ಮುದ್ರೆಗಳ ವಿಜ್ಞಾನವು ಹಿಂದೂ ಧರ್ಮವು ಜಗತ್ತಿಗೆ ನೀಡಿದ ಅಸಾಧಾರಣ ಕೊಡುಗೆಯಾಗಿದೆ. ಋಷಿಮುನಿಗಳು ಹೇಳಿದ ಮುದ್ರೆಗಳ ಶಾಸ್ತ್ರದ ಅಧ್ಯಯನವನ್ನು ಭಾರತದ ಅನೇಕ ಯೋಗಾಚಾರ್ಯರು ಮತ್ತು ಅಭ್ಯಾಸಕರು ಮಾಡಿದ್ದಾರೆ. ಮುದ್ರೆಗಳ ಉಪಾಯದ ತಾತ್ತ್ವಿಕ ವಿಷಯವನ್ನು ಅರ್ಥಮಾಡಿಕೊಂಡು ಅವರು ಮಾನವ ಆರೋಗ್ಯದ ದೃಷ್ಟಿಯಿಂದ ಉಪಯುಕ್ತವಾಗುವಂತಹ ಹೊಸ ಹೊಸ ಮುದ್ರೆಗಳನ್ನೂ ಶೋಧಿಸಿದ್ದಾರೆ.
ಬ್ರಹ್ಮಾಂಡದಂತೆಯೇ ಮಾನವ ದೇಹವೂ ಪೃಥ್ವಿ, ಆಪ (ನೀರು), ತೇಜ (ಅಗ್ನಿ), ವಾಯು ಮತ್ತು ಆಕಾಶ ಎಂಬ ಪಂಚತತ್ತ್ವಗಳಿಂದ ನಿರ್ಮಿಸಲ್ಪಟ್ಟಿದೆ. ಇವುಗಳನ್ನು ಪಂಚಮಹಾಭೂತಗಳು ಎಂದೂ ಕರೆಯುತ್ತಾರೆ. ಈಗ ನಾವು ಮುದ್ರೆ ಮತ್ತು ನ್ಯಾಸಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಮುದ್ರೆ
ಅ. ಮುದ್ರೆ ಎಂಬ ಪದದ ಅರ್ಥ
ಮಾನವನ ಪ್ರತಿಯೊಂದು ಕೃತಿಯಿಂದ ಅವನ ಶರೀರ ಅಥವಾ ಶರೀರದ ಅವಯವಗಳ ಆಕೃತಿಗಳು ನಿರ್ಮಾಣವಾಗುತ್ತವೆ. ಹಾಗೆಯೇ ಕೈ ಬೆರಳುಗಳು ಪರಸ್ಪರ ಸ್ಪರ್ಶಿಸಿದಾಗ ಅಥವಾ ಬೆರಳುಗಳನ್ನು ಒಂದು ವಿಶಿಷ್ಟ ರೀತಿಯಲ್ಲಿ ಜೋಡಿಸಿದಾಗ ವಿವಿಧ ರೀತಿಯ ಆಕೃತಿಗಳು ಸಿದ್ಧವಾಗುತ್ತವೆ. ಈ ಆಕೃತಿಗಳಿಗೆ ‘ಮುದ್ರೆ’ ಎಂದು ಕರೆಯುತ್ತೇವೆ.
ಆ. ರೋಗ ನಿರ್ಮೂಲನೆಯ ವಿಷಯದಲ್ಲಿ ಮುದ್ರೆಗಳ ಮಹತ್ವ
ಮಾನವನ ದೇಹದಲ್ಲಿ ಪಂಚಮಹಾಭೂತಗಳ ಅಸಮತೋಲನ ಉಂಟಾದಾಗ ರೋಗಗಳು ನಿರ್ಮಾಣವಾಗುತ್ತವೆ. ಮಾನವ ದೇಹದ ಪಂಚಮಹಾಭೂತಗಳ ಸಮತೋಲನವನ್ನು ಕಾಯ್ದುಕೊಳ್ಳುವುದೇ ಆರೋಗ್ಯದ ಗುಟ್ಟು. ಮುದ್ರೆಗಳ ಸಹಾಯದಿಂದ ಮಾನವನಿಗೆ ತನ್ನ ದೇಹದ ಪಂಚಮಹಾಭೂತಗಳ ಪ್ರಮಾಣದ ಸಮತೋಲನವನ್ನು ಕಾಯ್ದುಕೊಳ್ಳಲು ಸಹಜವಾಗಿ ಸಾಧ್ಯವಾಗುತ್ತದೆ.
