ಪ್ರಭು ಶ್ರೀರಾಮಚಂದ್ರನ ಪ್ರತ್ಯಕ್ಷ ಸಾನ್ನಿಧ್ಯದಿಂದ ಪಾವನಗೊಂಡ ಅಯೋಧ್ಯೆ ನಗರದ ಪವಿತ್ರತಮ ವಾಸ್ತುಗಳ ಭಾವಪೂರ್ಣ ಮನೋಹರ ನೋಟ !

ಶ್ರೀ ಹನುಮಾನಗಢಿ ಅಂದರೆ ಶ್ರೀ ಹನುಮಂತನ ದೇವಸ್ಥಾನ !

ಪ್ರಭು ಶ್ರೀರಾಮನು ಅವತಾರವನ್ನು ಸಮಾಪ್ತಗೊಳಿಸಲು ನಿರ್ಧರಿಸಿದಾಗ ರಾಮನು ಹನುಮಂತನಿಗೆ ತನ್ನೊಂದಿಗೆ ಬರಲು ಹೇಳಿದನು. ಅಸೀಮ ರಾಮಭಕ್ತನಾಗಿರುವ ಹನುಮಂತನು ನಮ್ರತೆಯಿಂದ ನಿರಾಕರಿಸಿದನು. ಹನುಮಂತನು “ಎಲ್ಲಿಯವರೆಗೆ ಪೃಥ್ವಿಯ ಮೇಲೆ ಪ್ರಭು ಶ್ರೀರಾಮನ ಹೆಸರಿದೆಯೋ, ಅಲ್ಲಿಯವರೆಗೆ ನಾನು ಇಲ್ಲಿಯೇ ಇರುವೆನು” ಎಂದು ಹೇಳಿದನು. ಆಗ ಪ್ರಭು ಶ್ರೀರಾಮನು ಹನುಮಂತನಿಗೆ ತಿಲಕವನ್ನು ಹಚ್ಚಿ ಸಿಂಹಾಸನದ ಮೇಲೆ ಕುಳ್ಳಿರಿಸಿದನು. ಅಯೋಧ್ಯೆ ನಗರದ ರಕ್ಷಣೆ ಮಾಡಲು ಭಗವಂತನು ಅಯೋಧ್ಯೆಯನ್ನು ಹನುಮಂತನಿಗೆ ನೀಡಿದನು ಮತ್ತು ಅಯೋಧ್ಯೆಯ ಹೊರಗಿನ ಊರುಗಳನ್ನು ಭರತ, ಶತ್ರುಘ್ನ ಮತ್ತು ಲಕ್ಷ್ಮಣ ಇವರ ಮಕ್ಕಳಿಗೆ ನೀಡಿದನು. ಅಂದಿನಿಂದ ಈ ದೇವಸ್ಥಾನವು ‘ಹನುಮಾನಗಢಿ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಧನ್ಯ ಆ ಪ್ರಭು ಶ್ರೀರಾಮ ಮತ್ತು ಧನ್ಯ ಆ ಶ್ರೀರಾಮಭಕ್ತ ಹನುಮಂತ !

ಶ್ರೀರಾಮನ ರಾಜಗದ್ದಿ

ಪ್ರಭು ಶ್ರೀರಾಮಚಂದ್ರನ ರಾಜ್ಯಾಭಿಷೇಕ ಪವಿತ್ರ ಸ್ಥಳ ! ಇದಕ್ಕೆ ಈಗ ‘ರಾಜಗದ್ದಿ’ ಎನ್ನುತ್ತಾರೆ. ಇಲ್ಲಿ ಸದ್ಯ ಶ್ರೀರಾಮನ ಮೂರ್ತಿಯು ವಿರಾಜಮಾನವಾಗಿದೆ. ಅದನ್ನು ಸಮುದ್ರಗುಪ್ತ ಮಹಾರಾಜನು ಪ್ರತಿಷ್ಠಾಪಿಸಿದ್ದಾನೆ. ಅಯೋಧ್ಯೆಯ ಮೇಲೆ ಮುಸಲ್ಮಾನ ಆಕ್ರಮಣಕಾರರ ಆಡಳಿತವಿರುವ ಕಾಲದಲ್ಲಿಯೂ ಯಾವ ಖಟ್ಲೆಗಳಿಗೆ ಇತರ ಸ್ಥಳಗಳಲ್ಲಿ ಪರಿಹಾರ ಸಿಗುತ್ತಿರಲಿಲ್ಲವೋ, ಆ ಖಟ್ಲೆಗಳಿಗೆ ಈ ಸ್ಥಳದಲ್ಲಿ ಪರಿಹಾರ ಸಿಗುತ್ತಿತ್ತು. ಇಂದು ಕೇವಲ ಅದರ ಅವಶೇಷಗಳು ಉಳಿದಿವೆ

