ಪುಷ್ಪೌಷಧಿ (Bach Flower Remedies)
ಪುಷ್ಪೌಷಧಿ (Bach Flower Remedies) ಎಂಬ ಈ ಚಿಕಿತ್ಸಾ ಪದ್ಧತಿಯನ್ನು ಇಂಗ್ಲೆಂಡಿನ ಡಾ. ಎಡ್ವರ್ಡ್ ಬಾಶ್ ಎಂಬವರು ಕಂಡು ಹಿಡಿದರು. ‘ಸರಳ ಮತ್ತು ಸುಲಭವಾದ ಚಿಕಿತ್ಸಾ ಪದ್ಧತಿಯೊಂದಿರಬೇಕು’ ಎಂಬ ಧ್ಯೇಯದಿಂದ ಅವರು ತಮ್ಮ ಚೆನ್ನಾಗಿ ನಡೆಯುತ್ತಿದ್ದ ವ್ಯವಸಾಯವನ್ನು ನಿಲ್ಲಿಸಿ, ಮುಂದಿನ ಸಂಶೋಧನೆಗಾಗಿ ಅರಣ್ಯಕ್ಕೆ ತೆರಳಿದರು. ಕ್ರಮೇಣ ಹೂವುಗಳ ಔಷಧೀಯ ಗುಣಗಳು ಅವರ ಗಮನಕ್ಕೆ ಬಂದವು. ಅವರು ಸುಮಾರು ೪೦ ವರ್ಷಗಳ ಕಾಲ ಈ ಪದ್ಧತಿಯ ಅಧಯಯನ ಮಾಡಿ 39 ಪ್ರಕಾರದ ಔಷಧಿಗಳನ್ನು ಸಿದ್ಧಪಡಿಸಿದರು. ಈ ಪದ್ಧತಿಯ ಅಧ್ಯಯನ ಮಾಡುವಾಗ ಅವರು ನಿಸರ್ಗದ ಮುಂದಿನ ತತ್ತ್ವಗಳನ್ನು ವಿಚಾರ ಮಾಡಿದರು.
ಅ. ನಿಸರ್ಗವು ಯಾವಾಗಲೂ ಪೂರ್ಣತ್ವದ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ.
ಆ. ನಿಸರ್ಗವು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸುತ್ತದೆ.
ಇ. ನಿಸರ್ಗದ ಮಾರ್ಗಗಳು ಬಹಳ ಸುಲಭವಾಗಿರುತ್ತವೆ.
ಈ. ನೈಸರ್ಗಿಕ ಮಾರ್ಗಗಳು ಶಾಶ್ವತ ಸ್ವರೂಪದ್ದಾಗಿರುತ್ತವೆ.
ಆಗ ಇದು ಸತ್ಯವಾಗಿದ್ದರೆ, ಖಂಡಿತವಾಗಿಯೂ ‘ನಿಸರ್ಗವು ಯಾವುದೇ ಅಡ್ಡಪರಿಣಾಮಗಳನ್ನು ಬೀರದ ಮತ್ತು ಸ್ವತಃ ತಾನೇ ಚಿಕಿತ್ಸೆ ಮಾಡಿಕೊಳ್ಳಲು ಸಾಧ್ಯವಾಗುವಂತಹ ಚಿಕಿತ್ಸಾ ಪದ್ಧತಿಯನ್ನು ಲಭ್ಯವಾಗಿಸಿರಬೇಕು’ ಎಂಬ ವಿಚಾರವು ಮೂಡಿತು. ಈ ಚಿಕಿತ್ಸಾ ಪದ್ಧತಿಯೇ ‘ಪುಷ್ಪೌಷಧಿ’ಯಾಗಿದೆ. ಇದರಲ್ಲಿ 39 ಔಷಧಿಗಳಿದ್ದು, ಅವುಗಳನ್ನು ನೈಸರ್ಗಿಕವಾಗಿ ಬೆಳೆಯುವ ಹೂವುಗಳಿಂದ ಸಿದ್ಧಪಡಿಸಲಾಗಿದೆ. ಈ ಎಲ್ಲಾ ಔಷಧಿಗಳು ನೈಸರ್ಗಿಕ ಸ್ವರೂಪದ್ದಾಗಿದ್ದು, ಇವುಗಳಿಂದ ಯಾವುದೇ ಅಡ್ಡಪರಿಣಾಮಗಳು (side effects) ಉಂಟಾಗುವುದಿಲ್ಲ. ಈ ಪದ್ಧತಿಯಿಂದ ವ್ಯಕ್ತಿತ್ವದಲ್ಲಿ ಬದಲಾವಣೆಗಳೂ ಕಂಡುಬರುತ್ತವೆ. ಈ ಪದ್ಧತಿಯಲ್ಲಿ ವ್ಯಕ್ತಿತ್ವಕ್ಕನುಗುಣವಾಗಿ ಔಷಧಿಯನ್ನು ನೀಡಲಾಗುತ್ತದೆ.