ಇ. ಪಂಚಮಹಾಭೂತಗಳನ್ನು ಪ್ರತಿನಿಧಿಸುವ ಕೈಬೆರಳುಗಳು
ಋಷಿಮುನಿಗಳು ಮತ್ತು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಾನವನ ಕೈಯ ಐದು ಬೆರಳುಗಳು ಪಂಚಮಹಾಭೂತಗಳನ್ನು ಪ್ರತಿನಿಧಿಸುತ್ತವೆ. ಈ ಬಗ್ಗೆ ಮುಂದಿನ ಎರಡು ವಿಚಾರಧಾರೆಗಳಿವೆ.
ಇ 1. ಎರಡು ವಿಚಾರಧಾರೆಗಳು
ಇ 1 ಅ. ಮೊದಲನೆಯ ವಿಚಾರಧಾರೆ:
ಅ. ಬೆರಳುಗಳು ಮತ್ತು ಸಂಬಂಧಿತ ಮಹಾಭೂತ – ಕಿರುಬೆರಳು, ಅನಾಮಿಕೆ (ಕಿರುಬೆರಳಿನ ಪಕ್ಕದ ಬೆರಳು), ಮಧ್ಯಮಾ (ನಡುಬೆರಳು), ತರ್ಜನಿ (ತೋರುಬೆರಳು) ಮತ್ತು ಹೆಬ್ಬೆರಳು ಈ ಬೆರಳುಗಳು ಅನುಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಮಹಾಭೂತಗಳನ್ನು ಪ್ರತಿನಿಧಿಸುತ್ತವೆ. [ಸಂದರ್ಭ ಗ್ರಂಥ: ೧. ಶಾರದಾತಿಲಕ (ಅಧ್ಯಾಯ ೨೩, ಶ್ಲೋಕ ೧೦೬ ರ ಮೇಲಿನ ಟಿಪ್ಪಣಿ) ಮತ್ತು ೨. ಸ್ವರವಿಜ್ಞಾನ].
ಆ. ಪಂಚಮಹಾಭೂತಗಳ ಕ್ರಮ: ಪಂಚಮಹಾಭೂತಗಳಲ್ಲಿ ಮೊದಲನೆಯದಾದ ಪೃಥ್ವಿತತ್ತ್ವವು ಸಗುಣ ತತ್ತ್ವದ ದರ್ಶಕವಾಗಿದೆ. ಆನಂತರ ಕ್ರಮವಾಗಿ ಬರುವ ಆಪ, ತೇಜ ಮತ್ತು ವಾಯು ತತ್ತ್ವಗಳಲ್ಲಿ ಸಗುಣದ ಪ್ರಮಾಣವು ಕಡಿಮೆಯಾಗುತ್ತಾ ಹೋಗಿ ನಿರ್ಗುಣದ ಪ್ರಮಾಣವು ಹೆಚ್ಚಾಗುತ್ತದೆ. ಕೊನೆಯದಾದ ಆಕಾಶತತ್ತ್ವವು ನಿರ್ಗುಣ ತತ್ತ್ವದ ದರ್ಶಕವಾಗಿದೆ. ಇದರಂತೆ ಮೇಲೆ ನೀಡಲಾದ ಬೆರಳುಗಳ ಕ್ರಮವು ಪಂಚಮಹಾಭೂತಗಳ ಕ್ರಮವನ್ನು – ಸಗುಣದಿಂದ ನಿರ್ಗುಣದ ಕಡೆಗೆ ಎಂದು ಸೂಚಿಸುತ್ತದೆ.
ಸಾಧನೆ ಮಾಡಿ ಸಗುಣದಿಂದ ನಿರ್ಗುಣದ ಕಡೆಗೆ ಹೋಗುವುದು ಸಾಧಕನ ಧ್ಯೇಯವಾಗಿರುತ್ತದೆ; ಆದ್ದರಿಂದ ಉಪಾಯಗಳಿಗಾಗಿ ಮೊದಲನೆಯ ವಿಚಾರಧಾರೆಯನ್ನು ಆರಿಸಿಕೊಳ್ಳಲಾಗಿದೆ.
