ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ

Article also available in :

Contents

ಖಾಲಿ ಪೆಟ್ಟಿಗೆಗಳ ಉಪಾಯ

ಸಾಮಾನ್ಯವಾಗಿ ಎದುರಿಸುವ ದೈಹಿಕ ಮತ್ತು ಮಾನಸಿಕ ತೊಂದರೆಗಳ ಕಾರಣವು ಹೆಚ್ಚಿನ ಬಾರಿ ಆಧ್ಯಾತ್ಮಿಕವಾಗಿರುತ್ತದೆ. ಅದರಲ್ಲಿಯೂ ಪ್ರಮುಖ ಕಾರಣವೆಂದರೆ ಕೆಟ್ಟ ಶಕ್ತಿಗಳ ತೊಂದರೆ. ಈ ತೊಂದರೆಗಳನ್ನು ದೂರಗೊಳಿಸಲು ಈವರೆಗೆ ಸಚ್ಚಿದಾನಂದ ಪರಬ್ರಹ್ಮ (ಡಾ.) ಆಠವಲೆಯವರು (ಗುರುದೇವರು) ಆಧ್ಯಾತ್ಮಿಕ ಉಪಾಯಗಳ ಅನೇಕ ನೂತನ ಪದ್ಧತಿಗಳ ವಿವೇಚನೆಯನ್ನು ಮಾಡಿದ್ದಾರೆ, ಉದಾ. ದೇವತೆಗಳ ಒಂದರ ನಂತರ ಒಂದರಂತೆ ನಾಮಜಪ, ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳ ಮೇಲಿನ ಉಪಾಯಗಳು ಇತ್ಯಾದಿ. ಇವುಗಳಲ್ಲಿನ ಒಂದು ಪದ್ಧತಿಯೆಂದರೆ, ‘ಖಾಲಿ ಪೆಟ್ಟಿಗೆಗಳ ಉಪಾಯ’!

ಯಾವುದಾದರೊಂದು ವಸ್ತುವನ್ನು ಕೊಂಡುಕೊಂಡಾಗ ಅದರೊಟ್ಟಿಗೆ ಬಂದ ಪೆಟ್ಟಿಗೆಗಳು ನಮ್ಮೆಲ್ಲರ ಮನೆಯಲ್ಲಿ ಇದ್ದೇ ಇರುತ್ತವೆ. ಈ ಪೆಟ್ಟಿಗೆಗಳನ್ನು ಉಪಯೋಗಿಸಿ ಮಾಡುವ ಉಪಾಯವು ಅತ್ಯಂತ ಸರಳವಾದ ಮತ್ತು ಯಾವುದೇ ಬಂಧನಗಳಿಲ್ಲದ ಉಪಾಯ ಪದ್ಧತಿಯಾಗಿದೆ. ಯಾವ ಅಳತೆಯ ಪೆಟ್ಟಿಗೆಗಳನ್ನು ಬಳಸಬಹುದು; ಪೆಟ್ಟಿಗೆಗಳ ಉಪಾಯ ಮಾಡುವ ವಿವಿಧ ಪದ್ಧತಿಗಳು; ದೈನಂದಿನ ಕೆಲಸಕಾರ್ಯಗಳು, ಅಧ್ಯಯನ ಇತ್ಯಾದಿ ಮಾಡುವಾಗಲೂ, ಶಾಂತ ನಿದ್ರೆಗಾಗಿ ಪೆಟ್ಟಿಗೆಗಳ ಉಪಾಯ ಮಾಡುವುದು ಮೊದಲಾದವುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಖಾಲಿ ಪೆಟ್ಟಿಗೆನಲ್ಲಿ ಖಾಲಿ ಜಾಗ (ಟೊಳ್ಳು) ಇರುತ್ತದೆ. ಆ ಟೊಳ್ಳಿನಲ್ಲಿ ಆಕಾಶತತ್ತ್ವವಿರುತ್ತದೆ. ಆಕಾಶತತ್ತ್ವದಿಂದ ಆಧ್ಯಾತ್ಮಿಕ ಉಪಾಯಗಳಾಗುತ್ತವೆ. ಆಧ್ಯಾತ್ಮಿಕ ಉಪಾಯಕ್ಕಾಗಿ ಪೆಟ್ಟಿಗೆ ಬಳಸುವುದರಿಂದ ವ್ಯಕ್ತಿಯ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲಿರುವ ತೊಂದರೆದಾಯಕ ಶಕ್ತಿಯ ಆವರಣ, ಹಾಗೆಯೇ ವ್ಯಕ್ತಿಯಲ್ಲಿನ ತೊಂದರೆದಾಯಕ ಶಕ್ತಿಯು ಪೆಟ್ಟಿಗೆನಲ್ಲಿನ ಖಾಲಿ ಜಾಗದಲ್ಲಿ ಸೆಳೆಯಲ್ಪಟ್ಟು ನಾಶವಾಗುತ್ತದೆ. ಇದರಿಂದ ರೋಗಗಳ ಮೂಲ ಕಾರಣವೇ ನಾಶವಾಗುತ್ತಿರುವುದರಿಂದ ರೋಗಗಳೂ ಬೇಗನೆ ನಾಶವಾಗಲು ಸಹಾಯವಾಗುತ್ತದೆ.

ಖಾಲಿ ಪೆಟ್ಟಿಗೆಗಳ ಕುರಿತು ವಿವೇಚನೆ

ಅ. ಪೆಟ್ಟಿಗೆ ಯಾವ ಅಳತೆಯದ್ದಾಗಿರಬೇಕು?

ಅ 1. ಪೆಟ್ಟಿಗೆಯ ಅಳತೆಯ ಕುರಿತಾದ ದೃಷ್ಟಿಕೋನ

ಅ. ಮಾನವ ಶರೀರವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಎಂಬ ಪಂಚತತ್ತ್ವಗಳಿಂದ (ಪಂಚಮಹಾಭೂತಗಳಿಂದ) ಮಾಡಲ್ಪಟ್ಟಿದೆ. ಶರೀರದಲ್ಲಿನ ಈ ಪಂಚತತ್ತ್ವಗಳಲ್ಲಿ ಏರುಪೇರಾದಾಗ ಶರೀರದಲ್ಲಿ ರೋಗಗಳು ನಿರ್ಮಾಣವಾಗುತ್ತವೆ. ರೋಗವು ಪಂಚತತ್ತ್ವಗಳ ಪೈಕಿ ಯಾವ ತತ್ತ್ವಕ್ಕೆ ಸಂಬಂಧಪಟ್ಟಿದೆ ಎಂಬುದನ್ನು ನೋಡಿ ಆ ತತ್ತ್ವಕ್ಕೆ ಸಂಬಂಧಿಸಿದ ಅಳತೆಯ ಪೆಟ್ಟಿಗೆ ಬಳಸಿದರೆ ಆ ರೋಗದ ನಿರ್ಮೂಲನೆಗೆ ಶೇ.100 ರಷ್ಟು ಲಾಭದಾಯಕವಾಗುತ್ತದೆ. ಅದೇ ಎಲ್ಲ ಪಂಚತತ್ತ್ವಗಳ ಸಮಾವೇಶವಾಗಿರುವ, ಅಂದರೆ ಸಾಧಾರಣವಾಗಿ ಯಾವುದೇ ಉದ್ದೇಶಕ್ಕಾಗಿ ಬಳಸಬಹುದಾದ ಪೆಟ್ಟಿಗೆ ಆ ರೋಗದ ನಿರ್ಮೂಲನೆಗೆ ಶೇ.70 ರಷ್ಟು ಲಾಭದಾಯಕವಾಗುತ್ತದೆ. ವಿಶಿಷ್ಟ ಪಂಚತತ್ತ್ವಕ್ಕೆ ಸಂಬಂಧಿಸಿದ ಪೆಟ್ಟಿಗೆಯ ವಿಶಿಷ್ಟ ಅಳತೆ ಯಾವುದು ಎನ್ನುವುದರ ಬಗ್ಗೆ ಸನಾತನದ ಗ್ರಂಥದಲ್ಲಿ ತಿಳಿಸಲಾಗಿದೆ. ಈ ಲೇಖನದಲ್ಲಿ ಕೇವಲ ಸಾಧಾರಣವಾಗಿ ಯಾವುದೇ ಉದ್ದೇಶಕ್ಕಾಗಿ ಬಳಸುವ ಪೆಟ್ಟಿಗೆಯ ಅಳತೆಯನ್ನು ತಿಳಿಸಲಾಗಿದೆ.

ಯಾರಿಗಾದರೂ ವಿವಿಧ ರೋಗಗಳಿಗನುಸಾರ ವಿವಿಧ ಅಳತೆಯ ಪೆಟ್ಟಿಗೆಗಳನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಅವರು ಸಾಧಾರಣವಾಗಿ ಯಾವುದೇ ಉದ್ದೇಶಕ್ಕಾಗಿ ಬಳಸುವ ಪೆಟ್ಟಿಗೆಯನ್ನು ಉಪಯೋಗಿಸಿದರೂ ಆಗಬಹುದು.

