ಅನೇಕ ಜನರಲ್ಲಿ ‘ಪೂರ್ವಗ್ರಹ ಇರುವುದು’ ಎಂಬ ಸ್ವಭಾವದೋಷವು ಹೆಚ್ಚು-ಕಡಿಮೆ ಪ್ರಮಾಣದಲ್ಲಿರುತ್ತದೆ. ಪೂರ್ವಗ್ರಹ ಎಂಬ ಸ್ವಭಾವದೋಷವು ಅವನಿಗೆ ಕೇವಲ ಸಾಧನೆಯಲ್ಲಿ ಅಲ್ಲದೇ, ಅದು ಕಾರ್ಯದಲ್ಲಿರುವ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾಯಕಾರಿಯಾಗಿದೆ. ಈ ಲೇಖನದಲ್ಲಿ ಪೂರ್ವಗ್ರಹದ ಸ್ವರೂಪ, ಪೂರ್ವಗ್ರಹವನ್ನುಂಟು ಮಾಡುವ ಕಾರಣಗಳು, ಅದರ ಪರಿಣಾಮ ಮತ್ತು ಅದನ್ನು ಹೇಗೆ ನಿವಾರಿಸಬಹುದು, ಎಂಬುದನ್ನು ತಿಳಿದುಕೊಳ್ಳೋಣ.

೧. ವಿಶ್ಲೇಷಣೆ
‘ಈ ಹಿಂದೆ ಘಟಿಸಿದ ಕೆಲವು ಪ್ರಸಂಗಗಳಿಂದ ಯಾವುದಾದರೊಬ್ಬ ವ್ಯಕ್ತಿಯ ಬಗ್ಗೆ ಅಥವಾ ಸಮೂಹದ ಬಗ್ಗೆ ಸ್ವತಃ ನಿಷ್ಕರ್ಷಕ್ಕೆ ಬಂದು ಅವರ ಬಗ್ಗೆ ನಕಾರಾತ್ಮಕ ವಿಚಾರಗಳು ತನ್ನ ಮನಸ್ಸಿನಲ್ಲಿ ಬಿಂಬಿಸುವುದು’, ಹೀಗೆ ಪೂರ್ವಗ್ರಹದ ವಿಶ್ಲೇಷಣೆಯನ್ನು ಮಾಡಬಹುದು.
೨. ‘ಪೂರ್ವಗ್ರಹ’ ಎಂಬ ಸ್ವಭಾವದೋಷವು ಹೇಗೆ ಉಂಟಾಗುತ್ತದೆ?
೨ ಅ. ಯಾವುದಾದರೊಬ್ಬ ವ್ಯಕ್ತಿಯು ಬೆಂಬಲ ನೀಡದಿದ್ದರೆ ಅವನ ಬಗ್ಗೆ ಪೂರ್ವಗ್ರಹ ಉಂಟಾಗುವುದು ಮತ್ತು ಅವನೊಂದಿಗೆ ಮಾತನಾಡುವುದನ್ನು ತಪ್ಪಿಸುವುದು : ಯಾವುದಾದರೊಬ್ಬ ವ್ಯಕ್ತಿಯು ನಾವು ‘ಹೇಳಿದ ವಿಷಯ, ಸಂಚಾರವಾಣಿಯಲ್ಲಿ ಕಳುಹಿಸಿದ ಸಂದೇಶ, ‘ಪೋಸ್ಟ್’ ಅಥವಾ ಪ್ರತ್ಯಕ್ಷ ಮಾತುಕತೆ’ಗಳಿಗೆ ಸ್ಪಂದಿಸುವುದಿಲ್ಲ ಅಂದುಕೊಳ್ಳಿ. ಆಗ ನಾವು ‘ಈ ವ್ಯಕ್ತಿಯು ಯಾವಾಗಲೂ ಹೀಗೆ, ಬೆಂಬಲಿಸುವುದಿಲ್ಲ ಮತ್ತು ನಂತರವೂ ಬೆಂಬಲಿಸುವುದೇ ಇಲ್ಲ’ ಎಂದು ನಿಷ್ಕರ್ಷಕ್ಕೆ ಬರುತ್ತೇವೆ. ನಾವು ಆ ವ್ಯಕ್ತಿಯೊಂದಿಗೆ ಅಥವಾ ಇಂತಹ ಕೆಲವು ವ್ಯಕ್ತಿಗಳೊಂದಿಗೆ ಪ್ರತಿಕ್ರಿಯಾತ್ಮಕವಾಗಿ ಮಾತನಾಡುತ್ತೇವೆ ಅಥವಾ ಇತರರಲ್ಲಿ ಅವರ ಬಗ್ಗೆ ಕಿವಿ ಊದುತ್ತೇವೆ. ಉಪಾಯವೆಂದು ಅವರೊಂದಿಗೆ ಮಾತನಾಡುವುದಿಲ್ಲ ಅಥವಾ ಅವರೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತೇವೆ. ಆ ವ್ಯಕ್ತಿಯ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದಿರುವ ಪ್ರಸಂಗಗಳು ಪ್ರತಿದಿನ ಘಟಿಸುತ್ತವೆ ಮತ್ತು ನಮ್ಮ ಮನಸ್ಸಿನಲ್ಲಿನ ಆ ವ್ಯಕ್ತಿಯ ಬಗೆಗಿನ ಪೂರ್ವಗ್ರಹ ಹೆಚ್ಚಾಗುತ್ತದೆ. ಆ ವ್ಯಕ್ತಿಗೆ ಮಾತ್ರ ಇದರ ಬಗ್ಗೆ ಹೆಚ್ಚು ಅರಿವು ಇರುವುದಿಲ್ಲ.
