಿಸಬೇಕು. ಈ ಸೂಚನೆಯನ್ನು 5 ಬಾರಿ ಏಕಾಗ್ರತೆಯಿಂದ ಓದಬೇಕು ಅಥವಾ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು. ಇಂತಹ ಸೂಚನೆಯ 5 ರಿಂದ 10 ಸತ್ರಗಳನ್ನು ಮಾಡಬೇಕು. ಅಲ್ಪಾವಧಿಯಲ್ಲಿ ಮನಸ್ಸಿನ ಮೇಲಿನ ಒತ್ತಡ ದೂರವಾಗುವುದನ್ನು ಗಮನಿಸಬಹುದು.

ಸ್ವಯಂಸೂಚನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

‘ತನ್ನ ಮನೆಯ ಹತ್ತಿರ ದಂಗೆಯಾಗಬಹುದು’ ಎಂಬ ವಿಚಾರದಿಂದ ಬಂದ ಒತ್ತಡ ದೂರವಾಗಲು ನೀಡಬೇಕಾದ ಸ್ವಯಂಸೂಚನೆಗಳು

ಅ. ಉದಾಹರಣೆ 1

‘ಆಪತ್ಕಾಲದ ತೀವ್ರತೆಯು ಈಗ ಹೆಚ್ಚುತ್ತಲೇ ಹೋಗಲಿದೆ. ಆದ್ದರಿಂದ ಮುಂದಿನ 1–2 ವರ್ಷಗಳಲ್ಲಿ ನನ್ನ ಮನೆಯ ಹತ್ತಿರ ದಂಗೆಯಾಗಬಹುದು ಮತ್ತು ಅದರ ಬಿಸಿ ನನಗೆ ಹಾಗೂ ನನ್ನ ಕುಟುಂಬಕ್ಕೆ ತಟ್ಟಲಿದೆ’ ಎಂಬ ವಿಚಾರದಿಂದ ಒತ್ತಡ ಬರುತ್ತದೆ ಎಂದು ಒಬ್ಬರು ಹೇಳಿದರು.

ಸ್ವಯಂಸೂಚನೆ

ಯಾವಾಗ ನನ್ನ ಮನಸ್ಸಿನಲ್ಲಿ ‘‘ನನ್ನ ಮನೆಯ ಹತ್ತಿರ ದಂಗೆಯಾಗುವುದು ಮತ್ತು ಅದರ ಬಿಸಿ ನನಗೆ ಹಾಗೂ ನನ್ನ ಕುಟುಂಬಕ್ಕೆ ತಟ್ಟಲಿದೆ’’ ಎಂಬ ವಿಚಾರಗಳು ಬರುವವೋ, ಆ ಸಮಯದಲ್ಲಿ ‘‘ನಾನು ‘ಸ್ವಸಂರಕ್ಷಣೆ ತರಬೇತಿ’ ಪಡೆದಿದ್ದೇನೆ; ಆದ್ದರಿಂದ ನಾನು ದಂಗೆಕೋರರನ್ನು ತಡೆಯಬಲ್ಲೆ ಎಂಬ ಆತ್ಮವಿಶ್ವಾಸ ನನಗೆ ಬಂದಿದೆ. ನಾವು ಕುಟುಂಬದವರು ಮಾಡುತ್ತಿರುವ ಸಾಧನೆಯಿಂದ ದೇವರ ರಕ್ಷಣಾ ಕವಚವೂ ನಮ್ಮ ಸುತ್ತಲೂ ಇದೆ’’ ಎಂಬುದರ ಅರಿವು ನನಗಾಗುವುದು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾನು ನನ್ನ ಸಾಧನೆಯ ಮೇಲೆ ಗಮನ ಕೇಂದ್ರೀಕರಿಸುವೆನು.

ಆ. ಉದಾಹರಣೆ 2

‘ನನ್ನ ಮನೆಯ ಹತ್ತಿರ ದಂಗೆಯಾದರೆ…’ ಎಂಬ ವಿಚಾರಕ್ಕೆ ನೀಡಬೇಕಾದ ಸ್ವಯಂಸೂಚನೆ.