ಅ 2. ಸಾಧಾರಣವಾಗಿ ಯಾವುದೇ ಉದ್ದೇಶಕ್ಕಾಗಿ ಬಳಸುವ ಪೆಟ್ಟಿಗೆಯ ಅಳತೆ

ಅ 2 ಅ. ಪೆಟ್ಟಿಗೆಯ ಉದ್ದ, ಅಗಲ ಮತ್ತು ಎತ್ತರ (ಆಳ) ಇವುಗಳ ಅಳತೆಯ ಅನುಪಾತ – 10 : 7 : 6

ಅ 2 ಆ. ಪೆಟ್ಟಿಗೆಯ ಸಾಧಾರಣ ಅಳತೆ : 25 ಸೆಂ.ಮೀ. ಉದ್ದ × 17.5 ಸೆಂ.ಮೀ. ಅಗಲ × 15 ಸೆಂ.ಮೀ. ಎತ್ತರ

ಚಿತ್ರ ಕ್ರ. 1 – ಸಾಧಾರಣವಾಗಿ ಯಾವುದೇ ಉದ್ದೇಶಕ್ಕಾಗಿ ಬಳಸುವ ಪೆಟ್ಟಿಗೆಯ ಅಳತೆ

ಮೇಲೆ ಕೊಟ್ಟಿರುವ ಅಳತೆಯಲ್ಲಿ ಶೇ.10 ಹೆಚ್ಚು-ಕಡಿಮೆ ಇರುವ ಸಿದ್ಧ (ರೆಡಿಮೇಡ್) ಪೆಟ್ಟಿಗೆ ಕೂಡ ಬಳಸಬಹುದು. (ಪೆಟ್ಟಿಗೆಗಳನ್ನು ತಾವೇ ತಯಾರಿಸುವ ಬಗ್ಗೆ ಸಚಿತ್ರ ವಿವೇಚನೆಯನ್ನು ಗ್ರಂಥದಲ್ಲಿ ನೀಡಲಾಗಿದೆ.)

ಅ 3. ದೊಡ್ಡ ಪೆಟ್ಟಿಗೆ ಮತ್ತು ಸಣ್ಣ ಪೆಟ್ಟಿಗೆಯ ಉಪಯುಕ್ತತೆ

ಅ. ದೊಡ್ಡ ಪೆಟ್ಟಿಗೆ : ಸುತ್ತಲೂ ಪೆಟ್ಟಿಗೆಗಳನ್ನು ಇಟ್ಟು ಉಪಾಯ ಮಾಡಲು, ಮಲಗುವಾಗ ಹಾಸಿಗೆಯ ಸುತ್ತಲೂ ಪೆಟ್ಟಿಗೆಗಳನ್ನು ಇಡಲು ದೊಡ್ಡ (ಸಾಧಾರಣ ಅಳತೆಯ ಅಥವಾ ಅದಕ್ಕಿಂತ ದೊಡ್ಡ ಅಳತೆಯ) ಪೆಟ್ಟಿಗೆಗಳನ್ನು ಬಳಸಬೇಕು.

ಆ. ಸಣ್ಣ ಪೆಟ್ಟಿಗೆ : ಪ್ರಯಾಣ ಮಾಡುವಾಗ ಪೆಟ್ಟಿಗೆಗಳ ಉಪಾಯ ಮಾಡಲು, ಪೆಟ್ಟಿಗೆಗಳ ಶಿರಸ್ತ್ರಾಣ (ಹೆಲ್ಮೆಟ್) ತಯಾರಿಸಲು ಸಣ್ಣ ಪೆಟ್ಟಿಗೆಗಳನ್ನು ಬಳಸಬೇಕು.

ಅ 4. ‘ಪೆಟ್ಟಿಗೆಯ ಅಳತೆಗಿಂತ ಪೆಟ್ಟಿಗೆ ಬಳಸುವ ಹಿಂದಿನ ಭಾವ’ ಮಹತ್ವದ್ದು!

ಪೆಟ್ಟಿಗೆ ಯಾವುದೇ ಅಳತೆಯದ್ದಾಗಿದ್ದರೂ, ಪೆಟ್ಟಿಗೆ ಉಪಾಯ ಮಾಡುವಾಗ ಭಾವವನ್ನಿಟ್ಟರೆ ಯಾವುದೇ ಅಳತೆಯ ಪೆಟ್ಟಿಗೆಯಿಂದಲೂ ಉಪಾಯವಾಗುತ್ತದೆ. ಹೀಗಿದ್ದರೂ, ಭಾವವನ್ನಿಟ್ಟು ಯೋಗ್ಯ ಅಳತೆಯ ಪೆಟ್ಟಿಗೆಯನ್ನು ಉಪಾಯಕ್ಕಾಗಿ ಬಳಸಿದರೆ ಉಪಾಯದ ಪರಿಣಾಮಕತೆಯು ಖಂಡಿತವಾಗಿಯೂ ಹೆಚ್ಚಿಗಿರುತ್ತದೆ.

ಆ. ಪೆಟ್ಟಿಗೆಯ ಬಣ್ಣ

ಪೆಟ್ಟಿಗೆ ಸಾಧ್ಯವಾದಷ್ಟು ಬಿಳಿ ಬಣ್ಣದ್ದಾಗಿರಲಿ. ಇನ್ನಿತರ ಬಣ್ಣಗಳ ಪೆಟ್ಟಿಗೆಗಳಿಗೆ ಬಿಳಿ ಹಾಳೆಗಳನ್ನು ಹಚ್ಚಿಯೂ ಉಪಯೋಗಿಸಬಹುದು.

ಇ. ಪೆಟ್ಟಿಗೆಯ ಖಾಲಿ ಜಾಗಕ್ಕೆ (ಟೊಳ್ಳಿಗೆ) ಮಹತ್ವವಿದೆ

ಪೆಟ್ಟಿಗೆಯ ಖಾಲಿ ಜಾಗಕ್ಕೆ (ಟೊಳ್ಳಿಗೆ) ಹೆಚ್ಚಿನ ಮಹತ್ವವಿದ್ದು ‘ಪೆಟ್ಟಿಗೆ ಯಾವುದರಿಂದ ತಯಾರಿಸಲಾಗಿದೆ’ ಎನ್ನುವುದು ಅಷ್ಟು ಮಹತ್ವದ್ದಲ್ಲ. ಆಪತ್ಕಾಲದಲ್ಲಿ ಯಾವುದಾದರೂ ಸಮಯದಲ್ಲಿ ಪೆಟ್ಟಿಗೆ ಬಳಸುವುದು ಸಾಧ್ಯವಾಗದಿದ್ದರೆ ಮನೆಯಲ್ಲಿರುವ ಬಕೆಟ್, ಪಾತ್ರೆ, ಡಬ್ಬದಂತಹ ವಸ್ತುಗಳನ್ನೂ ಉಪಾಯಗಳಿಗಾಗಿ ಬಳಸಬಹುದು.

ಶರೀರದ ಯಾವ ಸ್ಥಾನಗಳ ಮೇಲೆ ಪೆಟ್ಟಿಗೆ ಉಪಾಯ ಮಾಡಬಹುದು

ಅ. ಮುಖ್ಯವಾಗಿ ಶರೀರದ ಕುಂಡಲಿನಿ ಚಕ್ರಗಳ ಸ್ಥಾನಗಳಲ್ಲಿ ಪೆಟ್ಟಿಗೆ ಉಪಾಯ ಮಾಡಬೇಕು

ಅ 1. ಕುಂಡಲಿನಿ ಚಕ್ರಗಳ ಸ್ಥಾನಗಳಲ್ಲಿ ಪೆಟ್ಟಿಗೆ ಉಪಾಯ ಮಾಡುವ ಹಿಂದಿನ ಶಾಸ್ತ್ರ

ಬ್ರಹ್ಮಾಂಡದಲ್ಲಿನ ಪ್ರಾಣಶಕ್ತಿಯು (ಚೇತನಾ ಶಕ್ತಿ) ಮನುಷ್ಯನ ಶರೀರದಲ್ಲಿರುವ ಕುಂಡಲಿನಿ ಚಕ್ರಗಳಲ್ಲಿ ಗ್ರಹಿಸಲ್ಪಡುತ್ತದೆ ಮತ್ತು ಆಯಾ ಚಕ್ರದ ಮೂಲಕ ಅದು ಶರೀರದ ಆಯಾ ಇಂದ್ರಿಯಗಳವರೆಗೆ ತಲುಪಿಸಲ್ಪಡುತ್ತದೆ. ಇಂದ್ರಿಯಗಳಲ್ಲಿ ಪ್ರಾಣಶಕ್ತಿಯ ವಹನದಲ್ಲಿ (ಚೇತನೆಯ ಪ್ರವಾಹದಲ್ಲಿ) ಅಡಚಣೆ ಉಂಟಾದಾಗ ರೋಗಗಳು ನಿರ್ಮಾಣವಾಗುತ್ತವೆ. ಇದಕ್ಕಾಗಿ ಕೆಟ್ಟ ಶಕ್ತಿಗಳು ಪ್ರಮುಖವಾಗಿ ಕುಂಡಲಿನಿ ಚಕ್ರಗಳ ಮೇಲೆ ಆಕ್ರಮಣ ಮಾಡಿ ಅಲ್ಲಿ ತೊಂದರೆದಾಯಕ (ಕಪ್ಪು) ಶಕ್ತಿಯನ್ನು ಸಂಗ್ರಹಿಸಿಡುತ್ತವೆ. ಇದಕ್ಕೆ ಉಪಾಯವಾಗಿ ಕುಂಡಲಿನಿ ಚಕ್ರಗಳ ಸ್ಥಾನದಲ್ಲಿ ಪೆಟ್ಟಿಗೆಗಳ ಉಪಾಯ ಮಾಡುವುದು ಮಹತ್ವದ್ದಾಗಿದೆ. (ಕುಂಡಲಿನಿ ಚಕ್ರಗಳ ಸ್ಥಾನಗಳನ್ನು ಹೊರತುಪಡಿಸಿ ರೋಗಗಳಿರುವ ಅವಯವಗಳ ಸ್ಥಾನದಲ್ಲಿಯೂ ಪೆಟ್ಟಿಗೆಗಳ ಉಪಾಯಗಳನ್ನು ಮಾಡಬಹುದು.)