೨ ಆ. ಯಾವುದಾದರೊಂದು ವ್ಯಕ್ತಿಯ ಬಗ್ಗೆ ಸತತವಾಗಿ ಪ್ರತಿಕ್ರಿಯೆ ಬರುತ್ತಿದ್ದರೆ ಪೂರ್ವಗ್ರಹ ಉಂಟಾಗುತ್ತದೆ.
೨ ಇ. ಯಾವ ವ್ಯಕ್ತಿಯೊಂದಿಗೆ ನಮ್ಮ ನಿಕಟ ಸಂಬಂಧವಿರುತ್ತದೆಯೋ, ಆ ವ್ಯಕ್ತಿಯು ಇತರ ವ್ಯಕ್ತಿಗಳ ಬಗ್ಗೆ ಸತತವಾಗಿ ಕೆಡಕು ಮಾತನಾಡುತ್ತಿರುವಾಗಲೂ ನಮ್ಮ ಮನಸ್ಸಿನಲ್ಲಿ ಇನ್ನೋರ್ವ ವ್ಯಕ್ತಿಯ ಬಗೆಗಿನ ಪೂರ್ವಗ್ರಹದ ವಿಚಾರಗಳು ಹೆಚ್ಚಾಗುತ್ತವೆ.
೨ ಈ. ‘ಪೂರ್ವಗ್ರಹ’ಕ್ಕೆ ಕಾರಣೀಭೂತ ಇತರ ಸ್ವಭಾವದೋಷಗಳು ಮತ್ತು ಅಹಂನ ಅಂಶಗಳು : ‘ತೀವ್ರ ಅಪೇಕ್ಷೆ ಇಟ್ಟುಕೊಳ್ಳುವುದು, ‘ಎದುರಿರುವ ವ್ಯಕ್ತಿಯು ನನ್ನ ಮನಸ್ಸಿನಂತೆ ವರ್ತಿಸಬೇಕು’ ಎಂದೆನಿಸುವುದು, ಬಹಿರ್ಮುಖತೆ, ಕೇಳುವ ವೃತ್ತಿ ಇಲ್ಲದಿರುವುದು, ಪರಿಸ್ಥಿತಿ ಸ್ವೀಕರಿಸದಿರುವುದು, ಸೇವೆಯಲ್ಲಿ ಇಷ್ಟಾನಿಷ್ಟಗಳಿರುವುದು, ಕರ್ತೃತ್ವ, ಪ್ರತಿಷ್ಠೆ ಕಾಪಾಡುವುದು, ಅತೀ ವಿಮರ್ಶಕತೆ, ಸತತವಾಗಿ ಕಲಿಸುವ ಭೂಮಿಕೆಯಲ್ಲಿರುವುದು, ನಿಷ್ಕರ್ಷಕ್ಕೆ ಬರುವುದು, ತುಲನೆ ಮಾಡುವುದು’, ಇಂತಹ ಕೆಲವು ಸ್ವಭಾವದೋಷಗಳು ಮತ್ತು ಅಹಂನ ಅಂಶಗಳು ‘ಪೂರ್ವಗ್ರಹ’ ಉಂಟಾಗಲು ಕಾರಣವಾಗಿವೆ.