ಸ್ವಯಂಸೂಚನೆ

  1. ನಿನ್ನೆ ಊರಿನಲ್ಲಿ ಪ್ರಾರಂಭವಾದ ದಂಗೆಯ ಪ್ರತಿಧ್ವನಿಗಳು ನಮ್ಮ ಗಲ್ಲಿಯಲ್ಲಿ ಮೂಡಲಾರಂಭಿಸಿವೆ. ನಮ್ಮ ಮನೆಯ ಹತ್ತಿರ ದಂಗೆ ಪ್ರಾರಂಭವಾಗಿದೆ.
  2. ನಾನು ‘ಸ್ವಸಂರಕ್ಷಣೆ ತರಬೇತಿ’ ಪಡೆದಿದ್ದೇನೆ; ಆದ್ದರಿಂದ ನಾನು ದಂಗೆಕೋರರನ್ನು ತಡೆಯಬಲ್ಲೆ ಎಂಬ ಆತ್ಮವಿಶ್ವಾಸ ನನಗೆ ಬಂದಿದೆ.
  3. ನಾವು ನಮ್ಮ ಮನೆಯ ಪ್ರವೇಶದ್ವಾರ ಹಾಗೂ ಇತರ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಕೊಳ್ಳುತ್ತಿದ್ದೇವೆ. ನನ್ನ ಹಿರಿಯ ಅಣ್ಣ ಪೊಲೀಸರಿಗೆ ದೂರವಾಣಿ ಕರೆ ಮಾಡಿ ದಂಗೆಯ ಬಗ್ಗೆ ತಿಳಿಸುತ್ತಿದ್ದಾನೆ.
  4. ಸಂಕಷ್ಟ ನಿವಾರಣೆಗಾಗಿ ನಾಮಜಪ, ಸ್ತೋತ್ರಪಠಣ ಇಂತಹ ಯಾವ ಯಾವ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆಯೋ, ಅವೆಲ್ಲವನ್ನೂ ನಾನು ಮಾಡುತ್ತಿದ್ದೇನೆ.
  5. ‘‘ಸಂಕಷ್ಟದ ಸಮಯದಲ್ಲಿ ದೇವರು ಯಾವಾಗಲೂ ನನ್ನ ಜೊತೆಗಿದ್ದು ಅವನು ನನ್ನ ಮತ್ತು ನನ್ನ ಕುಟುಂಬದವರ ಕಾಳಜಿ ವಹಿಸಿಯೇ ತೀರುತ್ತಾನೆ’’ ಎಂಬ ನನ್ನ ಶ್ರದ್ಧೆಯು ಹೆಚ್ಚುತ್ತಿದೆ.
  6. ದೇವರ ಕೃಪೆಯಿಂದ ದಂಗೆಕೋರರ ಲಕ್ಷ್ಯ ನಮ್ಮ ಮನೆಯ ಕಡೆಗೆ ಹೋಗಿಲ್ಲ.
  7. ಸ್ವಲ್ಪ ಸಮಯದ ನಂತರ ‘‘ಪೊಲೀಸರು ಅಲ್ಲಿಗೆ ಬಂದಿದ್ದಾರೆ’’ ಎಂದು ತಿಳಿಯುತ್ತಿದೆ.
  8. ಕೆಲವು ಕ್ಷಣಗಳಲ್ಲೇ ಪೊಲೀಸರು ದಂಗೆಯನ್ನು ನಿಯಂತ್ರಣಕ್ಕೆ ತರುತ್ತಿದ್ದಾರೆ.
  9. ‘ದೇವರು ದಂಗೆಯ ಬಿಸಿ ನಮಗೆ ತಟ್ಟಲು ಬಿಡಲಿಲ್ಲ, ಹಾಗೆಯೇ ನನ್ನ ಮತ್ತು ನನ್ನ ಕುಟುಂಬದವರ ರಕ್ಷಣೆ ಮಾಡಿದನು’ ಇದಕ್ಕಾಗಿ ನಾನು ದೇವರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದೇನೆ.