1 ಇ 1 ಆ. ಎರಡನೆಯ ವಿಚಾರಧಾರೆ:
ಅ. ಬೆರಳುಗಳು ಮತ್ತು ಸಂಬಂಧಿತ ಮಹಾಭೂತ: ಅನಾಮಿಕೆ, ಕಿರುಬೆರಳು, ಹೆಬ್ಬೆರಳು, ತರ್ಜನಿ ಮತ್ತು ಮಧ್ಯಮಾ ಬೆರಳುಗಳು ಅನುಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ತತ್ತ್ವಗಳನ್ನು ಪ್ರತಿನಿಧಿಸುತ್ತವೆ.
ಮುದ್ರೆ ಮಾಡುವಾಗ ಬೆರಳುಗಳ ಸ್ಥಿತಿ ಹೇಗಿರಬೇಕು?
ಅ. ಮುದ್ರೆ ಮಾಡುವಾಗ ಯಾವ ಬೆರಳನ್ನು ಮತ್ತೊಂದು ಬೆರಳಿನ ತುದಿಗೆ ಜೋಡಿಸಬೇಕೋ ಅಥವಾ ಬುಡಕ್ಕೆ ತಾಗಿಸಬೇಕೋ ಅಥವಾ ಅಂಗೈಗೆ ತಾಗಿಸಬೇಕೋ, ಆ ಬೆರಳಿನಿಂದ ಸಂಬಂಧಿತ ಸ್ಥಳದಲ್ಲಿ ಹಗುರವಾಗಿ ಒತ್ತಡ ನೀಡಬೇಕು. ಒತ್ತಡ ನೀಡಲು ಸಾಧ್ಯವಾಗದಿದ್ದರೆ ಸ್ಪರ್ಶ ಮಾಡಬೇಕು.
ಆ. ಯಾವ ಬೆರಳುಗಳಿಂದ ಮುದ್ರೆ ಮಾಡಬೇಕಿದೆಯೋ ಆ ಬೆರಳುಗಳನ್ನು ಹೊರತುಪಡಿಸಿ, ಉಳಿದ ಬೆರಳುಗಳನ್ನು ಸಹಜವಾಗಿ ಎಷ್ಟು ಸಾಧ್ಯವೋ ಅಷ್ಟು ನೇರವಾಗಿ ಇಡಬೇಕು. ಬೆರಳುಗಳನ್ನು ಪ್ರಯತ್ನಪೂರ್ವಕವಾಗಿ ಬಿಗಿಯಾಗಿ (ನೇರವಾಗಿ) ಇಡಲು ಪ್ರಯತ್ನಿಸಿದರೆ ನಾಮಜಪದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಲು ಸಾಧ್ಯವಾಗುವುದಿಲ್ಲ.
ಮುದ್ರೆ, ನ್ಯಾಸ ಮತ್ತು ನ್ಯಾಸ ಮಾಡಲು ಬೇಕಾದ ಸ್ಥಾನಗಳ ಬಗ್ಗೆ ಪ್ರಾಯೋಗಿಕ ಮಾಹಿತಿ
ಅ. ಪಂಚತತ್ತ್ವಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮುದ್ರೆ ಹಾಗೂ ನ್ಯಾಸ
ಅ 1. ಪಂಚತತ್ತ್ವಗಳಿಗೆ ಸಂಬಂಧಿಸಿದ ಕೈಬೆರಳುಗಳು
| ತತ್ತ್ವ | ಕೈಬೆರಳು | ತತ್ತ್ವ | ಕೈಬೆರಳು |
|---|---|---|---|
| ಪೃಥ್ವಿ | ಕಿರುಬೆರಳು | ವಾಯು | ತೋರುಬೆರಳು |
| ಆಪ | ಅನಾಮಿಕೆ | ಆಕಾಶ | ಹೆಬ್ಬೆರಳು |
| ತೇಜ | ನಡುಬೆರಳು |
ಅ 2. ಮುದ್ರೆಯು ಸಗುಣ ಮತ್ತು ನಿರ್ಗುಣ ತತ್ತ್ವಗಳೊಂದಿಗೆ ಹೊಂದಿರುವ ಸಂಬಂಧ:
| ಮುದ್ರೆ | ಸಗುಣ-ನಿರ್ಗುಣ ಸ್ತರ |
|---|---|
| ಹೆಬ್ಬೆರಳಿನ ತುದಿಯನ್ನು ಬೆರಳಿನ ತುದಿಗೆ ತಾಗಿಸುವುದು | ಸಗುಣ |
| ಹೆಬ್ಬೆರಳಿನ ತುದಿಯನ್ನು ಬೆರಳಿನ ಬುಡಕ್ಕೆ ತಾಗಿಸುವುದು | ಸಗುಣ-ನಿರ್ಗುಣ |
| ಬೆರಳಿನ ತುದಿಯನ್ನು ಅಂಗೈ ಮಧ್ಯಕ್ಕೆ ತಾಗಿಸುವುದು | ನಿರ್ಗುಣ-ಸಗುಣ |
| ತರ್ಜನಿಯ ತುದಿಯನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸುವುದು | ಅಧಿಕ ನಿರ್ಗುಣ-ಸಗುಣ |
| ಬೆರಳಿನ ತುದಿ ಅಥವಾ ಅಂಗೈಯನ್ನು ನ್ಯಾಸ ಮಾಡುವ ಸ್ಥಳದಿಂದ ೧-೨ ಸೆ.ಮೀ. ದೂರ ಹಿಡಿಯುವುದು | ಬಹಳ ಹೆಚ್ಚು ನಿರ್ಗುಣ-ಸಗುಣ |
ಮೇಲಿನ ಕೋಷ್ಟಕದಿಂದ ಮುದ್ರೆಗನುಸಾರ ಉಪಾಯವಾಗುವ ಪರಿಣಾಮಕಾರಕತೆ ಹೆಚ್ಚಾಗುವ ಹಂತಗಳು ತಿಳಿಯುತ್ತವೆ. ಅಂದರೆ ಮೊದಲ ಪ್ರಕಾರದ ಮುದ್ರೆಗಿಂತ ಎರಡನೆಯ ಮುದ್ರೆ, ಎರಡನೆಯದಕ್ಕಿಂತ ಮೂರನೆಯದು ಹೀಗೆ ಮುಂದಿನ ಮುದ್ರೆಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.
ಅ 3. ನ್ಯಾಸ ಮಾಡುವ ಪದ್ಧತಿ
ಮುಂದೆ ನೀಡಿದಂತೆ ಮದ್ರೆಗಳ ನ್ಯಾಸ ಮಾಡಬೇಕು
| ಮುದ್ರೆ | ನ್ಯಾಸ |
|---|---|
| ಹೆಬ್ಬೆರಳಿನ ತುದಿಯನ್ನು ಬೆರಳಿನ ತುದಿಗೆ ತಾಗಿಸುವುದು | ಸಂಬಂಧಿತ ಬೆರಳಿನ ತುದಿಯಿಂದ ನ್ಯಾಸ ಮಾಡಬೇಕು. |
| ಹೆಬ್ಬೆರಳಿನ ತುದಿಯನ್ನು ಬೆರಳಿನ ಬುಡಕ್ಕೆ ತಾಗಿಸುವುದು | ಸಂಬಂಧಿತ ಬೆರಳಿನ ತುದಿಯಿಂದ ನ್ಯಾಸ ಮಾಡಬೇಕು. |
| ಬೆರಳಿನ ತುದಿಯನ್ನು ಅಂಗೈಗೆ ತಾಗಿಸುವುದು | ಅಂಗೈಯಿಂದ ನ್ಯಾಸ ಮಾಡಬೇಕು. |
| ತೋರುಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸುವುದು | ಹೆಬ್ಬೆರಳಿನ ತುದಿಯಿಂದ ನ್ಯಾಸ ಮಾಡಬೇಕು. |
*ಶರೀರದಿಂದ 1 – 2 ಸೆ.ಮೀ. ಅಂತರದಲ್ಲಿ ನ್ಯಾಸ ಮಾಡಬೇಕು.