ಪುಷ್ಪೌಷಧಿಗಳ ವೈಶಿಷ್ಟ್ಯಗಳು
ಅ. ಸ್ವರೂಪ
1. ಇದರಲ್ಲಿ ಕೇವಲ 39 ಔಷಧಿಗಳಿವೆ.
2. ಎಲ್ಲಾ ಔಷಧಿಗಳು ತಿಳಿಯಲು ಸುಲಭವಾಗಿವೆ.
3. ಈ ಔಷಧಿಗಳು ಸಿಹಿ ಗುಳಿಗೆಗಳ ಸ್ವರೂಪದಲ್ಲಿಯೂ ಲಭ್ಯವಿವೆ.
ಆ. ಔಷಧಿಗಳನ್ನು ಸೇವಿಸುವ ಪದ್ಧತಿ
1. ಈ ಔಷಧಿಗಳನ್ನು ತೆಗೆದುಕೊಳ್ಳುವಾಗ ತಿನ್ನುವ-ಕುಡಿಯುವ ಯಾವುದೇ ನಿರ್ಬಂಧಗಳಿಲ್ಲ.
2. ಈ ಔಷಧಿಗಳಿಗೆ ಯಾವುದೇ ವಿರೋಧಾಭಾಸಗಳಿಲ್ಲ (Contra-indications), ಅಂದರೆ ‘ಈ ಔಷಧಿಗಳನ್ನು ಯಾರಿಗೆ ನೀಡಬಾರದು’ ಎಂದು ಎಲ್ಲಿಯೂ ಸೂಚಿಸಿಲ್ಲ. ಇವು ಎಲ್ಲರಿಗೂ ಅನ್ವಯಿಸುತ್ತವೆ.
3. ಈ ಔಷಧಿಗಳನ್ನು ಯಾವುದೇ ಸಮಯದಲ್ಲಿ ತೆಗೆದುಕೊಂಡರೂ ನಡೆಯುತ್ತದೆ. ಅವುಗಳನ್ನು ಊಟಕ್ಕೆ ಮೊದಲು ಅಥವಾ ಊಟದ ನಂತರವೇ ತೆಗೆದುಕೊಳ್ಳಬೇಕು ಎಂಬ ಯಾವುದೇ ನಿರ್ಬಂಧವಿಲ್ಲ. ಅವುಗಳನ್ನು ಚಹಾ, ಕಾಫಿ, ಕುಡಿಯುವ ನೀರು ಇವುಗಳಲ್ಲಿ ಬೆರೆಸಿಯೂ ತೆಗೆದುಕೊಳ್ಳಲು ಸಾಧ್ಯವಿದೆ. ಅದರಿಂದ ಅವುಗಳ ರುಚಿ ಬದಲಾಗುವುದಿಲ್ಲ.
4. ಈ ಔಷಧಿಗಳನ್ನು ಕೇವಲ ಚಪ್ಪರಿಸಿ ತಿನ್ನಬೇಕು.
5. 5 ಬೇರೆ ಬೇರೆ ಸಮಸ್ಯೆಗಳಿಗೆ ಬೇರೆ ಬೇರೆ ಪ್ರಕಾರದ ಔಷಧಿಗಳನ್ನು ಒಂದೇ ಸಮಯದಲ್ಲಿ ಒಟ್ಟಾಗಿಯೂ ತೆಗೆದುಕೊಳ್ಳಬಹುದು.