ದಂಗೆ ನಡೆಯುತ್ತಿರುವಾಗ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ

ಯಾವಾಗ ನಾನು ವಾಸಿಸುತ್ತಿರುವ ಊರಿನಲ್ಲಿ ದಂಗೆ ಪ್ರಾರಂಭವಾಗುವುದೋ, ಆಗ ಇದು ಆಪತ್ಕಾಲ ಪ್ರಾರಂಭವಾದ ಲಕ್ಷಣವಾಗಿದೆ ಮತ್ತು ಕೇವಲ ಸಾಧನೆಯಷ್ಟೇ ನನ್ನ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂಬ ಅರಿವು ನನಗಾಗುವುದು. ಆದ್ದರಿಂದ ನಾನು ಆವಶ್ಯಕವಿರುವ ಸುರಕ್ಷತೆಯ ಉಪಾಯಯೋಜನೆ ಮಾಡಿ ಭಾವಪೂರ್ಣವಾಗಿ ನಾಮಜಪ ಮಾಡುವೆನು.

ಭಾವನಾತ್ಮಕವಾಗಿ ಸಂಬಂಧಿಕರಲ್ಲಿ ಸಿಲುಕಿಕೊಳ್ಳದಿರಲು ಸ್ವಯಂಸೂಚನೆ

ಪ್ರಸಂಗ 1

ಭವಿಷ್ಯದಲ್ಲಿ ನಡೆಯಲಿರುವ ಮೂರನೇ ಮಹಾಯುದ್ಧದ ಕಾಲದಲ್ಲಿ ನನ್ನ ಕುಟುಂಬದವರ ಗತಿ ಏನಾಗುವುದು ಎಂಬ ವಿಚಾರ ಮಾಡುವುದರಿಂದ ನನಗೆ ಚಿಂತೆಯಾಗುತ್ತದೆ.

ತುರ್ತು ಪರಿಸ್ಥಿತಿಯ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ

ಸ್ವಯಂಸೂಚನೆ 1

ಯಾವಾಗ ನನ್ನ ಕುಟುಂಬದವರು ಮೂರನೇ ಮಹಾಯುದ್ಧದಲ್ಲಿ / ಯುದ್ಧದಲ್ಲಿ ಬದುಕುಳಿಯುವರೇ ಎಂಬ ವಿಚಾರದಿಂದ ನನಗೆ ಚಿಂತೆಯಾಗುವುದೋ, ಆಗ ನಾನು ಅವರಿಗೆ ಈ ಹಿಂದೆಯೇ ಯುದ್ಧಕಾಲದಲ್ಲಿ ವಹಿಸಬೇಕಾದ ಕಾಳಜಿ ಮತ್ತು ಸಾಧನೆಯ ಮಹತ್ವದ ಬಗ್ಗೆ ತಿಳಿಸಿದ್ದೇನೆ ಎಂಬ ಅರಿವು ನನಗಾಗುವುದು. ಆದ್ದರಿಂದ ನಾನು ಶಾಂತವಾಗಿ ಸ್ವಂತ ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸುವುದರ ಮೇಲೆ ಗಮನ ಕೇಂದ್ರೀಕರಿಸುವೆನು.

ಸ್ವಯಂಸೂಚನೆ 2

ಯಾವಾಗ ನನ್ನ ಕುಟುಂಬದವರು ಮೂರನೇ ಜಾಗತಿಕ ಮಹಾಯುದ್ಧದಲ್ಲಿ / ಯುದ್ಧದಲ್ಲಿ ಬದುಕುಳಿಯುವರೇ ಎಂಬ ವಿಚಾರದಿಂದ ನನಗೆ ಚಿಂತೆಯಾಗುವುದೋ, ಆಗ ಕುಟುಂಬದವರು ಸಾಧನೆ ಮಾಡಿದರೆ ದೇವರೇ ಅವರನ್ನು ರಕ್ಷಿಸುತ್ತಾರೆ ಎಂಬ ಅರಿವು ನನಗಾಗುವುದು. ಆದ್ದರಿಂದ ನಾನು ಅವರಿಗೆ ಈ ವಿಷಯವನ್ನು ತಿಳಿಸುವೆನು ಮತ್ತು ನನ್ನ ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸುವುದರ ಮೇಲೆ ಗಮನ ಕೇಂದ್ರೀಕರಿಸುವೆನು.

ಪ್ರಸಂಗ 2

ನನ್ನ ಕುಟುಂಬದವರು ಪ್ರವಾಹ ಬರುವ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಪ್ರವಾಹ ಬಂದರೆ ಅವರ ಗತಿ ಏನಾಗುವುದು ಎಂಬ ವಿಚಾರದಿಂದ ನನಗೆ ಚಿಂತೆಯಾಗುತ್ತದೆ.