ಮೋಕ್ಷದಾಯಿನಿ ಅಯೋಧ್ಯೆ !

ಪ್ರತಿಯೊಬ್ಬ ಭಕ್ತನ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿರುವ ಪ್ರಭು ಶ್ರೀರಾಮ ! ಅವನ ಬಾಲಲೀಲೆಗಳಿಂದ ಯಾವ ನಗರವು ತಲ್ಲೀನವಾಯಿತೋ, ಅವನ ಆಜ್ಞಾಪಾಲನೆಯಿಂದ ಯಾರಿಗೆ ಉಚ್ಚ ಕೋಟಿಯ ಬೋಧನೆ ಲಭಿಸಿತೋ, ಅವನ ಆಡಳಿತದಿಂದ ಎಲ್ಲಿ ಈಶ್ವರೀ ರಾಜ್ಯವು ಅವತರಿಸಿತೋ, ಅವನ ಅವತಾರಿಕಾರ್ಯದಿಂದ ಯಾವ ನಗರವನ್ನು ಕೃತಾರ್ಥ ಮಾಡಿತೋ, ಆ ದೈವೀ, ಪರಮಮಂಗಲ, ಅತೀಭಾಗ್ಯವಂತ ನಗರವು ಅಯೋಧ್ಯೆಯಾಗಿದೆ ! ಈ ನಗರದ ಕಣಕಣಗಳಲ್ಲಿ, ರೋಮರೋಮಗಳಲ್ಲಿ ಇಂದಿಗೂ ಪ್ರಭು ಶ್ರೀರಾಮನ ವಾಸ್ತವ್ಯವಿದೆ. ಅಲ್ಲಿನ ಸೂಕ್ಷ್ಮ ದೈವೀ ಸ್ಪಂದನಗಳು ಅದರ ಸಾಕ್ಷಿಯನ್ನು ನೀಡುತ್ತಿವೆ. ಅದರೊಂದಿಗೆ ಅನೇಕ ವಾಸ್ತು, ದೇವಸ್ಥಾನಗಳು ಇಂದಿಗೂ ಲಕ್ಷಾಗಟ್ಟಲೆ ವರ್ಷಗಳ ಇತಿಹಾಸವನ್ನು ದೊಡ್ಡ ಗೌರವದಿಂದ ಹೇಳುತ್ತಿವೆ. ಅಯೋಧ್ಯೆ ನಗರ ಮತ್ತು ಪರಿಸರದಲ್ಲಿ ಪ್ರಭು ಶ್ರೀರಾಮನಿಗೆ ಸಂಬಂಧಿಸಿದ ಸಂಸ್ಕೃತಿಯನ್ನು ಕಾಪಾಡುವ ೧೫೦ ರಷ್ಟು ತೀರ್ಥಸ್ಥಾನಗಳಿವೆ. ಈ ತೀರ್ಥಸ್ಥಾನಗಳಲ್ಲಿನ ಕೆಲವು ಆಯ್ದ ತೀರ್ಥಸ್ಥಳಗಳ ದರ್ಶನ ಪಡೆದು ಶ್ರೀರಾಮಜನ್ಮ ಭೂಮಿಯ ಮುಕ್ತಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸೋಣ ! ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರವನ್ನು ನಿರ್ಮಿಸಲು ಈ ದಿವ್ಯ ವಾಸ್ತುಗಳ ಆಶೀರ್ವಾದವು ಅಮೂಲ್ಯವಾಗಿದೆ !