6. ಈ ಔಷಧಿಗಳನ್ನು ರೋಗದ (ಕಾಯಿಲೆಯ) ಸ್ವರೂಪಕ್ಕನುಗುಣವಾಗಿ ದಿನದಲ್ಲಿ ಅನೇಕ ಬಾರಿ ತೆಗೆದುಕೊಳ್ಳಬಹುದು. ದೀರ್ಘಕಾಲದ ಕಾಯಿಲೆಗಳಲ್ಲಿ ದಿನದಲ್ಲಿ ಒಂದು ಅಥವಾ ಎರಡು ಬಾರಿ ತೆಗೆದುಕೊಳ್ಳಬೇಕು.
7. ಈ ಔಷಧಿಗಳನ್ನು ನವಜಾತ ಶಿಶುವಿನಿಂದ ವೃದ್ಧರ ವರೆಗೆ ಯಾರಾದರೂ, ಹಾಗೆಯೇ ಗರ್ಭಿಣಿ ಮಹಿಳೆಯರೂ ತೆಗೆದುಕೊಳ್ಳಬಹುದು.
ಇ. ಔಷಧಿಗಳ ಬಾಳ್ವಿಕೆ
1. ಈ ಔಷಧಿಗಳು ಮುಕ್ತಾಯ ದಿನಾಂಕವನ್ನು (Expiry date) ಹೊಂದಿರುವುದಿಲ್ಲ. ಅವು ವರ್ಷಗಟ್ಟಲೆ ಬಾಳ್ವಿಕೆ ಹೊಂದಿರುತ್ತವೆ.
2. ಈ ಔಷಧಿಗಳು ಸುರಕ್ಷಿತವಾಗಿದ್ದು, ಇವುಗಳಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಈ. ಔಷಧಿಗಳ ಪರಿಣಾಮ
ಈ ಔಷಧಿಗಳ ಪರಿಣಾಮವು ತಕ್ಷಣವೇ ಕಂಡುಬರುತ್ತದೆ.
ಪ್ರಥಮ ಚಿಕಿತ್ಸೆ ಮತ್ತು ಪುಷ್ಪೌಷಧಿ
ರೆಸ್ಕ್ಯೂ ರೆಮಿಡಿ (Rescue Remedy) – ‘ಗಂಭೀರ ಸ್ವರೂಪದ ಅಪಘಾತಗಳು, ಸುಟ್ಟುಗಾಯಗಳು, ‘ಎಲೆಕ್ಟ್ರಿಕ್ ಶಾಕ್’, ಹಾಗೆಯೇ ವಿಷಪ್ರಾಶನ ಇತ್ಯಾದಿ ಕಾರಣಗಳಿಂದ ಜೀವಕ್ಕೆ ಅಪಾಯ ಉಂಟಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಅಂತಹ ಸಮಯದಲ್ಲಿ ಈ ಎಲ್ಲಾ ಪ್ರಕಾರದ ಕಾಯಿಲೆಗಳ ಮೇಲೆ ಈ ಔಷಧಿಯು ಉಪಯುಕ್ತವಾಗಿದೆ.
1. ಎಷ್ಟೇ ಆಳವಾದ ಗಾಯವಿದ್ದರೂ ಮತ್ತು ಅದರಿಂದ ರಕ್ತಸ್ರಾವವಾಗುತ್ತಿದ್ದರೂ, ಈ ಔಷಧಿಯಿಂದ ರಕ್ತಸ್ರಾವವು ತಕ್ಷಣವೇ ಹತೋಟಿಗೆ ಬರುತ್ತದೆ ಮತ್ತು ಗಾಯದ ಮೇಲೆ ‘ಬ್ಯಾಂಡೇಜ್’ ಮಾಡುವ ಆವಶ್ಯಕತೆ ಇರುವುದಿಲ್ಲ.