೩. ಯಾರ ಬಗ್ಗೆ ಪೂರ್ವಗ್ರಹ ಉಂಟಾಗುತ್ತದೆ?
ಕುಟುಂಬದಲ್ಲಿನ ಕೆಲವು ಸದಸ್ಯರು, ಮುಖ್ಯವಾಗಿ ಪತಿ-ಪತ್ನಿ, ಅತ್ತೆ-ಸೊಸೆ, ನಾದಿನಿ-ಅತ್ತಿಗೆ, ಕೆಲವು ಸಂಬಂಧಿಕರು, ಯಾವ ವ್ಯಕ್ತಿಯು ಸತತವಾಗಿ ಸಂಪರ್ಕದಲ್ಲಿರುತ್ತಾರೆಯೋ ಅವರ ಬಗ್ಗೆ, ಜವಾಬ್ದಾರ ಸಾಧಕರು, ಕೆಲವು ಸಹಸಾಧಕರು, ಮನೆಯ ಅಕ್ಕಪಕ್ಕದವರು, ಕಚೇರಿಯ ಸಹಕಾರಿಗಳು, ಪದಾಧಿಕಾರಿಗಳು ಅಥವಾ ಎಲ್ಲರ ಬಗ್ಗೆಯೂ ಪೂರ್ವಗ್ರಹ ಉಂಟಾಗಬಹುದು.
೪. ಪೂರ್ವಗ್ರಹದಿಂದಾಗುವ ಹಾನಿ
ಅ. ಸ್ವಭಾವವು ಸಿಡಿಮಿಡಿಗೊಳ್ಳುತ್ತದೆ. (ಯಾವಾಗಲೂ ಕಿರಿಕಿರಿಯಾಗುತ್ತದೆ)
ಆ. ಮನಸ್ಸಿನ ಮೇಲೆ ಪೂರ್ವಗ್ರಹದ ಸಂಸ್ಕಾರವಾಗುತ್ತದೆ. ಅನೇಕ ವ್ಯಕ್ತಿಗಳ ಬಗ್ಗೆ ಪೂರ್ವಗ್ರಹ ಉಂಟಾಗುತ್ತದೆ.
ಇ. ಸಾಧನೆಯ ಅಮೂಲ್ಯ ಸಮಯವು ವ್ಯರ್ಥವಾಗುತ್ತದೆ.
ಈ. ಸಾಧನೆಯ ಹಾನಿಯಾಗುತ್ತದೆ.
ಉ. ಕುಟುಂಬದ ವ್ಯಕ್ತಿಗಳ ಬಗ್ಗೆ ಪೂರ್ವಗ್ರಹವಿದ್ದರೆ, ಮನೆಯಲ್ಲಿನ ಸ್ಪಂದನಗಳು ಕಲುಷಿತವಾಗುತ್ತವೆ.
ಊ. ಯಾವುದೇ ವಿಷಯದಿಂದ ಆನಂದವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಎ. ಮನಸ್ಸಿನ ಮೇಲೆ ಸತತವಾಗಿ ಒತ್ತಡವಿರುತ್ತದೆ.
ಏ. ‘ಬಿಂಬ-ಪ್ರತಿಬಿಂಬ’ ಈ ನಿಯಮದಂತೆ ಯಾವ ವ್ಯಕ್ತಿಯ ಬಗ್ಗೆ ಪೂರ್ವಗ್ರಹ ಉಂಟಾಗುತ್ತದೆಯೋ, ಅವರ ಮನಸ್ಸಿನಲ್ಲಿಯೂ ಇದೇ ರೀತಿ ಪೂರ್ವಗ್ರಹದ ಸಂಸ್ಕಾರ ಉಂಟಾಗುತ್ತದೆ.
೫. ಪೂರ್ವಗ್ರಹದ ದೋಷವನ್ನು ನಿವಾರಿಸಲು ಮಾಡಬೇಕಾದ ಕೆಲವು ಉಪಾಯಗಳು
೫ ಅ. ಪೂರ್ವಗ್ರಹದೊಂದಿಗೆ ಉಕ್ಕಿಬರುವ ಇತರ ಸ್ವಭಾವದೋಷಗಳು ಮತ್ತು ಅಹಂನ ಅಂಶಗಳನ್ನು ನಿವಾರಿಸಲು ಮಾಡುವ ಪ್ರಯತ್ನಗಳು
೧. ನಿರಪೇಕ್ಷವಾಗಿ ಕೃತಿ ಮಾಡಬೇಕು.