ಶ್ರೀ ದೇವಿ ದೇವಕಾಳಿ ಮಂದಿರ

ಅಯೋಧ್ಯೆಯಲ್ಲಿ ಶ್ರೀ ದೇವಕಾಳಿ ಮಾತೆಯು ಪ್ರಭು ಶ್ರೀರಾಮನ ಕುಲ ದೇವಿಯಾಗಿದ್ದಾಳೆ. ಶ್ರೀರಾಮನ ಪೂರ್ವಜ ರಘು ಮಹಾರಾಜರು ಶ್ರೀ ದೇವಕಾಳಿ ದೇವಸ್ಥಾನದ ಸ್ಥಾಪನೆಯನ್ನು ಮಾಡಿದ್ದರು. ದೇವಿ ಭಾಗವತದಲ್ಲಿಯೂ ಶ್ರೀ ದೇವಕಾಳಿ ದೇವಿಯ ವರ್ಣನೆಯನ್ನು ಮಾಡಲಾಗಿದೆ. ಪ್ರಭು ಶ್ರೀರಾಮನ ಜನ್ಮವಾದ ನಂತರ ಕೌಸಲ್ಯಾ ಮಾತೆಯು ರಾಮಲಲ್ಲಾ ಮತ್ತು ಅವನ ಸಹೋದರರನ್ನು ಕರೆದುಕೊಂಡು ಶ್ರೀ ದೇವಕಾಳಿ ಮಾತೆಯ ದರ್ಶನಕ್ಕಾಗಿ ಬಂದಿದ್ದಳು. ಅಂದಿನಿಂದ ಅಯೋಧ್ಯೆ ಪರಿಸರದಲ್ಲಿ ಯಾರದೇ ಮನೆಯಲ್ಲಿ ಮಗುವಿನ ಆಗಮನವಾಯಿತೆಂದರೆ, ಅದನ್ನು ಶ್ರೀ ದೇವಕಾಳಿ ಮಾತೆಯ ಚರಣಗಳಲ್ಲಿ ದರ್ಶನಕ್ಕಾಗಿ ತರಲಾಗುತ್ತದೆ. ಆ ಮಗುವಿನ ಮಂಗಲಕಾರ್ಯಗಳು ದೇವಿಯ ದರ್ಶನದಿಂದ ಪ್ರಾರಂಭವಾಗುತ್ತವೆ. ನಾವು ರಾಮರಾಜ್ಯದ ಅನುಭೂತಿಯನ್ನು ನೀಡುವ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಮಾಡಲು ವಚನಬದ್ಧರಾಗಿದ್ದೇವೆ. ಈ ಕಾರ್ಯಕ್ಕೆ ಆಶೀರ್ವಾದ ಲಭಿಸಲಿ, ಎಂದು ಶ್ರೀ ದೇವಕಾಲಿ ಮಾತೆಯ ಚರಣಗಳಲ್ಲಿ ಪ್ರಾರ್ಥನೆ !

ಕನಕ ಭವನ

ಸೀತೆಯ ವಿವಾಹವಾಗಿ ಅಯೋಧ್ಯೆಗೆ ಬಂದನಂತರ ಕೈಕೇಯಿ ಮಾತೆಯು ‘ಸೊಸೆಯ ಮುಖ’ ನೋಡುವ ಸಮಯದಲ್ಲಿ ಕನಕ ಭವನ ಈ ಅರಮನೆಯನ್ನು ಅವಳಿಗೆ ಉಡುಗೊರೆಯಾಗಿ ನೀಡಿದ್ದಳು. ನಂತರ ವಿಕ್ರಮಾದಿತ್ಯ ರಾಜನು ಈ ಅರಮನೆಯನ್ನು ಪುನಃ ಕಟ್ಟಿದನು. ನಂತರ ಸಯ್ಯದ್ ಮಸೂದ್ ಸಾಲಾರ್ ಗಾಜಿಯು ಅದನ್ನು ಧ್ವಂಸಗೊಳಿಸಿದನು. ಟಿಕಮಗಢನ ಮಹಾರಾಣಿ ಶ್ರೀ ವೃಷಭಾನೂ ಕುಂವರ ಇವರು ಪ್ರಸ್ತುತ ಅರಮನೆ ಕಟ್ಟಿಸಿದರು. ಇಲ್ಲಿ ೨ ಪ್ರಾಚೀನ ಶಿಲಾಲೇಖನಗಳಿವೆ.

Leave a Comment