ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿನ ವಿವಿಧ ಕೋಶಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಆ ಪರಿಣಾಮಗಳು ಯಾವ ರೀತಿಯದ್ದಾಗಿರುತ್ತವೆ ಎಂದು ನೋಡೋಣ…
ಅಸ್ಥಿ ಮತ್ತು ಸ್ನಾಯು ವ್ಯವಸ್ಥೆ (Bones and muscles)
ಮಾನಸಿಕ ಒತ್ತಡವಿದ್ದರೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆ. ಸ್ನಾಯುಗಳ ಮೇಲೆ ಒತ್ತಡ ಬರುವುದು, ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅನಿರೀಕ್ಷಿತವಾಗಿ ಬಂದ ಮಾನಸಿಕ ಒತ್ತಡದಿಂದ ಹೇಗೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆಯೋ, ಹಾಗೆಯೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾದಾಗ ಸ್ನಾಯುಗಳ ಮೇಲೆ ಬಂದಿರುವ ಒತ್ತಡವೂ ಕ್ರಮೇಣ ಕಡಿಮೆಯಾಗುತ್ತದೆ; ಆದರೆ ನಿರಂತರವಾಗಿ ಮಾನಸಿಕ ಒತ್ತಡವಿದ್ದರೆ, ಸ್ನಾಯುಗಳ ಮೇಲೆ ಪದೇ ಪದೇ ಒತ್ತಡ ಬರುತ್ತಿರುತ್ತದೆ ಹಾಗೂ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಸ್ನಾಯುಗಳ ಮೇಲೆ ಬಂದಿರುವ ಒತ್ತಡದಿಂದ ಕುತ್ತಿಗೆ ನೋವು, ಭುಜಗಳ ನೋವು, ತಲೆನೋವು, ಸೊಂಟ ನೋವು ಇತ್ಯಾದಿ ಬರುತ್ತವೆ.
ಶ್ವಾಸಾಂಗವ್ಯೂಹ (Respiratory system)
ಶ್ವಾಸಾಂಗವ್ಯೂಹವು ನಮ್ಮ ಶರೀರಕ್ಕೆ ಆಮ್ಲಜನಕವನ್ನು ಪೂರೈಸುವ ಕಾರ್ಯವನ್ನು ಮಾಡುತ್ತದೆ. ಮಾನಸಿಕ ಒತ್ತಡ ಹೆಚ್ಚಾದಾಗ ಉಸಿರಾಟ ಅಪೂರ್ಣವಾಗುವುದರಿಂದ ಉಸಿರಾಟದ ವೇಗ ಹೆಚ್ಚಾಗುತ್ತದೆ. ಯಾರಿಗೆ ಉಸಿರಾಟದ ಕಾಯಿಲೆ ಇಲ್ಲವೋ ಅವರಿಗೆ ಪರಿಣಾಮದ ಅಷ್ಟು ಅರಿವಾಗುವುದಿಲ್ಲ; ಆದರೆ ಉಬ್ಬಸ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಗಳಿದ್ದರೆ ಮಾನಸಿಕ ಒತ್ತಡದಿಂದ ಆ ಕಾಯಿಲೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ರಕ್ತಪರಿಚಲನೆ ವ್ಯವಸ್ಥೆ (Circulatory system)