ಚಿತ್ರ ಕ್ರ. 2

ಅ 2. ರೋಗಗಳಿಗನುಸಾರ ಪೆಟ್ಟಿಗೆ ಉಪಾಯ ಮಾಡಬೇಕಾದ ಕುಂಡಲಿನಿ ಚಕ್ರಗಳ ಸ್ಥಾನಗಳು

ರೋಗ ಸಂಬಂಧಿಸಿರುವ ಕುಂಡಲಿನಿ ಚಕ್ರ
1. ದೈಹಿಕ ರೋಗಗಳು
ಅ. ತಲೆ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ರೋಗಗಳು ಆಜ್ಞಾಚಕ್ರ (ಭ್ರೂಮಧ್ಯ, ಅಂದರೆ ಹುಬ್ಬುಗಳ ಮಧ್ಯೆ)
ಆ. ಮೂಗು, ಬಾಯಿ, ಕಿವಿ ಮತ್ತು ಗಂಟಲಿಗೆ ಸಂಬಂಧಿಸಿದ ರೋಗಗಳು ವಿಶುದ್ಧಚಕ್ರ (ಕಂಠ, ಅಂದರೆ ಸ್ವರಯಂತ್ರದ ಭಾಗ)
ಇ. ಎದೆಗೆ ಸಂಬಂಧಿಸಿದ ರೋಗಗಳು ಅನಾಹತಚಕ್ರ (ಎದೆಯ ಮಧ್ಯಭಾಗ)
ಈ. ಹೊಟ್ಟೆಗೆ ಸಂಬಂಧಿಸಿದ ರೋಗಗಳು ಮಣಿಪೂರಚಕ್ರ (ನಾಭಿ / ಹೊಕ್ಕುಳ)
ಉ. ಕಿಬ್ಬೊಟ್ಟೆಗೆ ಸಂಬಂಧಿಸಿದ ರೋಗಗಳು ಸ್ವಾಧಿಷ್ಠಾನಚಕ್ರ (ಜನನೇಂದ್ರಿಯಗಳ 1 ರಿಂದ 2 ಸೆಂ.ಮೀ. ಮೇಲೆ)
ಊ. ಕೈ ಮತ್ತು ತಲೆಯಿಂದ ಎದೆಯವರೆಗೆ ಇರುವ ಭಾಗದ ರೋಗಗಳು (‘ಅ’ ಇಂದ ‘ಇ’ ರಲ್ಲಿ ನೀಡಿರುವ ರೋಗಗಳನ್ನು ಹೊರತುಪಡಿಸಿದ ರೋಗಗಳು) ಅನಾಹತಚಕ್ರ
ಋ. ಕಾಲು ಮತ್ತು ಎದೆಯ ನಂತರ ಶುರುವಾಗುವ ಭಾಗದ ರೋಗಗಳು (‘ಈ’ ಮತ್ತು ‘ಉ’ ರಲ್ಲಿ ನೀಡಿರುವ ರೋಗಗಳನ್ನು ಹೊರತುಪಡಿಸಿದ ರೋಗಗಳು) ಮಣಿಪೂರಚಕ್ರ
ಎ.ಇಡೀ ಶರೀರದ ರೋಗಗಳು (ದಣಿವು, ಜ್ವರ, ಸ್ಥೂಲತೆ, ಚರ್ಮರೋಗ) 1. ಸಹಸ್ರಾರ ಚಕ್ರ(2) (ತಲೆಯ ಮಧ್ಯಭಾಗ)
2. ಅನಾಹತಚಕ್ರ ಮತ್ತು ಮಣಿಪೂರಚಕ್ರ
2. ಮಾನಸಿಕ ರೋಗ 1. ಸಹಸ್ರಾರ ಚಕ್ರ(2)
2. ಅನಾಹತಚಕ್ರ

ಟಿಪ್ಪಣಿ 1 : ಮೂಲಾಧಾರ ಚಕ್ರದ ಸ್ಥಾನದಲ್ಲಿ ನ್ಯಾಸ ಮಾಡಲು ತಿಳಿಸಿಲ್ಲ; ಏಕೆಂದರೆ ಈ ಚಕ್ರದ ಸ್ಥಾನದಲ್ಲಿ ನ್ಯಾಸ ಮಾಡುವುದು ಕಠಿಣವಾಗಿರುತ್ತದೆ.

ಟಿಪ್ಪಣಿ 2 – ಸಹಸ್ರಾರ ಚಕ್ರ : ಇದು ಕುಂಡಲಿನಿಯ ಷಟ್ಚಕ್ರಗಳಲ್ಲಿ ಸೇರದೆ ಸ್ವತಂತ್ರ ಚಕ್ರವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡದ ಪ್ರಾಣಶಕ್ತಿಯು ಈ ಚಕ್ರದಿಂದಲೇ ಶರೀರವನ್ನು ಪ್ರವೇಶಿಸುತ್ತದೆ. ಈ ಚಕ್ರವನ್ನು ‘ಬ್ರಹ್ಮದ್ವಾರ’ವೆಂದೂ ಕರೆಯುತ್ತಾರೆ. ಸಾಧಾರಣ ವ್ಯಕ್ತಿಯಲ್ಲಿ ಸಹಸ್ರಾರ ಚಕ್ರವು ಮುಚ್ಚಿರುತ್ತದೆ. ಸಾಧನೆಯಲ್ಲಿ ಪ್ರಗತಿಯಾದ ನಂತರ ಅದು ತೆರೆಯುತ್ತದೆ. ಆದ್ದರಿಂದ ಇತರ ವ್ಯಕ್ತಿಗಳಿಗಿಂತ ಸಾಧನೆಯಲ್ಲಿ ಪ್ರಗತಿ ಹೊಂದಿದವರು ಸಹಸ್ರಾರಚಕ್ರದ ಸ್ಥಾನದಲ್ಲಿ ನ್ಯಾಸ ಮಾಡಿದರೆ ಹೆಚ್ಚಿನ ಲಾಭವಾಗುತ್ತದೆ.

ಪೆಟ್ಟಿಗೆಗಳ ಪ್ರತ್ಯಕ್ಷ ಉಪಾಯ ಮಾಡುವ ವಿವಿಧ ಪದ್ಧತಿಗಳು

ಪೆಟ್ಟಿಗೆಗಳನ್ನು ಉಪಯೋಗಿಸಿ ಉಪಾಯಗಳನ್ನು ಮಾಡುವಾಗ ಮುಂದೆ ನೀಡಿರುವ ಯಾವ ಉಪಾಯ ಪದ್ಧತಿಗಳಲ್ಲಿ 1) ಶರೀರದ ಕುಂಡಲಿನಿ ಚಕ್ರಗಳು, 2) ರೋಗಗಳಿರುವ ಅವಯವಗಳು ಅಥವಾ 3) ನವದ್ವಾರಗಳ ಸ್ಥಾನದಲ್ಲಿ ಉಪಾಯ ಮಾಡಲು ಹೇಳಲಾಗಿದೆಯೋ, ಅಲ್ಲಿ ಈ ಮೂರು ಸ್ಥಾನಗಳ ಪೈಕಿ ಮುಖ್ಯವಾಗಿ ಕುಂಡಲಿನಿ ಚಕ್ರಗಳ ಸ್ಥಾನಗಳಲ್ಲಿ ಪೆಟ್ಟಿಗೆಗಳ ಉಪಾಯಗಳನ್ನು ಮಾಡಬೇಕು.

(ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗಿನ ಎರಡು ಹೊಳ್ಳೆಗಳು, ಬಾಯಿ, ಮೂತ್ರದ್ವಾರ ಮತ್ತು ಗುದದ್ವಾರ ಇವು ಶರೀರದ ನವದ್ವಾರಗಳಾಗಿವೆ.)

ಅ. ದೊಡ್ಡ ಪೆಟ್ಟಿಗೆಗಳನ್ನು ಉಪಯೋಗಿಸಿ ಉಪಾಯ ಮಾಡುವುದು

ಅ 1. ಉಪಾಯಗಳ ಬಗ್ಗೆ ಕೆಲವು ಸೂಚನೆಗಳು

ಅ. ಪೆಟ್ಟಿಗೆಗಳನ್ನು ಉಪಾಯಕ್ಕೆ ಕುಳಿತಿರುವ ವ್ಯಕ್ತಿಯಿಂದ ಸಾಧಾರಣವಾಗಿ 30 ಸೆಂ.ಮೀ. (1 ಅಡಿ) ಅಂತರದಲ್ಲಿ ಇಡಬೇಕು. ಈ ಅಂತರದಲ್ಲಿ 10 ಸೆಂ.ಮೀ. ಹೆಚ್ಚು-ಕಡಿಮೆ ವ್ಯತ್ಯಾಸವಾದರೂ ಆಗಬಹುದು. ಕುಳಿತು ಉಪಾಯ ಮಾಡುವಾಗ ಚಿತ್ರದಲ್ಲಿ ತೋರಿಸಿದಂತೆ ಪೆಟ್ಟಿಗೆಗಳನ್ನು ನಿಲ್ಲಿಸಿ ಇಡಬೇಕು.