೨. ನನಗೆ ಒಂದು ಅಭಿಪ್ರಾಯವಿರುವಂತೆ ಆ ವ್ಯಕ್ತಿಗೂ ಏನಾದರು ಅಭಿಪ್ರಾಯವಿರುತ್ತದೆ ಎಂಬ ವಿಚಾರ ಮಾಡಿ ಆ ವ್ಯಕ್ತಿಯ ಮೇಲೆ ನನ್ನ ಅಭಿಪ್ರಾಯವನ್ನು ಹೇರಬಾರದು.
೩. ಪ್ರತಿಯೊಂದು ಕೃತಿಯನ್ನು ಅಂತರ್ಮುಖವಾಗಿ ಮಾಡಬೇಕು.
೪. ಕೇಳುವ ವೃತ್ತಿಯನ್ನು ಹೆಚ್ಚಿಸಬೇಕು.
೫. ‘ಪ್ರತಿಯೊಂದು ಪರಿಸ್ಥಿತಿಯ ನಿರ್ಮಾಪಕನು ಈಶ್ವರನಾಗಿದ್ದಾನೆ’, ಎಂಬ ಅರಿವನ್ನಿಟ್ಟು ಪರಿಸ್ಥಿತಿಯನ್ನು ಸ್ವೀಕರಿಸಬೇಕು.
೬. ಸಾಧನೆಯಲ್ಲಿ ಯಾವುದೇ ಸಾಧಕನು ಸಹಸಾಧಕನೆಂದು ಲಭಿಸಿದರೆ, ಅವನೊಂದಿಗೆ ಹೊಂದಿಕೊಳ್ಳಬೇಕು. ಯಾವುದೇ ಸೇವೆ ಸಿಕ್ಕಿದರೂ, ‘ಅದು ಗುರುಸೇವೆಯೇ ಆಗಿದೆ’, ಎಂಬ ಭಾವವನ್ನಿಡಬೇಕು.
೭. ಕಾರ್ಯದ ಶ್ರೇಯಸ್ಸು ತೆಗೆದುಕೊಳ್ಳುವ ವೃತ್ತಿಯನ್ನು ತಪ್ಪಿಸಬೇಕು. ‘ಗುರುದೇವರು ಸೇವೆಯನ್ನು ನೀಡಿದ್ದಾರೆ ಮತ್ತು ಅವರೇ ಮಾಡಿಸಿಕೊಳ್ಳಲಿದ್ದಾರೆ’, ಎಂಬ ಭಾವವನ್ನಿಡಬೇಕು. ಅದಕ್ಕಾಗಿ ಕೃತಜ್ಞತೆಯ ಭಾವವನ್ನು ಹೆಚ್ಚಿಸಬೇಕು.
೮. ಪ್ರತಿಷ್ಠೆ ಕಾಪಾಡದೇ, ಎಲ್ಲವನ್ನು ಮನಮುಕ್ತವಾಗಿ ಹೇಳಬೇಕು.
೯. ಅತೀಚಿಕಿತ್ಸಕವಾಗಿರದೇ ಆವಶ್ಯಕವಿದ್ದಷ್ಟು ತಿಳಿದುಕೊಳ್ಳಬೇಕು.
೧೦. ನಮ್ಮ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಪ್ರತಿಯೊಂದು ಪ್ರಸಂಗದಿಂದ ಹೇಗೆ ಕಲಿಯುತ್ತಿರುತ್ತಾರೋ, ಹಾಗೆ ಸತತವಾಗಿ ಕಲಿಯುವ ಭೂಮಿಕೆಯಲ್ಲಿರಬೇಕು.
೧೧. ಯಾವುದೇ ಪ್ರಸಂಗದಲ್ಲಿ ತಾವಾಗಿಯೇ ನಿಷ್ಕರ್ಷಕ್ಕೆ ಬರದೇ ಖಚಿತಗೊಳಿಸಬೇಕು.
೧೨. ಗುರುದೇವರು ನಮಗೆ ಕಲಿಸಿರುವ ‘ಎಷ್ಟು ವ್ಯಕ್ತಿಗಳೋ, ಅಷ್ಟು ಪ್ರಕೃತಿಗಳು’ ಎಂಬ ಬೋಧನೆಯನ್ನು ಗಮನದಲ್ಲಿಟ್ಟು ಪ್ರತಿಯೊಬ್ಬರೊಂದಿಗೆ ಹೊಂದಿಕೊಳ್ಳಬೇಕು.