ರಕ್ತಪರಿಚಲನೆ ವ್ಯವಸ್ಥೆಯು ಹೃದಯ ಮತ್ತು ಅದರಿಂದ ಹೊರಡುವ ರಕ್ತವಾಹಿನಿಗಳಿಂದ ತಯಾರಾಗಿರುತ್ತದೆ. ಸಂಪೂರ್ಣ ಶರೀರಕ್ಕೆ ಶುದ್ಧ ರಕ್ತವನ್ನು ಪೂರೈಸುವ ಮತ್ತು ಕಲ್ಮಶವನ್ನು ಹೊರತೆಗೆಯುವ ಕಾರ್ಯವನ್ನು ಇದು ಮಾಡುತ್ತದೆ. ಅನಿರೀಕ್ಷಿತವಾಗಿ ಬರುವ ಒತ್ತಡದಿಂದ, ಉದಾ. ಕಾರ್ಯಾಲಯದಲ್ಲಿ ಯಾವುದಾದರೊಂದು ಅನಿರೀಕ್ಷಿತ ಕೆಲಸ ಬಂದರೆ, ದಾರಿಯಲ್ಲಿ ಸಾರಿಗೆ ತಡೆಯುಂಟಾಗಿ (ಟ್ರಾಫಿಕ್ ಜಾಮ್) ಸಮಯಕ್ಕನುಸಾರ ತಲುಪಬೇಕೆಂಬ ಒತ್ತಡ ಇತ್ಯಾದಿಗಳಿಂದ ಹೃದಯದ ಬಡಿತ ಹೆಚ್ಚಾಗುತ್ತದೆ, ಹೃದಯದ ಸ್ನಾಯುಗಳ ಆಕುಂಚನವೂ ವೇಗವಾಗಿ ಆಗುತ್ತದೆ. ಒತ್ತಡ ಬರುವುದರಿಂದ ಶರೀರದಲ್ಲಿ ಸ್ರವಿಸುವ ಕೆಲವು ಚೋದಕಗಳ (ಹಾರ್ಮೋನುಗಳ) ಪರಿಣಾಮದಿಂದ ಹೀಗಾಗುತ್ತದೆ. ದೀರ್ಘಕಾಲದವರೆಗೆ ಒತ್ತಡ ಇದ್ದರೆ, ಹೃದಯದ ಆಕುಂಚನದ ವೇಗ ಮತ್ತು ಬಿರುಸುತನ ಹೆಚ್ಚಾಗುತ್ತದೆ. ಆದ್ದರಿಂದ ರಕ್ತದೊತ್ತಡ ಹೆಚ್ಚಾಗುವುದು, ಹೃದಯಾಘಾತ ಇತ್ಯಾದಿ ವಿಕಾರಗಳು ನಿರ್ಮಾಣವಾ.
ಅಂತಃಸ್ರಾವಕ ವ್ಯವಸ್ಥೆ (Endocrine system)
ಮನಸ್ಸಿನ ಮೇಲೆ ಒತ್ತಡ ಬಂದಾಗ ಶರೀರದ ನೈಸರ್ಗಿಕ ಪ್ರತಿಕ್ರಿಯೆಯೆಂದು ‘ಕಾರ್ಟಿಸೊನ್’ ಎಂಬ ಹೆಸರಿನ ಚೋದಕ ತಯಾರಾಗುತ್ತದೆ. ಇದರ ಸಹಾಯದಿಂದ ಒತ್ತಡವನ್ನು ಜಯಿಸಲು ಊರ್ಜೆಯನ್ನು ನಿರ್ಮಾಣ ಮಾಡಲಾಗುತ್ತದೆ. ಸ್ವಲ್ಪ ಸಮಯ ಬಂದಿರುವ ಒತ್ತಡವನ್ನು ನಿಯಂತ್ರಿಸಲು ಈ ಚೋದಕವು ಕಾರ್ಯ ಮಾಡುತ್ತದೆ. ಒತ್ತಡ ದೀರ್ಘಕಾಲದ ವರೆಗೆ ಇದ್ದರೆ ಈ ಚೋದಕದ ಪ್ರಮಾಣದಲ್ಲಿ ಅಸಮತೆ ನಿರ್ಮಾಣವಾಗುತ್ತದೆ ಹಾಗೂ ಅದರ ಪರಿಣಾಮದಿಂದ ಅಂತಃಸ್ರಾವಕ ವ್ಯವಸ್ಥೆಯಲ್ಲಿ ಅಸಮತೆಯುಂಟಾಗುತ್ತದೆ. ಆದ್ದರಿಂದ ಒತ್ತಡದಿಂದ ಮಧುಮೇಹ, ಸ್ಥೂಲಕಾಯ ಹಾಗೂ ನಿರಾಶೆಯಂತಹ ಸಮಸ್ಯೆಗಳು ನಿರ್ಮಾಣವಾಗುತ್ತವೆ.