ಸ್ವಯಂಸೂಚನೆ

ಯಾವಾಗ ನನ್ನ ಕುಟುಂಬದವರು ವಾಸಿಸುತ್ತಿರುವ ಪ್ರದೇಶದಲ್ಲಿ ಪ್ರವಾಹ ಬರುವುದೋ, ಆಗ ಅವರ ಪ್ರಾಣ ಮತ್ತು ಆವಶ್ಯಕ ವಸ್ತುಗಳನ್ನು ಉಳಿಸಿಕೊಳ್ಳುವ ಬಗ್ಗೆ ತಿಳಿಸಿ ಅಲ್ಲಿನ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಲು ಹೇಳುವುದೇ ನನ್ನ ಕಡೆಯಿಂದ ಅವರಿಗೆ ಆಗುವ ಅತ್ಯುತ್ತಮ ಸಹಾಯವಾಗಿದೆ ಎಂಬ ಅರಿವು ನನಗಾಗುವುದು ಮತ್ತು ನಾನು ಹಾಗೆಯೇ ಮಾಡುವೆನು, ಹಾಗೆಯೇ ನಾಮಜಪ ಮಾಡಲು ಅವರಿಗೆ ಪ್ರೋತ್ಸಾಹ ನೀಡುವೆನು.

ಪ್ರಸಂಗ 3

ಶೀಘ್ರವಾಗಿ ಹತ್ತಿರ ಬರುತ್ತಿರುವ ಆಪತ್ಕಾಲದ ಬಗ್ಗೆ ನನ್ನ ಅಳಿಯ ಮತ್ತು ಅವರ ಕುಟುಂಬದವರಿಗೆ ಗಾಂಭೀರ್ಯವಿಲ್ಲ ಎಂಬ ವಿಷಯದಿಂದ ನನಗೆ ಒತ್ತಡ ಬರುತ್ತದೆ.

ಪ್ರಸಂಗ ನಡೆಯುತ್ತಿರುವಾಗ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆಗಳು

ಸ್ವಯಂಸೂಚನೆ 1

ಯಾವಾಗ ಶೀಘ್ರವಾಗಿ ಹತ್ತಿರ ಬರುತ್ತಿರುವ ಆಪತ್ಕಾಲದ ಬಗ್ಗೆ ನನ್ನ ಅಳಿಯ ಮತ್ತು ಅವರ ಕುಟುಂಬದವರಿಗೆ ಗಂಭೀರ್ಯ ಅನಿಸುವುದಿಲ್ಲವೋ ಮತ್ತು ಇದರಿಂದ ನನ್ನ ಮಗಳು ತೊಂದರೆ ಅನುಭವಿಸಬೇಕಾಗಬಹುದು ಎಂಬ ವಿಚಾರದಿಂದ ನನಗೆ ಒತ್ತಡ ಬರುವುದೋ, ಆಗ ಇದರ ಬಗ್ಗೆ ಪದೇ ಪದೇ ಹೇಳಿದರೆ ಸಂಘರ್ಷ ನಿರ್ಮಾಣವಾಗುವುದು ಎಂಬ ಅರಿವು ನನಗಾಗುವುದು ಮತ್ತು ನಾನು ನನ್ನ ಮಗಳಿಗೆ ಆವಶ್ಯಕವಿರುವ ಸಿದ್ಧತೆ ಮಾಡಿಕೊಳ್ಳಲು ಹೇಳುವೆನು / ಆಪತ್ಕಾಲದ ಸಮಯವನ್ನು ನಿಭಾಯಿಸಲು ಆವಶ್ಯಕವಿರುವ ಸಾಧನೆ ಮಾಡಲು ಹೇಳುವೆನು.