೫ ಆ. ಇತರ ಉಪಾಯಗಳು
೧. ಯಾವ ವ್ಯಕ್ತಿಯ ಬಗ್ಗೆ ಪೂರ್ವಗ್ರಹವಿದೆಯೋ, ಆ ವ್ಯಕ್ತಿಯೊಂದಿಗೆ ಮಾತನಾಡಿ ಯಾವ ಕಾರಣಗಳಿಂದ ಪೂರ್ವಗ್ರಹ ಉಂಟಾಯಿತೋ, ಆ ಪ್ರಸಂಗವನ್ನು ಮನಮುಕ್ತವಾಗಿ ಹೇಳಿ ಸತ್ಯಸ್ಥಿತಿಯನ್ನು ತಿಳಿದುಕೊಳ್ಳಬೇಕು.
೨. ಯಾವ ವ್ಯಕ್ತಿಯ ಬಗ್ಗೆ ಪೂರ್ವಗ್ರಹವಿದೆಯೋ, ‘ನಾನು ಆ ವ್ಯಕ್ತಿಯನ್ನು ಅವನಲ್ಲಿರುವ ಸ್ವಭಾವದೋಷಗಳೊಂದಿಗೆ ಸ್ವೀಕರಿಸುತ್ತೇನೆ ಏಕೆಂದರೆ ನನ್ನಲ್ಲಿ ಸ್ವಭಾವದೋಷಗಳಿದ್ದರೂ ಗುರುಗಳು ನನ್ನನ್ನು ಸ್ವೀಕರಿಸಿದ್ದಾರೆ’, ಎಂಬ ಸ್ವಯಂಸೂಚನೆಯನ್ನು ಕೊಡಬಹುದು.
೩. ನಮಗೆ ಸಹಸಾಧಕನ ಬಗ್ಗೆ ಪೂರ್ವಗ್ರಹವಿದ್ದರೆ, ನಾವು ಮನಸ್ಸಿನ ಮೇಲೆ ಪ್ರತಿಯೊಂದು ಸಾಧಕನಲ್ಲಿ ಗುರುರೂಪವನ್ನು ನೋಡುವ ಸಂಸ್ಕಾರವನ್ನು ಮಾಡಬೇಕು. ನಮಗೆ ಇತರ ಯಾರ ಬಗ್ಗೆ ಪೂರ್ವಗ್ರಹವಿದ್ದರೆ, ತನ್ನಲ್ಲಿ ‘ಅವನೂ ಭಗವಂತನ ರೂಪವಾಗಿದ್ದಾನೆ’, ಎಂಬ ಭಾವವನ್ನು ನಿರ್ಮಾಣ ಮಾಡಬೇಕು.
೪. ನಮ್ಮಲ್ಲಿ ಪೂರ್ವಗ್ರಹದ ತೀವ್ರತೆ ಹೆಚ್ಚಿದ್ದರೆ ನಮ್ಮ ಕಿವಿಯನ್ನು ಹಿಡಿದು ಪ್ರತ್ಯಕ್ಷವಾಗಿ ಆ ವ್ಯಕ್ತಿಯ ಕ್ಷಮೆ ಕೇಳಬೇಕು. ಈ ರೀತಿ ನಮ್ಮಿಂದ ಸಾಧ್ಯವಾಗದಿದ್ದರೆ ಕೆಲವು ದಿನಗಳ ವರೆಗೆ ಕಿವಿಗಳನ್ನು ಹಿಡಿದು ಮಾನಸ ರೀತಿಯಲ್ಲಿ ಕ್ಷಮೆ ಕೇಳಬೇಕು ಮತ್ತು ಕೆಲವು ದಿನಗಳ ನಂತರ ಪ್ರತ್ಯಕ್ಷ ಕ್ಷಮೆ ಕೇಳಬೇಕು.
೫. ಯಾರ ಬಗ್ಗೆ ಪೂರ್ವಗ್ರಹವಿದೆಯೋ ಅವರ ಗುಣಗಳ ಪಟ್ಟಿಯನ್ನು ಸಿದ್ಧಪಡಿಸಿ ಆ ಗುಣಗಳನ್ನು ಅಂಗೀಕರಿಸಲು ಪ್ರಯತ್ನಿಸಬೇಕು.