ಜೀರ್ಣಾಂಗ ವ್ಯೂಹ (Digestive system)
ಯಾವುದಾದರೊಂದು ವಿಷಯದ ಬಗ್ಗೆ ನಮಗೆ ಒತ್ತಡವೆನಿಸಿದರೆ, ನಾವು ‘ಹೊಟ್ಟೆಯಲ್ಲಿ ಗಂಟು ಎದ್ದಿದೆ’ ಎಂದು ಹೇಳುತ್ತೇವೆ. ಇದರಿಂದ ನಮ್ಮ ಜೀರ್ಣಾಂಗವ್ಯವಸ್ಥೆ ಮತ್ತು ಮೆದುಳಿನಿಂದ ಬರುವ ಸಂವೇದನೆಗಳ ಪರಸ್ಪರ ಸಂಬಂಧವಿದೆ ಎಂದು ತಿಳಿಯುತ್ತದೆ. ಒತ್ತಡ ಬಹಳಷ್ಟು ಸಲ ತಿನ್ನುವ ಆಸಕ್ತಿಯನ್ನು ಹೆಚ್ಚಿಸುತ್ತದೆ ಅಥವಾ ಹಸಿವೆಯೇ ಇಲ್ಲದಂತಾಗುತ್ತದೆ. ಇದರಿಂದ ತಿನ್ನುವ ವ್ಯಸನವೂ ಹೆಚ್ಚಾಗಬಹುದು. ಇದರಿಂದ ಎದೆ ಉರಿಯುವುದು ಕಂಡು ಬರುತ್ತದೆ ಬರಬಹುದು. ಸತತವಾಗಿ ಮಾನಸಿಕ ಒತ್ತಡ ಹಾಗೂ ಮಾನಸಿಕ ಆಯಾಸವು ಎದೆ ಉರಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಮಲಬದ್ಧತೆ ಅಥವಾ ಅತೀಸಾರದಂತಹ ಸಮಸ್ಯೆಗಳೂ ಆಗಬಹುದು.
ಸಂತಾನೋತ್ಪತ್ತಿ ವ್ಯವಸ್ಥೆ (Reproductive system)
ಮಾನಸಿಕ ಒತ್ತಡವು ಸ್ತ್ರೀಯರಲ್ಲಿನ ರಜಃಸ್ರಾವದ ಮೇಲೆ (ಮುಟ್ಟಿನ ಮೇಲೆ) ಪರಿಣಾಮ ಬೀರುತ್ತದೆ. ಮುಟ್ಟು ಅನಿಯಮಿತವಾಗುವುದು, ಆದಾಗ ತುಂಬಾ ತೊಂದರೆಯಾಗುವುದು, ಗರ್ಭಧಾರಣೆಯಾಗಲು ಅಡಚಣೆಯುಂಟಾಗುವುದು, ಮುಂತಾದ ಅನೇಕ ಸಮಸ್ಯೆಗಳು ಕೇವಲ ಒತ್ತಡದಿಂದಲೇ ನಿರ್ಮಾಣವಾಗಬಹುದು. ನಿರಂತರ ಒತ್ತಡವು ಪುರುಷರಲ್ಲಿ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಉದಾ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು, ಸಂತಾನ ಆಗದಿರುವುದು ಇತ್ಯಾದಿ. ನಿರಂತರ ಒತ್ತಡವು (ಟೆನ್ಶನ್) ವೈವಾಹಿಕ ಜೀವನದಲ್ಲಿಯೂ ಸಮಸ್ಯೆಯನ್ನುಂಟು ಮಾಡುತ್ತದೆ.
ಒತ್ತಡವನ್ನು ಜಯಿಸಿ
ಈ ರೀತಿ ಕೇವಲ ಮಾನಸಿಕ ಒತ್ತಡವು ಅನೇಕ ಕಾಯಿಲೆಗಳ ಮೂಲ ಕಾರಣವಾಗುತ್ತದೆ, ಆದ್ದರಿಂದ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಒತ್ತಡವು ಈ ಧಾವಂತದ ಜೀವನದಲ್ಲಿ ಬರುವ ಅವಿಭಾಜ್ಯ ಅಂಗವಾಗಿದೆ; ಆದರೆ ಆ ಒತ್ತಡದಿಂದ ನಮ್ಮ ಶರೀರದ ಮೇಲೆ ಪರಿಣಾಮವಾಗದಂತೆ ಅದನ್ನು ಹೇಗೆ ಜಯಿಸಬಹುದು ?
ಅ. ಪ್ರತಿದಿನ ಯಾವುದಾದರೂ ಇಷ್ಟವಾಗುವ ವ್ಯಾಯಾಮ ಮಾಡಬೇಕು.