ಸ್ವಯಂಸೂಚನೆ 2

ಯಾವಾಗ ಶೀಘ್ರವಾಗಿ ಹತ್ತಿರ ಬರುತ್ತಿರುವ ಆಪತ್ಕಾಲದ ಬಗ್ಗೆ ನನ್ನ ಅಳಿಯ ಮತ್ತು ಅವರ ಕುಟುಂಬದವರಿಗೆ ಗಂಭೀರ್ಯ ಅನಿಸುವುದಿಲ್ಲ ಎಂಬ ವಿಚಾರದಿಂದ ನನಗೆ ಒತ್ತಡ ಬರುವುದೋ, ಆಗ ನಾನು ಅವರಿಗೆ ಇದರ ಬಗ್ಗೆ ಮಾಹಿತಿ ನೀಡುವ ಕರ್ತವ್ಯ ಮಾಡಿದ್ದೇನೆ ಮತ್ತು ಅವರಿಗೋಸ್ಕರ ಏನು ಯೋಗ್ಯವಿದೆಯೋ ದೇವರು ಅದೇ ಮಾಡುವರು ಎಂಬ ಅರಿವು ನನಗಾಗುವುದು ಹಾಗೂ ನಾನು ಶಾಂತವಾಗಿ ನನ್ನ ಇತರ ಆವಶ್ಯಕ ಪ್ರಯತ್ನಗಳನ್ನು ಮುಂದುವರಿಸುವೆನು.

ಸ್ವಯಂಸೂಚನೆ 3

ಯಾವಾಗ ಶೀಘ್ರವಾಗಿ ಹತ್ತಿರ ಬರುತ್ತಿರುವ ಆಪತ್ಕಾಲದ ಬಗ್ಗೆ ನನ್ನ ಅಳಿಯ ಮತ್ತು ಅವರ ಕುಟುಂಬದವರಿಗೆ ಗಂಭೀರ್ಯ ಅನಿಸುವುದಿಲ್ಲ ಎಂಬ ವಿಚಾರದಿಂದ ನನಗೆ ಒತ್ತಡ ಬರುವುದೋ, ಆಗ ನಾನು ಅವರಿಗೆ ಇದರ ಬಗ್ಗೆ ಮಾಹಿತಿ ನೀಡುವ ಕರ್ತವ್ಯ ಮಾಡಿದ್ದೇನೆ ಎಂಬ ಅರಿವು ನನಗಾಗುವುದು ಮತ್ತು ಅವರು ಏನು ಮಾಡಬೇಕು ಎಂಬುದು ಅವರ ನಿರ್ಧಾರವಾಗಿರುತ್ತದೆ ಎಂಬ ವಿಚಾರ ಮಾಡಿ, ನನಗೆ ಮತ್ತು ನನ್ನ ಕುಟುಂಬದವರಿಗೆ ಬರುವ ಕಾಲವನ್ನು ಎದುರಿಸಲು ಸಾಧ್ಯವಾಗಲಿ ಎಂಬ ಉದ್ದೇಶದಿಂದ ಆವಶ್ಯಕವಿರುವ ಪ್ರಯತ್ನಗಳನ್ನು ನಾನು ಮಾಡುವೆನು.

ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲದಿರುವುದರಿಂದ ಪ್ರಸಂಗವನ್ನು ತತ್ತ್ವಜ್ಞಾನದ ಭೂಮಿಕೆಯಿಂದ ನೋಡುವುದು

ದಂಗೆ ನಡೆಯುತ್ತಿರುವಾಗ ನೀಡಬೇಕಾದ ಸ್ವಯಂಸೂಚನೆಗಳು

ಸ್ವಯಂಸೂಚನೆ

ಯಾವಾಗ ನಾನು ವಾಸಿಸುತ್ತಿರುವ ಭಾಗದಲ್ಲಿ ದೊಡ್ಡ ದಂಗೆ ನಡೆಯುತ್ತಿರುವುದೋ, ಆ ಸಮಯದಲ್ಲಿ ಸದ್ಯ ಸಮಷ್ಟಿ ಪಾಪ ಹೆಚ್ಚಾಗಿರುವುದರಿಂದ ಇಂತಹ ನಕಾರಾತ್ಮಕ ಘಟನೆಗಳಲ್ಲಿ ವೃದ್ಧಿಯಾಗುತ್ತಿದೆ ಮತ್ತು ಈ ಸಮಷ್ಟಿ ಪ್ರಾರಬ್ಧದಿಂದ ದೇವರೇ ನಮ್ಮನ್ನು ಬಿಡಿಸುವರು ಎಂಬ ಅರಿವು ನನಗಾಗುವುದು ಹಾಗೂ ನಾನು ಶ್ರದ್ಧೆಯಿಂದ ಮತ್ತು ಭಾವಪೂರ್ಣವಾಗಿ ನಾಮಜಪ ಮಾಡುವೆನು.