೬. ಯಾರ ಬಗ್ಗೆ ಪೂರ್ವಗ್ರಹವಿದೆಯೋ ಆ ವ್ಯಕ್ತಿಯು ಒಳ್ಳೆಯ ಕೃತಿ ಮಾಡಿದರೆ ಅವರನ್ನು ಪ್ರಶಂಸಿಸಬೇಕು.
೭. ‘ಯಾವ ಸ್ವಭಾವದೋಷಗಳಿಂದ ಪೂರ್ವಗ್ರಹ ಉಂಟಾಗುತ್ತದೆಯೋ, ಆ ಪ್ರತಿಯೊಂದು ದೋಷದ ನಿರೀಕ್ಷಣೆ ಮಾಡಿ ಪ್ರಸಂಗಕ್ಕನುಸಾರ ಸ್ವಯಂಸೂಚನೆಯನ್ನು ಕೊಡುವುದು’, ಇದು ಅತ್ಯಧಿಕ ಪ್ರಭಾವಿ ಉಪಾಯವಾಗಿದೆ.
೮. ಅತ್ಯಂತ ಮಹತ್ವದ ವಿಷಯವೆಂದರೆ ‘ತನ್ನಲ್ಲಿ ಪ್ರೇಮಭಾವವನ್ನು ಹೆಚ್ಚಿಸಬೇಕು!’ ಹೀಗೆ ಮಾಡುವುದರಿಂದ ಕಾಲಕ್ರಮೇಣ ನಮಗೆ ಪ್ರೀತಿಯ ಹಂತಕ್ಕೆ ಹೋಗಲು ಸಾಧ್ಯವಾಗುತ್ತದೆ.
ಗುರುದೇವರು ಸೂಚಿಸಿದ ಈ ಅಂಶಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ.
– (ಪೂ.) ಅಶೋಕ ಪಾತ್ರೀಕರ (೧೫.೧೨.೨೦೨೪)
ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!
ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವಾಗ ಪ್ರತಿದಿನ ಪ್ರಗತಿಯ ಸ್ವಯಂಸೂಚನೆಯನ್ನೂ ತೆಗೆದುಕೊಳ್ಳಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುಗಳು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !
ಪ್ರಶಂಸೆಯಲ್ಲಿ ಸಿಲುಕದೆ ಸಾಧನೆಯಲ್ಲಿ ಮುಂದುವರಿಯಲು ಮಾರ್ಗದರ್ಶಕ ವಿಚಾರಗಳು
ಸ್ವಭಾವದೋಷ ಮತ್ತು ಅಹಂಗಳಿಂದಾಗಿ ಮನಸ್ಸಿಗಾಗುವ ಗಾಯ ಗುಣಪಡಿಸಲು ಔಷಧರೂಪಿ ಸ್ವಯಂಸೂಚನೆಗಳ ಮಹತ್ವ
ಕನ್ನಡದಲ್ಲಿ ವ್ಯಾಕರಣ ಶುದ್ಧಿ ಇರಲಿ ಎಂದು ಮನವಿ.
ಪೂರ್ವಗ್ರಹ ಎಂದು ಇದೆ. ಅದು ಪೂರ್ವಾಗ್ರಹ ಎಂದು ಆಗಬೇಕಲ್ಲವೇ.
ನಮಸ್ಕಾರ
ಪೂರ್ವಾಗ್ರಹ ಎಂದು ರೂಢಿಯಲ್ಲಿದ್ದರೂ, ‘ಪೂರ್ವಗ್ರಹ’ ಸರಿಯಾದ ಪದ. ಆದರೂ ತಮ್ಮಲ್ಲಿ ‘ಪೂರ್ವಾಗ್ರಹ’ವೇ ಯೋಗ್ಯ ಪದ ಎಂಬುವುದಕ್ಕೆ ಪುರಾವೆಗಳಿದ್ದರೆ ದಯವಿಟ್ಟು ನಮಗೆ ತಿಳಿಸಿ.
ನಮ್ಮ ಲೇಖನಗಳನ್ನು ಓದಿ ಸಲಹೆಗಳನ್ನು ನೀಡಿದಕ್ಕೆ ಧನ್ಯವಾದಗಳು.
ಇಂತಿ
ಸನಾತನ ಸಂಸ್ಥೆ