ಆ. ರಾತ್ರಿಯ ನಿದ್ದೆ ಪೂರ್ಣವಾಗುವಂತೆ ನಿಯೋಜನೆ ಮಾಡಬೇಕು.
ಇ. ತನಗೆ ಇಷ್ಟವಾಗುವ ಹವ್ಯಾಸವನ್ನು ರೂಢಿ ಮಾಡಿಸಿಕೊಳ್ಳಬೇಕು.
ಈ. ಪ್ರಾಣಾಯಾಮ, ಧ್ಯಾನಧಾರಣೆ, ಗುರುಕೃಪಾಯೋಗ ಇಂತಹ ಯಾವುದೇ ಮಾರ್ಗಾನುಸಾರ ಸಾಧನೆಯನ್ನು ಮಾಡಬೇಕು.
]ಬಹಳಷ್ಟು ಸಲ ಒತ್ತಡ ನಿರ್ಮಾಣವಾಗಲು ನಮ್ಮ ಸ್ವಭಾವದೋಷಗಳೇ ಕಾರಣವಾಗಿರುತ್ತವೆ, ಉದಾ. ‘ಎಲ್ಲವೂ ತನ್ನ ಇಚ್ಛೆಯಂತೆಯೆ ಆಗಬೇಕು’, ಎನ್ನುವ ಹಠವಿದ್ದರೆ ಹಾಗೂ ಎದುರಿಸುತ್ತಿರುವ ಪರಿಸ್ಥಿತಿ ವಿರುದ್ಧವಾಗಿದ್ದರೆ, ಒತ್ತಡ ಹೆಚ್ಚಾಗುತ್ತದೆ, ಸಿಟ್ಟು ಬರಲು ಆರಂಭವಾಗುತ್ತದೆ. ಈ ರೀತಿ ತನ್ನಲ್ಲಿರುವ ಯಾವ ಸ್ವಭಾವದೋಷಗಳಿಂದ ಒತ್ತಡ ಬರುತ್ತದೆ, ಎಂಬುದರ ಅಭ್ಯಾಸ ಮಾಡಿ ಅವುಗಳಿಗೆ ಸ್ವಯಂಸೂಚನೆಗಳನ್ನು ನೀಡಿ ಅವುಗಳನ್ನು ನಿವಾರಿಸಲು ಪ್ರಯತ್ನಿಸಬೇಕು.
– ವೈದ್ಯೆ (ಸೌ.) ಮುಕ್ತಾ ಲೋಟಲೀಕರ್, ಪುಣೆ
ಒತ್ತಡ ಮುಕ್ತ ಜೀವನದಲ್ಲಿ ಸ್ವಯಂಸೂಚನೆಗಳ ಮಹತ್ವವನ್ನು ತಿಳಿದುಕೊಳ್ಳಲು ಸನಾತನದ ಉಚಿತ ಸತ್ಸಂಗಗಳಲ್ಲಿ ಭಾಗವಹಿಸಿ…
ಕ್ಲಿಕ್ ಮಾಡಿ
ಕೆಂಗಣ್ಣು (Conjunctivitis) – ಕಾರಣಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ನಾಮಜಪ
ಚರ್ಮದ ಶಿಲೀಂಧ್ರ ಸೋಂಕಿಗೆ (‘ಫಂಗಲ್ ಇನ್ಫೆಕ್ಶನ್’ಗೆ) ಆಯುರ್ವೇದ ಚಿಕಿತ್ಸೆ
ಆಂಗ್ಲದ 8 ರ ಆಕಾರದ ನಡಿಗೆ : ಒಂದು ಉತ್ತಮ ವ್ಯಾಯಾಮ ಪದ್ಧತಿ !
ಬಂದ್ ಬಾಟಲಿಗಳ ನೀರನ್ನು ಅವಲಂಬಿಸಿರುವುದು ಅಪಾಯಕಾರಿ !
ಸ್ಥೂಲಕಾಯವನ್ನು ಕಡಿಮೆಗೊಳಿಸಲು ಆಯುರ್ವೇದ ಚಿಕಿತ್ಸೆ
ತ್ವಚೆಯ ಫಂಗಸ್ನಿಂದ ಉತ್ಪನ್ನವಾಗುವ ಗಜಕರ್ಣದಂತಹ ರೋಗಕ್ಕೆ ಸುಲಭ ಉಪಾಯ