ಆ. ವಿಕಾರ (ರೋಗ) ಮತ್ತು ರೋಗಗಳಿಗೆ ಸಂಬಂಧಿಸಿದ ಕುಂಡಲಿನಿ ಚಕ್ರಗಳು (ನ್ಯಾಸದ ಸ್ಥಾನಗಳು)
| ವಿಕಾರ | ಸಂಬಂಧಿಸಿದ ಕುಂಡಲಿನಿ ಚಕ್ರ |
|---|---|
| 1. ಶಾರೀರಿಕ ವಿಕಾರ (ರೋಗ) | |
| ಅ. ತಲೆ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ವಿಕಾರ | ಆಜ್ಞಾಚಕ್ರ (ಭ್ರೂಮಧ್ಯ, ಅಂದರೆ ಎರಡು ಹುಬ್ಬುಗಳ ಮಧ್ಯದಲ್ಲಿ) |
| ಆ. ಮೂಗು, ಬಾಯಿ, ಕಿವಿ ಮತ್ತು ಗಂಟಲಿಗೆ ಸಂಬಂಧಿಸಿದ ವಿಕಾರ | ವಿಶುದ್ಧಚಕ್ರ (ಕಂಠ, ಅಂದರೆ ಧ್ವನಿಪೆಟ್ಟಿಗೆಯ ಭಾಗ) |
| ಇ. ಎದೆಗೆ ಸಂಬಂಧಿಸಿದ ವಿಕಾರ | ಅನಾಹತಚಕ್ರ (ಎದೆಯ ಮಧ್ಯಭಾಗದಲ್ಲಿ) |
| ಈ. ಹೊಟ್ಟೆಗೆ ಸಂಬಂಧಿಸಿದ ವಿಕಾರ | ಮಣಿಪೂರಚಕ್ರ (ನಾಭಿ / ಹೊಕ್ಕುಳ) |
| ಉ. ಕಿಬ್ಬೊಟ್ಟೆಗೆ ಸಂಬಂಧಿಸಿದ ವಿಕಾರ | ಸ್ವಾಧಿಷ್ಠಾನಚಕ್ರ [ಜನನೇಂದ್ರಿಯದ ೧ ರಿಂದ ೨ ಸೆ.ಮೀ. ಮೇಲೆ (ಲಿಂಗಮೂಲ)] |
| ಊ. ಕೈಗಳು ಮತ್ತು ತಲೆಯಿಂದ ಎದೆಯವರೆಗಿನ ಭಾಗದ ವಿಕಾರಗಳು (ಮೇಲಿನ ಅ ದಿಂದ ಇ ವರೆಗಿನ ಅವಯವಗಳ ಹೊರತಾಗಿ) | ಅನಾಹತಚಕ್ರ |
| ಋ. ಕಾಲುಗಳು ಮತ್ತು ಎದೆ ಮುಗಿದು ಕೆಳಗಿನ ಭಾಗದ ವಿಕಾರಗಳು (ಮೇಲಿನ ಈ ಮತ್ತು ಉ ಅವಯವಗಳ ಹೊರತಾಗಿ) | ಮಣಿಪೂರಚಕ್ರ |
| ಎ. ಇಡೀ ಶರೀರದ ವಿಕಾರ (ಉದಾ: ಸುಸ್ತು, ಜ್ವರ, ಸ್ಥೂಲಕಾಯ, ಮೈತುಂಬಾ ಚರ್ಮರೋಗ) | 1. ಸಹಸ್ರಾರಚಕ್ರ (ತಲೆಯ ಮಧ್ಯಭಾಗ, ನೆತ್ತಿ) 2. ಅನಾಹತಚಕ್ರ ಮತ್ತು ಮಣಿಪೂರಚಕ್ರ |
| 2. ಮಾನಸಿಕ ವಿಕಾರ | 1. ಸಹಸ್ರಾರಚಕ್ರ 2. ಅನಾಹತಚಕ್ರ |
ನಾಗರಿಕರೇ, ಯುದ್ಧಕಾಲದಲ್ಲಿ ಹೇಗೆ ವರ್ತಿಸುವಿರಿ?
ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!
ಪುಷ್ಪೌಷಧಿ (Bach Flower Remedies)
ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ
ಅನೇಕ ಕಾಯಿಲೆಗಳನ್ನು ಆಹ್ವಾನಿಸುವ ಮಾನಸಿಕ ಒತ್ತಡ!
ಪ್ರಾಣಶಕ್ತಿವಹನ ಉಪಾಯಪದ್ಧತಿ ಬಗ್ಗೆ ಪ್ರಶ್ನೋತ್ತರ