ಆ. ಉಪಾಯ ಮಾಡುವ ಸ್ಥಾನಗಳ ಮಟ್ಟದಲ್ಲಿ ಪೆಟ್ಟಿಗೆಗಳನ್ನು ಇಡಬೇಕು. ಇದರ ಕಾರಣವೇನೆಂದರೆ, ಉಪಾಯದ ಸ್ಥಾನಗಳ ಮುಂದೆ ಅಂದರೆ ಕುಂಡಲಿನಿ ಚಕ್ರಗಳು ಅಥವಾ ರೋಗಗಳಿರುವ ಅವಯವಗಳ ಎದುರಿಗೆ ಪೆಟ್ಟಿಗೆ ಇಟ್ಟರೆ ಅಲ್ಲಿನ ತೊಂದರೆದಾಯಕ ಶಕ್ತಿಯು ಪೆಟ್ಟಿಗೆಯೊಳಗೆ ಪರಿಣಾಮಕಾರಿಯಾಗಿ ಎಳೆಯಲ್ಪಟ್ಟು ರೋಗವು ಬೇಗನೆ ವಾಸಿಯಾಗಲು ಸಹಾಯವಾಗುತ್ತದೆ. ಇದಕ್ಕಾಗಿ ಉಪಾಯಕ್ಕಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇವೆಯೋ ಅಥವಾ ನೆಲದ ಮೇಲೆ ಕುಳಿತುಕೊಳ್ಳುತ್ತೇವೆಯೋ ಅದಕ್ಕನುಸಾರ ಪೆಟ್ಟಿಗೆಗಳನ್ನು ಎಷ್ಟು ಎತ್ತರದಲ್ಲಿ ಇಡಬೇಕೆಂದು ನಿರ್ಧರಿಸಬೇಕು. ಉದಾಹರಣೆಗೆ ತಲೆನೋವಿರುವವರು ಉಪಾಯಕ್ಕಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳುವವರಿದ್ದರೆ, ಒಂದು ಪೆಟ್ಟಿಗೆ ಅನಾಹತ ಚಕ್ರದ (ಎದೆಯ ಮಧ್ಯಭಾಗ) ಮಟ್ಟಕ್ಕೆ ಬರುತ್ತದೆ, ಇನ್ನೊಂದು ಪೆಟ್ಟಿಗೆ ಆಜ್ಞಾಚಕ್ರದ (ಹುಬ್ಬುಗಳ ಮಧ್ಯೆ) ಮಟ್ಟಕ್ಕೆ ಬರುತ್ತದೆ. ಇಷ್ಟು ಎತ್ತರದ ಯಾವುದಾದರೂ ಮೇಜಿನ ಮೇಲೆ ಒಂದರ ಮೇಲೊಂದರಂತೆ ಪೆಟ್ಟಿಗೆಗಳನ್ನು ಇಡಬೇಕು (ಚಿತ್ರ ಕ್ರ. 3 ನೋಡಿ). (ಪೆಟ್ಟಿಗೆಗಳ ಉಪಾಯ ಮಾಡುವಾಗ ನಾಮಜಪ ಮತ್ತು ಮುದ್ರೆ ಅಥವಾ ನ್ಯಾಸ ಮಾಡುವುದು ಲಾಭದಾಯಕವಾಗಿರುತ್ತದೆ. ಇದಕ್ಕಾಗಿ ಚಿತ್ರದಲ್ಲಿನ ವ್ಯಕ್ತಿಯು ಒಂದು ಕೈಯಿಂದ ಮುದ್ರೆ ಮತ್ತು ಇನ್ನೊಂದು ಕೈಯಿಂದ ನ್ಯಾಸ ಮಾಡುವುದನ್ನು ತೋರಿಸಲಾಗಿದೆ.)

ಚಿತ್ರ ಕ್ರ. 3

ಉಪಾಯದ ಸ್ಥಾನಗಳ ಮಟ್ಟಕ್ಕೆ ಪೆಟ್ಟಿಗೆಗಳನ್ನು ಇಡಲು ಸಾಧ್ಯವಾಗದಿದ್ದರೆ, ಅವುಗಳನ್ನು ಕಡಿಮೆ ಎತ್ತರದಲ್ಲಿ ಅಥವಾ ನೆಲದ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ಪೆಟ್ಟಿಗೆಗಳನ್ನು ಸಮಮಟ್ಟದಲ್ಲಿ ಇಡುವುದರಿಂದ ಆಗುವ ಲಾಭದ ಶೇ. 10 – 20 ರಷ್ಟು ಲಾಭ ಮಾತ್ರ ಆಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪೆಟ್ಟಿಗೆಗಳನ್ನು ಸಮಮಟ್ಟದಲ್ಲಿ ಇಡಲು ಪ್ರಯತ್ನಿಸಬೇಕು.

ಪೆಟ್ಟಿಗೆಗಳನ್ನು ಸಮಮಟ್ಟದಲ್ಲಿ ಇಡಲು ಸಾಧ್ಯವಾಗದಿದ್ದರೆ ಅವುಗಳ ಖಾಲಿ ಜಾಗವು ಉಪಾಯಕ್ಕೆ ಕುಳಿತಿರುವ ವ್ಯಕ್ತಿಯ ದಿಕ್ಕಿನಲ್ಲಿರುವಂತೆ ಓರೆಯಾಗಿಯೂ ಇಡಬಹುದು. ಪೆಟ್ಟಿಗೆ ಓರೆಯಾಗಲು ಪೆಟ್ಟಿಗೆಯ ಕೆಳಗೆ ಮರದ ತುಂಡು ಅಥವಾ ದಿಮ್ಮಿಯನ್ನು ಇಡಬಹುದು.

ಇ. ಯಾವ ಸ್ಥಾನದಲ್ಲಿ ಉಪಾಯ ಮಾಡಬೇಕಿದೆಯೋ, ಅದರ ಎದುರಿಗೆ ಪೆಟ್ಟಿಗೆಯ ತೆರೆದ ಭಾಗ ಬರುವ ರೀತಿಯಲ್ಲಿ ಪೆಟ್ಟಿಗೆ ಇಡಬೇಕು, ಹಾಗೆಯೇ ಪೆಟ್ಟಿಗೆಯ ಮಧ್ಯಭಾಗವು ಸರಿಯಾಗಿ ಆ ಸ್ಥಾನದ ಎದುರಿಗೆ ಬರುವಂತೆ ನೋಡಿಕೊಳ್ಳಬೇಕು.

ಈ. ರೋಗಿಯು ಅಡ್ಡ ಮಲಗಿ ಉಪಾಯ ಮಾಡಬೇಕಾಗಿ ಬಂದರೆ ಹಾಗೆ ಮಾಡಬಹುದು; ಆದರೆ ಆ ಸಮಯದಲ್ಲಿ ಪೆಟ್ಟಿಗೆಗಳು ಉಪಾಯದ ಸ್ಥಾನಗಳ ಬದಿಗೆ ಬರುವಂತೆ ನೋಡಿಕೊಳ್ಳಬೇಕು. ಅಡ್ಡ ಮಲಗಿ ಉಪಾಯ ಮಾಡುವಾಗ ಚಿತ್ರ ಕ್ರ 6 ರಲ್ಲಿ ತೋರಿಸಿದಂತೆ ಪೆಟ್ಟಿಗೆಗಳನ್ನು ಇಡಬೇಕು.

ಆ. ಚಿಕ್ಕ ಪೆಟ್ಟಿಗೆಗಳನ್ನು ಶರೀರದ ಹತ್ತಿರ ಹಿಡಿದು ಉಪಾಯ ಮಾಡುವುದು

ಪ್ರಯಾಣ, ಕಾರ್ಯಾಲಯ, ಮೀಟಿಂಗ್ ಮುಂತಾದ ಸ್ಥಳಗಳಲ್ಲಿ ದೊಡ್ಡ ಪೆಟ್ಟಿಗೆಗಳನ್ನು ಇಟ್ಟು ಉಪಾಯ ಮಾಡುವುದು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಸಣ್ಣ ಪೆಟ್ಟಿಗೆಗಳನ್ನು ಕೈಗಳಲ್ಲಿ ಹಿಡಿದುಕೊಂಡು ಉಪಾಯ ಮಾಡಬಹುದು. (ಕೆಳಗಿನ ಚಿತ್ರದಲ್ಲಿ ಉದಾಹರಣೆಯಾಗಿ ಪೆಟ್ಟಿಗೆಗಳನ್ನು ಕೈಗಳಲ್ಲಿ ಹಿಡಿದುಕೊಂಡು ಆಜ್ಞಾಚಕ್ರ ಮತ್ತು ಅನಾಹತಚಕ್ರದ ಸ್ಥಾನದಲ್ಲಿ ಉಪಾಯ ಮಾಡುವುದನ್ನು ತೋರಿಸಲಾಗಿದೆ.)

ಚಿತ್ರ ಕ್ರ. 4 – ಪೆಟ್ಟಿಗೆಗಳನ್ನು ಕೈಯಲ್ಲಿ ಹಿಡಿದು ಉಪಾಯ ಮಾಡುವ ಪದ್ಧತಿ

ಆ 1. ಪೆಟ್ಟಿಗೆಯ ಅಳತೆ

ಪೆಟ್ಟಿಗೆ ಕೈಯಲ್ಲಿ ಹಿಡಿಯುವ ದೃಷ್ಟಿಯಿಂದ ಅನುಕೂಲಕರ ಅಳತೆಯದ್ದಾಗಿರಲಿ. ಅದರ ಉದ್ದ, ಅಗಲ ಮತ್ತು ಎತ್ತರ ಇವುಗಳ ಅನುಪಾತ 10 : 7 : 6 ರಂತೆ ಇರಲಿ.