2. ಕೆಲವು ಸನ್ನಿವೇಶಗಳಲ್ಲಿ ರೋಗಿಯು ಪ್ರಜ್ಞೆ ತಪ್ಪಿ ಕೈಕಾಲುಗಳು ತಣ್ಣಗಾಗಿದ್ದರೆ, ಶ್ವಾಸೋಚ್ಛ್ವಾಸವು ಮಂದವಾಗಿದ್ದರೆ ಮತ್ತು ರೋಗಿಯ ನಾಡಿಮಿಡಿತ ತಿಳಿಯದಿದ್ದರೆ, ಈ ಔಷಧಿಯನ್ನು ನೀಡಿದ ಕೆಲವು ನಿಮಿಷಗಳಲ್ಲಿಯೇ ‘ಏನೂ ಸಂಭವಿಸಿಯೇ ಇಲ್ಲ’ ಎಂಬಂತೆ ರೋಗಿಯು ಎದ್ದು ನಡೆಯಲು ಪ್ರಾರಂಭಿಸುತ್ತಾನೆ.
3. ವಿಷಪ್ರಾಶನವಾದಾಗ ಅಥವಾ ವಿಷಕಾರಿ ಪ್ರಾಣಿಗಳು ಕಚ್ಚಿದಾಗ ಈ ಔಷಧಿಯನ್ನು ನೀಡಿದರೆ ಚಿಕಿತ್ಸೆ ದೊರೆಯುವವರೆಗೆ ಸಹಾಯವಾಗುತ್ತದೆ.
4. ಸುಟ್ಟುಗಾಯಗಳ ಮೇಲೆ ಈ ಔಷಧಿಯನ್ನು ನೀಡಿದರೆ ನೋವು ತಕ್ಷಣವೇ ಕಡಿಮೆಯಾಗುತ್ತದೆ ಮತ್ತು ಸುಟ್ಟ ಗಾಯದ ಗಂಭೀರ ಪರಿಣಾಮಗಳು ಉಂಟಾಗುವುದಿಲ್ಲ.
5. ಯಾವುದೇ ರೀತಿಯ ಅಸಹನೀಯ ನೋವು ತಕ್ಷಣವೇ ಕಡಿಮೆಯಾಗುತ್ತದೆ.
ಎಷ್ಟೇ ಗಂಭೀರ ಸ್ಥಿತಿಯಿದ್ದರೂ ಈ ಔಷಧಿಯ ಕೇವಲ ಒಂದು ಮಾತ್ರೆಯು ಸಾಕಾಗುತ್ತದೆ. ಎರಡನೇ ಮಾತ್ರೆಯನ್ನು ನೀಡುವ ಆವಶ್ಯಕತೆಯೇ ಇರುವುದಿಲ್ಲ. ಇದು ಕೇವಲ ಪ್ರಥಮ ಚಿಕಿತ್ಸೆಯಾಗಿ ಮಾತ್ರ ಉಪಯುಕ್ತವಾಗಿರದೇ, ಈ ಔಷಧಿಯಿಂದ ರೋಗಿಯು ಸಂಪೂರ್ಣವಾಗಿ ಗುಣಮುಖನಾಗಬಲ್ಲ. ಶಸ್ತ್ರಚಿಕಿತ್ಸೆ ಮಾಡುವ ಸ್ವಲ್ಪ ಸಮಯದ ಮೊದಲು ಈ ಔಷಧಿಯ ಒಂದು ಮಾತ್ರೆಯನ್ನು ನೀಡಿದರೆ, ಶಸ್ತ್ರಚಿಕಿತ್ಸೆಯ ನಂತರ ಅತ್ಯಂತ ಅಲ್ಪ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತದೆ ಮತ್ತು ಗಾಯವು ಬೇಗನೆ ವಾಸಿಯಾಗಿ ರೋಗಿಯು ಶೀಘ್ರವಾಗಿ ಮನೆಗೆ ಮರಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಔಷಧಿಯನ್ನು ತಮ್ಮ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳುವುದು ಆವಶ್ಯಕವಾಗಿದೆ.
– ಸಂಕಲನಕಾರರು: ಹೋಮಿಯೋಪಥಿಕ್ ವೈದ್ಯ ಪ್ರವೀಣ ಮೆಹ್ತಾ (೧೧.೮.೨೦೨೦)