(ಮೇಲಿನ ಸ್ವಯಂಸೂಚನೆಗಳ ಮಾದರಿಯಲ್ಲಿಯೇ ಸ್ನೇಹಿತರು, ನೆರೆಹೊರೆಯವರು ಮುಂತಾದವರಲ್ಲೂ ಭಾವನಾತ್ಮಕವಾಗಿ ಸಿಲುಕಿಕೊಳ್ಳಬಾರದು ಎಂದು ಸ್ವಯಂಸೂಚನೆಗಳನ್ನು ತಯಾರಿಸಬಹುದು.)

ಆಪತ್ಕಾಲದ ವಿಚಾರದಿಂದ ಮನಸ್ಸಿನ ಅಸ್ವಸ್ಥತೆ ಬಹಳ ಹೆಚ್ಚಾದರೆ ಮನಸ್ಸನ್ನು ಆಪತ್ಕಾಲದ ಸಂದರ್ಭದಲ್ಲಿ ಸ್ವಯಂಸೂಚನೆಗಳನ್ನು ಸ್ವೀಕರಿಸುವ ಸಕಾರಾತ್ಮಕ ಸ್ಥಿತಿಗೆ ತರಲು ಮಾಡಬೇಕಾದ ಉಪಾಯಗಳು

ಕೆಲವು ಜನರು ಅತಿ ಭಾವನಾತ್ಮಕ ಅಥವಾ ಮನಸ್ಸಿನಿಂದ ಬಹಳ ದುರ್ಬಲರಿರುತ್ತಾರೆ. ಪ್ರವಾಹ, ಭೂಕಂಪ, ಮಹಾಯುದ್ಧ ಮುಂತಾದ ಸಂಕಟಗಳನ್ನು ಕೇಳಿ / ನೋಡಿ ಅವರು ಧೃತಿಗೆಡುತ್ತಾರೆ. ಅವರಿಗೆ ಈ ಆಪತ್ಕಾಲದ ಸಂದರ್ಭದಲ್ಲಿನ ಸ್ವಯಂಸೂಚನೆಗಳನ್ನು ನೀಡಲು ಸಹ ಬೇಡವೆನಿಸುತ್ತದೆ. ಕೆಲವರ ಮನಸ್ಸು ಅಸ್ವಸ್ಥವಾಗಿರುವುದರಿಂದ ಅವರಿಗೆ ಸ್ವಯಂಸೂಚನೆ ನೀಡುವುದರ ನೆನಪೂ ಆಗುವುದಿಲ್ಲ. ಅಂತಹ ವ್ಯಕ್ತಿಗಳ ಮನಸ್ಸನ್ನು ಆಪತ್ಕಾಲದ ಸಂದರ್ಭದಲ್ಲಿ ಸ್ವಯಂಸೂಚನೆಗಳನ್ನು ಸ್ವೀಕರಿಸುವ ಸಕಾರಾತ್ಮಕ ಸ್ಥಿತಿಗೆ ತರಲು ಉಪಯುಕ್ತವಾಗುವ ಪ್ರೋತ್ಸಾಹದಾಯಕ ಸ್ವಯಂಸೂಚನೆಗಳು ಮತ್ತು ಆಪತ್ಕಾಲದ ಸ್ಥಿತಿಯಿಂದ ಪಾರಾಗಲು ಗುರು ಅಥವಾ ದೇವರ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಉಪಯುಕ್ತವಾಗುವ ಕೆಲವು ಪ್ರೇರಕ ವಾಕ್ಯಗಳನ್ನು ಸನಾತನದ ‘ಆಪತ್ಕಾಲವು ಸುಸಹ್ಯವಾಗಲು ಮಾನಸಿಕ, ಆಧ್ಯಾತ್ಮಿಕ ಮುಂತಾದ ಸ್ತರಗಳಲ್ಲಿ ಮಾಡಬೇಕಾದ ಸಿದ್ಧತೆಗಳು’ ಎಂಬ ಗ್ರಂಥದಲ್ಲಿ ನೀಡಲಾಗಿದೆ.

Leave a Comment