ಆ 2. ಉಪಾಯಗಳ ಬಗ್ಗೆ ಕೆಲವು ಸೂಚನೆಗಳು

ಅ. ಯಾವ ಸ್ಥಾನದಲ್ಲಿ ಉಪಾಯ ಮಾಡಬೇಕಿದೆಯೋ, ಅದರ ಎದುರಿಗೆ 1 – 2 ಸೆಂ.ಮೀ. ಅಂತರದಲ್ಲಿ ತೆರೆದ ಭಾಗ ಬರುವ ರೀತಿಯಲ್ಲಿ ಪೆಟ್ಟಿಗೆ ಹಿಡಿಯಬೇಕು, ಹಾಗೆಯೇ ಪೆಟ್ಟಿಗೆಯ ಮಧ್ಯಭಾಗವು ಸರಿಯಾಗಿ ಆ ಸ್ಥಾನದ ಎದುರಿಗೆ ಬರುವಂತೆ ನೋಡಿಕೊಳ್ಳಬೇಕು.

ಆ. ಪೆಟ್ಟಿಗೆ ಹಿಡಿದು ಕೈ ನೋಯಲು ಶುರುವಾದರೆ, ಕೈಗಳನ್ನು ಬದಲಿಸಿಕೊಳ್ಳಬೇಕು.

ಇ. ಉಪಾಯ ಮಾಡುವಾಗ ಕೈಗಳು ಆಧಾರವಿಲ್ಲದೆ ಗಾಳಿಯಲ್ಲಿದ್ದರೆ ನೋಯಬಹುದು. ಇದನ್ನು ತಪ್ಪಿಸಲು ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿಯು ತನ್ನ ಮೊಣಕೈಗಳನ್ನು ಕುರ್ಚಿಯ ಕೈ (ಹ್ಯಾಂಡಲ್) ಮೇಲೆ ಇಡಬಹುದು. ಹಾಗೆಯೇ ಅಶಕ್ತರಿಗೆ ಅಥವಾ ವೃದ್ಧರಿಗೆ ಪೆಟ್ಟಿಗೆಗಳನ್ನು ಉಪಾಯದ ಸ್ಥಾನದಲ್ಲಿ 1 – 2 ಸೆಂ.ಮೀ. ಅಂತರದಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ, ಅವರು ಪೆಟ್ಟಿಗೆಗಳನ್ನು ಉಪಾಯದ ಸ್ಥಾನದಲ್ಲಿ ಸ್ಪರ್ಶಿಸಿ ಇಡಬಹುದು.

ಇ. ದೈನಂದಿನ ಕೆಲಸಕಾರ್ಯಗಳು ಮಾಡುವಾಗ ಪೆಟ್ಟಿಗೆ ಉಪಾಯ ಮಾಡುವುದು

ಪೆಟ್ಟಿಗೆಗಳನ್ನು ಶರೀರದಿಂದ ಸಾಧಾರಣ 30 ಸೆಂ.ಮೀ. (1 ಅಡಿ) ಅಂತರದಲ್ಲಿ ಇಟ್ಟು ಉಪಾಯ ಮಾಡುವುದು, ಪೆಟ್ಟಿಗೆಗಳನ್ನು ಕೈಗಳಲ್ಲಿ ಹಿಡಿದುಕೊಂಡು ಉಪಾಯ ಮಾಡುವುದು, ಇಂತಹ ಉಪಾಯಗಳನ್ನು ಮಾಡುವುದರ ಹೊರತಾಗಿಯೂ ಪೆಟ್ಟಿಗೆಗಳ ಉಪಾಯಗಳನ್ನು ಪ್ರತಿದಿನ ಎಷ್ಟು ಸುಲಭವಾಗಿ ಮಾಡಬಹುದು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ.

ಕುರ್ಚಿಯಲ್ಲಿ ಕುಳಿತು ಅಧ್ಯಯನ ಮಾಡುವುದು, ಧಾನ್ಯ ಆರಿಸುವುದು, ಇತರ ಕೆಲಸ ಮಾಡುವುದು ಮೊದಲಾದವುಗಳನ್ನು ಮಾಡುವಾಗ ಪೆಟ್ಟಿಗೆಗಳನ್ನು ಇಡುವುದು –

ಕುರ್ಚಿಯ ಕೆಳಗೆ 1 ಪೆಟ್ಟಿಗೆ ಅಧೋಮುಖವಾಗಿ (ನೆಲದತ್ತ) ಮಾಡಿ ಇಡಬಹುದು. ಇದರಿಂದ ಪಾತಾಳದಿಂದ ಬರುವ ತೊಂದರೆದಾಯಕ ಶಕ್ತಿಯಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ. 2 ಪೆಟ್ಟಿಗೆಗಳನ್ನು ಕುರ್ಚಿಯಲ್ಲಿ ಎರಡು ತೊಡೆಗಳ ಮಧ್ಯೆ ಪೆಟ್ಟಿಗೆಗಳ ಮುಖಗಳನ್ನು ನಮ್ಮ ಕಡೆಗೆ ಮಾಡಿಕೊಂಡು ಒಂದರ ಮೇಲೊಂದರಂತೆ ಇಡಬಹುದು. ಸ್ವಾಧಿಷ್ಠಾನ ಮತ್ತು ಮಣಿಪೂರ ಕುಂಡಲಿನಿ ಚಕ್ರಗಳಿಗೆ ಸಂಬಂಧಿಸಿದ ತೊಂದರೆಯಾಗುತ್ತಿರುವವರಿಗೆ ಅಥವಾ ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಭಾಗಗಳಿಗೆ ಸಂಬಂಧಿಸಿದ ರೋಗಗಳಿರುವವರಿಗೆ ಇದರಿಂದ ಲಾಭವಾಗಲು ಸಹಾಯವಾಗುತ್ತದೆ.

ಯಾರೊಂದಿಗಾದರೂ ಮಾತನಾಡುವಾಗ ಅಥವಾ ಮೀಟಿಂಗ್‌ನಲ್ಲಿ ಕುಳಿತಿರುವಾಗ ಸಣ್ಣ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಉಪಾಯದ ಸ್ಥಾನದಲ್ಲಿ ಇಟ್ಟುಕೊಳ್ಳಬಹುದು.

ನಾವು ಎಲ್ಲಿ ಕುಳಿತುಕೊಳ್ಳುತ್ತೇವೆಯೋ ಅಲ್ಲಿ ‘ಪೆಟ್ಟಿಗೆ ನಮ್ಮ ತಲೆಯ ಮೇಲೆ ಬರುವಂತೆ’ ಚಾವಣಿಗೆ ನೇತುಹಾಕಿ ಇಡುವುದು; ಪೆಟ್ಟಿಗೆಗಳ ಶಿರಸ್ತ್ರಾಣವನ್ನು ಧರಿಸುವುದು; ಪೆಟ್ಟಿಗೆಯನ್ನು ‘ಸೆಲೋಟೇಪ್’ನಿಂದ ಉಪಾಯದ ಸ್ಥಾನಕ್ಕೆ ಅಂಟಿಸುವುದು ಇಂತಹ ಪದ್ಧತಿಗಳಲ್ಲಿಯೂ ಪೆಟ್ಟಿಗೆಗಳ ಉಪಾಯಗಳನ್ನು ಸುಲಭವಾಗಿ ಮಾಡಬಹುದು.

ಈ. ಮಲಗುವಾಗ ಪೆಟ್ಟಿಗೆಗಳ ಉಪಾಯ ಮಾಡುವುದು

ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಗುತ್ತದೆ. ಆದುದರಿಂದ ರೋಗಿಗಳು ಹಗಲಿನಲ್ಲಿ ಪೆಟ್ಟಿಗೆಗಳ ಉಪಾಯ ಮಾಡುವುದರೊಂದಿಗೆ ರಾತ್ರಿ ಮಲಗುವಾಗಲೂ ಪೆಟ್ಟಿಗೆಗಳ ಉಪಾಯ ಮಾಡುವುದು ಆವಶ್ಯಕವಾಗುತ್ತದೆ. ಆರೋಗ್ಯವಂತರು ಸಹ ತಮ್ಮ ಸುತ್ತಲೂ ರಕ್ಷಣಾ ಕವಚ ನಿರ್ಮಾಣವಾಗಲು ರಾತ್ರಿ ಮಲಗುವಾಗ ಪೆಟ್ಟಿಗೆಗಳ ಉಪಾಯ ಮಾಡುವುದು ಯೋಗ್ಯವಾಗಿದೆ.

ಈ 1. ಹಾಸಿಗೆಯ ಸುತ್ತಲೂ ಪೆಟ್ಟಿಗೆಗಳನ್ನು ಇಟ್ಟು ಉಪಾಯ ಮಾಡುವ ಬಗ್ಗೆ ಕೆಲವು ಸೂಚನೆಗಳು

ಈ 1 ಅ. ವ್ಯಕ್ತಿ ಯಾವ ಮಟ್ಟದಲ್ಲಿ ಮಲಗುತ್ತಾನೆಯೋ (ನೆಲದ ಮೇಲೆ ಅಥವಾ ಮಂಚದ ಮೇಲೆ) ಆ ಮಟ್ಟಕ್ಕೆ ಸರಿಸಮನಾಗಿ ಪೆಟ್ಟಿಗೆಗಳನ್ನು ಇಡಬೇಕು

ಕುರ್ಚಿ, ಸ್ಟೂಲ್ ಮುಂತಾದವುಗಳನ್ನು ಉಪಯೋಗಿಸಿ ಸಾಧ್ಯವಿದ್ದಷ್ಟು ಮಂಚದ ಮಟ್ಟಕ್ಕೆ ಪೆಟ್ಟಿಗೆಗಳನ್ನು ಇಡಲು ಪ್ರಯತ್ನಿಸಬೇಕು. ಪೆಟ್ಟಿಗೆಗಳನ್ನು ಮಂಚದ ಮಟ್ಟಕ್ಕೆ ಇಡುವುದು ಸಾಧ್ಯವಾಗದಿದ್ದರೆ, ಅವುಗಳನ್ನು ಕಡಿಮೆ ಎತ್ತರದಲ್ಲಿ ಅಥವಾ ನೆಲದ ಮೇಲೆ ಇಡಬಹುದು. ಆದರೆ ಹೀಗೆ ಮಾಡುವುದರಿಂದ ಪೆಟ್ಟಿಗೆಗಳನ್ನು ಸಮಮಟ್ಟದಲ್ಲಿ ಇಡುವುದರಿಂದ ಆಗುವ ಲಾಭದ ಶೇ. 20 – 30 ರಷ್ಟು ಲಾಭ ಮಾತ್ರ ಆಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೆಟ್ಟಿಗೆಗಳನ್ನು ಸಮಮಟ್ಟದಲ್ಲಿ ಇಡಲು ಸಾಧ್ಯವಾಗದಿದ್ದರೆ ಅವುಗಳನ್ನು ಓರೆಯಾಗಿ ಇಡಬಹುದು, ಇದರಿಂದಾಗಿ ಪೆಟ್ಟಿಗೆಯ ಖಾಲಿ ಜಾಗವು ವ್ಯಕ್ತಿಯ ದಿಕ್ಕಿನಲ್ಲಿರುತ್ತದೆ. ಪೆಟ್ಟಿಗೆ ಓರೆಯಾಗಲು ಪೆಟ್ಟಿಗೆಯ ಕೆಳಗೆ ಮರದ ತುಂಡು ಅಥವಾ ದಿಮ್ಮಿಯನ್ನು ಇಡಬಹುದು. (ಚಿತ್ರ ಕ್ರ. 5 ನೋಡಿ)

ಚಿತ್ರ ಕ್ರ. 5 – ಪೆಟ್ಟಿಗೆಗಳನ್ನು ಓರೆಯಾಗಿ ಇಡುವ ಪದ್ಧತಿ

ಮಂಚ ಒಂದು ಅಥವಾ ಎರಡು ಬದಿಗಳಿಂದ ಗೋಡೆಗೆ ಅಂಟಿಕೊಂಡಿದ್ದರೆ ಮಲಗುವ ಮುನ್ನ ಮಂಚವನ್ನು ಮುಂದೆ ಎಳೆದು ಅದರ ಮಟ್ಟಕ್ಕೆ ಪೆಟ್ಟಿಗೆಗಳನ್ನು ಇಡಬೇಕು. (ಮಂಚವನ್ನು ಮುಂದೆ ಎಳೆಯಲು ಸಾಧ್ಯವಾಗದಿದ್ದರೆ ಗೋಡೆಗಳ ಕಡೆಗಿನ ಹಾಸಿಗೆಯ ಅಂಚಿನ ಮೇಲೆ ಸಣ್ಣ ಪೆಟ್ಟಿಗೆಗಳನ್ನು ಇಡಬೇಕು. ದೊಡ್ಡ ಪೆಟ್ಟಿಗೆಗಳಿಗೆ ಹೋಲಿಸಿದರೆ ಸಣ್ಣ ಪೆಟ್ಟಿಗೆಗಳಿಂದ ಸ್ವಲ್ಪವೇ ಲಾಭವಾಗುತ್ತಿದ್ದರೂ, ಪೆಟ್ಟಿಗೆಗಳನ್ನು ಇಡದಿರುವುದಕ್ಕಿಂತ ಸಣ್ಣ ಪೆಟ್ಟಿಗೆಗಳನ್ನಾದರೂ ಇಡಬೇಕು.)

ಈ 1 ಆ. ಪೆಟ್ಟಿಗೆಗಳನ್ನು ಹಾಸಿಗೆಯಿಂದ ಸಾಧಾರಣ 30 ಸೆಂ.ಮೀ. (ಒಂದು ಅಡಿ) ಅಂತರದಲ್ಲಿ ಇಡಬೇಕು. ಈ ಅಂತರದಲ್ಲಿ 10 ಸೆಂ.ಮೀ. ಹೆಚ್ಚು-ಕಡಿಮೆ ವ್ಯತ್ಯಾಸವಾದರೆ ಆಗಬಹುದು. ಅಸಾಧ್ಯವಿದ್ದರೆ ಈ ಅಂತರವು ಇದಕ್ಕಿಂತಲೂ ಕಡಿಮೆ ಇದ್ದರೂ ಆಗಬಹುದು.

ಈ 1 ಇ. ಚಿತ್ರ ಕ್ರ. 6 ರಲ್ಲಿ ತೋರಿಸಿದಂತೆ ಪೆಟ್ಟಿಗೆಗಳನ್ನು ಅಡ್ಡಲಾಗಿ ಇಡಬೇಕು. ಇದರಿಂದ ವ್ಯಕ್ತಿಯ ಶರೀರದ ಗರಿಷ್ಠ ಭಾಗವು ಪೆಟ್ಟಿಗೆಗಳ ವ್ಯಾಪ್ತಿಗೆ ಬರುತ್ತದೆ.

ಈ 2. ಒಬ್ಬರು ಅಥವಾ ಹೆಚ್ಚು ರೋಗಿಗಳು ಒಟ್ಟಿಗೆ ಮಲಗುವಾಗ ಪೆಟ್ಟಿಗೆಗಳ ಉಪಾಯ ಮಾಡುವುದು

ಈ 2 ಅ. ರೋಗಿಯು ಒಬ್ಬರೇ ಮಲಗುವವರಿದ್ದರೆ ಪೆಟ್ಟಿಗೆಗಳನ್ನು ಹೇಗೆ ಇಡಬೇಕು ?

ವ್ಯಕ್ತಿಯ ಹಾಸಿಗೆಯ ನಾಲ್ಕು ಬದಿಗಳಿಗೆ ಮುಂದಿನ ಚಿತ್ರ ಕ್ರ. 6 ರಲ್ಲಿ ತೋರಿಸಿದಂತೆ ಪೆಟ್ಟಿಗೆಗಳನ್ನು ಇಡಬೇಕು.

ಚಿತ್ರ ಕ್ರ. 6 – ರೋಗಿಯ ಸುತ್ತಲೂ ಪೆಟ್ಟಿಗೆಗಳನ್ನು ಇಡುವ ಪದ್ಧತಿ

ಈ 2 ಅ 1. ವ್ಯಕ್ತಿಯ ತಲೆಯ ಮೇಲೆ ನೇರವಾದ ರೇಖೆಯಲ್ಲಿ ಒಂದು ಪೆಟ್ಟಿಗೆ ಇಡಬೇಕು. ಪೆಟ್ಟಿಗೆಯ ತೆರೆದ ಭಾಗ ತಲೆಯತ್ತ ಇರಲಿ.

ಈ 2 ಅ 2. ವ್ಯಕ್ತಿಯ ಪಾದಗಳ ಕೆಳಗೆ ನೇರವಾದ ರೇಖೆಯಲ್ಲಿ ಒಂದು ಪೆಟ್ಟಿಗೆ ಇಡಬೇಕು. ಪೆಟ್ಟಿಗೆಯ ತೆರೆದ ಭಾಗ ಅಂಗಾಲಿನತ್ತ ಇರಲಿ.

ಈ 2 ಅ 3. ವ್ಯಕ್ತಿಯ ಎಡ ಮತ್ತು ಬಲ ಬದಿಗಳಿಗೆ ತಲಾ 2 ಪೆಟ್ಟಿಗೆಗಳನ್ನು ಉಪಾಯ ಮಾಡುವ ಸ್ಥಾನಗಳ ಮುಂದೆ ಇಡಬೇಕು. ಪೆಟ್ಟಿಗೆಯ ತೆರೆದ ಭಾಗ ವ್ಯಕ್ತಿಯ ದಿಕ್ಕಿನಲ್ಲಿರಲಿ. (ಉಪಾಯ ಮಾಡುವ ವಿಶೇಷ ಅಂತಹ ಸ್ಥಾನಗಳಿಲ್ಲದಿದ್ದರೆ ಚಿತ್ರದಲ್ಲಿನ ‘ಪೆಟ್ಟಿಗೆ 1’, ‘ಪೆಟ್ಟಿಗೆ 2’, ‘ಪೆಟ್ಟಿಗೆ 3’ ಮತ್ತು ‘ಪೆಟ್ಟಿಗೆ 4’ ರಂತೆ ಪೆಟ್ಟಿಗೆಗಳನ್ನು ಇಡಬೇಕು.)

ಈ 2 ಅ 4. ಇನ್ನೂ 2 ಪೆಟ್ಟಿಗೆಗಳನ್ನು ತೆಗೆದುಕೊಂಡು ಅವುಗಳಲ್ಲಿ ಒಂದು ಪೆಟ್ಟಿಗೆಯ ತೆರೆದ ಭಾಗವನ್ನು ಮೇಲಿನ ದಿಕ್ಕಿಗೆ ಮಾಡಿ, ಇನ್ನೊಂದು ಪೆಟ್ಟಿಗೆಯ ತೆರೆದ ಭಾಗವನ್ನು ಕೆಳಗಿನ ದಿಕ್ಕಿಗೆ ಮಾಡಿ ಆ ಪೆಟ್ಟಿಗೆಗಳನ್ನು ವ್ಯಕ್ತಿಯ ಸುತ್ತಲೂ ಇಟ್ಟಿರುವ ಇತರ ಪೆಟ್ಟಿಗೆಗಳ ಮಂಡಲದಲ್ಲಿ ಎಲ್ಲಿಯಾದರೂ ಇಡಬೇಕು. (ಚಿತ್ರದಲ್ಲಿ ಈ 2 ಪೆಟ್ಟಿಗೆಗಳನ್ನು ವ್ಯಕ್ತಿಯ ಕಾಲುಗಳ ಎಡ ಮತ್ತು ಬಲ ಬದಿಗಳಲ್ಲಿ ಇಡಲಾಗಿದೆ.)

ಮಂಚದ ಮೇಲೆ ಮಲಗುತ್ತಿದ್ದರೆ ಪೆಟ್ಟಿಗೆಯ ತೆರೆದ ಭಾಗ ಕೆಳಗಿನ ದಿಕ್ಕಿನಲ್ಲಿರುವ ಪೆಟ್ಟಿಗೆಯನ್ನು ಮಂಚದ ಕೆಳಗೆ ನೆಲದ ಮೇಲೆ ಇಡಬೇಕು ಮತ್ತು ಪೆಟ್ಟಿಗೆಯ ತೆರೆದ ಭಾಗ ಮೇಲಿನ ದಿಕ್ಕಿನಲ್ಲಿರುವ ಪೆಟ್ಟಿಗೆಯನ್ನು ಇತರ ಪೆಟ್ಟಿಗೆಗಳ ಮಂಡಲದಲ್ಲಿ ಎಲ್ಲಿಯಾದರೂ ಅಥವಾ ವ್ಯಕ್ತಿಯ ಸುತ್ತಲೂ (ಆದರೆ ಪಲಂಗದ ಕೆಳಗೆ ಇಡದೇ) ಇಡಬೇಕು.

ಈ 3. ಆರೋಗ್ಯವಂತ ಓರ್ವ ವ್ಯಕ್ತಿ ಅಥವಾ ಹೆಚ್ಚು ವ್ಯಕ್ತಿಗಳು ಒಟ್ಟಿಗೆ ಮಲಗುವಾಗ ಕೆಟ್ಟ ಶಕ್ತಿಗಳ ತೊಂದರೆಯಿಂದ ರಕ್ಷಣೆಯಾಗಲು ಪೆಟ್ಟಿಗೆಗಳ ಉಪಾಯ ಮಾಡುವುದು

ಪೆಟ್ಟಿಗೆಗಳ ಮುಖಗಳನ್ನು (ತೆರೆದ ಭಾಗ) ಮಲಗಿರುವ ವ್ಯಕ್ತಿಯ (ಗಳ) ವಿರುದ್ಧ ದಿಕ್ಕಿಗೆ ಮಾಡಿ ಇಡಬೇಕಿರುತ್ತದೆ. ಇದರಿಂದ ಹೊರಗಿನಿಂದ ಆಗುವ ಕೆಟ್ಟ ಶಕ್ತಿಗಳ ಆಕ್ರಮಣದಲ್ಲಿನ ತೊಂದರೆದಾಯಕ ಶಕ್ತಿಯು ಪೆಟ್ಟಿಗೆಯ ಖಾಲಿ ಜಾಗದಲ್ಲಿ ಎಳೆಯಲ್ಪಡುತ್ತದೆ; ಇದರಿಂದ ವ್ಯಕ್ತಿಯ (ಗಳ) ರಕ್ಷಣೆಯಾಗುತ್ತದೆ.

ಈ 3 ಅ. ಒಬ್ಬರು ಮಾತ್ರ ಮಲಗುವವರಿದ್ದರೆ ಪೆಟ್ಟಿಗೆಗಳನ್ನು ಹೇಗೆ ಇಡಬೇಕು?

ವ್ಯಕ್ತಿಯ ಹಾಸಿಗೆಯ ನಾಲ್ಕು ಬದಿಗಳಿಗೆ ಚಿತ್ರ ಕ್ರ. 7 ರಲ್ಲಿ ತೋರಿಸಿದಂತೆ 4 ಪೆಟ್ಟಿಗೆಗಳನ್ನು, ಪೆಟ್ಟಿಗೆಗಳ ಮುಖ ವ್ಯಕ್ತಿಯ ಶರೀರದ ವಿರುದ್ಧ ದಿಕ್ಕಿಗೆ ಮಾಡಿ ಇಡಬೇಕು.

ಅ. ವ್ಯಕ್ತಿಯ ತಲೆಯ ಮೇಲೆ ನೇರವಾದ ರೇಖೆಯಲ್ಲಿ ಒಂದು ಪೆಟ್ಟಿಗೆ ಇಡಬೇಕು.

ಆ. ವ್ಯಕ್ತಿಯ ಪಾದಗಳ ಕೆಳಗೆ ನೇರವಾದ ರೇಖೆಯಲ್ಲಿ ಒಂದು ಪೆಟ್ಟಿಗೆ ಇಡಬೇಕು.

ಇ. ವ್ಯಕ್ತಿಯ ಎಡ ಮತ್ತು ಬಲ ಬದಿಗೆ ಸಾಧಾರಣ ಮಧ್ಯಭಾಗದಲ್ಲಿ ತಲಾ 1 ಪೆಟ್ಟಿಗೆ ಇಡಬೇಕು.

2. ಮೇಲೆ ನೀಡಿರುವ ಈ 2 ಅ 4. ಸೂತ್ರ ಓದಿ.

ಚಿತ್ರ ಕ್ರ. 7 – ಆರೋಗ್ಯವಂತ ವ್ಕಕ್ತಿಯ ಸುತ್ತಲೂ ಪೆಟ್ಟಿಗೆಗಳನ್ನು ಇಡುವ ಪದ್ಧತಿ

ರೋಗ-ನಿರ್ಮೂಲನೆಗಾಗಿ ಪೆಟ್ಟಿಗೆಗಳ ಉಪಾಯ ಮಾಡುವ ಸಾಧಾರಣ ಅವಧಿ

ರೋಗ-ನಿರ್ಮೂಲನೆಗಾಗಿ ಪೆಟ್ಟಿಗೆಗಳ ಉಪಾಯಗಳನ್ನು ಸಾಧಾರಣವಾಗಿ ಪ್ರತಿದಿನ 1 ರಿಂದ 2 ಗಂಟೆಗಳ ಕಾಲ ಮಾಡಬೇಕು. ಕೆಲವು ದಿನಗಳವರೆಗೆ ಪ್ರತಿದಿನ 1 ರಿಂದ 2 ಗಂಟೆಗಳ ಕಾಲ ಪೆಟ್ಟಿಗೆಗಳ ಉಪಾಯ ಮಾಡಿಯೂ ರೋಗವು ಕಡಿಮೆಯಾಗುತ್ತಿಲ್ಲ ಅಥವಾ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದಾದರೆ, ಉಪಾಯಗಳಲ್ಲಿ ಹೆಚ್ಚಳ ಮಾಡಬೇಕು.

ಪೆಟ್ಟಿಗೆಗಳ ಉಪಾಯಗಳ ಸಂದರ್ಭದಲ್ಲಿನ ಸಾಮಾನ್ಯ ಸೂಚನೆಗಳು

ಅ. ಪೆಟ್ಟಿಗೆಗಳ ಉಪಾಯ ಮಾಡುವಾಗ ಗಮನಿಸಬೇಕಾದ ಸೂಚನೆಗಳು

ಅ 1. ಉಪಾಯ ಮಾಡುವಾಗ ಹೀಗೆ ಕುಳಿತುಕೊಳ್ಳಬೇಕು

ಉಪಾಯ ಮಾಡಲು ಸಾಧ್ಯವಾದಷ್ಟು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬಾರದು.

ಅ 2. ಭಾವಪೂರ್ಣ ಪ್ರಾರ್ಥನೆ ಮಾಡಬೇಕು

ಉಪಾಸ್ಯದೇವತೆಗೆ ಮುಂದಿನಂತೆ ಭಾವಪೂರ್ಣವಾಗಿ ಪ್ರಾರ್ಥಿಸಬೇಕು – ‘ಹೇ ದೇವತೆಯೇ (ದೇವತೆಯ ಹೆಸರನ್ನು ಹೇಳಬೇಕು), ನಿನ್ನ ಕೃಪೆಯಿಂದ ನನ್ನ ಈ (ರೋಗದ ಹೆಸರನ್ನು ಹೇಳಬೇಕು) ರೋಗದ ಮೇಲೆ ಉಪಾಯವಾಗಿ ನಾನು ಆದಷ್ಟು ಬೇಗ ಗುಣಮುಖನಾಗುವಂತೆ ಮಾಡು ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.’

ಅ 3. ಉಪಾಯಗಳನ್ನು ಭಾವಪೂರ್ಣವಾಗಿ ಮಾಡಬೇಕು

ದೇವರು ಭಾವಕ್ಕೆ ಒಲಿಯುತ್ತಾರೆ! ನಮ್ಮ ಭಾವದಿಂದಾಗಿ ಪೆಟ್ಟಿಗೆಯಲ್ಲಿರುವ ಆಕಾಶತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯರತವಾಗುತ್ತದೆ ಮತ್ತು ನಮ್ಮ ತೊಂದರೆಯು ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ.

ಅ 3 ಅ. ಉಪಾಯ ಭಾವಪೂರ್ಣವಾಗಲು ಮಾಡಬೇಕಾದ ಕೆಲವು ಕೃತಿಗಳು:

‘ಪೆಟ್ಟಿಗೆನಲ್ಲಿ ದೇವತ್ವವಿದೆ’ ಎಂಬ ಭಾವದಿಂದ ಪೆಟ್ಟಿಗೆಗೆ ನಮಸ್ಕಾರ ಮತ್ತು ಪ್ರಾರ್ಥನೆ ಮಾಡಬೇಕು.

ಉಪಾಯ ಮಾಡುವಾಗ ‘ಪೆಟ್ಟಿಗೆಯಲ್ಲಿರುವ ಆಕಾಶತತ್ತ್ವದಿಂದಾಗಿ ನನ್ನ ಮೇಲಿರುವ ಎಲ್ಲಾ ತೊಂದರೆದಾಯಕ ಆವರಣ ಮತ್ತು ನನ್ನಲ್ಲಿರುವ ಎಲ್ಲ ತೊಂದರೆದಾಯಕ ಶಕ್ತಿಯು ನಾಶವಾಗುತ್ತಿದ್ದು ನಾನು ಚೈತನ್ಯವನ್ನು ಗ್ರಹಿಸುತ್ತಿದ್ದೇನೆ’ ಎಂಬ ಭಾವವಿಡಬೇಕು.

ಅ 4. ಉಪಾಯ ಪೂರ್ಣಗೊಂಡ ನಂತರ ಉಪಾಸ್ಯ ದೇವತೆಗೆ ಕೃತಜ್ಞತೆ ಸಲ್ಲಿಸಬೇಕು

‘ಹೇ ದೇವತೆಯೇ (ದೇವತೆಯ ಹೆಸರನ್ನು ಹೇಳಬೇಕು), ನಿನ್ನ ಕೃಪೆಯಿಂದಲೇ ನಾನಗೆ ಈ ಉಪಾಯ ಮಾಡಲು ಸಾಧ್ಯವಾಯಿತು. ನಿನ್ನ ಚರಣಗಳಲ್ಲಿ ನಾನು ಕೃತಜ್ಞನಾಗಿದ್ದೇನೆ’ ಎಂದು ಕೃತಜ್ಞತೆ ಸಲ್ಲಿಸಬೇಕು.

5 ಆ. ಇತರ ಸೂಚನೆಗಳು

ಆ 1. ಉಪಾಯದ ಪೆಟ್ಟಿಗೆಗಳನ್ನು ಶುದ್ಧೀಕರಿಸಬೇಕು

ಸಾತ್ತ್ವಿಕ ಊದುಬತ್ತಿಯ ಧೂಪದಿಂದ ಪೆಟ್ಟಿಗೆಗಳನ್ನು ಪ್ರತಿದಿನ ಶುದ್ಧೀಕರಿಸಬೇಕು.

ಆ 2. ಖಾಲಿ ಪೆಟ್ಟಿಗೆಯ ಖಾಲಿ ಜಾಗದಲ್ಲಿನ ದೇವತ್ವವು ಜಾಗೃತವಾಗಿರಲು ಹೀಗೆ ಮಾಡಬೇಕು

ಅ. ಪ್ರಾರ್ಥನೆ ಮಾಡುವುದು: ‘ಪೆಟ್ಟಿಗೆಯಲ್ಲಿರುವ ಖಾಲಿ ಜಾಗವು ಚೈತನ್ಯದ ಮಟ್ಟದಲ್ಲಿ ಸತತವಾಗಿ ಕಾರ್ಯರತವಾಗಿರಲಿ’ ಎಂದು ಉಪಾಸ್ಯ ದೇವತೆಗೆ ಪ್ರಾರ್ಥನೆ ಸಲ್ಲಿಸಬೇಕು.

ಆ. ಊದುಬತ್ತಿಯಿಂದ ನಿವಾಳಿಸುವುದು: ಪೆಟ್ಟಿಗೆಯಲ್ಲಿರುವ ಖಾಲಿ ಜಾಗವನ್ನು ಆಗಾಗ ಊದುಬತ್ತಿಯಿಂದ ನಿವಾಳಿಸಿ ಅದರಲ್ಲಿರುವ ದೇವತ್ವವನ್ನು ಕೃತಿಯ ಮಟ್ಟದಲ್ಲಿ ಜಾಗೃತವಾಗಿಡಬೇಕು.

ಪೆಟ್ಟಿಗೆಗಳ ಪರೋಕ್ಷ ಉಪಾಯ ಮಾಡುವ ಕೆಲವು ಪದ್ಧತಿಗಳು

ಅ. ಪೂರ್ಣ ಹೆಸರು ಬರೆದ ಕಾಗದ ಅಥವಾ ಛಾಯಾಚಿತ್ರವನ್ನು ಪೆಟ್ಟಿಗೆಯಲ್ಲಿ ಇಡುವುದು

ಅ 1. ಕೃತಿ

ವ್ಯಕ್ತಿಗೆ ಇರುವ ರೋಗವು ದೂರವಾಗಲು ಆ ವ್ಯಕ್ತಿಯು ತನ್ನ ಪೂರ್ಣ ಹೆಸರನ್ನು ಒಂದು ಬಿಳಿ ಹಾಳೆಯ ಮೇಲೆ ಬರೆದು ಆ ಕಾಗದವನ್ನು ಪೆಟ್ಟಿಗೆನಲ್ಲಿ ಇಡಬೇಕು ಅಥವಾ ತನ್ನ ಛಾಯಾಚಿತ್ರವನ್ನು ಪೆಟ್ಟಿಗೆಯಲ್ಲಿ ಇಡಬೇಕು.

ಅ 2. ವಿಶೇಷ ಉಪಯುಕ್ತತೆ

ವ್ಯಕ್ತಿಯ ಹತ್ತಿರ (ಸುತ್ತಮುತ್ತ) ಉಪಾಯಗಳಿಗಾಗಿ ಪೆಟ್ಟಿಗೆಗಳನ್ನು ಇಡುವುದು ಸಾಧ್ಯವಿಲ್ಲದಿದ್ದಾಗ (ಉದಾ. ಐ.ಸಿ.ಯು. ನಲ್ಲಿರುವ ರೋಗಿ, ತೆವಳುವ ಮಗು), ಅವರಿಗಾಗಿ ಈ ಉಪಾಯವನ್ನು ಮಾಡಲೇಬೇಕು.

ಆ. ವಿಚಾರಗಳ ಮೇಲೆ ನಿಯಂತ್ರಣ ಸಾಧಿಸಲು ಪೆಟ್ಟಿಗೆ ಉಪಾಯ ಮಾಡುವುದು

ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕ, ನೈರಾಶ್ಯದ, ಕೆಟ್ಟ ಅಥವಾ ಸಾಧನೆಯಿಂದ ದೂರ ಕೊಂಡೊಯ್ಯುವ ವಿಚಾರಗಳು ಬರುತ್ತಿದ್ದರೆ ಆ ವಿಚಾರಗಳನ್ನು ಕಾಗದದ ಮೇಲೆ ಬರೆದು ಆ ಕಾಗದವನ್ನು ಪೆಟ್ಟಿಗೆಯಲ್ಲಿ ಇಡುವುದು ಅಥವಾ ತನ್ನ ಹಸ್ತಾಕ್ಷರವಿರುವ ಕಾಗದ ಅಥವಾ ತನ್ನ ಪುಸ್ತಕವನ್ನು ಪೆಟ್ಟಿಗೆನಲ್ಲಿ ಇಡುವುದು.

ಆ 1. ಕೃತಿ

ಅ. ವ್ಯಕ್ತಿಯು ಮೇಲೆ ತಿಳಿಸಿದ ವಿಚಾರಗಳನ್ನು ಒಂದು ಬಿಳಿ ಕಾಗದದ ಮೇಲೆ ಬರೆದು, ಆ ಬರವಣಿಗೆಯ ಸುತ್ತಲೂ ‘ಓಂ ನಮೋ ಭಗವತೇ ವಾಸುದೇವಾಯ |’ ಈ ನಾಮಜಪದ ಅಥವಾ ಉಪಾಸ್ಯ ದೇವತೆಯ ನಾಮಜಪದ ಮಂಡಲವನ್ನು ಬಿಡಿಸಿ (ಜಪವನ್ನು ಸಾಲಾಗಿ ಬರೆದು) ಆ ಕಾಗದವನ್ನು ಪೆಟ್ಟಿಗೆಯಲ್ಲಿ ಇಡಬೇಕು.

ಆ. ಮೇಲಿನ ಕೃತಿ ಮಾಡಲು ಸಾಧ್ಯವಿಲ್ಲದಿದ್ದರೆ ವ್ಯಕ್ತಿಯು ತನ್ನ ಹಸ್ತಾಕ್ಷರವಿರುವ ಯಾವುದಾದರೊಂದು ಕಾಗದ ಅಥವಾ ಪುಸ್ತಕವನ್ನು ಪೆಟ್ಟಿಗೆನಲ್ಲಿ ಇಡಬೇಕು. ಹಸ್ತಾಕ್ಷರವು ಸಾಧ್ಯವಿದ್ದಷ್ಟು ತೊಂದರೆಯಾಗುತ್ತಿರುವ ಕಾಲದ್ದಾಗಿರಲಿ.

ಸವಿಸ್ತಾರವಾದ ವಿವೇಚನೆಗಾಗಿ ಓದಿ : ಸನಾತನದ ಗ್ರಂಥ ‘ರೋಗ-ನಿರ್ಮೂಲನೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ (2 ಭಾಗ)’

Leave a Comment